ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:24.02.2023 ರಂದು  03:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಸಚೀನ್ ತಂದೆ ಶತೃಘನ್ ನಾರಾಯಣಕರ್ ವಯ: 33 ವರ್ಷ ಜಾ:ಎಸ್.ಸಿ. (ಡೋರ್) ಉ: ಖಾಸಗಿ ಕೆಲಸ ಸಾ|| ಅಕ್ಕಲಕೋಟ್ ನಾಕಾ, ಸೋಲ್ಲಾಪೂರ, ಮಹಾರಾಷ್ಟ್ರ ಹಾ||ವ|| ಎನ್.ಜಿ.ಓ. ಕಾಲೋನಿ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಕಲಬುರಗಿ ನಗರದ ಜೇವರ್ಗಿ ಕ್ರಾಸ್ ಹತ್ತಿರ ಇರುವ ಮಹೇಶ್ ಮಾಲು ಟೈಲ್ಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನನಗೆ ಅನೀತಾ ಅಂತ ಹೆಂಡತಿ ಇದ್ದು ಇವಳು ಎನ್.ಜಿ.ಓ. ಕಾಲೋನಿಯಲ್ಲಿಯೇ ಬಟ್ಟೆ ಅಂಗಡಿ ವ್ಯಾಪಾರ ಮಾಡಿಕೊಂಡು ಇರುತ್ತಾಳೆ. ನಮಗೆ ಒಟ್ಟು ಮೂರು ಜನ ಮಕ್ಕಳಿದ್ದು ಮೊದಲನೇಯವಳು ಶ್ರದ್ದಾ ಹಾಗೂ ಎರಡು ಜನ ಗಂಡು ಮಕ್ಕಳು ಇದ್ದು ಅವರ ಹೆಸರು ಯಶರಾಜ್ ಮತ್ತು ಸಂದೀಪ್ ಅಂತ ಇರುತ್ತಾರೆ. ನಾನು ದಿನಾಲೂ ಬೆಳಿಗ್ಗೆ 09:00 ಗಂಟೆಗೆ ಕೆಲಸಕ್ಕೆ ಹಾಗೂ ಮಕ್ಕಳು ಶಾಲೆಗೆ ಹೋಗುತ್ತಾರೆ. ನನ್ನ ಹೆಂಡತಿ ಅನೀತಾ ಇವಳು ಬೆಳಿಗ್ಗೆ 10:00 ಗಂಟೆಗೆ ಬಟ್ಟೆ ವ್ಯಾಪಾರದ ಸಲುವಾಗಿ ಹೋಗುತ್ತಾಳೆ. ಹೀಗಿದ್ದು ಇಂದು ದಿನಾಂಕ: 24.02.2023 ರಂದು ಮಧ್ಯಾನ್ಹ 01:.00 ಗಂಟೆಗೆ ನಾನು ಮರಳಿ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಯಾವುದೋ ರೀತಿಯಿಂದ ಬೀಗದಿಂದ ನಮ್ಮ ಮನೆಯ ಬೀಗ ತೆಗೆದು ಮನೆಯಲ್ಲಿದ್ದ ಬಂಗಾರದ 1)  7 ಗ್ರಾಂನ ಬಂಗಾರದ ಬೋರಮಳ ಅ.ಕಿ.25,000/-ರೂ, 2)  6 ಗ್ರಾಂನ ಬಂಗಾರದ ಜೀರಾಮಣಿ ಅ.ಕಿ.23,000/-ರೂ , 3) 1 ಗ್ರಾಂನ ಬಂಗಾರದ ಕಿವಿ ಓಲೆ ಅ.ಕಿ.5,000/-ರೂ ಮತ್ತು 4) 65 ಗ್ರಾಂನ ಬೆಳ್ಳಿ ಕಾಲ ಚೈನ್ ಮತ್ತು ಚೈನ್ ಅ.ಕಿ.5,000/-ರೂ ಹೀಗೆ ಒಟ್ಟು ಅ.ಕಿ.58,000/-ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನಮ್ಮ ಮನೆಯಲ್ಲಿ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆಮಾಡಿ ನಮ್ಮ ಬಂಗಾರದ ಆಭರಣಗಳನ್ನು ನಮಗೆ ದೊರಕಿಸಿ ಕೊಡಲು ವಿನಂತಿ ಅಂತಾ ಫಿರ್ಯಾದಿ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :- ದಿನಾಂಕ:24.02.2023 ರಂದು 11:00 ಎ.ಎಂ.ಕ್ಕೆ ಫಿರ್ಯಾದಿ ಶ್ರೀ ಶಿವಾನಂದ ತಂದೆ ಶಿವರುದ್ರಪ್ಪ ಬಡದಾಳ ವಯ: 60 ವರ್ಷ ಜಾ: ಲಿಂಗಾಯತ ಉ: ಮುಖ್ಯ ಗುರುಗಳು ಮೇಳಕುಂದಾ(ಬಿ) ಪ್ರೌಢ ಶಾಲೆ ಸಾ|| ರೆಲ್ವೇ ಕಾಲೋನಿ, ಬಿದ್ದಾಪೂರ ಕಾಲೋನಿ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2014ನೇ ಸಾಲಿನಲ್ಲಿ ಒಂದು ಹಿರೋ ಸ್ಪ್ಲೇಂಡರ್ ಪ್ರೋ ಮೋಟಾರ ಸೈಕಲ್ ನಂ ಕೆ.ಎ-32 ಇ.ಎಫ್.-4500 ಸಿಲ್ವರ್ ಬಣ್ಣದ್ದು ಇಂಜನ್ ನಂಬರ್  HA10ELEHB33514 ಚೆಸ್ಸಿ ನಂಬರ್ MBLHA10A3EHB18370 ಅ.ಕಿ.18,000 ನೇದ್ದು ಖರೀದಿಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ:09.02.2023 ರಂದು ಬೆಳಿಗ್ಗೆ 08:00 ಗಂಟೆಗೆ ನಾನು ತರಕಾರಿ ತರಲು ಕಣ್ಣಿ ಮಾರ್ಕೆಟಗೆ ಬಂದು ಸಾರ್ವಜನಿಕ ಶೌಚಾಲಯದ ಹತ್ತಿರ ನನ್ನ ದ್ವಿಚಕ್ರ ವಾಹನ ನಿಲ್ಲಿಸಿ ತರಕಾರಿ ತರಲು ಒಳಗೆ ಹೋಗಿ ಮರಳಿ ದಿನಾಂಕ: 09.02.2023 ರಂದು ಬೆಳಿಗ್ಗೆ 08:30 ಗಂಟೆಗೆ ನಾನು ಬಂದು ನೋಡಲಾಗಿ ನನ್ನ ವಾಹನ ಇದ್ದಿರುವುದಿಲ್ಲ. ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಫಿರ್ಯಾದಿ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ  ನಗರ ಪೊಲೀಸ ಠಾಣೆ :-  ದಿನಾಂಕಃ 24.02.2023 ರಂದು 6-15 ಪಿ,ಎಮ್ ಕ್ಕೆ ಶ್ರೀ ಬಸವರಾಜ ತಂದೆ ಮಲ್ಲಿನಾಥ ಹಾವಣಿ ವಯ; 32 ವರ್ಷ ಜಾ; ಲಿಂಗಾಯತ ಉ; ವ್ಯಾಪಾರ ಸಾ; ಆಳಂದ ಚೆಕಪೋಸ್ಟ ಹತ್ತಿರ ಸಿದ್ರಾಮೇಶ್ವರ ಕಾಲೋನಿ ಕಲಬುರಗಿ. ರವರು ಠಾಣೆಗೆ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಹಾಜರಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ; 16/02/2023 ರಂದು ಸಮಯ ರಾತ್ರಿ 11.20 ಗಂಟೆಗೆ ಸ್ಥಳ ಆಳಂದ ಚೆಕಪೋಸ್ಟ ತಾಜ ಚೈನೀಸ ಸೆಂಟರದಲ್ಲಿ ಊಟಕ್ಕೆ ಹೋದ ಸಮಯದಲ್ಲಿ ನಾವು ಊಟಕ್ಕೆ ಎಗ್ ನೂಡಲ್ಸ ಹಾಫ ಪ್ಲೇಟ್ ಕೊಡಲು ಹೇಳೀದೆವು ಆವಾಗ ಅವರು ಇಲ್ಲಾ ಅಂತ ಹೇಳೀದ್ದಾರೆ. ಆಗ ನಾನು ಬೇರೆ ಏನಿದೆ ಅಂತ ಕೇಳೀದೆ ಆಗ ಅವರು ಎಗ್ ರೈಸ ಇದೆ ಅಂತ ಹೇಳೀದರು ಅದಕ್ಕೆ ನಾನು ತೆಗೊಂಡ ಬಾ ಎಂದೆ ಅವರು 10 ರಿಂದ 15 ನಿಮಿಶವಾದರೂ ತರಲಿಲ್ಲಾ ಅದಕ್ಕೆ ನಾನು ಎದ್ದು ಹೊರಗಡೆ ಹೋಗುವದಕ್ಕೆ ನಡೆದಾಗ ಬೇರೆ ಟೇಬಲ ಕಸ್ಟಮರ್ ಇವರು ಏ ಅಂತ ಕರೆದರು ಅದಕ್ಕೆ ನಾವು ಮೊದಲಿಗೆ ನಾವು ಏನು ಹೇಳಲಿಲ್ಲಾ ನಾನು ವೇಟರಗೆ ನಿನ್ನ ಹತ್ತಿರ ಊಟ ಇಲ್ಲಾ ಅಂದಾಗ ಆರ್ಡರ್ ಹೇಗೆ ತೆಗೆದುಕೊಂಡೆ ಅಂತ ನಾನು ಜೋರಾಗಿ ಕೇಳಿದೆ ಅದಕ್ಕೆ ಅವರು ಇಲ್ಲಾ ಸರ್ ಸ್ವಾರಿ ಅಂತ ಹೇಳುತ್ತಾ ಇದ್ದ ಅವಾಗ ಬೇರೆ ಟೇಬಲದಲ್ಲಿದ್ದ ಇಬ್ಬರು ವಯಸ್ಕರು ಏ ಇಲ್ಲಾ ಅಂತ ಹೇಳೀದರೆ ಸುಮ್ಮನೆ ಹೋಗಬೇಕು ಅಂತ ಅವಾಜ ಹಾಕಿದರು ಅದಕ್ಕೆ ನಾನು ನೀವು ಯಾರು? ಮತ್ತೆ ನೀವು ಈ ಹೊಟೇಲನ ಮಾಲಿಕರಾ ಅಂತ ಕೇಳಿದೆ ಅದರಲ್ಲಿ ಒಬ್ಬನು ಹೌದು ಮಾಲಿಕನೇ ನಾನು ಎಂದು ಹೇಳಿದ. ಆಗ ನಾನು ವೇಟರ್ ಹತ್ತಿರ ಹೋದೆ ವೇಟರ್ ಗೆ ನಿನ್ನ ಮಾಲಿಕನಿಗೆ ಹೇಳು ಅವರು ನನಗೆ ತುಂಬಾ ಪರಿಚಯದವರಿದ್ದಾರೆ ಎಂದು ಅಷ್ಟರಲ್ಲೆ ಈ ಇಬ್ಬರು ಬಂದು ನನಗೆ ಜಗಳ ತೆಗೆದಿದ್ದಾರೆ ಅಷ್ಟರಲ್ಲಿ ಯಾರೋ ಬಂದು ನನ್ನ ತಲೆಗೆ ಹೊಡೆದಿದ್ದಾನೆ ನಾನು ನೋಡಲಿಲ್ಲಾ ಹಾಗೆ ನನ್ನ ಜೊತೆಗೆ ಇದ್ದ ಸ್ನೇಹಿತ ನನ್ನ ತಲೆಗೆ ಹೊಡೆದ ತಕ್ಷಣ ನನ್ನ ಸ್ನೇಹಿತ ಓಡಿ ಹೋಗಿದ್ದಾನೆ. ನನಗೆ ಮೊದಲು ಬಂದು ಧೂಳಪ್ಪಾ ಬೆಣ್ಣೂರ ಸಾ; ಮಹಾದೇವ ನಗರ ಶೇಖ ರೋಜಾ ಕಲಬುರಗಿ ನಾನು ಸುಧಾರಿಸಿಕೊಂಡು ನನ್ನ ತಮ್ಮನನ್ನು ಕರೆದುಕೊಂಡು ಪೊಲೀಸ ಠಾಣೆಗೆ ಬಂದು ಈ ದೂರನ್ನು ಹೇಳಿರುತ್ತೇನೆ. ಪೋಲಿಸ ರು ನನಗೆ ಆಸ್ಪತ್ರೆಗೆ ಹೋಗಲು ತಿಳಿಸಿದರು ನಂತರ ನಾನು  ಮತ್ತು ನನ್ನ ತಮ್ಮ ಜಿಮ್ಸ ಆಸ್ಪತ್ರೆ ಕಲಬುರಗಿಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು  ನಂತರ ಪೊಲೀಸರು ಬಂದು ನನ್ನನ್ನು ವಿಚಾರಣೆ ಮಾಡಿದರು ನಾನು ಯಾವದೆ ಉತ್ತರ ಹೇಳುವ ಸ್ಥಿತಿಯಲ್ಲಿ ಇರಲಿಲ್ಲಾ ನಂತರ ಚೇತರಿಸಿಕೊಂಡು ಪೊಲೀಸರಿ ನಾನು ಪೊಲೀಸ ಠಾಣೆಗೆ ಬಂದು ದೂರನ್ನು ಕೊಡುತ್ತೇನೆಂದು ತಿಳಿಸಿದೆ ನಂತರ ಪೊಲೀಸರು ನನ್ನನ್ನು ಕೇಳಿ ಹೋದರು ವೈದ್ಯರು ನನ್ನನ್ನು ತಲೆಗೆ ಆಪರೇಶನ ಮಾಡಬೇಕೆಂದು ತಿಳಿಸಿದ್ದಾರೆ. ಆದ್ದರಿಂದ ದಯಮಾಡಿ ತಾವು ಸದರಿ ನನ್ನ ದೂರನ್ನು ದಾಖಲಿಸಿ 1) ಧೂಳಪ್ಪ ಬೆಣ್ಣೂರ ಮತ್ತು ಇನ್ನೂ 3 ಜನ ಅವರ ಹೆಸರು ನನಗೆ ಗೊತ್ತಿರುವದಿಲ್ಲಾ ಇವರ ಮೇಲೆ ಕಾನೂನಿನ ರೀತ್ಯ ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಫಿರ್ಯಾದಿ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 24/02/2023 ರಂದು ರಾತ್ರಿ 8:15 ಪಿ.ಎಮ ಕ್ಕೆ ಶ್ರೀ. ರವಿ ತಂದೆ ರಾಜಶೇಖರ ಅಂಬಲಗಿ ಇವರು ಪಿ.ಎಸ್ ಗೆ ಹಾಜರಾಗಿ ಶ್ರೀ. ಅಂಬರೀಶ ತಂದೆ ರಾಜಶೇಖರ ಅಂಬಲಗಿ ವಯಃ 20 ವರ್ಷ ಜಾತಿಃ ಲಿಂಗಾಯತ ಉಃ ಖಾಸಗಿ ಕೆಲಸ ಮುಕ್ಕಾಃ ರಾಮ ನಗರ ಕಲಬುರಗಿ ಇವರ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು, ಸದರಿ ಫಿರ್ಯಾದಿ ಅರ್ಜಿ ಸಾರಂಶವೆನೆಂದರೆ, ದಿನಾಂಕ 20/02/2023 ರಂದು ನಾನು, ನನ್ನ ಗೆಳೆಯರಾದ ಜಗದೀಶ ಪೂಜಾರಿ, ಈಶ್ವರ ಮೋಳಕಾರ, ಮೋಹನ ಬಿರಾದಾರ ನಾಲ್ಕು ಜನರು ಕೂಡಿ ಎರಡು ಮೋಟರ ಸೈಕಲದ ಮೇಲೆ ಕಲಬುರಗಿಯಿಂದ ತಾವರಗೇರಾ ಗ್ರಾಮದ ಬದಿಯಲ್ಲಿರುವ ಅಯ್ಯಪ್ಪಾ ಗುಡಿಗೆ ಮತ್ತು ಶನಿ ಮಹಾತ್ಮಾ ಗುಡಿಗೆ ಹೋಗುವಾಗ ಮೋಟರ ಸೈಕಲ ನಂ. ಕೆಎ 32 ಇ.ವಾಯಿ 7235 ನೇದ್ದರ ಮೇಲೆ ನಾನು ಮತ್ತು ಜಗದೀಶ ಹೋಗುವಾಗ ಸಾಯಂಕಾಲ 6:30 ಗಂಟೆ ಆಗಿರಬಹುದು ಶನಿ ಮಹಾತ್ಮಾ, ಅಯ್ಯಪ್ಪ ಗುಡಿ ಹತ್ತೀರ ನಾವು ತಿರುಗಿಸಿಕೊಂಡು ಹೋಗುವಾಗ ಅದೆ ವೇಳೆಗೆ ಹರಸೂರ ರೋಡಿನ ಕಡೆಯಿಂದ ಒಂದು ಹಿರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. ಕೆಎ 32 ಹೆಚ್.ಎ 6395 ನೇದ್ದರ ಸವಾರನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಿಂದೆ ಕುಳಿತ ನನ್ನ ಎಡಕಾಲಿನ ಕಪಗಂಡಿನ ಹತ್ತೀರ ಜೋರಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟರ ಸೈಕಲ ಸಮೇತವಾಗಿ ಇಬ್ಬರೂ ಬಿದ್ದಾಗ ನನ್ನ ಕಾಲು ಮುರದಿದ್ದು, ಅವರು ಮೂರು ಜನರಿದ್ದು, ನನ್ನ ಜೊತೆಗೆ ಇರುವ ಮೋಹನ ಬಿರಾದಾರ, ಈಶ್ವರ ಕಪನೂರ ಮತ್ತು ಜಗದೀಶ ಪೂಜಾರಿ ಎಲ್ಲರು ನೋಡಿ ನಮಗೆ ಎಬ್ಬಿಸಿದ್ದು, ಮುಂದೆ ಯಾವುದೋ ಖಾಸಗಿ ಅಂಬುಲೇನ್ಸದಲ್ಲಿ ನಾನು ಮತ್ತು ಜಗದೀಶ ಇಬ್ಬರು ಯುನೈಟೆಡ ಆಸ್ಪತ್ರೆಗೆ ಬಂದು ಉಪಚಾರಕ್ಕಾಗಿ ಸೇರಿಕೆಯಾದೆವು, ನಮಗೆ ಅಪಘಾತ ಪಡಿಸಿದವರಿಗು ಕೂಡಾ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಕಲಬುರಗಿ ಸರಕಾರಿ ಆಸ್ಪತ್ರೆಗೆ ಹೋಗಿರುವ ಬಗ್ಗೆ ಗೊತ್ತಾಗಿರುತ್ತದೆ. ಅವರ ಹೆಸರು ವಿಚಾರಣೆಯಲ್ಲಿ ಆಸೀಫ ತಂದೆ ನಬಿಸಾಬ ಸುಟೇಲಿ, ಅಜರ ತಂದೆ ಅಹ್ಮದ ಪಠಾಣ ಮತ್ತು ಇಸ್ಮಾಯಿಲ ತಂದೆ ಮತಾಬಸಾಬ ಸುಟೇಲಿ ಮುಕ್ಕಾಃ ಗೋಳಾ ಅಂತಾ ಗೊತ್ತಾಗಿರುತ್ತದೆ. ಈಗ ನನಗೆ ಆಸ್ಪತ್ರೆಯಲ್ಲಿ ಕಾಲಿನ ಆಪರೇಷನ್ ಆಗಿರುವುದರಿಂದ ಸ್ವಲ್ಪ ಗುಣಮುಖ ಹೊಂದಿ ಈಗ ಈ ಫಿರ್ಯಾದಿಯನ್ನು ತಡವಾಗಿ ಕಳುಹಿಸಿಕೊಡುತ್ತಿರುತ್ತೆನೆ. ಕಾರಣ ಮೋಟರ ಸೈಕಲ ನಂ. ಕೆಎ 32 ಹೆಚ್.ಎ 6395 ನೇದ್ದನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಅಪಘಾತ ಪಡಿಸಿದ್ದರಿಂದ ಕಾಲು ಮುರದಿದ್ದು, ಈ ವಿಷಯದಲ್ಲಿ ಮೋಟರ ಸೈಕಲ ಸವಾರ ಯಾರು ಎಂಬುವ ಬಗ್ಗೆ ನಿಖರವಾಗಿ ಯಾರು ಎಂಬುವುದು ಗೊತ್ತಿಲ್ಲಾ. ಇವರಲ್ಲಿ ನಡೆಯಿಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಚೌಕ ಪೊಲೀಸ ಠಾಣೆ :-  ದಿನಾಂಕ  24/02/2023 ರಂದು ರಾತ್ರಿ 10-30 ಗಂಟೆಗೆ  ಶ್ರೀ  ಸಮೀರ ಹೆಚ್. ಮುಲ್ಲಾ ಪಿ.ಐ. ಸಿಸಿಬಿ ಘಟಕ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ  ಕನ್ನಡದಲ್ಲಿ ಗಣಕೀಕೃತ ಮಾಡಿಸಿದ  ಮಟಕಾ ಜೂಜಾಟ ದಾಳಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಗೂ  ಒಬ್ಬ  ಆರೋಪಿತನನ್ನು  ಹಾಜರಪಡಿಸಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಸರ್ಕಾರಿ ತರ್ಫೇ  ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ,ನಾನು ಶಮೀರ ಹೆಚ್.ಮುಲ್ಲಾ, ಪಿ.ಐ., ಸಿ.ಸಿ.ಬಿ. ಘಟಕ, ಕಲಬುರಗಿ ನಗರ ಸರ್ಕಾರಿ ತರ್ಫೆ ದೂರು ಸಲ್ಲಿಸುವುದೇನೆಂದರೆ, ಇಂದು ದಿನಾಂಕ:24-02-2023 ರಂದು ಸಾಯಂಕಾಲ 5-00 ಗಂಟೆಗೆ ನಾನು ಕಛೇರಿಯಲ್ಲಿದ್ದಾಗ ನನಗೆ ಕಲಬುರಗಿ ನಗರದ ಹುಮನಾಬಾದ ಬೇಸ್ ಹತ್ತಿರ ಶಿವಾ ಎಲೆಕ್ಟ್ರಿಕಲ್ ಅಂಗಡಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1) ಶ್ರೀ ನಾಗೇಶ ತಂದೆ ಮಹಾಂತೇಶ ಚಿಂಚೋಳಿ, ವ:20 ವರ್ಷ, ಜಾತಿ:ಲಿಂಗಾಯತ, ಉ:ಬೊರವೆಲ್ ಮೆಕ್ಯಾನಿಕ, ಸಾ:ಕಾಂತಾ ಕಾಲೋನಿ, ಕಲಬುರಗಿ ಮೊ.ನಂ.8971023257, 2) ಶ್ರೀ ರೋಹನ ತಂದೆ ಅಶೋಕ ಪೂಜಾರಿ, ವ:19 ವರ್ಷ, ಜಾತಿ:ಕುರುಬ, ಉ:ಕೂಲಿಕೆಲಸ, ಸಾ:ಎಂ.ಎಸ್.ಕೆ. ಮಿಲ್., ಕಲಬುರಗಿ ಮೊ.ನಂ. 8296227689 ಇವರನ್ನು ಸಿ.ಸಿ.ಬಿ. ಘಟಕಕ್ಕೆ ಸಾಯಂಕಾಲ 5-20 ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ.  ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ಸುನೀಲಕುಮಾರ ಹೆಚ್ಸಿ-167, 2) ಶ್ರೀಶೈಲ ಪಿ.ಸಿ-692, 3) ಯಲ್ಲಪ್ಪ ಸಿಪಿಸಿ-220, 4) ಅಶೋಕ ಕಟಕೆ ಸಿಪಿಸಿ-134, 5) ಶಿವಕುಮಾರ ಸಿಪಿಸಿ-398, 6) ನಾಗರಾಜ ಸಿಪಿಸಿ-450 ಎಲ್ಲರೂ ಕೂಡಿ ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಸಾಯಂಕಾಲ 5-30 ಗಂಟೆಗೆ ಸಿ.ಸಿ.ಬಿ. ಕಛೇರಿಯಿಂದ ಹೊರಟು ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ಕಲಬುರಗಿ ನಗರದ ಹುಮನಾಬಾದ ಬೇಸ್ ಹತ್ತಿರ ಶಿವಾ ಎಲೆಕ್ಟ್ರಿಕಲ್ ಅಂಗಡಿ ಹತ್ತಿರ ಸಾಯಂಕಾಲ 5-55  ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 1 ರೂ.ಗೆ 80 ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದುಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ಸಾಯಂಕಾಲ 6-00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಸುರೇಶ ತಂದೆ  ಬಸವರಾಜ ಎರಫೂಲ್ ವ:38 ವರ್ಷ, ಉ:ಟೇಲರ ಕೆಲಸ, ಜಾತಿ: ಎಸ್.ಸಿ. ಸಾ: ವಡ್ಡರಗಲ್ಲಿ, ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿದನು. ನಂತರ ಸದರಿಯವನ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.2,970/- ನಗದು ಹಣ, ಮತ್ತು ಮಟಕಾ ಚೀಟಿಗಳು ಅ.ಕಿ.ರೂ.00/-, ಒಂದು ಬಾಲ ಪೆನ್ ಅ.ಕಿ.ರೂ.00/-, ಮತ್ತು ಒಂದು ಒಪ್ಪೋ ಕಂಪನಿಯ ಮೊಬೈಲ್ ಅ.ಕಿ. ರೂ.2,000/- ದೊರೆತಿದ್ದು, ಅದರ ನಂಬರ ವಿಚಾರಿಸಲು 9538870686 ಅಂತಾ ತಿಳಿಸಿದ್ದು,  ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲು 8679120540037377, 867912054037369 ಅಂತಾ ಇರುತ್ತದೆ. ನಂತರ ಸದರಿ ಜಪ್ತುಪಡಿಸಿಕೊಂಡ ಮುದ್ದೇಮಾಲುಗಳಿಗೆ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಒಂದು ಕವರನಲ್ಲಿ ಹಾಕಲಾಯಿತು. ಸದರಿ ಜಪ್ತಿ ಪಂಚನಾಮೆಯನ್ನು ಸಾಯಂಕಾಲ 6-00 ಗಂಟೆಯಿಂದ 7-00 ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಲೈಟಿನ ಬೆಳಕಿನಲ್ಲಿ ಲ್ಯಾಪಟ್ಯಾಪನಲ್ಲಿ ಟೈಪ ಮಾಡಿದ್ದು ಇರುತ್ತದೆ. ನಂತರ ಚೌಕ ಪೊಲೀಸ್ ಠಾಣೆಗೆ ಬಂದು ನನ್ನ ವರದಿಯನ್ನು ತಯಾರಿಸಿ, ಜಪ್ತಿಪಂಚನಾಮೆ, ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ.  ಎಂದು ಕೊಟ್ಟ ಸರ್ಕಾರಿ ತರ್ಫೇ ದೂರು ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 25-02-2023 11:42 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080