ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-1:- ದಿನಾಂಕ: 23-02-2023 ರಂದು 5:15 ಪಿ.ಎಂ ಕ್ಕೆ ಶ್ರೀ. ಅಂಕುಶ ತಂದೆ ವಿನೋದ ರಾಠೋಡ್, ಸಾ:ಜೈ ಹನುಮಾನ ತಾಂಡಾ, ಕಲಬುರಗಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಅವರ ತಂದೆಯಾದ ವಿನೋದ ತಂದೆ ಶಂಕರ ರಾಠೋಡ್ ವಯ:48ವರ್ಷ ಜಾ: ಲಂಬಾಣಿ ಉ: ಕೂಲಿಕೆಲಸ ಸಾ: ಜೈ ಹನುಮಾನ ತಾಂಡಾ, ಹಳೆ ನೀರಿನ ಟ್ಯಾಂಕ್ ಹತ್ತಿರ, ಕಲಬುರಗಿ ರವರ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಬಲಗೈ ಹೆಬ್ಬರೆಳು ಒತ್ತಿದ ಫಿರ್ಯಾದಿ ಅರ್ಜಿ ತಂದು ಹಾಜರುಪಡಿಸಿದ್ದು  ಸದರಿ ಫಿರ್ಯಾದಿ ಅರ್ಜಿ ಸಾರಾಂಶವೇನೆಂದರೆ  ನಿನ್ನೆ ದಿನಾಂಕ: 22-02-2023 ರಂದು ಸಾಯಂಕಾಲ ಫಿರ್ಯಾದಿ ವಿನೋದ ರಾಠೋಡ್ ಇವರು ತಮ್ಮ ಅಳಿಯನಾದ ಶಿವರಾಮ ಚಾವ್ಹಾಣ ಇವರಿಗೆ ಭೆಟಿ ಆಗಲು ತಮ್ಮ  ಮನೆಯ ಮೋಟಾರ್ ಸೈಕಲ್ ನಂ ಕೆಎ-04 ಜೆಜೆ-4830 ನೇದ್ದನ್ನು ಚಲಾಯಿಸಿಕೊಂಡು ತಮ್ಮ ಮನೆಯಿಂದ ಪಾಣೆಗಾಂವ ತಾಂಡಾಗೆ ಹೋಗುವ ಕುರಿತು ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೋಗಿ ಸೆಂಟ್ರಲ್ ಜೈಲ್ ದಾಟಿ ಪಾಣೆಗಾಂವ ಕ್ರಾಸ್ ಹತ್ತಿರ ರಸ್ತೆ ಮೇಲೆ ಮೋಟಾರ್ ಸೈಕಲಿನ ಇಂಡಿಕೇಟರ್ ಹಾಕಿ ಬಲಕ್ಕೆ ಕೈ ಮಾಡಿ ನಿಧಾನವಾಗಿ ಪಾಣೆಗಾಂವ ಕಡೆಗೆ ಹೋಗುವಾಗ ಸಾಯಂಕಾಲ 6:10 ಗಂಟೆಗೆ ಒಂದು ಕಾರ್ ಚಾಲಕನು ಜೇವರ್ಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು  ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಫಿರ್ಯಾದಿ ಎಡಗಡೆಯಿಂದ ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದನು. ಆಗ ಫಿರ್ಯಾದಿ ಮೋಟಾರ್ ಸೈಕಲ್ ಸಮೇತ ಕೆಳಗಡೆ ಬಿದ್ದಿದ್ದು ಅದನ್ನು ನೋಡಿದ ಅಲ್ಲಿಯೇ ಹೋಗುತ್ತಿದ್ದ  ಪಾಣೆಗಾಂವ ತಾಂಡಾದ ಕುಪ್ಪಣ್ಣ ತಂದೆ ಗುಂಡು ರಾಠೋಡ್ ಹಾಗೂ ಅನೀಲ್ ತಂದೆ ಭೀಮ್ ರಾಠೋಡ್ ಇವರು ಬಂದು ಫಿರ್ಯಾದಿಗೆ ಎಬ್ಬಿಸಿ ರಸ್ತೆಯ ಬದಿಯಲ್ಲಿ ಕೂಡಿಸಿ ನೋಡಲು ಸದರ ಘಟನೆಯಿಂದ ಫಿರ್ಯಾದಿಗೆ ಎಡಗೈ ರಟ್ಟೆಗೆ ಭಾರಿ ಒಳಪೆಟ್ಟು, ತೆಲೆಯ ಹಿಂದುಗಡೆ ಭಾರಿ ರಕ್ತಗಾಯ, ಅಲ್ಲಲ್ಲಿ ತರಚಿದ ಗಾಯಗಳು ಆಗಿದ್ದು. ಫಿರ್ಯಾದಿ ಮೋಟಾರ ಸೈಕಲ್ ಗೆ ಡಿಕ್ಕಿಪಡಿಸಿದ ಕಾರ್ ನಂಬರ ನೋಡಲು ಕೆ.ಎ-34, ಎನ್-8729 ನೇದ್ದು ಇದ್ದು ಅದರ ಚಾಲಕನು ಫಿರ್ಯಾದಿ ಕಡೆಗೆ ನೋಡುತ್ತ ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ. ಆದ್ದರಿಂದ ತನ್ನ ಕಾರ್ ಸ್ಥಳದಲ್ಲಿಯೇ ಬಿಟ್ಟು ಓಡಿಹೊದ ಸದರಿ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ನೀಡಿದ ಫಿರ್ಯಾದಿ ದೂರಿನ  ಸಾರಾಂಶದ ಮೆಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 22-02-2023 ರಂದು ರಾತ್ರಿ 10:30 ಗಂಟೆ ಸುಮಾರಿಗೆ ಸದರಿ ಆರೋಪಿತರು ಫಿರ್ಯಾದಿದಾರರು ಪವಿತ್ರಾ ದಾಬಾ ಸಣ್ಣೂರ ಸೇಡಂ ರಸ್ತೆಯಲ್ಲಿರುವ ದಾಬಾ ದಲ್ಲಿ ಊಟ ಮಾಡಿದ ಬಿಲ್ಲ 1500/- ರೂ ಕೇಳಿದರೆ ಫಿರ್ಯಾದಿಗೆ ಹಾಗೂ ಆತನ ತಮ್ಮ ಮತ್ತು ತಾಯಿಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಅಸಭ್ಯ ವರ್ತನೆಯಿಂದ ನಡೆದುಕೊಂಡು ಸಿರೆ ಎಳೆದು ಜಗ್ಗಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೆಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 23-02-2023 ರಂದು ಮುಂಜಾನೆ 7:30 ಎ.ಎಮ್ ಸುಮಾರಿಗೆ ಫಿರ್ಯಾದಿದಾರರು ಮನೆಯ ಮುಂದೆ ನೀರು ಬಿಡುವ ಮತ್ತು ಕಸ ಚೆಲ್ಲುವ ವಿಷಯವಾಗಿ ಜಗಳ ಆಗಿದ್ದು ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 23-02-2023 ರಂದು ಸಾಯಂಕಾಲ 7:20  ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮೋಹನ ತಂದೆ ಧಾರು ರಾಠೋಡ ವಯ:47ವರ್ಷ ಜಾ:ಲಂಭಾಣಿ ಉ:ಖಾಸಗಿ ಕೆಲಸ ಸಾ||ಕಾಳಗನೂರ ಗ್ರಾಮ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದರ ಸಾರಾಂಶವೆನೆಂದರೆ, ನನ್ನದೊಂದು ಸ್ವಂತ ಸ್ಪ್ಲೇಂಡರ್ ಮೋಟಾರ್ ಸೈಕಲ್ ನಂ KA-32-ER-4186 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲನ್ನು ದಿನಾಂಕ: 18-02-2023 ರಂದು ಬೆಳಿಗ್ಗೆ 9:30 ಗಂಟೆಗೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ ತುರ್ತು ಘಟಕದ ಮುಂದುಗಡೆ ನಿಲ್ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಬಂಧಿಕರನ್ನು ಮಾತನಾಡಿಸಿಕೊಂಡು ಮರಳಿ ಅದೇ ದಿನ ಮಧ್ಯಾಹ್ನ 12:00 ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಆದಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 23-02-2023 ರಂದು ರಾತ್ರಿ 9:00 ಗಂಟೆಗೆ ಫಿರ್ಯಾದಿದಾರರಾದ ಹಂಜಾ ಆರೀಫ್ ಅಹ್ಮೆದ್ ಖಾನ್ ತಂದೆ ಆರೀಫ್ ಅಹ್ಮೆದ್ ಖಾನ್ ವಯ: 28 ವರ್ಷ ಜಾ:ಮುಸ್ಲಿಂ ಉ:ವಿದ್ಯಾರ್ಥಿ ಸಾ|| ಮನೆ ನಂ 1-110 ಪಿಡಿಎ ಕಾಲೇಜ ರೋಡ ಐವಾನ್ ಇ ಶಾಹಿ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದರ ಸಾರಾಂಶವೆನೆಂದರೆ, ನನ್ನ ಚಿಕ್ಕಪ್ಪನಾದ ಅಜಮತ್ ಖಾನ್ ಇವರ ಹೆಸರಿನಲ್ಲಿ ಒಂದು ಹೊಂಡಾ ಡಿಯೋ ಮೋಟಾರ್ ಸೈಕಲ್ ನಂ KA-32-ET-1967 ನೇದ್ದು ಇದ್ದು ಅದನ್ನು ನಾನು ನೆಡೆಸಿಕೊಂಡು ಹೋಗುತ್ತೇನೆ. ನಿನ್ನೆ ದಿನಾಂಕ: 22-02-2023 ರಂದು ಸಾಯಂಕಾಲ 6:30 ಗಂಟೆ ಸುಮಾರಿಗೆ ಈ ಮೋಟಾರ್ ಸೈಕಲನ್ನು ಆರ್ಚಿಡ್ ಮಾಲ್ ಎದುರುಗಡೆ ನಿಲ್ಲಿಸಿ ಒಳಗಡೆ ಹೋಗಿ ಸಾಮಾನುಗಳನ್ನು ಖರಿದಿ ಮಾಡಿಕೊಂಡು ಮರಳಿ ರಾತ್ರಿ 8:30 ಗಂಟೆ ಸುಮಾರಿಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನಮ್ಮ ಮೋಟಾರ್ ಸೈಕಲ್ ಇರಲಿಲ್ಲಾ, ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 23/02/2023 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ಮಣ್ಣೂರ ಆಸ್ಪತ್ರೆಯಿಂದ ಶ್ರೀ. ಗುಲಾಮ ಹಕ್ಕಾನಿ ತಂದೆ ಗುಲಾಮ ಯಜದಾನಿ ಮತ್ತು ಕುಂಜಾ ತಂಜೀಲ ತಂದೆ ಗುಲಾಮ ಹಕ್ಕಾನಿ ಎಂಬುವರ ಆರ್.ಟಿ.ಎ ಎಮ್.ಎಲ್.ಸಿ ಗಳು ವಸೂಲಾಗಿರುತ್ತವೆ ಅಂತಾ ತಿಳಿಸಿದ್ದಕ್ಕೆ ಕೂಡಲೆ ನಾನು ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುದಾರರ ಎಮ್.ಎಲ್.ಸಿ ಪಡೆದುಕೊಂಡು ಅವರಿಗೆ ವಿಚಾರಿಸಲು ಅವರಿಬ್ಬರು ಮಾತನಾಡುವ ಪರಸ್ಧಿತಿಯಲ್ಲಿ ಇರದ ಬಗ್ಗೆ ಸಂಬಂಧಪಟ್ಟ ವೈದ್ಯರಿಂದ ಅಭೀಪ್ರಾಯವನ್ನು ಪಡೆದುಕೊಂಡು ಅಲ್ಲಿಯೇ ಇರುವ ಗಾಯಾಳು ಗುಲಾಮ ಹಕ್ಕಾನಿ ಈತನ ಅಣ್ಣ ಗುಲಾಮ ರಬ್ಬಾನಿ ತಂದೆ ಗುಲಾಮ ಯಜದಾನಿ ವಯಃ 49 ವರ್ಷ ಜಾತಿಃ ಮುಸ್ಲಿಂ ಉಃ ಖಾಸಗಿ ಕೆಲಸ ಮುಕ್ಕಾಂ ಬಾರಾಹಿಲ್ಸ ಕಲಬುರಗಿ ಈತನು ಒಂದು ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದನ್ನು ಪಡೆದುಕೊಂಡು ಮರಳಿ 7:00 ಪಿ.ಎಮ್ ಕ್ಕೆ ಠಾಣೆಗೆ ಬಂದ್ದಿದ್ದು, ಅರ್ಜಿ ಸಾರಂಶವೆನೆಂದರೆ, ಇಂದು ದಿನಾಂಕ 23/02/2023 ರಂದು ಸಾಯಂಕಾಲ 4:15 ಗಂಟೆ ಸುಮಾರಿಗೆ ನಾನು ನನ್ನ ಕೆಲಸದ ಮೇಲೆ ಇರುವಾಗ ನಮ್ಮ ಪರಿಚಯದ ಮಹಮ್ಮದ ನಬಿಶಾಹ ತಂದೆ ಮಹಮ್ಮದ ಸಲಿಂಶಾಹ, ಖಾಲೀದಖಾನ ತಂದೆ ಮಹಮ್ಮದ ಹುಸೇನಖಾನ ಇವರು ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ  ತಾನೆ 4:00 ಗಂಟೆ ಸುಮಾರಿಗೆ ನಿಮ್ಮ ತಮ್ಮ ಗುಲಾಮ ಹಕ್ಕಾನಿ ಹಾಗು ಅವರ ಮಗಳಾದ ಕುಂಜಾ ತಂಜೀಲ ಇಬ್ಬರು ತಮ್ಮ ಫ್ಯಾಶನ ಪ್ರೋ ಮೋಟರ ಸೈಕಲ ನಂ. ಕೆಎ 32 ಕ್ಯೂ 9063 ಇದರ ಮೇಲೆ ಬಾಕರ ಪಂಕ್ಷನ ಹಾಲ ಕ್ರಾಸಿನ ಹತ್ತೀರ ರಿಂಗರೋಡಿಗೆ ಬರುತ್ತಿರುವಾಗ ಅವರ ಹಿಂದಿನಿಂದ ಒಂದು ಟಿಪ್ಪರ ನಂ. ಕೆಎ 28 ಸಿ 3613 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಬಂದು ಮುಂದಿನ ಯಾವುದೋ ವಾಹನಕ್ಕೆ ಓವರಟೇಕ ಮಾಡಲು ಹೋಗಿ ಈ ಮೋಟರ ಸೈಕಲದ ಹಿಂಭಾಗಕ್ಕೆ ಅಪಘಾತ ಪಡಿಸಿದ್ದರಿಂದ ಅವರು ಮೋಟರ ಸೈಕಲ ಸಮೇತ  ರೋಡಿಗೆ ಬಿದ್ದಿದ್ದರಿಂದ ಇಬ್ಬರೂ ಭಾರಿಗಾಯಗೊಂಡು ಸ್ಧಳದಲ್ಲಿಯೇ ಬಿದ್ದಿರುತ್ತಾರೆ ಅಂತಾ ತಿಳಿಸಿದಕ್ಕೆ, ನಾನು ಗಾಬರಿಗೊಂಡು ನಮ್ಮ ತಮ್ಮ ಗುಲಾಮ ಹಕ್ಕಾನಿ ಇವರ ಹೆಂಡತಿ ಮಮ್ತಾಜಬೇಗಂ ಇವರೊಂದಿಗೆ ಸ್ಧಳಕ್ಕೆ ಬರುವಷ್ಟರಲ್ಲಿ ಮಣ್ಣೂರ ಆಸ್ಪತ್ರೆಗೆ ಉಪಚಾರಕ್ಕಾಗಿ ಸೇರಿಕೆ ಮಾಡಿರುವುದಾಗಿ ಗೊತ್ತಾಗಿ, ಅಲ್ಲಿಗೆ ಹೋಗಿ ನೋಡಲು ತಮ್ಮ ಮತ್ತು ತಮ್ಮನ ಮಗಳಾದ ಕುಂಜಾ ತಂಜೀಲ ಇಬ್ಬರು ಮಾತನಾಡುವ ಪರಸ್ಧಿತಿಯಲ್ಲಿ ಇರಲಿಲ್ಲಾ. ಅವರಿಬ್ಬರಿಗೆ ಬಲಗಡೆ ತಲೆಯ ಭಾಗಕ್ಕೆ, ಮೆಲಕಿಗೆ ಭಾರಿಗಾಯಗಳು ಮತ್ತು ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು ಇರುತ್ತದೆ. ವಿಚಾರಣೆಯಲ್ಲಿ ಘಟನೆ ನೋಡಿದ ಮಹಮ್ಮದ ನಬಿಶಾಹ ಮತ್ತು ಖಾಲೀದಖಾನ ಇಬ್ಬರೂ ಟಿಪ್ಪರ ನಿಲ್ಲಿಸಲು ಬೆನ್ನು ಹತ್ತಿದಾಗ ಅವರಿಗು ಕೂಡಾ ಸೈಡು ಕೊಡದೆ ಹಾಗೆ ಓಡಿಸಿಕೊಂಡು ಹೋಗಿದ್ದು ಅಪಘಾತ ಪಡಿಸಿದ ಚಾಲಕನಿಗೆ ನೋಡಿರುವುದಾಗಿ ತಿಳಿದು ಬಂದಿರುತ್ತದೆ.  ಕಾರಣ ನನ್ನ ತಮ್ಮ ಮತ್ತು ತಮ್ಮನ ಮಗಳು ತಮ್ಮ ಮೋಟರ ಸೈಕಲದ ಮೇಲೆ ಸ್ಕೂಲದಿಂದ ಮನೆಗೆ ಹೋಗುವ ಕುರಿತು ರಿಂಗರೋಡಿನ ಬಾಕರ ಪಂಕ್ಷನ ಕ್ರಾಸಿನ ಹತ್ತೀರ ಹೋಗುತ್ತಿರುವಾಗ ಹಿಂದಿನಿಂದ ಟಿಪ್ಪರ ನಂ. ಕೆಎ 28 ಸಿ 3613 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ತಮ್ಮ ಮತ್ತು ತಮ್ಮನ ಮಗಳು ಇಬ್ಬರು ಸಾವು ಮತ್ತು ಬದುಕಿನ ಮಧ್ಯೆ ಉಪಚಾರ ಪಡೆಯುತ್ತಿದ್ದು, ಟಿಪ್ಪರ ಚಾಲಕನನ್ನು ಪತ್ತೆ ಮಾಡಿ ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 23-02-2023 ರಂದು ಫರ್ಯಾದಿಯು ತನ್ನ ಸ್ನೇಹಿತನ ಮನೆಗೆ ಹೋಗಿದ್ದಾಗ ಸದರಿ ಆರೋಪಿತರು ತಡೆದು ನಿಲ್ಲಿಸಿ ನಮ್ಮ ಹಣ ಕೊಡು ಎಂದು ಕೇಳಿದ್ದು ಅದಕ್ಕೆ ಫಿರ್ಯಾಧಿಯು ಸ್ವಲ್ಪ ಸಮಯ ಕೊಡಿ ಕೊಡುತ್ತೇನೆ ಎಂದರೂ ಕೇಳದೆ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ :- ದಿನಾಂಕ: 23-02-2023 ರಂದು 7:30 ಪಿ.ಎಮ್ ಕ್ಕೆ ಶ್ರೀ ಮನೋಹರ ಪಿಸಿ-71 ರಾಘವೇಂದ್ರ ನಗರ ಪೊಲಿಸ ಠಾಣೆ ಕಲಬುರಗಿ ರವರು ಕೋರ್ಟ ಕರ್ತವ್ಯದಿಂದ ಠಾಣೆಗೆ ಬಂದು ಹಾಜರಾಗಿ ಮಾನ್ಯ ನ್ಯಾಯಾಲಯದ ಪಿಸಿಆರ್ ನಂ. 1006/2022 ನೇದ್ದನ್ನು ಹಾಜರಪಡಿಸಿದ್ದರ ಸಾರಾಂಶವೇನೆಂದರೆ ಫಿರ್ಯಾದಿದಾರರಾದ ಶ್ರೀಮತಿ ಆಯೇಶ ನಸೀಮ ಗಂಡ ಅಬ್ದುಲ ಗನಿ ವಯ: 58 ವರ್ಷ ಉ: ಪ್ರಾಂಶುಪಾಲರು ಸರಕಾರಿ ಪಿ.ಯು ಕಾಲೇಜ ಗೊಬ್ಬುರ (ಬಿ) ತಾ: ಅಫ್ಜಲಪೂರ ಜಿ: ಕಲಬುರಗಿ ರವರಿಗೆ ಸಂಬಂಧಿಸಿದ ಪ್ಲಾಟ ನಂ. 09 (ಪಾರ್ಟ) 10. 11. 12. 13. 14. ಸರ್ವೆ ನಂ. 101/1 ಶೇಖ ರೋಜಾ ನಿಯರ್ ಡಬರಾಬಾದ ಕ್ರಾಸ ರಿಂಗ ರೋಡ ಜಾಗದಲ್ಲಿ ದಿನಾಂಕ: 06/12/2022 ರಂದು ರಂದು 6:00 ಪಿ.ಎಮ್ ಕ್ಕೆ ಆರೋಪಿತರು ಅತಿಕ್ರಮ ಪ್ರವೇಶ ಮಾಡಿ ಅಲ್ಲಿಯ ಟೀನ್ ಶೆಡಗಳನ್ನು ನಾಶ ಮಾಡಿರುತ್ತಾರೆ ಮತ್ತು ಫಿರ್ಯಾದಿಯ ಉಟ್ಟ ಬಟ್ಟೆ ಹಿಡಿದು ಎಳದಾಡಿ ಫಿರ್ಯಾದಿಗೆ ಅಪಮಾನ ಮಾಡಿ ಅವಾಚ್ಯವಾದ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 25-02-2023 11:30 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080