ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ: 22/12/2022 ರಂದು 8.45 ಪಿ.ಎಮ್ ಕ್ಕೆ  ಶ್ರೀಮತಿ ಮಹೇಶ್ವರಿ ಗಂಡ ರಾಜಕುಮಾರ ಪಾಟೀಲ ವಯ: 39 ವರ್ಷ ಜಾ: ಲಿಂಗಾಯತ ಉ: ಮಹಿಳಾ ಪೊಲೀಸ್ ಕಾನಸ್ಟೇಬಲ ಸಾಃ ಮನೆ ನಂ 18 ಉದಯ ನಗರ ಸಂತೋಷ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಿಕೀಕೃತ ಮಾಡಿಸಿದ ದೂರು ಹಾಜರಪಡಿಸಿದರ ಸಾರಾಂಶವೆನೆಂದರೆ ನಾನು ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆ ಅಂತ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ. ಇಂದು ದಿನಾಂಕ: 22/12/2022 ರಂದು ಸಾಯಾಂಕಾಲ 6.00 ಗಂಟೆಯ ಸುಮಾರಿಗೆ ವೆಂಕಟೇಶ ನಗರದಲ್ಲಿ ಇರುವ ನನ್ನ ಗೆಳೆತಿಯಾದ ಶ್ರೀಮತಿ ಗುರುದೇವಿ ಇವರ ಮನೆಗೆ ಹೋಗಿ  ನನ್ನ ಮೋಟಾರ ಸೈಕಲ್ ಗುರುದೇವಿ ರವರ ಮನೆ ಮುಂದೆ ನಿಲ್ಲಿಸಿ ನಂತರ ಅಲ್ಲಿಂದ ನಾವಿಬ್ಬರೂ ಕೂಡಿಕೊಂಡು ಗುರುದೇವಿ ಇವರ  ಮೋಟಾರ ಸೈಕಲ್ ಮೇಲೆ ಹಿಂದೆ ಕುಳಿತುಕೊಂಡು ವೆಂಕಟೇಶ ನಗರದಿಂದ ವಿಜಯ ನಗರ ಬಡಾವಣೆಯಲ್ಲಿ ಇರುವ ನನ್ನ ಗೆಳೆತಿ ಶ್ರೀಮತಿ ರೇಣುಕಾ ಇವರ ಮನೆಗೆ ಹೋಗಬೇಕೆಂದು ಆಳಂದ ಚಕಪೋಸ್ಟ ಮಾರ್ಗವಾಗಿ ಹೋಗುವ ರಸ್ತೆ ಮದ್ಯ ಅಂದರೆ ಚಿಂಚೋಳಿ ಲೇಔಟ ಹತಿರದಿಂದ ಹೋಗುತ್ತಿರುವಾಗ ನಮ್ಮ ಹಿಂದಿನಿಂದ ಯಾರೋ ಇಬ್ಬರು ಮೋಟಾರ ಸೈಕಲ್ ಸವಾರ ಬಂದವರೆ ನನ್ನ ಕೊರಳಿಗೆ ಕೈ ಹಾಕಿ ನನ್ನ ಕೋರಳಲ್ಲಿನ 35 ಗ್ರಾಂದ ಬಂಗಾರದ ಮಂಗಳ ಸೂತ್ರ  ಕಿತ್ತಿಕೊಂಡಿದ್ದು ತಕ್ಷಣ  ನಾವಿಬ್ಬರು ಕೆಳಗಡೆ ಬಿದ್ದಿರುತ್ತೇವೆ ಅಷ್ಟರಲ್ಲೆ ಆ ಮೋಟಾರ ಸೈಕಲ್ ಸವಾರರು ವೇಗವಾಗಿ ತಮ್ಮ ಮೋಟಾರ ಸೈಕಲ್ ತೆಗೆದುಕೊಂಡು ಹೋಗಿರುತ್ತಾರೆ. ನಾವು ಗಾಬರಿಯಿಂದ ಕೆಳಗಡೆ ಬಿದ್ದಿದ್ದು ಆದರೆ ಮೋಟಾರ ಸೈಕಲ್ ನಂಬರ  ನೋಡಿರುವದಿಲ್ಲ. ಆದರೆ ಮೋಟಾರ ಸೈಕಲ್ ಹಿಂದೆ ಕುಳಿತವನು ಮುಖಕ್ಕೆ ಮಂಕಿಕ್ಯಾಪ್ ಹಾಕಿಕೊಂಡಿರುತ್ತಾನೆ. ದಿನಾಂಕ: 22/12/2022 ರಂದು ಸಾಯಾಂಕಾಲ 6.30 ಗಂಟೆಯ ಸುಮಾರಿಗೆ ಚಿಂಚೋಳಿ ಲೇಔಟ ಹತಿರ ನನ್ನ ಕೊರಳ್ಳಲ್ಲಿನ 35 ಗ್ರಾಂದ ಮಂಗಳ ಸೂತ್ರ ಅಂಕಿ ಅಂಶ 1,78,500 ರೂ  ಬೆಲೆಬಾಳು ಬಂಗಾರದ ಆಭರಣಗಳು ಕಿತಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರಗಿಸಿ ನನಗೆ ನ್ಯಾಯಾ ದೊರಕಿಸಿಕೊಡಬೇಕೆಂದು ಎಂದು ಫಿರ್ಯಾಧಿ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 22/12/2022 ರಂದು ಬೇಳಿಗ್ಗೆ 9:00 ಗಂಟೆಯಿಂದ ಸಾಯಂಕಾಲ ೫:೩೦ ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ತನ್ನ ಬೆಡ್ ರೂಮಿನಲ್ಲಿಟ್ಟಿದ್ದ 1) 4 ಗ್ರಾಂ ಬಂಗಾರದ ಒಂದು ಜೊತೆ ಕಿವಿಯೊಲೆ ಅ.ಕಿ-20,000 /-ರೂ, 2) 3 ಗ್ರಾಂ ಬಂಗಾರದ ಒಂದು ಜೊತೆ ಕಿವಿಯೊಲೆ ಅ.ಕಿ-15,000 /-ರೂ, 3) 5 ಗ್ರಾಂ ಬಂಗಾರದ ಸುತ್ತುಂಗುರ ಅ.ಕಿ-25,000 /-ರೂ, 4) 30 ಗ್ರಾಂ ಬೆಳ್ಳಿಯ ಕಾಲಚೈನ್ ಅ.ಕಿ-1800/-ರೂ, 5) 30 ಗ್ರಾಂ ಬೆಳ್ಳಿಯ ಕಾಲ ಖಡ್ಗ ಅ.ಕಿ-1800/-ರೂ, 6) ನಗದು ಹಣ 70,000 /-ರೂ ಹೀಗೆ ಒಟ್ಟು 133600/- ರೂ ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾಧಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ: 22/12/2022 ರಂದು 6:30 ಪಿ.ಎಮ್ ಕ್ಕೆ ಶ್ರೀ ಮಲ್ಲಿಕಾರ್ಜುನ ಜಾನೆ ಎಎಸ್ಐ ರಾಘವೇಂದ್ರ ನಗರ ಪೊಲೀಸ ಠಾಣೆ ಕಲಬುರಗಿ ನಗರ ರವರು ಒಬ್ಬ ಆರೋಪಿತ ಹಾಗೂ ಜಪ್ತಿಪಂಚನಾಮೆ, ಮುದ್ದೆಮಾಲಿನೊಂದಿಗೆ ಜ್ಞಾಪನಪತ್ರ ನೀಡಿದರ ಸಾರಾಂಶವೇನೆಂದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 6.45 ಪಿ.ಎಮ್ ಕ್ಕೆ ಸದರಿ ಜ್ಞಾಪನ ಪತ್ರದ ಸಾರಾಂಶವೇನೆಂದರೆ. ಈ ಮೂಲಕ ಜ್ಞಾಪನ ಪತ್ರ ಕೊಡುವುದೇನೆಂದರೆ,ಇಂದು ದಿನಾಂಕ:12/12/2022 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಉಮೇಶ ಸಿಪಿಸಿ-111, ಶ್ರೀ ರಮೇಶ ಸಿಪಿಸಿ-445 ಶ್ರೀ ಮುಜಾಹಿದ ಹುಸೇನ ಪಿಸಿ-158 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಮಿರ್ಚಿಗೋದಾಮ ಹತ್ತಿರ ಇರುವ ಐಕಾನ್ ಕಾಂಪ್ಲೆಕ್ಸ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ ಇದು ಬಾಂಬೆ ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ ಎಂದು ತಿಳಿಸಿರುವದರಿಂದ ಸದರಿ ಮಾಹಿತಿಯನ್ನು ಮಾನ್ಯ ಮೇಲಾಧಿಕಾರಿಯವರಿಗೆ ತಿಳಿಸಿ ಮಾನ್ಯ ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಖಚಿತವಾದ ಮಾಹಿತಿಯಂತೆ ಸದರಿಯವರ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಶ್ರೀ ರಮೇಶ ಸಿಪಿಸಿ-445 ರವರ ಮುಖಾಂತರ ಬರಮಾಡಿಕೊಂಡು ಅವರಿಗೆ ತಿಳಿ ಹೇಳಿ ನಂತರ ಪಂಚರು ಮತ್ತು ನಾವು ಸಿಬ್ಬಂದಿಯವರು ನಮ್ಮ ನಮ್ಮ ಮೋಟಾರ ಸೈಕಲ್ ಮೇಲೆ ಸಾಯಂಕಾಲ 4-45 ಗಂಟೆಗೆ ಹೊರಟು 5.00 ಪಿ.ಎಮ್ ಕ್ಕೆ ಸ್ಥಳಕ್ಕೆ ತಲುಪಿ ಮರೆಯಾಗಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಅವರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೂಡುತ್ತಿರುವದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು, ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನಿಗೆ ಸಿಬ್ಬಂದಿಯವರ ಸಹಾಯದಿಂದ ವ್ಯಕ್ತಿಗೆ ಹಿಡಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಅಹೆಮದ ಪಾಶಾ ತಂದೆ ಅಬ್ದುಲ ಅಜೀಜ ವಯ-33 ವರ್ಷ ಜಾ|| ಮುಸ್ಲಿಂ ಉ|| ಖಾಸಗಿ ಕೆಲಸ ಸಾ|| ಮಿಸ್ಬಾ ನಗರ ಟವರ್ ಹಿಂದುಗಡೆ ಅಫ್ರೋಜ ಸಡ್ಡಾ ರವರ ಮನೆಯಲ್ಲಿ ಬಾಡಿಗೆ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋದನೆ ಮಾಡಲು ಅವನ ಹತ್ತಿರ ನಗದು ಹಣ 2180 /-ರೂ ಸಿಕ್ಕಿದ್ದು ಮತ್ತು ಒಂದು ಬಾಲ್ ಪೆನ ಅಃಕಿಃ 00, ಒಂದು ಮಟಕಾ ಚೀಟಿ ಅಕಿ. 00/- ದೊರೆತಿದ್ದು, ಸದರಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 2180/- ರೂಗಳು, ಬೆಲೆ ಬಾಳುವದನ್ನು ಸದರಿಯವನಿಂದ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿಕೊಂಡು ಮುಂದಿನ ಪುರಾವೆಗಾಗಿ ಸದರಿ ವ್ಯಕ್ತಿಯನ್ನು ನನ್ನ ತಾಬಾಕ್ಕೆ ತೆಗೆದುಕೊಂಡು ಸಾಯಂಕಾಲ 5-00 ಗಂಟೆಯಿಂದ 6-00 ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿ ಮಾಡಿಕೊಂಡ ಮುದ್ದೆ ಮಾಲು ಮತ್ತು ಆರೋಪಿತನೊಂದಿಗೆ ಮರಳಿ 6-30 ಪಿ.ಎಂ ಗಂಟೆಗೆ ಠಾಣೆಗೆ ಬಂದು ಸದರಿಯವನ ವಿರುಧ್ದ ಕಲಂ:78(3) ಕೆ.ಪಿ.ಆ್ಯಕ್ಟ ಅಡಿಯಲ್ಲಿ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ಅರ್ಜಿಯ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಸಬ್-ಅರ್ಬನ್ ಪೊಲೀಸ ಠಾಣೆ :- ದಿನಾಂಕ:22/12/2022 ರಂದು ಸರಕಾರಿ ತರಫೆ ಫಿರ್ಯಾಧಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾಧಿಯೇನೆಂದರೆ ಸದರಿಯವರಿಗೆ  ದಿನಾಂಕ:22/12/2022 ರಂದು ಮಧ್ಯಾಹ್ನ 3.00 ಗಂಟೆಗೆ ಖಚಿತ ಮಾಹಿತಿ ಬಂದಿದ್ದೇನೆಂದರೆ ಮಿಲ್ಲತ ನಗರದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಗೃಹ ಬಳಕೆಯ ಸಿಲಿಂಡರ್‌ಳನ್ನು ಅನಧಿಕೃತವಾಗಿ ಆಟೋರಿಕ್ಷಾಗಳಿಗೆ ತುಂಬುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ಮಾಡಲಾಗಿ ಸದರಿ ಆರೋಪಿತರನನ್ನು ವಿಚಾರಿಸಲು ಯಾವುದೇ ಪರವಾನಗೆ ಇಲ್ಲದೇ ಆಟೋರಿಕ್ಷಾಗಳಿಗೆ ಗ್ಯಾಸ್ ತುಂಬುತ್ತಿದ್ದಿದ್ದರಿಂದ ಸದರಿ ಆರೋಪಿತ ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದು ಸದರಿ ಆರೋಪಿತನ ವಿರುದ್ದ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳುವ ಬಗ್ಗೆ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ: 22/12/2022 ರಂದು ಸಾಯಂಕಾಲ 6:15 ಗಂಟೆಗೆ ಖಾಸಗಿ ಯನೈಟೆಡ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಶಿವರುದ್ರ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಶಿವರುದ್ರ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 22/12/2022 ರಂದು ಸಾಯಂಕಾಲ ಅಂದಾಜು 4:30 ಗಂಟೆ ಸುಮಾರಿಗೆ ನಾನು ದಿನ ನಿತ್ಯದಂತೆ ಎಸವಿಪಿ ಸರ್ಕಲ ಹತ್ತೀರ ಬರುವ ಮೆಡಿಪ್ಲಸ ಮೆಡಿಕಲ ಅಂಗಡಿಗೆ ಬಂದು ಕೆಲಸ ನಿರ್ವಸಿ ಸಾಯಂಕಾಲ ವಾಪಸ್ಸ ಮನೆಗೆ ಹೋಗುವ ಸಂಬಂದ ನಮ್ಮ ಮೇಡಿಪ್ಲಸ ಅಂಗಡಿಯಿಂದ ಎಸವಿಪಿ ಸರ್ಕಲ ವೃತ್ತ ಮುಖಾಂತರವಾಗಿ ನನ್ನ ಮೋಟಾರ ಸೈಕಲ ನಂಬರ ಕೆಎ-32/ಇಜೆಡ್-4556 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಎಸವಿಪಿ ಸರ್ಕಲ ಹತ್ತೀರ ಬರುವ ಕಂದೂರ ಮಹಲ್ ಎದುರಿನ ರೋಡ ಮೇಲೆ ಎನ್.ಈ.ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-32/ಎಫ್-2194 ನೇದ್ದರ ಚಾಲಕ ಪರಶುರಾಮ ಇತನು ಜಗತ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಹಿಂದುಗಡೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿದ್ದು  ಬಸ್ಸ ಚಾಲಕ ಪರಶುರಾಮ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ: 22/12/2022 ರಂದು ಬೆಳಿಗ್ಗೆ 09:30 ಗಂಟೆಗೆ ಶ್ರೀಮತಿ ಮಹಾನಂದಾ ಗಂಡ ರಾಜು ಬುಮ್ಮಾರಿ ವಯಃ 35 ವರ್ಷ ಜಾತಿಃ ಪ.ಜಾತಿ(ಹೊಲೆಯ) ಉಃ ಕೂಲಿ ಕೆಲಸ ಮುಕ್ಕಾಃ ಹರಸೂರ ಹಾ.ವಃ ಆಜಾದಪೂರ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಂಶವೆನೆಂದರೆ, ನನ್ನ ತಾಯಿಯ ತವರೂರಾದ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ನಮ್ಮ ಮಾಮನಾದ ಪರಮೇಶ್ವರ ಇವರ ಮೊಮ್ಮಗಳ ಲಗ್ನ ನಿಶ್ಚಯ ಕಾರ್ಯಕ್ರಮವು ನಿನ್ನೆ ದಿನಾಂಕ 21/12/2022 ರಂದು ಇರುವುದರಿಂದ ಇದಕ್ಕಾಗಿ ನಾನು, ನನ್ನ ಗಂಡ ರಾಜು, ನಮ್ಮ ಮಗಳಾದ ನಿಖಿತಾ ಎಲ್ಲರೂ ಕೂಡಿಕೊಂಡು ಶ್ರೀನಿವಾಸ ಸರಡಗಿಗೆ ಹೋಗಿ ರಾತ್ರಿವರೆಗೆ ರಾತ್ರಿವರೆಗೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರಬೇಕೆಂದು ನಾನು, ನನ್ನ ಗಂಡ ಒಂದು ಮೋಟರ ಸೈಕಲ ಮೇಲೆ ಮಾಮನ ಮಗ ರಾಣಪ್ಪಾ ಈತನು ಆತನಿಗೆ ಸಂಬಂಧಪಟ್ಟ ಮೋಟರ ಸೈಕಲ ನಂ. ಕೆಎ 32 ಇ.ಕ್ಯೂ 7587 ನೇದ್ದರ ಮೇಲೆ ನನ್ನ ಮಗಳಾದ ನಿಖಿತಾ ಇವಳನ್ನು ಕೂಡಿಸಿಕೊಂಡು ಕಲಬುರಗಿ ಕಡೆಗೆ ಬರುವಾಗ ರಾತ್ರಿ 7:20 ಗಂಟೆ ಆಗಿರಬಹುದು ಕಾಳನೂರ ದಾಟಿ ಹೈವೆ ಧಾಬಾ ಮತ್ತು ಪೆಟ್ರೋಲ ಪಂಪ ಎದುರುಗಡೆ ನಾವು ಹಿಂದೆ ಮುಂದೆ ಬರುತ್ತಿರುವಾಗ ಕಲಬುರಗಿ ರೋಡಿನ ಕಡೆಯಿಂದ ಬಲ್ಕರ ಲಾರಿ ನಂ. ಎಮ.ಹೆಚ್. 12 ಟಿ.ವಿ 1248 ಇದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ತನ್ನ ಮುಂದೆ ಹೋಗುವ ಯಾವುದೊ ವಾಹನಕ್ಕೆ ಓವರಟೇಕ ಮಾಡಲು ಹೋಗಿ ಮಾಮನ ಮಗ ರಾಣಪ್ಪಾ ಮತ್ತು ಮಗಳಾದ ನಿಖಿತಾ ಇವರ ಮೋಟರ ಸೈಕಲಗೆ ಡಿಕ್ಕಿ ಹೊಡೆದಿದ್ದು, ಇವರು ಹಾರಿ ಬಿದ್ದಾಗ ನಾವು ನೋಡಲಾಗಿ ರಾಣಪ್ಪಾ ತಂದೆ ಪರಮೇಶ್ವರ ಈತನ ಬಲಗಾಲಿನ ಮೊಳಕಾಲಿಗೆ ಭಾರಿ ಪ್ರಮಾಣದ ರಕ್ತಗಾಯವಾಗಿ ಕಾಲು ಮುರದಿದ್ದು, ಬಲಗೈ ಉಂಗರು ಬೆರಳು ಹಾಗು ಎಡಭುಜದ ಕುತ್ತಿಗೆ ಹತ್ತೀರ ಭಾರಿಗಾಯವಾಗಿದ್ದು ಮತ್ತು ಅಲ್ಲಲ್ಲಿ ರಕ್ತಗಾಯಗಳಾಗಿದ್ದು, ಮಗಳಾದ ನಿಖಿತಾಳಿಗೆ ಬಲಗಾಲಿನ ಮೊಳಕಾಲಿಗೆ ಭಾರಿಗಾಯ, ಬಾಯಿಗೆ, ತುಟಿಗೆ ಹಾಗು ಬಲಗೈ ಮುಂಗೈ ಹತ್ತೀರ ಮತ್ತು ಅಲ್ಲಲ್ಲಿ ರಕ್ತಗಾಯಗಳಾಗಿದ್ದು, ರಾಣಪ್ಪನು ಮಾತನಾಡುವ ಸ್ಧಿತಿಯಲ್ಲಿ ಇರಲಿಲ್ಲಾ. ಈ ಘಟನೆಯನ್ನು ರೋಡಿನಿಂದ ಬರುತ್ತಿರುವ ಶಿವಾನಂದ ತಂದೆ ರೇವಣಸಿದ್ದಪ್ಪಾ ಕಿಳ್ಳಿ ಇವರು ಸಹಾಯ ಮಾಡಿದ್ದು, ಮುಂದೆ 108 ಅಂಬುಲೇನ್ಸ ಬಂದಿದ್ದು ಅದರಲ್ಲಿ ರಾಣಪ್ಪಾ ಮತ್ತು ಮಗಳನ್ನು ಹಾಕಿಕೊಂಡು ಸುಬೇದಾರ ಕೇರ್ ಆಸ್ಪತ್ರೆದಲ್ಲಿ ತಂದು ಸೇರಿಕೆ ಮಾಡಿದೆವು. ಇಲ್ಲಿಯವರೆಗಾದರು ಬೆಹೋಶ ಸ್ಧಿತಿಯಲ್ಲಿರುತ್ತಾನೆ. ಕಾರಣ ಅಪಘಾತದ ನಂತರ ಬಲ್ಕರ ಲಾರಿ ನಂ. ಎಮ.ಹೆಚ್ 12 ಟಿ.ವಿ 1248 ನೇದ್ದರ ಚಾಲಕನು ಲಾರಿ ಬಿಟ್ಟು ಓಡಿ ಹೋಗಿದ್ದು, ನಾನು ರಾತ್ರಿ ಆಸ್ಪತ್ರೆಯಲ್ಲಿಯೇ ಉಳಿದುಕೊಂಡು ಈಗ ಮುಂಜಾನೆ ಈ ಫಿರ್ಯಾದಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿರುತ್ತೆನೆ ಎಂದು ಕೊಟ್ಟ  ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ 22/12/2022 ರಂದು 12:15 ಪಿ.ಎಮ್ ಕ್ಕೆ ಬಸವರಾಜ ತಂದೆ ನಿಂಗಪ್ಪ ಕಣ್ಣಿ ವ: 40 ವರ್ಷ ಸಾ; ಶರಣಸಿರಸಗಿ ಗ್ರಾಮ ತಾ: ಜಿ:ಕಲಬುರಗಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ, ದಿನಾಂಕ: 07/11/2022 ರಂದು ಮದ್ಯಾಹ್ನ 01:00 ಗಂಟೆ ಸುಮಾರಿಗೆ ಫಿರ್ಯಾಧಿ ಅಫಜಲಪುರ-ಕಲಬುರಗಿ ಮೂಖ್ಯರಸ್ತೆಯ ಸರ್ವೆ ಆಫೀಸ್ ಮೂಖ್ಯ ದ್ವಾರದ ಸಮೀಪ ಊರ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಅದೇ ಸಮಯದಲ್ಲಿ ಒಂದು ಮೋಟಾರ ಸೈಕಲ ನಂ KA-32 ET 7461 ನೇದ್ದರ ಸವಾರ ದೀಪಕ ಕುಮಾರ ತಂದೆ ಪ್ರಭಾಕರ ಈತನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಿಂದ ಹೋಗುತ್ತಿದ್ದ ಫಿರ್ಯಾಧಿಗೆ ಹಿಂದಿನಿಂದ ಗುದ್ದಿ ಅಪಘಾತ ಮಾಡಿ  ಫಿರ್ಯಾಧಿಗೆ ಭಾರಿಗಾಯ ಮಾಡಿ ತಾನು ಕೂಡಾ ಗಾಯ ಹೊಂದಿ ಇಬ್ಬರೂ ಸರಕಾರಿ ಆಸ್ಪತ್ರೆಗೆ ಸೇರಿಕೆ ಆಗಿದ್ದು ಮೋಟಾರ ಸೈಕಲ ಸವಾರ ದೀಪಕಕುಮಾರ ಹೇಳದೆ ಓಡಿ ಹೋಗಿರುತ್ತಾನೆ. ಫಿರ್ಯಾಧಿಗೆ ಎಡಗಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿ ದಿನಾಂಕ:19/11/2022 ರಂದು ಬಿಡುಗಡೆ ಮಾಡಿದಾಗ ನಡೆಯಲು ಸಾಧ್ಯವಾಗದ ಕಾರಣ ಠಾಣೆಗೆ ಬಂದು ಫಿರ್ಯಾಧಿ ನೀಡಲು ತಡವಾಗಿರುತ್ತದೆ,   ಕಾರಣ  ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ನಂ KA-32 ET 7461 ನೇದ್ದರ ಸವಾರ ದೀಪಕ ಕುಮಾರ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಫಿರ್ಯಾಧಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ: 22/12/2022 ರಂದು ಮಧ್ಯಾಹ್ನ 2:15 ಪಿ.ಎಮ್ ಕ್ಕೆ ಶ್ರೀಮತಿ ರುಕ್ಮಿಣಿ ಗಂಡ ಕಾಶಿನಾಥ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಕಂಪ್ಯೂಟರನಲ್ಲಿ ಕನ್ನಡದಲ್ಲಿ ಟೈಪ್ ಮಾಡಿದ ಒಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಂಶವೆನೆಂದರೆ, ದಿನಾಂಕ: 18/12/2022 ರಂದು ಫಿರ್ಯಾದಿ ಗಂಡ ಕಾಶಿನಾಥ ಇವರು ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಕಲಬುರಗಿ ನಗರದ ಬಸವೇಶ್ವರ ಕಾಲೋನಿಯ ಎಮ್.ಜಿ ರಸ್ತೆಯಿಂದ ನಡೆದುಕೊಂಡು ಮನೆಯ ಕಡೆಗೆ ಬರುತ್ತಿರುವಾಗ ಹಿಂದುಗಡೆಯಿಂದ ಒಂದು ದ್ವಿಚಕ್ರ ವಾಹನ ನಂ. ಕೆಎ 32 ಕ್ಯೂ 4735 ನೇದ್ದರ ಸವಾರನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಾಶಿನಾಥನಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಯ ಮುಖ್ಯ ನರಕ್ಕೆ ಭಾರಿ ಗಾಯವಾಗಿ ಇತರೆ ಕಡೆಗಳಲ್ಲಿ ಕೂಡಾ ಗಾಯವಾಗಿದ್ದು ಘಟನೆಯನ್ನು ನಾಗೇಶ ಸಿದ್ದಗೋಳ, ಶರಣು ಇವರು ನೋಡಿ ಕಾಶಿನಾಥನಿಗೆ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಈ ವಿಷಯದಲ್ಲಿ ಮೋಟರ ಸೈಕಲ ಸವಾರನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಫಿರ್ಯಾಧಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 24-12-2022 02:28 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080