ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 24-01-2023 ರಂದು ರಾತ್ರಿ 11-00 ಗಂಟೆಗೆ ಶ್ರೀಮತಿ ರಾಧಿಕಾ ಗಂಡ ನಿಂಗರಾಜ @ ಲಿಂಗರಾಜ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ಈಗ 2 ವರ್ಷಗಳಿಂದ ನಾನು ಮತ್ತು ನನ್ನ ಗಂಡ ನಿಂಗರಾಜ  @ ಲಿಂಗರಾಜ ಇಬ್ಬರೂ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ವಾಸವಿರುತ್ತೆವೆ. ಈಗ ಸುಮಾರು ಒಂದುವಾರದ ಹಿಂದುಗಡೆ ತಾರಫೈಲ ಬಡಾವಣೆಯಲ್ಲಿರುವ ನನ್ನ ನಾದನಿ ಆಶ್ವೀನಿ ಇವರ ಮಗಳ ತೊಟ್ಟಿಲು ಕಾರ್ಯಕ್ರಮ ಇರುವದರಿಂದ ಕಲಬುರಗಿಗೆ ಬಂದಿರುತ್ತೇವೆ. ದಿನಾಂಕ 24.01.2023 ರಂದು ಮದ್ಯಾಹ್ನ ನಾನು ಮತ್ತು ನನ್ನ ಅತ್ತೆ ಲಕ್ಷ್ಮಿ ಮನೆಯಲ್ಲಿರುವಾಗ ನನ್ನ ಗಂಡ ನಿಂಗರಾಜ @ ಲಿಂಗರಾಜ ಇವರು ಫರಹತಾಬಾದನಲ್ಲಿ ನನ್ನ ಕೆಲಸ ಇರುತ್ತದೆ ನನ್ನ ಗೆಳೆಯ ಅಮರ ತಂದೆ ಬಾಬಾಸಾಹೇಬ ಇವರ ಜೊತೆಗೆ ಮೋಟಾರ ಸೈಕಲ ಮೇಲೆ ಹೋಗಿ ಬರುತ್ತೆನೆ ಅಂತಾ ಹೋದನು. ರಾತ್ರಿ ನನ್ನ ಗಂಡನ ಗೆಳೆಯ ಪೃಥ್ವೀರಾಜ ತಂದೆ ಅಶೋಕ ಅಂಜುಟಗಿ ಇವರು ನನಗೆ ಪೋನ ಮಾಡಿ ಸಾಯಂಕಾಲ ನಾನು ಹಳೆ ಜೇವರ್ಗಿ ರೋಡ ಹತ್ತೀರ ಇರುವಾಗ ನಮ್ಮ ಅಣ್ಣತಮ್ಮಕಿಯ ಅಮರ ತಂದೆ ಬಾಬಾಸಾಹೇಬ ಇವರು ನನಗೆ ಪೋನ ಮಾಡಿ ನಾನು ಮತ್ತು ನಿಂಗರಾಜ @ ಲಿಂಗರಾಜ ತಂದೆ ಗುಂಡಪ್ಪಾ ಇಬ್ಬರೂ ಫರಹತಾಬಾದಕ್ಕೆ ಮೋಟಾರ ಸೈಕಲ ಮೇಲೆ ಬಂದಿದ್ದು ನಮ್ಮ ಕೆಲಸ ಮುಗಿಸಿಕೊಂಡು ವಾಪಸ್ಸ ಕಲಬುರಗಿ ಕಡೆಗೆ ಬರುವಾಗ ನನ್ನ ಮೋಟಾರ ಸೈಕಲ ನಂಬರ ಕೆಎ-51/ಇಎಮ್-8429 ನೇದ್ದರಲ್ಲಿ ಪೆಟ್ರೊಲ ಮುಗಿದಿದ್ದರಿಂದ ಮೋಟಾರ ಸೈಕಲ ಬಂದ ಆಗಿರುತ್ತದೆ ಒಂದು ಬಾಟಲಿಯಲ್ಲಿ ಪೆಟ್ರೊಲ ತಗೆದಕೊಂಡು ಬರಬೇಕು ಅಂತಾ ನನಗೆ ತಿಳಿಸಿದ್ದರಿಂದ ನಾನು ಒಂದು ಬಾಟಲಿಯಲ್ಲಿ ಪೆಟ್ರೊಲ ತಗೆದುಕೊಂಡು ಹೋಗಿ ಫರಹತಾಬಾದ ಸಿಮಾಂತರದ ರೋಡ ಹತ್ತೀರ ಇರುವ ಅಮರ ಇವರಿಗೆ ಪೆಟ್ರೊಲ ಕೊಟ್ಟಾಗ ಅಮರ ಇವರು ತನ್ನ ಮೋಟಾರ ಸೈಕಲಕ್ಕೆ ಪೆಟ್ರೊಲ ಹಾಕಿ ಮೋಟಾರ ಸೈಕಲ ಚಾಲು ಮಾಡಿ ನಿಮ್ಮ ಗಂಡ ನಿಂಗರಾಜ @ ಲಿಂಗರಾಜ ಇವರನ್ನು ಮೋಟಾರ ಸೈಕಲ ಹಿಂದುಗಡೆ ಕೂಡಿಸಿಕೊಂಡು ಕಲಬುರಗಿ ಕಡೆಗೆ ಹೋಗುತ್ತಿದ್ದರು ನಾನು ಅವರ ಮೋಟಾರ ಸೈಕಲ ಹಿಂದಿನಿಂದ ನನ್ನ ಮೋಟಾರ ಸೈಕಲ ಚಲಾಯಿಸಿಕೊಂಡು ಅವರ ಜೊತೆಯಲ್ಲಿ ಅವರ ಹಿಂದಿನಿಂದ ಕಲಬುರಗಿ ಕಡೆಗೆ ಬರುವಾಗ ಫರಹತಾಬಾದ ಸಿಮಾಂತರದ ಕೇಸರಿ ಬೆಟ್ಟದ ಸಮೀಪ ರೋಡ ಮೇಲೆ ಕಲಬುರಗಿ ಕಡೆಯಿಂದ  ಜೇವರ್ಗಿ ಕಡೆಗೆ ಹೋಗುವ  ಕುರಿತು ಒಬ್ಬ ಮಹಿಂದ್ರಾ ಸ್ಕಾರ್ಫಿಯೊ ಕಾರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೊದಲು ಅಮರ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಹಾಗೆ ಮುಂದು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಾನು ಮತ್ತು ಅಮರ ಹಾಗೂ ನಿಮ್ಮ ಗಂಡ ನಿಂಗರಾಜ @ ಲಿಂಗರಾಜ ಮೂರು ಜನರು ಮೋಟಾರ ಸೈಕಲ ಸಮೇತ ಕೆಳಗಡೆ ಬಿದ್ದಾಗ ತಾರಪೈಲ ಬಡವಾಣೆಯ ಗುಂಡೇಶ ತಂದೆ ಕುಮಾರ ಹಾಗೂ ಮಂಜುನಾಥ ತಂದೆ ಹಣಮಂತ ಹಾಲಗೇರಿ ರವರು ಬಂದು ನನಗೆ ಎಬ್ಬಿಸಿ ಕೂಡಿಸಿದರು. ಮತ್ತು ಅಮರ ಮತ್ತು ನಿಮ್ಮ ಗಂಡನಿಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಮಲಗಿಸಿದರು. ನಾನು ನಿಮ್ಮ ಗಂಡನಿಗೆ ನೋಡಲು ಆತನಿಗೆ ಭಾರಿಪೆಟ್ಟು ಬಿದ್ದಿತ್ತು. ಅಮರ ಇತನಿಗೆ ನೋಡಲು ಆತನಿಗೂ ಬಾರಿಪೆಟ್ಟು ಬಿದ್ದಿತ್ತು. ನನ್ನ ಬಲ ಹಣೆಗೆ ರಕ್ತಗಾಯ, ಎಡಗೈ ಮುಂಗೈ ಹತ್ತೀರ ರಕ್ತಗಾಯ, ಬಲಗಾಲು ರಿಸ್ಟ ಹತ್ತೀರ ರಕ್ತಗಾಯ, ಬಲಗಾಲು ಮೊಳಕಾಲಿಗೆ ತರಿಚದಗಾಯ ಹಾಗೂ ಎಡಗಾಲು ಮೊಳಕಾಲಿಗೆ ತರಿಚದ ಗಾಯವಾಗಿರುತ್ತದೆ ಸದರಿ ಘಟನೆ ಜರುಗಿದಾಗ  ರಾತ್ರಿ ಅಂದಾಜು 8-45 ಗಂಟೆ ಸಮಯವಾಗಿತ್ತು. ಮಹಿಂದ್ರಾ ಸ್ಕಾರ್ಫಿಯೊ ಕಾರ ನಂಬರ ನೋಡಲು ಕೆಎ-16/ಎನ್-6658 ಇದ್ದಿತ್ತು. ಅದರ ಚಾಲಕ ತನ್ನ ವಾಹನ ಅಲ್ಲೇ ಬಿಟ್ಟು ಹೋದನು. ಹೈ ವೇ ಪೆಟ್ರೊಲಿಂಗ ಪೊಲೀಸನವರು ಸ್ಥಳಕ್ಕೆ ಬಂದರು ಅಂಬುಲೇನ್ಸ ವಾಹನ ಕೂಡಾ ಅಪಘಾತ ಸ್ಥಳಕ್ಕೆ ಬಂದಾಗ ಪೊಲೀಸನವರು ನನ್ನ ಮತ್ತು ಅಮರ ಹಾಗೂ ನಿಮ್ಮ ಗಂಡನ ಉಪಚಾರ ಕುರಿತು ಅಂಬುಲೇನ್ಸ ವಾಹನದಲ್ಲಿ ಕೂಡಿಸಿ ಕಳುಹಿಸಿದ್ದರಿಂದ ನಾವು ಕಲಬುರಗಿ ಖಾಸಗಿ ಯುನೈಟೆಡ ಆಸ್ಪತ್ರೆಗೆ ಬಂದಾಗ ನಿಮ್ಮ ಗಂಡ ಲಿಂಗಾರಾಜ @ ನಿಂಗರಾಜ ಇತನಿಗೆ ವೈದ್ಯರು ರಾತ್ರಿ 9-35 ಗಂಟೆಗೆ ಪರೀಕ್ಷಿಸಿ ನೋಡಲು ಆಸ್ಪತ್ರಗೆ ಬರುವದಕ್ಕಿಂತ ಮುಂಚಿತವಾಗಿ ದಾರಿ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ತಿಳಿಸಿರುತ್ತಾರೆ ಅಂತಾ ನನಗೆ ತಿಳಿಸಲು ನಾನು ಮತ್ತು ನನ್ನ ಅತ್ತೆ ಲಕ್ಷ್ಮಿ ಹಾಗೂ ನಮ್ಮ ಓಣಿಯವರು ಯುನೈಟೆಡ ಆಸ್ಪತ್ರೆಗೆ ಬಂದು ನೋಡಲು ನನ್ನ ಗಂಡನ ಎಡ ಹಣೆಗೆ ಭಾರಿ ರಕ್ತಗಾಯ ಎಡ ಕಣ್ಣಿನ ಕೆಳಗಡೆ ರಕ್ತಗಾಯ, ಎಡ ಮೆಲಕಿನ ಹತ್ತೀರ ತರಚಿದಗಾಯ ತಲೆಎಯ ಹಿಂದುಗಡೆ ಭಾರಿ ರಕ್ತಗಾಯ ಬಲ ಹಸ್ತದ ಹಿಂದುಗಡೆ ರಕ್ತಗಾಯ ಬಲ ಭುಜಕ್ಕೆ ಬಾರಿ ಕಂದುಗಾಯ ಎಡಗೈ ಹಸ್ತದ ಹಿಂದುಗಡೆ ತರಚಿದಗಾಯ ಬಲಗಾಲು ಮೊಳಕಾಲಿಗೆ ರಕ್ತಗಾಯ ಹಾಗೂ ಬಲಗಾಳು ಮೊಳಕಾಲ ಕೆಳೆಗೆ ಭಾರಿ ಗುಪ್ತಪೆಟ್ಟು ಆಗಿತ್ತು. ಅಮರ ಇತನು ಯುನೈಟೆಡ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಪೃಥ್ವೀರಾಜ ಇತನಿಗೆ ಮಹಿಂದ್ರಾ ಸ್ಕಾರ್ಫಿಯೊ ಕಾರ  ಚಾಲಕನ ಬಗ್ಗೆ ವಿಚಾರಿಸಲು ಅಪಘಾತ ಪಡಿಸಿದ ಕಾರ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ ಅಂತಾ ತಿಳಿಸಿ ಯುನೈಟೆಡ ಆಸ್ಪತ್ರೆಯಲ್ಲಿ ಉಪಚಾರ ಮಾಡಿಕೊಂಡು ಮನೆಗೆ ಹೋದನು.  ಮಹಿಂದ್ರಾ ಸ್ಕಾರ್ಫಿಯೊ ಕಾರ ನಂಬರ ಕೆಎ-16/ಎನ್-6658 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಮರ ಇತನು ಚಲಾಯಿಸಿಕೊಂಡು ಬರುತ್ತೀರುವ ಮೋಟಾರ ಸೈಕಲ ನಂಬರ ಕೆಎ-51/ಇಎಮ್-8429 ನೇದ್ದಕ್ಕೆ ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಹಾಗೇ ಪೃಥ್ವಿರಾಜ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಅಮರ ಮತ್ತು ನನ್ನ ಗಂಡ ನಿಂಗರಾಜ @ ಲಿಂಗಾರಜ ಇತನಿಗೆ ಭಾರಿಗಾಯ ಹಾಗೂ ಪೃಥ್ವಿರಾಜ ಇತನಿಗೆ ಸಾದಾಗಾಯಗೊಳಿಸಿ ತನ್ನ ವಾಹನ ಅಲ್ಲೇ ಬಿಟ್ಟು ಓಡಿ ಹೋಗಿದ್ದು  ಭಾರಿ ಗಾಯ ಹೊಂದಿದ್ದ ನನ್ನ ಗಂಡನಿಗೆ ಹಾಗೂ ಅಮರ ಮತ್ತು ಪೃಥ್ವಿರಾಜ ರವರ ಉಪಚಾರ ಕುರಿತು  ಆಸ್ಪತ್ರೆಗೆ ತರುವಾಗ ದಾರಿ ಮದ್ಯದಲ್ಲಿ ನನ್ನ ಗಂಡ ಮೃತಪಟ್ಟಿದ್ದು ಕಾರಣ ಮಹಿಂದ್ರಾ ಸ್ಕಾರ್ಫಿಯೊ ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ ಠಾಣೆ :-  ದಿನಾಂಕಃ 23.01.2023 ರಂದು ರಾತ್ರಿ 8-45  ಗಂಟೆಯ ಸುಮಾರಿಗೆ ಶ್ರೀ ಅಬ್ದುಲ ಖಾದರ @ಹಾರೂನ ಖತೀಬ ತಂದೆ   ಬಾಸಿತ ಖತೀಬ ವಯ-27 ವರ್ಷ  ಜಾ||ಮುಸ್ಲಿಂ ಉ||ಸಮಾಜ ಸೇವೆ ಹಾಗೂ ವ್ಯಾಪಾರ ಸಾ||ಎಂ.ಎಸ್.ಕೆ,ಮಿಲ್ ಮದೀನ ಕಾಲೋನಿ ಶಹಾಜಿಲಾನಿ ದರ್ಗಾ ಹತ್ತಿರ ಕಲಬುರಗಿ ಇದ್ದು ಈ ಮೂಲಕ ದೂರು ಸಲ್ಲಿಸುವದೆನೆಂದರೆ  ನಾನು ಈ ಹಿಂದೆ ನವಕರ್ನಾಟಕ ಸ್ವಾಭಿಮಾನ ವೇದಿಕೆಯ ಕಲ್ಯಾಣ ಕರ್ನಾಟಕ ಅದ್ಯಕ್ಷನಾಗಿದ್ದಾಗ ಕಲಬುರಗಿ ನಗರದ ಚೊರ ಗುಂಬಜ ಹತ್ತಿರ ಕೆಲವು ವ್ಯಕ್ತಿಗಳು ಅನಧೀಕೃತವಾಗಿ ಮುರುಮ್ ಸಾಗಾಣೆ ಮಾಡುತ್ತಿರುವ ವಿಷಯ ಕುರಿತಾಗಿ ನಾನು ವಕ್ಪ ಭೋರ್ಡ ಕಲಬುರಗಿ ಜಿಲ್ಲಾಧಿಕಾರಿಗಳು ತಹಸೀಲ್ದಾರರು ಹಾಗೂ ಇತರೆ ಅಧಿಕಾರಿಗಳಿಗೆ ದೂರು ಸಲ್ಲಿಸಿರುತ್ತೇವೆ. ಇದಕ್ಕೆ ಸಂಭಂದಿಸಿದಂತೆ ಈಗಾಗಲೆ ಮಾದ್ಯಮಗಳಲ್ಲಿ  . ವರದಿ ಆಗಿರುತ್ತದೆ. ಇದಾದ ನಂತರ ಗೌರವಾನ್ವೀತ ನ್ಯಾಯಾಲಯದಿಂದ ರಾಘವೇಂದ್ರ ನಗರ ಇಲ್ಲಿ ತಪ್ಪಿಸ್ಥರ ವಿರುಧ್ದ ದೂರು ದಾಖಲಾಗಿದ್ದು ಇರುತ್ತದೆ. ಇದಾದ ನಂತರ ದಿನಾಂಕ:29.08.2022 ರಂದು ಚೋರ ಗುಂಬಜ ಹತ್ತಿರ ವಿಷಯದಲ್ಲಿ ಕಾಣೀಸಿದ ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ಮಾಡಿ ಎಲ್ಲರೂ ಕೂಡಿಕೊಂಡು ಬಡಿಗೆಗಳು ಹಿಡಿದುಕೊಂಡು ಬಂದು ನನಗೆ ಕೊಲ್ಲುವ ಉದ್ದೇಶದಿಂದ ವಸ್ತಾರದಿಂದ ನನ್ನ ತಲೆಗೆ ಭಾರಿ ರಕ್ತಗಾಯ ಮಾಡಿರುತ್ತಾರೆ, ಅಲ್ಲಿಂದ ನಾನು ನನ್ನ ಜೀವವನ್ನು ಉಳಿಸಿಕೊಂಡು ಓಡಿ ಹೋಗಿರುತ್ತೇನೆ. ಮತ್ತು ಹಲವಾರು ದಿನಗಳ ನಂತರ ಚೇತರಿಕೆ ಆಗಿರುತ್ತೇನೆ. ಇದಾದ ನಂತರ ಮತ್ತೆ ದಿನಾಂಕ:04.09.2022 ರಂದು ವಿಷಯದಲ್ಲಿ ಕಾಣಿಸಿದ ವ್ಯಕ್ತಿಗಳು ನಾನು ಮನೆಯಲ್ಲಿ ಇಲ್ಲದಿದ್ದಾಗ ಎಲ್ಲರೂ ಕೂಡಿಕೊಂಡು ಕೈಯಲ್ಲಿ ತಲವಾರ ಹಿಡಿದುಕೊಂಡು ಮನೆಗೆ ಬಂದು ಅವಾಚ್ಯವಾಗಿ  ರಾಂಡಕಾ ಭೋಸಡಿಕೆ, ತೆರಿ ಮಾಕಿ ಬೆಹನಕಿ ಎಂದೆಲ್ಲಾ ನಿಂದನೆ ಮಾಡಿರುತ್ತಾರೆ. ಆದರೆ ನಾನು ಮನೆಯಲ್ಲಿ ಇಲ್ಲದ ಕಾರಣ ಇರ್ಪಾನ(9035372711) , ಜಿಲಾನ (6362373185) ಜಗ್ಗು ದಾದಾ (8095686778) ಬಾಬಾ (998014395) ಯಾಸೀನ ಮಿಸ್ಬಾ ನಗರ ಕಲಬುರಗಿ (8147332276)  ಇವರು ನನಗೆ ಕರೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಇವರು ನನಗೆ ನಿಂದನೆ ಮಾಡಿದ ಹಾಗೂ ಜೀವದ ಬೆದರಿಕೆ ಹಾಕಿದ ಎಲ್ಲಾ ಆಡಿಯೋ ರೆಕಾರ್ಡಿಂಗಗಳು ನನ್ನಲ್ಲಿ ಇರುತ್ತವೆ. ಅವುಗಳನ್ನು ನಾನು ವಿಚಾರಣೆ ಸಮಯದಲ್ಲಿ ಹಾಜರುಪಡಿಸುತ್ತೇನೆ. ಮಾನ್ಯರೆ ಈ ಕುರಿತು ನಾನು ಹಲವಾರು ಬಾರಿ ದೂರು ನೀಡಲು ಯತ್ನಸಿದ್ದು ಆಧರೆ ಮೇಲ್ಕಾಣಿಸಿದ ಗೂಂಡಾ ಹಾಗೂ ರೌಡಿಶೀಟರ ವ್ಯಕ್ತಿಗಳು ಎಲ್ಲಿ ಈ ಹಿಂದೆ ನನ್ನ ಮೇಲೆ ಮಾಡಿದ ಹಾಗೆ ಮಾರಣಾಂತಿಕ ಹಲ್ಲೆ ಮಾಡುತ್ತಾರೆ   ಅಂತಾ ಹೆದರಿ ನಾನು ದೂರು ನೀಡಿರುವದಿಲ್ಲಾ. ಆದರೆ ಸದರಿ ವ್ಯಕ್ತಿಗಳು ಅದರ ಲಾಭ ಪಡೆದು ಪದೆ ಪದೆ ನನಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸುವದು ಜೀವದ ಬೆದರಿಕೆ ಹಾಕುವದು ಕೊಲ್ಲುವದಾಗಿ ತಿಳೀಸಿರುತ್ತಾರೆ. ಆದ್ದರಿಂದ ಮಾನ್ಯರಾದ ತಾವು ಈ ಮೇಲ್ಕಾಣಿಸಿದ ರೌಡಿ ವ್ಯಕ್ತಿಗಳಾದ   ಇರ್ಪಾನ, ಜಿಲಾನ ,ಜಗ್ಗು ದಾದಾ , ಬಾಬಾ ,ಖಾದರ , ಯಾಸೀನ ಇವರೆಲ್ಲರೂ ಈಗಾಗಲೆ ನನಗೆ ಜೀವ ಸಹಿತ ಹೊಡೆಯುವ ಸಲುವಾಗಿ ನನ್ನ ಮೇಲೆ ವಸ್ತಾರ ಮತ್ತು ಇತರೆ ವಸ್ತುಗಳಿಂದ ಹಲ್ಲೆ ಮಾಡಿ ರಕ್ತಗಾಯ ಮಾಡಿದ್ದು ನಾನು ಬದುಕುಳೀದಿದ್ದು ಈಗ ಮತ್ತೆ ಅವರ ಕೈಯಲ್ಲಿ ತಲವಾರ ಚಾಕು ಚೂರಿ ಬಂದೂಕನ್ನು ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಓಡಾಡುತ್ತಿದ್ದು ಇವರ ಕೈಗೆ ನಾನು ಸಿಕ್ಕರೆ ನನಗೆ ಕೊಲ್ಲುವದಂತು ನಿಶ್ಚಿತವಾಗಿದೆ. ಕಾರಣ ಸದರಿಯವರ ವಿರುಧ್ದ ನನಗೆ ಕೊಲೆಗೆ ಯತ್ನಿಸಿದ್ದ ಬಗ್ಗೆ  ರಕ್ತಗಾಯ ಮಾಡಿದ ಬಗ್ಗೆ ಜೀವ ಬೆದರಿಕೆ ಹಾಕಿದ ಬಗ್ಗೆ ಅವಾಚ್ಯವಾಗಿ ನಿಂದನೆ ಮಾಡಿದ್ದ ಬಗ್ಗೆ ದೂರು ದಾಖಲಿಸಿ ನನಗೆ ನ್ಯಾಯಾ ದೊರಕಿಸಿಕೊಡಬೇಕಾಗಿ ವಿನಂತಿ. ಒಂದುವೇಳೆ ನನಗಾಗಲಿ ನನ್ನ ಕುಟುಂಬದ ಯಾರೋಬ್ಬ ಸದಸ್ಯರಿಗೆ ಯಾವುದೆ ರೀತಿಯ  ಅಪಘಾತವಾದಲ್ಲಿ ಅದಕ್ಕೆ ಮೇಲ್ಕಾಣಸಿದ ಗೂಂಡಾ ವ್ಯಕ್ತಿಗಳೆ ನೇರ ಹೊಣೆಗಾರರಾಗಿರುತ್ತಾರೆ ಎಂದು ಈ ಮೂಲಕ ದೂರು ಸಲ್ಲಿಸುತ್ತಿದ್ದೆನೆ ಅಂತಾ ಇತ್ಯಾದಿಯಾಗಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 23/01/2023 ರಂದು ಮಧ್ಯಾಹ್ನ 12:45 ಗಂಟೆಗೆ ಶ್ರೀಮತಿ. ಲಕ್ಷ್ಮಿಬಾಯಿ ಗಂಡ ಶಿವಶರಣಪ್ಪಾ @ ಶರಣು ಭಜಂತ್ರಿ ವಯಃ 33 ವರ್ಷ ಜಾತಿಃ ಕೊರಮಾ ಉಃ ಕಿದ್ವೈ ಆಸ್ಪತ್ರೆಯಲ್ಲಿ ಆಯಾ ಕೆಲಸ ಮುಕ್ಕಾಂ: ಎಲ್.ಐ.ಜಿ ಮನೆ ನಂ. 182 ಜಿ.ಡಿ.ಎ ಕಾಲೋನಿ ತಿಲಕ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಅರ್ಜಿ ಸಲ್ಲಿದ್ದು ಸಾರಂಶವೆನೆಂದರೆ, ನನ್ನ ಗಂಡ ಶಿವಶರಣಪ್ಪಾ @ ಶರಣು ತಂದೆ ರಾಮಚಂದ್ರ ಇವರು ಕಿದ್ವೈ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ ಅಂತಾ ಕೆಲಸ ಮಾಡಿಕೊಂಡಿದ್ದರು. ನಮಗೆ ಶಶಾಂಕ ವಯಃ 11 ವರ್ಷ, ಸುಪ್ತೀತಾ ವಯಃ 9 ವರ್ಷ ಎರಡು ಜನ ಸಣ್ಣ ಮಕ್ಕಳಿರುತ್ತಾರೆ. ಇಂದು ದಿನಾಂಕ 23/01/2023 ರಂದು ನನ್ನ ಗಂಡ ಶಿವಶರಣಪ್ಪಾ @ ಶರಣು ಇವರು ತಮ್ಮ ಪರಿಚಯದವರ ಲಗ್ನವು ಯಾದಗೀರ ಹತ್ತೀರ ಇರುವುದರಿಂದ ಈ ಲಗ್ನಕ್ಕಾಗಿ ಅವರ ಮತ್ತು ಅವರ ಗೆಳೆಯರಾದ ಶ್ರೀನಿವಾಸ ತಂದೆ ಶಾಂತರಾಜ ಇವರಿಬ್ಬರು ಕೂಡಿ ಮೋಟರ ಸೈಕಲದ ಮೇಲೆ ಹೋಗುವುದಾಗಿ ಹೇಳಿ ಮನೆಯಿಂದ ಬೆಳಿಗ್ಗೆ 8:30 ಗಂಟೆ ಸುಮಾರಿಗೆ ನನ್ನ ಗಂಡ ಮತ್ತು ಶ್ರೀನಿವಾಸ ಇಬ್ಬರು ಮೋಟರ ಸೈಕಲ ನಂ. ಕೆಎ 33 ಇ.ಎ 4678 ಇದರ ಮೇಲೆ ಹೋಗುವಾಗ ಗಂಡನವರೆ ಮೋಟರ ಸೈಕಲನ್ನು ನಡೆಯಿಸಿಕೊಂಡು ಹೋದರು. ಮುಂದೆ 10:00 ಗಂಟೆ ಸುಮಾರಿಗೆ ನನ್ನ ಗಂಡನ ಜೊತೆ ಹೋಗಿರುವ ಶ್ರೀನಿವಾಸ ಹಾಗು ನಮ್ಮ ಪರಿಚಯದ ಸುರ್ಯಕಾಂತ ಎಂಬುವರು ನನಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ ತಾನೆ 9:45 ಗಂಟೆ ಸುಮಾರಿಗೆ ಶಹಾಬಾದ ರೋಡಿನ ಮರ್ತುರ ಕ್ರಾಸಿನ ಮೇಲೆ ಹೋಗುತ್ತಿರುವಾಗ ನಮ್ಮ ಮುಂದೆ ಹೋಗುತ್ತಿರುವ ಲಾರಿ ನಂ. ಕೆಎ 32 ಬಿ 2586 ಇದರ ಚಾಲಕನು ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸುತ್ತಾ ನಾವು ರೋಡಿನ ಸೈಡಿಗೆ ಹೋಗಬೇಕೆಂದು ಲಾರಿಯ ಸೈಡಿನ ಬಲಭಾಗಕ್ಕೆ ತೆಗೆದುಕೊಳ್ಳುವಾಗ, ಲಾರಿಯ ಚಾಲಕನು ಏಕಾ ಏಕಿಯಾಗಿ ಒಮ್ಮೇಲೆ ಯಾವುದೆ ಸಿಗ್ನಲ ತೊರಿಸದೆ ಅಲಕ್ಷತನದಿಂದ ರೋಡಿನ ಪೂರ್ತಿ ಬಲಭಾಗಕ್ಕೆ ತೆಗೆದುಕೊಂಡು ನಮಗೆ ಡಿಕ್ಕಿ ಹೊಡೆದ ಪರಿಣಾಮ ಮೋಟರ ಸೈಕಲ ಸಮೇತವಾಗಿ ಬಿದ್ದಿದ್ದರಿಂದ ನಮಗೆ ಗಾಯಗಳಾಗಿದ್ದು ಮತ್ತು ಶಿವಶರಣಪ್ಪಾ @ ಶರಣು ಇವರಿಗೆ ಎಡಗಡೆ ತಲೆಗೆ ಭಾರಿರಕ್ತಗಾಯ, ಎಡಪಾದದ ಮೇಲೆ ರಕ್ತಗಾಯವಾಗಿ ಭಾರಿ ರಕ್ತಸ್ರಾವದಿಂದ ಸ್ಧಳದಲ್ಲಿಯೇ ಮೃತ ಪಟ್ಟಿದ್ದು, ಅಲ್ಲದೆ ಸುರ್ಯಕಾಂತ ಎಂಬುವರು ಸಹಾಯ ಮಾಡಿರುತ್ತಾರೆ. ಲಾರಿ ಚಾಲಕನ ಹೆಸರು ಚಂದ್ರಕಾಂತ ತಂದೆ ಪಾಂಡು ರಾಠೋಡ ಸಾಃ ಶಿವಾಜಿ ನಗರ ಅಂತಾ ತಿಳಿಸಿರುತ್ತಾನೆ. ಅಲ್ಲಿಂದ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿ, ಶಿವಶರಣಪ್ಪಾ @ ಶರಣು ಈತನಿಗೆ ಎ.ಎಸ್.ಎಮ್ ಆಸ್ಪತ್ರೆ ಕಡೆಗೆ ತರುವ ಬಗ್ಗೆ ಮಾಹಿತಿ ತಿಳಿಸಿದಕ್ಕೆ ನಾನು ಗಾಬರಿಗೊಂಡು ನನ್ನ ನಾದನಿ ಅನ್ನಪೂರ್ಣ ಗಂಡ ಲಕ್ಷ್ಮಿಕಾಂತ ಇವರೊಂದಿಗೆ ಆಸ್ಪತ್ರೆಗೆ ಹೋದಾಗ ಅಷ್ಟೊತ್ತಿಗೆ ಅಲ್ಲಗೆ ತಂದಿದ್ದ ಗಂಡನವರಿಗೆ ನೋಡಲಾಗಿ ಮೇಲಿನಂತೆ ಗಾಯಗಳಾಗಿ ಮೃತ ಪಟ್ಟಿದರು. ಅಲ್ಲದೆ ಶ್ರೀನಿವಾಸ ಈತನಿಗು ಕೂಡಾ ಎಡ ಕಿವಿಯ ಹತ್ತೀರ ಹಾಗು ಎಡ ಮೊಳಕಾಲಿಗೆ, ಅಲ್ಲಲ್ಲಿ ರಕ್ತಗಾಯವಾಗಿ, ಆತನು ಆಸ್ಪತ್ರೆಯಲ್ಲಿ ಸೇರಿಕೆಯಾದನು ಮತ್ತು ಈ ಮೇಲಿನ ವಿಷಯವನ್ನು ಪುನಃ ತಿಳಿಸಿದನು. ಕಾರಣ ನನ್ನ ಗಂಡ ಮತ್ತು ಗಂಡನ ಗೆಳೆಯ ಶ್ರೀನಿವಾಸನಿಗೆ ಅಪಘಾತ ಪಡಿಸಿದ ಲಾರಿ ನಂ. ಕೆಎ 32 ಬಿ 2586 ನೇದ್ದರ ಚಾಲಕ ಚಂದ್ರಕಾಂತ ತಂದೆ ಪಾಂಡು ರಾಠೋಡ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರೋಜಾ ಪೊಲೀಸ ಠಾಣೆ :- ದಿನಾಂಕ 21/01/2023 ರಂದು ರಾತ್ರಿ 09:00 ಗಂಟೆಗೆ ಫಾಕೀಜಾ ಹತ್ತಿರ ನಾನು ಮೋಟಾರ ಸೈಕಲನಲ್ಲಿ ಬರುವಾಗ ಪಾಕೀಜಾ ಹತ್ತಿರ ನಿಂತಿದ್ದ ಮಹ್ಮದ ಸಲಿಂ @ಬಂಟು ಸಲಿಂ ಈತನು ನನ್ನ ಬೈಕಿಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿ ಮೈ ಎರಿಯಾ ಡಾನ್ ಹು ಮಾಲುಮ್ ನಹಿ ತುಮಕೋ ಆಜ್ ನಹಿ ಜೀಂದಾ ಚೋಡತೋ ಸಾಲೇ ಅಂತಾ ಅವಾಶ್ಚ ಶಬ್ದಗಳಿಂದ ಬೈದು ಕೈಯಿಂದ ನನ್ನ ಬಾಯಿಗೆ, ಎದೆಗೆ ಹೋಡದಿದ್ದು ನಂತರ ತನ್ನ ಹತ್ತಿರವಿದ್ದ ಕಬ್ಬಿಣದ ಪಾನಾದಿಂದ ನನ್ನ ತಲೆಗೆ ಹೋಡೆದಿದ್ದರ ಪರಿಣಾಮವಾಗಿ ತಲೆಗೆ ಭಾರಿ ರಕ್ತಗಾಯ ಆಗಿದ್ದು ಇರುತ್ತದೆ. ನಂತರ ನಾನು ಜೀವದ ಭಯದಿಂದ ಅಲ್ಲಿಂದ ತಪ್ಪಿಸಿಕೋಂಡು ಹೋಗಿದ್ದು ಇರುತ್ತದೆ. ನಂತರ ನಾನು ದಿನಾಂಕ 22/01/2023 ರಂದು ಬೇಳಿಗ್ಗೆ ಚಿಕಿತ್ಸೆಗಾಗಿ ಸರಕಾರಿ ಜಿಲ್ಲಾ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ, ಅವಾಚ್ಯ ಶಬ್ಧಗಳಿಂದ ಬೈಯ್ದು, ಕೈಯಿಂದ ನನ್ನ ಬಾಯಿಗೆ, ಎದೆಗೆ ಹೋಡದು ಹಾಗೂ ತಲೇಗೆ ಪಾನದಿಂದ ಹೊಡೆದು ರಕ್ತಗಾಯ ಪಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ ಠಾಣೆ :-  ದಿನಾಂಕ:23/01/2023 ರಂದು ಸಾಯಂಕಾಲ 04.00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ  ಜಗದೇವಿ ಗಂಡ ಬಸವರಾಜ ಪಾಟೀಲ ವ:55 ಉ:ಅಂಗನವಾಡಿ ಶಿಕ್ಷಕಿ ಜಾ:ಲಿಂಗಾಯತ ಸಾ:ಮನೆ.ನಂ.81 ಮೋದಿ ಲೇ ಔಟ ಭಾಗ್ಯೋದಯ ಶಾಲೆಯ ಹತ್ತಿರ ಕಸ್ತೂರಿ ಕಮಾನ ಕಲಬುರಗಿ ರವರು ಠಾಣೆಗೆ ಹಾಜರಾಗಿ ಗಣಕೀಕೃತದಲ್ಲಿ ಮಾಡಿದ ದೂರು ಸಲ್ಲಿಸಿದ ಸಾರಾಂಶವೇನೆಂದರೆ, ನಾನು ಶ್ರೀಮತಿ  ಜಗದೇವಿ ಗಂಡ ಬಸವರಾಜ ಪಾಟೀಲ ವ:55 ಉ:ಅಂಗನವಾಡಿ ಶಿಕ್ಷಕಿ ಜ್ಯಾ:ಲಿಂಗಾಯತ ಸಾ:ಮನೆ.ನಂ.81 ಮೋದಿ ಲೇ ಔಟ ಭಾಗ್ಯೋದಯ ಶಾಲೆಯ ಹತ್ತಿರ ಕಸ್ತೂರಿ ಕಮಾನ ಕಲಬುರಗಿ ಆಗಿದ್ದು, ತಮ್ಮಲ್ಲಿ ದೂರು ಸಲ್ಲಿಸವುದೇನೆಂದರೆ, ನನಗೆ ಇಬ್ಬರೂ ಗಂಡು ಮಕ್ಕಳಿದ್ದು , ಅಂಗನವಾಡಿ ಶಿಕ್ಷಕಿ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ವಾಸವಾಗಿರುತ್ತೇನೆ.ನನ್ನ ಹಿರಿಯ ಮಗನಾದ ಅಣ್ಣರಾವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಾಗಿರುತ್ತಾನೆ. ಕಿರಿಯ ಮಗನಾದ ಮಗನಾದ ಕು:ಶಿವಕುಮಾರ ಭಾರತೀಯ ವಿದ್ಯಾಮಂದಿರದಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸಮಾಡಿಕೊಂಡು ವಸತಿ ನಿಲಯದಲ್ಲಿ ವಾಸವಾಗಿದ್ದು ಅವನಿಗೆ ಆರೋಗ್ಯ ಸರಿ ಇರದ ಕಾರಣ ಮನಗೆ ಬಂದಿದ್ದು ಇರುತ್ತದೆ. ನಾನು ಸುಮಾರು 30 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡು ಸದ್ಯ ನಾನು ಆಳಂದ ತಾಲೂಕಿನ ಬಸವನಸಂಗೋಳಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಕರ್ತವ್ಯ ಕುರಿತು ದಿನಾಂಕ:19.01.2023 ರಂದು ಬೆಳಿಗ್ಗೆ 08.30 ಗಂಟೆಗೆ ನನ್ನ ಮನೆಗೆ ಬೀಗ ಹಾಕಿಕೊಂಡು ನನ್ನ ಮಗನೊಂದಿಗೆ ಬಸವನಸಂಗೋಳಿಗೆ ಹೋಗಿ ಅಲ್ಲಿಯೇ ಉಳಿದುಕೊಂಡಿರುತ್ತೇನೆ. ಹೀಗಿದ್ದು, ದಿನಾಂಕ:20/01/2023 ರಂದು ಬೆಳಿಗ್ಗೆ 08.00 ಗಂಟೆ ಸುಮಾರಿಗೆ ಬಸವನ ಸಂಗೋಳಗಿಯಲ್ಲಿದ್ದಾಗ ನಮ್ಮ ಮನೆಯ ಪಕ್ಕದವರಾದ ಶ್ರೀಮತಿ ಇಂದುಬಾಯಿ ಮತ್ತು ಶ್ರೀಮತಿ ಲಕ್ಷ್ಮೀ ಇವರು ನನಗೆ ಫೋನ ಮಾಡಿ ನಿಮ್ಮ ಮನೆಯ ಕೀಲಿ ಮುರಿದಿದೆ ಅಂತ ಮಾಹಿತಿ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮಗ ಶಿವಕುಮಾರ ಇಬ್ಬರೂ ಸಂಗೋಳಗಿಯಿಂದ  ಬೆಳಿಗ್ಗೆ 11.00 ಗಂಟೆಗೆ ಮನೆಗೆ ಬಂದು ನೋಡಲಾಗಿ  ಶ್ರೀಮತಿ ಇಂದುಬಾಯಿ ಮತ್ತು ಶ್ರೀಮತಿ ಲಕ್ಷ್ಮೀ ಇವರು ತಿಳಿಸಿದ ವಿಷಯ ನಿಜವಿದ್ದು, ಮನೆಯ ಕೀಲಿಕೊಂಡಿ ಕತ್ತರಿಸಿ ಬೀಗ ಅಲ್ಲಿಯೇ ಬಿಸಾಕಿ ಹೋಗಿದ್ದು ಇರುತ್ತದೆ. ಮನೆಯ ಒಳಗೆ ಹೋಗಿ ನೋಡಲಾಗಿ ಅಲಮಾರಿಯಲ್ಲಿಟ್ಟಿದ 1) ಎರಡು ಬೆಳ್ಳಿಯ ಚೌಕಾ (ಲಿಂಗ) ಒಂದೊಂದು ತೊಲೆಯದು ಅ.ಕಿ 1360/- 2) ಒಂದೊಂದು ತೊಲೆಯ 5 ಬೆಳ್ಳಿಯ ನಾಣ್ಯಗಳು ಅ.ಕಿ.3400/- ಮತ್ತು 3) ನಗದು ಹಣ 20000/-ರೂ  ಯಾರೋ ಕಳ್ಳರು ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ದಿನಾಂಕ:19/01/2023 ರಂದು ರಾತ್ರಿ 08.00 ಗಂಟೆಯಿಂದ ದಿನಾಂಕ:20/01/2023 ರಂದು ಬೆಳಿಗ್ಗೆ 08.30 ಗಂಟೆಯ ಮಧ್ಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಕಂಡು ಬಂದಿರುತ್ತದೆ. ನನ್ನ ಅಣ್ಣ ತಮ್ಮಂದಿರಿಗೆ ವಿಚಾರ ಮಾಡಿಕೊಂಡು ದೂರು ಕೊಡಲು ತಡವಾಗಿರುತ್ತದೆ.  ಕಾರಣ ನನ್ನ ಮನೆಯ  ಕೀಲಿಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ ಹಣ ಮತ್ತು ಬೆಳ್ಳಿ ಸಾಮಾನುಗಳು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಕಳುವಾದ ಹಣ ಮತ್ತು  ಬೆಳ್ಳಿ ಸಾಮಾನುಗಳು ಮರಳಿಸಿ ಕೊಡಬೇಕೆಂದು ಅಂತ ಕೊಟ್ಟ ಇತ್ಯಾದಿ ದೂರಿನ ಸಾರಾಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ:23-01-2023  ರಂದು ಮದ್ಯಾಹ್ನ ೩:೧೫ ಕ್ಕೆ ಫಿರ್ಯಾದಿದಾರರಾದ ಶ್ರೀ ದತ್ತು ತಂದೆ ಮಾರುತಿರಾವ್ ಮಾನೆ ವಯ:೫೪ ವರ್ಷ ಜಾ:ಹಡಪದ ಉ:ಕ್ಷೌರಿಕ ಸಾ//ಮಾಲ್ಮಿಕಿ ದೇವಸ್ಥಾನದ ಹತ್ತಿರ ಗಾಜಿಪೂರ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಹೊಂಡಾ ಡಿಯೋ ಸ್ಕೂಟರ್ ನಂ KA-32-EM-1319 ನೇದ್ದು ಇದ್ದು ಸದರಿ ಸ್ಕೂಟರ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಸ್ಕೂಟರ್‌ವು ದಿನಾಂಕ:19-01-2023 ರಂದು ಮದ್ಯಾಹ್ನ ೨:೦೦ ಗಂಟೆಗೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ ತುರ್ತು ಘಟಕದ ಮುಂದುಗಡೆ ನಿಲ್ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಬಂಧಿಕರನ್ನು ಮಾತನಾಡಿಸಿಕೊಂಡು ರಾತ್ರಿ ಅಲ್ಲೇ ಉಳಿದುಕೊಂಡು ಮರುದಿನ ದಿನಾಂಕ ೨೦/೦೧/೨೦೨೩ ರಂದು ಬೆಳಿಗ್ಗೆ ೮:೦೦ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಸ್ಕೂಟರ್ ನೋಡಲಾಗಿ ನನ್ನ ಸ್ಕೂಟರ್ ಇರಲಿಲ್ಲಾ, ಸ್ಕೂಟರ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿ ಸಿಗದ ಕಾರಣ ಠಾಣೆಗೆ ಬಂದು ಫಿರ್ಯಾದಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಸ್ಕೂಟರ್‌ನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ:23-01-2023  ರಂದು ಸಾಯಂಕಾಲ ೫:೩೧ಕ್ಕೆ ಫಿರ್ಯಾದಿದಾರರಾದ ಶ್ರೀ ರಿಯಾಜ್ ಅಹಮದ್ ತಂದೆ ಮಕ್ಬುಲ್ ಅಹಮದ್ ವಯ:೩೮ವರ್ಷ ಜಾ:ಮುಸ್ಲಿಂ ಉ:ಟೈಲರಿಂಗ್ ಸಾ//ಹಳೆ ಪೊಲೀಸ್ ಕ್ವಾಟ್ರಸ್ ರಾಮಾ ಮೊಹೋಲ್ಲಾ ಶಹಾಬಾದ ಹಾಲಿವಾಸ: ಕಾಳಮ್ಮ ದೇವಸ್ಥಾನದ ಹತ್ತಿರ ಸಂತ್ರಾಸವಾಡಿ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಹೊಂಡಾ ಸಿಬಿ ಶೈನ್ ಮೋಟಾರ್ ಸೈಕಲ್ ನಂ KA-32-ER-2029 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:22-01-2023 ರಂದು ಸಾಯಂಕಾಲ ೪:೦೦ ಗಂಟೆಗೆ ಕಲಬುರಗಿ ನಗರದ ಸೂಪರ್ ಮಾರ್ಕೆಟದ ಮಹಿಬಾಸ್ ಮಸೀದಿ ಹತ್ತಿರದ ಅಪ್ಪಾನ್ ಡ್ರೇಸಿಸ್ ಅಂಗಡಿ ಮುಂದುಗಡೆ ನಿಲ್ಲಿಸಿ ಅಪ್ಪಾನ್ ಡ್ರೇಸಿಸ್ ಅಂಗಡಿ ಒಳಗಡೆ ಹೋಗಿ ಟೈಲರಿಂಗ್ ಕೆಲಸ ಮುಗಿಸಿಕೊಂಡು ಮರಳಿ ಅದೆ ದಿನ ರಾತ್ರಿ ೮:೩೦ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿ ಸಿಗದ ಕಾರಣ ಠಾಣೆಗೆ ಬಂದು ಫಿರ್ಯಾದಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ ಠಾಣೆ :-  ದಿನಾಂಕಃ 23.01.2023 ರಂದು ಸಾಯಾಂಕಾಲ 7.30 ಗಂಟೆಯ ಸುಮಾರಿಗೆ ಶ್ರೀ ಅಜೀಮ್ ಸಗ್ರಿ ತಂದೆ ಮಕಬೂಲ್ ಅಹ್ಮದ ಸಗ್ರಿ ವಯಃ 34 ವರ್ಷ ಜಾಃ ಮುಸ್ಲಿಂ ಉಃ ಡಾಕ್ಟರ ಸಾಃ ಹುಸೇನಿ ಗಾರ್ಡನ ಕಲಬುರಗಿ  ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ  ನಾನು  ದಿನಾಂಕಃ 22.01.2023 ರಮದು 11.00 ಎಎಮಕ್ಕೆ ನಾನು ಕೆಲಸದಿಂದ ಮನೆಗೆ ಹಿಂದಿರುಗುವ ಸಮಯದಲ್ಲಿ ಗುಲಾಮ್ ರಬ್ಬಾನಿ ತಿಮ್ಮಾಪೂರಿ ಹಾಗೂ ಅವರ ಜೋತೆ ಸುಮಾರು ಆರು ಜನರು ಕೂಡಿಕೊಂಡು ಬಂದು ನಮ್ಮ ಮನೆಯ ಬಾಗಿಲು ಒಡೆದು  ಮನೆಗೆ ಅಳವಡಿಸಿರುವ ಸಿಸಿಟಿವಿ ಹಾಗೂ ಡಿವಿಆರ್ ಕಿತ್ತಿಕೊಂಡಿದ್ದು ಅಲ್ಲದೆ ಯಾಕೆ ಎಂದು ಕೇಳಿದ್ದಾಗ ನನಗೆ ಅವಾಚ್ಯ ಶಬ್ಧಗಳಿಂದ ಬೈದು ನನ್ನ ದೆಯ ಮೇಲಿನ ಅಂಗಿ ಹಿಡಿದು ಕೈ ಮುಷ್ಠಿ ಮಾಡಿ ಹೊಡೆದಿದ್ದು ಅಲ್ಲದೆ ಅವನ ಜೋತೆ ಬಂದಿದ್ದ ಆರು ಜನರು ‘ ಇವನನ್ನು ಹೊಡೆದು ಬಿಡಿ ಇವನಿಗೆ ಬಿಡೋದು ಬೇಡ ದು ಕೂಗಿ ಹಾಕಿ ಅವಾಗ ಗುಲಾಮ್ ರಬ್ಬಾನಿ ತಿಮ್ಮಾಪೂರಿ ಸುತ್ತಿಗೆ ತಂದು ನನ್ನ ತೆಲೆ ಮೇಲೆ ಹೊಡೆಯುವಾಗ ನಾನು ತುರ್ತ್ತು ಕ್ರಮ ತೆಗೆಕೊಂಡಾಗ ಸುತ್ತಿಗೆ ಏಟು ನನ್ನ ಬಲ ಭುಜದ ಮೇಲೆ ಬಿದ್ದಿದು ಹಾಗೆ ಎಲ್ಲರೂ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದರು, ಆವಾಗ ನನ್ನ ಡ್ರೈವರ ಮನ್ಸೂರ ನಡುವೆ ಬಂದು ಜಗಳ ಬಿಡಿಸುವ ಪ್ರಯತ್ನ ಮಾಡಿ ಬಿಡಿಸಿನು  ನನ್ನ ಅಕ್ಕನಾ ಖುರ್ರತ್ ಎಲ್.ಥನ್ ನೌಶೌಆ ಕೂಡಾ ಜಗಳವನ್ನು ನೋಡಿ ಘಾಬರಿಯಾಗಿ ಜಗಳವನ್ನು ಬಿಡಿಸುವಾಗಿ ಎತ್ನಿಸಿದರು ಈ ಘಟನೆಯಲ್ಲಿ ನನ್ನ ಮೇಲೆ ಹಲ್ಲೆ ಆಗಿದ್ದು ಸೇರಿ ನಮ್ಮ ಮನೆಯ ಬಾಗಿಲು, ಸಿಸಿ ಟಿವಿ,ದಿವಿಆರ್ ಮತ್ತು ಹಲವಾರು ವಸ್ತುಗಳು ಹಾನಿ ಆಗಿದೆ ಹಾಗೂ ಡಿವಿಆರ್ ದೋಚಿಕೊಂಡು ಹೋಗಿದ್ದಾರೆ ಈ ಘಟೆನಯ ನಂತರ ನಾನು ಸರಕಾರಿ ಆಸ್ಪತ್ರೆಯಲ್ಲಿ ಹೋಗಿ ಚಿಕಿತ್ಸೆ ತೊಗೋಳುವಾಗ ಎಮ್.ಎಲ್.ಸಿ ಕೂಡಾ ನೊಂದಣಿ ಆಗಿದೆ. ಈ ಸಂದರ್ಭದಲ್ಲಿ ನಿಮ್ಮಲ್ಲಿ ನಾನು ವಿನಂತಿಸಿಕೊಳ್ಳುವುದೆನೆಂದರೆ ಈ ಅರ್ಜಿಯ ಮೂಲಕ  ತಾವು ಕೇಸನ್ನು ರಜಿಸ್ಟರ ಮಾಡಿ ಸೂಕ್ತ ಕ್ರಮ ತೆಗೆದುಕೋಳ್ಳಿ ಹಾಗೆನೆ ನಾವು ಹಾಗೂ ನಮ್ಮ ಸಹೋದರರು ಜೀವದ ಭೀತಿಯಲ್ಲಿದ್ದು ನಮ್ಮ ರಕ್ಷಣೆ ನಿಮ್ಮಲ್ಲಿ ವಿನಂತಿಸಿಕೋಳ್ಳುತ್ತೇನೆ. ಅಂತ ಇತ್ಯಾದಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 23/01/2023 ರಂದು 11:00 AM ಕ್ಕೆ ಶ್ರೀ. ರಫೀಕ ಪಟೇಲ ತಂದೆ ಮಹೇಬೂಬ ಪಟೇಲ ಸಾ: ಭಣಮಿ ಹಾ:ವ: ಡಬ್ರಾಬಾದ ಕ್ರಾಸ ಹತ್ತೀರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಅರುಣಕುಮಾರ ತಂದೆ ರವಿಚವ್ಹಾಣ ಇವರು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ, ನಾನು ನಿನ್ನೆ ದಿನಾಂಕ22/01/2022 ರಂದು ಕಾಕಡೆಚೌಕ ಹತ್ತೀರ ಇರುವ ಬೆಂಗಳೂರ ಫಂಕ್ಷನ್ ಹಾಲ್ ನಲ್ಲಿ ನಮ್ಮ ಸಂಭಂದಿಕರ ಮದುವೆ ಕಾರ್ಯಕ್ರಮಕ್ಕೆ ಹೋಗುವ ಕುರಿತು ಬೆಳಗ್ಗೆ ನಮ್ಮ ಮನೆ ಹತ್ತೀರ ಇರುವ ನಮ್ಮ ಅಕ್ಕಳಾದ ಶಬಾನಾ ಗಂಡ ಸೈಯದ್ ಸಿರಾಜೋದ್ದಿನ್ ಅವರ ಮನೆಗೆ ಹೋಗಿ ಅವಳಿಗೆ ಹಾಗೂ ಅವಳ ಮಕ್ಕಳಾ ತಬಸ್ಸುಮ ಹಾಗೂ ತನವೀರ ಇವರಿಗೆ ನನ್ನ ಪಲ್ಸರ್ ಮೋಟರ ಸೈಕಲ್ ನಂ.ಕೆಎ-32 ಇಹೆಚ್-5698 ನೇದ್ದರ ಮೇಲೆ ಕೂಡಿಸಿಕೊಂಡು ಬೆಂಗಳೂರ ಫಂಕ್ಷನ ಹಾಲಿಗೆ ಹೋಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಮನೆಗೆ ಬರುವ ಕುರಿತು ರಸ್ತೇಯ ಬದಿಯಿಂದ ನಿಧಾನವಾಗಿ ಮೋಟರ ಸೈಕಲ ಚಲಾಯಿಸಿಕೊಂಡು ಚೋರಗುಮ್ಮಜ್ ಹತ್ತೀರ ಇಳಿಜಾರಿನ ರಸ್ತೇಯ ಮೇಲೆ ಬರುವಾಗ ಮಧ್ಯಾಹ್ನ 3-00 ಗಂಟೆ ಸುಮಾರಿಗೆ  ಒಂದು ಕೆ.ಕೆ.ಆರ್.ಟಿ.ಸಿ.ಬಸ್ ಚಾಲಕನು ಡಬ್ರಾಬಾದ ಕ್ರಾಸ್ ಕಡೆಯಿಂದ ಆಳಂದಚೆಕ್ ಪೋಸ್ಟ್ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ರಾಂಗ್ ಸೈಡಿಗೆ ಅಂದರೆ ನಮ್ಮ ರಸ್ತೇಯ ಬದಿಗೆ ಎದುರಿನಿಂದ ಬಂದು ನಮ್ಮ ಮೋಟರ ಸೈಕಲ್ಲಿಗೆ ಡಿಕ್ಕಿಪಡಿಸಿದನು. ಆಗ ನಾವು ಮೋಟರ ಸೈಕಲ ಸಮೇತ ಕೆಳಗೆ ಬಿದ್ದೇವು ಅದನ್ನು ನೋಡಿದ ಅಲ್ಲಿಯೇ ಇದ್ದ ಖದೀರ ತಂದೆ ಅಬ್ದುಲ್ ರಹೇಮಾನ  ಹಾಗೂ ಚಾಂದಸಾಬ ತಂದೆ ಹುಸೇನ್ ಸಾಬ ಲಷ್ಕೇರಿ ಇವರು ಬಂದು ನಮಗೆ ಎಬ್ಬಿಸಿ ರಸ್ತೇಯ ಬದಿಯಲ್ಲಿ ಕೂಡಿಸಿ ನೋಡಲು ಸದರ ಘಟನೆಯಿಂದ ನನಗೆ ತಲೆಗೆ ರಕ್ತಗಾಯ ಹಾಗೂ ಗದ್ದಕ್ಕೆ ಭಾರಿ ಒಳಪೆಟ್ಟು ಆಗಿ ಕೆಳಗಿನ ಎರಡು ಹಲ್ಲುಗಳು ಮುರಿದಿದ್ದು. ನಮ್ಮ ಅಕ್ಕ ಶಬಾನಾ ಇವಳಿಗೆ ನೋಡಲು ಎಡಗೈ ರಿಸ್ಟ್ ಹತ್ತೀರ ಭಾರಿ ಒಲಪೆಟ್ಟು ಹಾಗೂ ಅಲ್ಲಲ್ಲಿ ತರಚಿದರಕ್ತ ಗಾಯಗಳು ಆಗಿದ್ದು. ನನ್ನ ಅಕ್ಕನ ಮಕ್ಕಳಾದ ತಬಸ್ಸುಮ ಮತ್ತು ತನವೀರ ಇವರಿಗೆ ನೋಡಲು ಕೈ ಕಾಲುಗಳಿಗೆ ಹಾಗೂ ಮುಖದ ಹತ್ತೀರ ತರಚಿದ ರಕ್ತಗಾಯಗಳು ಆಗಿದ್ದು ಇರುತ್ತದೆ. ನನ್ನ ಮೋಟರ ಸೈಕಲ್ಲಿಗೆ ಡಿಕ್ಕಿಪಡಿಸಿದ ಬಸ್ ನಂಬರ ನೋಡಲು ಕೆಎ-32 ಎಫ್-2047 ನೇದ್ದು ಇದ್ದು ಅದರ ಚಾಲಕನ ಹೆಸರು ಮಲ್ಲಪ್ಪಾ ಅಂತಾ ಗೊತ್ತಾಗಿದ್ದು ಇರುತ್ತದೆ. ಸದರ ವಿಷಯಗೊತ್ತಾಗಿ ಸ್ಥಳಕ್ಕೆ ಅಂಬುಲೆನ್ಸ್ ವಾಹನ ಬಂದು ನಮಗೆ ಕೂಡಿಸಿಕೊಂಡು ಉಪಚಾರ ಕುರಿತು ಕ್ಯೂಪಿ ಆಸ್ಪತ್ರೆಗೆ ಕರೆದು ಕೊಂಡು ಬಂದು ಸೇರಿಗೆ ಮಾಡಿದ್ದು ಇರುತ್ತದೆ. ನಾನು ನನ್ನ ಚಿಕಿತ್ಸೆಯಲ್ಲಿ ಇದ್ದು. ದೂರು ನೀಡಲು ವಿಳಂಬವಾಗಿರುತ್ತದೆ. ಕಾರಣ ಸದರಿ ನನ್ನ ಮೋಟರ ಸೈಕಲ್ಲಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಕೆ.ಕೆ.ಆರ್.ಟಿ.ಸಿ. ಬಸ್ ನಂ.ಕೆಎ-32 ಎಫ್-2047 ನೇದ್ದರ ಚಾಲಕ ಮಲ್ಲಪ್ಪಾ ಈತನ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿ ಇರುತ್ತದೆ. ಅಂತಾ ಇತ್ಯಾದಿ ಕೊಟ್ಟು ಲಿಖಿತ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 24-01-2023 01:20 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080