ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್ ಠಾಣೆ :-  ದಿನಾಂಕ:24-02-2022  ರಂದು ೧೧:೦೦ ಎ.ಎಂ.ಕ್ಕೆ ಫರ‍್ಯಾದಿದಾರರಾದ ಶ್ರೀಮತಿ ಶಾರದಾಬಾಯಿ ಗಂಡ ದಿ: ರಾಮಚಂದ್ರ ರಾಯಚೂರಕರ್  ಸಗರಕರ್ ವಯ: ೫೨ ವರ್ಷ ಜಾ: ಸಮಗಾರ ಉ: ಕೆ.ಎಸ್.ಆರ್.ಟಿ.ಸಿ ಯಲ್ಲಿ ಸ್ವೀಪರ ಕೆಲಸ  ಸಾ|| ಕರ‍್ತಿ ನಗರ ವಡ್ಡರಗಲ್ಲಿ ಬ್ರಹ್ಮಪೂರ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಲಿಖಿತ ಫರ‍್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ಗಂಡ ರಾಮಚಂದ್ರ ಇವರು ತೀರಿಕೊಂಡ ನಂತರ ನಾನು ಅನುಕಂಪದ ಆಧಾರದ ಮೇಲೆ ಕೆ.ಎಸ್.ಆರ್.ಟಿ.ಸಿ. ಯಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನನ್ನ ಮದುವೆಯಾಗಿ ಒಂದು ರ‍್ಷದಲ್ಲಿಯೇ ನನ್ನ ಗಂಡ ತೀರಿಕೊಂಡಿರುತ್ತಾನೆ. ನನಗೆ ಆಶಾದೇವಿ ಅಂತ ಒಬ್ಬಳೆ ಮಗಳಿರುತ್ತಾಳೆ. ಅವಳಿಗೆ ಹುಟ್ಟಿದ ೨ ವರ್ಷಗಳಲ್ಲಿಯೇ ಪೊಲೀಯೋ ಆಗಿರುತ್ತದೆ. ನನ್ನ ಮಗಳಿಗೆ ಕಳೆದ ೧೫ ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಅವಳಿಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ ನಂತರ ಅವಳ ಗಂಡ ಅವಳಿಗೆ ಬಿಟ್ಟು ಹೋಗಿರುತ್ತಾನೆ. ಅಂದಿನಿಂದ  ನಾನು ನನ್ನ ಮಗಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಎಲ್ಲರೂ ಒಟ್ಟಾಗಿ ಇರುತ್ತೇವೆ.  ಹೀಗಿದ್ದು ದಿನಾಂಕ:೨೧.೦೨.೨೦೨೨ ರಂದು ನಾನು ಮತ್ತು ನನ್ನ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ಎಲ್ಲರೂ ಕೂಡಿಕೊಂಡು ಸಗರ ಯಲ್ಲಮ್ಮ ದೇವಿಯ ಜಾತ್ರೆಗೆ ಹೋಗಿರುತ್ತೇವೆ. ಜಾತ್ರೆ ಮುಗಿಸಿಕೊಂಡು ನಿನ್ನೆ ದಿನಾಂಕ:೨೩.೦೨.೨೦೨೨ ರಂದು ಮದ್ಯಾನ್ಹ ೦೩:೩೦ ಗಂಟೆ ಸುಮಾರಿಗೆ ಎಲ್ಲರೂ ಕೂಡಿಕೊಂಡು ಮರಳಿ ಮನೆಗೆ ಬಂದು ನೋಡಿದಾಗ ನಮ್ಮ ಮನೆಯ ಬೀಗ ಮುರಿದು ಕೆಳಗೆ ಬಿದ್ದಿದ್ದು ಇರುತ್ತದೆ. ನಾನು ಮತ್ತು ನನ್ನ ಮಗಳು ಇಬ್ಬರೂ ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ಬೆಡರೂಮನಲ್ಲಿ ಇದ್ದ  ಅಲ್ಮಾರಿಯ ಬಾಗಿಲು ತೆರೆದಿದ್ದು ಅಲ್ಮಾರಿಯ ಲಾಕರನಲ್ಲಿ ಇಟ್ಟಿದ್ದ ನಗದು ಹಣ ರೂ. ೧,೦೦,೦೦೦/- ಮತ್ತು ಬಂಗಾರದ ಆಭರಣಗಳಾದ ೧) ೪೦ ಗ್ರಾಂ ಬಂಗಾರದ ಚೈನ್ ಅ.ಕಿ. ೧,೩೦,೦೦೦/-  ೨) ೧೫ ಗ್ರಾಂ ಬಂಗಾರದ ಲಾಕೇಟ್ ಅ.ಕಿ. ೫೦,೦೦೦/-  ೩) ೮ ಗ್ರಾಂ ಕಿವಿ ಹೂಗಳು ಅ.ಕಿ. ೨೫,೦೦೦/-    ೪) ೫ಗ್ರಾಂ ನ ತಲಾ ೨ ಲಾಕೇಟಗಳು ಒಟ್ಟು ೧೦ ಗ್ರಾಂ ಅ.ಕಿ. ೩೦,೦೦೦/-   ೫)  ೫ ಗ್ರಾಂ ಬಂಗಾರದ ಮಾಟಿ ಅ.ಕಿ. ೨೦,೦೦೦/-   ೬)  ತಲಾ ೩ ಗ್ರಾಂ ನ ೨ ಜೊತೆ ಕಿವಿ ಹೂಗಳು ಒಟ್ಟು  ೬ ಗ್ರಾಂ ಅ.ಕಿ. ೨೦,೦೦೦/-   ೭) ೫ ಗ್ರಾಂ ಕಿವಿ ಝುಮಕಿ ಅ.ಕಿ. ೨೦,೦೦೦/-   ೮)  ೩ ಗ್ರಾಂ ನ  ಒಂದು ಉಂಗುರ  ಅ.ಕಿ. ೧೦,೦೦೦/-   ಹೀಗೆ ಒಟ್ಟು  ೯೨ ಗ್ರಾಂ ನ ಬಂಗಾರದ  ಆಭರಣಗಳು ಒಟ್ಟು ಅ.ಕಿ. ೩,೦೫,೦೦೦/-  ಮತ್ತು ನಗದು ಹಣ ರೂ ೧,೦೦,೦೦೦/-   ಹೀಗೆ ಎಲ್ಲಾ  ಸೇರಿ  ಒಟ್ಟು ೪,೦೫,೦೦೦/- ಬಂಗಾರ ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು  ಇರುತ್ತದೆ.  ಕಾರಣ ದಿನಾಂಕ:೨೧.೦೨.೨೦೨೨ ರ ೦೫:೦೦ ಪಿ.ಎಂ. ದಿಂದ ದಿನಾಂಕ:೨೩.೦೨.೨೦೨೨ ರ ೦೩:೩೦ ಪಿ.ಎಂ. ಅವಧಿಯಲ್ಲಿ ನಮ್ಮ ಮನೆಯ  ಬೀಗ  ಮುರಿದು  ಬಾಗಿಲು ತೆಗೆದು ಒಳಗೆ ಪ್ರವೇಶಮಾಡಿ ನಗದು ಹಣ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ವಸ್ತುಗಳನ್ನು  ನಮಗೆ  ದೊರಕಿಸಿ ಕೊಡಲು ವಿನಂತಿ  ಅಂತ  ವಗೈರೆಯಾಗಿ ಇದ್ದ  ಅರ್ಜಿ  ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

   ಚೌಕ ಪೊಲೀಸ್ ಠಾಣೆ:-  ದಿನಾಂಕ: 24-02-2022 ರಂದು ೦೨.೦೦ ಪಿ.ಎಂ ಕ್ಕೆ ಫರ‍್ಯಾದಿದಾರರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದೇನೆಂದರೆ, ನಾನು ರುದ್ರಗೌಡ ತಂದೆ ಮಲ್ಲಿಕರ‍್ಜುನ ಬಿರಾದರ ವ:೨೮ ವರ್ಷ ಉ:ಪಲ್ಲವಿ ಹೋಟೆಲ್ನಲ್ಲಿ ಮ್ಯಾನೇಜರ ಜ್ಯಾ:ಲಿಂಗಾಯತ ಸಾ:ಮನೆ.ನಂ.ಟಿ-8-1543/17/4 ಭವಾನಿ ನಗರ ಕಾಕಡೆ ಚೌಕ ಹತ್ತಿರ ಕಲಬುರಗಿ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ಪಲ್ಲವಿ ಹೋಟೆಲ್ನಲ್ಲಿ ಮ್ಯಾನೇಜರ ಅಂತ ಕೆಲಸ ಮಾಡುತ್ತಿದ್ದುದ್ದರಿಂದ, ಹೋಟೆಲಕ್ಕೆ ಹೋಗಿ ಬರಲು ಮತ್ತು ಇತರೆ  ನನ್ನ ಸ್ವಂತ ಕೆಲಸಕ್ಕಾಗಿ ನನ್ನ  ಹೆಸರಿನಲ್ಲಿ ಹಿರೋ ಹೊಂಡಾ ಸ್ಪ್ಲೇಂಡರ ಪ್ಲಸ್  ಮೋಟಾರ ಸೈಕಲ್ ನಂ. KA 32 EP 7957 ನೇದ್ದನ್ನು ಖರೀದಿಸಿದನ್ನು ನಾನೇ ಉಪಯೋಗಿಸಿಕೊಂಡು ಬಂದಿದ್ದು ಇರುತ್ತದೆ.  ಹೀಗಿದ್ದು , ದಿನಾಂಕ:೦೯.೦೬.೨೦೨೧ ರಂದು ಸಾಯಂಕಾಲ ೦೬.೦೦ ಗಂಟೆಗೆ ಹೋಟೆಲ್ ಕೆಲಸಕ್ಕೆ  ಹೋಗಿ ಕೆಸಲ ಮುಗಿಸಿಕೊಂಡು ಮರಳಿ ದಿನಾಂಕ:೧೦.೦೬.೨೦೨೧ ರಂದು ರಾತ್ರಿ  ೧೨.೧೫ ಎಎಂ ಕ್ಕೆ ಮನೆಗೆ ಬಂದು ನನ್ನ ಹಿರೋ ಹೊಂಡಾ ಸ್ಪ್ಲೇಂಡರ ಪ್ಲಸ್  ಮೋಟಾರ ಸೈಕಲ್ ನಂ. KA 32 EP 7957ನೇದ್ದನ್ನು ನನ್ನಮನೆಯ ಮುಂದೆ ನಿಲ್ಲಿಸಿ ಹ್ಯಾಂಡಲಾಕ್  ಮಾಡಿ ಮನೆಯಲ್ಲಿ ಮಲಗಿಕೊಂಡಿರುತ್ತೇನೆ. ಬೆಳಿಗ್ಗೆ ೦೭.೦೦ ಗಂಟೆಗೆ ಎದ್ದು  ಮನೆಯ ಹೊರಗಡೆ ಬಂದು ನೋಡಿದಾಗ ನಾನು ನಮ್ಮ ಮನೆಯ ಮುಂದೆ ನಿಲ್ಲಿಸಿದ  ನನ್ನ  ಮೋಟಾರ ಸೈಕಲ್ ಕಾಣಿಸದೆ ಇರುವುದರಿಂದ ಗಾಬರಿಗೊಂಡು ನಾನು ಮನೆಯ ಸುತ್ತಾ ಮುತ್ತಾ ಎಲ್ಲಾ ಕಡೆ ತಿರುಗಾಡಿ ನನ್ನ ಮೋಟಾರ ಸೈಕಲ್ ನೋಡಿದ್ದು ಎಲ್ಲಿಯೂ ಸಿಗದಿದೇ ಇರುವುದರಿಂದ  ಈ ವಿಷಯವನ್ನು ನಮ್ಮತಂದೆಯವರಾದ ಶ್ರೀ  ಮಲ್ಲಿಕಾರ್ಜುನ ಬಿರಾದರ ಮತ್ತು ನಮ್ಮ ಮನೆಯ ಪಕ್ಕದವರಾದ ಶ್ರೀ  ಶಿವು ತಂದೆ ನಾಗೇಂದ್ರಪ್ಪರ ರವರಗೆ ತಿಳಿಸಿದ್ದು, ನಂತರ ನಾವೇಲ್ಲರೂ  ಕೂಡಿಕೊಂಡು ಕಾಕಡೆ ಕ್ರಾಸ , ರಾಮನಗರ , ಆಳಂದ ಚೆಕ್ಕ ಪೋಸ್ಟ್ ಮತ್ತು ಇತರೆ ಖಾಲಿ ಜಾಗದಲ್ಲಿ ಹುಡಿಕಾಡಿದರೂ ಎಲ್ಲಿಯೂ ನನ್ನ ಮೋಟಾರ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮೋಟಾರ ಸೈಕಲ್ ಕಳ್ಳತನವಾದ ದಿವಸದಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೂ ಹುಡುಕಿ ಎಲ್ಲಿಯಾದರೂ ನನ್ನ ಕಳುವಾದ ಮೋಟಾರ  ಸೈಕಲ್  ಸಿಗಬಹುದು ಅಂತ ಪೊಲೀಸ   ಠಾಣೆಗೆ ಬಂದು  ದೂರು  ಕೊಟ್ಟಿರುವುದಿಲ್ಲ. ಇಂದು ಠಾಣೆಗೆ ಬಂದು ತಡವಾಗಿ ದೂರು ಕೊಟ್ಟಿದ್ದು ಇರುತ್ತದೆ.  ಸದರಿ ನನ್ನ ಕಳುವಾದ ಮೋಟಾರ ಸೈಕಲ್ನ ವಿವರ  ಈ ಕೆಳಗಿನಂತಿರುತ್ತದೆ.

ಮೋಟಾರ ಸೈಕಲ್ ವಿವರ          :  HERO HONDA SPLENDOR+BS-IV

ಮೋಟಾರ ಸೈಕಲ್ ನಂ             :   KA 32 EP 7957

ಮೋಟಾರ ಸೈಕಲ್ ಚೆಸ್ಸಿ ನಂ      :  MBLHAR083HHD19063

ಮೋಟಾರ ಸೈಕಲ್ ಇಂಜೀನ ನಂ  :  HA10AGHHDB5290

 ಮೋಟಾರ ಸೈಕಲ್ ಮಾದರಿ        : 2017

 ಮೋಟಾರ ಸೈಕಲ್ ಬಣ್ಣ          :  SILVER

ಮೋಟಾರ ಸೈಕಲ್ ಅ.ಕಿ            :  36,000/- ರೂ ಇರುತ್ತದೆ.

         ಈ ಬಗ್ಗೆ ಕಾನೂನು ಕ್ರಮ ಕೈಕೊಂಡು ಕಳುವಾದ ನನ್ನ ಮೋಟಾರ ಸೈಕಲ್ ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಅದೆ.ಅಂತ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

   ಚೌಕ ಪೊಲೀಸ್ ಠಾಣೆ:-     ದಿನಾಂಕ  24-02-2022 ರಂದು ರಾತ್ರಿ ೯-೩೦ ಗಂಟೆಗೆ ಶ್ರೀ  ಸುನೀಲಸಿಂಗ ತಂದೆ ಆನಂದಸಿಂಗ ಬಾಯಸ  ವ:೨೪ ವರ್ಷ ಉ: ಪಾನಿಪೂರಿ ವ್ಯಾಪರ ಜಾತಿ ರಜಪೂತ ಸಾ: ದೇವಿ ನಗರ ಕಲಬುರಗಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ಕಲಬುರಗಿ ನಗರ ಪ್ರಕಾಶ ಮಾಲ ಪಕ್ಕದಲ್ಲಿ  ಪರ‍್ಟ ರೋಡಿನ ಬದಿಯಲ್ಲಿ ನಾನು ಮತ್ತು ನನ್ನ ತಮ್ಮ ಶುಭಂ ಇಬ್ಬರು ಪಾನಿಪೂರಿ ಬಂಡಿ ಹಚ್ಚಿ ವ್ಯಾಪರ ಮಾಡಿಕೊಂಡು ಉಪಜೀವಿಸುತ್ತೇನೆ. ಇಂದು ದಿನಾಂಕ ೨೪/೦೨/೨೦೨೨ ರಂದು ರಾತ್ರಿ ೮-೦೦ ಗಂಟೆ ಸುಮಾರಿಗೆ ಪಾನಿಪೂರಿ ವ್ಯಾಪರ ಮಾಡುತ್ತಿದ್ದಾಗ ನಾಲ್ಕು ಜನರು ಕೂಡಿಕೊಂಡು ಬಜಾಜ ಡಿಸ್ಕವರಿ ಮೋಟಾರ ಸೈಕಲ ಕೆಎ ೩೨ ಹೆಚಎಫ ೦೨೧೩ ಮೇಲೆ ಕುಳಿತುಕೊಂಡು ಬಂದು ನನ್ನ ಪಾನಿಪೂರಿ ಬಂಡಿ ಹತ್ತಿರ ಬಂದು ನಾಲ್ಕು ಜನರು ದಹಿಪೂರಿ ಮತ್ತು ಪಾನಿಪೂರಿ ತಿಂದ ನಂತರ ಅವರಿಗೆ  ೮೦ ರೂ. ಬಿಲ್ಲು ಆಗಿದೆ ಎಂದು ಹೇಳಿದಾಗ ಅವರಲ್ಲಿ ಒಬ್ಬನು ಹೆಸರು ಕೇಳಿ ಗೊತ್ತಾದ ಸೈಯ್ಯದ ಅಮಜದ ತಂದೆ ಸೈಯ್ಯದ ನಿಜಾಮ ಇತನು ನನಗೆ ಕೈಸಾ ೮೦ ರೂ. ಹೋತಾ ಚಿನಾಲಕೇ, ರಾಂಡಕೇ ಬೈಯ್ಯುತ್ತಿದ್ದಾಗ ಅವನಿಗೆ ಮತ್ತು ಅವನಿಗೆ ಜೊತೆಗೆ ಬಂದ ಹೆಸರು ಕೇಳಿ ಗೊತ್ತಾದ ಸೈಯ್ಯದ ಫಿರೋಜ ತಂದೆ ಸೈಯ್ಯದ ನಿಜಾಮ ಮತ್ತು ಸುಲೇಮಾನ, ನಿಸಾರ ಇವರುಗಳು ಮತ್ತು ಸೈಯ್ಯದ ಅಮಜದ ಎಲ್ಲರೂ ಕೂಡಿಕೊಂಡು ನನಗೆ ಚಿನಾಲಕೇ, ರಾಂಡಕೇ  ಹರಮಾಕೇ ಖಾತೆಕಾ ಸಮಜೇ ಅನ್ನುತ್ತಾ ಸೈಯ್ಯದ ಅಮಜದ ಇತನು ಅಲ್ಲೇ ಬಿದ್ದ ಕಲ್ಲು ತೆಗೆದುಕೊಂಡು ನನ್ನ ತಲೆ ಹಿಂಭಾಗದಲ್ಲಿ ಹೊಡೆದು ಭಾರಿ ರಕ್ತಗಾಯಗೊಳಿಸಿದನು. ಅಲ್ಲೇ  ಇದ್ದ ನನ್ನ ತಮ್ಮ ಶುಭಂ ಇತನು ನೋಡಿ ಜಗಳಾ ಬಿಡಿಸಲು ಬಂದಾಗ ಸೈಯ್ಯದ ಫಿರೋಜ ಇತನು ಕೈ ಮುಷ್ಟಿ ಮಾಡಿ ನನ್ನ ತಮ್ಮನ ಎಡಗಣ್ಣಿಗೆ ಹೊಡೆದು ಗುಪ್ತಗಾಯಗೊಳಿಸಿದನು. ಸುಲೇಮಾನ ಮತ್ತು ನಿಸಾರ  ಇಬ್ಬರು ಕೈ ಮುಷ್ಟಿ ಮಾಡಿ ನನ್ನ ತಮ್ಮ ಬಾಯಿಯ ಮೇಲೆ ಹೊಡೆದು ಗುಪ್ತಗಾಯಗೊಳಿಸಿದರು. ಇದನ್ನು ನೋಡಿ ಅಕ್ಕಪಕ್ಕದಲ್ಲಿದ್ದ ಭಜಿ ಭಂಡಿಯ ನಿರ್ಮಲಾ ಶ್ಯಾಮರಾವ ಮತ್ತು ಅಕಾಶ ಜಮದಾರ ಇವರುಗಳು ನೋಡಿ ಜಗಳಾ ಬಿಡಿಸಿಕೊಂಡರು. ನಂತರ ನಾಲ್ಕು ಜನರು ನನಗೆ ಮತ್ತು ನನ್ನ ತಮ್ಮನಿಗೆ  ಭೋಸಡಿಕೇ ಹಮಾರ ನಾಮಕೋ ಆಯಿತೋ ಖಲಾಸ ಕರತೇ ಎಂದು ಜೀವ ಭಯ ಹಾಕಿದರು. ಆಗ ಅಲ್ಲಿ ನೆರೆದಿದ್ದ ಜನರು ಪೊಲೀಸರು ಬರುತ್ತಿದ್ದಾರೆ ಎಂಬ ವಿಷಯ ಕೇಳಿ ನಾಲ್ಕು ಜನರು  ತಾವು ತಂದಿದ್ದ ಬಜಾಜ ಡಿಸ್ಕವರಿ ಮೋಟಾರ ಸೈಕಲ ಕೆಎ 32 ಹೆಚಎಫ 0213 ನೇದ್ದು ಸ್ಥಳದಲ್ಲಿ ಬಿಟ್ಟು ಓಡಿ ಹೋದರು. ನಂತರ ನಾನು ಮತ್ತು ತಮ್ಮ ಶುಭಂ ಇಬ್ಬರು ಉಪಚಾರ ಕುರಿತು ಜಿಲ್ಲಾ ಸರಕಾರಿ ಅಸ್ಪತ್ರೆ ಕಲಬುರಗಿಗೆ ಹೋಗಿ ಉಪಚಾರ ಮಾಡಿಸಿಕೊಂಡು ಠಾಣೆಗೆ ಬಂದಿರುತ್ತೇವೆ. ಕಾರಣ ನನಗೆ ಹೊಡೆ ಬಡೆ ಮಾಡಿ ಅವಾಚ್ಯ ಬೈದು ಕಲ್ಲಿನಿಂದ ತಲೆ ಹಿಂದೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಜೀವ ಭಯ ಹಾಕಿದ ೧)ಸೈಯ್ಯದ ಅಮಜದ ತಂದೆ ಸೈಯ್ಯದ ನಿಜಾಮ ೨)ಸೈಯ್ಯ ಫಿರೋಜ ತಂದೆ ಸೈಯ್ಯದ ನಿಜಾಮ ೩) ಸುಲೇಮಾನ ೪)ನಿಸಾರ ಸಾ: ಎಲ್ಲರೂ ಖಿಲ್ಲಾ ಒಳಗಡೆ ಕಲಬುರಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 03-03-2022 12:05 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080