Feedback / Suggestions

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 20-07-2022  ರಂದು  ಮುಂಜಾನೆ ೯:೧೫ ಗಂಟೆಗೆ ಮನೆಯಿಂದ ಐ.ಟಿ.ಐ ಕಾಲೇಜಿಗೆ ಹೋಗುತ್ತೇನೆ ಅಂತಾ ಹೇಳಿ ಹೋದನು. ಅಂದಿನ ದಿವಸ ವಾಪಸ ಕಾಲೇಜಿನಿಂದ ಮನೆಗೆ ಬಂದಿರುವದಿಲ್ಲಾ. ಅಂದಿನ ದಿವಸ ನಾವು ಎಲ್ಲಾ ಕಡೆಗಳಲ್ಲಿ  ಹುಡುಕಾಡಿದ್ದೇವು. ಮತ್ತು ನಮ್ಮ ಸಂಬಂಧಿಕರ ಮನೆಗಳಿಗೆ ಫೋನ ಮಾಡಿ ವಿಚಾರಿಸಿದರು  ಅವನ ಇರುವಿಕೆಯ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲಾ ಅಂತಾ ಕಾಣೆಯಾದ ಬಗ್ಗೆ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ರಾಘವೇಂದ್ರ ನಗರ ಪೊಲೀಸ ಠಾಣೆ :- ಮಾನ್ಯ ತಾಲೂಕಾ ದಂಡಾಧಿಕಾರಿಗಳು ಮತ್ತು ತಹಸೀಲ್ದಾರರು ಕಲಬುರಗಿ ಇಂದು ದಿನಾಂಕ; 23/07/2022 ರಂದು 7.00 ಪಿ.ಎಮ್ ಕ್ಕೆ ಶ್ರೀಮತಿ ಚಂದ್ರಕಲಾ ಗಂಡ ಶಿವಶರಣ ಜಮಾದಾರ ವಯಃ 37 ವರ್ಷ ಜಾಃ ಕಬ್ಬಲೀಗ ಉಃ ಮನೆ ಕೆಲಸ ಸಾಃ ಗಂಗಾ ನಗರ ಕಲಬುರಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಹಾಜರಪಡಿಸಿದ್ದರ ಸಾರಾಂಶವೇನೆಂದರೆ ನಾನು ಗಂಗಾ ನಗರ ಕಲಬುರಗಿ ನಿವಾಸಿತಳಿದ್ದು ನಮ್ಮ  ತಂದೆಗೆ ನಾವು 5 ಜನ ಮಕ್ಕಳು ಅದರಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಮೂರು ಜನ ಹೆಣ್ಣುಮಕ್ಕಳು ಇರುತ್ತೇವೆ. ಹುಲಕಂಟಿ  ಈತನು 3ನೇಯವನಾಗಿರುತ್ತಾನೆ. ಈತನಿಗೆ ಮದುವೆಯಾಗಿದ್ದು 2 ಮಕ್ಕಳು ಇದ್ದು ಅದರಲ್ಲಿ ಒಬ್ಬ ಮಗಳು ಮತ್ತು ಒಬ್ಬ ಮಗ ಇರುತ್ತಾನೆ. ಈತನ ಮಗಳಾದ ಗೌರಮ್ಮ ಇವಳು ಬೇರೆ ಹುಡುಗನ ಜೊತೆ ಓಡಿ ಹೋಗಿ ಮದುವೆಯಾಗಿದ್ದು ಮತ್ತು ಹೆಂಡತಿಯಾದ ಭಾಗೀರಥಿ ಇವಳು ಸಹ ಬಿಟ್ಟು ತವರು ಮನೆಗೆ ಹೋಗಿದ್ದರಿಂದ ನನ್ನ ಅಣ್ಣನಾದ ಹುಲಕಂಟಿ ಈತನು ಮನನೊಂದು ಹುಚ್ಚನಂತೆ ವರ್ತಿಸುತ್ತಾ ಬಂದಿರುತ್ತಾನೆ. ಈ ನಡುವೆಯು ಸಹ ನಾವು ಆಸ್ಪತ್ರೆಗೆ ತೋರಿಸುವಷ್ಟರಲ್ಲಿಯೇ ಇಂದು ದಿನಾಂಕ; 23/07/2022 ರಂದು ಮುಂಜಾನೆ ಮನೆಯಿಂದ ಹೊರಗೆ ಹೋದವನು ಸಾಯಂಕಾಲ 6.00 ಗಂಟೆಯ ಸುಮಾರಿಗೆ ಈದಗಾ ಮೈದಾನದ ಎದುರಗಡೆ ಇರುವ ಪೀರ ಜನ್ ಜಾನೆ ದರ್ಗಾದ ಹತ್ತಿರ ಒಂದು ಗಿಡಕ್ಕೆ ನೇಣು ಹಾಕಿಕೊಂಡಿರುವ ಬಗ್ಗೆ ನಮಗೆ ಗೊತ್ತಾಗಿದ್ದರಿಂದ ನಾವು ಹೋಗಿ ನೋಡಿದಾಗ ನನ್ನ ಅಣ್ಣನಾದ ಹುಲಕಂಟಿ ಈತನು ನೇಣು ಹಾಕಿಕೊಂಡು ಮೃತಪಟ್ಟಿದ್ದು ನಿಜವಿರುತ್ತದೆ.ಕಾರಣ ನನ್ನ ಅಣ್ಣನಾದ ಹುಲಕಂಟಿ ತಂದೆ ಅಂಬಾಜಿ ಜಮಾದಾರ ವಯ; 45 ವರ್ಷ ಉ; ಗೌಂಡಿ ಕೆಲಸ ಜಾ; ಕಬ್ಬಲಿಗ ಸಾ; ಗಂಗಾ ನಗರ ಕಲಬುರಗಿ ಇತನು ತನ್ನ ಹೆಂಡತಿ ಮಕ್ಕಳ ಬಗ್ಗೆ ಬೇಜಾರು ಮಾಡಿಕೊಂಡು ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು  ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಅಣ್ಣನ  ಸಾವಿನಲ್ಲಿ ಯಾವುದೇ ರೀತಿ ಯಾರ ಮೇಲೆಯೂ ಸಂಶ ಇರುವದಿಲ್ಲ. ಆದ್ದರಿಂದ ಮಾನ್ಯರವರು ನನ್ನ ಅಣ್ಣನ ಸಾವಿನ ಬಗ್ಗೆ ಮುಂದಿನ ಕಾನೂನು ಕ್ರಮ ಜರಗಿಸಲು ವಿನಂತಿ ಅಂತ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ್‌ ಠಾಣೆ :-  ದಿನಾಂಕ:23-07-2022  ರಂದು ಬೆಳಗ್ಗೆ ೧೦ ಗಂಟೆಗೆ ಫಿಯರ್ಾದಿ ವಿಜಯಕುಮಾರ ತಂದೆ ದತ್ತಾತ್ರೇಯ ಅವರಾದಿ ವಯ:೫೬ ವರ್ಷ‍್ಷ ಉ: ಪೆಟ್ರೋಲ್ ಪಂಪ ಮಾಲೀಕರು ಜಾತಿ:ಮಾದಿಗ (ಎಸ್.ಸಿ) ಸಾ:ಬಾಪು ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರ ಸಾರಾಂಶವೇನೆಂದರೆ, ರಾಷ್ಟ್ರೀಯ ಹೆದ್ದಾರಿ ೫೦ ಗೆ ಹೊಂದಿಕೊಂಡು ಫರಹತಾಬಾದ ಬಸ್ ನಿಲ್ದಾಣದ ಹತ್ತಿರ ಶ್ರೀ ತ್ರಿಮೂರ್ತಿ ಅಟೋಮೊಬೈಲ್ಸ್ ಹೆಚ್ಪಿಸಿಎಲ್ ಪೆಟ್ರೋಲ್ ಪಂಪ ಹೊಂದಿರುತ್ತೆನೆ. ನನ್ನ ಪೆಟ್ರೋಲ ಪಂಪದಲ್ಲಿ ಮಂಜುನಾಥ ತಂದೆ ಬಸವರಾಜ ತಳವಾರ ಅಂತಾ ಮ್ಯಾನೇಜರ ಕೆಲಸ ಮಾಡುತ್ತಿದ್ದಾನೆ. ದಿನಾಂಕ:೨೨.೦೭.೨೦೨೨ ರಂದು ಬೆಳಗ್ಗೆ ೭.೩೦ ಗಂಟೆಯ ಸುಮಾರಿಗೆ ನನಗೆ ನಮ್ಮ ಮ್ಯಾನೇಜರನಾದ ಮಂಜುನಾಥರವರು ಫೊನ್ನ ಮಾಡಿ ತಿಳಿಸಿದ್ದೇನೆಂದರೆ, ನಾನು ದಿನಾಂಕ: ೨೧.೦೭.೨೦೨೨ ರಂದು ರಾತ್ರಿ ೧೧ ಗಂಟೆಯ ವರೆಗೂ ನಮ್ಮ ಪೆಟ್ರೋಲ್ ಪಂಪದಲ್ಲಿ ಎಚ್ಚರ ಇದ್ದು ಅಲ್ಲೆ ಮಲಗಿದ್ದು, ದಿನಾಂಕ: ೨೨.೦೭.೨೦೨೨ ರಂದು ಬೆಳಗ್ಗೆ ೭ ಗಂಟೆಯ ಸುಮಾರಿಗೆ ಎದ್ದು ಡಿಪ್ ಚೆಕ್ ಮಾಡಿದಾಗ ಸ್ಟಾಕ ಕಡಿಮೆ ತೋರಿಸಿದರಿಂದ , ಡಿಎಸ್ಆರ್ ರೆಜಿಸ್ಟರನಲ್ಲಿ ಇದ್ದಿದ್ದಕ್ಕೂ ಮೀಟರ ರಿಡಿಂಗ ಹಾಗೂ ಡಿಪ್ ಸೆಲ್ಸ್ಗೆ ಸುಮಾರು ೨೦೦೦ ಲೀಟರ ಡಿಸೇಲ್ ವ್ಯತ್ಯಾಸ ಕಂಡು ಬರುತ್ತಿದೆ ಅಂತಾ ತಿಳಿಸಿದ್ದರಿಂದ, ನಾನು ಬೆಳಗ್ಗೆ ೯ ಗಂಟೆಗೆ ನನ್ನ ಪಂಪಗೆ ಬಂದು ಸೆಲ್ಸ್ ರೆಜಿಸ್ಟರ ಮತ್ತು ಟ್ಯಾಂಕ್ ಚೆಕ್ ಮಾಡಿದಾಗ ಸುಮಾರು ೨೨೬೩ ಲೀಟರ ಡಿಸೆಲ್ ಅ:ಕಿ: ೧,೯೮.೫೧೦ ರೂ. ಮೌಲ್ಯದ ಡೀಸೆಲ್ ಕಳ್ಳತನವಾಗಿದ್ದು ಕಂಡು ಬಂದಿರುತ್ತದೆ. ಕೆಲವು ದಿವಸಗಳಿಂದ ಪೆಟ್ರೋಲ್ ಪಂಪಗೆ ಅಳವಡಿಸಿದ ಸಿಸಿ ಕ್ಯಾಮರ ಕೆಟ್ಟಿರುತ್ತವೆ. ದಿನಾಂಕ:೨೧.೦೭.೨೦೨೨ ರಂದು ರಾತ್ರಿ ೧೧ ಗಂಟೆಯಿಂದ ದಿನಾಂಕ: ೨೨.೦೭.೨೦೨೨ ರಂದು ಬೆಳಗ್ಗೆ ೭ ಗಂಟೆಯ ಮಧ್ಯೆದ ಅವಧಿಯಲ್ಲಿ ಯಾರೋ ಕಳ್ಳರು ಸುಮಾರು ೨೨೬೩ ಲೀಟರ ಡಿಸೆಲ್ ಅ:ಕಿ: ೧,೯೮.೫೧೦ ರೂ.ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾವುಗಳು ಕಂಪನಿಗೆ ಫೊನ್ನ ಮಾಡಿ ವಿಷಯ ತಿಳಿಸಿ ತಡವಾಗಿ ಬಂದು ದೂರು ಸಲ್ಲಿಸುತ್ತಿದ್ದೆನೆ. ಕಾರಣ ಸದರಿ ಡೀಸೆಲ್ ಕಳ್ಳತನ ಮಾಡಿಕೊಂಡು ಹೋದ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿಸಿಕೊಳ್ಳುತ್ತೆನೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಅಶೋಕ ನಗರ ಪೊಲೀಸ್ ಠಾಣೆ :- ದಿನಾಂಕ:23-07-2022  ರಂದು ೦೩:೦೦ ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ವಿಜಯಕುಮಾರ ತಂದೆ ರುದ್ರಪ್ಪ ಬುಗಡಿ ವಯ: ೪೧ ವರ್ಷ ಜಾ: ಎಸ್.ಸಿ(ಹೊಲೆಯ) ಉ: ಖಾಸಗಿ ಕೆಲಸ ಸಾ|| ಮನೆ.ನಂ. ೨೦೩ ವಿದ್ಯಾ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಬೆಂಗಳೂರಿನಲ್ಲಿ ಖಾಸಗಿ ಕೆಲಸ ಮಾಡಿಕೊಂಡು ಇರುತ್ತೇನೆ. ನಮ್ಮದೊಂದು ಸ್ವಂತ ಮನೆ ಕಲಬುರಗಿಯ ವಿದ್ಯಾ ನಗರದಲ್ಲಿ ಇರುತ್ತದೆ. ನಮ್ಮ ಮನೆಯ ಒಂದು ಭಾಗದಲ್ಲಿ ನಮ್ಮ ತಮ್ಮ ಆನಂದ ಮತ್ತು ಇನ್ನೊಂದು ಭಾಗದಲ್ಲಿ ನಾನು ಇರುತ್ತೇನೆ. ಸದರಿ ಮನೆಯು ನಮ್ಮ ತಾಯಿ ರುದ್ರಮ್ಮ ಇವರ ಹೆಸರಿನಿಂದ ಇರುತ್ತದೆ. ನಾನು ಕಳೆದ ೩ ತಿಂಗಳ ಹಿಂದೆ ಬೆಂಗಳೂರಿಗೆ ಹೋಗುವಾಗ ಮನೆಯಲ್ಲಿ  ಟಿ.ವಿ., ಫ್ರೀಜ್, ಗ್ಯಾಸ ಸಿಲೆಂಡರ ಮತ್ತು ಮನೆಯ ಮೂಲ ದಾಖಲಾತಿಗಳನ್ನು ಇಟ್ಟು ಹೋಗಿರುತ್ತೇನೆ.  ಹೀಗಿದ್ದು ದಿನಾಂಕ:೧೫.೦೭.೨೦೨೨ ರಂದು ಬೆಂಗಳೂರಿನಿಂದ ಕಲಬುರಗಿಗೆ ಬಂದು ಸಾಯಂಕಾಲ ೦೬:೩೦ ಗಂಟೆಗೆ ಮನೆಗೆ ಹೋಗಿ ಮನೆಯ ಬೀಗ ತೆಗೆದು ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿ ಇಟ್ಟಿದ್ದ ೧) ಒಂದು ಎಲ್.ಇ.ಡಿ. ಟಿ.ವಿ ಅ.ಕಿ. ೫,೦೦೦/-  ೨) ಒಂದು ಎಲ್.ಜಿ. ಕಂಪನಿಯ ಫ್ರೀಡ್ಜ   ಅ.ಕಿ. ೫,೦೦೦/-೩) ಒಂದು ಗ್ಯಾಸ ಸಿಲೇಂಡರ ಅ.ಕಿ. ೧,೦೦೦/- ಮತ್ತು ೪) ಮನೆಯ ಮೂಲ ದಾಖಲಾತಿಗಳು ಕಳ್ಳತನ ಆಗಿರುತ್ತವೆ. ಮೇಲೆ ನಮೂದಿಸಿದ ವಸ್ತುಗಳನ್ನು ಮತ್ತು ದಾಖಲಾತಿಗಳನ್ನು ನಮ್ಮ ತಮ್ಮನಾದ  ಆನಂದ ಬುಗಡಿ, ಅವನ ಹೆಂಡತಿ ವೀಣಾ ಮತ್ತು ಅವನ ಸ್ನೇಹಿತ ರಾಘವೇಂದ್ರ ಸೂಕೆ ಇವರುಗಳೆ ದಿನಾಂಕ:೨೦.೦೪.೨೦೨೨ ರಂದು ಸಾಯಂಕಾಲ ೦೭:೦೦ ಪಿ.ಎಂ. ದಿಂದ ದಿನಾಂಕ:೧೫.೦೭.೨೦೨೨ ರ ೦೬:೩೦ ಪಿ.ಎಂ. ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ನನಗೆ ಅನುಮಾನ ಇರುತ್ತದೆ. ಕಾರಣ  ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಮಾನ್ಯರಲ್ಲಿ ವಿನಂತಿ ಅದೆ ಅಂತ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.‌

 

ಸಂಚಾರಿ ಪೊಲೀಸ್‌ ಠಾಣೆ -2  :-  ದಿನಾಂಕ 23-07-2022  ರಂದು ಮಧ್ಯಾಹ್ನ ೧೨:೩೦ ಗಂಟೆಗೆ ಶ್ರೀ. ಶರಣಗೌಡ ತಂದೆ ಉಮಾರಾವ ಪೊಲೀಸ್ ಪಾಟೀಲ ವಯಃ ೪೫ ವರ್ಷ ಜಾತಿಃ ಲಿಂಗಾಯತ ಉಃ ಖಾಸಗಿ ಕೆಲಸ ಸಾಃ ಶರಣಸಿರಸಗಿ ತಾ.ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೆನೆಂದರೆ, ದಿನಾಂಕ ೧೧/೦೭/೨೦೨೨ ರಂದು ನಮ್ಮೂರಿನ ಸೀಮೆಯ ಅಫಜಲಪೂರ ರೋಡಿನ ದರ್ಶನ ಧಾಬಾದ ಎದುರುಗಡೆ ಒಬ್ಬ ಅಪರಿಚಿತ ಗಂಡು ಮನುಷ್ಯ ಅಂದಾಜು ವಯಃ ೪೫-೪೮ ವರ್ಷ ಈತನು ರೋಡಿನ ಎಡಬದಿಯಿಂದ ಶರಣಸಿರಡಗಿ, ಕಲಬುರಗಿ ಕಡೆಗೆ ನಡೆದುಕೊಂಡು ಬರುವಾಗ ರಾತ್ರಿ ೭:೩೦ ಗಂಟೆ ಸುಮಾರಿಗೆ ಹಿಂದುಗಡೆ ರೋಡಿನಿಂದ ಯಾವುದೊ ಒಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಆತನ ತಲೆಯ ಭಾಗಕ್ಕೆ, ಬಲಭಾಗದ ಎದೆಯ & ಭುಜದ ಭಾಗಕ್ಕೆ, ಕಿವಿಯ ಹಿಂಭಾಗದಲ್ಲಿ, ಎಡಗೈ ಮುಂಗೈ ಹತ್ತೀರ ಭಾರಿಗಾಯವಾಗಿ ಬೆಹೋಶ ಸ್ಧಿತಿಯಲ್ಲಿದ್ದಾಗ ಪ್ರವೀಣ ತಂದೆ ಅಣ್ಣಾರಾವ ಬಿರಾದಾರ ಇವರು ೧೦೮ ಅಂಬುಲೇನ್ಸಗೆ ಫೋನ್ ಮಾಡಿ ಈತನಿಗೆ ಉಪಚಾರ ಕುರಿತು ಕಳುಹಿಸಿಕೊಡುವ ವ್ಯವಸ್ಧೆ ಮಾಡಿದ್ದು, ೧೦೮ ಅಂಬುಲೇನ್ಸದ ಸಿಬ್ಬಂದಿಯವರಾದ ರಂಜೀತ ತಂದೆ ಶಿವರಾಯ ಸಿಂಗೆ, ಲಕ್ಪತಿ ತಂದೆ ಹುಲೇಪ್ಪಾ ಹೆರೂರ ಇವರು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ನಾನು ಕೂಡಾ ಆತನ ಭಾವಚಿತ್ರವನ್ನು ಊರಲ್ಲಿ ಎಲ್ಲಾ ಕಡೆ ತೊರಿಸಿ ಪತ್ತೆಯ ಬಗ್ಗೆ ವಿಚಾರಿಸಿದ್ದು, ಆದರೆ ಆತನು ಯಾರೆಂಬುವುದು ಗೊತ್ತಾಗಿರುವುದಿಲ್ಲಾ. ಹಾಗೆ ಆತನು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಅಪರಿಚಿತನಾಗಿಯೆ ಹೆಸರು ವಿಳಾಸ ಗೊತ್ತಿಲ್ಲದೆ ಹಾಗೆ ಬೆಹೋಶ ಸ್ಧಿತಿಯಲ್ಲಿ ಉಪಚಾರ ಪಡೆಯುವಾಗ ನಿನ್ನೆ ದಿನಾಂಕ ೨೨/೦೭/೨೦೨೨ ರಂದು ರಾತ್ರಿ ೧೦:೨೮ ಗಂಟೆ ಸುಮಾರಿಗೆ ಮೃತ ಪಟ್ಟಿರುವ ಬಗ್ಗೆ ನನಗೆ ಗೊತ್ತಾಗಿರುತ್ತದೆ. ಆತನು ಉದ್ದನೆಯ ಮುಖ, ನೇರ ಮೂಗು, ಸಾದಾಕಪ್ಪು ಬಣ್ಣ, ಕಪ್ಪು & ಬಿಳಿ ಮಿಸೆ ಹಾಗು ದಾಟಿ, ಅಂದಾಜು ೫-೬ ಎತ್ತರ ಅದವನಿರುತ್ತಾನೆ.  ಕಾರಣ ಅಪರಿಚಿತ ಗಂಡು ಮನುಷ್ಯ ಅಂದಾಜು ವಯಃ ೪೫-೪೮ ವರ್ಷದವನು ರಸ್ತೆ ಅಪಘಾತದಲ್ಲಿ ಗಾಯಗೊಂಡು ಉಪಚಾರ ಪಡೆಯುತ್ತಾ ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು, ಆತನ ಹೆಸರು & ವಿಳಾಸ ಪತ್ತೆ ಮಾಡುವುದು ಹಾಗು ಆತನಿಗೆ ಅಪಘಾತ ಪಡಿಸಿದ ವಾಹನ & ಚಾಲಕ ಯಾರೆಂಬುವುದನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೆಕು ಆತನು ಅಪರಿಚಿತನಾಗಿರುವುದರಿಂದ ಯಾರು ಮುಂದೆ ಬರದಕ್ಕೆ ನಾನೆ ಬಂದು ಮುಂದಿನ ಕ್ರಮಕ್ಕಾಗಿ ಈ ಫಿರ್ಯಾದಿಯನ್ನು ನೀಡಿರುತ್ತೆನೆ ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ 23-07-2022  ರಂದು ರಾತ್ರಿ ೮-೪೫ ಗಂಟೆ ಸುಮಾರಿಗೆ ಮೃತ ಸಿದ್ದಣ್ಣಾ ಇವರು ಕಡಣಿ ಗ್ರಾಮದ ಉಮೇಶ ಇವರ ಜಮೀನಿನಲ್ಲಿ ಅವರ ಟ್ಯಾಕ್ಟರನಿಂದ ತೊಗರಿ ಬಿತ್ತನೆ ಕುರಿತು ಉಮೇಶ ಇವರ ಹೊಲಕ್ಕೆ ಹೋಗಿ ವಾಪಸ್ಸ ಸಾಯಂಕಾಲ ಸಮಯದಲ್ಲಿ ಕಡಣಿ ಗ್ರಾಮಕ್ಕೆ ಹೋಗುವ ಕುರಿತು ಸಿದ್ದಣ್ಣಾ ಇತನು ಉಮೇಶ ಇವರ ಹೊಲದ ಕಡೆಯಿಂದ ಟ್ಯಾಕ್ಟರ ವಾಹನವನ್ನು ಚಲಾಯಿಸಿಕೊಂಡು ಬರುವ ಕುರಿತು ಟ್ಯಾಕ್ಟರ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಾಗಣ್ಣಾ ಮಾಸ್ಟರ ಮನೆಯ ಎದುರುಗಡೆ ಬರುವ ಲಂಡೆನ ಹಳ್ಳಾ ಹತ್ತೀರ ಟ್ಯಾಕ್ಟರವಾಹನವನ್ನು ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಹೋಗಿ ರೋಡ ಮೇಲೆ ಪಲ್ಟಿ ಮಾಡಿ ಅಪಘಾತ ಮಾಡಿ ಹಳ್ಳದ ನೀರಿನ ರಬಸದಲ್ಲಿ ಸಿದ್ದಣ್ಣ ಮತ್ತು ಉಮೇಶ ಇಬ್ಬರೂ ಟ್ಯಾಕ್ಟರ ಸಮೇತ ಹರಿದಕೊಂಡು ಹೋಗಿ ಉಮೇಶ ಇತನಿಗೆ ಸಣ್ಣ ಪುಟ್ಟಗಾಯಗಳಾಗಿದ್ದು ಸಿದ್ದಣ್ಣ ಇವರು ಗಾಯ ಹೊಂದಿ ಮೃತಪಟ್ಟಿದ್ದು ಇರುತ್ತದೆ. 

 

Last Updated: 01-08-2022 04:14 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080