ಅಭಿಪ್ರಾಯ / ಸಲಹೆಗಳು

 ಚೌಕ ಪೊಲೀಸ್ ಠಾಣೆ :-  ದಿನಾಂಕ: ೨೨.೦೫.೨೦೨೨ ರಂದು ಬೆಳಿಗ್ಗೆ ೧೧.೦೦ ಎಎಂಕ್ಕೆ ಫಿರ್ಯಾದಿದಾರರಾದ ಶ್ರೀ ಜಗನ್ನಾಥ ತಂದೆ ಕಲ್ಲಪ್ಪಾ ಗೂದಗೆ ವ:೫೦ ವರ್ಷ ಉ: ಗಂಗಾಶ್ರೀ & ಕಂಪನಿ ಜನರಲ್ ಮರ್ಚಂಟ್ ಅಂಗಡಿಯ ಮಾಲೀಕ ಜಾ:ಲಿಂಗಾಯತ ಸಾ:ಅಂಬಲಗಾ ಗ್ರಾಮ ತಾ:ಕಮಲಾಪೂರ ಜಿ:ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಫರ‍್ಯಾದಿ ದೂರು ಅರ್ಜಿ ನೀಡಿದ್ದು ಸದರಿ ದೂರು ಅರ್ಜಿಯ ಸಾರಂಶವೆನೆಂದರೆ ನಾನು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ನಾನು ಕಲಬುರಗಿ ನಗರದ ನೆಹರುಗಂಜದಲ್ಲಿ ಗಂಗಾಶ್ರೀ & ಕಂಪನಿ ಜನರಲ್ ಮರ್ಚಂಟ್ & ಕಮಿಷನ್ ಏಜೆಂಟ್ ಎಂಬ ಹೆಸರಿನಿಂದ ಆಹಾರ ಧಾನ್ಯಗಳ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಕುಟುಂದೊಂದಿಗೆ ವಾಸವಾಗಿರುತ್ತೆನೆ. ಸದರಿ ಅಂಗಡಿಯ ಎಲ್ಲಾ ವ್ಯವಹಾರವನ್ನು ನಾನೇ ನೋಡಿಕೊಂಡು ಬಂದಿರುತ್ತೇನೆ. ಯಥಾ ಪ್ರಕಾರ ನಿನ್ನೆ ದಿನಾಂಕ: ೨೧.೦೫.೨೦೨೨ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ನಮ್ಮ ಗಂಗಾಶ್ರೀ & ಕಂಪನಿ ಜನರಲ್ ಮರ್ಚಂಟ್ ಅಂಗಡಿ ತೆಗೆದು ವ್ಯಾಪಾರ ವಹಿವಾಟು ಮಾಡಿ ರಾತ್ರಿ ೯.೦೦ ಗಂಟೆಗೆ ಎಲ್ಲಾ ವ್ಯವಹಾರದಿಂದ ಬಂದ ನಗದು ಹಣವನ್ನು ತೆಗೆದುಕೊಂಡಿದ್ದು ಸ್ವಲ್ಪ ವ್ಯಾಪಾರಕ್ಕಾಗಿ ಸುಮಾರು ೨,೦೦೦/-ರೂಗಳಷ್ಟು ಹಣವನ್ನು ಅಲಮಾರಿಯಲ್ಲಿಟ್ಟು ಅದಕ್ಕೆ ಕೀಲಿ ಹಾಕಿಕೊಂಡು ರಾತ್ರಿ ೯.೧೫ ಗಂಟೆ ಸುಮಾರಿಗೆ ನಮ್ಮ ಗಂಗಾಶ್ರೀ & ಕಂಪನಿ ಜನರಲ್ ಮರ್ಚಂಟ್ ಅಂಗಡಿ ಎಲ್ಲಾ ಕಡೆಯಿಂದ ಭದ್ರವಾಗಿ ಕೀಲಿಯನ್ನು ಹಾಕಿಕೊಂಡು ಮನೆಗೆ ಹೋಗಿದ್ದು ಇರುತ್ತದೆ.   ಹೀಗಿದ್ದು ಇಂದು ದಿನಾಂಕಃ ೨೨.೦೫.೨೦೨೨ ರಂದು ಬೆಳಿಗ್ಗೆ ೯.೪೫ ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಮುನೀಮನಾದ ಮಲ್ಲಣ್ಣಾ ತಂದೆ ರೇವಣ್ಣಾ ಜಮಾದಾರ ಇಬ್ಬರೂ ಕೂಡಿಕೊಂಡು ನಮ್ಮ ಅಂಗಡಿಗೆ ಹಾಕಿದ ಕೀಲಿ ತೆರೆದು ಒಳಗಡೆ ಹೋಗಿ ನೋಡಿದಾಗ ಅಂಗಡಿಯಲ್ಲಿ ಇಟ್ಟಿದ್ದ ೦೨ ಅಲಮಾರಿಗಳು ನೆಲದ ಮೇಲೆ ಬಿದ್ದು ಅವುಗಳ ಕೀಲಿ ಮುರಿದಂತೆ ಕಂಡು ಬಂದಿದ್ದು ಅಲ್ಲದೇ ಮೇಲಗಡೆ ಛಾವಣಿಯ ಹುಕ್ಕುಗಳನು ತೆಗೆದು (ಪತ್ರಾಗಳನ್ನು ಎತ್ತಿದಂತೆ ಕಂಡು ಬಂದಿರುತ್ತದೆ. ಅಲ್ಲದೇ ಮೇಲಿಂದ ಅಂಗಡಿಯ ಒಳಗಡೆ ಇಳಿದುಕೊಂಡು ಬಂದು ೦೨ ಅಲಮಾರಿಗಳನ್ನು ನೆಲಕ್ಕೆ ಕೇಡುವಿ ಚಾವಿಯನ್ನು ಮುರಿದು ಅಲಮಾರಿಯಲ್ಲಿಟ್ಟಿದ ಹಣ ೨,೦೦೦/-ರೂಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ  ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಘಟನೆಯು ದಿನಾಂಕ:೨೧.೦೫.೨೦೨೨ ರಂದು ರಾತ್ರಿ ೯.೩೦ ಗಂಟೆಯಿಂದ ದಿನಾಂಕ:೨೨.೦೫.೨೦೨೨ ರಂದು ಬೆಳಗ್ಗಿನ ೯.೩೦ ಗಂಟೆಯ ಮಧ್ಯದ ಅವಧಿಯಲ್ಲಿ  ಜರೂಗಿರುತ್ತದೆ.  ಸದರಿ ನಮ್ಮ ಗಂಗಾಶ್ರೀ & ಕಂಪನಿ ಜನರಲ್ ರ ಮರ್ಚಂಟ್ ಅಂಗಡಿ ಕಳ್ಳತನ ಮಾಡಿದ ಕಳ್ಳರನ್ನು  ಪತ್ತೆ ಹಚ್ಚಿ  ಅವರಿಂದ ಕಳುವು ಮಾಡಿದ ಹಣ ನಮಗೆ ಮರಳಿ ನೀಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿ  ಅಂತಾ ಕೊಟ್ಟ ಫರ‍್ಯಾದಿ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 24-05-2022 04:15 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080