ಅಭಿಪ್ರಾಯ / ಸಲಹೆಗಳು

  ಚೌಕ ಪೊಲೀಸ್ ಠಾಣೆ :-  ದಿನಾಂಕ:23-05-2022  ರಂದು ಸಾಯಂಕಾಲ ೧೮.೩೦ ಗಂಟೆಗೆ ನಮ್ಮ ಠಾಣೆಯ ಶ್ರೀ ಬಸವರಾಜ ಪಿಎಸಐ(ಕಾ&ಸು) ಚೌಕ ಪೊಲೀಸ ಠಾಣೆ ಕಲಬುರಗಿ ರವರು ಮಟಕಾ ಜೂಜಾಟ ನಿರತ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಗೂ  ಮಟಕಾ ಜೂಜಾಟ ದಾಳಿ ಮಾಡಿದ  ಸರಕಾರಿ ತರ್ಪೇ  ದೂರು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ತಮ್ಮ ಸರಕಾರಿ ತರ್ಪೇ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ ನಾನು ಬಸವರಾಜ ಪಿಎಸಐ(ಕಾ&ಸು) ಚೌಕ ಪೊಲೀಸ ಠಾಣೆ ಕಲಬುರಗಿ ನಗರ ಸರಕಾರಿ ತರ್ಪೇಯಾಗಿ ವರದಿ ಸಲ್ಲಿಸುವುದೆನೆಂದರೆ, ಇಂದು ದಿನಾಂಕ:೨೩.೦೫.೨೦೨೨ ರಂದು ಸಾಯಂಕಾಲ ೧೬.೩೦ ಗಂಟೆ ಸುಮಾರಿಗೆ ನಾನು ಠಾಣೆಯ ಹುಸೇನಬಾಷಾ ಎಎಸಐ, ಸೈಯ್ಯದ ತೌಸೀಫ ಹುಸೇನ ಸಿಪಿಸಿ ೧೯೬, ಮೋಸಿನ ಸಿಪಿಸಿ ೨೯೯  ರವರೊಂದಿಗೆ ನೆಹರುಗಂಜ ಹತ್ತಿರ ಪೆಟ್ರೋಲಿಂಗ ಕರ್ತವ್ಯದ ಮೇಲಿದ್ದಾಗ ನನಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ ಕಲಬುರಗಿ ನಗರದ ಹುಮನಾಬಾದ ರೋಡಿಗೆ ಇರುವ ರಿಲಾಯನ್ಸ ಪೆಟ್ರೋಲ ಪಂಪ ಹತ್ತಿರ ಸರ‍್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದುಕೊಂಡು ೧ ರೂಪಾಯಿಗೆ ೮೦ ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಗೆ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ನಾನು ನಮ್ಮ ಠಾಣೆಯ ಮೇಲಾಧಿಕಾರಿಗಳಿಗೆ ಸದರಿ ವಿಷಯವನ್ನು ತಿಳಿಸಿ  ಅವರ ಮಾರ್ಗದರ್ಶನದಂತೆ ಸದರಿ ಸ್ಥಳದ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಹುಸೇನಬಾಷಾ ಎಎಸಐ, ಸೈಯ್ಯದ ತೌಸೀಫ ಹುಸೇನ ಸಿಪಿಸಿ ೧೯೬, ಮೋಸಿನ ಸಿಪಿಸಿ ೨೯೯  ಹಾಗೂ ಇಬ್ಬರು ಪಂಚರಾದ ೧) ಶ್ರೀ ಶರಣಪ್ಪಾ ತಂದೆ ಹಣಮಂತಪ್ಪ ಡೋರನಳ್ಳಿ ವ:೫೨ ವರ್ಷ ಉ:ಗೌಂಡಿ ಕೆಲಸ ಜಾ:ಕಬ್ಬಲೀಗ ಸಾ:ಯಲ್ಲಮ್ಮ ಗುಡಿಯ ಹತ್ತಿರ ಗಂಗಾ ನಗರ ಕಲಬುರಗಿ ೨) ಶ್ರೀ ಮಹಾದೇವ ತಂದೆ ಶ್ರೀಪತರಾವ ಮೇತ್ರೆ ವ:೩೨ ವರ್ಷ ಉ:ಕುಂಬಾರ ಕೆಲಸ ಜಾ:ಗೀಸಾಡಿ ಸಾ:ಸಿಟಿ ಬಸ್ಟ್ಯಾಂಡ ಎದುರುಗಡೆ ಜೋಪಡ ಪಟ್ಟಿ ಕಲಬುರಗಿ ಇವರನ್ನು ನೆಹರು ಗಂಜ ಹತ್ತಿರ ಸಾಯಂಕಾಲ ೧೬.೪೫ ಗಂಟೆಗೆ ಬರಮಾಡಿಕೊಂಡು ಅವರಿಗೆ ಮೇಲಿನ ವಿಷಯ ತಿಳಿಸಿ ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ತಿಳಿ ಹೇಳಿ ನಂತರ ನಾವು ಮಾಡುವ ದಾಳಿಯ ಕಾಲಕ್ಕೆ ಹಾಜರ ಇದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡು ಅದಕ್ಕೆ ಅವರು ಒಪ್ಪಿಕೊಂಡಿದ್ದು ನಂತರ ನಾವೆಲ್ಲರೂ ೧೭.೦೦ ಪಿಎಂಕ್ಕೆ  ಹುಮನಾಬಾದ ರೋಡಿಗೆ ಇರುವ ರಿಲಾಯನ್ಸ ಪೆಟ್ರೋಲ ಪಂಪ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ರಿಲಾಯನ್ಸ ಪೆಟ್ರೋಲ ಪಂಪ ಹತ್ತಿರ ರೋಡಿಗೆ ಹೋಗಿ ಬರುವ ಸರ‍್ವಜನಿಕರಿಂದ ೧ ರೂಪಾಯಿ ೮೦ ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಗೆ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಚೀಟಿಯ ಮೇಲೆ ಬರೆದುಕೊಳ್ಳುವುದನ್ನು ಖಚಿತ ಪಡಿಸಿಕೊಂಡು ನಾವೆಲ್ಲರೂ ಒಮ್ಮೇಲೆ ಎಲ್ಲರು ಸುತ್ತು ಒರೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ ವ್ಯಕ್ತಿಯ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಂಡಿದ್ದು ಆತನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ೧) ರಾಜೇಶ ತಂದೆ ದತ್ತಾತ್ರೇಯ ಕನಕನ ವ:೪೬ ವರ್ಷ  ಉ:ಹೋಲ್ ಸೇಲ್ ಬಾಂಡೆ ಅಂಗಡಿಯಲ್ಲಿ ಕೆಲಸ  ಜಾ:ಮುನ್ನೂರ ರೆಡ್ಡಿ ಸಾ:ಅಂಬಾಭವಾನಿ ಗುಡಿಯ ಹತ್ತಿರ ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗಶೋಧನೆ ಮಾಡಲಾಗಿ ಆತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ೧) ನಗದು ಹಣ ೨೨೭೦/-ರೂ  ೨) ಒಂದು ಬಾಲ ಪೇನ್  ೩) ಒಂದು ಮಟಕಾ ನಂಬರ ಬರೆದ ಚೀಟಿ ಆರೋಪಿತನಿಂದ ದೊರೆತಿದ್ದು ಇವುಗಳನ್ನು ಪಂಚರ ಸಮಕ್ಷಮದಲ್ಲಿ ಸಾಯಂಕಾಲ ೧೭.೦೫ ಪಿಎಂದಿಂದ ೧೮.೦೫ ಪಿಎಂದ ಅವಧಿಯಲ್ಲಿ ಜಪ್ತಿ ಪಂಚನಾಮೆಯನ್ನು ಬರೆದುಕೊಂಡು ಸದರಿ ಮುದ್ದೇಮಾಲಿಗೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಅವುಗಳನ್ನುಕೇಸಿನ ಮುಂದಿನ ಪುರಾವೆಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡೆನು. ನಂತರ ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ಒಬ್ಬ ಆರೋಪಿತನೊಂದಿಗೆ ಮರಳಿ ಠಾಣೆಗೆ ೧೮.೩೦ ಪಿಎಂಕ್ಕೆ ಬಂದು ಆರೋಪಿತನ ವಿರುದ್ದ ಜ್ಞಾಪನಾ ಪತ್ರ ತಯ್ಯಾರಿಸಿ ಮುಂದಿನ ಕ್ರಮಕ್ಕಾಗಿ ಹಾಜರ ಪಡಿಸುತ್ತಿದ್ದು ಸದರಿಯವನ ವಿರುದ್ದ ಕಲಂ ೭೮(೩) ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಠಾಣಾ ಎಸ್.ಎಚ್.ಓ ರವರಾದ ತಮಗೆ ಈ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ ಅಂತ ಕೊಟ್ಟ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ರೋಜಾ ಪೊಲೀಸ್ ಠಾಣೆ :- ದಿನಾಂಕ: 23-05-2022 ರಂದು ೧೬.೩೦ ಪಿ.ಎಮಕ್ಕೆ ಸದರಿ ಆರೋಪಿತರು ಯದುಲ್ಲಾ ಕಾಲೋನಿಯ ನೀರಿನ ಟಾಕಿ ಹತ್ತಿರ ರೋಜಾದಲ್ಲಿ ಮಟಕಾ ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಸದರಿಯವರಿಂದ ೧೭೨೦/- ರೂ , ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ್ ಪೆನ್ ಜಪ್ತುಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.

 

ಇತ್ತೀಚಿನ ನವೀಕರಣ​ : 24-05-2022 04:25 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080