ಅಭಿಪ್ರಾಯ / ಸಲಹೆಗಳು

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ: 23.12.2022 ರಂಧು 08:20 ಗಂಟೆಗೆ ಶ್ರೀ ಪಿ. ರಂಗನಾಥ ಸಿ.ಎಸ್ ಕೇಂದ್ರ ಕಾರಾಗೃಹ ಕಲಬುರಗಿ ಇವರು ವಿಜಕುಮಾರ ಕುದರೆ ವಾರ್ಡರ್ ರವರಿಂದ ಕಳುಹಿಸಿದ ದೂರನ್ನು ಪಡೆದಿದ್ದು ದೂರಿನ ಸಾರಾಂಶವೆನೆಂದರೆ, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ದಾಖಲಾಗಿರುವ ವಿಚಾರಣಾ ಬಂದಿ ಸಂಖ್ಯೆ: 18781 ಭೀಮ ತಂದೆ ನಾರಾಯಣ ಹೊನ್ನಾರಿ ಈತನ ಸಂದರ್ಶನಕ್ಕಾಗಿ ಸದರಿ ಬಂದಿಯ ಪತ್ನಿ ರುಕ್ಮಿಣಿ, ಅತ್ತಿಗೆ ಸಿದ್ದಮ್ಮ ಮತ್ತು ಸಹೋದರ ಮೋಹನ ನಾರಾಯಣ ವನಾಲೆ ಇವರುಗಳ ಸಾ|| ದಕ್ತಿವಾಡಿ, ಉಸ್ಮಾನಾಬಾದ್, ಮಹಾರಾಷ್ಟ್ರ ವಿಳಾಸ ಸನಮೂದಿಸಿದ್ದು, ಇವರು ದಿನಾಂಕ: 23/12/2022 ರಂದು ಸಾಯಂಕಾಲ  4:00 ಗಂಟೆಗೆ ಬಂದಿಗೆ ಚಪಾತಿ ಆಹಾರ ಪದಾರ್ಥದಲ್ಲಿ ರೂ.2,000-00 ಗಳನ್ನು ಸಂದರ್ಶನ ಕೊಠಡಿಯ ಮೂಲಕ ಕಾರಾಗೃಹದ ಒಳಗೆ ಸಾಗಿಸಲು ಪ್ರಯತ್ನಿಸಿದಾಗ ಸಂರ್ದಶನ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಎಸ್.ಐ.ಎಸ್.ಎಫ್ ಭದ್ರತಾ ಸಿಬ್ಬಂದಿಗಳಾದ ಶ್ರೀ ವೆಂಕಟೇಶ್ ಹೆಚ್.ಸಿ- 371, ಶ್ರೀ ಹುಲಿಗೆಪ್ಪ ಪಿ.ಸಿ-942 ಶ್ರೀ ಈಶ್ವರಪ್ಪ ಪಿ.ಸಿ 802 ಹಾಗೂ ಮಹಿಳಾ ಪಿಸಿ 1638 ಶ್ರೀಮತಿ ರೆಹಾನಾ ಸುಲ್ತಾನ್ ಇವರುಗಳು ಸದರಿ ಬಂದಿಗೆ ತಂದಿರುವ ಆಹಾರ ಪದಾರ್ಥವನ್ನು ತಪಾಸಣೆ ಮಾಡುವ ಸಮಯದಲ್ಲಿ ಚಪಾತಿ ಆಹಾರದೊಳಗೆ ರೂ. 2,000-00 ಕಂಡು ಬಂದಿರುತ್ತದೆ. ಸದರಿ ಮೊತ್ತವನ್ನು ಕೆ.ಎಸ್.ಐ.ಎಸ್.ಎಫ್ ಭದ್ರತಾ ಸಿಬ್ಬಂದಿಗಳು ಮುಟ್ಟುಗೋಲು ಹಾಕಿಕೊಂಡು, ಸದರಿ ಬಂದಿಯ ಸಂಬಂಧಿಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರಕ್ಷಕ ನಿರೀಕ್ಷಕರು, ಕೆ.ಎಸ್.ಐ.ಎಸ್.ಎಫ್, ಕೇಂದ್ರ ಕಾರಾಗೃಹ ಕಲಬುರಗಿರವರು ಉಲ್ಲೇಖಿತ ಪತ್ರದಲ್ಲಿ ವರದಿಯನ್ನು ಈ ಕಛೇರಿಗೆ ಸಲ್ಲಿಸಲಾಗಿರುತ್ತದೆ. ಮುಂದುವರೆದು ವಿಚಾರಣಾ ಬಂದಿ ಸಂಖ್ಯೆ: 18781 ಭೀಮ ತಂದೆ ನಾರಾಯಣ ಹೊನ್ನಾರಿ ಈತನ ಸಂದರ್ಶನಕ್ಕಾಗಿ ಸದರಿ ಬಂದಿಯ ಪತ್ನಿ ರುಕ್ಮಿಣಿ, ಅತ್ತಿಗೆ ಸಿದ್ದಮ್ಮ ಮತ್ತು ಸಹೋದರ ಮೋಹನ ನಾರಾಯಣ ವನಾಲೆ ಇವರುಗಳು ಚಪಾತಿಯೋಗೆ ರೂ. 2,000-00 ಗಳನ್ನು ಹುದಿಗಿಸಿಟ್ಟು ಸಂದರ್ಶನ ಕೊಠಡಿಯ ಮೂಲಕ ಕಾರಾಗೃಹದ ಒಳಗೆ ಸಾಗಿಸಲು ಪ್ರಯತ್ನಿಸಿದ್ದು, ಇವರುಗಳ ವಿರುದ್ಧ ಕರ್ನಾಟಕ ಕಾರಾಗೃಹ ಮತ್ತು ಸುಧಾಣಾ ಸೇವೆ ಕೈಪಿಡಿ 2021 ರ ನಿಯಮ 25 (ತ) ರ ಪ್ರಕಾರ ಹಣ, ನಿಷೇಧಿತ ವಸ್ತುಗಳು ಎಂಬುದಾಗಿ ಘೋಷಿಸಿರುವುದರಿಂದ ಸದರಿ ನಿಷೇಧಿತ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದು  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 21/12/2022 ರಂದು ಫಿರ್ಯಾದಿ ತನ್ನ ಮೋಟಾರ ಸೈಕಲ ನಂ KA-32 Y-6892 ನೇದ್ದರ ಮೇಲೆ ಖಾಸಗಿ ಕೆಲಸ ನಿಮಿತ್ಯ ಕಲಬುರಗಿಗೆ ಬಂದು ಕೆಲಸ  ಮುಗಿಸಿಕೊಂಡು ಸಾಯಂಕಾಲ 7:00 ಗಂಟೆ ಸುಮಾರಿಗೆ ತಾವರಗೇರಾ ಕ್ರಾಸ್ ಹತ್ತಿರ ಬರುತ್ತಿರುವಾಗ ಹುಮನಾಬಾದ ರಸ್ತೆ ಕಡೆಯಿಂದ ಒಂದು ಮೋಟಾರ ಸೈಕಲ ನಂ KA-32 L-7783 ನೇದ್ದರ ಸವಾರನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾಧಿ ಬಸವರಾಜ ಇವರ ಮೋಟಾರ ಸೈಕಲಗೆ ಅಪಘಾತ ಪಡಿಸಿದರಿಂದ ಭಾರಿಗಾಯವಾಗಿ ಫಿರ್ಯಾಧಿಯ ಬಲಗಾಲು ಮತ್ತು ಬಲಗೈ ಮುರಿದಿದ್ದು ಘಟನೆಯನ್ನು ಶಿವುಕುಮಾರ ಪಾಟೀಲ ಮತ್ತು ಶ್ರೀಧರ ವರು ನೀಡಿದ್ದು ಅಪಘಾತ ಪಡಿಸಿದವನ ಹೆಸರು ಪ್ರಭುಲಿಂಗ ತಂದೆ ವೀಭದ್ರಪ್ಪಾ ಸಾ; ಕಡಣಿ ಅಂತಾ ಗೋತ್ತಾಗಿರುತ್ತದೆ. ಮುಂದೆ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಮನೆಯವರೊಂದಿಗೆ ವಿಚಾರ ಮಾಡಿ ದೂರು ನೀಡಲು ತಡವಾಗಿರುತ್ತದೆ, ಮೋಟಾರ ಸೈಕಲ ನಂ KA-32 L-7783 ನೇದ್ದರ ಸವಾರ ಪ್ರಭುಲಿಂಗ ತಂದೆ ವೀಭದ್ರಪ್ಪಾ ಈತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಫಿರ್ಯಾಧಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ. ನಗರ ಪೊಲೀಸ್‌ ಠಾಣೆ :- ದಿನಾಂಕ: 22/12/2022 ರಂದು ಸಾಯಂಕಾಲ ೦೬ ಪಿ.ಎಮ್ ಕ್ಕೆ ಯೂನಿಯನ್ ಬ್ಯಾಂಕ್‌ನವರು ವಸಪಡಿಸಿಕೊಂಡ ಆಸ್ತಿಯಾದ ಬಿ.ಹೆಚ್.ಆರ್ ಬಿಲ್ಡರ್‌ & ಡೆವಲರ‍್ಸ್ನವರ ಎನ್.ಜಿ.ಓ ಕಾಲೋನಿಯಲ್ಲಿರುವ ಪ್ಲಾಟ್ ನಂ. 25 ಕ್ಕೆ ಬೆಂಕಿ ಹತ್ತಿದ್ದರಿಂದ ಅಂದಾಜು 50,000/- ರೂ ಮೌಲ್ಯದ ಬಾಗಿಲು ಮತ್ತು ಕಿಟಕಿಗಳು ಸುಟ್ಟು ಬೂದಿಯಾಗಿರುತ್ತವೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 23/12/2022 ರಂದು ಫಿರ್ಯಾಧಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾಧಿಯೇನೆಂದರೆ ಹತಗುಂದ ಭಾಗ್ಯವಂತಿ ದೇವಸ್ಥಾನದ ಹತ್ತಿರ ಕೆಲಸ ಮಾಡಿಕೊಂಡು ಅಲ್ಲಿಯೇ ಮಲಗುತ್ತಿದ್ದು ದಿನಾಂಕ: 03/11/2022 ರಂದು ನಾವು ಎಂದಿನಂತೆ ಊಟ ಮಾಡಿ ರಾತ್ರಿ 11.೦೦ ಮಲಗಿದ್ದು 04/11/2022 ರಂದು ಬೆಳಿಗ್ಗೆ 4.30 ಕ್ಕೆ ಎದ್ದು ನೋಡಲು ನಾವು ನಿಲ್ಲಿಸಿದ ಜಾಗದಲ್ಲಿ ನಮ್ಮ ಬೈಕ್ ನಂ ಎಮ್ 32 ಇಕೆ 8737 ಸ್ಪ್ಲೇಂಡರ್ ಬೈಕ್ ಇರಲಿಲ್ಲಾ ನಾವು ಎಲ್ಲಾ ಕಡೆ ಹುಡಕಾಡಿದರು ಅದು ನಮಗೆ ಎಲ್ಲಿಯೂ ಪತ್ತೆಯಾಗಿರುವುದಿಲ್ಲಾ ಸದರಿ ನಮ್ಮ ಬೈಕ್ ಅನ್ನು ಯಾರೋ ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 24-12-2022 02:32 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080