ಅಭಿಪ್ರಾಯ / ಸಲಹೆಗಳು

 ಚೌಕ ಪೊಲೀಸ್ ಠಾಣೆ:-  ದಿನಾಂಕ: 23-03-2022 ರಂದು ರಾತ್ರಿ  ೨೦.೧೫ ಪಿಎಂಕ್ಕೆ ಶ್ರೀಮತಿ ಗುರುಬಸಮ್ಮಾ ಗಂಡ ಶಿವರಾಜ @ ಶಿವಕುಮಾರ ವ:೪೫ ವರ್ಷ ಉ:ಮನೆಕೆಲಸ ಜಾ:ಲಿಂಗಾಯತ ಸಾ:ಮಹಾಗಾಂವ ಗ್ರಾಮ ತಾ:ಕಮಲಾಪೂರ ಜಿ:ಕಲಬುರಗಿ ಹಾ:ವಾ:ಶ್ರೀ ಸಂತೋಷಶೆಟ್ಟಿ ಇವರ ಮನೆಯಲ್ಲಿ ಬಾಡಿಗೆ ಹೋಳಿಕಟ್ಟಾ ಮಕ್ತಂಪೂರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಫಿರ್ಯಾದಿ ಅರ್ಜಿ ಹಾಜರುಪಡಿಸಿದ್ದು ಸದರಿ ಫಿರ್ಯಾದಿ ಅರ್ಜಿಯ ಸಾರಾಂಶ ಈ ಕೆಳಗಿನಂತಿರುತ್ತದೆ. ನಾನು ಮನೆಕೆಲಸ ಮಾಡಿಕೊಂಡು ನನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನಗೆ ೦೩ ಜನ ಹೆಣ್ಣುಮಕ್ಕಳು ಒಬ್ಬನೇ ಗಂಡು ಮಗ ಇರುತ್ತಾನೆ. ಮೂರು ಜನ ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ತಮ್ಮ ಗಂಡನ ಮನೆಗಳಲ್ಲಿ ಇರುತ್ತಾರೆ.  ಗಂಡು ಮಗ ಕಿರಣ ಅಂತಾ ಇದ್ದು ಆತನು ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು ಕಮಲಾಪೂರದ ಹತ್ತಿರ ಇರುವ ಸತ್ಯಸಾಯಿ ಕಾಲೇಜಿನಲ್ಲಿ ಅಲ್ಲಿಯೇ ಓದಿಕೊಂಡಿ ಇರುತ್ತಾರೆ. ಸದ್ಯ ಮನೆಯಲ್ಲಿ ನಾನು ಮತ್ತು ನನ್ನ ಗಂಡ ಇಬ್ಬರೇ ಇರುತ್ತೇವೆ. ನನ್ನ ಗಂಡ ಶಿವರಾಜ @ ಶಿವಕುಮಾರ ತಂದೆ ಚಂದ್ರಶೇಖರ ಬಿರಾದರ ವ:೫೦ ವರ್ಷ ಇದ್ದು ಇವರು ಒಕ್ಕಲುತನ ಮತ್ತು ಖಾಸಗಿ ಕೆಲಸ ಮಾಡಿಕೊಂಡಿರುತ್ತಾರೆ.  ಇವರು ಸುಮಾರು ತಮ್ಮ ಗೆಳೆಯರಿಂದ ೧೫-೨೦ ಲಕ್ಷ ರೂಪಾಯಿಗಳಷ್ಟು ಸಾಲ ತೆಗೆದುಕೊಂಡಿರುತ್ತಾರೆ. ನಾನು ಅವರಿಗೆ ಸುಮಾರು ಸಲ ನೀವು ಈ ರೀತಿ ಸಾಲ ಮಾಡಬೇಡಿರಿ ಅಂತಾ ಅವರಿಗೆ ಸುಮಾರು ಸಲ ತಿಳಿ ಹೇಳಿದರೂ ಸಹ ನಮ್ಮ ಮಾತನ್ನು ಕೇಳದೆ ಸಾಲ ಮಾಡಿರುತ್ತಾರೆ. ಸಾಲ ಹೇಗೆ ತೀರಿಸಬೇಕು ಅಂತಾ ಮಾನಸೀಕವಾಗಿ ನೊಂದುಕೊಂಡಿದ್ದು ನಾನು ಸಮಾಧಾನದಿಂದ ಇರುವಂತೆ ತಿಳಿಸಿರುತ್ತೇನೆ.  ಹೀಗಿದ್ದು ಇಂದು ದಿನಾಂಕ:೨೩.೦೩.೨೦೨೨ ರಂದು ಮಧ್ಯಾಹ್ನ ೧೨.೧೦ ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡ ಶಿವರಾಜ @ ಶಿವಕುಮಾರ ಇವರು ನಾನು ಹೋಲಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋಗಿರುತ್ತಾರೆ.  ಅಂದಾಜು ಮಧ್ಯಾಹ್ನ ೩.೩೦ ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನಗೆ ನನ್ನ ಗಂಡನ ಗೆಳೆಯನಾಗಿರುವ ಶರಣು ಪಪ್ಪಾ ಇವರ ಗೆಳೆಯನಾಗಿರುವ ವಿನಾಯಕ ಅನ್ನುವವರು ಫೋನ ಮಾಡಿ ವಿಷಯ ತಿಳಿಸಿದೇನೆಂದರೆ ನಿಮ್ಮ ಗಂಡ ಶಿವರಾಜ @ ಶಿವಕುಮಾರ ಇವರು ಕಲಬುರಗಿ ನಗರದ ಕೋಟೆಯ ಗಾರ್ಡನದಲ್ಲಿ ಸರಾಯಿ ಕುಡಿದ ನಶೆಯಲ್ಲಿ ಯಾವುದೋ ವಿಷ ಸೇವನೆ ಮಾಡಿಕೊಂಡಿರುತ್ತಾರೆ. ಈ ವಿಷ ಸೇವನೆ ಮಾಡಿದ ಬಗ್ಗೆ ಅವರೆ ಶರಣು ಪಪ್ಪಾ ಇವರಿಗೆ ಫೋನ ಮಾಡಿ ತಿಳಿಸಿದ್ದು, ಶರಣು ಪಪ್ಪಾ ರವರು ನನಗೆ ಹೋಗಿ ನೋಡಲು ತಿಳಿಸಿದ್ದರಿಂದ ನಾನು ಕೋಟೆಯ ಗಾರ್ಡನದಲ್ಲಿ ಬಂದು ನಿಮ್ಮ ಗಂಡನಿಗೆ ನೋಡಿದ್ದು ನಿಮ್ಮ ಗಂಡ ಶಿವರಾಜ @ ಶಿವಕುಮಾರ ಇವರು ಸರಾಯಿ ಕುಡಿದು ಯಾವುದೋ ಕ್ರಿಮಿನಾಷಕ ಔಷಧಿ ಸೇವನೆ ಮಾಡಿ ನಿತ್ರಾಣ ಸ್ಥಿತಿಯಲ್ಲಿ ಬಿದ್ದಿರುತ್ತಾರೆ. ಸರಿಯಾಗಿ ಮಾತನಾಡುತ್ತಿಲ್ಲಾ. ಅವರಿಗೆ ನಾನು ಮತ್ತು ನನ್ನ ಗೆಳೆಯ ಆಟೋದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತೇವೆ. ನೀವು ಕೂಡಲೇ ಬನ್ನೀರಿ ಅಂತಾ ಹೇಳಿದ್ದರಿಂದ ಗಾಭರಿಯಾಗಿ ನಾನು ಮತ್ತು ನಮ್ಮ ಸಂಬಂಧಿಕರಾದ ಮಲ್ಲಿಕರ‍್ಜುನ ಬಿರಾದರ ಮತ್ತು ನನ್ನ ಅಳಿಯ ಅಶೋಕ ಇವರಿಗೆ ಕರೆದುಕೊಂಡು ಹೋಗಿ ಸರಕಾರಿ ಆಸ್ಪತ್ರೆಯಲ್ಲಿ ಹೋಗಿ ಉಪಚಾರ ಪಡೆಯುತ್ತಿದ ನನ್ನ ಗಂಡ ಶಿವರಾಜ @ ಶಿವಕುಮಾರ ಇವರಿಗೆ  ನೋಡಲು ಅವರು ವಿಷ ಸೇವನೆ ಮಾಡಿ ಯಾವುದೇ ರೀತಿಯಿಂದ ಮಾತನಾಡದ ಸ್ಥಿತಿಯಲ್ಲಿ ಇರಲಿಲ್ಲಾ. ಅವರೂ ವಿಷ ಸೇವನೆ ಮಾಡಿದ್ದರಿಂದ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:೨೩.೦೩.೨೦೨೨ ರಂದು ಸಾಯಂಕಾಲ ೫.೫೦ ಪಿಎಂಕ್ಕೆ ಜೀಮ್ಸ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.   ನನ್ನ ಗಂಡ ಶಿವರಾಜ @ ಶಿವಕುಮಾರ ಇವರು ತಾನು ಮಾಡಿರುವ ಸಾಲದ ವಿಷಯದಲ್ಲಿ ಮನಃಹ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ವಿಷ ಕುಡಿದಿದ್ದು ವಿಷ ಕುಡಿದಿದ್ದರಿಂದ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.  ನನ್ನ ಗಂಡ ಶಿವರಾಜ @ ಶಿವಕುಮಾರ ಇವರ ಸಾವಿನಲ್ಲಿ ಯಾರ ಮೇಲೆಯು ಸಂಶಯ ದೂರು ಇರುವುದಿಲ್ಲಾ. ಮುಂದಿನ ಕಾನೂನು ಕ್ರಮ ಜರೂಗಿಸಿ  ನನ್ನ ಗಂಡನ ಶವ ನನಗೆ ಕೊಡಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 06-04-2022 06:50 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080