Feedback / Suggestions

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ-23-08-2022  ರಂದು ಸಾಯಂಕಾಲ ಆರೋಪಿತನು ಜಿ.ಡಿ.ಎ. ಬಡಾವಣೆಲ್ಲಿ ಬಾಂಕ್ವೆಂಟ ಹಾಲ ಹಿಂದುಗಡೆ ರಸ್ತೆಯ ಪಕ್ಕದಲ್ಲಿ ಮರೆಯಾಗಿ ಕುಳಿತು ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದಲ್ಲಿ ತೊಡಗಿರುತ್ತಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರ ಮೇರೆಗೆ ದಾಳಿ ಮಾಡಲಾಗಿ ಆರೋಪಿತನಿಂದ ಮುದ್ದೆಮಾಲು ವಶಪಡೆಸಿಕೊಂಡು ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ-23-08-2022  ರಂದು ಸಾಯಂಕಾಲ ೭:೦೦ ಗಂಟೆಗೆ ಸ.ತ ಫಿರ್ಯಾಧಿದಾರರು ಖಚಿತ ಬಾತ್ಮಿ ಬಂದ ಮೆರೆಗೆ ವಿರೇಂದ್ರ ಪಾಟೀಲ ನಂದಿ ಬಸವೇಶ್ವರ ದೇವಸ್ಥಾನ ಹತ್ತಿರ ೪ ಜನರು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ ಇಸ್ಪೆಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ಆರೋಪಿತರನ್ನು ಮತ್ತು ಮುದ್ದೆಮಾಲು ಜಪ್ತಿ ಪಡೆಸಿಕೊಂಡು ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

ಸಿ.ಇ.ಎನ್‌ ಪೊಲೀಸ್‌ ಠಾಣೆ :-  ದಿನಾಂಕ: 23.08.2022 ರಂದು 21:30 ಗಂಟೆಗೆ ನಮ್ಮ ಠಾಣೆಯ  ಸಿಬ್ಬಂದಿಯಾದ  ಈರಣ್ಣ ಸಿಪಿಸಿ-181 ಸಿ,ಇ,ಎನ್ ಪೊಲೀಸ್ ಠಾಣೆ ಕಲಬುರಗಿ ನಗರ. ಈ ಮೂಲಕ ವರದಿ ನೀಡುವುದೆನೆಂದರೆ, ದಿನಾಂಕ: 23-08-2022  ರಂದು 17-00 ಗಂಟೆಗೆ ಸುಮಾರಿಗೆ ಠಾಣೆಯಿಂದ ನಾನು ಮತ್ತು ಹೊನ್ನೂರಸಾಬ್  ಪಿಸಿ 279 ಕೂಡಿಕೊಂಡು ಕಲಬುರಗಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮತ್ತು ಅಕ್ರಮ ಮಾದಕ ವಸ್ತುಗಳ ಮಾರಾಟ ಮಾಡುವವರ ಮತ್ತು ಗಾಂಜಾ ಸೇವನೆ ಮಾಡುವವರ ಮಾಹಿತಿ ಸಂಗ್ರಹ ಕುರಿತು ಗಾಂಜಾ ಬೀಟ್ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ 17-30 ಗಂಟೆಗೆ  ನೂರಬಾಗ್ ಹತ್ತಿರ ಮುಳ್ಳಿನ ಕಂಟಿಗಳಲ್ಲಿ ಒಬ್ಬ ವ್ಯಕ್ತಿಯು ಅನುಮಾನಸ್ಪದವಾಗಿ ಯಾವುದೋ ಮಾದಕ ದ್ರವ್ಯ ಸೇವನೆ ಮಾಡಿ ನಶೆಯಲ್ಲಿ ಇರುವುದನ್ನು ಕಂಡು ನಾವು ಹತ್ತಿರ ಹೋಗಿ ವಿಚಾರಿಸಲಾಗಿ ತನ್ನ  ಹೆಸರು ಮಹ್ಮದ ಆರೀಫ್ ತಂದೆ ಮಹ್ಮದ ಸೈಯಿದ ವ: 24 ವರ್ಷ ಜಾ: ಮುಸ್ಲಿಂ ಉ: ಪ್ಲಂಬರ ಕೆಲಸ ಸಾ: ಗರೀಬ್ ನವಾಜ್ ಕಾಲೋನಿ ಚುನ್ನಿಕೆ ಭಟ್ಟಿ ಕಲಬುರಗಿ. ಅಂತಾ ತಿಳಿಸಿದ್ದು ಆತನ ಬಾಯಿಂದ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಕೆಟ್ಟ ವಾಸನೆ ಬರುತ್ತಿದ್ದರಿಂದಾ ಆತನಿಗೆ ಠಾಣೆಗೆ 18:00 ಗಂಟೆಗೆ ಕರೆದುಕೊಂಡು ಬಂದು ಸದರಿಯವನ  ವೈದ್ಯಕೀಯ ತಪಾಸಣೆ ಕುರಿತು ಮಾನ್ಯ ಪಿ.ಐ ಸಾಹೇಬರು ಮಾದಕ ವ್ಯಸನಿಗೆ ವೈಧ್ಯಕೀಯ ಪರೀಕ್ಷೆ ಕುರಿತು ನಾನು ಮತ್ತು ಹೊನ್ನೂರಸಾಬ್ ಸಿಪಿಸಿ-279 ನೇಮಕ ಮಾಡಿದ್ದು ವೈಧ್ಯಕೀಯ ಪರೀಕ್ಷೆ ಕುರಿತು ಘನಾತೆ ಆರೋಗ್ಯ ಆಸ್ಪತ್ರೆ ಕಲಬುರಗಿ ರವರಲ್ಲಿ ಕರೆದುಕೊಂಡು ಹೋಗಿ ವೈಧ್ಯಕೀಯ ಪರೀಕ್ಷೆ ಮಾಡಿಸಿ ನಂತರ ದಿನಾಂಕ: 23-08-2022 ರಂದು 20:57 ಗಂಟೆಗೆ MULTI DRUG ONE STEP MULTI-LINE SCREEN TEST DEVICE(URINIE) RESULT=POSITIVE FOR BENZODIAZEPINE/THC/CANNABIS. ಅಂತಾ ವೈಧ್ಯರು ವರದಿ ನೀಡಿರುತ್ತಾರೆ. ಕಾರಣ ಸದರಿ ಆರೋಪಿತನ  ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ ಸಲ್ಲಿಸಿದ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.   

 

 

ಸಿ.ಇ.ಎನ್‌ ಪೊಲೀಸ್‌ ಠಾಣೆ :-  ದಿನಾಂಕ: 23.08.2022 ರಂದು 21:15 ಗಂಟೆಗೆ ನಮ್ಮ ಠಾಣೆಯ  ಸಿಬ್ಬಂದಿಯಾದ ಪ್ರಶಾಂತ ಸಿಪಿಸಿ-290 ಸಿ,ಇ,ಎನ್ ಪೊಲೀಸ್ ಠಾಣೆ ಕಲಬುರಗಿ ನಗರ ಇವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದೇನೆಂದರೆ ಎಸ್.ಹೆಚ್.ಓ ರವರ ಆದೇಶದಂತೆ ಇಂದು ದಿನಾಂಕ: 23-08-2022  ರಂದು 16-00 ಗಂಟೆಗೆ ಸುಮಾರಿಗೆ ಠಾಣೆಯಿಂದ ನಾನು ಮತ್ತು ಗುರುನಾಥ ಸಿಪಿಸಿ-843  ಕೂಡಿಕೊಂಡು ಕಲಬುರಗಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮತ್ತು ಅಕ್ರಮ ಮಾದಕ ವಸ್ತುಗಳ ಮಾರಾಟ ಮಾಡುವವರ ಮತ್ತು ಗಾಂಜಾ ಸೇವನೆ ಮಾಡುವವರ ಮಾಹಿತಿ ಸಂಗ್ರಹ ಕುರಿತು ಗಾಂಜಾ ಬೀಟ್ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ 16-30 ಗಂಟೆಗೆ  ಪಾಯನ ಗಲ್ಲಿ ಹತ್ತಿರ ಮುಳ್ಳಿನ ಕಂಟಿಯಲ್ಲಿ ಒಬ್ಬ ವ್ಯಕ್ತಿಯು ಅನುಮಾನಸ್ಪದವಾಗಿ ಯಾವುದೋ ಮಾದಕ ದ್ರವ್ಯ ಸೇವನೆ ಮಾಡಿ ನಶೆಯಲ್ಲಿ ಇರುವುದನ್ನು ಕಂಡು ನಾವು ಹತ್ತಿರ ಹೋಗಿ ವಿಚಾರಿಸಲಾಗಿ ತನ್ನ  ಹೆಸರು ಅಬ್ದುಲ ಸತ್ತಾರ ತಂದೆ ಇಕ್ಬಲ್ ಅಹ್ಮದ ವ:29 ವರ್ಷ ಜಾತಿ: ಮುಸ್ಲಿಂ ಉ: ಪ್ಲಂಬರ ಕೆಲಸ ಸಾ||  ಜಿಲಾಲವಾಡಿ ಕಲಬುರಗಿ. ಅಂತಾ ತಿಳಿಸಿದ್ದು ಆತನ ಬಾಯಿಂದ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಕೆಟ್ಟ ವಾಸನೆ ಬರುತ್ತಿದ್ದರಿಂದಾ ಆತನಿಗೆ ಠಾಣೆಗೆ 17:00 ಗಂಟೆಗೆ ಕರೆದುಕೊಂಡು ಬಂದು ಸದರಿಯವನ  ವೈದ್ಯಕೀಯ ತಪಾಸಣೆ ಕುರಿತು ಮಾನ್ಯ ಪಿ.ಐ ಸಾಹೇಬರು ಮಾದಕ ವ್ಯಸನಿಗೆ ವೈಧ್ಯಕೀಯ ಪರೀಕ್ಷೆ ಕುರಿತು ನಾನು ಮತ್ತು ಗುರುನಾಥ ಸಿಪಿಸಿ-843 ನೇಮಕ ಮಾಡಿದ್ದು ವೈಧ್ಯಕೀಯ ಪರೀಕ್ಷೆ ಕುರಿತು ಘನಾತೆ ಆರೋಗ್ಯ ಆಸ್ಪತ್ರೆ ಕಲಬುರಗಿ ರವರಲ್ಲಿ ಕರೆದುಕೊಂಡು ಹೋಗಿ ವೈಧ್ಯಕೀಯ ಪರೀಕ್ಷೆ ಮಾಡಿಸಿ ನಂತರ ದಿನಾಂಕ: 23-08-2022 ರಂದು 20:57 ಗಂಟೆಗೆ MULTI DRUG ONE STEP MULTI-LINE SCREEN TEST DEVICE(URINIE) RESULT=POSITIVE FOR BENZODIAZEPINE/THC/CANNABIS ಅಂತಾ ವೈಧ್ಯರು ವರದಿ ನೀಡಿರುತ್ತಾರೆ. ಕಾರಣ ಸದರಿ ಆರೋಪಿತನ  ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ ಸಲ್ಲಿಸಿದ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

  

 

ಬ್ರಹ್ಮಪೂರ ಪೊಲೀಸ್‌ ಠಾಣೆ:-  ದಿನಾಂಕ: 23-08-2022 ಬ ರಂದು ೦೭:೧೫ ಪಿಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಮಹ್ಮದ್ ಶಪೀಕ್ ಎಹೆಮದ್ ತಂದೆ ಅಬ್ದುಲ್ ಖಯುಮ್ ಚುಲ್‌ಬುಲ್ ವಯ:೨೨ವರ್ಷ ಜಾ:ಮುಸ್ಲಿಂ ಉ:ವಿದ್ಯಾರ್ಥಿ ಸಾ//ಮನೆ ನಂ 5-408/130/6/A ಕಮರ್ ಕಾಲೋನಿ ಕಲಬುರಗಿ ನಗರ. ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಪಿರ್ಯಾದಿ ಅರ್ಜಿ ನೀಡಿದರ ಸಾರಾಂಶವೇನೆAದರೆ ಹೊಂಡಾ ಎವೇಟರ್ ಮೋಟರ್ ಸೈಕಲ್ ನಂ KA-05-HQ-0436 ನನ್ನ ತಂದೆಯಾದ ಅಬ್ದುಲ್ ಖಯುಮ್ ಚುಲ್‌ಬುಲ್ ಇವರ ಹೆಸರಿನಲ್ಲಿದ್ದು ಅದನ್ನು ನಾನೇ ನಡೆಸುತ್ತೇನೆ ದಿನಾಂಕ: ೧೨/೦೮/೨೦೨೨ ರಂದು ಬೆಳಿಗ್ಗೆ ೧೧:೦೦ ಗಂಟೆ ಸುಮಾರಿಗೆ ಸದರಿ ಮೋಟಾರ್ ಸೈಕಲನ್ನು ತೆಗೆದುಕೊಂಡು ಕಲಬುರಗಿ ನಗರದ ಎಮ್.ಆರ್.ಎಮ್.ಸಿ ಕಾಲೇಜಿಗೆ ಬಂದು ವಾಹನ ನಿಲ್ಲಿಸುವ ಸ್ಥಳದಲ್ಲಿ ನನ್ನ ಮೋಟಾರ ಸೈಕಲ ನಿಲ್ಲಿಸಿ ಕಾಲೇಜ ಒಳಗಡೆ ಹೋಗಿ ಕ್ಲಾಸ್ ಮುಗಿಸಿಕೊಂಡು ಮರಳಿ ಮದ್ಯಾಹ್ನ ೦೧:೦೦ ಗಂಟೆ ಸುಮಾರಿಗೆ ಮರಳಿ ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ್ ಇರಲಿಲ್ಲಾ, ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲ ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ: 23 08.2022 ರಂದು 06:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀಮತಿ ಅನೀತಾ ಗಂಡ ಅನೀಲ್ ಪವಾರ ವಯ: 46 ವರ್ಷ ಜಾ: ಲಮಾಣಿ ಉ: ಮನೆಕೆಲಸ ಸಾ|| ಪ್ಲಾಟ ನಂ. 186 ಎನ್.ಜಿ.ಓ. ಕಾಲೋನಿ ಉದ್ಭವ ಆಂಜನೇಯ ಮಂದಿರ ಹತ್ತಿರ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ಗಂಡ ಅನೀಲ ಇವರು ಖಾಸಗಿ ಕೆಲಸ ಮಾಡಿಕೊಂಡು ಇರುತ್ತಾರೆ. ನಮಗೆ ಒಟ್ಟು 2 ಜನ ಹೆಣ್ಣು ಮಕ್ಕಳು ಮತ್ತು ಒಬ್ಬನೇ ಗಂಡು ಮಗನಿರುತ್ತಾನೆ. ನಮ್ಮ ಮಗ ವಿಶಾಲ ಮತ್ತು ಮಗಳು ಡಾ|| ವಂದನಾ ಇಬ್ಬರು ಕೆಲಸ ಮಾಡಿಕೊಂಡು ಇರುತ್ತಾರೆ. ಪ್ರಸಕ್ತ ಶ್ರಾವಣ ಮಾಸವಿದ್ದುದ್ದರಿಂದ ದಿನಾಂಕ:19.08.2022 ರಂದು ಶ್ರಾವಣ ಶುಕ್ರವಾರದ ನಿಮಿತ್ಯ ಮನೆಯಲ್ಲಿ ಮಹಾಲಕ್ಷ್ಮೀ ಪೂಜೆಯನ್ನು ಕೈಕೊಂಡಿದ್ದು ಆ ಕಾಲಕ್ಕೆ ಮನೆಯಲ್ಲಿ ಲಕ್ಷ್ಮೀ ಫೋಟೊಗೆ 2 ತೊಲೆ ಬಂಗಾರದ ಚೈನ ಹಾಕಿದ್ದು ಮತ್ತು ಎದರುಗಡೆ ನಗದು ಹಣ ರೂ. 48,000/- ಗಳನ್ನು ಇಟ್ಟಿರುತ್ತೇವೆ. ಮರುದಿವಸ ಶನಿವಾರ ಸಹ ಪೂಜೆ ಮಾಡಿದ್ದು ಇರುತ್ತದೆ. ಹೀಗಿದ್ದು ದಿನಾಂಕ:20.08.2022 ರಂದು ಎಂದಿನಂತೆ ರಾತ್ರಿ 10:00 ಗಂಟೆಗೆ ನಾನು, ನನ್ನ ಗಂಡ ಮತ್ತು ಮಕ್ಕಳು ಎಲ್ಲರೂ ಕೂಡಿಕೊಂಡು ಊಟಮಾಡಿ ಮಲಗಿರುತ್ತೇವೆ. ಮರುದಿವಸ ಬೆಳಿಗ್ಗೆ 06:00 ಗಂಟೆಗೆ ಎದ್ದು ನೋಡಲು ಮನೆಯ ಬಾಗಿಲ ಕೊಂಡಿ ತೆಗೆದಿದ್ದು ಕಂಡು ನಾನು ಗಾಬರಿಯಾಗಿ ಗಂಡನಿಗೆ ಎಬ್ಬಿಸಿ ನೋಡಲಾಗಿ ಲಕ್ಷ್ಮೀ ಪೂಜೆ ನಿಮಿತ್ಯ ದೇವರ ಮನೆಯಲ್ಲಿ ಫೋಟೊಗೆ ಹಾಕಿದ್ದ 2 ತೊಲೆ ಬಂಗಾರದ ಚೈನ ಅ||ಕಿ|| 60,000/- ಮತ್ತು ಎದರುಗಡೆ ಇಟ್ಟಿದ್ದ ನಗದು ಹಣ ರೂ. 48,000/- ಗಳನ್ನು ಹೀಗೆ ಒಟ್ಟು 1,08,000/- ಗಳ ಕಿಮ್ಮತ್ತಿನ ನಗದು ಹಣ ಮತ್ತು ಬಂಗಾರದ ಆಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ಗಂಡ ಮಕ್ಕಳೊಂದಿಗೆ ವಿಚಾರಿಸಿ ಇಂದು ತಡಮಾಡಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಸದರಿ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ವಸ್ತುಗಳನ್ನು ನಮಗೆ ಒದಗಿಸಿ ಕೊಡಲು ವಿನಂತಿ ಅಂತ ಇತ್ಯಾದಿಯಾಗಿ ಸಲ್ಲಿಸಿದ ಫಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ ಠಾಣೆ :-  ದಿನಾಂಕ: 23.08.2022 ರಂದು ಮಧ್ಯಾಹ್ನ 3.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶೇಖ ಅಜಮಲ್ ಗೋಲಾ ತಂದೆ ಜಮೀರ ಅಹ್ಮದ ಗೋಲಾ ವ:38 ವರ್ಷ ಉ:ಸಮಾಜ ಸೇವಕ & ಕಾರಪೊರೇಟರ ವಾರ್ಡ ನಂ.21  ಜಾ:ಮುಸ್ಲಿಂ ಸಾ:ಮ.ನಂ.6 ನ್ಯೂ ಜೇವರ್ಗಿ ರೋಡ ಅಂಬಾಭವಾನಿ ಗುಡಿ ಎದುರುಗಡೆ ಇಂಡಸ್ಟ್ರಿಯಲ ಎಸ್ಟೇಟ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಮರಕಜಿ ಸಿರತ್ ಕಮೀಟಿ ಗುಲಬರ್ಗಾ ಜಿಲ್ಲೆ ಕರ್ನಾಟಕ ಎಂಬ ಹೆಸರಿನ ಲೇಟರ ಪ್ಯಾಡನಲ್ಲಿ ಇಂಗ್ಲೀಷನಲ್ಲಿ ಗಣಕೀಕೃತ ಮಾಡಿದ ಫಿರ್ಯಾದಿ ಅರ್ಜಿಯನ್ನು ಹಾಜರ ಪಡಿಸಿದ್ದು ಸದರಿ ಫಿರ್ಯಾದಿ ಅರ್ಜಿಯ ಸಾರಾಂಶ  ಈ ಕೆಳಗಿನಂತಿರುತ್ತದೆ.

To,                                                                                            Date 23/08/2022                                             

The Police Commissioner

kalaburagi  city

Sir,

        Sub: Request to book BJP MLA, Raja Singh Gosha Mahal under UAPA along

                With Section 153-A, 153-B, 295 (A), 504, 505(1), 505(2) of the IPC for

                 Giving derogatory statement against prophet Mohammed SAW and 

                  Hurting the Sentiments of the Muslims

                                                  -00000-

        We as concerned  citizens do believe that the democracy of any country will remain intact till all the institutions perform their duties as per the constitution. Recent Comments/statements made by BJP MLA Raja Singh have surpassed his limits

         With reference to the above cited subject on 22nd August 2022, Monday. The Accuse BJP MLA is a Politican in Gosha Mahal Hyderabad who through  the social media platrom issued derogatory statement trying to defame the Muslim Community  and hurting the sentimenfs with intention to disturb the communal harmony in the entrie country, state and in the whole world which has defamed the largest democratic country in the world.

    As you are aware and have knowledge about how much and to what extent prophet mohammed SAW is respected in the whole world and in our country. Making such Statements by a responsible elected representative  is nothing  but to create Communal violence among the citizens of this country  we condemn his statement

  As we are constitutionally disciplined and harmony loving citizens of the country  we are writing this letter to you inspite of the statement being unaccepytable and the worst could happen,still we believe in the law of this country and hope that you will take strict action against the above said BJP MLA

       The above said BJP MLA is by history criminal who has too many criminal records/cases/ history and has been regularly issuing such Statements against communities citizens and the public of the state and country. Such people don’t have  the moral right to hold such a position elected by the people he should be disqualified by the BJP party and the primary membership of the party along with the post of the MLA

    We expected  the Members/elected representatives of the pariliament to take such moto decision in the house to pass a bill to amend  the law relating to indain Penal Code (IPC) 1861 of the code of the Criminal Procedure (CrPC)1973 to make it strong and More effective so that such people are punished with stringent imprisonment

   Hence,  We demand you these following

a)He should be booked under UAPA Section

b)He should be booked under 153-A, 153-B, 295 (A), 504, 505(1), 505(2) of the IPC

c)He should be restrained (TAD/PAAR) from entire Telangana State

  We  hope and belief that you will take this into consideration  and act upon it as soon as possible to prevail harmony and to maintain the law and order in the entire country

 

 Thanking You                                                                  Yours faithfully

                                                                                                     (Azmal Gola)

                                                                               R/o Plot No.6 New Jewargi Road

                                                                               Opp Ambabhavani Temple Industrial

                                                                               Estate Kalaburagi M.No.9986202257.

ಅಂತಾ ಕೊಟ್ಟ ವಗೈರೆ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ ಠಾಣೆ :-  ದಿನಾಂಕ 22/08/2022 ರಂದು ರಾತ್ರಿ 00-30 ಗಂಟೆಗೆ ಶ್ರೀ ವಿಶ್ವರಾಜ ತಂದೆ ಗುಂಡಪ್ಪ ಹೊಸಮನಿ ವಯಸ್ಸು 29 ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಅವರಾದ (ಬಿ) ಗ್ರಾಮ ತಾ:ಜಿ: ಕಲಬುರಗಿ  ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ,  ನಾನು, ವಿಶ್ವರಾಜ ತಂದೆ ಗುಂಡಪ್ಪ ಹೊಸಮನಿ ವಯಸ್ಸು 29 ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಅವರಾದ (ಬಿ) ಗ್ರಾಮ ತಾ:ಜಿ: ಕಲಬುರಗಿ ಈ ಮೂಲಕ ತಮಗೆ ದೂರು ಕೊಡುವದೆನೆಂದೆರೆ, ಇಂದು ದಿನಾಂಕ 22/08/2022 ರಂದು ಸಂಜೆ 06-40 ಗಂಟೆ ಸುಮಾರಿಗೆ ಕಲಬುರಗಿ ಹುಮನಾಬಾದ ರಿಂಗ ರೋಡಿನಲ್ಲಿ ಇದ್ದಾಗ ನಮ್ಮ ತಂದೆಯವರ ಪೋನ ನಂಬರ 9035184106 ನೇದ್ದರ ಮುಖಾಂತರ ಪೊಲೀಸ ಕಾನ್ಸಟೇಬಲ್ ಇವರು ಮಾತಾಡಿ ಈ ಪೋನವರು ಎನಾಗಬೇಕು ಅಂತಾ ವಿಚಾರಿಸಿದಾಗ ನಮ್ಮ ತಂದೆ ಗುಂಡಪ್ಪ ಇರುತ್ತಾರೆ ಎಂದು ತಿಳಿಸಿದಾಗ ಪೊಲೀಸ ಕಾನ್ಸಟೇಬಲ್ ಇವರು ನಿಮ್ಮ ತಂದೆ ಗುಂಡಪ್ಪ ಇವರು ಕಲಬುರಗಿ ನಗರದ ಬಾಂಡೆ ಬಜಾರ ಕಲಾಯಿ ಗಲ್ಲಿ ಯಲ್ಲಿ ಇರುವ ಸೆಂಟ್ರಲ್ ಲಾಡ್ಜನಲ್ಲಿ ರೂಮ ನಂಬರ 10 ರಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಎಂದು ಮಾಹಿತಿ ತಿಳಿಸಿದ ಮೇರೆಗೆ ಸಂಜೆ 07-00 ಗಂಟೆ ಸುಮಾರಿಗೆ ಸೆಂಟ್ರಲ್ ಲಾಡ್ಜಗೆ ಹೋಗಿ ನೋಡಲಾಗಿ ನಮ್ಮ ತಂದೆ ಗುಂಡಪ್ಪ ತಂದೆ ಶಿವರಾಯ ಹೊಸಮನಿ ಇವರು ಮೂರನೇ ಅಂತ್ತಸಿನಲ್ಲಿ ಇರುವ ರೂಮ ನಂಬರ 10 ರಲ್ಲಿ ಫ್ಯಾನಿನ ಛತ್ತಿನ ಕೊಂಡಿಗೆ ಹಗ್ಗ ಸಹಾಯದಿಂದ ನೇಣು ಹಾಕಿಕೊಂಡು ನೇತಾಡುತ್ತಿದ್ದ ಸ್ಥಿತಿಯಲ್ಲಿ ನನ್ನ ತಂದೆ ಮೃತ ದೇಹ ನೋಡಿದೆನು. ಸ್ವಲ್ಪ ಸಮುಯದಲ್ಲಿ ನಮ್ಮ ಕಾಕನ ಮಗ ಮಲ್ಲಿಕಾಜರ್ುನ ತಂದೆ ಭೋಗಲಿಂಗಪ್ಪ ಹೊಸಮನಿ ಮತ್ತು ಇತರರು ಸಂಬಂಧಿಕರು ಬಂದಿದ್ದರು.  ನನ್ನ ತಂದೆ ಗುಂಡಪ್ಪ ತಂದೆ ಶಿವರಾಯ ಹೊಸಮನಿ ವ;65 ವರ್ಷ ನಿವೃತ್ತ  ಎಫ.ಡಿ.ಎ. ಇರುತ್ತಾರೆ. ನಮ್ಮ ತಂದೆಯವರು ಮತ್ತು  ಅವರ ಗೆಳೆಯನಾದ ಎ.ಎ. ಗುನ್ನಾಪೂರೆ ಎಫ.ಡಿ.ಎ. ಇಬ್ಬರು ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಜೊತೆಗೂಡಿ ಬಸವರಾಜ ಸಾ: ಬೀದರ ಮತ್ತು ಮಾಹಾರಾಜ ತಂದೆ ಗಣಪತಿ ಪೂಜಾರಿ, ಶಾಸ್ತ್ರಿ ಮೂರು ಜನರ ಹತ್ತಿರ  ತಲಾ 10 ಲಕ್ಷ ರೂಪಾಯಿಗಳು  ಗುನ್ನಾಪೂರೆ ರವರು ಮಧ್ಯಸ್ಥಿಕೆ ವಹಿಸಿ ನಮ್ಮ ತಂದೆಗೆ ಕೊಡಿಸಿರುತ್ತಾರೆ. ನಮ್ಮ ತಂದೆಯವರ ಹೆಸರಿನಲ್ಲಿ ಇರುವ ತಾವರಗೇರಾ ಹೊಲ ಸವರ್ೆ 32/1 ರಲ್ಲಿ  09 ಎಕರೆ ಹೊಲ ಪ್ರತಿ ಎಕರೆ 4,20,000/- ರೂ.ಯಂತೆ ಒಟ್ಟು 37,80,000/- ರೂ. ಸೋಹೇಲ್ ಇವರಿಗೆ  ಮಾರಾಟ ಮಾಡಿದ್ದು ಅವರು 10,00,000/- ರೂ. ಕೊಟ್ಟು ಹೊಲ ರಜಿಸ್ಟ್ರೇಷನ ಮಾಡಿಕೊಂಡಿರುತ್ತಾರೆ. ಸೋಹೇಲ್ ಕೊಟ್ಟ  10,00,000/- ರೂ.ಯನ್ನು ಶಾಸ್ತ್ರಿಗೆ ಕೊಡಲು ಹೋದಾಗ  ಅವನು ನಮ್ಮ ತಂದೆ ಹೆದರಿಸಿ 11,60,000/- ರೂ. ತೆಗೆದು ಕೊಂಡಿರುತ್ತಾನೆ. ಬೀದರ ಬಸವರಾಜ ಅವರಿಗೆ 10,00,000/- ರೂ. ಹಣ ಕೊಡಬೇಕಾಗಿದ್ದು, ಜಯಶ್ರೀ ಇವರಿಗೆ ಮನೆ ಮಾರಾಟ ಮಾಡಿ ಅವರಿಂದ ಬೈಯನ ಪಡೆದ 5,00,000/- ರೂ.ಗಳು ಮತ್ತು ಬೇರೆಯವರ ಕಡೆಯಿಂದ 3,50,000/- ರೂ. ಹೀಗೆ ಒಟ್ಟು 8,50,000/- ರೂ. ಬೀದರ ಬಸವರಾಜ ಇವರಿಗೆ ಕೊಟ್ಟಿರುತ್ತೇವೆ.   ನಮ್ಮ ತಂದೆಯವರಿಗೆ ಪರಿಚಯದ ರಾಜಕುಮಾರ ತಂದೆ ಅಯ್ಯಪ್ಪ ಕುರಲೇ ಇವರ ಫೈನಾನ್ಸನಲ್ಲಿ 6,00,000/- ರೂ.ಗಳು ಸಾಲ ತೆಗೆದುಕೊಂಡು, ಬೇರೆಯವರ ಕಡೆಯಿಂದ 3,50,000/- ರೂ. ಪಡೆದುಕೊಂಡ ಸಾಲದ ಹಣ ಮರಳಿ ಕೊಟ್ಟಿರುತ್ತೇವೆ. ಉಳಿದ ನಮ್ಮ ಸಾಲಗೋಸ್ಕರ ತಾಜ ಸುಲ್ತಾನಪೂರ ರೋಡಿಗೆ ಇರುವ ಕಮಲ ನಗರ ಎದುರುಗಡೆ ಇರುವ ನನ್ನ ತಂದೆಯವರ ಹೆಸರಿನಲ್ಲಿ ಮನೆ  ನನ್ನ ಹೆಸರಿಗೆ ಮನೆ ಮಾಡಿರುತ್ತಾರೆ. ಸಾಲಗೋಸ್ಕರ ನಾವು ಅದನ್ನು ಮಾರಲು  ಸಿದ್ಧರಾಗಿದ್ದೇವು. ರಾಜಕುಮಾರ ಕುರಲೇ ಇವರು ಜಯಶ್ರೀ ಮಠಪತಿ ಎಂಬ ಹೆಸರಿನ  ಪಾಟರ್ಿ ತಂದಿದ್ದರು. 37,00,000/- ರೂ. ಮನೆ ಮಾರಾಟಕ್ಕೆ ಫೈನಲ ಆಗಿರುತ್ತದೆ. ಜಯಶ್ರೀ ಅವರು ಬೈಯನದ ರೂಪದಲ್ಲಿ 1,00,000/- ರೂ. ನಗದು ಹಣ ಕೊಟ್ಟಿರುತ್ತಾರೆ.  ನಮ್ಮ ಮನೆಯ ಎಲ್ಲಾ ಕಾಗದ ಪತ್ರಗಳು  ನೋಟರಿಯಾಗಿದ್ದು, ಬ್ಯಾಂಕಿನಲ್ಲಿ ಯಾವುದೇ ತರಹದ ಲೋನ ಕೊಡುತ್ತಿರಲಿಲ್ಲಾ.  ಜಯಶ್ರೀ ಮಠಪತಿ ಇವರು ರಾಜಕುಮಾರ ಕುರಲೇ ಇವರಿಗೆ 2,50,000/- ರೂ.ಗಳನ್ನು ಡಾಕುಮೆಂಟ್ ಮಾಡಲು ಕೊಟ್ಟಿರುತ್ತಾರೆ.  ಡಾಕುಮೆಂಟ ರಡಿ ಆದ ನಂತರ  ಸುಮಾರು ಒಂದು ವರ್ಷಗಳ ಕಾಲ ಜಯಶ್ರೀ ಮಠಪತಿ ಇವರಿಗೆ ನಮ್ಮ ಸಾಲದ ಕಿರಿಕಿರಿಗೋಸ್ಕರ ರಾಜಕುಮಾರ ಹೇಳಿದಂತೆ ಮನೆ ಖಾಲಿ ಮಾಡಿ ಜಯಶ್ರೀ ಇವರಿಗೆ ಕೊಟ್ಟಿರುತ್ತೇವೆ. ಜಯಶ್ರೀ ಇವರು  ನಮ್ಮ ಮನೆಯ ಮೇಲೆ ಲೋನ ಮಾಡಿಕೊಂಡು ನಮ್ಮ ತಂದೆಯವರು ಕೊಡಬೇಕಾದ ಎಲ್ಲಾ ಸಾಲವನ್ನು ತಾವೇ ಕೊಡುತ್ತೇವೆ ಎಂದು ಬರೆದುಕೊಟ್ಟಿರುತ್ತಾರೆ. ತದನಂತರ ಅವಳ ಹತ್ತಿರ ರಾಜಕುಮಾರ ಕುರಲೇ ಇವರು ಫೈನಾನ್ಸ ಮುಖಾಂತರ ಅವಳಿಗೆ 4,00,000/- ರೂ. ಕೊಟ್ಟಿರುತ್ತಾರೆ. ತದಾದನಂತರ ಸುಮಾರು 06 ತಿಂಗಳ ನಂತರ ರಾಜಕುಮಾರ ಕುರಲೇ ನಾವು 13,00,000/- ರೂ. ಕೊಡಬೇಕಿದ್ದು, ಅವರು ನಮ್ಮ ತಂದೆ ಜೊತೆಗೆ ಮಾತನಾಡಿ ಸರ್ ತಲೆ ಕೆಡಿಸಿಕೊಳ್ಳಬೇಡಿ ನೀವು ನಮಗೆ  ನಿಮ್ಮ ಮನೆ ನನಗೆ ರಜಿಸ್ಟರ ಮಾಡಿಕೊಡಿ ನಿಮ್ಮ ಎಲ್ಲಾ ಸಾಲವನ್ನು ಮನೆ ಮಾರಾಟ ಮಾಡಿ ನಾನೇ ಕೊಡುತ್ತೇನೆ ಎಂದು ಹೇಳಿದ್ದರಿಂದ ನಾವು ಅವರಿಗೆ ನಂಬಿ ನಮ್ಮ ಮನೆ ರಜಿಸ್ಟರ ಮಾಡಿಕೊಟ್ಟಿರುತ್ತೇವೆ. ರಾಜಕುಮಾರ ಕುರಲೇ ಇವರು  ಮೊದಲು ಹೇಳಿದಂತೆ  13,00,000/- ರೂ.ಗಳನ್ನು ಬಿಟ್ಟು  23,00,000/- ರೂ. ಕೊಟ್ಟರೆ ಮಾತ್ರ ನನ್ನ ಹೆಸರಿಗೆ ಇರುವ ನಿಮ್ಮ ಮನೆ ರಜಿಸ್ಟರ ಮಾಡಿಕೊಡುವುದಾಗಿ ತಿಳಿಸಿರುತ್ತಾರೆ.  ಮಾಹಾರಾಜ ತಂದೆ ಗಣಪತಿ ಪೂಜಾರಿ ಇತನು ನಮ್ಮ ತಂದೆಯವರಿಗೆ ಕೊಟ್ಟ 10,00,000/- ರೂ. ಹಣ ಕೊಡು ಅಂತಾ ಆಗ್ಗಾಗೆ  ಬಂದು ನಮ್ಮ ತಂದೆಯವರಿಗೆ ಹಣ ಮರಳಿ ಕೊಡುವಂತೆ ತ್ರಾಸ ಕೊಡುತ್ತಿದ್ದನು. ಸೋಹೇಲ್ ಎಂಬುವನು ಇನ್ನುಳಿದ ಕೊಡಬೇಕಾದ ಹಣ ಕೊಡದೇ ಸತಾಯಿಸುತ್ತಿದ್ದನು. ನಮ್ಮ ತಂದೆ ಗುಂಡಪ್ಪ ಇವರು ದಿನಾಂಕ 20/08/2022 ರಂದು ಬೆಳಿಗ್ಗೆ 10-00 ಗಂಟೆ ಸೆಂಟ್ರಲ ಲಾಡ್ಜಗೆ ಬಂದಿದ್ದು, ಲಾಡ್ಜ ಮ್ಯಾನೇಜರ ಇವರು ದಿನಾಂಕ 21/08/2022 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನೀರು ತರಲು ಕೆಳೆಗೆ ಬಂದು ನೀರು ತೆಗೆದುಕೊಂಡು ರೂಮಿನಿಂದ ಬಂದಿರುವುದಿಲ್ಲಾ ಎಂದು ಕೇಳಿ ಗೊತ್ತಾಗಿರುತ್ತದೆ. ನಮ್ಮ ತಂದೆ ಗುಂಡಪ್ಪ ದಿನಾಂಕ 21/08/2022 ರಂದು ರಾತ್ರಿ 8-30 ಗಂಟೆಯಿಂದ ದಿನಾಂಕ ದಿನಾಂಕ 22/08/2022 ರಂದು ಸಂಜೆ 06-00 ಗಂಟೆಯ ಅವಧಿಯಲ್ಲಿ ಈ ಮೇಲಿನ ಕಿರುಕುಳದಿಂದ ಮನ ನೊಂದು ಆತ್ಮಹ್ಯತೆ ಮಾಡಿಕೊಂಡಿರುತ್ತಾರೆ.  1)ಎ.ಎ.ಗುನ್ನಾಪೂರೆ ಎಫ.ಡಿ.ಎ. ನಿವೃತ್ತ 2)ಬಸವರಾಜ ಸಾ; ಬೀದರ 3)ಮಾಹಾರಾಜ ತಂದೆ ಗಣಪತಿ ಬೀದರ 4)ರಾಜಕುಮಾರ ತಂದೆ ಅಯ್ಯಪ್ಪ ಕುರಲೇ 5)ಜಯಶ್ರೀ ಮಠಪತಿ 6)ಸೋಹೇಲ್ 7)ಶಾಸ್ರ್ರೀ  8)ರಡ್ಡಿ ಇವರುಗಳು ನನ್ನ ತಂದೆಯ ಸಾವಿಗೆ ಕಾರಣರಾಗಿರುತ್ತಾರೆ. ಮತ್ತು ನಮ್ಮ ತಂದೆಯ ಡೆತ ನೋಟದಲ್ಲಿ ಬರೆದಿರುವುದನ್ನು ಪರಿಶೀಲಿಸಿ ಮತ್ತು  ಅದನ್ನು ಕೂಡಾ ಪರಿಗಣಿಸಿ  ಈ ಮೇಲಿನ ಎಲ್ಲಾ ಜನರ ವಿರುದ್ದ ಕಾನೂನಿನ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಈ ಅರ್ಜಿ ನಾನೇ ಟೈಪ ಮಾಡಿಸಿರುತ್ತೇನೆ. ಎಂದು ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 02-09-2022 05:43 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080