ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ :-೨  ದಿನಾಂಕ ೨೨/೦೧/೨೦೨೨ ರಂದು ರಾತ್ರಿ ೦೯:೦೦ ಗಂಟೆಗೆ ಶ್ರೀ. ಸಿದ್ದರಾಜ ರೆಡ್ಡಿ ತಂದೆ ಸಿದ್ರಾಮ ರೆಡ್ಡಿ ಪರಶರೆಡ್ಡಿ ವಯಃ ೫೪ ವರ್ಷ ಉಃ ಒಕ್ಕಲುತನ ಸಾಃ ನಾಲವಾರ ಹಾ.ವಃ ಸಂಗಮೇಶ್ವರ ನಗರ ನಿಷ್ಟಿ ಆಸ್ಪತ್ರೆ ಹತ್ತೀರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದು ಸಾರಂಶವೆನೆಂದರೆ, ಇಂದು ದಿನಾಂಕ ೨೨/೦೧/೨೦೨೨ ರಂದು ನಾನು ಠಾಣೆಗೆ ಬಂದು, ದಿನಾಂಕ ೧೧/೦೧/೨೦೨೨ ರಂದು ನನ್ನ ಅಕ್ಕಳ ಮಗನಾದ ಅಳಿಯ ಸಿದ್ರಾಮ ರೆಡ್ಡಿ ತಂದೆ ಶಿವರೆಡ್ಡಿ ಈತನು ರಾತ್ರಿ ೯:೩೦ ಗಂಟೆ ಸುಮಾರಿಗೆ ಸೇಡಂ ರೋಡಿನ ಶ್ರೀನಿವಾಸ ಸರಡಗಿಯ ಕ್ರಾಸಿನ ಸಮೀಪ ಎರಪೊರ್ಟದ ಹತ್ತೀರ ಆತನು ನಡೆದುಕೊಂಡು ಹೋಗುವಾಗ ಮೋಟರ ಸೈಕಲ ನಂ. ಕೆಎ ೩೨ ಇ.ಎಮ್ ೨೮೭೧ ನೇದ್ದು ಅಪಘಾತ ಪಡಿಸಿದ್ದರಿಂದ ಆತನು ಭಾರಿಗಾಯಗೊಂಡು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ವಿಷಯದಲ್ಲಿ & ಮೋಟರ ಸೈಕಲ ಸವಾರನ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ವಿಚಾರಣೆ ನಂತರ ಬಂದು ಒಂದು ಲಿಖಿತ ರ‍್ಯಾ  ದಿಯನ್ನು ಸಲ್ಲಿಸಿರುತ್ತೆನೆ. ಅದರ ಮೇಲಿನಂದ ತಮ್ಮ ಠಾಣೆಯ ತಾರಾಸಿಂಗ ಎ.ಎಸ್.ಐ ರವರು ಗುನ್ನೆ ನಂ. ೧೭/೨೦೨೨ ಕಲಂ ೨೭೯, ೩೩೮ ಐಪಿಸಿ ಸಂ. ೧೮೭ ಐ.ಎಮ್.ವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಈಗ ಮುಂದುವರೆದು ಹೇಳುವುದೆನೆಂದರೆ, ನನ್ನ ಅಕ್ಕಳ ಮಗನಾದ ಸಿದ್ರಾಮರೆಡ್ಡಿ ತಂದೆ ಶಿವರೆಡ್ಡಿ ಈತನು ದಿನಾಂಕ ೧೧/೦೧/೨೦೨೨ ರಂದು ರಸ್ತೆ ಅಪಘಾತದಲ್ಲಿ ಆದ ಭಾರಿಗಾಯದ ಉಪಚಾರವನ್ನು ಕಲಬುರಗಿಯ ಯುನೈಟೆಡ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಇಂದು ದಿನಾಂಕ ೨೨/೦೧/೨೦೨೨ ರಂದು ಸಾಯಂಕಾಲ ೬:೪೫ ಗಂಟೆಗೆ ರಸ್ತೆ ಅಪಘಾತದಲ್ಲಿ ಆದ ಗಾಯವು ಗುಣಮುಖವಾಗದೆ ಮೃತ ಪಟ್ಟಿರುತ್ತಾನೆ. ಈ ವಿಷಯದಲ್ಲಿ ಮುಂದಿನ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 24-01-2022 01:01 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080