Feedback / Suggestions

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 23/11/2022 ರಂದು 09:00 AM ಕ್ಕೆ ಶ್ರೀ ಮಹೇಶ ತಂದೆ ಮಲ್ಲಿಕಾರ್ಜುನ ಕದರಗಿ ವ; 32 ವರ್ಷ ಜಾ; ಕಬ್ಬಲಿಗೇರ ಉ; ಕೂಲಿ ಕೆಲಸ ಸಾ; ಭಂಕೂರ ತಾ; ಶಹಾಬಾದ ಜಿ; ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಂಶವೆನೆಂದರೆ, ದಿನಾಂಕ-19/11/2022 ರಂದು ಬಾಂಬೆಯಿಂದ ನನ್ನ ಅತ್ತೆ ಗಂಗಾ ಹಾಗೂ ನನ್ನ ಹೆಂಡತ್ತಿಯ ಅಣ್ಣ ಹರೇಶ ತಂದೆ ರಾಜು ಕೋಳಿ ಇವರು ಮಗಳಿಗೆ ಮಾತನಾಡುವ ಕುರಿತು ಭಂಕೂರ ಗ್ರಾಮಕ್ಕೆ ಬಂದಿದ್ದು ಮರುದಿವಸ ರವಿವಾರ ದಿನಾಂಕ-20/11/2022 ರಂದು ನನ್ನ ಅತ್ತೆ ಗಂಗಾ ಮತ್ತು ಹರೇಶ ಕೋಳಿ ಇಬ್ಬರೂ ಕೂಡಿಕೊಂಡು ನನ್ನ ಹೆಸರಿನಿಂದ ಇರುವ ಮೋಟಾರ ಸೈಕಲ ನಂ ಕೆಎ-32 ಇ.ವಾಯ್-9582 ನೇದ್ದರ ಮೇಲೆ ತಮ್ಮ ಮನೆಯ ದೇವರಾದ ಕೋಳ್ಳುರ ಮದರಸಾಬ ದೇವರಿಗೆ ದರ್ಶನ ಮಾಡಿಕೊಂಡು ಬರುತ್ತೇವೆಂದು ಈ ಮೋಟಾರ ಸೈಕಲ ಮೇಲೆ ಮದ್ಯಾಹ್ನದ ಸುಮಾರಿಗೆ ಹೋದರು ರಾತ್ರಿ 8:30 ಗಂಟೆ ಸುಮಾರಿಗೆ ಮರಳಿ ಅವರಿಬ್ಬರೂ ಭಂಕೂರಿಗೆ ಬರುವಾಗ ಶಹಾಬಾದ ರೋಡಿನ ನೃಪತುಂಗ ಕಾಲೋನಿಯ ಕೇನ್ ಬ್ರೀಜ್ ಶಾಲೆಯ ಹತ್ತಿರ ಬರುವಾಗ ರೋಡಿನ ಹಬ್ಸಿನ ಮೇಲೆ ವೇಗದಲ್ಲಿರುವ ಮೋಟಾರ ಸೈಕಲಗೆ ಒಮ್ಮೆಲೆ ಹರೇಶ ಈತನು ಬ್ರೇಕ್ ಹಾಕಿದಕ್ಕೆ ಹಿಂದೆ ಕುಳಿತಿರುವ ಗಂಗಾ ಇವಳು ಹಾರಿ ಮುಖ ಕೆಳಗೆ ಮಾಡಿ ಬಿದಿದ್ದರಿಂದ ತೆಲೆಯ ಭಾಗಕ್ಕೆ, ಹಣೆಯ, ಹುಬ್ಬಿನ ಭಾಗಕ್ಕೆ, ಮೂಗಿಗೆ ಮತ್ತು ಬಾಯಿ ಹಲ್ಲಿಗೆ ಭಾರಿ ಪ್ರಮಾಣದ ಗಾಯವಾಗಿ ಬಿದಿದ್ದನು ಅಳಿಯ ಹರೀಶ ಮತ್ತು ರೋಡಿನಿಂದ ಹೋಗುವ ಶಾಂತು ತಂದೆ ರಾಮು ಕಲ್ಲೂರ ಇವರು ನನಗೆ ಪೋನ್ ಮಾಡಿದಾಗ ನಾನು ಮತ್ತು ನನ್ನ ಹೆಂಡತ್ತಿ ಪ್ರೀಯಾ ಇವಳೊಂದಿಗೆ ಬರುವಷ್ಟರಲ್ಲಿ ಶಾಂತು ಮತ್ತು ಹರೇಶ ಇಬ್ಬರೂ ಕೂಡಿಕೊಂಡು ಅತ್ತೆ ಇವಳನ್ನು ಯಾವುದೋ ಒಂದು ಕಾರಿನಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ನಾವು ಹೋಗಿ ನೋಡಲಾಗಿ ಅತ್ತೆ ಮಾತನಾಡುವ ಪರಸ್ಥತಿ ಇರಲಿಲ್ಲಾ  ಮುಂದೆ ಅಲ್ಲೆ ತುರ್ತಪರಸ್ಥತಿಯಲ್ಲಿ ಚಿಂತಾಜನಕ ಸ್ಥತಿಯಲ್ಲಿ ಉಪಚಾರ ಪಡೆಯುತ್ತಿರುವಾಗ ಪೊಲೀಸರು ವಿಚಾರಣೆಗೆ ಬಂದಿದ್ದು ಅವರಿಗೆ ಮೇಲಿನ ವಿಷಯ ತಿಳಿಸಿ ವಿಚಾರಣೆ ನಂತರ ಬರುವುದಾಗಿ ಹೇಳಿದ್ದು ಮುಂದೆ ಅತ್ತೆಯವರು ಅಲ್ಲೆ ಉಪಚಾರ ಪಡೆಯುತ್ತಿರುವಾಗ ನಿನ್ನೆ ದಿನಾಂಕ-22/11/2022 ರಂದು ರಾತ್ರಿ 08:30 ಗಂಟೆ ಸುಮಾರಿಗೆ ಗಾಯದ ಬಾದೆಯಿಂದ ಅತ್ತೆಯವರು ಮೃತ ಪಟ್ಟಿದ್ದು ಇರುತ್ತದೆ, ಕಾರಣ ಈ ವಿಷಯಕ್ಕೆ ಸಂಭಂದಪಟ್ಟಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.   

 

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 23-11-2022 ರಂದು ರಾತ್ರಿ ೧೦:೩೦ ಗಂಟೆ ಸುಮಾರಿಗೆ ಶ್ರೀಮತಿ ಮಹಾದೇವಿ ಗಂಡ ಬಸಯ್ಯ ಸಾಃ ಝಳಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಫರ‍್ಯಾದಿ ಸಲ್ಲಿಸಿದ್ದೆನೆಂದರೆ, ಇಂದು ದಿನಾಂಕ ೨೩/೧೧/೨೦೨೨ ರಂದು ಫರ‍್ಯಾದಿ ಮಗ ಮಹಾಂತಯ್ಯ ಹಾಗು ಗ್ರಾಮದ ಭೀಮಶಾ ತಂದೆ ಚಂದ್ರಾಮಪ್ಪಾ ಸಿರೂರ ಇಬ್ಬರು ಕೂಡಿಕೊಂಡು ಮೋಟರ ಸೈಕಲ ನಂ. ಎಮ್.ಹೆಚ್ ೧೧ ಬಿ.ವಾಯಿ ೦೫೬೮ ಇದರ ಮೇಲೆ ಊರಿನಿಂದ ಕಲಬುರಗಿಗೆ ಬರುವಾಗ ಮಧ್ಯಾಹ್ನ ೩:೦೦ ಗಂಟೆ ಸುಮಾರಿಗೆ ರಾಮತರ‍್ಥ ಕ್ರಾಸ್ ತಾಜ ಕಾಲೇಜದ ಹತ್ತೀರ ಹೋಗುತ್ತಿರುವಾಗ ಹಿಂದಿನಿಂದ ಮೋಟರ ಸೈಕಲ ನಂ. ಕೆಎ ೩೨ ಎಲ್ ೬೭೦೯ ಇದರ ಸವಾರನು ಮೋಟರ ಸೈಕಲಗೆ ಅಪಘಾತ ಪಡಿಸಿದ್ದರಿಂದ ಮೋಟರ ಸೈಕಲದ ಮೇಲಿಂದ ಬಿದ್ದ ಮಹಾಂತಯ್ಯ ಮತ್ತು ಭೀಮಶಾ ಇವರಿಗೆ ಗಾಯಗಳಾಗಿದ್ದು, ಮಹಾಂತಯ್ಯನು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುವಾಗ ಮೃತ ಪಟ್ಟಿರುತ್ತಾನೆ. ಈ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಕೊಟ್ಟ ಫರ‍್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 15-11-2022  ರಂದು ೫.೦೦ ಪಿ.ಎಮ್ ಗಂಟೆ ಸುಮಾರಿಗೆ ಸದರಿ ಆರೋಪಿತರು ಫಿರ್ಯಾದಿದಾರರ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಎದೆ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ಕೈ ಇಂದ ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ಮಾನ್ಯ ಪ್ರಿ.ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಫಿರ್ಯಾದಿ ಶ್ರೀ ಧರ್ಮರಾಯ ತಂದೆ ಹಣಮಂತಪ್ಪಾ ಮೂಲಗೆ ಸಾ:ಸರಡೊಣ ತಾ:ಕಮಲಾಪೂರ ಇವರು ಸಲ್ಲಿಸಿದ ಖಾಸಗಿ ದೂರು ಅರ್ಜಿ ಸಂ. 225/2021 ನೇದ್ದರ ಸಾರಾಂಶವೇನಂದರೆ, ಶಿರಡೋಣ ಗ್ರಾಮದ ಜಮೀನು ಸರ್ವೆ ನಂ:17/2 ವಿಸ್ರೀರ್ಣ 3 ಎಕರೆ 29 ಗುಂಟೆ ಹಾಗೂ 17/8 ವಿಸ್ತೀರ್ಣ  15 ಗುಂಟೆ ಇದು ಒಂದನೇ ಫಿರ್ಯಾದುದಾರರಾದ ಧರ್ಮರಾಯ ತಂದೆ ಹಣಮಂತಪ್ಪ ಇವರ ಮಾಲೀಕತ್ವದಲ್ಲಿ ಇರುತ್ತದೆ.ದಿನಾಂಕ: 31/12/2012 ರಂದು 2ನೇ ಫಿರ್ಯಾದುದಾರರಾದ ಶ್ರೀ ಧರ್ಮರಾಯ ತಂದೆ ಹಣಮಂತಪ್ಪ ಇವರು ಸದರಿ ಜಮೀನನ್ನು ವೀರಭದ್ರಪ್ಪ ತಂದೆ ನಾಗಪ್ಪ ಇವರಿಗೆ ರೂ.6,00,000/- ಗಳಿಗೆ ಮಾರಾಟ ಮಾಡಿರುತ್ತಾರೆ. ದಿನಾಂಕ:31/12/2012 ರಂದು ಸದರಿ ಜಮೀನು ವೀರಭದ್ರಪ್ಪ ಇವರ ಕಬ್ಜಾ ಕೊಟ್ಟಿರುತ್ತಾರೆ. ಈ ಬಗ್ಗೆ ಖರೀದಿ ಪತ್ರದಲ್ಲಿ ನಮೂದಿಸಲಾಗಿರುತ್ತದೆ.ಪ್ರಸ್ತುರ ಶ್ರೀ ಮಾಣಿಕಪ್ಪ ತಂದೆ ಪೀರಪ್ಪ ಕುರುಬರ ಇವರು ಸದರಿ ಜಮೀನನ್ನು 45 ಲಕ್ಷ ರೂಪಾಯಿಗಳಿಗೆ ವ್ಯವಹಾರ ಮಾಡಿಕೊಂಡಿರುತ್ತಾರೆ ಅದರಲ್ಲಿ ರೂ.6,00,000/- ಗಳನ್ನು ವೀರಭದ್ರಪ್ಪ ತಂದೆ ಹಣಮಂತಪ್ಪ ವರಿಗೆ ಕೊಡಬೇಕೆಂದು ವ್ಯವಹಾರದಲ್ಲಿ ತಿಳಿಸಲಾಗಿರುತ್ತದೆ. ಮಾಣಿಕಪ್ಪ ಇವರು ರೂ.6,00,00/- ಗಳನ್ನು  ವೀರಭದ್ರಪ್ಪ  ಇವರಿಗೆ  ಖರೀದಿ ಸಮಯದಲ್ಲಿ ಮರಳಿ ಕೊಡುತ್ತೇನೆ ಉಳಿದ ಹಣದಲ್ಲಿ ದಿನಾಂಕ:11/09/2013 ರಂದು ರೂ. 4,00,000/- 2.5% ಬಡ್ಡಿ ಸೇರಿಸಿ 16,00,000/- ಕೊಡಬೇಕಾಗುತ್ತದೆ ಎಂದು ತಿಳಿಸಿರುತ್ತಾನೆ, ಇದೂ ಅಲ್ಲದೇ ವೀರಭದ್ರಪ್ಪ ಇವರಿಗೆ ರೂ.6,00,000/- ಕೊಡುವುದು ಸೇರಿ ಉಳಿದ ಅಂದಾಜು 29,00,000/- ನೊಂದಣಿ ಸಮಯದಲ್ಲಿ ಕೊಡುವ ಕರಾರು ಇತ್ತು.ಸದರಿ 29,00,000/- ರೂಗಳಲ್ಲಿ ವೀರಭದ್ರಪ್ಪ ಇವರಿಗೆ ನಾವು ರೂ. 6,00,000/- ಮರಳಿ  ಕೊಡುವ ಮಾತುಕತೆಯಾಗಿತ್ತು, ಆದರೆ ಆರೋಪಿತರಾದ ಮಾಣಿಕಪ್ಪ ವರು ದಿನಾಂಕ:28/10/2020 ರಂದು ಸದರಿ ಜಮೀನನ್ನು ನೊಂದಣಿ ಮಾಡಿಸುವ ಸಮಯ್ಲಲ್ಲ ಸಾಕ್ಷಿದಾರರ ಸಮಕ್ಷಮ ರೂ 7,50,000/- ಗಳ ಚೆಕ್ ನೀಡಿ ಉಳಿದ ಹಣವನ್ನು ಹಮನಾಬಾದ ರಿಂಗ ರಸ್ತೆಯಲ್ಲಿರುವ ಸುರೇಶ ಫಲಾನಿಯವರ ಅಂಗಡಿಯಲ್ಲಿ ಹಣ ಎಣಿಸಿಕೊಡುತ್ತೇನೆ, ಸಬ್ ರೆಜಿಸ್ಟರ್ದಲ್ಲಿ ಗದ್ದಲ ಬಹಳ ರುತ್ತದೆ ಅಂತ ಹೇಳಿರುತ್ತಾನೆ. ಆರೋಪಿತನಾದ  ಮಾಣಿಕಪ್ಪ ಇವನ ಮಾತನ್ನು ನಂಬಿ ಫಿರ್ಯಾದುದಾರರು ಹಾಗೂ ಅವರ ಮಕ್ಕಳು ಎಲ್ಲರೂ ಸದರಿ ಖರೀದಿ ಪತ್ರಕ್ಕೆ ಸಹಿ ಮಾಡಿರುತ್ತಾರೆ. ಅಂದಾಜು 4.00 ಗಂಟೆ ನೊಂದಣಿ ಕೆಲಸ ಮುಗಿದಿರುತ್ತದೆ, ನಂತರ ಇಲ್ಲೇ ಹೋಗಿ ಬರುತ್ತೇನೆ ಎಂದು ಹೇಳಿ ಆರೋಪಿತನಾದ ಮಾಣಿಕಪ್ಪ  ಇವರು ಪೋನನ್ನು ಸ್ವಚ್ ಆಫ್ ಮಾಡಿರುತ್ತಾನೆ. ಸದರಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ರೂ.7,50,000/- ಚೆಕ್ ಬೌನ್ಸ ಗಿರುತ್ತದೆ. ಇದೂ ಅಲ್ಲದೇ ಪೋನಿನ ಮಕಲ ಮಾತಾಡಿದಾಗ ಬೇಕಂತಲೇ ಈ ರೀತಿ ಮೋಸ ಮಾಡಿರುವುದಾಗಿ ತಿಳಿಸಿರುತ್ತಾನೆ.ಮಾಣೀಕಪ್ಪ ಇವರು ಫಿರ್ಯಾದುದಾರರ ಕುಟುಂಬಕ್ಕೆ ಈ ರೀತಿ ಅಮೂಲ್ಯವಾದ ಆಸ್ತಿಯನ್ನು ಮೋಸ ವಂಚನೆಯಿಂದ ನೊಂದಣಿ ಮಾಡಿಸಿಕೊಂಡು ಹಣ ಮುಳುಗಿಸಿದ್ದು ಫಿರ್ಯಾದುದಾರರ ಕುಟುಂಬ ತಂಕದ ಸ್ಥಿತಿಯಲ್ಲಿದ್ದು 2ನೇ ಫಿರ್ಯಾದುದಾರರು ಧರ್ಮರಾಯ ಇವರು ಮಾನಸಿಕವಾಗಿ ಬಳಲಿ ಹೋಗಿದ್ದಾರೆ, ತುಂಬಾ ಗಾಬರಿಯಾಗಿದ್ದು ಯಾವುದೇ ಸಮಯದಲ್ಲಿ ಜೀವಕ್ಕೆ ಅಪಾಯ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಗ್ರಾಮದಲ್ಲಿ ಫಿರ್ಯಾದುದಾರರ ಕುಟುಂಬ ವರ್ಗವು ಖಾಸಗಿಯವರಲ್ಲಿ ಕೆಲವು ಸಾಲಗಳನ್ನು ಪಡೆದಿದ್ದು ನೀವು ಜಮೀನನ್ನು ಮಾರಾಟ ಮಾಡಿದ್ದೀರಿ ನಮ್ಮ ಹಣ ವಾಪಿಸ್ಸು ಕೊಡಿ ಎಂದು ತೊಂದರೆ ನೀಡುತ್ತಿದ್ದಾರೆ, ವೀರಭದ್ರಪ್ಪ ಕೂಡ ಫಿರ್ಯಾದುದಾರರೊಂದಿಗೆ ಜೊತೆ ತಂಟೆ ತಕರಾರು ಮಾಡುತ್ತಿದ್ದಾರೆ, ಮಾಣಿಕಪ್ಪ ಇವರು ಫಿರ್ಯಾದುದಾರರ ಕಟುಂಬ ವರ್ಗವನ್ನು  ತುಂಬ  ಸಂಕಷ್ಟದಲ್ಲಿ ಸಿಲುಕಿಸಿರುತ್ತಾರೆ, ಮೋಸ ವಂಚನೆ ಮಾಡಿರುತ್ತಾರೆ ಆದ್ದರಿಂದ ಮಾಣಿಕಪ್ಪ ತಂದೆ ಪೀರಪ್ಪ ಕುರುಬರ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಇತ್ಯಾದಿಯಾಗಿ ನೀಡಿದ ದುರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ:- ದಿನಾಂಕಃ 23.11.2022 ರಂದು 11.00 ಎ.ಎಮಕ್ಕೆ ಶ್ರೀ ವಿನೂತ ತಂದೆ ವಾದಿರಾಜ ಕುಲಕರ್ಣಿ ವಯ-32 ವರ್ಷ ಜಾ|| ಬ್ರಾಹ್ಮಣ ಉ|| ಶಾಖಾಧಿಕರಿಗಳು ಸಹಾಯಕ ಕಾರ್ಯಪಾಲಕ ಅಭಿಯಂತರರು ಕಛೇರಿ ಕನನೀಸ ಮತ್ತು ಒಚ. ಮಂಡಳಿ ನಂ. 1 ಉಪ ವಿಭಾಗ ಕಲಬುರಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಕೊಟ್ಟ ಸಾರಾಂಶವೆನೆಂದರೆ ಕಲಬುರಗಿ ನಗರದಲ್ಲಿ ಒಳಚರಂಡಿ ವ್ಯವಸ್ಥೆಯಲ್ಲಿನ ಮ್ಯಾನ್ ಹೋಲ್ ಚೆಂಬರಗಳ ಕಬ್ಬಿಣದ ಮುಚ್ಚಳಿಕೆಗಳು ಕಳುವಾಗಿದ್ದರಿಂದ ತೆರೆದ ಚೆಂಬರಗಳಲ್ಲಿ ಮಕ್ಕಳು, ವಯಸ್ಕರು, ಪ್ರಾಣಿಗಳು, ಹಾಗೂ ವಾಹನಗಳು ಬೀಳುವ, ಗಾಯಗೊಳ್ಳುವ ಮತ್ತು ಪ್ರಾಣಾಪಾಯವಾಗುವ ಸಂಭವವಿರುತ್ತದೆ. ದಿನಾಂಕ; 02/11/2022 ರಂದು ಬ್ರಹ್ಮಪುರ ಬಡಾವಣೆಯಲ್ಲಿ ನಮ್ಮ ಸಿಬ್ಬಂದಿಯವರು ಗಸ್ತು ಮಾಡುವ ಸಮಯದಲ್ಲಿ ರೆಡ್ಡಿಗಲ್ಲಿ ಬ್ರಹ್ಮಪೂರ ಮ್ಯಾನ್ ಹೋಲ್ ಚೆಂಬರಿನ ಕಬ್ಬಿಣದ ಮುಚ್ಚಳಿಕೆ -1 ಅ.ಕಿ 1000/- ರೂ , ಅಂಬಾಭವಾನಿ ದೇವಸ್ಥಾನದ ಹತ್ತಿರ ಲಾಳಗೇರಿ ಬ್ರಹ್ಮಪೂರ ಮ್ಯಾನ್ ಹೋಲ್ ಚೆಂಬರಿನ ಕಬ್ಬಿಣದ ಮುಚ್ಚಳಿಕೆ -1 ಅ.ಕಿ 1000/- ರೂ,  ರಾಮ ಮಂದಿರ ಹಿಂದುಗಡೆ ಬ್ರಹ್ಮಪೂರ ಮ್ಯಾನ್ ಹೋಲ್ ಚೆಂಬರಿನ ಕಬ್ಬಿಣದ ಮುಚ್ಚಳಿಕೆ -1 ಅ.ಕಿ 1000/- ರೂ, ಮತ್ತು ದಿನಾಂಕ; 15/11/2022 ರಂದು ಆಜಾದ ಚೌಕ ಮಹಾಂತಗೌಡ ಗಲ್ಲಿ ಬ್ರಹ್ಮಪೂರ ಮ್ಯಾನ್ ಹೋಲ್ ಚೆಂಬರಿನ ಕಬ್ಬಿಣದ ಮುಚ್ಚಳಿಕೆ -1 ಅ.ಕಿ 1000/- ರೂ , ಬ್ರಹ್ಮಪೂರ ಏರಿಯಾದಲ್ಲಿ ಗಸ್ತು ಮಾಡುತ್ತಿರುವಾಗ ಅಲ್ಲಿಯು ಸಹ ಹುಸೇನ ಬಾಷಾ ದರ್ಗಾ ಬ್ರಹ್ಮಪೂರ ಮ್ಯಾನ್ ಹೋಲ್ ಚೆಂಬರಿನ ಕಬ್ಬಿಣದ ಮುಚ್ಚಳಿಕೆ -1 ಅ.ಕಿ 1000/- ರೂ ಅಲ್ಲದೆ ದಿನಾಂಕ; 19/11/2022 ರಂದು ದಾವಣಗೆರೆ ಬೆಣ್ಣೆದೋಷೆ ಎದುರುಗಡೆ ಇರುವ ಮ್ಯಾನ್ ಹೋಲ್ ಚೆಂಬರಿನ ಕಬ್ಬಿಣದ ಮುಚ್ಚಳಿಕೆ -1 ಅ,ಕಿ 1000/- ರೂ ಬೆಲೆ ಬಾಳುವ ಮ್ಯಾನ್ ಹೋಲ್ ಚೆಂಬರಿನ ಕಬ್ಬಿಣದ ಮುಚ್ಚಳಿಕೆಗಳು ಕಳುವಾಗಿದ್ದನ್ನು ವರದಿ ಮಾಡಿದ್ದರಿಂದ ಸದರಿ ಮಾಹಿತಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಇಂದು ತಡವಾಗಿ ದೂರು ಕೊಡುತ್ತಿದ್ದು. ಕಾರಣ ಮಾನ್ಯರವರು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ. ಅಂತ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 24-11-2022 12:16 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080