ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 22-07-2022  ರಂದು ಫಿರ್ಯಾದಿದಾರರು ಬಂದು ಸಲ್ಲಿಸಿದ ಫಿರ್ಯಾದಿ ಏನೆಂದರೆ ದಿನಾಂಕ ೦೪.೦೭.೨೦೨೨ ರಂದು ಸದರಿ ಆರೋಪಿತರು  ಹುಮಾನಾಬಾದ್ ರಿಂಗ್ ರೋಡ್ನ ಬಳಿಯಲ್ಲಿ ನಾನು ಔಷದವನ್ನು ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಮೂರು ಜನರು ನನಗೆ ಅಡ್ಡ ಗಟ್ಟಿ ನನ್ನ ಬಳಿಯಲ್ಲಿದ್ದ  ೯೩,೦೦೦ ರೂ ನಗದು ಹಣವನ್ನು  ಮತ್ತು ನನ್ನ ಕಾರಿನ ಚಾವಿಯನ್ನು ತೆಗೆದು ಕೊಂಡಿದ್ದಲ್ಲದೆ. ನನಗೆ ಎದೆಗೆ ಮತ್ತು ಮುಖಭಾಗಗಕ್ಕೆ ಹೊಡೆದು ಒಳಪಟ್ಟು ಮಾಡಿದ್ದು ಸದರಿ ಆರೋಪಿತರ ವಿರುದ್ದ ಪ್ರಕರಣದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕು ಎಂದು ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ:-  ದಿನಾಂಕ: 22-07-2022  ರಂದು ೧೧:೦೦ ಎಎಮ್ ಕ್ಕೆ ಫಿರ್ಯಾದಿದಾರರಾದ ಸಿದ್ದಣ್ಣ ತಂದೆ ಸೈದಪ್ಪ ಬಿದನೂರ ವಯ:೨೭ವರ್ಷ ಜಾ:ಕುರುಬ ಉ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಸಾ//ಹಾಗರಗುಂಡಗಿ ತಾ ಮತ್ತು ಜಿ ಕಲಬುರಗಿ ಹಾಲಿ ವಾಸ: ಕೇಂದ್ರ ಬಸ್ ನಿಲ್ದಾಣದ ಹತ್ತಿರ ಶಾಂತಿನಗರ ಕಲಬುರಗಿ ನಗರ.  ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನನ್ನದೊಂದು ಸ್ವಂತ ಹೋಂಡಾ ಶೈನ್ ಸಿಬಿ ಮೋಟಾರ್ ಸೈಕಲ್ ನಂ: ಏಂ-೩೨-ಇಡ್ಲ್ಯೂ-೪೩೯೮ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ: ೩೦/೦೬/೨೦೨೨ ರಂದು ರಾತ್ರಿ ೧೧:೦೦ ಪಿಎಮ್ ಗಂಟೆಗೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಆವರಣದಲ್ಲಿ ನಿಲ್ಲಿಸಿ ಒಳಗಡೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ತಾಯಿಯವರನ್ನು ವಿಚಾರಿಸಿಕೊಂಡು ಮರುದಿನ ಬೆಳಿಗ್ಗೆ ೦೬:೦೦ ಎ.ಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ 15-06-2022 ರಂದು ಕೆಚ್.ಹೆಚ.ಬಿ ಕಾಲೋನಿಯಲ್ಲಿರುವ ನನ್ನ ಅಕ್ಕನ ಮನೆಯಲ್ಲಿ ಕಾರ್ಯಕ್ರಮ ಇರುವದರಿಂದ ಆರ.ಪಿ ಸರ್ಕಲದಿಂದ ಸಂತೋಷ ಕಾಲೋನಿ ಕ್ರಾಸವರೆಗೆ ಆಟೋರಿಕ್ಷಾ ಮೂಲಕ ಹೋಗಿ ಸಂತೋಷ ಕಾಲೋನಿ ಕ್ರಾಸದಿಂದ ಕೆ.ಹೆಚ.ಬಿ ಕಾಲೋನಿಯಲ್ಲಿರುವ ನನ್ನ ಅಕ್ಕನ ಮನೆಗೆ ನಡೆದುಕೊಂಡು ಹೋಗುತ್ತೀರುವಾಗ ಬೇಂದ್ರೆ ನಗರದಲ್ಲಿ ಬರುವ ಪಬ್ಲಿಕ ಗಾರ್ಡನ ಹತ್ತೀರ ರೋಡ ಮೇಲೆ ಮದ್ಯಾಹ್ನ 2-30 ಗಂಟೆಗೆ ಮೋಟಾರ ಸೈಕಲ ನಂಬರ ಕೆಎ-32/ಇ.ಎಸ-2942 ನೇದ್ದರ ಸವಾರನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಬಲಗಾಲು ಮೊಳಕಾಲಿಗೆ ಭಾರಿ ಗುಪ್ತಪೆಟ್ಟು ಮತ್ತು ಬಲಗೈ ಅಂಗೈಗೆ ತರಚಿದಗಾಯವಾಗಿದ್ದರಿಂದ ಅಂದೆ ನಾನು ನನ್ನ ಉಪಚಾರ ಕುರಿತು ಖಾಸಗಿ ಆರ.ಆರ.ಶಹಾ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ ನಂತರ ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರ ಆಸ್ಪತ್ರೆಗೆ ಬಂದು ಉಪಚಾರ ಖರ್ಚು ವೆಚ್ಚ ಕೊಡುತ್ತೆನೆ ಅಂತಾ ಹೇಳಿ ಹೋಗಿದ್ದು ಇಲ್ಲಿಯವರೆಗೆ ಆತನು ಬಂದಿರುವದಿಲ್ಲ .ಆತನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ಮೋಟಾರ ಸೈಕಲ ನಂಬರ ಕೆಎ-32/ಇಎಸ-2942 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಅರ್ಜಿಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :- ನಾನು ಖಾಸಗಿ ಕೆಲಸ ಮಾಡಿಕೊಂಡುಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಾನು 2020 ನೇ ಸಾಲಿನಲ್ಲಿ ನನ್ನ ಹೆಂಡತಿಯಾದ ಪ್ರತಿಭಾ ಇವಳ ಹೆಸರಿನಲ್ಲಿ ಒಂದು  ಹೊಂಡಾ ಡಿಯೊ ದ್ವಿ-ಚಕ್ರ ವಾಹನ  ಕೆ.ಎ-32 ಈ.ವಾಯ್-1878 ಕೆಂಪು ಬಣ್ಣದ್ದು ಅ.ಕಿ. 60,000/- ನೇದ್ದನ್ನು ಖರೀದಿಸಿದ್ದು  ಇರುತ್ತದೆ. ಸದರಿ ವಾಹನವನ್ನು ನಾನು ಮತ್ತು ನನ್ನ ಹೆಂಡತಿ ನಡಿಸಿಕೊಂಡು ಬಂದಿರುತ್ತೇವೆ. ನಮ್ಮ ವಾಹನವನ್ನು ದಿನಾಲು ರಾತ್ರಿ ನಮ್ಮ ಮನೆಯ ಮುಂದೆ ನಿಲ್ಲಿಸುತ್ತಾ ಬಂದಿರುತ್ತವೆ.ಹೀಗಿದ್ದು ದಿನಾಂಕ:20.07.2022 ರಂದು ರಾತ್ರಿ 9:00 ಗಂಟೆಗೆ ಮೇಲೆ ನಮೂದಿಸಿದ ನಮ್ಮ ಹೊಂಡಾ ಡಿಯೊ ಮೋಟರ್ ಸೈಕಲನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದು ಇರುತ್ತದೆ. ಮದ್ಯ ರಾತ್ರಿ ಅಂದರೆ ದಿನಾಂಕ:21.07.2022 ರಂದು 02:00 ಎ.ಎಂ ಸುಮಾರಿಗೆ ನಾನು ಮುತ್ರ ವಿಸರ್ಜನೆ ಸಲುವಾಗಿ ಮನೆಯಿಂದ ಎದ್ದು ಹೊರಗಡೆ ಬಂದು ನೋಡಲಾಗಿ ನಮ್ಮ ದ್ವಿ-ಚಕ್ರ ವಾಹನ ಬೆಂಕಿ ಹತ್ತಿ ಉರಿಯುತ್ತಿದ್ದಾಗ ನಾನು ಗಾಬರಿಯಾಗಿ ಚಿರಾಡಿದಾಗ ಮನೆಯಿಂದ ನನ್ನ ಹೆಂಡತಿ ಪ್ರತಿಭಾ ಇವಳು ಮನೆಯಿಂದ ಹೋರಗೆ ಬಂದಿದ್ದು ನಂತರ ಇಬ್ಬರೂ ಕೂಡಿ ನೀರಿನಿಂದ ಬೆಂಕಿ ನಂದಿಸಿದ್ದು  ಇರುತ್ತದೆ. ಅಷ್ಟರಲ್ಲಿ ನಮ್ಮ ದ್ವಿ-ಚಕ್ರ ವಾಹನ ಸಂಪೂರ್ಣವಾಗಿ ಸುಟ್ಟು ಹೋಗಿ ಅ.ಕಿ. 60,000/- ಹಾನಿಯಾಗಿದ್ದು  ಇರುತ್ತದೆ. ಕಾರಣ ಇಂದು ದಿನಾಂಕ:21.07.2022 ರಂದು  02:00 ಎ.ಎಂ ಸುಮಾರಿಗೆ ನಮ್ಮ ದ್ವಿಚಕ್ರ  ವಾಹನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾನಿಮಾಡಿದ ಕಿಡಿಗೆಡಿಗಳಿಗೆ ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕಾಗಿ ವಿನಂತಿ. ಅಂತ ಇತ್ಯಾದಿಯಾಗಿ ಇದ್ದ ಅರ್ಜಿ  ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ; 22-07-2022  ರಂದು ೬.೩೦ ಪಿ.ಎಮ್ ಕ್ಕೆ ಶ್ರೀ ಸೋಮಶೇಖರ ತಂದೆ ಅಂಬಾರಾವ ಪಡಶೇಟ್ಟಿ ವಯಃ ೪೪ ವರ್ಷ ಜಾಃ ಲಿಂಗಾಯತ ಉಃ ಖಾಸಗಿ ಕೆಲಸ ಸಾಃ ಸ್ವಾಮೀ ವಿವೇಕಾನಂದ ನಗರ ಕಲಬುರಗಿ  ರವರು ಠಾಣೆಗೆ ಬಂದು ದೂರು ಕೊಟ್ಟ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದ ನಿವಾಸಿತನಿದ್ದು ಖಾಸಗಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಸ್ವಾಮಿ ವಿವೇಕಾನಂದ ನಗರದಲ್ಲಿ ವಾಸವಾಗಿರುತ್ತೇನೆ. ನಾನು ಬೆಂಗಳೂರಿನಲ್ಲಿ ಪಾರ್ಮಸಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನನ್ನ ತಾಯಿ ಹಾಗೂ ನನ್ನ ತಮ್ಮನಾದ ಜಗದೀಶ ಪಡಶೆಟ್ಟಿ ಇವರು ಕಲಬುರಗಿ ನಗರದ ಸ್ವಾಮಿ ವಿವೇಕಾನಂದ ಕಾಲೋನಿಯಲ್ಲಿ ಶರಣಯ್ಯಾ ಮಠಪತಿ ಎಂಬುವರ ಮನೆಯಲ್ಲಿ ನಾಲ್ಕು ಕೋಣೆಗಳು ಬಾಡಿಗೆ ತೆಗೆದುಕೊಂಡು ವಾಸವಾಗಿರುತ್ತೇವೆ. ಅದರಲ್ಲಿ ಎರಡು ಕೋಣೆಗಳು ನನ್ನ ತಮ್ಮ ಹಾಗೂ ತಾಯಿ ಉಪಯೋಗ ಮಾಡುತ್ತಾರೆ, ಇನ್ನು ಎರಡು ಕೋಣೆಗಳು ನಾನು ನನ್ನ ಮನೆಯ ಬಳಿಕೆ ಹಾಗೂ ಗೃಹ ಬಳಿಕೆ ಸಾಮಾನಗಳು ಹಾಗೂ ಬಂಗಾರದ ಆಭರಣಗಳು ಅಲಮಾರಿಯಲ್ಲಿ ಇಟ್ಟು ಮನೆಗೆ ಸರಿಯಾಗಿ ಕೀಲಿ ಹಾಕಿಕೊಂಡು ನಾನು ಮತ್ತು ನನ್ನ ಹೆಂಡತಿ ಮಕ್ಕಳು ಕೂಡಿಕೊಂಡು ಬೆಂಗಳೂರಿಗೆ ದಿನಾಂಕಃ ೨೯.೦೫.೨೦೨೨ ರಂದು ಹೋಗಿ ಬೆಂಗಳೂರಿನಲ್ಲೆ ವಾಸವಾಗಿರುತ್ತೇವೆ.    ಹೀಗೆ ಇರುವಾಗ ದಿನಾಂಕಃ ೨೧.೦೭.೨೦೨೨ ರಂದು ನನ್ನ ತಮ್ಮನಾದ ಜಗದಿಶ ಇತನು ಪೋನ್ ಮಾಡಿ ತಿಳಿಸಿದೆನೆಂದರೆ ಯಾರೋ ಕಳ್ಳರು ಮನಗೆ ಹಾಕಿರುವ ಕೀಲಿ ಮುರಿದು ಮನೆಯಲ್ಲಿರುವ ಸಾಮಾನಗಳು ಕಳ್ಳತನ ಮಾಡಿಕೊಂಡು ಹೋಗಿರುವ ಹಾಗೆ ಕಾಣುತ್ತಿದೆ ಅದಕ್ಕೆ ನೀವು ಬೇಗ ಬನ್ನಿರಿ ಅಂತ ಪೋನ್ ಮಾಡಿದ್ದಾಗ ನಾನು ಹಾಗೂ ನನ್ನ ಹೆಂಡತಿ ಕೂಡಿಕೊಂಡು ಇಂದು ದಿನಾಂಕಃ ೨೨.೦೭.೨೦೨೨ ರಂದು ಬೆಳಿಗ್ಗೆ ೯.೦೦ ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದು ನೋಡಿದ್ದಾಗ ನಮ್ಮ ಮನೆಯ ಬಾಗಿಲ ಕೀಲಿ ಮುರಿದ್ದು ಕೆಳಗಡೆ ಬಿದ್ದಿದ್ದು ಗಾಬರಿಗೊಂಡು ಮನೆಯೋಳಗೆ ಹೋಗಿ ನೋಡಿದ್ದಾಗ ನಮ್ಮ ಮನೆಯ ಅಲಮಾರಿಯು ಸಹ ಒಡೆದಿದ್ದು ಎಲ್ಲಾ ಸಾಮಾನಗಳು ತೆಗೆದು ನೋಡಿದ್ದಾಗ ಅಲಮಾರಿಯಲ್ಲಿದ್ದ ೧) ೧೫ ಗ್ರಾಂ ಒಂದು ನೆಕ್ಲೇಸ್ ಅಃ೧೭೬೬೪, ೨) ೪೦ ಗ್ರಾಂ ಚಪಲ ಹಾರ ಅಃಕಿಃ೧೧೪೦೦೦/-,೩) ೧೫ ಗ್ರಾಂ ಸುತ್ತೂಂಗರಗಳು (೫ ಗ್ರಾಂದ ೩ ಸುತ್ತೂಂಗುರಗಳು) ಅಃಕಿಃ ೩೩,೧೧೧/-೪) ೨೨ ಗ್ರಾಂ ಬಂಗಾರದ ಬ್ರಾಸಲೇಟ್ ಅಃಕಿಃ ೬೪೦೭೦/-, ೫)  ೨೦ ಗ್ರಾಂ ಬೆಳ್ಳಿ ಗ್ಲಾಸ್ ಅಃಕಿಃ ೧೦೦೦/- ಹಾಗೂ ೨೬,೦೦೦ ನಗದು ಹಣ ಇರಲ್ಲಿಲ್ಲ. ಹೀಗೆ ಒಟ್ಟು ೨,೨೯,೮೪೫ ಬೆಲೆ ಬಾಳುವಬಂಗಾರ ಹಾಗೂ ಬೆಳಿ ಸಾಮನಗಳು ಮತ್ತು ೨೬ ಸಾವಿರ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಮನೆಯಲ್ಲಿ ಎಲ್ಲಾ ಸಾಮಾನಗಳು ಹಾಗೂ ಸಲಕರಣೆಗಳು ಹುಡಕಾಡಿ ಮತ್ತು ಮನೆಯಲ್ಲಿ ಚರ್ಚೆ ಮಾಡಿಕೊಂಡು ಬಂದು ದೂರು ನೀಡುವದಕ್ಕೆ ತಡವಾಗಿರುತ್ತದೆ.   ಕಾರಣ ದಿನಾಂಕಃ ೨೧.೦೭.೨೦೨೨ ರಂದು ನಸುಕಿನ ಜಾವ ನಮ್ಮ ಮನೆಗೆ ಹಾಕಿರುವ ಬೀಗ ಮುರಿದ್ದು ಮನೆಯಲ್ಲಿಟ್ಟಿರುವ ೨,೨೯,೮೪೫ ಬೆಲೆ ಬಾಳುವಬಂಗಾರ ಹಾಗೂ ಬೆಳಿ ಸಾಮನಗಳು ಮತ್ತು ೨೬ ಸಾವಿರ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರಗಿಸಿ ಕಳೆದು ಹೋದ ನಮ್ಮ ಬಂಗಾರದ ಆಭರಣಗಳು ಹಾಗೂ ನಗದು ಹಣ ಪತ್ತೆ ಮಾಡಿ ಕೊಡಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ.  ಅಂತ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 28-07-2022 02:11 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080