ಅಭಿಪ್ರಾಯ / ಸಲಹೆಗಳು

 ಚೌಕ ಪೊಲೀಸ್ ಠಾಣೆ:-  ದಿನಾಂಕ :24-03-2022 ರಂದು ರಾತ್ರಿ ೧೦-೩೦ ಗಂಟೆಗೆ  ಶ್ರೀ ಚೇತನ ತಂದೆ  ವಿಜಯಕುಮಾರ ರಂಗದಾಳೆ  ಸಾ: ಹೋಳಿಕಟ್ಟಾ ಮಕ್ತಂಪೂರ ಕಲಬುರಗಿ ಇತನು  ಠಾಣೆಗೆ ಹಾಜರಾಗಿ ತನ್ನ ವಿಜಯಕುಮಾರ ತಂದೆ ವಿಠಲ ರಂಗದಾಳೆ ಸಾ: ಹೋಳಿಕಟ್ಟಾ ಮಕ್ತಂಪೂರ ಕಲಬುರಗಿ ಇತನು   ಮಾನ್ಯ ಆರಕ್ಷಕ ನೀರಿಕ್ಷಕರು  ಚೌಕ ಪೊಲೀಸ ಠಾಣೆ ಕಲಬುರಗಿಗೆ ವಿಳಾಸ ಮಾಡಿದ ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ದೂರು ಕೊಟ್ಟಿದ್ದರ  ಸಾರಾಂಶವೆನೆಂದೆರೆ, ನನಗೆ ಪರಿಚಯದ ತುಳಜಾಪೂರದಲ್ಲಿ ವಾಸವಾಗಿರುವ ಶ್ರೀಮತಿ ವಿಜಯಾ ಗಂಡ ವಿಠಲ ಪಾಟೀಲ ಇವರ ಗಂಡ ವಿಠಲ ಹೆಸರಿನಲ್ಲಿ ಬೀದರ ಜಿಲ್ಲೆಯ ಬಗದಲ ತಾಲೂಕಿನಲ್ಲಿ ಬರುವ ಮಂದಕನಳ್ಳಿ ಗ್ರಾಮದಲ್ಲಿ ಇರುವ ೦೫ ಎಕರೆ ೦೮ ಗುಂಟೆ ಜಮೀನು ಇದ್ದು, ಆ ಜಮೀನು ವಿಠಲ ಇತನು  ತನ್ನ ತಮ್ಮ ರಾಜೇಂದ್ರ ಮತ್ತು ಅವರ  ಹೆಂಡತಿ ಮಂಗಲಾ ಇವರುಗಳು  ಉಳುವೆ ಮಾಡಿಕೊಂಡು ಬಂದಿರುತ್ತಾರೆ. ವಿಠಲ ತೀರಿಕೊಂಡ ನಂತರ ಆ ಜಮೀನು ಮಂಗಲಾ ಮತ್ತು ರಾಜೇಂದ್ರ ಇವರುಗಳು ವಿಜಯಾ ಪಾಟೀಲಳಿಗೆ ಹೊಲ ಕೊಡದೇ ಮತ್ತು ಕಬ್ಬೆ ಕೊಡದೇ ಅವರೇ ಹೊಲ ಉಳುವೆ ಮಾಡಿಕೊಂಡು ಬರುತ್ತಿದ್ದರಿಂದ ಮತ್ತು ಅದರ ಆದಾಯ ಅವರೇ ತಿನ್ನುತ್ತಿದ್ದರಿಂದ, ತನ್ನ ಗಂಡನ ಹೆಸರಿನಲ್ಲಿ ಇರುವ ಹೊಲವನ್ನು ತನ್ನ  ಹೆಸರಿಗೆ ವರ್ಗಾವಣೆ ಮಾಡಿಸಿ ವಿಜಯಾ ಪಾಟೀಲಳಿಗೆ ಕಬ್ಜೆ ಕೊಡಿಸುವ ಮತ್ತು ಮಾರಾಟ ಮಾಡಿಸುವ ಮಾತಾಗಿದ್ದು, ಆ ಸಮಯದಲ್ಲಿ ವಿಜಯಾ ಪಾಟೀಲ್ ಇವರು ನನಗೆ ಪವರ ಆರ್ಟನಿ ಕೊಟ್ಟು  ನನಗೆ ಹೊಲದ ಸಮಸ್ಯೆ ಬಗೆಹರಿಸಿ ಕೊಟ್ಟರೆ ನನಗೆ ಆ ಜಮೀನಿನಲ್ಲಿ ೧೬ ಗುಂಟೆ ಜಮೀನು ಕೊಡುವುದಾಗಿ ತಿಳಿಸಿರುತ್ತಾರೆ. ಈ ವಿಷಯವನ್ನು ನಮ್ಮ ಸಂಬಂಧಿ ಮಯೂರ ತಂದೆ ವಿಜಯಕುಮಾರ ಪುಕಾಳೆ ಇವರಿಗೆ ತಿಳಿಸಿ ನಾವಿಬ್ಬರೂ ಕೂಡಿ ವಿಜಯಾ ಪಾಟೀಲ್ ಇವರ ಸಮಸ್ಯೆ ಬಗೆಹರಿಸಿಕೊಡೋಣಾ ಅದರಲ್ಲಿ ಬಂದ ಆದಾಯದಲ್ಲಿ ಇಬ್ಬರು ಸಮನಾಗಿ ಹಂಚಿಕೊಳ್ಳೋಣಾ ಅಂತಾ ತಿಳಿಸಿರುತ್ತೇನೆ.  ಮುಯೂರ ಇತನು ನನ್ನಿಂದ ಪರಿಪೂರ್ಣ ಮಾಹಿತಿ ಪಡೆದುಕೊಂಡು ಆ ಜಮೀನು ವಿವಾದವನ್ನು ತಾನು ಒಬ್ಬನೇ ಬಗೆಹರಿಸಿ ಅದರ ಪೂರ್ತಿ ಲಾಭ ತಾನು ಒಬ್ಬನೇ ಪಡೆಯುಬೇಕೆಂಬ ಇರಾದೆಯಿಂದ ನನಗೆ ಆ ಜಮೀನು ಮಾರಾಟ ವಿಷಯದಲ್ಲಿ ತಲೆ ಹಾಕಬೇಡಾ ಎಂದು ಹೇಳಿದನು. ಅವನ ಮಾತು ಕೇಳದೇ ವಿಜಯಾ ಪಾಟೀಲ ಇವರ ಹೆಸರಿಗೆ ಹೊಲ ವರ್ಗಾವಣೆ ಮಾಡಿರುತ್ತೇನೆ. ದಿನಾಂಕ ೧೯/೦೩/೨೦೨೨ ರಂದು ರಾತ್ರಿ ೮-೦೦ ಗಂಟೆ ಸುಮಾರಿಗೆ ಮನೆಯಲ್ಲಿ ಇದ್ದಾಗ ಮಯೂರ ಇತನು ನನಗೆ ಪೋನ ಮಾಡಿ ಮಂದನಕಳ್ಳಿ ಹೊಲದ ವಿಷಯದಲ್ಲಿ ಮಾತನಾಡುವದಿದೆ ತಮ್ಮ ಪುಟಾಣಿ ಗಲ್ಲಿ ಇರುವ ನಮ್ಮ ಸಮೋಸಾ ಬಟ್ಟಿಗೆ ಬಾ ಅಂತಾ ಹೇಳಿದ್ದರಿಂದ ಒಬ್ಬನೇ ಸಮೋಸಾ ಭಟ್ಟಿ ಎದುರುಗಡೆ ಹೋದೆನು. ಅಲ್ಲಿ ಮಯೂರ ಮತ್ತು ಅವನ ಅಣ್ಣ ಮುಕೇಶ ಇಬ್ಬರು ಇದ್ದರು. ನೀನು ಹೊಲದ ವಿಷಯದಲ್ಲಿ ತಲೆ ಹಾಕಬೇಡಾ ಮತ್ತು ಆ ಹೊಲ ನಮಗೆ ಮಾರಾಟ ಮಾಡಿಸಿಕೊಡು ಅಂತಾ ಹೇಳಿದರು. ಅವರಿಬ್ಬರ ಮಾತಿಗೆ ನಾನು ಒಪ್ಪದೇ ಇದ್ದಾಗ ಮುಕೇಶ ಇತನು ನನಗೆ ರಂಡಿ ಮಗನೇ ಭೋಸಡಿ ಮಗನೇ ಅಂತಾ ಬೈಯ್ಯುತ್ತಾ ನನ್ನ ಶರ್ಟ ಹಿಡಿದು ಎಳೆದು ನನಗೆ ಸಮೋಸಾ ಭಟ್ಟಿಯಲ್ಲಿ ಕರೆದುಕೊಂಡು ಹೋದನು. ಭಟ್ಟಿಯಲ್ಲಿ ಮದರ, ರಾಜು, ಅತೀಶ ತಂದೆ ಅಂಬಾದಾಸ ಹಿಬಾರೆ ಇವರು ಕೂಡಾ ಹಾಜರ ಇದ್ದರು. ಅಲ್ಲಿ ನನಗೆ ಮಯೂರ ಮತ್ತು ಮುಕೇಶ ಇಬ್ಬರು ಕೈ ಮುಷ್ಟಿ ಮಾಡಿ  ಎದೆ, ಹೊಟ್ಟೆ, ತಲೆಗೆ ಹೊಡೆ ಬಡೆ ಮಾಡಿದರು. ಮತ್ತು ಮಯೂರ ಮತ್ತು ಮುಕೇಶ ಇಬ್ಬರು ನನಗೆ ಗೋಡೆಗೆ ನೂಕಿಸಿಕೊಟ್ಟಾಗ ತಲೆಗೆ ಹಿಂಭಾಗದಲ್ಲಿ ಒಳಪೆಟ್ಟಾಗಿರುತ್ತದೆ. ಮತ್ತು ಅಲ್ಲೇ ಇದ್ದ ಸಣ್ಣ ರಾಡು ಮಯೂರ ಇತನು ತೆಗೆದುಕೊಂಡು ನನ್ನ ಬಲಗಾಲ ಮೊಳಕಾಲ ಮೇಲೆ ಹೊಡೆದು ಗುಪ್ತಗಾಯಗೊಳಿಸಿದನು. ಮದರ, ರಾಜು, ಅತೀಶ ಇವರುಗಳು ಕೂಡಾ ಕೈಯಿಂದ ನನ್ನ ಬೆನ್ನ ಮೇಲೆ ಹೊಡೆ ಬಡೆ ಮಾಡಿದರು. ಮತ್ತು ಮುಕೇಶ ಇತನು ಚಪ್ಪಲಿಯಿಂದ ನನ್ನ ತಲೆ ಮೇಲೆ ಬಹಳಷ್ಟು ಸಲ ಹೊಡೆ ಬಡೆ ಮಾಡಿದನು. ಮತ್ತು ಮಯೂರ ಇತನು ಸಣ್ಣ ರಾಡನಿಂದ ಬೆನ್ನ ಮೇಲೆ ಮೂರು ಕಡೆಗಳಲ್ಲಿ ತರಚಿದ ರಕ್ತಗಾಯಗೊಳಿಸಿದನು. ನನಗೆ ರಾತ್ರಿ ೮-೦೦ ಗಂಟೆಯಿಂದ ಮರುದಿನ ದಿನಾಂಕ ೨೦/೦೩/೨೦೨೨ ರಂದು ಮಧ್ಯಾಹ್ನ ೪-೦೦ ಗಂಟೆಯವರೆಗೆ ಸಮೋಸಾ ಭಟ್ಟಿಯಲ್ಲಿ ಕೂಡಿ ಹಾಕಿದರು. ನನಗೆ ಮಕ್ಕಳಿಗೆ ಕರೆಸುವಕ್ಕಿಂತ ಮುಂಚೆ ಮಯೂರ ಮತ್ತು ಮುಕೇಶ ಇಬ್ಬರು ನಾವು ಹೊಡೆದ ವಿಷಯ ನಿಮ್ಮ ಮನೆಯಲ್ಲಿ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲಾ ಎಂದು ಬೆದರಿಕೆ ಹಾಕಿದರು.  ತದನಂತರ ಮಯೂರ ಇತನು ನನ್ನ ಮಕ್ಕಳಾದ ಚೇತನ ಮತ್ತು ಪ್ರವೀಣ ಇಬ್ಬರಿಗೂ ಪೋನ ಮಾಡಿ ಸಮೋಸಾ ಭಟ್ಟಿಗೆ  ಕರೆಯಿಸಿಕೊಂಡು ನನ್ನ ಮಕ್ಕಳೊಂದಿಗೆ ನನಗೆ ಮನೆ ಕಳುಹಿಸಿಕೊಟ್ಟಿರುತ್ತಾನೆ.  ಊಟ ಆದ ನಂತರ ಈ ವಿಷಯ ನನ್ನ ಹೆಂಡತಿ ಲಕ್ಷ್ಮೀ ಮತ್ತು ಮಕ್ಕಳಾದ ಚೇತನ ಮತ್ತು ಪ್ರವೀಣ ಇವರಿಗೆ ತಿಳಿಸಿದಾಗ ಅವರು ನನಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಅಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದರು. ರಾತ್ರಿ ಸಮಯದಲ್ಲಿ ಪೊಲೀಸರು ಎಂ.ಎಲ್.ಸಿ. ವಿಚಾರಣೆಗಾಗಿ ಬಂದಾಗ ಅವರಿಗೆ ನಂತರ ವಿಚಾರ ಮಾಡಿಕೊಂಡು ದೂರು ಕೊಡುವುದಾಗಿ ತಿಳಿಸಿರುತ್ತೇನೆ. ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದು, ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ.   ಕಾರಣ ನನಗೆ ಕೈಯಿಂದ ಮತ್ತು ಸಣ್ಣ ರಾಡನಿಂದ ಹಾಗೂ ಚಪ್ಪಲಿಯಿಂದ ಹೊಡೆ ಬಡೆ ಸಮೋಸಾ ಭಟ್ಟಿ ಕೂಡಿ ಹಾಕಿ ಜೀವ ಭಯ ಹಾಕಿದ ೧)ಮಯೂರ ತಂದೆ ವಿಜಯಕುಮಾರ ಪುಕಾಳೆ ಸಾ: ಪುಟಾಣಿಗಲ್ಲಿ ಕಲಬುರಗಿ ೨)ಮುಕೇಶ ತಂದೆ  ವಿಜಯಕುಮಾರ ಪುಕಾಳೆ ಸಾ: ಪುಟಾಣಿಗಲ್ಲಿ ಕಲಬುರಗಿ ೩)ಮಜರ ಸಾ: ಕಲಬುರಗಿ ೪)ರಾಜಾ ಸಾ: ಕಲಬುರಗಿ ೫)ಅತೀಶ ತಂದೆ ಅಂಬಾದಾಸ ಹಿಬಾರೆ ಸಾ:ಬಸವಕಲ್ಯಾಣ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಕೊಟ್ಟ ದೂರಿನ  ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಚೌಕ ಪೊಲೀಸ್ ಠಾಣೆ:-  ದಿನಾಂಕ:24-03-2022 ರಂದು ಸಂಜೆ ೬-೩೦ ಗಂಟೆಗೆ ನಮ್ಮ ಠಾಣೆಯ ಶ್ರೀ ರಾಜಶೇಖರ ವಿ. ಹಳಿಗೋಧಿ ಪಿ.ಐ. ಚೌಕ ಪೊಲೀಸ ಠಾಣೆ  ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ  ಇಬ್ಬರು ಆರೋಪಿತರಿಗೆ ಮತ್ತು ಮುದ್ದೇ ಮಾಲಿನೊಂದಿಗೆ ತಮ್ಮದೊಂದು ಸರ್ಕಾರ ಪರ ದೂರು  ಮತ್ತು ಮಟಕಾ ದಾಳಿ ಜಪ್ತಿ ಪಂಚನಾಮೆ  ಕೊಟ್ಟಿದ್ದರ ಸಾರಾಂಶವೆನೆಂದೆರೆ, ಇಂದು ದಿನಾಂಕ ೨೪/೦೩/೨೦೨೨ ರಂದು ಮಧ್ಯಾಹ್ನ ೪-೦೦ ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೆನೆಂದೆರೆ, ತಮ್ಮ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ ಅಯ್ಯರವಾಡಿ ಮಾಲು ಕಿರಾಣಾ ಹೋಲಸೇಲ್ ಅಂಗಡಿ ಎದುರುಗಡೆ ಇರುವ ಖುಲ್ಲಾ ಜಾಗೆಯಲ್ಲಿ ಇಬ್ಬರು ನಿಂತುಕೊಂಡು ಹೋಗಿ-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ ೧) ಶ್ರೀ ರಾಜ ತಂದೆ ಗೋಪಾಲ ಜಾಧವ  ವ:೩೩ ವರ್ಷ ಉ:ಖಾಸಗಿ ಕೆಲಸ  ಜಾತಿ ಮರಾಠಾ ಸಾ: ಶಿವಾಜಿ ನಗರ ಕಲಬುರಗಿ ೨) ಶ್ರೀ ಪ್ರಜ್ವಲ್ ತಂದೆ ಪ್ರಭು ನಾಗಲಗಿದ್ದಿ ವ:೨೦ ರ ವರ್ಷ ಉ:ವಿದ್ಯಾರ್ಥಿ ಜಾತಿ ಲಿಂಗಾಯತ ಸಾ: ಗಾಜಿಪೂರ ಕಲಬುರಗಿ ಮತ್ತು ಸಿಬ್ಬಂದಿಯವರಾದ ಶ್ರೀ ಹುಸೇನಬಾಷಾ ಎ.ಎಸ್.ಐ. ಸಿಪಿಸಿ ೧೦ ಅಶೋಕ, ಸಿಪಿಸಿ ೧೧೧ ಉಮೇಶ ಇವರುಗಳನ್ನು ಬರಮಾಡಿಕೊಂಡು ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿ ಕೊಂಡ ಮೇರೆಗೆ ನಾವು ಪಂಚರು ಅದಕ್ಕೆ ಒಪ್ಪಿಕೊಂಡರು. ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ನಮ್ಮ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ನಂತರ ದಾಳಿ ಕುರಿತು ಠಾಣೆಗೆ ಒದಗಿಸಿದ ಸರಕಾರಿ ಜೀಪು ಕೆಎ ೩೨ ಜಿ ೮೭೪ ರಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಕುಳಿತುಕೊಂಡು ಮಾನ್ಯ ಎ.ಸಿ.ಪಿ. (ಎನ್)ಉಪವಿಭಾಗ ಕಲಬುರಗಿ ರವರ ಮರ‍್ಗರ‍್ಶನದಲ್ಲಿ ದಾಳಿ ಕುರಿತು ಠಾಣೆಯಿಂದ ಮಧ್ಯಾಹ್ನ ೪-೧೫ ಗಂಟೆಗೆ ಹೊರಟಿದ್ದು, ಜೀಪು ಸಿಪಿಸಿ ೧೦ ಅಶೋಕ ಇವರು ಚಾಲನೆ ಮಾಡುತ್ತಿದ್ದು, ಚೌಕ ರ‍್ಕಲ್ ಮುಖಾಂತರವಾಗಿ ಬಾತ್ಮಿ ಸ್ಥಳವಾದ ಕಲಬುರಗಿ ನಗರದ ಅಯ್ಯರವಾಡಿ ಮಾಲು ಕಿರಾಣಾ ಹೋಲಸೇಲ್ ಅಂಗಡಿ  ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪು ನಿಲ್ಲಿಸಿದಾಗ ಎಲ್ಲರೂ ಜೀಪು ಇಳಿದು ಕಲಬುರಗಿ ನಗರದ ಅಯ್ಯರವಾಡಿ ಮಾಲು ಕಿರಾಣಾ ಹೋಲಸೇಲ್ ಅಂಗಡಿ ಮರೆಯಲ್ಲಿ ನಿಂತು ನೋಡಲಾಗಿ ಇಬ್ಬರು ಮಾಲು ಕಿರಾಣಾ ಹೋಲಸೇಲ್ ಅಂಗಡಿ ಎದುರಿನ ಖುಲ್ಲಾ ಜಾಗೆಯಲ್ಲಿ ನಿಂತುಕೊಂಡು ಹೋಗು-ಬರುವ ಸರ‍್ವಜನಿಕರಿಗೆ ೧ ರೂ.ಗೆ ೮೦ ರೂ. ಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸರ‍್ವಜನಿಕರಿಂದ ಹಣ ಪಡೆದುಕೊಂಡು ಮತ್ತು ತಮ್ಮ ತಮ್ಮ ಹತ್ತಿರವಿದ್ದ ಮೋಬಾಯಿಲಗಳಿಂದ ಕೂಡಾ  ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು  ನೋಡಿ, ನಮ್ಮ ಜೊತೆಯಲ್ಲಿ ಬಂದ ಪಂಚರಿಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ತೋರಿಸಿ ಖಚಿತಪಡಿಸಿಕೊಂಡು,  ಪಂಚರ ಸಮಕ್ಷಮದಲ್ಲಿ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಮಧ್ಯಾಹ್ನ ೪-೪೫ ಗಂಟೆಗೆ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ಇಬ್ಬರಿಗೂ ಹಿಡಿದು ಅವರುಗಳ  ಹೆಸರು ವಿಳಾಸ ವಿಚಾರಿಸಲೂ ಅವರಲ್ಲಿ ಒಬ್ಬನು ತನ್ನ ಹೆಸರು ನಾಗೇಂದ್ರ ತಂದೆ ವೆಂಕಾಜಿರಾವ ಜಗತಾಪ ವ;೫೫ ವರ್ಷ ಉ:ಆಟೋ ಚಾಲಕ ಜಾತಿ ಮರಾಠಾ ಸಾ;ಕಾವೇರಿ ನಗರ ಲಂಗೋಟಿಪೀರ ದರ್ಗಾ ಹಿಂದುಗಡೆ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:೦೦ ರೂ. ಮತ್ತು ಒಂದು ಬಾಲಪೆನ್ನು ಅ:ಕಿ:೦೦ ರೂ. ಹಾಗೂ ನಗದು ಹಣ ೮೪೦/- ರೂ. ಮತ್ತು ಒಂದು ಲಾವಾ ಅಂತಾ ಬರೆದ ಕೀ ಪ್ಯಾಡ ಮೋಬಾಯಿಲ್ ಅ:ಕಿ:೦೦ ರೂ. ಮತ್ತೊಂದು ರೆಡ್ಡಮೀ ಮೋಬಾಯಿಲ್ ಅ:ಕಿ:೩೦೦೦/- ರೂ.  ದೊರೆತವು. ಎರಡನೆಯವನು ತನ್ನ ಹೆಸರು ಅಮಿತ ತಂದೆ ಅಣ್ಣಪ್ಪ ಮೂಲಗೆ ವ:೨೩ ರ‍್ಷ ಉ:ವ್ಯಾಪರ ಜಾತಿ ಲಿಂಗಾಯತ ಸಾ: ಮಾಲು ಬಿಲ್ಡಿಂಗ ಹತ್ತಿರ ಕಲಬುರಗಿ ಜಿಡಿಎ ಕಾಲನಿ ಕಾವೇರಿ ನಗರ ಕಲಬುರಗಿ ಅಂತಾ ತಿಳಿಸಿದನು.  ಅತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:೦೦ ರೂ. ಮತ್ತು ಒಂದು ಬಾಲಪೆನ್ನು ಅ:ಕಿ:೦೦ ರೂ. ಹಾಗೂ ನಗದು ಹಣ ೭೪೦/- ರೂ. ಮತ್ತು ಒಂದು ಓಪೋ ಅಂತಾ ಬರೆದ ಮೋಬಾಯಿಲ್ ಅ:ಕಿ:೩೦೦೦/- ರೂ. ದೊರೆತವು. ನಂತರ ನಾನು ನಾಗೇಂದ್ರ ಮತ್ತು ಅಮಿತ ಇಬ್ಬರಿಗೂ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀರಿ ಅಂತಾ ವಿಚಾರಿಸಿದಾಗ ಅವರಿಬ್ಬರು ರಾಜಶೇಖರ ತಂದೆ ಮಲ್ಲಿಕಾರ್ಜುನ ಮಾಶೆಟ್ಟಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ  ಮತ್ತು ವೀರಯ್ಯ ಸ್ವಾಮಿ ಸಾ: ಶಿವಾಜಿ ನಗರ ಕಲಬುರಗಿ ಇವರುಗಳಿಗೆ  ಕೊಡುವುದಾಗಿ ತಿಳಿಸಿದರು.  ತದನಂತರ ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿಗಳು  ಎರಡು  ಬಾಲಪೆನ್ನುಗಳು  ನಗದು ಹಣ ೧೫೮೦/- ರೂ. ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ನನ್ನ  ವಶಕ್ಕೆ ತೆಗೆದುಕೊಂಡು ಜಪ್ತ ಪಡಿಸಿಕೊಂಡೆನು.  ಮತ್ತು ನಾಗೇಂದ್ರ ತಂದೆ ವೆಂಕಾಜಿರಾವ ಜಗತಾಪ ಸಾ;ಕಾವೇರಿ ನಗರ ಲಂಗೋಟಿಪೀರ ರ‍್ಗಾ  ಹಿಂದುಗಡೆ ಕಲಬುರಗಿ ಮತ್ತು ಅಮಿತ ತಂದೆ ಅಣ್ಣಪ್ಪ ಮೂಲಗೆ ಸಾ: ಮಾಲು ಬಿಲ್ಡಿಂಗ ಹತ್ತಿರ ಕಲಬುರಗಿ ಜಿಡಿಎ ಕಾಲನಿ ಕಾವೇರಿ ನಗರ ಕಲಬುರಗಿ ಹಾಗೂ ರಾಜಶೇಖರ ತಂದೆ ಮಲ್ಲಿಕರ‍್ಜುನ ಉಮಾಶೆಟ್ಟಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ಮತ್ತು ವೀರಯ್ಯ ಸ್ವಾಮಿ ಸಾ: ಶಿವಾಜಿ ನಗರ ಕಲಬುರಗಿ ನಾಲ್ಕು ಜನರು ಮಟಕಾ ಜೂಜಾಟದಲ್ಲಿ ನಿರತರಾದ ಖಚಿತಪಟ್ಟಿದ್ದರಿಂದ ಸ್ಥಳದಲ್ಲಿ ಸಿಕ್ಕಿ ಬಿದ್ದ ನಾಗೇಂದ್ರ ತಂದೆ ವೆಂಕಾಜಿರಾವ ಜಗತಾಪ ಸಾ;ಕಾವೇರಿ ನಗರ ಲಂಗೋಟಿಪೀರ  ರ‍್ಗಾ ಹಿಂದುಗಡೆ ಕಲಬುರಗಿ ಮತ್ತು ಅಮಿತ ತಂದೆ ಅಣ್ಣಪ್ಪ ಮೂಲಗೆ ಸಾ: ಮಾಲು ಬಿಲ್ಡಿಂಗ ಹತ್ತಿರ ಕಲಬುರಗಿ ಜಿಡಿಎ ಕಾಲನಿ ಕಾವೇರಿ ನಗರ ಕಲಬುರಗಿ ಇವರುಗಳಿಗೆ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವು. ಸದರ ಜಪ್ತಿ ಪಂಚನಾಮೆ ಸಂಜೆ ೪-೪೫ ಗಂಟೆಯಿಂದ ಸಂಜೆ ೫-೪೫ ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಲ್ಯಾಪಟ್ಯಾಪನಲ್ಲಿ ಪಂಚನಾಮೆ ಗಣಕೀಕೃತ ಮಾಡಿಸಿ ಮುಗಿಸಲಾಯಿತು. ಮಟಕಾ ಜೂಜಾಟದಲ್ಲಿ ನಿರತರಾದ ನಾಗೇಂದ್ರ ತಂದೆ ವೆಂಕಾಜಿರಾವ ಜಗತಾಪ ಸಾ;ಕಾವೇರಿ ನಗರ ಲಂಗೋಟಿಪೀರ ರ‍್ಗಾ ಹಿಂದುಗಡೆ ಕಲಬುರಗಿ ಮತ್ತು ಅಮಿತ ತಂದೆ ಅಣ್ಣಪ್ಪ ಮೂಲಗೆ ಸಾ: ಮಾಲು ಬಿಲ್ಡಿಂಗ ಹತ್ತಿರ ಕಲಬುರಗಿ ಜಿಡಿಎ ಕಾಲನಿ ಕಾವೇರಿ ನಗರ ಕಲಬುರಗಿ ಹಾಗೂ ರಾಜಶೇಖರ ತಂದೆ ಮಲ್ಲಿಕಾರ್ಜುನ ಉಮಾಶೆಟ್ಟಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ಮತ್ತು ವೀರಯ್ಯ ಸ್ವಾಮಿ ಸಾ: ಶಿವಾಜಿ ನಗರ ಕಲಬುರಗಿ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಕಾರ ಪರ ದೂರು ಕೊಟ್ಟಿರುತ್ತೇನೆ ಎಂದು ಕೊಟ್ಟ ಜಪ್ತಿ ಪಂಚನಾಮೆ ಮತ್ತು ಸರಕಾರ ಪರ ದೂರಿನ ಆಧಾರದ ಮೇಲೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಸಂಚಾರಿ ಪೊಲೀಸ್ ಠಾಣೆ-೦೧ :-   ದಿನಾಂಕ 24-03-2022ರಂದು ಬೆಳಿಗ್ಗೆ ೬-೩೦ ಗಂಟೆಗೆ ಮೃತ ಶಹಬಾಜ ಇತನು ಸುಲ್ತಾನಪೂರ ತರಕಾರಿ ಯಾರ್ಡನಿಂದ ತರಕಾರಿ ತಗೆದುಕೊಂಡು ಬರುವ ಕುರಿತು ಮನೆಯಿಂದ ನಡೆದುಕೊಂಡು ಹಾಗರಗಾ ರಿಂಗ ರೋಡ ಹತ್ತೀರ ಬಂದು ಸುಲ್ತಾನಪೂರ ತರಕಾರಿ ಯಾರ್ಡಗೆ ಆಟೋರಿಕ್ಷಾ ಮೂಲಕ ಹೋಗುವ ಕುರಿತು ಆಟೋರಿಕ್ಷಾ ಕಾಯುತ್ತಾ ರೋಡ ಪಕ್ಕದಲ್ಲಿ ನಿಂತಿರುವಾಗ ಲಾರಿ ನಂಬರ ಎಮ್.ಹೆಚ್-೩೮/ಡಿ-೧೦೧ ನೇದ್ದರ ಚಾಲಕ ಶೇಖ ಮುಸ್ತಾಕ ಇತನು ಸೇಡಂ ರಿಂಗ ರೋಡ ಕಡೆಯಿಂದ ಹುಮನಾಬಾದ ರಿಂಗ ರೋಡ ಕಡೆಗೆ ಹೋಗುವ ಕುರಿತು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಪಕ್ಕದಲ್ಲಿ ನಿಂತಿರುವ ಶಹಬಾಜ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಶಹಬಾಜ ಇವರು ಕೆಳಗಡೆ ಬಿದ್ದಾಗ ಅವರ ಮೈಮೇಲೆ ಲಾರಿ ಗಾಲಿಯನ್ನು ಚಲಾಯಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿದ್ದರಿಂದ ಶಹಬಾಜ ಇತನು ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. 

 

 

ಇತ್ತೀಚಿನ ನವೀಕರಣ​ : 08-04-2022 12:49 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080