ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-23-01-2023  ರಂದು ಫಿರ್ಯಾದಿಯು ರಾಘೋಜಿ ಸ್ಕೂಲ್ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ಬೈಕಿನಲ್ಲಿ ಬಂದು ತನ್ನ ಕೈಯಲ್ಲಿದ್ದ ಮೊಬೈಲ್ ಅ.ಕಿ.10000 ರೂ  ಮತ್ತು ಕೈಯಲ್ಲಿನ ಬಂಗಾರದ ಉಂಗುರ ಅ.ಕಿ.25000 ರೂ ಮೌಲ್ಯದ  ವಸ್ತುಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 24-01-2023 ರಂದು ಮದ್ಯಾಹ್ನ 12-30 ಗಂಟೆಗೆ ಖಾಸಗಿ ಪಾಟೀಲ ಆಸ್ಪತ್ರೆಯ ಸಿಬ್ಬಂದಿಯವರು ರವರು ಠಾಣೆಗೆ ಪೋನ ಮಾಡಿ ತಾರಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀಮತಿ ತಾರಾ ಇವರನ್ನು ವಿಚಾರಿಸಲು ಅವರು ಕೊಟ್ಟ  ಹೇಳಿಕೆ ಸಾರಂಶವೆನೆಂದರೆ ದಿನಾಂಕ: 24-01-2023 ರಂದು ರಾತ್ರಿ ಅಂದಾಜು 8-45 ಗಂಟೆ ಸುಮಾರಿಗೆ ನಾನು ಊಟ ಮಾಡಿಕೊಂಡು ನಮ್ಮ ಸರ್ವೋದಯ ನಗರದ ನಮ್ಮ ಮನೆಯಿಂದ ಪಕ್ಕದ ರೋಡ ಪಕ್ಕದಲ್ಲಿ ವಾಕಿಂಗ ಮಾಡುತ್ತಾ ಇರುವಾಗ ಮೋಟಾರ ಸೈಕಲ ನಂಬರ ಕೆಎ-32/ಇಜೆ-5224 ನೇದ್ದರ ಸವಾರನು ಶಹಾಬಾದ ರಿಂಗ ರೋಡ ಮತ್ತು ಹಳೆ ಆರ.ಟಿ.ಓ ಕ್ರಾಸ ಮುಖ್ಯ ರಸ್ತೆ ಕಡೆಯಿಂದ ಸರ್ವೋದಯ ನಗರ ಕಡೆಗೆ ಹೋಗುವ ಕರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 24-01-2023 ರಂದು ಬೆಳಿಗ್ಗೆ 5-45 ಗಂಟೆಗೆ ಖಾಸಗಿ ಧನ್ವಂತರಿ ಆಸ್ಪತ್ರೆಯ ಸಿಬ್ಬಂದಿಯವರು ರವರು ಠಾಣೆಗೆ ಪೋನ ಮಾಡಿ ಲಕ್ಷ್ಮಿಬಾಯಿ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀಮತಿ ಲಕ್ಷ್ಮಿಬಾಯಿ ಇವರನ್ನು ವಿಚಾರಿಸಲು ಅವರು ಮಾತನಾಡಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರದ ಕಾರನ ಜೊತೆಯಲ್ಲಿದ್ದ ಅವರ ಮಗ ಶ್ರೀ ಅಂಬೀಶ ಇವರನ್ನು ವಿಚಾರಿಸಲು ಅವರು ಕೊಟ್ಟ  ಹೇಳಿಕೆ ಸಾರಂಶವೆನೆಂದರೆ ದಿನಾಂಕ: 23-01-2023 ರಂದು ಸಾಯಂಕಾಲ 6-40 ಗಂಟೆ ಸುಮಾರಿಗೆ ನನ್ನ ತಾಯಿ ಲಕ್ಷ್ಮಿಬಾಯಿ ಇವರು ನಮ್ಮೂರಿನ ಚಂದ್ರಕಾಂತ ಗುತ್ತೇದಾರ ಇವರ ಹೊಲದಲ್ಲಿ ಕೂಲಿ ಕೆಲಸ ಕುರಿತು ಮನೆಯಿಂದ ನಡೆದುಕೊಂಡು ಹೋಗಿ ಕೂಲಿ ಕೆಲಸ ಮಾಡಿ ಚಂದ್ರಕಾಂತ ಗುತ್ತೇದಾರ ಇವರ ಹೊಲದ ಕಡೆಯಿಂದ ಊರ ಕಡೆಗೆ ಹೋಗುವ ಕುರಿತು ಬಂದು ನಡೆದುಕೊಂಡು ರಸ್ತೆ ದಾಟುತ್ತೀರುವಾಗ ಮೋಟಾರ ಸೈಕಲ ನಂಬರ ಕೆಎ-32/ಇಜೆ-2373 ನೇದ್ದರ ಸವಾರನು ಜೇವರ್ಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತೀರುವ ನನ್ನ ತಾಯಿ ಲಕ್ಷ್ಮಿಬಾಯಿ ಇವರಿಗೆ ಡಿಕ್ಕಿಪಡಿಸಿ ಅಪಘತ ಮಾಡಿ ಅವಳಿಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 24/01/2023 ರಂದು ಸಾಯಂಕಾಲ 6.30 ಗಂಟೆಗೆ ಶ್ರೀ. ಕಿರಣ ತಂದೆ ಹಣಮಂತ ಸಾ: ಮುಗುಳನಾಗಾಂವ ತಾ: ಚಿತ್ತಾಪೂರ ಜಿ:ಕಲಬುರಗಿ ಇವರು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ, ನಮ್ಮ ತಂದೆ-ತಾಯಿಯವರ ಶಹಾಬಾದರೋಡ ಇಟ್ಟಂಗಿ ಭಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ನಮ್ಮ ತಂದೆ-ತಾಯಿವರಿಗೆ ಭೇಟಿಯಾಗಲು ಗ್ರಾಮದಿಂದ ಕಲಬುರಗಿ ನಗರಕ್ಕೆ ಬಂದಿದು ದಿನಾಂಕ 22-01-2023 ರಂದು ಸಾಯಂಕಾಲ 5-15 ಗಂಟೆಗೆ ಶಹಾಬಾದ ರೋಡ ಗೌಡತಿ ಹೋಟಲ್ ಹಿಂದುಗಡೆ ಕಾರ್ನರ್ ಹತ್ತಿರ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ರಸ್ತೆ ಬದಿಯಲ್ಲಿ ಹೋಗುವಾಗ ಅತಿವೇಗ ಹಾಗೂ ಅಲಕ್ಷತನದಿಂದ ನನ್ನ ಹಿಂದೆ ಬಂದಿರುವ 4-ಮೀಲರ್ ಕಾರ ವಾಹನ ಸಂಖ್ಯೆ ಕೆಎ32 ಪಿ -1418 ರ ವಾಹನವು ನನಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು , ಈ ಅಪಘಾತದಲ್ಲಿ ನನ್ನ ಟೊಂಕಿಗೆ ಬಲವಾದ ಹೊಡೆತ ಬಿದ್ದಿದ್ದು, ಟೊಂಕ ಉಬ್ಬಿಕೊಂಡಿದ್ದು ಮತ್ತು ತಲೆಗೆ ರಕ್ತಗಾಯವಾಗಿದ್ದು. ನಂತರ ಅದೆ ವಆಹನದ ಚಾಲಕನು ನನಗೆ ಖಾಸಗಿ ಮಣ್ಣೂರ ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿ ಹೋಗಿರುತ್ತಾನೆ.   ಆದಕಾರಣ ದಯಾ ಮಾಡಿ ಈವಿಷಯದ ಬಗ್ಗೆ ತನಿಖೆ ಮಾಡಿಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ದೊರಕಿಸಿಕೊಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತಾ ಇತ್ಯಾದಿ ಫಿರ್ಯಾದಿ ಹೇಳಿಕೆ ಸಾರಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ಶ್ರೀ.ಶಿವಶರಣ ತಂದೆ ಬಸಣ್ಣ ಕಂದಳ್ಳಿ ವಯಸ್ಸು ೪೧ ವರ್ಷ ಜಾ: ಮಾದಿಗ, ಉ; ಉಪನ್ಯಾಸಕರು, ಸಾ: ಮನೆ ನಂ, ೧-೯೭೪/ಎ ೯ ನೇ ಕ್ರಾಸ ತಾರಪೈಲ್ ಕಲಬುರಗಿ ನಗರ ಆಗಿದ್ದು. ನಾನು ಚಿಂಚೋಳಿ ಸರ್ಕಾರಿ ಪದವಿ ಕಾಲೇಜ್ನಲ್ಲಿ ಉಪನ್ಯಾಸಕನಾಗಿ  ಕೆಲಸ ಮಾಡಿಕೊಂಡಿರುತ್ತೇನೆ. ನಾನು ದಿನಾಂಕ:೦೪-೦೧-೨೦೨೩ ರಂದು ಬೆಳಿಗ್ಗೆ ೦೮-೩೦ ಗಂಟೆಯಲ್ಲಿ ರಾಮ ಮಂದಿರ ಹತ್ತಿರ ಇರುವ ಧನ್ವಂತ್ರಿ ಆಸ್ಪತ್ರೆಯ ಮುಂದೆ ಸರ್ವೀಸ್ ರಸ್ತೆಯಲ್ಲಿ ನನ್ನ HERO SPLENDOR PLUS REG NO KA-32EB-5941 - ದ್ವಿ ಚಕ್ರ ವಾಹನವನ್ನು ನಿಲ್ಲಿಸಿ, ನಾನು ಚಿಂಚೋಳಿಗೆ ಹೋಗಿರುತ್ತೇನೆ. ನಂತರ ಚಿಂಚೋಳಿಯಿಂದ ವಾಪಸ್ಸು ಸಂಜೆ ೦೬-೨೦ ಗಂಟೆಗೆ ಬಂದು ನೋಡಿದಾಗ ಸದರಿ ಸ್ಥಳದಲ್ಲಿ  ನಿಲ್ಲಿಸಿದ್ದ ನನ್ನ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ:24.01.2023 ರಂದು ರಾತ್ರಿ 22.00 ಪಿಎಂಕ್ಕೆ ಶ್ರೀ ಅಮರೇಶ ತಂದೆ ಹಣಮಂತರಾಯ ಕಲ್ಮಮನಿ ವ:36 ವರ್ಷ ಉ:ಆಹಾರ ನಿರೀಕ್ಷಕರು ಅನೌಪಚಾರಿಕ ಪಡಿತರ ಪ್ರದೇಶ ವಾರ್ಡ ನಂ.5 ರಿಂದ 8 ಜಾ:ಲಿಂಗಾಯತ  ಸಾ: ಬಸವೇಶ್ವರ ಕಾಲೋನಿ ಕಲಬುರಗಿ ಹಾ:ವಾ: ಅನೌಪಚಾರಿಕ ಪಡಿತರ ಪ್ರದೇಶ ಮಿನಿ ವಿಧಾನಸೌಧ ಕಲಬುರಗಿ  ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿದ ಫಿರ್ಯಾದಿ  ಅರ್ಜಿ ಮತ್ತು ಜಪ್ತಿ ಪಂಚನಾಮೆಯನ್ನು ಹಾಜರು ಪಡಿಸಿರುವುದನ್ನು ಸ್ವಿಕರಿಸಿಕೊಂಡು ಸದರ ಫಿರ್ಯಾದಿ ಅರ್ಜಿಯ ಸಾರಾಂಶ ಈ ಕೆಳಗಿನಂತಿರುತ್ತದೆ .   ಈ ಮೂಲಕ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ ಇಂದು ದಿನಾಂಕ: 24.01.2023 ರಂದು ಸಂಜೆ  6.30 ಸಮಯಕ್ಕೆ ರಾಜು ಎಂಬುವವರಿಂದ, ಕಲಬುರಗಿ ನಗರ ನೆಹರು ಗಂಜ ಏರಿಯಾದಲ್ಲಿ ಇರುವ  ಆರ್ಯ ಸಮಾಜ ಇವರಿಗೆ ಸಂಬಂಧಿಸಿದ  ಹಸರಗುಂಡಗಿ ಟೈಯರ ಮತ್ತು ಅಟೋ ಮೋಬೈಲ್ಸ್ ಎಂಬ ಹೆಸರಿನ ಅಂಗಡಿಯಲ್ಲಿ ಸಾರ್ವಜನಿಕ ಪಡಿತರ ಅಕ್ಕಿ ಚೀಲಗಳು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದಾನೆ. ಎಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ಸಂಜೆ 7-30 ಗಂಟೆಗೆ ಚೌಕ ಪೊಲೀಸ ಠಾಣೆಗೆ ಬಂದು ಇಬ್ಬರು ಪಂಚರಾದ 1) ಶ್ರೀ ಮುಸಾ ಪಟೇಲ್ ತಂದೆ ಮಹ್ಮದ ಪಟೇಲ್ ವ;32 ವರ್ಷ  ಉ:ಖಾಸಗಿ ಕೆಲಸ ಜಾತಿ ಮುಸ್ಲಿಂ ಸಾ:ಖಾದ್ರಿ ಚೌಕ ಕಲಬುರಗಿ  2) ಶ್ರೀ ಭೀಮರಾವ ತಂದೆ ಶ್ರೀಮಂತ ಜಮಂಡಿ ವ:32 ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ;ಶಹಾಬಜಾರ ಕಲಬುರಗಿ ಇವರುಗಳನ್ನು ಬರಮಾಡಿಕೊಂಡು, ಚೌಕ ಪೊಲೀಸ ಠಾಣೆಯ ಶ್ರೀ ಬಾಬುರಾವ ಎ.ಎಸ್.ಐ. ಮತ್ತು ಸಿಪಿಸಿ 166 ಜಗನಾಥ ರವರೊಂದಿಗೆ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ನಮ್ಮ ನಮ್ಮ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ದಾಳಿ ಕುರಿತು ಚೌಕ ಠಾಣೆಯಿಂದ ರಾತ್ರಿ 8-00 ಗಂಟೆಗೆ ಹೊರಟು, ಬಾತ್ಮಿ ಸ್ಥಳವಾದ ಕಲಬುರಗಿ ನಗರ ನೆಹರು ಗಂಜ ಏರಿಯಾದಲ್ಲಿ ಇರುವ ಆರ್ಯ ಸಮಾಜ ಇವರಿಗೆ ಸಂಬಂಧಿಸಿದ  ಹಸರಗುಂಡಗಿ ಟೈಯರ ಮತ್ತು ಅಟೋಮೋಬೈಲ್ಸ್ ಎಂಬ ಹೆಸರಿನ ಅಂಗಡಿಗೆ ರಾತ್ರಿ 8-30 ಗಂಟೆಗೆ ತಲುಪಿ ಒಳಗೆ ನೋಡಲಾಗಿ ಅಂಗಡಿಯಲ್ಲಿ  ಒಬ್ಬನು ಹಾಜರಿದ್ದು,  ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಶರಣಬಸಪ್ಪ ತಂದೆ ರೇವಣಸಿದ್ಧಪ್ಪ ಶೆಳ್ಳಗಿ ವ:51 ವರ್ಷ ಉ: ಅಡತಿ ವ್ಯಾಪರ ಜಾತಿ ಲಿಂಗಾಯತ ಸಾ: ಚನ್ನವೀರ ನಗರ ಕಲಬುರಗಿ ಅಂತಾ ತಿಳಿಸಿದನು. ಅಂಗಡಿ ಮಾಲೀಕನ ಬಗ್ಗೆ ವಿಚಾರಿಸಲೂ ತಾನೇ ಅಂಗಡಿ ಮಾಲೀಕನೆಂದು ತಿಳಿಸಿದನು. ಸದರಿ ಅಂಗಡಿಯಲ್ಲಿದ್ದ 32 ಪ್ಲಾಸ್ಟಿಕ ಚೀಲಗಳಲ್ಲಿ ಅಕ್ಕಿ ತುಂಬಿದ್ದು, ಅವುಗಳನ್ನು ಪರಿಶೀಲಿಸಿ ನೋಡಲಾಗಿ ಸದರಿ ಚೀಲಗಳಲ್ಲಿ ಸರಕಾರದ ಇತರೇ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಸಾರ್ವಜನಿಕ ವಿತರಣೆಯಾಗುವ ಪಡಿತರ ಅಕ್ಕಿಗಳು ಇದ್ದು, ಅಂಗಡಿಯಲ್ಲಿ ಹಾಜರಿದ್ದ ಮಾಲೀಕ ಶರಣಬಸಪ್ಪ ಶೆಳ್ಳಗಿ ಇವರಿಗೆ ಅಕ್ಕಿಯ ದಾಖಲಾತಿ ಹಾಜರಪಡಿಸುವಂತೆ ಕೇಳಿದಾಗ ತನ್ನ ಹತ್ತಿರ ಯಾವುದೇ ದಾಖಲಾತಿ ಇರುವುದಿಲ್ಲಾ ಎಂದು ತಿಳಿಸಿದನು. ತದನಂತರ ನಾನು, ಸದರ  32 ಅಕ್ಕಿ ಚೀಲಗಳು ಅಂದಾಜ 40 ಕೆ.ಜಿ. ತೂಕವುಳ್ಳದ್ದು ಒಟ್ಟು  12 ಕ್ವಿಂಟಾಲ್ 80 ಕೆ.ಜಿ. ಅ:ಕಿ: 32,000/- ರೂ. ಆಗುತ್ತಿದ್ದು, ಸದರಿ ಅಕ್ಕಿ ಚೀಲಗಳನ್ನು ನಾನು, ಕೇಸಿನ ಪುರಾವೆಗೋಸ್ಕರ  ಪಂಚರ ಸಮಕ್ಷಮದಲ್ಲಿ ನನ್ನ ತಾಬಾಕ್ಕೆ ತೆಗೆದುಕೊಂಡೆನು.  ಸದರ ಈ ಮೇಲ್ಕಂಡ ಜಪ್ತಿ ಪಡಿಸಿಕೊಂಡ ಅಕ್ಕಿ  ಚೀಲಗಳನ್ನು ವಾಹನ ಸಂಖ್ಯೆ ಕೆಎ 32 ಬಿ 6966 ನೇದ್ದರಲ್ಲಿ ಟಾಟಾ ಎಸಿಇ ವಾಹನ ಚಾಲಕ ಶ್ರೀ ಜಗನಾಥ ತಂದೆ ಬಾಬುರಾವ ಬಕ್ಕನ ಸಾ:ಕಮಲ ನಗರ ಕಲಬುರಗಿ ಇತನ ಕಡೆಯಿಂದ ಜಪ್ತಿ ಪಡಿಸಿಕೊಂಡ ಅಕ್ಕಿ ಚೀಲಗಳು ಸುರಕ್ಷತಾ ಹಿತದೃಷ್ಟಿಯಿಂದ ಹಾಗೂ ಹಾಳಾಗಿ ಅನುಪಯುಕ್ತವಾಗುವ ಉದ್ದೇಶದಿಂದ ಕಲಬುರಗಿ ಪಡಿತರ ಪ್ರದೇಶದ ಕೆ.ಎಫ.ಸಿ.ಎಸ.ಸಿ ಗೋದಾಮಿನಲ್ಲಿ ಅನಲೋಡ ಮಾಡಲಾಯಿತು. ಈ ಹಿನ್ನಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಹಾಗೂ ಸರ್ಕಾರದ ಇತರೆ ಯೋಜನೆಗಳಿಗೆ ಬಿಡುಗಡೆಯಾದ ಪಡಿತರ ಅಕ್ಕಿಯನ್ನು ಶರಣಬಸಪ್ಪ ತಂದೆ ರೇವಣಸಿದ್ಧಪ್ಪ ಶೆಳ್ಳಗಿ ವ:51 ವರ್ಷ ಉ: ಅಡತಿ ವ್ಯಾಪರ ಜಾತಿ ಲಿಂಗಾಯತ ಸಾ: ಚನ್ನವೀರ ನಗರ ಕಲಬುರಗಿ ಅಕ್ರಮವಾಗಿ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ದಾಸ್ತಾನಿಕರಿಸಿದ ಅಕ್ಕಿ ಚೀಲಗಳು ಪತ್ತೆಯಾದ ಹಿನ್ನಲೆಯಲ್ಲಿ ಇವರ ವಿರುದ್ದ ಪ್ರಕರಣ ದಾಖಲಿಸಲು ವಿನಂತಿಸುತ್ತೇನೆ.  ಈ ಕೂಡಾ ಜಪ್ತಿ ಪಂಚನಾಮೆ ಪ್ರತಿ ಲಗತ್ತಿಡಲಾಗಿದೆ ಅಂತಾ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ  24/01/2023 ರಂದು ರಾತ್ರಿ 10-00 ಗಂಟೆ ಜಿಲ್ಲಾ ಸರಕಾರಿ  ಆಸ್ಪತ್ರೆ ಕಲಬುರಗಿ ಓ.ಪಿ.ಸಿಬ್ಬಂದಿಯವರು  ಪೋನ ಮುಖಾಂತರ ತಾಜನಗರ ಮುಸ್ಲಿಂ ಸಂಘ ಕಲಬುರಗಿ ಹಲ್ಲೆ ಒಳಗಾದ ಶ್ರೀ ಮಹ್ಮದ ಸುಲೇಮಾನ  ಮತ್ತು ಶ್ರೀ ಮಹ್ಮದ ಗೌಸ ಸಾ;ತಾಜನಗರ ಮುಸ್ಲಿಂ ಸಂಘ ಕಲಬುರಗಿ ಇವರ ಎಂ.ಎಲ್.ಸಿ.ಸ್ವೀಕೃತವಾಗಿದೆ ಎಂದು ತಿಳಿಸಿದ ಮೇರೆಗೆ ಆಸ್ಪತ್ರೆಗೆ ರಾತ್ರಿ 10-30 ಗಂಟೆಗೆ ಭೇಟ್ಟಿ ಕೊಟ್ಟು ಗಾಯಾಳು ದಾರರಾದ ಶ್ರೀ ಮಹ್ಮದ ಸುಲೇಮಾನ ತಂದೆ ಮಹ್ಮದ ಮಸ್ತಾನಸಾಬ ನಿಚೇಘರ ಮತ್ತು ಶ್ರೀ ಮಹ್ಮದ ಗೌಸ ತಂದೆ ಮಹ್ಮದ ಮಸ್ತಾನಸಾಬ ನಿಚೇಘರ ಸಾ: ಇಬ್ಬರು ತಾಜನಗರ ಮುಸ್ಲಿಂ ಸಂಘ ಕಲಬುರಗಿ ಇವರಿಗೆ ವಿಚಾರಣೆ ಮಾಡಿ ಅವರಲ್ಲಿ ಶ್ರೀ ಮಹ್ಮದ ಸುಲೇಮಾನ ತಂದೆ ಮಹ್ಮದ ಮಸ್ತಾನಸಾಬ ನಿಚೇಘರ ವ:32 ವರ್ಷ  ಉ:ಪೇಂಟರ ಕೆಲಸ ಜಾತಿ ಮುಸ್ಲಿಂ ಸಾ: ನಾಗೂರ (ಬಿ) ಗ್ರಾಮ ತಾ;ಜಿ: ಕಲಬುರಗಿ ಇವರ ಹೇಳಿಕೆ ಫಿರ್ಯಾದಿ ಬರೆಯಿಸಿದ್ದರ ಸಾರಾಂಶವೆನೆಂದೆರೆ, ನನ್ನ ತಮ್ಮ ಗುಡುಸಾಬ  ಇತನ ಮೋಬಾಯಿಲ್ ಹೋದ ಶನಿವಾರ ಕಳೆದು ಹೋಗಿದ್ದು,  ನನ್ನ ತಮ್ಮನ ಕಳೆದು ಹೋದ  ಮೋಬಾಯಿಲ್ ನಮ್ಮ ಓಣಿಯ ಮಹ್ಮದ ಅಸ್ಲಂ ತಂದೆ ಅಪ್ಸರಶೇಖ ಬಾಂಬೆವಾಲೇ ಇತನಿಗೆ ಸಿಕ್ಕಿರಬಹುದೆಂದು ಆತನಿಗೆ ಮೋಬಾಯಿಲ್ ಸಿಕ್ಕಿದ್ದರೆ ವಾಪಸ್ಸು ಕೊಡು ಅಂತಾ  ಹೇಳಿರುತ್ತಾನೆ,   ದಿನಾಂಕ  24/01/2023 ರಂದು ಬೆಳಗಿನ ಸಮಯದಲ್ಲಿ ಮಹ್ಮದ  ಅಸ್ಲಂ ಇತನು ನಮ್ಮ ಅಣ್ಣ ಮಹ್ಮದ ಗೌಸ  ಇತನ ಮನೆಗೆ ಹೋಗಿ ಮನೆಯಲ್ಲಿದ್ದ ನನ್ನ ಅಣ್ಣನ ಹೆಂಡತಿ ಯಾಸ್ಮೀನ ಮತ್ತು ತಮ್ಮ ಗುಡುಸಾಬ ಇಬ್ಬರಿಗೂ ಗುಡಸಾಬನಿಗೆ ನಿನ್ನ ಕಳೆದ ಮೋಬಾಯಿಲ ನಾನು ಕಳ್ಳತನ ಮಾಡಿದ್ದಾನೆ ಎಂದು ಯಾಕೇ ನನ್ನ ಮೇಲೆ ಸುಳ್ಳು ಆಪಾದನೆ ಮಾಡುತ್ತಿದ್ದೀ  ಎಂದು ಹೇಳಿ ತಕರಾರು ಮಾಡಿ ಹೋಗಿರುತ್ತಾನೆ. ಮಹ್ಮದ ಅಸ್ಲಂ ಇತನಿಗೆ ಯಾಕೇ ನಮ್ಮ ಮನೆತನಕ  ಬಂದು ತಕರಾರು ಮಾಡಿದ್ದಾನೆ ಹೋಗಿ ಅವನಿಗೆ  ಕೇಳು ನಾನು ಸ್ವಲ್ಪ ಸಮಯದಲ್ಲಿ ಬರುತ್ತೇನೆ  ಅಂತಾ ಪೋನ ಮಾಡಿದಾಗ ತಿಳಿಸಿದಾಗ ನಾನು ಕೆಲಸದಿಂದ  ಮಧ್ಯಾಹ್ನ 01-00 ಗಂಟೆ ಸುಮಾರಿಗೆ ನಮ್ಮ  ಅಣ್ಣನ ಮನೆಗೆ ಬಂದಾಗ ಮಹ್ಮದ  ಅಸ್ಲಂ ಇತನು  ನಮ್ಮ ಓಣಿಯ ಚಪ್ಪರ ಬಂದಿ ಕಟ್ಟೆ ಹತ್ತಿರವಿದ್ದ ವಿಷಯ ಗೊತ್ತಾಗಿ ಅಲ್ಲಿಗೆ ನಾನು ಹೋದಾಗ  ಅಲ್ಲಿ ಮಹ್ಮದ  ಅಸ್ಲಂ ಮತ್ತು ಅವನ ಜೊತೆಯಲ್ಲಿ 8-10 ಜನರು ಕುಳಿತಿದಿದ್ದರು, ಅಲ್ಲೇ ಹತ್ತಿರದಲ್ಲಿ ನಮ್ಮ  ಅಣ್ಣನ ಗೆಳೆಯರಾದ  ಸದ್ಧಾಂ ಹುಸೇನ, ಖದೀರ, ರುಕ್ಕಮೋದ್ದಿನ ಇವರು ಕೂಡಾ ಇದ್ದರು. ನಾನು ಮಹ್ಮದ ಅಸ್ಲಂ ಹತ್ತಿರ ಹೋದಾಗ ಮಹ್ಮದ ಅಸ್ಲಂ ಇತನು ನನಗೆ ನೋಡಿ  ರಾಂಡಕೇ ಚಿನಾಲಕೇ ಅಂತಾ ಬೈಯ್ಯುತ್ತಾ ತನ್ನ ಕೈಯಲ್ಲಿದ್ದ ಹಾಕಿ ಸ್ಟಿಕನಿಂದ ಎಡಹಣೆಯ ಮೇಲೆ, ಎಡಗೈ ಮೇಲೆ ಬೆನ್ನ  ಮೇಲೆ  ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿದನು.  ಈ ಜಗಳಾ ಇದ್ದ ಸದ್ಧಾಂ. ಖದೀರ, ರುಕ್ಕಮೋದ್ದಿನ ಬಿಡಿಸಲು ಬಂದಾಗ ಮಹ್ಮದ  ಅಸ್ಲಂ ಮತ್ತು ಅವನ ಗೆಳೆಯರು  ಬಿಡಿಸಲು ಬಂದು ಮೂರು ಜನರಿಗೆ ನೂಕಿಸಿಕೊಟ್ಟರು, ಮನೆಗೆ ಬಂದ ನನ್ನ  ಅಣ್ಣ ಮಹ್ಮದ ಗೌಸ ಇತನಿಗೆ ನನಗೆ ಹೊಡೆದ ಈ ವಿಷಯ ಗೊತ್ತಾಗಿ ಘಟನಾ ಸ್ಥಳಕ್ಕೆ ಬಂದು ನನಗೆ ಹೊಡೆಯುವುದನ್ನು ಬಿಡಿಸಲು ನಡುವೆ ಬಂದಾಗ ಮಹ್ಮದ ಅಸ್ಲಂ ಇತನು ತನ್ನ ಕೈಯಲ್ಲಿದ್ದ ಹಾಕಿ ಸ್ಟಿಕನಿಂದ ನನ್ನ ಅಣ್ಣ ಮಹ್ಮದ ಗೌಸ ಇತನ ಎಡತಲೆಯ ಮೇಲೆ ಎರಡು ಕಡೆ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿದನು.ಅವನ ಜೊತೆಗಿದ್ದ 8-10 ಜನರು ನನಗೆ ಮತ್ತು ಅಣ್ಣ ಮಹ್ಮದ ಗೌಸ ಇಬ್ಬರಿಗೂ ಕೈ ಮುಷ್ಟಿ ಮಾಡಿ ಮೈಮೇಲೆ  ಹೊಡೆ ಬಡಿ ಮಾಡಿದರು. ಅಲ್ಲಿದ್ದ ಖದೀರ, ಸದ್ದಾಂ ರುಕ್ಕಮೋದ್ದಿನ ಇವರುಗಳು ನಮಗೆ ಹೊಡೆಯುವುದನ್ನು ಬಿಡಿಸಿಕೊಂಡರು. ನಂತರ ಮಹ್ಮದ ಅಸ್ಲಂ ಇತನು ನಮ್ಮಿಬ್ಬರಿಗೆ  ನನ್ನ ಮೋಬಾಯಿಲ್ ಕಳ್ಳತನ ಮಾಡಿದ್ದೆನೆ ಎಂದು ಸುಳ್ಳು ಆಪಾದನೆ ಮಾಡಿದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ಜೀವ ಭಯ ಹಾಕಿ ಅಲ್ಲಿಂದ  ಹೊರಟು ಹೋದರು. ಮಹ್ಮದ ಅಸ್ಲಂನ ಜೊತೆಯಲ್ಲಿ 8-10 ಜನರಿಗೆ ಪುನ:ಹ ನೋಡಿದರೆ ಗುರುತಿಸುತ್ತೇನೆ. ಅವರುಗಳ ಹೆಸರು ವಿಳಾಸ ತಿಳಿದುಕೊಂಡು ನಂತರ ಬಂದು ತಮಗೆ ತಿಳಿಸುತ್ತೇನೆ. ತದನಂತರ ನಾನು ಮತ್ತು ಅಣ್ಣ ಮಹ್ಮದ ಗೌಸ  ಇಬ್ಬರು ಉಪಚಾರ ಕುರಿತು ಜಿಲ್ಲಾ ಸರಕಾರಿ ಅಸ್ಪತ್ರೆ ಕಲಬುರಗಿ ಸೇರಿಕೆಯಾಗಿರುತ್ತೇವೆ.  ಕಾರಣ ನನಗೆ ಮತ್ತು ಅಣ್ಣ ಮಹ್ಮದ ಗೌಸ ಇತನಿಗೆ  ಹಾಕಿ ಸ್ಟಿಕನಿಂದ ಮತ್ತು ಕೈಯಿಂದ ಕಾಲಿನಿಂದ ಮೈಮೇಲೆ ಹೊಡೆ ಬಡೆ ಮಾಡಿದ ಮಹ್ಮದ ಅಸ್ಲಂ ತಂದೆ ಅಪ್ಸರಶೇಖ ಬಾಂಬೆವಾಲೇ ಸಂಗಡ 8-10 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು  ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 26-01-2023 10:25 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080