ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ ಠಾಣೆ :- ಫಿರ್ಯಾಧಿದಾರರು ತಮ್ಮ ಮನೆಯನ್ನು ದಿನಾಂಕ-22-10-2022 ರಂದು ರಾತ್ರಿ ೧೦:೦೦ ಗಂಟೆಗೆ ಬೀಗ ಹಾಕಿಕೊಂಡು ಹೊಗಿದ್ದು ಮರುದಿನ ಬೆಳಿಗ್ಗೆ ಬಂದು ನೋಡುವಷ್ಟರಲ್ಲಿ ಮನೆಯ ಬಾಗಿಲ ಕೀಲಿ ಮುರಿದಿದ್ದು ಒಳಗಡೆ ಹೋಗಿ ಚೆಕ್ ಮಾಡಲಾಗಿ ಮನೆಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಸಾಮಾನುಗಳು ಅ.ಕಿ 3,42,600/- ಬೆಲೆ ಬಾಳುವ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅಂತಾ ಫಿರ್ಯಾಧಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ್‌ ಠಾಣೆ :-  ದಿನಾಂಕ:23-10-2022 ರಂದು 2:30 ಪಿಎಮ್ ಕ್ಕೆ ಸುನೀಲ ತಂದೆ ರಾಜಶೇಖರ ಕಟಮಣ ಸಾ||ಜೋಗುರು ತಾಜಿ||ಕಲಬುರಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:20-10-2022 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಅಂಬಿಗರ ಚೌಡಯ್ಯ ಕಟ್ಟೆಯ ಮೇಲೆ ರೇಶನ ಕೊಡುವ ತಂಬ್ ಎಂಟ್ರಿ ಮಾಡಲು ಹೋಗಿ, ತಂಬ್ ನೀಡಿ ಕಟ್ಟೆಯಿಂದ  ಕೆಳಗೆ ಇಳಿದು ಬರುವಾಗ ನಮ್ಮೂರಿನ ಜೀಲಾನಿ ಈತನ ಹೆಂಡತಿಗೆ ಆಕಸ್ಮೀಕವಾಗಿ ನನ್ನ ಕಾಲು ತಾಗಿರುತ್ತದೆ. ಆಗ ನಾನು ಅವಳ ಬುಜಕ್ಕೆ ಮುಟ್ಟಿ ನಮಸ್ಕರಿಸಿದ್ದಕ್ಕೆ ಅಲ್ಲಿಯೇ ಇದ್ದ ಜೀಲಾನಿ ಈತನು ಏ ಬೋಸಡಿ ಮಗನೆ ಸುನ್ಯಾ ನೀನು ನನ್ನ ಹೆಂಡತಿಗೆ ಏಕೆ ಕಾಲು ತಾಗಿಸಿದ್ದಿ ಮಗನೆ ಅಂದವನೆ ನನಗೆ ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದು, ಅಲ್ಲಿಯ ರಸ್ತೆ ಪಕ್ಕದಲ್ಲಿ ಬಿದ್ದಿರುವ ಹಿಡಿ ಗಾತ್ರದ ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಬಲ ಭಾಗಕ್ಕೆ ಜೋರಾಗಿ ಹೊಡೆದಿದ್ದರಿಂದ ನನಗೆ ರಕ್ತ ಗಾಯವಾಗಿ ರಕ್ತ ಸೂರುತ್ತಿರುವಾಗ ಅಲ್ಲಿಯೇ ರೇಶನ್ ತಂಬ್ ನೀಡಲು ಬಂದಿದ್ದ 1) ಈಶ್ವರ ತಂ/ಮಲ್ಲಪ್ಪ ಉಮ್ಮರಗಿ 2) ಮೌಲಾಲಿ ತಂ/ಶಿವರಾಯ ನೆಲೋಗಿ ರವರು ಬಂದು ನನಗೆ ಕಲ್ಲಿನಿಂದ ಹೊಡೆಯುವುದನ್ನು ಬಿಡಿಸಿರುತ್ತಾರೆ. ಆಗ ಜೀಲಾನಿ ಈತನು ನಿನಗೆ ಜೀವ ಸಹಿತ ಬಿಡುವುದಿಲ್ಲಸೂಳೆ ಮಗನಾ ಅಂತ ಇತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಕಾರಣ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿದ ಜೀಲಾನಿ ತಂ/ಬಾಬುಸಾಬ ಡಾಂಗೆ ಸಾ||ಜೋಗುರು ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಮನೆಯಲ್ಲಿ ಹಿರಿಯರಿಗೆ ವಿಚಾರಿಸಿ ಠಾಣೆಗೆ ವಿಳಂಭವಾಗಿ ಬಂದು ದೂರು ಸಲ್ಲಿಸುತ್ತಿದ್ದೇನೆ ಅಂತ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ : ೧೭.೧೦.೨೦೨೨ ರಂದು ೧೧.೩೦ ಎ.ಎಮ್ ರಿಂದ ೧೯.೧೦.೨೦೨೨ ರಂದು ೭.೩೦ ಪಿ.ಎಮ್ ಮಮಧ್ಯದ ಅವಧಿ ಸುಮಾರಿಗೆ ಮನೆಯ ಅಲಮಾರಿಯಲ್ಲಿಟ್ಟಿದ್ದ ೧) ೨೦ ಗ್ರಾಂ ಬಂಗಾರದ ಕಿವಿಯೋಲೆ ಅ.ಕಿ ೫೦,೦೦೦/- ರೂ ೨) ೧೫ ಗ್ರಾಂ ಬಗಾರದ ನಕ್ಲೇಸ ಅ.ಕಿ ೩೭,೫೦೦/- ರೂ. ೩)೫೦ ಗ್ರಾಂ ಬೆಳ್ಳಿಯ ಎರಡು ಖಡೆಗಳು ಅ.ಕಿ ೧೫೦೦/- ರೂ. ೪) ೩೦ ಗ್ರಾಂ ಬೆಳ್ಳಿ ಕಾಲಚೈನ್ ಅ.ಕಿ ೯೦೦/- ರೂ ೫) ೧೫೦ ಗ್ರಾಂ ಬೆಳ್ಳಿಯ ಕಾಲ ಚೌನ್ ಅ.ಕಿ ೪೫೦೦/- ರೂ. ೬) ನಗದು ಹಣ ೪೦,೦೦೦/- ರೂ.  ಹೋಗೆ ಒಟ್ಟು 1,34,400/- ರೂ ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾಧಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 23-10-2022 ರಂದು ಸರಕಾರಿ ತರ್ಫೆಯಾಗಿ ಫಿರ್ಯಾದಿಯು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದೇನೆಂದರೆ , ಪೆಟ್ರೋಲಿಂಗ್ ಕುರಿತು ಏರಿಯಾದಲ್ಲಿ  ಹೋದಾಗ ಬಾತ್ಮಿ ಬಂದಿದ್ದೇನೆಂದರೆ , ಬೇಲೂರ ತಾಂಡದ ಸಾರ್ವಜಿನಿಕ  ಖುಲ್ಲಾ ಜಾಗೆಯಲ್ಲಿ ಸದರಿ ಆರೋಪಿತರು ಅಂದರ ಬಾಹರ ಎಂಬ ದೈವಲೀಲೆಯ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದು , ಫಿರ್ಯಾದಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ , 63,200/- ರೂ ಹಾಗು ಜಪ್ತಿ ಪಂಚನಾಮೆಯೊಂದಿಗೆ ಸದರಿ ಆರೋಪಿತರನ್ನು ಠಾಣೆಗೆ ಒಪ್ಪಿಸಿ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 10-11-2022 12:50 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080