ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ -22/08/2022 ರಂದು 12:00 ಪಿ.ಎಮ್ ಕ್ಕೆ ಶ್ರೀ ದೇವಾನಂದ ತಂದೆ ಶಿವಶರಣಪ್ಪಾ ಹಳಿಮನಿ ವಯಃ 25 ವರ್ಷ ಜಾತಿಃ ಕಬ್ಬಲಿಗ ಉಃ ಕೂಲಿ ಕೆಲಸ ಸಾಃ ಹಾಗರಗಾ ತಾ.ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ತಂದು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ದಿನಾಂಕ 19/08/2022 ರಂದು ನಮ್ಮ ಮನೆಯಿಂದ ಬೆಳಿಗ್ಗೆ ಉದಯಶಂಕರ ಪಾಟೀಲ ರವರ ಮನೆಗೆ ಹೋದನು. ಸಾಯಂಕಾಲ ನಾನು ನಮ್ಮ ಊರಿನ ಸೀಮೆಯ ಹೊಲಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ಹಾಗರಗಾ ಹತ್ತೀರದ ತಮ್ಮನಗೌಡ ಪೊಲೀಸ್ ಪಾಟೀಲ ಇವರ ಹೊಲದ ಹತ್ತೀರ ನಮ್ಮ ಅಣ್ಣ ಶಿವರಾಜನು ಉದಯ ಶಂಕರ ಪೊಲೀಸ್ ಪಾಟೀಲ ಇವರ ಎತ್ತಿನ ಬಂಡಿಯಲ್ಲಿ ಕೂಡಿಕೊಂಡು ನಮ್ಮ ಊರಿನ ಮಂಜುಳಾ ಗಂಡ ನಾಗೇಶ ಶೀಲವಂತ ಹಾಗು ಮೇರಾಜಬೀ ಗಂಡ ಮಹಮ್ಮದ ಹನೀಫ ಇವರಿಗೆ ಬಂಡಿಯಲ್ಲಿ ಕೂಡಿಸಿಕೊಂಡು ರಸ್ತೆಯ ಬದಿಯಿಂದ ಬಂಡಿ ಹೊಡೆದುಕೊಂಡು ಹಾಗರಗಾ ಕಡೆಗೆ ಹೋಗುವಾಗ ಸಾಯಂಕಾಲ 6:50 ಗಂಟೆ ಸುಮಾರಿಗೆ ಒಂದು ಕಾರ ಚಾಲಕನು ಹೆಬ್ಬಾಳ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಅಣ್ಣ ಶಿವರಾಜ ಹೊಡೆದುಕೊಂಡು ಹೋಗುತ್ತಿದ್ದ ಎತ್ತಿನ ಬಂಡಿಗೆ ಹಿಂದಿನಿಂದ ಡಿಕ್ಕಿ ಪಡಿಸಿದನು. ಆಗ ಎತ್ತಿನ ಬಂಡಿ ಮುರದಿದ್ದು, ಬಂಡಿಯಲ್ಲಿದ್ದ ಮೂರು ಜನರು ರಸ್ತೆಯ ಮೇಲೆ ಬಿದ್ದನು. ಸದರ ಘಟನೆಯಿಂದ ನಮ್ಮ ಅಣ್ಣ ಶಿವರಾಜನಿಗೆ ತಲೆಯ ಹಿಂದುಗಡೆ ರಕ್ತಗಾಯ, ಕೈ ಕಾಲುಗಳಿಗೆ ಅಲ್ಲಲ್ಲಿ ರಕ್ತಗಾಯ & ಗುಪ್ತಗಾಯವಾಗಿದ್ದು, ನಮ್ಮ ಊರಿನ ಮಂಜುಳಾ ಇವರಿಗೆ ನೋಡಲು ಮುಖಕ್ಕೆ ಅಲ್ಲಲ್ಲಿ ರಕ್ತಗಾಯ, ಮೂಗಿನಿಂದ ರಕ್ತಸ್ರಾವ ಆಗಿದ್ದು ಮತ್ತು ಮೇರಾಜಬೀ ಇವರಿಗೆ ನೋಡಲು ತಲೆಯ ಬಲಗಡೆ ರಕ್ತಗಾಯ, ಸೊಂಟಕ್ಕೆ ಗುಪ್ತಪೆಟ್ಟು, ಕೈಕಾಲುಗಳಿಗೆ ಅಲ್ಲಲ್ಲಿ ತರಚಿದಗಾಯ ಮತ್ತು ಗುಪ್ತಗಾಯ ಆಗಿದ್ದು ಮತ್ತು ಎತ್ತುಗಳಿಗೆ ನೋಡಲು ಬಲಗಡೆ ಹೋಗುವ ಉದಯಶಂಕರ ಪೊಲೀಸ್ ಪಾಟೀಲರ ಎತ್ತಿನ ಎರಡು ಹಿಂದಿನ ಕಾಲುಗಳು ಮುರದಿದ್ದು, ಎತ್ತಿನ ಬಂಡಿಗೆ ಡಿಕ್ಕಿ ಪಡಿಸಿದ ಕಾರ ನಂಬರ ನೋಡಲು ಕೆಎ 47-7172 ನೇದ್ದು ಇದ್ದು, ಅದರ ಚಾಲಕನಿಗೆ ನೋಡಲು ಆತನು ನಮ್ಮ ಕಡೆಗೆ ನೋಡುತ್ತಾ ತನ್ನ ಕಾರ ಸ್ಧಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ಆತನಿಗೆ ನೊಡಿರುತ್ತೆನೆ. ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ಸದರ ವಿಷಯಗೊತ್ತಾಗಿ ಸ್ಧಳಕ್ಕೆ ಅಂಬುಲೇನ್ಸ ವಾಹನ ಬಂದಿದ್ದು, ನಾನು ನಮ್ಮ ಅಣ್ಣ ಶಿವರಾಜ ಹಾಗು ಮಂಜುಳಾ ಮತ್ತು ಮೇರಾಜಬೀ ಇವರಿಗೆ ಸದರಿ ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಮಣ್ಣುರ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು, ನಾನು ನಮ್ಮ ಅಣ್ಣನ ಚಿಕಿತ್ಸೆಯಲ್ಲಿದ್ದು, ಮೇರಾಜಬೀ ಹಾಗು ಮಂಜುಳಾ ಇವರ ಜೊತೆಗೆ ವಿಚಾರಿಸಿ ಇಂದು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.  ಕಾರಣ ಸದರಿ ಕಾರ ನಂ. ಕೆಎ 47-7172 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ  ಕೈಗೊಳ್ಳಬೇಕೆಂದು ಅಂತಾ ಕೊಟ್ಟು ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ:22/08/2022 ರಂದು ಸಂಜೆ 6:30 ಗಂಟೆಗೆ ಫಿರ್ಯಾದಿ ಶ್ರೀಮತಿ ಹಫೀಜ್ ಆಯೇಶಾ ಸಿದ್ದಿಕಾ ಗಂ. ಇಫ್ತೆಕಾರ ಮಲೀಕ್ ಸಿದ್ದಿಕಿ ವಯ:66 ವರ್ಷ ಉ:ಮನೆ ಕೆಲಸ ಜಾ:ಮುಸ್ಲಿಂ ಸಾ: ಮನೆ ನಂ. 1-114/12/ಬಿ/ಸಿ/1 ಐವಾನ್ ಶಾಹಿ ಏರಿಯಾ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ನಾನು 1980 ನೇ ಸಾಲಿನಲ್ಲಿ ಐವಾನ್ ಶಾಹಿ ಏರಿಯಾದಲ್ಲಿ ಒಂದು 40*60 ಅಳತೆಯ ಖುಲ್ಲಾ ಜಾಗೆಯನ್ನು ಖರಿದಿಸಿ 1982 ನೇ ಸಾಲಿನಲ್ಲಿ ಮನೆ ಕಟ್ಟಿಸಿರುತ್ತೆನೆ. ನಂತರ ಅದೇ ಮನೆಯನ್ನು 2016 ನೇ ಸಾಲಿನಲ್ಲಿ ಪುನಃ ಹೊಸದಾಗಿ ಮಾರ್ಪಾಡು ಮಾಡಿಸಿರುತ್ತೆನೆ. ನನ್ನ ಗಂಡ ಮಕ್ಕಳು ಸೌದಿ ಅರೆಬಿಯಾದಲ್ಲಿ ವಾಸವಾಗಿದ್ದು ನಾನು ಕೂಡಾ ಅಲ್ಲಿಯೇ ವಾಸವಾಗಿರುತೆನೆ. ಆಗಾಗ ಕಲಬುರಗಿಗೆ ಬಂದು ಹೋಗುತ್ತೆನೆ. ಅದರಂತೆ ನಾನು ನಮ್ಮ ಮನೆಯನ್ನು ಲಾಕ್ ಮಾಡಿಕೊಂಡು 2016 ಡಿಸೆಂಬರ ತಿಂಗಳಲ್ಲಿ ಸೌದಿ ಅರೆಬಿಯಾಕ್ಕೆ ಹೋಗಿರುತ್ತೆನೆ.    ನಂತರ ನಾನು ಮತ್ತು ನನ್ನ ಮಗಳು ಮಲಿಹಾ ಸರ್ವತ್ ಸಿದ್ದಿಕಾ ಇಬ್ಬರು ಕೂಡಿ ದಿನಾಂಕ:20/07/2022 ರಂದು ಸೌದಿ ಅರೆಬಿಯಾದಿಂದ ಕಲಬುರಿಗಿಗೆ ಬಂದು ಸಂಜೆ 6:00 ಗಂಟೆ ಸುಮಾರಿಗೆ ಐವಾನದ ಶಾಹಿ ಏರಿಯಾದಲ್ಲಿ ಇರುವ ನಮ್ಮ ಮನೆಗೆ ಹೋಗಿ ನೋಡಲು ಅಜ್ಮತುಲ್ಲಾ ಖಾಜಿ ತಂದೆ ಮಹ್ಮದ ಅಲೀ ಖಾಜಿ, ಫರ್ಜಾನಾ ಬೇಗಂ ಮತ್ತು ಅವರ ಮಕ್ಕಳಾದ ರಹೆಮತುಲ್ಲಾ ಖಾಜಿ, ರಫತುಲ್ಲಾ ಖಾಜಿ, ಫಿಜಾ @ ಶಹಾಜಾನಾ ಮತ್ತು ಬುಶ್ರಾ ಇವರೆಲ್ಲರೂ ಕೂಡಿಕೊಂಡು ಮನೆಯ ಲಾಕ್ ಮುರಿದು ಅತಿಕ್ರಮವ ಪ್ರವೇಶ ಮಾಡಿ ವಾಸವಾಗಿದಿದ್ದು ನೋಡಿ ನಾನು ಅವರನ್ನು ನೀವು ಯಾಕೆ ಅತಿಕ್ರಮವಾಗಿ ನಮ್ಮ ಮನೆಯಲ್ಲಿ ವಾಸವಾಗಿದ್ದಿರಿ ನಿಮಗೆ ಇರಲು ಯಾರು ಹೇಳಿದ್ದಾರೆ ಖಾಲಿ ಮಾಡಿಕೊಂಡು ಬಿಟ್ಟು ಹೋಗಿ ಎಂದು ಹೇಳಿದಾಗ, ಯಾವ ಮನೆ ನಿಂದೆಲಿದೆ, ಯಾ ಮಗ ಹೇಳುತ್ತಾನೆ ನಿನ್ನ ಮನೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾವು ನಮ್ಮ ಮನೆಯಲ್ಲಿಯೇ ಅತಿಕ್ರಮವಾಗಿ ವಾಸವಾಗಿದ್ದು ನಮಗೆ ಬೈಯುತ್ತಿರಿ ಅಂತ ಅಂದಾಗ ಇಲ್ಲಿಂದ ಹೋಗುತ್ತಿರಿ ಅಥವಾ ನಿಮಗೆ ಇಲ್ಲೆ ಖಲಾಸ ಮಾಡಬೇಕು ಅಂತ ಜೀವ ಬೆದರಿಕೆ ಹಾಕುವಾಗ ನಾವು ಭಯಬಿದ್ದು ಹೋಗುತ್ತಿದ್ದಾಗ ನಮಗೆ ತಡೆದು ನಿಲ್ಲಿಸಿ ಇನ್ನೊಮ್ಮೆ ನೀವು ಮನೆ ಖಾಲಿ ಮಾಡು ಅಂತ ಬಂದರೆ ನಿಮಗೆ ಬಿಡುವದಿಲ್ಲ ಅಂತ ಬೆದರಿಕೆ ಹಾಕಿರುತ್ತಾರೆ. ಅಜ್ಮತುಲ್ಲಾ ಖಾಜಿ ಮತ್ತು ಅವರ ಹೆಂಡತಿ ಮಕ್ಕಳು ನಮ್ಮ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ವಾಸವಾಗಿದ್ದು ಮನೆಯನ್ನು ಖಾಲಿ ಮಾಡಲು ಹೇಳಿದರೆ ನಮಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :-  ದಿನಾಂಕ 22-08-2022  ರಂದು ೦೮:೧೦ ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಶಿವಾಜಿ ತಂದೆ ತುಳಜಾರಾಮ ಹದವೆ ವ|| ೨೬ ವರ್ಷ ಜಾತಿ|| ಗೋಂದಳಿ ಉ|| ಖಾಸಗಿ ಕೆಲಸ ಸಾ|| ಕಡಗಂಚಿ ತಾ|| ಆಳಂದ ಜಿ|| ಕಲಬುರಗಿ   ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದ ಸಾರಾಂಶವೇನೆಂದರೆ, ನಾನು ಕಲಬುರಗಿ ನಗರದ ಖರ್ಗೆ ಪೆಟ್ರೋಲ ಪಂಪ ಹತ್ತಿರ ಇರುವ ರಿಲಾಯನ್ಸ ಸ್ಮಾರ್ಟ ಪಾಯಿಂಟನಲ್ಲಿ ಖಾಸಗಿಯಾಗಿ ಕೆಲಸ ಮಾಡಿಕೊಂಡು ಕುಟುಂಬದವರೊಡನೆ ಇರುತ್ತೇನೆ. ನಾನು ನನ್ನ ಕೆಲಸಕ್ಕೆ ನನ್ನ ಹತ್ತಿರ ಇರುವ ಹೀರೋ ಡೆಸ್ಟನಿ ಮೋಟಾರ ಸೈಕಲ ನಂ ಕೆ.ಎ. ೩೨ ಹೆಚ್.ಎ ೨೭೯೫ ನೇದ್ದರ ಮೇಲೆ ಪ್ರತಿ ದಿನ ಹೋಗಿ ಬರುತ್ತೇನೆ.     ಹೀಗಿದ್ದು ಇಂದು ದಿನಾಂಕ ೨೨.೦೮.೨೦೨೨ ರಂದು ಬೆಳಿಗ್ಗೆ ೦೪:೪೫ ಎ.ಎಮ್. ಸುಮಾರಿಗೆ ನನ್ನ ಮೋಟಾರ ಸೈಕಲ ಮೇಲೆ ಪ್ರತಿನಿತ್ಯದಂತೆ ಕಡಗಂಚಿಯಿಂದ ಕಲಬುರಗಿಗೆ ಬರುವಾಗ ಟೋಲ ನಾಕ ಹತ್ತಿರ ಇರುವ ರಾಜಸ್ತಾನಿ ದಾಭಾ ಹತ್ತಿರ ಇದ್ದಾಗ ನನಗೆ ಯಾರೋ ಇಬ್ಬರು ಅಪರಿಚತರು ಅಂದಾಜ ೨೦ ರಿಂದ ೩೦ ವರ್ಷದೊಳಗಿನವರಿದ್ದು ಒಂದು ನಂಬರ ಪ್ಲೇಟ ಇಲ್ಲದ ಮೋಟಾರ ಸೈಕಲ ಮೇಲೆ ಬಂದವರೇ ನನಗೆ ಅಡ್ಡಗಟ್ಟಿ ನಿಲ್ಲಿಸಿ ಮೋಟಾರ ಸೈಕಲ ಚಲಾಯಿಸುತ್ತಿದ್ದವರನು ನನಗೆ ಚಾಕು ತೋರಿಸಿ ಹಿಂದೆ ಕುಳಿತವನು ಏ ಪೈಸೆ ಕಿತನೆ ಹೈ ನಿಕಾಲ ನಹಿತೋ ಜಾನಸೆ ಮಾರತೆ ಅಂತ ಅಂದವನೆ ನನ್ನ ಶರ್ಟನ ಮೇಲಿನ ಕಿಸೆಗೆ ಕೈ ಹಾಗಿ ನನ್ನ ಜೇಬಿನಲ್ಲಿದ್ದ ೧೦೦೦/- ರೂಪಾಯಿ ಕಸಿದುಕೊಂಡು ನನಗೆ ಕೆಳಗೆ ತಳ್ಳಿ ತಮ್ಮ ಮೋಟಾರ ಸೈಕಲ ಮೇಲೆ ಆಳಂದ ರೋಡಗೆ ವೇಗವಾಗಿ ಚಲಾಯಿಸಿಕೊಂಡು ಹೋದರು ನಂತರ ನಾನು ಗಾಭರಿಗೊಂಡು  ಸ್ಥಳಕ್ಕೆ ನನ್ನ ಮಾವನವರಾದ ಅಂಬಾದಾಸ ತಂದೆ ಭವಾನಿರಾವ ಗರಡಕರ ವ|| ೩೨ ವರ್ಷ ಸಾ|| ಪಟ್ಟಣ ಇವರಿಗೆ ಫೋನ ಮಾಡಿ ಕರೆಯಿಸಿ ಸದರಿ ವಿಷಯ ತಿಳಿಸಿದೆನು. ನಂತರ ನಾವಿಬ್ಬರೂ ಕೂಡಿಕೊಂಡು ಸುಂಟನೂರ ಕ್ರಾಸವರೆಗೆ ಅವರಿಗೆ ಹಿಂಬಾಲಿಸಲು ಪ್ರಯತ್ನಿಸಿದೆವು ಅವರು ನಮ್ಮಿಂದ ತಪ್ಪಿಸಿಕೊಂಡು ಹೋದರು. ನಂತರ ನಾನು ನನ್ನ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಈಗ ದೂರು ಅರ್ಜಿ ಸಲ್ಲಿಸಿತ್ತಿದ್ದು  ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಇರುತ್ತದೆ. ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 02-09-2022 05:05 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080