Feedback / Suggestions

 ಚೌಕ ಪೊಲೀಸ್ ಠಾಣೆ :-  ದಿನಾಂಕ: ೨೨.೦೫.೨೦೨೨ ರಂದು ಬೆಳಿಗ್ಗೆ ೧೧.೦೦ ಎಎಂಕ್ಕೆ ಫಿರ್ಯಾದಿದಾರರಾದ ಶ್ರೀ ಜಗನ್ನಾಥ ತಂದೆ ಕಲ್ಲಪ್ಪಾ ಗೂದಗೆ ವ:೫೦ ವರ್ಷ ಉ: ಗಂಗಾಶ್ರೀ & ಕಂಪನಿ ಜನರಲ್ ಮರ್ಚಂಟ್ ಅಂಗಡಿಯ ಮಾಲೀಕ ಜಾ:ಲಿಂಗಾಯತ ಸಾ:ಅಂಬಲಗಾ ಗ್ರಾಮ ತಾ:ಕಮಲಾಪೂರ ಜಿ:ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಫರ‍್ಯಾದಿ ದೂರು ಅರ್ಜಿ ನೀಡಿದ್ದು ಸದರಿ ದೂರು ಅರ್ಜಿಯ ಸಾರಂಶವೆನೆಂದರೆ ನಾನು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ನಾನು ಕಲಬುರಗಿ ನಗರದ ನೆಹರುಗಂಜದಲ್ಲಿ ಗಂಗಾಶ್ರೀ & ಕಂಪನಿ ಜನರಲ್ ಮರ್ಚಂಟ್ & ಕಮಿಷನ್ ಏಜೆಂಟ್ ಎಂಬ ಹೆಸರಿನಿಂದ ಆಹಾರ ಧಾನ್ಯಗಳ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಕುಟುಂದೊಂದಿಗೆ ವಾಸವಾಗಿರುತ್ತೆನೆ. ಸದರಿ ಅಂಗಡಿಯ ಎಲ್ಲಾ ವ್ಯವಹಾರವನ್ನು ನಾನೇ ನೋಡಿಕೊಂಡು ಬಂದಿರುತ್ತೇನೆ. ಯಥಾ ಪ್ರಕಾರ ನಿನ್ನೆ ದಿನಾಂಕ: ೨೧.೦೫.೨೦೨೨ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ನಮ್ಮ ಗಂಗಾಶ್ರೀ & ಕಂಪನಿ ಜನರಲ್ ಮರ್ಚಂಟ್ ಅಂಗಡಿ ತೆಗೆದು ವ್ಯಾಪಾರ ವಹಿವಾಟು ಮಾಡಿ ರಾತ್ರಿ ೯.೦೦ ಗಂಟೆಗೆ ಎಲ್ಲಾ ವ್ಯವಹಾರದಿಂದ ಬಂದ ನಗದು ಹಣವನ್ನು ತೆಗೆದುಕೊಂಡಿದ್ದು ಸ್ವಲ್ಪ ವ್ಯಾಪಾರಕ್ಕಾಗಿ ಸುಮಾರು ೨,೦೦೦/-ರೂಗಳಷ್ಟು ಹಣವನ್ನು ಅಲಮಾರಿಯಲ್ಲಿಟ್ಟು ಅದಕ್ಕೆ ಕೀಲಿ ಹಾಕಿಕೊಂಡು ರಾತ್ರಿ ೯.೧೫ ಗಂಟೆ ಸುಮಾರಿಗೆ ನಮ್ಮ ಗಂಗಾಶ್ರೀ & ಕಂಪನಿ ಜನರಲ್ ಮರ್ಚಂಟ್ ಅಂಗಡಿ ಎಲ್ಲಾ ಕಡೆಯಿಂದ ಭದ್ರವಾಗಿ ಕೀಲಿಯನ್ನು ಹಾಕಿಕೊಂಡು ಮನೆಗೆ ಹೋಗಿದ್ದು ಇರುತ್ತದೆ.   ಹೀಗಿದ್ದು ಇಂದು ದಿನಾಂಕಃ ೨೨.೦೫.೨೦೨೨ ರಂದು ಬೆಳಿಗ್ಗೆ ೯.೪೫ ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಮುನೀಮನಾದ ಮಲ್ಲಣ್ಣಾ ತಂದೆ ರೇವಣ್ಣಾ ಜಮಾದಾರ ಇಬ್ಬರೂ ಕೂಡಿಕೊಂಡು ನಮ್ಮ ಅಂಗಡಿಗೆ ಹಾಕಿದ ಕೀಲಿ ತೆರೆದು ಒಳಗಡೆ ಹೋಗಿ ನೋಡಿದಾಗ ಅಂಗಡಿಯಲ್ಲಿ ಇಟ್ಟಿದ್ದ ೦೨ ಅಲಮಾರಿಗಳು ನೆಲದ ಮೇಲೆ ಬಿದ್ದು ಅವುಗಳ ಕೀಲಿ ಮುರಿದಂತೆ ಕಂಡು ಬಂದಿದ್ದು ಅಲ್ಲದೇ ಮೇಲಗಡೆ ಛಾವಣಿಯ ಹುಕ್ಕುಗಳನು ತೆಗೆದು (ಪತ್ರಾಗಳನ್ನು ಎತ್ತಿದಂತೆ ಕಂಡು ಬಂದಿರುತ್ತದೆ. ಅಲ್ಲದೇ ಮೇಲಿಂದ ಅಂಗಡಿಯ ಒಳಗಡೆ ಇಳಿದುಕೊಂಡು ಬಂದು ೦೨ ಅಲಮಾರಿಗಳನ್ನು ನೆಲಕ್ಕೆ ಕೇಡುವಿ ಚಾವಿಯನ್ನು ಮುರಿದು ಅಲಮಾರಿಯಲ್ಲಿಟ್ಟಿದ ಹಣ ೨,೦೦೦/-ರೂಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ  ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಘಟನೆಯು ದಿನಾಂಕ:೨೧.೦೫.೨೦೨೨ ರಂದು ರಾತ್ರಿ ೯.೩೦ ಗಂಟೆಯಿಂದ ದಿನಾಂಕ:೨೨.೦೫.೨೦೨೨ ರಂದು ಬೆಳಗ್ಗಿನ ೯.೩೦ ಗಂಟೆಯ ಮಧ್ಯದ ಅವಧಿಯಲ್ಲಿ  ಜರೂಗಿರುತ್ತದೆ.  ಸದರಿ ನಮ್ಮ ಗಂಗಾಶ್ರೀ & ಕಂಪನಿ ಜನರಲ್ ರ ಮರ್ಚಂಟ್ ಅಂಗಡಿ ಕಳ್ಳತನ ಮಾಡಿದ ಕಳ್ಳರನ್ನು  ಪತ್ತೆ ಹಚ್ಚಿ  ಅವರಿಂದ ಕಳುವು ಮಾಡಿದ ಹಣ ನಮಗೆ ಮರಳಿ ನೀಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿ  ಅಂತಾ ಕೊಟ್ಟ ಫರ‍್ಯಾದಿ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 24-05-2022 04:15 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080