ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ್‌ ಠಾಣೆ :- ದಿನಾಂಕಃ 22.11.2022 ರಂದು ಸಾಯಾಂಕಾಲ 11:00 ಎಎಮ್ ಕ್ಕೆ ಶ್ರೀ ಉಮೇಶ ತಂದೆ ನೀಲಕಂಠರಾವ ಬಿರಾದಾರ ವಯಃ 32 ವರ್ಷ ಜಾಃ ಲಿಂಗಾಯತ ಉಃ ಖಾಸಗಿ ಕೆಲಸ ಸಾಃ ಕೆ,ಹೆಚ್,ಬಿ ಗ್ರೀನ ಪಾರ್ಕ ಸಂತೋಷ ಕಾಲೋನಿ ರೋಡ್ ಕಲಬುರಗಿ ನಿವಾಸಿತನಿದ್ದು, ನಾನು ಕಲಬುರಗಿ ನಗರದ ಖಾಸಗಿ ಕೆಲಸ ನಿರ್ವಹಿಸುತ್ತಾ ಬಂದಿರುತ್ತೇನೆ. ಆದ್ದರಿಂದ ನಾನು ಕೆ,ಹೆಚ್,ಬಿ ಗ್ರೀನ ಪಾರ್ಕ ಸಂತೋಷ ಕಾಲೋನಿಯ ಸಂಗಮೇಶ್ವರ ತಂದೆ ಸಿದ್ದಣ್ಣ ಸೋಂಡೆ   ಎಂಬುವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇರುತ್ತೇನೆ. ಇತಿಚೀನ ದಿನಗಳಲ್ಲಿ ನಮ್ಮ ಸ್ವ ಗ್ರಾಮವಾದ ಬೇಲೂರು (ಜೆ) ಹೋಗಿದ್ದು ನಾನು ನನ್ನ ಮನೆಗೆ ದಿನಾಂಕಃ 18.11.2022 ರಂದು ರಾತ್ರಿ 08.30 ಗಂಟೆಗೆ ಸರಿಯಾಗಿ ಮನೆಗೆ ಕೀಲಿ ಹಾಕಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಬೇಲೂರು (ಜೆ)  ಗ್ರಾಮಕ್ಕೆ ಹೋಗಿರುತ್ತೇನೆ. ನಂತರ ದಿನಾಂಕಃ 21.11.2022 ರಂದು ನಮ್ಮ ಮನೆ ಮಾಲೀಕರು ಪೊನ್ ಮಾಡಿ ತಿಳಿಸಿದೆನೆಂದರೆ ನಿಮ್ಮ ಮನೆಗೆ ಹಾಕಿರುವ ಕೀಲಯನ್ನು ಯಾರೋ ಕಳ್ಳರು ಮುರಿದ್ದು ಮನೆ ಕಳ್ಳತನ ಮಾಡಿಕೊಂಡು ಹೋಗಿರುವ ಹಾಗೆ ಕಾಣುತ್ತಿದೆ ಅದಕ್ಕೆ ನೀವು ಬಂದು ನೋಡಿ ಅಂತ ಹೇಳಿದ್ದಾಗ ಈ ವಿಷಯ ನನ್ನಗೆ ಹೇಳಿದು ನಂತರ ನಾನು ಮತ್ತು ನನ್ನ ಹೆಂಡತಿಯಾದ ಶೃತಿ ಕೂಡಿಕೊಂಡು ಇಂದು ದಿನಾಂಕಃ 21.11.2022 ರಂದು ಬೆಳ್ಳಿಗೆ 8.30 ಗಂಟೆಯ ಸುಮಾರಿಗೆ ನಾವು ಬಂದು ನೋಡಿದ್ದಾಗ ನಮ್ಮ ಮನೆಯಲ್ಲಿರುವ ಬಟ್ಟೆಗಳು ಚಲ್ಲೆ ಪೀಲ್ಲೆ ಆಗಿ ಬಿದ್ದಿರುವದನ್ನು ನೋಡಿ ಗಾಬರಿಗೊಂಡು ನಾನು ಟಿಜ್ಯುರಿಯಲ್ಲಿ ಇಟ್ಟಿರುವ ಬಂಗಾರದ ಆಭರಣಗಳು ಪರಿಶೀಲಿಸಿ ನೋಡಿದ್ದಾಗ ಬಂಗಾರದ ಆಭರಣಗಳಾದ  1) 22 ಗ್ರಾಂನ  ಬಂಗಾರದ ಚೈನ್ ಅಃಕಿಃ 101,600/- , 2) 21 ಗ್ರಾಂ ಬಂಗಾರದ ಬ್ರಸ್ಲೇಟ್  ಅಃಕಿಃ 97,000/-, 3) 20 ಗ್ರಾಂ ಬಂಗಾರದ ಮಕ್ಕಳ ನಾಲ್ಕು ಬಳೆಗಳು  ಅಃಕಿಃ 93,000 4) 50 ಗ್ರಾಂದ ಬೆಳ್ಳಿ ಬಟಲು ಅಃಕಿಃ 3000 ಮತು 5) ನಗದು ಹಣ 245000 ರೂ ಹೀಗೆ ಒಟ್ಟು 5,39,600  ರೂ ಬೆಲೆ ಬಾಳುವ ಬಂಗಾರದ ಆಭರಣಗಳು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ದಿನಾಂಕಃ18.11.2022 ರಂದು ರಾತ್ರಿ 8.30 ಗಂಟೆಯಿಂದ ದಿನಾಂಕಃ 21.11.2022 ರಂದು ಬೆಳ್ಳಿಗೆ 7.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯೋಳಗೆ ಅತಿಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲಕ್ಕೆ ಹಾಕಿರುವ ಕೀಲಿಕೊಂಡಿ ಮುರಿದು ಮನೆಯಲ್ಲಿಟ್ಟಿರುವ 63 ಗ್ರಾಂ ಬಂಗಾರದ ಆಭರಣಗಳು ಅಃಕಿಃ 2,91,600 ರೂಪಾಯಿ ಮತ್ತು 50 ಗ್ರಾಂ ಬೆಳ್ಳಿ ಆಭರಣಗಳು ಅ: ಕಿ:3000  ಬೆಲೆ ಬಾಳುವದು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನಮ್ಮ ಮನೆಯಲ್ಲಿ ನಮ್ಮ ಕುಟುಂಬದೊಂದಿಗೆ ವಿಚಾರಿಸಿಕೊಂಡು  ಮತ್ತು ನಾವು ನಮ್ಮೂರಿನಿಂದ ಬಂದು ಪರಿಶೀಲನೆ ಮಾಡಿಕೊಂಡು ಇಂದು ತಡವಾಗಿ ಬಂದು ದೂರುಕೊಡುತ್ತಿದ್ದೆನೆ.  ಕಾರಣ ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿಟ್ಟಿರುವ ಬಂಗಾರದ ಆಭರಣಗಳು ಪತ್ತೆ ಹಚ್ಚಿ ನಮ್ಮ ಮನೆ ಕಳ್ಳತನ ಮಾಡಿದವರ ವಿರುದ್ಧ ಕಾನೂನು ಕ್ರಮ ಜರಗಿಸಲು ವಿನಂತಿ. ಅಂತಾ ಇತ್ಯಾಧಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ಮಾನ್ಯ ಪ್ರೀನ್ಸಿಪಲ್ ಜೆ.ಎಮ್ ಎಫ್.ಸಿ ನ್ಯಾಯಾಧೀಶರು ಕಲಬುರಗಿರವರಲ್ಲಿ ಫಿರ್ಯಾದಿ ಶ್ರೀ  ವಿಜಯಲಕ್ಷ್ಮೀ @ ವಿಜಯಕುಮಾರಿ ತಂದೆ ರಾಜಣ್ಣಾ ವಯ:43 ವರ್ಷ ಉ:ವಿಶ್ವವಿದ್ಯಾಲಯದ ನೌಕರಳು ಸಾ:ವಸತಿ ನಿಲಯ ರಾಜಾಪೂರ ಕಲಬುರಗಿ ಇವರು ನೀಡಿದ ಖಾಸಗಿ ದೂರು ಅರ್ಜಿ ಸಂ. 416/2022 ನೇದ್ದು ವಸೂಲಾಗಿದ್ದರ ಸಾರಾಂಶವೇನಂದರೆ, ಫಿರ್ಯಾದಿ ವಿಜಯಲಕ್ಷ್ಮೀ ಇವರು ವಿಶ್ವವಿಧ್ಯಾಲಯದಲ್ಲಿ ವಸತಿ ನಿಲಯದಲ್ಲಿ ಸುಪರವೈಜರ ಅಂತ ಇದ್ದಾಗ ಆರೋಪಿ ಇತನ ಪರಿಚಯವಾಗಿರುತ್ತದೆ. ನಂತರ ರವಿ ಇತನು ವಿಜಯಲಕ್ಷ್ಮೀ ಇವರಿಂದ ಕೈಗಡವಾಗಿ 9 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡಿದ್ದು ಇರುತ್ತದೆ. ಅದರಲ್ಲಿ 3 ಲಕ್ಷ 80 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದು, ಬಾಕಿ ಉಳಿದ 5,20,000/- ರೂಗಳನ್ನು ಕೊಡುತ್ತೆನೆ ಅಂತ ಒಂದಲ್ಲ ಒಂದು ನೆಪ ಹೇಳುತ್ತಾ ಮುಂದೆ ಹಾಕುತ್ತಾ ಬಂದಿರುತ್ತಾನೆ. ವಿಜಯಲಕ್ಷ್ಮಿ ಇವರು ಹಣ ಕೊಡು ಅಂತ ಕೊರಿಕೊಂಡರು, ಕೊಟ್ಟಿರುವದಿಲ್ಲ. ಆರೋಪಿ ರವಿ ಇತನು ಪೊಲೀಸ್ ಅಧಿಕಾರಿಯಾಗಿರುವದರಿಂದ ವಿಜಯಲಕ್ಷ್ಮೀ ಇವರ ತಮ್ಮನಿಗೆ ಸರಕಾರಿ ನೌಕರಿ ಮಾಡಿಸುತ್ತೆನೆ ಅಂತ ಹೇಳಿರುತ್ತಾನೆ. ನಂತರ ವಿಜಯಲಕ್ಷ್ಮೀ ಮತ್ತು ರವಿ ಇವರ ಮದ್ಯ ಆತ್ಮಿಯ ಸಂಬಂದವನ್ನು ಬೆಳೆದಿದ್ದು, ಮುಂದೆ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಾ ಗಂಡ ಹೆಂಡತಿ ರೀತಿಯಲ್ಲಿ ನಡೆದುಕೊಂಡಿದ್ದು, ಆ ಸಮಯದಲ್ಲಿ ಲೈಂಗಿಕ ಸಂಬಂದ ಉಂಟಾಗಿರುತ್ತದೆ. ಆರೋಪಿ ರವಿ ಇತನು ತನಗೆ ಮದುವೆಯಾದ ವಿಷಯ ಮತ್ತು ಮಕ್ಕಳಿರುವ ವಿಷಯವನ್ನು ಮುಚ್ಚಿಟ್ಟಿದ್ದು ಇರುತ್ತದೆ. ವಿಜಯಲಕ್ಷ್ಮೀ ಇವರು ಮದುವೆಯಾಗಲು ಕೇಳಿದರೆ ಆಗುತ್ತೆನೆ ಅಂತ ಭರವಸೆ ಕೊಡುತ್ತಾ ಬಂದಿರುತ್ತಾನೆ. ಮದುವಯಾದ ವಿಷಯ ಗೊತ್ತಾಗಿನಿಂದ ವಿಜಯಲಕ್ಷ್ಮೀ ಇವರನ್ನು ತಿರಸ್ಕಾರ ಮಾಡುತ್ತಾ ಬಂದಿರುತ್ತಾನೆ. ಹಣ ಕೊಡಲು ಒಂದಲ್ಲ ಒಂದು ರೀತಿ ನೆಪ ಹೇಳಿ ಹಣ ಕೊಡಲು ಮುಂದೆ ಹಾಕುತ್ತಾ ಬಂದಿರುತ್ತಾನೆ. ವಿಜಯಲಕ್ಷ್ಮೀ ಇವರು ಆರೋಪಿ ರವಿ ಇತನ ಹಿನ್ನೆಲೆಯನ್ನು ವಿಚಾರಿಸುತ್ತಾ ಹೊದಾಗ  ಈ ಮೊದಲು ರವಿ ಇವನು ಚಂದ್ರಕಾಂತ ಪಾಟೀಲ್ ಶಾಲೆಯಲ್ಲಿ ಇರುವ ಜಯಶ್ರೀ ಎನ್ನುವ ಹೆಣ್ಣು ಮಗಳನ್ನು ಮೊಸ ಮಾಡಿದ್ದರಿಂದ ಅವಳು ಬಹಳ ದಿನಗಳಿಂದ ಕಾಣೆಯಾಗಿರುತ್ತಾಳೆ. ಅವಳು ಜೀವಂತ ಇದ್ದಿರುವದು ಪಕ್ಕಾ ಇರುವದಿಲ್ಲ. ವಿಜಯಲಕ್ಷ್ಮೀ ಇವರು ರವಿ ಇತನಿಗೆ ಹಣ ಕೇಳಲು ಹೋದಾಗಲೆಲ್ಲಾ ತೊಂದರೆ ಕೊಟ್ಟು ರಂಡಿ, ಸೂಳೆ, ಬೊಸಡಿ ಅಂತ ಬೈದು ಕೂದಲು ಹಿಡಿದು ಎಳೆದಾಡಿ ಹೊಡೆಬಡೆ ಮಾಡಿದ್ದರಿಂದ ರವಿ ಮತ್ತು ಅವರ ಮನೆಯವರು ಮೇಲೆ ಕೇಸು ದಾಖಲಿಸಿದ್ದು ಇರುತ್ತದೆ. ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಉಲ್ಲಂಘನೆ ಮಾಡಿದ್ದರಿಂದ ಫಿರ್ಯಾದಿಯವರು ಇದಕ್ಕೆ ಸಂಬಂದಿಸಿದಂತೆ ಮಾಹಿತಿಯನ್ನುನ್ಯಾಯಾಲಯದಲ್ಲಿ ಸಲ್ಲಿಸಿದ್ದು ಇರುತ್ತದೆ. ಫಿರ್ಯಾದಿ ದಿನಾಂಕ:30/12/2021 ರಂದು ಸಿಸಿ ನಂ.13543/2021 ರಲ್ಲಿ ನ್ಯಾಯಾಲಯಕ್ಕೆ ಸಂಬದಿಸಿದ ದಾಖಲಾತಿ ಮತ್ತು ಮಾಹತಿಯನ್ನು ನೀಡಲು ಹೋದಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಫಿರ್ಯಾದಿಗೆ ಆರೋಪಿ ರವಿ ಇತನು ಕಾಲಿನಿಂದ ಒದ್ದಿರುತ್ತಾನೆ. ಉಳಿದವರೆಲ್ಲರೂ ಕೂಡಿಕೊಂಡು ಹೊಡೆಬಡೆ ಮಾಡಿ ನೀನು ದೂರನ್ನು ವಾಪಸ ಪಡೆಯದೆ ಹೋದರೆ ನಿನಗೆ ಜೀವ ತೆಗೆಯುತ್ತೆವೆ ಅಂತ ಬೆದರಿಕೆ ಹಾಕಿರುತ್ತಾರೆ ಮತ್ತು ಸುಪಾರಿ ಕೊಟ್ಟು ನಿನ್ನ ಜೀವ ತೆಗೆಸುತ್ತೆವೆ ಅಂತ ಬೆದರಿಕೆ ಹಾಕಿರುತ್ತಾರೆ. ಅಂತ ಇತ್ಯಾದಿಯಾಗಿ ವಸೂಲಾದ ಖಾಸಗಿ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ ಠಾಣೆ :-  ದಿನಾಂಕ: 22-11-2022  ಮದ್ಯಾಹ್ನ ೧೩:೪೫ ಗಂಟೆಗೆ ಫಿರ್ಯಾದಿದಾರರಾದ ಶಿವಕುಮಾರ್ ತಂದೆ ರಾಮಚಂದ್ರ ಅಳೋಳ್ಳಿ ವಯ:೩೮ವರ್ಷ ಜಾ:ಮಾದಿಗ ಉ:ಎಲೇಕ್ಟ್ರೀಷಿಯನ್ ಸಾ//ಗಾಜಿಪೂರ ಕಲಬುರಗಿ ನಗರ. ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನಾನು ಮೊಬೈಲ್ ರಿಪೇರಿ ಕೆಲಸ ಮಾಡುತ್ತಿದ್ದು ನನ್ನದೊಂದು ಸ್ವಂತ ಕಲಬುರಗಿ ನಗರದ ಸಂಗೋಳ್ಳಿ ರಾಯಣ್ಣ ಮೂರ್ತಿ ಹತ್ತಿರ ಇರುವ ಟೇಕ್ ಬುರಾನ್ ದರ್ಗಾಕ್ಕೆ ಸಂಬಂದಪಟ್ಟ ಹೆಚ್.ಟಿ.ಪಿ ಟೀನ್‌ಶೆಡ್ಡ್ ಕಾಂಪ್ಲೇಕ್ಸ್ನಲ್ಲಿ ಅಂಗಡಿಗಳಿದ್ದು ಅಲ್ಲಿ ಪ್ರತಿ ತಿಂಗಳು ೫೦೦೦/-ರೂ ಬಾಡಿಗೆ ಅಂತೆ ಒಂದು ಟೀನ್‌ಶೆಡ್ಡ್ ಅಂಗಡಿ ಪಡೆದು ಸ್ಮೃತಿ ಎಂಟರಪ್ರೈಸಸ್ ಹಾಗೂ ಮೊಬೈಲ್ ರಿಪೇರಿ ಅಂತಾ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು ಪ್ರತಿ ದಿವಸ ನಾನು ಬೆಳಿಗ್ಗೆ ೧೦:೩೦ ಗಂಟೆಗೆ ಅಂಗಡಿ ತರೆದು ರಾತ್ರಿ ಅಂಗಡಿ ಬಂದ ಮಾಡಿಕೊಂಡು ಹೋಗುತ್ತೇನೆ. ದಿನಾಂಕ ೧೯/೧೧/೨೦೨೨ ರಂದು ಬೆಳಿಗ್ಗೆ ೧೦:೩೦ ಗಂಟೆ ಸುಮಾರಿಗೆ ನಾನು ನನ್ನ ಅಂಗಡಿಯನ್ನು ಪ್ರಾರಂಭಿಸಿ ಕೆಲಸ ಮಾಡಿ ನನ್ನ ಮಾವನಿಗೆ ಆರಾಮವಿಲ್ಲದ ಕಾರಣ ಆಸ್ಪತ್ರೆಗೆÀ ತೋರಿಸಲು ಸೋಲಾಪೂರಕ್ಕೆ ಹೋಗಬೇಕಾಗಿರುವುದರಿಂದ ಸಾಯಂಕಾಲ ೦೪:೦೦ ಗಂಟೆ ಸುಮಾರಿಗೆ ನನ್ನ ಅಂಗಡಿ ಬಂದ ಮಾಡಿಕೊಂಡು ಹೋಗಿರುತ್ತೇನೆ.   ದಿನಾಂಕ ೨೧/೧೧/೨೦೨೨ ರಂದು ಬೆಳಿಗ್ಗೆ ೧೦:೩೦ ಗಂಟೆ ಸುಮಾರಿಗೆ ಎಂದಿನAತೆ ನಾನು ನನ್ನ ಅಂಗಡಿಗೆ ಹೋಗಲು ನನ್ನ ಅಂಗಡಿಯ ಶೆಟರ್ ಸ್ವಲ್ಪ ಮೇಲಕ್ಕೆ ಎತ್ತಿದ್ದು ಕಂಡು ಬಂದಿದ್ದು ಆಗ ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ಒಳಗಿನ ಈ ಕೆಳಕಂಡ ಸಾಮಾನುಗಳು ಕಳ್ಳತನ ವಾಗಿರುತ್ತವೆ.

೧) ಒಂದು ಹಳೇಯ ಲೆನೋವಾ ಕಂಪನಿಯ ಲ್ಯಾಪಟಾಪ್ ಅ.ಕಿ-೨೦೦೦೦/-ರೂ

೨) ಒಂದು ಹಳೇಯ ಸಿಬಿ ಪ್ಲಸ್ ಕ್ಯಾಮರಾ ಅ.ಕಿ-೩೫೦೦/-ರೂ

೩) ನಾಲ್ಕು ಹೋಸ ಸಿಬಿ ಪ್ಲಸ್ ಕ್ಯಾಮರಾ ಅ.ಕಿ-೨೦೦೦೦/-ರೂ

೪) ಒಂದು ಹಳೇಯ ಡಿವಿಆರ್ ಅ.ಕಿ-೪೫೦೦/-ರೂ

೫) ಒಂದು ಹೋಸ ಡಿವಿಆರ್ ಅ.ಕಿ-೮೫೦೦/-ರೂ

೬) ಇತರೆ ಮೊಬೈಲ್ ಸಾಮಾನುಗಳು ಅ.ಕಿ-೮೦,೦೦೦/-ರೂ

ಹೀಗೆ ಒಟ್ಟು ೧,೩೬,೫೦೦/-ರೂಪಾಯಿ ಬೆಲೆಬಾಳುವ ಸಾಮಾನುಗಳನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ ೧೯/೧೧/೨೦೨೨ ರಂದು ಸಾಂಯಕಾಲ ಗಂಟೆಯಿಂದ ದಿನಾಂಕ ೨೧/೧೧/೨೦೨೨ ಬೆಳಿಗ್ಗೆ ೧೦:೩೦ ಗಂಟೆಯ ಮದ್ಯದ ಅವದಿಯಲ್ಲಿ ನನ್ನ ಅಂಗಡಿಯ ಶೆಟರ್ ಮೇಲಕ್ಕೆ ಎತ್ತಿ ಒಳಗಡೆ ಪ್ರವೇಶಮಾಡಿ ಅದರಲ್ಲಿದ್ದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಈ ಬಗ್ಗೆ ನಮ್ಮ ಮನೆಯಲ್ಲಿ ವಿಚಾರ ಮಾಡಿ ಮತ್ತು ನನ್ನ ಮಾವನಿಗೆ ಆರಾಮವಿಲ್ಲದ ಕಾರಣ ಠಾಣೆಗೆ ಬಂದು ದೂರು ಅರ್ಜಿ ಕೊಡಲು ತಡವಾಗಿರುತ್ತದೆ ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಿ.ಇ.ಎನ್.‌ ಪೊಲೀಸ ಠಾಣೆ :- ದಿನಾಂಕ ೨೨.೧೧.೨೦೨೨ ರಂದು ೨೦.೩೦ ಗಂಟೆಗೆ ಠಾಣೆಯ ಸಿಬ್ಬಂದಿಯಾದ ಶ್ರೀ ದೇವಿಂದ್ರಪ್ಪ ಹೆಚಸಿ-೨೧ ರವರು ವರದಿ ನೀಡಿದ ಸಾರಾಂಶವೆನೆಂದರೆ ನಾನು ಹಾಗೂ ಶ್ರೀ ಪ್ರಶಾಂತ ಸಿಪಿಸಿ-೨೯೦ ರವರು ಕೂಡಿಕೊಂಡು ದಿನಾಂಕ: ೨೨/೧೧/೨೦೨೨ ರಂದು ೧೭-೪೫ ಗಂಟೆಗೆ ಹೊರಟು ಕಲಬುರಗಿ ನಗರದ ವಿವಿಧ ನಗರದ ಹಾಗೂ ಗಲ್ಲಿಗಳಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡಿಕೊಂಡು ನಂತರ ಸಮಯ ರಾತ್ರಿ ೧೮-೩೦ ಗಂಟೆಗೆ ಎ,ಎಸ್,ಎಮ್, ಆಸ್ಪತ್ರೆ ಹಿಂದುಗಡೆ ಭರತ್ ನಗರ ತಾಂಡಾ ಹತ್ತಿರ ಹೋಗಿ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಇರುವುದನ್ನು ಕಂಡು ನಾವು ಹತ್ತಿರ ಹೋಗಿ ವಿಚಾರಿಸಲಾಗಿ ಆತನು ತನ್ನ ಹೆಸರು ಅಬ್ದುಲ್ ಇಮ್ರಾನ್ ತಂದೆ ಅಬ್ದುಲ್ ರಜಾಕ್ ವ:೨೨ ಜಾ:ಮುಸ್ಲಿಂ ಉ: ವೆಲ್ಡಿಂಗ್ ಸಾ: ನಯಾ ಮೊಹಲ್ಲಾ ಹಜ್ ಕಮೀಟಿ ದರ್ಗಾ ರೋಡ್  ಕಲಬುರಗಿ ಅಂತಾ ತೊದಲುತ್ತಾ ತಿಳಿಸಿದ್ದು ಆತನ ಬಾಯಿಂದ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಕೆಟ್ಟ ವಾಸನೆ ಬರುತ್ತಿದ್ದರಿಂದ ಖಚಿತ ಪಡಿಸಿಕೊಂಡು ಸದರಿಯವನಿಗೆ ಸಿ,ಇ,ಎನ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಮಾನ್ಯ ಎ.ಎಸ್.ಐ ಸಾಹೇಬರ ಮುಂದೆ ಹಾಜರುಪಡಿಸಿದ್ದು ಅವರು ಆದೇಶಿಸಿದಂತೆ ವ್ಯೆಧ್ಯಕೀಯ ಪರೀಕ್ಷೆ ಕುರಿತು ಸಮಯ: ೧೯.೦೦ ಗಂಟೆಗೆ ಪ್ರಶಾಂತ ಸಿಪಿಸಿ-೨೯೦ ಹಾಗೂ ಹೊನ್ನುರಸಾಬ್ ಸಿಪಿಸಿ-೨೭೯ ರವರ ಬೆಂಗಾವಲಿನಲ್ಲಿ ಸದರಿಯವನಿಗೆ ಜಿಲ್ಲಾ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ  ಕಲಬುರಗಿ ರವರಲ್ಲಿ ಕಳುಹಿಸಿದ್ದು ಸದರಿ ವ್ಯಕ್ತಿಯು ಮಾದಕ ವಸ್ತು ಸೇವನೆ  ಮಾಡಿರುವ ಬಗ್ಗೆ ಇಂದು ದಿನಾಂಕ: ೨೨-೧೧-೨೦೨೨ ರಂದು ೨೦:೨೦ ಗಂಟೆಗೆ POSITIVE FOR 1) THC: MARIJUANA (GANJA) 2) BZO: BENZODIAZEPINE ಅಂತಾ ವೈಧ್ಯರು ವರದಿ ನೀಡಿದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 24-11-2022 12:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080