ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 23-09-2022  ರಂದು ೦೧-೦೦ ಪಿ.ಎಮ್ ಕ್ಕೆ ಪಿರ್ಯಾದಿದಾರರಾದ ಶ್ರೀಮತಿ ರಫೀಕ್‌ಉನ್ನಿಸಾ ಗಂಡ ಮಹ್ಮದ್ ಗೌಸುದ್ದೀನ್ ಕಂಚಿ ವಯ:೩೯ವರ್ಷ ಜಾ:ಮುಸ್ಲಿಂ ಉ:ಮನೆ ಕೆಲಸ ಸಾ//ಮನೆ ನಂ ೫-೯೯೨/೩೬ ಟಿಪ್ಪು ಚೌಕ್ ಯಾದುಲ್ಲಾ ಕಾಲೋನಿ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಪಿರ್ಯಾದಿ ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ಗಂಡ ಮಹ್ಮದ ಗೌಸುದ್ದೀನ್ ಮತ್ತು ಫಯಾಜುದ್ದೀನ್ ಇವರಿಬ್ಬರು ಗೆಳೆಯರಿದ್ದು ಅವರಿಬ್ಬರು ಪಾಟ್ನರ್‌ಶೀಫ್‌ನಲ್ಲಿ  ಹಳೆಯ ಕಾರುಗಳನ್ನು ತೆಗೆದುಕೊಂಡು ಅದಕ್ಕೆ ದುರಸ್ತಿಮಾಡಿ ಮಾರಾಟ ಮಾಡುತ್ತಿದ್ದರು. ಅವರಿಬ್ಬರಲ್ಲಿ ಹಣ ಕೊಡುವ ಮತ್ತು ತೆಗೆದುಕೊಳ್ಳುವ ವಿಷಯದಲ್ಲಿ ವೈಮನಸ್ಸು ಉಂಟಾಗಿ ಆಗಾಗ ತಕರಾರು ಮಾಡಿಕೊಂಡಿದ್ದರು. ೨೦೨೦ನೇ ಸಾಲೀನ ಅಕ್ಟೋಬರ್ ತಿಂಗಳ ೨೨ನೇ ತಾರಿಖಿನಂದು ನನ್ನ ಗಂಡ ಮಹ್ಮದ್ ಗೌಸುದ್ದೀನ್ ಇವರು ಸನಾ ಹೋಟೆಲ್ ಹತ್ತಿರ ಇದ್ದಾಗ, ಅವರ ಗೆಳೆಯರಾದ ಫಯಾಜುದ್ದೀನ್ ತಂದೆ ರುಕ್ಮೋದ್ದೀನ್ ಮತ್ತು ಶೇಖ ನಿಜಾಮೋದ್ದೀನ್ ಬಾವರಚಿ  ತಂದೆ ಶೇಖ ಅಬ್ದುಲ್ ಜಬ್ಬಾರ್ ಹಾಗೂ ಶೇಖ ವಾಜೀದ್ ತಂದೆ ಶೇಖ ಜಬ್ಬಾರ ಈ ಮೂರು ಜನರು ಕೂಡಿಕೊಂಡು ನನ್ನ ಗಂಡನಿಗೆ ಜಬರದಸ್ತಿಯಿಂದ ಕಾರಿನಲ್ಲಿ ಕರೆದುಕೊಂಡು ಕುರಿಕೋಟಾದ ಹಳೆಯ ಬ್ರೀಜ್ ಹತ್ತಿರ ವೈದು ಫಯಾಜುದ್ದೀನ್, ಶೇಖ ನಿಜಾಮೋದ್ದೀನ್ ಇವರು ನನ್ನ ಗಂಡನಿಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಿ ಕುರಿಕೋಟಾದ ನದಿಯಲ್ಲಿ ವಗದಿದ್ದರು ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ ೭೫/೨೦೨೦ ಕಲಂ ೩೬೪,೩೦೨,೨೦೧ ಸಂಗಡ ೩೪ ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿ ಕೋರ್ಟನಲ್ಲಿ ವಿಚಾರಣೆಯಲ್ಲಿರುತ್ತದೆ.  ದಿನಾಂಕ:23-09-2022 ರಂದು ನನ್ನ ಮಗನಾದ ಮಹ್ಮದ್ ಪೈಸಲ್ ಮತ್ತು ನನ್ನ ಅತ್ತೆ ರಾಭೀಯಾ ಬಿ ಇವರು ಕೋರ್ಟನಲ್ಲಿ ಸಾಕ್ಷಿ ಇತ್ತು. ನನ್ನ ಮೈದುನ ಮಹ್ಮದ್ ಬಾಹೋದ್ದೀನ್ ಮತ್ತು ಅತ್ತೆ ರಾಭೀಯಾ ಬಿ ಕೂಡಿ ಒಂದು ಮೋಟಾರ್ ಸೈಕಲ್ ಮೇಲೆ ಹೋಗಿದ್ದು, ಬೆಳಿಗ್ಗೆ ೧೦:೩೦ ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಮಹ್ಮದ್ ಪೈಸಲ್ ಕೂಡಿಕೊಂಡು ಮನೆಯಿಂದ ಮೋಟಾರ್ ಸೈಕಲ್ ಮೇಲೆ ಕೋರ್ಟಿಗೆ ಹೊಗಬೇಕೆಂದು ಹೊರಟು ಬಿಗ್ ಬಜಾರ್ ಹತ್ತಿರದ ರೇಹಮಾನಿಯಾ ಮಸೀದ್ ಪಕ್ಕದ ರಸ್ತೆಯ ಮೇಲೆ ಹೊರಟಾಗ ಅಲ್ಲಿ ಫಯಾಜುದ್ದೀನ್ ತಂದೆ ರುಕ್ಮೋದ್ದೀನ್ ಮತ್ತು ಶೇಖ ನಿಜಾಮೋದ್ದೀನ್ ಬಾವರಚಿ ತಂದೆ ಶೇಖ ಅಬ್ದುಲ್ ಜಬ್ಬಾರ್ ಇವರು ನಿಂತಿದ್ದು, ನಮ್ಮನ್ನು ನೋಡಿ ಅವರು ನಮಗೆ ಠೈರ್ ಠೈರ್ ಅಂತಾ ಕೈ ಮಾಡಿ ನಿಲ್ಲಿಸಿ, ಶೇಖ ನಿಜಾಮೋದ್ದೀನ್ ಬಾವರಚಿ ಇತನು ಚಾಕು ತೆಗೆದು ಹಮಾರೇ ಕಿಲಾಫ ಕೋರ್ಟಮೇ ಗವಾ ನೈಹಿದೇನಾ ದಿಯೆತೊ ತೇರಾಭಿ ಮರ್ಡರ್ ಕರತೂ ಅಂತಾ ಜೀವದ ಬೇದರಿಕೆ ಹಾಕಿದ್ದು ಫಯಾಜುದ್ದೀನ್ ಇತನು ನನಗೆ ಇಸ್ಕೋಬಿ ಮರ್ಡರ್ ಕರ್, ಪೊಲೀಸ್ ಹಮಾರೇ ಜೇಬ್ ಮೇ ಹೈ ತೂ ಮರಿತೂ ತೇರೆ ಬಚ್ಚೊಂಕೋ ಕೋಹಿ ನಹಿ ಪಾಲತಾ ಕೋರ್ಟಮೆ ಹಮಾರೆ ಕಿಲಾಫ ಕ್ಯಾಬಿ ನಹಿ ಬೋಲನಾ ಅಂತಾ ಬೇದರಿಕೆ ಹಾಕುತ್ತಿದ್ದಾಗ ನಾವು ಅಂಜಿ ನನ್ನ ಮೈದೂನ ಮಹ್ಮದ್ ಬಾಹೋದ್ದೀನ್, ಸಂಬಂಧಿ ಮಹ್ಮದ್ ಆಸೀಫ್ ರವರಿಗೆ ವಿಷಯ ತಿಳಿಸಿ ಠಾಣೆಗೆ ಬಂದು ಅರ್ಜಿ ಸಲ್ಲಿಸಿರುತ್ತೇನೆ. ಸದರಿ ಘಟನೆ ಜರುಗಿದಾಗ ಅಂದಾಜು ಸಮಯ ೧೦:೪೫ ಗಂಟೆ ಆಗಿತ್ತು. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇತ್ಯಾದಿ ಪಿರ್ಯಾದಿ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ :-  ದಿನಾಂಕ 21/09/2022 ರಂದು ಬೆಳಿಗ್ಗೆ ರಾತ್ರಿ 10-30  ಗಂಟೆಗೆ ಫಿರ್ಯಾದಿದಾರ  ಶ್ರೀ ಮಹ್ಮದ ಅಸ್ಲಂ ತಂದೆ ಮಹ್ಮದ ದಸ್ತಗೀರ ಸಾ:ಶಹಬಾಜ ಶಾಲೆ ಹತ್ತಿರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತನ್ನದೊಂದು ಕನ್ನಡದಲ್ಲಿ ಗಣಕೀಕೃತ ದೂರು ಕೊಟ್ಟಿದ್ದನ್ನು ಸ್ವೀಕರಿಸಿಕೊಂಡೆನು. ಸದರ ಫಿರ್ಯಾದಿದಾರ ದೂರಿನ ಸಾರಾಂಶದ ಮೇಲಿಂದ ಅಪರಾಧ ಕಲಂ 323, 504, 506,  355  ಐಪಿಸಿ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ, ಅಸಂಜ್ಞೇಯ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಕೊಳ್ಳಲು ಪರವಾನಿಗೆ ಮಂಜೂರು ಮಾಡಬೇಕೆಂದು ಠಾಣೆ ಪತ್ರ ನಂ/ /ಅಪರಾಧ/ಚೌ/ಕ/2022 ದಿನಾಂಕ 21/09/2022 ನೇದ್ದರ ಮುಖಾಂತರ ಕೋರಿಕೊಂಡು, ಸದರಿ ಪತ್ರವನ್ನು ನಮ್ಮ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಸಿಹೆಚಸಿ 64 ಶ್ರೀ ಯಲ್ಲಾಲಿಂಗ ಇವರ ಕೈಯಲ್ಲಿ ಕೊಟ್ಟು ಕಳುಹಿಸಿಕೊಟ್ಟಿದ್ದು,  ಮಾನ್ಯ ನ್ಯಾಯಾಧೀಶರು ಈ ಮೇಲಿನ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಕೊಳ್ಳಲು ಪರವಾನಿಗೆ ಪತ್ರವನ್ನು ಇಂದು ದಿನಾಂಕ 23/09/2022 ರಂದು ನಮ್ಮ ಠಾಣೆ ಸಿಹೆಚಸಿ 64 ಶ್ರೀ ಯಲ್ಲಾಲಿಂಗ ಇವರು ಬೆಳಿಗ್ಗೆ 10-30  ಗಂಟೆಗೆ ಠಾಣೆಗೆ ತಂದು ಹಾಜರಪಡಿಸಿದಾಗ ಸ್ವೀಕರಿಸಿಕೊಂಡೆನು. ಸದರ ದೂರಿನ ಸಾರಾಂಶವೆನೆಂದೆರೆ,  ರಿಯಾಜ ಅಹ್ಮದ ಇವರಿಗೆ ಸಂಬಂಧಿಸಿದ  ಕಲಬುರಗಿ ನಗರದ ನೆಹರು ಗಂಜ ಕಾಟನ ಮಾಕರ್ೆಟದಲ್ಲಿ ಬೆಟ್ಟಕೋ ಟ್ರಾನ್ಸಪೋರ್ಟನಲ್ಲಿ ಕಳೆದ 03 ವರ್ಷಗಳಿಂದ ಲೋಡಿಂಗ ಮತ್ತು ಅನಲೋಡಿಂಗ  ಹಾಗೂ ಖಾತೆ ಬರೆಯುವುದು ಮತ್ತು ಮ್ಯಾನೇಜರ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ.       ದಿನಾಂಕ 16/09/2022 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ಪ್ರತಿ ದಿನದಂತೆ  ಬೆಟ್ಟಕೋ ಟ್ರಾನ್ಸಪೋರ್ಟನಲ್ಲಿ ಕೆಲಸ ಮಾಡುತ್ತಿರುವಾಗ ನಮ್ಮ ಮಾಲೀಕರ ತಂಗಿ ಮಗ ನೋಮಾನ ಇವರು ಆಫೀಸನಲ್ಲಿ ಬಂದು ಕುಳಿತುಕೊಂಡಿದ್ದರು. ಮಧ್ಯಾಹ್ನ 3-00 ಗಂಟೆ ಸುಮಾರಿಗೆ ನಮ್ಮ ಮಾಲೀಕ ರಿಯಾಜ ಅಹ್ಮದ ಬಂದರು. ಅವರ ಹಿಂದೆ ಅವರ ತಂಗಿ ಮಗ ಅವೇಜ ಶೇಖ ಬಂದರು. ಆಗ ರಿಯಾಜ ಅಹ್ಮದ ಇವರು ನನಗೆ ಕರೆಯಿಸಿ ಅಕೌಂಟ ಬರೆಯುವಾಗ ಕಳೆದ 03 ವರ್ಷಗಳಿಂದ 30,00,000/-ರೂ. ಅಪರಾ ತಪರಾ ಮಾಡಿದ್ದೀ  30,00,000/- ರೂ. ಹಣ ವಾಪಸ್ಸು ಕೊಡು ಅಂತಾ ಕೇಳಿದರು. ಅದಕ್ಕೆ ನಮ್ಮ ಮಾಲೀಕರಿಗೆ ಯಾವುದೇ ಅಪರಾ ತಪರಾ ಮಾಡಿರುವುದಿಲ್ಲಾ ನಿಮಗೆ ಯಾವುದೇ ಹಣ ಕೊಡುವುದು ಬಾಕಿ ಇರುವುದಿಲ್ಲಾ ಅಂತಾ ಅಂದಾಗ ತೇರಿ ಮಾಕೀ ಚೋತ ಪೈಸೆ ನಹೀ ದೇತಾ ಅಂತಾ ಅನ್ನುತ್ತಾ ಕೈ ಮುಷ್ಟಿ ಮಾಡಿ ನನ್ನ ತುಟಿಗೆ, ಎಡ ಎದೆಗೆ, ಬಲಭುಜದ ಮೇಲೆ. ಎಡ ಪಕ್ಕೆಕ್ಕೆ  ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿದರು, ಮತ್ತು ಕೈಯಲ್ಲಿ ಚಪ್ಪಲಿಯಿಂದ ತಲೆಯ ಮೇಲೆ ಎಡಭುಜಕ್ಕೆ ಮೇಲೆ ಹೊಡೆದು ಗುಪ್ತಗಾಯಗೊಳಿಸಿದನು. ಮತ್ತು ಹಣ ಕೊಡದೇ ಹೋದರೆ ಜೀವ ಸಹಿತ ಬಿಡುವುದಿಲ್ಲಾ  ಎಂದು ಜೀವ ಭಯ ಹಾಕಿದರು.ನಂತರ ನಮ್ಮ ಅಣ್ಣ  ಅಹ್ಮದ ಮತ್ತು ಶಕೀಲ ಅಹ್ಮದ ಇವರಿಗೆ ಪೋನ ಮಾಡಿ ನಮ್ಮ ಟ್ರಾನ್ಸಪೋರ್ಟ ಆಫೀಸಕ್ಕೆ ಕರೆಯಿಸಿ ನಿಮ್ಮ ತಮ್ಮ 30,00,000/-ರೂ. ಅಪರಾ ತಪರಾ ಮಾಡಿದ್ದಾನೆ ಹಣ ಕೊಡಬೇಕು ಅಂತಾ ಹೇಳಿದರು. ಅದಕ್ಕೆ ನಮಗೇನು ಗೊತ್ತಿಲ್ಲಾ ಅಂತಾ ತಿಳಿಸಿದೇವು. ನಂತರ ನಮ್ಮ ಅಣ್ಣಂದಿರರು ಅದೇ ದಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದರು. ಆ ದಿನ ಪೊಲೀಸರು ಎಂ.ಎಲ್.ಸಿ. ವಿಚಾರಣೆಗಾಗಿ ಆಸ್ಪತ್ರೆ ಬಂದಾಗ ನಾನು ಈ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿಕೊಂಡು ದೂರು ಕೊಡುತ್ತೇನೆ ಎಂದು ತಿಳಿಸಿರುತ್ತೇನೆ. ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ.  ಕಾರಣ ಮಾನ್ಯರವರು ನನಗೆ ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆ ಬಡೆ ಮಾಡಿ ಜೀವ ಭಯ ಹಾಕಿದ ನಮ್ಮ ಮಾಲೀಕ ರಿಯಾಜ ಅಹ್ಮದ ಸಾ; ಇಸ್ಲಾಂಬಾದ ಕಾಲನಿ ಕಲಬುರಗಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಎಂದು ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ  ೧೪.೦೯.೨೦೨೨ ರಂದು ೨:೦೦ ಗಂಟೆ ಸುಮಾರಿಗೆ ಸದರಿ ಆರೋಪಿತರು ಫಿರ್ಯಾದಿಗೆ ಹೆದರಿಸಿ ಅಪಹರಿಸಿಕೊಂಡು ಸಬ್ ರಜಿಸ್ಟರ್ ಕಛೇರಿಯಲ್ಲಿ ಒತ್ತಾಯಪೂರ್ವಕವಾಗಿ ಪ್ಲಾಟನ ವಿಚಾರದಲ್ಲಿ ತಕರಾರು ತೆಗೆದು ಹೊಡೆಬಡೆ ಮಾಡಿ ಗನ್ ತೋರಿಸಿ ಹೆದರಿಸಿದ್ದಾನೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ .

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 23/09/22 ರಂದು 16.00 ಗಂಟೆಗೆ ಫಿರ್ಯಾದಿದಾರರು ತಮ್ಮ ಟೋ ತೆಗೆದುಕೊಂಡು ಮಹೆಬೂಬ ನಗರ ಕ್ರಾಸ್ ಹತ್ತಿರ ನಿಂತಾಗ ಹಣ ಕೊಡುವ ವಿಷಯದಲ್ಲಿ ವೈಷಮ್ಯದಿಂದ ಸಲ್ಮಾನ ಟಮಕಿ ಆತನ ಸಂಗಡ 2-3 ಜನರು ಕೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಬೆನ್ನಿಗೆ ಇರಿದು, ಕೊಲೆ ಮಾಡಲು ಪ್ರಯತ್ನಿಸಿದ , ಅವಾಚ್ಯ ಶಬ್ಧಗಳಿಂದ ಬೈಯ್ದು , ಜೀವಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕೆಂದು ಅಂತಾ ವಗೈರೆ ದೂರು ಅದೆ.

ಇತ್ತೀಚಿನ ನವೀಕರಣ​ : 13-10-2022 11:40 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080