Feedback / Suggestions

ಎಂ.ಬಿ.ನಗರ ಪೊಲೀಸ ಠಾಣೆ :- ಫಿರ್ಯಾಧಿದಾರರು ತಮ್ಮ ಮನೆಯನ್ನು ದಿನಾಂಕ-22-10-2022 ರಂದು ರಾತ್ರಿ ೧೦:೦೦ ಗಂಟೆಗೆ ಬೀಗ ಹಾಕಿಕೊಂಡು ಹೊಗಿದ್ದು ಮರುದಿನ ಬೆಳಿಗ್ಗೆ ಬಂದು ನೋಡುವಷ್ಟರಲ್ಲಿ ಮನೆಯ ಬಾಗಿಲ ಕೀಲಿ ಮುರಿದಿದ್ದು ಒಳಗಡೆ ಹೋಗಿ ಚೆಕ್ ಮಾಡಲಾಗಿ ಮನೆಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಸಾಮಾನುಗಳು ಅ.ಕಿ 3,42,600/- ಬೆಲೆ ಬಾಳುವ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅಂತಾ ಫಿರ್ಯಾಧಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ್‌ ಠಾಣೆ :-  ದಿನಾಂಕ:23-10-2022 ರಂದು 2:30 ಪಿಎಮ್ ಕ್ಕೆ ಸುನೀಲ ತಂದೆ ರಾಜಶೇಖರ ಕಟಮಣ ಸಾ||ಜೋಗುರು ತಾಜಿ||ಕಲಬುರಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:20-10-2022 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಅಂಬಿಗರ ಚೌಡಯ್ಯ ಕಟ್ಟೆಯ ಮೇಲೆ ರೇಶನ ಕೊಡುವ ತಂಬ್ ಎಂಟ್ರಿ ಮಾಡಲು ಹೋಗಿ, ತಂಬ್ ನೀಡಿ ಕಟ್ಟೆಯಿಂದ  ಕೆಳಗೆ ಇಳಿದು ಬರುವಾಗ ನಮ್ಮೂರಿನ ಜೀಲಾನಿ ಈತನ ಹೆಂಡತಿಗೆ ಆಕಸ್ಮೀಕವಾಗಿ ನನ್ನ ಕಾಲು ತಾಗಿರುತ್ತದೆ. ಆಗ ನಾನು ಅವಳ ಬುಜಕ್ಕೆ ಮುಟ್ಟಿ ನಮಸ್ಕರಿಸಿದ್ದಕ್ಕೆ ಅಲ್ಲಿಯೇ ಇದ್ದ ಜೀಲಾನಿ ಈತನು ಏ ಬೋಸಡಿ ಮಗನೆ ಸುನ್ಯಾ ನೀನು ನನ್ನ ಹೆಂಡತಿಗೆ ಏಕೆ ಕಾಲು ತಾಗಿಸಿದ್ದಿ ಮಗನೆ ಅಂದವನೆ ನನಗೆ ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದು, ಅಲ್ಲಿಯ ರಸ್ತೆ ಪಕ್ಕದಲ್ಲಿ ಬಿದ್ದಿರುವ ಹಿಡಿ ಗಾತ್ರದ ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಬಲ ಭಾಗಕ್ಕೆ ಜೋರಾಗಿ ಹೊಡೆದಿದ್ದರಿಂದ ನನಗೆ ರಕ್ತ ಗಾಯವಾಗಿ ರಕ್ತ ಸೂರುತ್ತಿರುವಾಗ ಅಲ್ಲಿಯೇ ರೇಶನ್ ತಂಬ್ ನೀಡಲು ಬಂದಿದ್ದ 1) ಈಶ್ವರ ತಂ/ಮಲ್ಲಪ್ಪ ಉಮ್ಮರಗಿ 2) ಮೌಲಾಲಿ ತಂ/ಶಿವರಾಯ ನೆಲೋಗಿ ರವರು ಬಂದು ನನಗೆ ಕಲ್ಲಿನಿಂದ ಹೊಡೆಯುವುದನ್ನು ಬಿಡಿಸಿರುತ್ತಾರೆ. ಆಗ ಜೀಲಾನಿ ಈತನು ನಿನಗೆ ಜೀವ ಸಹಿತ ಬಿಡುವುದಿಲ್ಲಸೂಳೆ ಮಗನಾ ಅಂತ ಇತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಕಾರಣ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿದ ಜೀಲಾನಿ ತಂ/ಬಾಬುಸಾಬ ಡಾಂಗೆ ಸಾ||ಜೋಗುರು ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಮನೆಯಲ್ಲಿ ಹಿರಿಯರಿಗೆ ವಿಚಾರಿಸಿ ಠಾಣೆಗೆ ವಿಳಂಭವಾಗಿ ಬಂದು ದೂರು ಸಲ್ಲಿಸುತ್ತಿದ್ದೇನೆ ಅಂತ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ : ೧೭.೧೦.೨೦೨೨ ರಂದು ೧೧.೩೦ ಎ.ಎಮ್ ರಿಂದ ೧೯.೧೦.೨೦೨೨ ರಂದು ೭.೩೦ ಪಿ.ಎಮ್ ಮಮಧ್ಯದ ಅವಧಿ ಸುಮಾರಿಗೆ ಮನೆಯ ಅಲಮಾರಿಯಲ್ಲಿಟ್ಟಿದ್ದ ೧) ೨೦ ಗ್ರಾಂ ಬಂಗಾರದ ಕಿವಿಯೋಲೆ ಅ.ಕಿ ೫೦,೦೦೦/- ರೂ ೨) ೧೫ ಗ್ರಾಂ ಬಗಾರದ ನಕ್ಲೇಸ ಅ.ಕಿ ೩೭,೫೦೦/- ರೂ. ೩)೫೦ ಗ್ರಾಂ ಬೆಳ್ಳಿಯ ಎರಡು ಖಡೆಗಳು ಅ.ಕಿ ೧೫೦೦/- ರೂ. ೪) ೩೦ ಗ್ರಾಂ ಬೆಳ್ಳಿ ಕಾಲಚೈನ್ ಅ.ಕಿ ೯೦೦/- ರೂ ೫) ೧೫೦ ಗ್ರಾಂ ಬೆಳ್ಳಿಯ ಕಾಲ ಚೌನ್ ಅ.ಕಿ ೪೫೦೦/- ರೂ. ೬) ನಗದು ಹಣ ೪೦,೦೦೦/- ರೂ.  ಹೋಗೆ ಒಟ್ಟು 1,34,400/- ರೂ ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾಧಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 23-10-2022 ರಂದು ಸರಕಾರಿ ತರ್ಫೆಯಾಗಿ ಫಿರ್ಯಾದಿಯು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದೇನೆಂದರೆ , ಪೆಟ್ರೋಲಿಂಗ್ ಕುರಿತು ಏರಿಯಾದಲ್ಲಿ  ಹೋದಾಗ ಬಾತ್ಮಿ ಬಂದಿದ್ದೇನೆಂದರೆ , ಬೇಲೂರ ತಾಂಡದ ಸಾರ್ವಜಿನಿಕ  ಖುಲ್ಲಾ ಜಾಗೆಯಲ್ಲಿ ಸದರಿ ಆರೋಪಿತರು ಅಂದರ ಬಾಹರ ಎಂಬ ದೈವಲೀಲೆಯ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದು , ಫಿರ್ಯಾದಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ , 63,200/- ರೂ ಹಾಗು ಜಪ್ತಿ ಪಂಚನಾಮೆಯೊಂದಿಗೆ ಸದರಿ ಆರೋಪಿತರನ್ನು ಠಾಣೆಗೆ ಒಪ್ಪಿಸಿ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

Last Updated: 10-11-2022 12:50 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080