ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:22.09.2022 ರಂದು 07:00 ಪಿ.ಎಂ.ಕ್ಕೆ   ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಮತಿ ರೇಣುಕಾ ಸುಂಕದ ಗಂಡ ರೇವಣಕುಮಾರ ಬಾಳಿ ವಯ: 55 ವರ್ಷ ಜಾ: ಲಿಂಗಾಯತ ಉ: ಸಹ ಶಿಕ್ಷಕರು ಖಣದಾಳ ಪ್ರೌಢ ಶಾಲೆ ಸಾ|| ಪ್ಲಾಟ ನಂ. 28 ಬೇಂದ್ರೆ ನಗರ ಕಲಬುರಗಿ ಇವರು ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದನ್ನು ಸ್ವೀಕರಿಸಿಕೊಂಡು ಠಾಣೆಗೆ ಬಂದಿದ್ದು, ಸದರಿ ಅರ್ಜಿಯ ಸಾರಾಂಶವೆನೆಂದರೆ, ನಾನು ಈ ಮೊದಲು ನಂದಿಕೂರ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲಕ್ಕೆ  ಸಾರ್ವಜನಿಕರ ದೂರಿನ ಮೇರೆಗೆ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ನಂದಿಕೂರ ಪ್ರೌಢ ಶಾಲೆಯಿಂದ ಖಣದಾಳ ಪ್ರೌಢ ಶಾಲೆಗೆ ನಿಯೋಜನೆ ಗೊಳಿಸಿರುತ್ತಾರೆ. ನಾನು ದಿನಾಂಕ: 07.09.2022 ರಂದು ಖಣದಾಳ ಪ್ರೌಢ ಶಾಲೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಹೋದಾಗ ಅಲ್ಲಿನ ಮುಖ್ಯ ಗುರುಗಳಾದ ಶ್ರೀ ದಿನಕರ ಮೂಲಗೆ ಇವರು ನನಗೆ ಕರ್ತವ್ಯಕ್ಕೆ ವರದಿ ಮಾಡಿಸಿಕೊಂಡಿರುವುದಿಲ್ಲ. ನಾನು ಕೇಳಲಾಗಿ ನಮ್ಮ ಶಾಲೆಯಲ್ಲಿ ಗಣಿತ ಶಿಕ್ಷಕರಿರುತ್ತಾರೆ ನಿಮ್ಮ  ಅವಶ್ಯಕತೆ ಇರುವುದಿಲ್ಲ ಅಂತ ಹೇಳಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ದಕ್ಷಿಣ ವಲಯ ಕಲಬುರಗಿ ರವರಿಗೆ ಪತ್ರ ಬರೆದು ಅದರ ಪ್ರತಿಯನ್ನು ನನಗೆ ಜಾರಿಮಾಡಿರುತ್ತಾರೆ. ನಂತರ ನಾನು ಸದರಿ ವಿಷಯದ ಬಗ್ಗೆ ಮಾನ್ಯ ಉಪ ನಿರ್ಧೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ ಮತ್ತು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ದಕ್ಷಿಣ ವಲಯ ಕಲಬುರಗಿ ಇವರುಗಳಿಗೆ ದಿನಾಂಕ:09.09.2022 ರಂದು ಪತ್ರ ವ್ಯವಹಾರ ಮಾಡಿದ್ದು ಇಲ್ಲಿಯ ವರೆಗೆ ಯಾವುದೆ ಉತ್ತರ ನೀಡಿರುವುದಿಲ್ಲ. ಹೀಗಿದ್ದು ಇಂದು ದಿನಾಂಕ:22.09.2022 ರಂದು ಮದ್ಯಾನ್ಹ 12:30 ಗಂಟೆಗೆ ನಾನು ಮನೆಯಲ್ಲಿ ಒಬ್ಬಳೆ ಇದ್ದಾಗ ಸರ್ಕಾರಿ ಪ್ರೌಢ ಶಾಲೆ ನಂದಿಕೂರನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಜನರಾದ 1) ರಿಯಾಜುದ್ದಿನ್  ಆರ್. ಮತ್ತು 2) ಪ್ರಾಣೇಶ ಕುಲಕರ್ಣಿ ಇವರುಗಳಿಗೆ ನಂದಿಕೂರ ಪ್ರೌಢ ಶಾಲೆಯ  ಮುಖ್ಯ ಗುರುಗಳಾದ ಶ್ರೀಮತಿ ಅರ್ಚನಾ ಮಾಡ್ಯಾಳಕರ ಇವರು ಕಳುಹಿಸಿ ನೊಟೀಸ್ ಇರುತ್ತದೆ ಇದನ್ನು ಜಾರಿಮಾಡಿಕೊಳ್ಳಿ ಅಂತ ಹೇಳಿ ನನ್ನ ಕೈಗೆ ಪ್ರಾಣೇಶ ಕುಲಕರ್ಣಿ ಇವರು ಲಕೋಟೆ ನೀಡುತ್ತಿರುವಾಗ ರಿಯಾಜುದ್ದಿನ್ ಆರ್. ಇವನು ತನ್ನ ಮೊಬೈಲನಲ್ಲಿ ನೊಟೀಸ್ ಜಾರಿ ಮಾಡುತ್ತಿರುವ ಛಾಯಾ ಚಿತ್ರವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ, ನಾನು ನೊಟೀಸ್ ಜಾರಿ ಮಾಡುತ್ತಿರುವುದನ್ನು ಏಕೆ ಛಾಯಾಚಿತ್ರ ಮಾಡುತ್ತಿರುವಿರಿ ಅಂತ ಕೇಳುತ್ತಿದ್ದಾಗ, ನನ್ನ ಕೈಯಲ್ಲಿದ್ದ ನೊಟೀಸ್ ಕಿತ್ತುಕೊಂಡು ಅವಾಚ್ಯವಾಗಿ ರಿಯಾಜುದ್ದಿನ್ ಆರ್. ಇತನು ರಂಡಿ, ಭೋಸಡಿ ನಿನಗೆ ಇನ್ನೂ ಬುದ್ದಿ ಬಂದಿಲ್ವಾ ಅಂತ ಬೈದು ನನ್ನ ತಲೆಯ ಮೇಲಿನ ಕೂದಲು ಹಿಡಿದು ಕೈಯಿಂದ ನನ್ನ ಕಪಾಳಕ್ಕೆ ಹೊಡೆದಿದ್ದಲ್ಲದೆ ನನ್ನ ಕೈ ಹಿಡಿದು ಏಳೆದಾಡಿದ್ದರಿಂದ ನನ್ನ ಬಲಗೈ ಮುಂಗೈ ಹತ್ತಿರ ಗುಪ್ತಗಾಯ ಆಗಿರುತ್ತದೆ. ನಂತರ ನಾನು ಚೀರಾಡುವುದನ್ನು ಕೇಳಿ ಪಕ್ಕದ ಮನೆಯವರಾದ 1) ಶ್ರೀಮತಿ ದ್ರೌಪದಿ ಜಾಧವ ಮತ್ತು ಅವರ ಮಗಳಾದ 2) ದೀಪಾಂಜಲಿ ಮತ್ತು 3) ಶ್ರೀಮತಿ ಛಾಯಾ ರಾಠೋಡ ಇವರು ಬರುತ್ತಿರುವುದನ್ನು ನೋಡಿ ಅವರು ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ನಾನು ಈ ವಿಷಯವನ್ನು ನನ್ನ ಗಂಡ ರೇವಣಕುಮಾರ ಬಾಳಿ ಇವರಿಗೆ ಕರೆಮಾಡಿ ತಿಳಿಸಿದಾಗ ಅವರು ಬಂದು ನನಗೆ ಉಪಚಾರಕ್ಕಾಗಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಘಟನೆ ನಡೆದ ಬಗ್ಗೆ ನಮ್ಮ ಮನೆಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರಾದಲ್ಲಿ ಸೇರೆಯಾಗಿರುತ್ತದೆ.  ಕಾರಣ ನನಗೆ ನೊಟೀಸ್ ಜಾರಿಮಾಡಲು ಬಂದು ವಿನಾಕಾರಣ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿರುವ ರಿಯಾಜುದ್ದಿನ್ ಆರ್. ಮತ್ತು ಪ್ರಾಣೇಶ ಕುಲಕರ್ಣಿ ಇವರುಗಳ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿಯಾಗಿ ನೀಡಿದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 07-10-2022 05:56 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080