ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-2 :-  ದಿನಾಂಕ-23-02-2022  ರಂದು ೩-೦೦ ಪಿ.ಎಮ್ ಕ್ಕೆ ಫಿರ್ಯಾಧಿ ಮಹಮ್ಮದ ತೊಫೀಕ್ ತಂದೆ ಹೈದರಸಾಬ ಲೋಹಾರ ವ; ೨೦ವರ್ಷ  ಜಾ; ಮುಸ್ಲಿಂ ಉ; ಸೆಂಟ್ರಿಂಗ್ ಕೆಲಸ ಸಾ; ಬುಲಂದ ಪರವೇಜ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾಧಿ ಅರ್ಜಿ ಕೊಟ್ಟಿದ್ದೇನೆಂದರೆ, ಇಂದು ದಿನಾಂಕ-23-02-2022  ರಂದು ಮುಂಜಾನೆ ನಾನು ನಮ್ಮ ಅಣ್ಣ ಮಹಮ್ಮದ ಆಸೀಫ್ ನಮ್ಮ ತಂದೆ ಹೈದರಸಾಬ ಎಲ್ಲರೂ ಸೆಂಟ್ರಿಂಗ್ ಕೆಲಸಕ್ಕೆ ಹೋಗಲು ತಯಾರಾದಾಗ ನಾನು ಬೇರೆ ಕಡೆ ಮತ್ತು ನಮ್ಮ ಅಣ್ಣ ಮಹಮ್ಮದ ಆಸೀಫ್ ಹಾಗೂ ನಮ್ಮ ತಂದೆ ಹೈದರಸಾಬ ಇವರು ರಾಮ ಮಂದಿರ, ಹೈಕೊರ್ಟ ಕಡೆಗೆ ಸೆಂಟ್ರಿಂಗ್ ಕೆಲಸಕ್ಕೆ ಹೋದರು ಮುಂದೆ ೧೨-೩೦ ಗಂಟೆ ಸುಮಾರಿಗೆ ನಮ್ಮ ಪರಿಚಯದ ಬಾಬಾ ಖುರೇಶಿ, ನಜೀರ ಅಹೆಮದ ಶೇಖ ಇವರು ನನಗೆ ಪೋನ್ ಮಾಡಿ ತಿಳಿಸಿದೆನೆಂದರೆ, ಈಗ ೧೨-೧೦ ಗಂಟೆ ಸುಮಾರಿಗೆ ಉದನೂರ ಕ್ರಾಸ್ ದಿಂದ ಹೈಕೊರ್ಟ ರೋಡಿನ ರಿಂಗ್ ರೋಡಿನ ಮದ್ಯ ಗ್ರೀನ್ ಪಾರ್ಕ  ಸಮೀಪದಲ್ಲಿ ನಿಮ್ಮ ಅಣ್ಣ ಮಹಮ್ಮದ ಆಸೀಫ್ ಈತನು ಡಿಸ್ಕವರಿ ಮೋಟಾರ ಸೈಕಲ ನಂ ಕೆಎ-೨೮ ವಿ-೯೫೦೩ ನೇದ್ದರ ಮೇಲೆ ಹೈಕೊರ್ಟ ಕಡೆಗೆ ಹೋಗುವಾಗ ಹಿಂದಿನಿಂದ ಒಂದು ಲಾರಿ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಆತನಿಗೆ ಓವರ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದ ಪರಿಣಾಮ ಆತನು ಮೋಟಾರ ಸೈಕಲ ಸಮೇತ ರೋಡಿಗೆ ಬಿದ್ದಾಗ ಆತನ ತೆಲೆಯ ಮೇಲಿಂದ ಮತ್ತು ಮುಖದ ಮೇಲಿಂದ ಹೋಗಿ ಮೌಂಸ ಖಂಡ ಹೊರಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ, ಲಾರಿ ಚಾಲಕನು ನಿಂತ್ತು ಮಂದಿ ಜಮ ಆಗುವಾಗ ಆತನು ಲಾರಿಯನ್ನು ಓಡಿಸಿಕೊಂಡು ಹೋಗಿರುತ್ತಾನೆ, ಲಾರಿ ಮತ್ತು ಲಾರಿ ಚಾಲಕನನ್ನು ನೋಡಿರುತ್ತೇವೆ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ಸ್ಥಳಕ್ಕೆ ಹೋಗುವಷ್ಟರಲ್ಲಿ ಯಾವುದೋ ಅಂಬುಲೈನ್ಸ್ನಲ್ಲಿ ಸರಕಾರಿ ಆಸ್ಪತ್ರೆಯ ಕಡೆಗೆ ಕಳುಹಿಸಿಕೊಡುತ್ತಿರುತ್ತೇವೆ ಅಂತಾ ತಿಳಿಸಿದ್ದು ನಾನು ಸರಕಾರಿ ಆಸ್ಪತ್ರೆಗೆ ಹೋಗಿ ಅಂಬುಲೈನ್ಸನಲ್ಲಿರುವ ಅಣ್ಣ ಮಹಮ್ಮದ ಆಸೀಫ್ ಈತನಿಗೆ ನೋಡಲಾಗಿ ಆತನ ಮುಖದ ಭಾಗ ಮತ್ತು ತೆಲೆಯ ಭಾಗ ಚಪ್ಪಟೆಯಾಗಿ ಮೌಂಸ ಖಂಡ ಹೊರಬಂದಿದ್ದು ಅಣ್ಣನು ಮೃತ ಪಟ್ಟಿದನು. ನಮ್ಮ ತಂದೆಯವರಿಗೆ ವಿಚಾರಿಸಲು ಅಣ್ಣ ಮಹಮ್ಮದ ಆಸೀಫನು ಕೆಲಸದ ನಂತರ ಪರಿಚಯದವರ ಮೋಟಾರ ಸೈಕಲ ತೆಗೆದುಕೊಂಡು ಸಮಾನುಗಳನ್ನು ತರುವ ಕುರಿತು ಹೈಕೊರ್ಟ ಕಡೆಗೆ ಮೋಟಾರ ಸೈಕಲ ಮೇಲೆ ಹೋಗುವಾಗ ಘಟನೆ ಸಂಬವಿಸಿರುತ್ತದೆ ಅಂತಾ ತಿಳಿಸಿರುತ್ತಾರೆ, ಕಾರಣ ನನ್ನ ಅಣ್ಣ ಮಹಮ್ಮದ ಆಸೀಫನಿಗೆ ಡಿಕ್ಕಿ ಹೊಡಿಸಿಕೊಂಡು ಹೋದ ಯಾವುದೋ ಒಂದು ಲಾರಿ ಮತ್ತು ಲಾರಿ ಚಾಲಕನನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು  ಕೊಟ್ಟ ಫಿರ್ಯಾಧಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.    

ಇತ್ತೀಚಿನ ನವೀಕರಣ​ : 03-03-2022 11:45 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080