ಅಭಿಪ್ರಾಯ / ಸಲಹೆಗಳು

ಸಂಚಾರ ಪೊಲೀಸ್‌ ಠಾಣೆ-2 :- ದಿನಾಂಕ: 22-02-2023 ರಂದು ರಾತ್ರಿ 9:00 ಗಂಟೆಗೆ ಶ್ರೀ ಅಂಬಾರಾಯ ತಂದೆ ಅಣೆಪ್ಪಾ ಪೂಜಾರಿ ಇವರು ಠಾಣೆಗೆ ಹಾಜರಾಗಿ ತನ್ನ ಮಗ ಅಭಿಷೇಕ ಇವರ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ: 22-02-2023 ರಂದು ಸಾಯಂಕಾಲದ ಸಮಯದಲ್ಲಿ ಅವರಾದ (ಬಿ) ಗ್ರಾಮದಲ್ಲಿ ನನ್ನ ಕೆಲಸ ಇರುವದರಿಂದ ನಾನು ಮತ್ತು ತಿಪ್ಪಣ್ಣಾ ದೊರೆ ಇಬ್ಬರೂ ನನ್ನ ಮೋಟಾರ ಸೈಕಲ ಮೇಲೆ ಕಲಬರುಗಿ ಹುಮನಾಬಾದ ರಿಂಗ ರೋಡ ಮುಖಾಂತರ ಹೋಗುತ್ತೀದ್ದೆನು ತಾವರಗೇರಾ ಕ್ರಾಸ ಹತ್ತೀರ ರೋಡ ಮೇಲೆ ಒಬ್ಬ ಕೆ.ಕೆ.ಆರ.ಟಿ.ಸಿ ಬಸ್ಸ ಚಾಲಕನು ನನ್ನ ಮೋಟಾರ ಸೈಕಲಕ್ಕೆ ಸೈಡ ಹೊಡೆದು ಬೀದರ ಕಡೆಗೆ ಹೋಗುವ ಕುರಿತು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನ್ನು ನಾವು ಆತನ ಬಸ್ಸಿನ ಹಿಂದಿನಿಂದ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತೀರುವಾಗ ಸ್ವಾಮಿ ಸಮರ್ಥ ದೇವಸ್ಥಾನದ ಸಮೀಪ ಬರುವ ಇಟ್ಟಂಗಿ ಭಟ್ಟಿ ಎದುರಿನ ರೋಡ ಮೇಲೆ ಒಬ್ಬ ಮನುಷ್ಯನು ನಡೆದುಕೊಂಡು ಹೋಗುತ್ತೀರುವಾಗ ಆತನಿಗೆ ಬಸ್ಸ ಚಾಲಕ ತನ್ನ ಬಸ್ಸಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನ ಮುಖದ ಮೇಲೆ ಬಸ್ಸಿನ ಗಾಲಿಯನ್ನು ಚಲಾಯಿಸಿ ತನ್ನ ಬಸ್ಸನ್ನು ರೋಡ ಪಕ್ಕದಲ್ಲಿ ನಿಲ್ಲಿಸಿದನು. ನಾವು ನನ್ನ ಮೋಟಾರ ಸೈಕಲ ನಿಲ್ಲಿಸಿ ಅಪಘಾತ ಹೊಂದಿದ ಮನುಷ್ಯನ ಹತ್ತೀರ ನಾನು ಮತ್ತು ತಿಪ್ಪಣ್ಣಾ ದೊರೆ ಹಾಗೂ ಸದರಿ ಘಟನೆ ನೋಡಿದ ಅವರಾದ (ಬಿ) ಗ್ರಾಮದ ಅಜಮೀರ ಅಲಿ ತಂದೆ ಚಾಂದಸಾಬ ಕಣಜಿ ಹಾಗೂ ಮಾಳಪ್ಪಾ ತಂದೆ ವೀರಣ್ಣಾ ಪೂಜಾರಿ, ಹಾಗೂ ಶರಣಬಸಪ್ಪಾ ತಂದೆ ಶಿವಪ್ಪಾ ಹರಳಯ್ಯಾ ರವರು ಹೋಗಿ ನೋಡಲು ಆತನ ಮುಖ ಮತ್ತು ತೆಲೆಗೆ ಭಾರಿ ಪೆಟ್ಟು ಬಿದ್ದು ಮೌಂಸ ಹೊರಗೆ ಬಂದು ಪೂರ್ತಿಯಾಗಿ ಚಪ್ಪಟೆಯಾಗಿತ್ತು. ಬಲಗೈ ಮುಂಗೈ ಹತ್ತೀರ ಭಾರಿ ರಕ್ತಗಾಯ, ಬಲಗೈ ರಿಸ್ಟ ಹತ್ತಿರ ಬಲಗೈ ನಡುಬೆರಳಿಗೆ ರಕ್ತಗಾಯ ಬಲಗೈ ಹಸ್ತದ ಹಿಂದುಗಡೆ ರಕ್ತಗಾಯವಾಗಿತ್ತು. ಎಡಗೈ ಹಸ್ತದ ಹಿಂದುಗಡೆ ರಕ್ತಗಾಯ ಹೊಟ್ಟೆಯ ಮೇಲೆ ಗುಪ್ತಗಾಯವಾಗಿತ್ತು ಬಲಗಾಲು ಬೆರುಗಳಿಗೆ ತರಚಿದಗಾಯವಾಗಿದ್ದರಿಂದ ಆತನ ಉಸಿರಾಟ ನಿಂತು ಮೃತಪಟ್ಟಿದ್ದ ಸದರಿ ಘಟನೆ ಜರುಗಿದಾಗ ಸಾಯಂಕಾಲ ಅಂದಾಜು 5:30 ಗಂಟೆ ಸಮಯವಾಗಿತ್ತು. ಅಪಘಾತ ಪಡಿಸಿದ ಬಸ್ಸ ನಂಬರ ನೋಡಲು ಕೆಎ-38, ಎಫ್-986 ನೇದ್ದು ಇದ್ದಿತ್ತು ಅದರ ಚಾಲಕನ ಹೆಸರು ಪ್ರಕಾಶ ತಂದೆ ನರಸಪ್ಪಾ ಸಾ: ಕೊಳಿವಾಡ ತಾ: ಹುಮನಾಬಾದ ಕಂಡೆಕ್ಟರ ಹೆಸರು ಸುನೀಲಕುಮಾರ ತಂದೆ ತುಕಾರಾಮ ಅಂತಾ ಗೋತ್ತಾಯಿತು. ಮೃತನ ಹೆಸರು ವಿಳಾಸ ಗೋತ್ತಾಗಲಿಲ್ಲ ಸದರಿಯವನು  ಅಂದಾಜು 30 ರಿಂದ 35 ವರ್ಷದ ಗಂಡು ಮನುಷ್ಯನಿದ್ದು ತೆಳ್ಳನೆ ಮೈಕಟ್ಟು ಸಾಧಾಗಪ್ಪು ಮೈಬಣ್ಣ, ಕಪ್ಪು ಬಣ್ಣದ ಕುದಲು ಕಪ್ಪು ಬಣ್ಣದ ದಾಡಿ, ಹೊಂದಿದ್ದು ಒಂದು ಬಿಳಿ ಬಣ್ಣದ ಶರ್ಟ, ಒಂದು ಚಾಕಲೇಟ ಬಣ್ಣದ ಅಂಡರವೇರ ಹಾಗೂ ಒಂದು ಬೂದಿ ಬಣ್ಣದ ಪ್ಯಾಂಟ ಧರಿಸಿದ್ದನ್ನು, ಹೈ ವೇ ಪೆಟ್ರೊಲಿಂಗ ಪೊಲೀಸನವರು ಘಟನೆ ಸ್ಥಳಕ್ಕೆ ಬಂದು ನೋಡಿ ಮೃತನ ಶವದ ಸುರಕ್ಷತೆಗಾಗಿ ಒಂದು ಅಂಬುಲೇನ್ಸ ವಾಹನವನ್ನು ಸ್ಥಳಕ್ಕೆ ಕರೆಯಿಸಿ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋದರು. ನಾನು ಅವರಾದ (ಬಿ) ಗ್ರಾಮಕ್ಕೆ ಹೋಗಿ ನನ್ನ ಕೆಲಸ ಮುಗಿಸಿಕೊಂಡು ಪೊಲೀಸ ಠಾಣೆಗೆ ಬಂದಿರುತ್ತೇನೆ. ಕೆ.ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-38, ಎಫ್-986 ನೇದ್ದರ ಚಾಲಕನು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀರುವ ಅಪರಿಚತ 30-35 ವರ್ಷದ ಗಂಡು ಮನುಷ್ಯನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನ ಮುಖದ ಮೇಲೆ ಬಸ್ಸಿನ ಗಾಲಿಯನ್ನು ಚಲಾಯಿಸಿ ಆತನಿಗೆ ಭಾರಿಗಾಯಗೊಳಸಿದ್ದರಿಂದ ಅಪರಿಚತ 30-35 ವರ್ಷದ ಗಂಡು ಮನುಷ್ಯನು ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದು ಬಸ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರ ಪೊಲೀಸ್‌ ಠಾಣೆ-2 :- ದಿನಾಂಕ: 23-02-2023 ರಂದು ರಾತ್ರಿ 12:30 ಎ.ಎಮಕ್ಕೆ ಶ್ರೀ ಅಮರ ತಂದೆ ಭೀಮಾಶಂಕರ ಮುತ್ತಟ್ಟಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ : 22-02-2023 ರಂದು ಸಾಯಂಕಾಲದ ಸಮಯದಲ್ಲಿ ಶಹಾಬಾದನಿಂದ ಕಲಬುರಗಿಯಲ್ಲಿ ನಮ್ಮ ಕೆಲಸದ ಸಂಬಂಧ ನಾನು ಮತ್ತು ಮಾಣಿಕ ಪಾಟೀಲ ತಂದೆ ಬಾಬುರಾವ ಪಾಟೀಲ ಹಾಗೂ ಶ್ರೀನಿವಾಸ ಮತ್ತು ಶ್ರೀಕಾಂತ ರವರು ಕಾರಿನಲ್ಲಿ ಕುಳಿತು ಕಲಬುರಗಿಗೆ ಬಂದು ನಮ್ಮ ಕೆಲಸ ಮುಗಿಸಿಕೊಂಡು ಶಹಾಬಾದ ರಿಂಗ ರೋಡ ಹತ್ತೀರ ವಾಪಸ್ಸ ಶಾಹಾಬಾದಕ್ಕೆ ಹೋಗುವ ಸಲುವಾಗಿ ಇರುವಾಗ ನನ್ನ ಚಿಕ್ಕಪ್ಪನ ಮಗ ಓಂಕಾರ ತಂದೆ ಸುಭಾಷ ಮುತ್ತಟ್ಟಿ ಇವರು ನನಗೆ ಪೋನ ಮಾಡಿ ನಾನು ಮತ್ತು ನನ್ನ ಹೆಂಡತಿ ಪ್ರೀಯಾ ಹಾಗೂ ನನ್ನ ಮಗ ದೈವಾಂಶ ರವರು ನಾನು ಚಲಾಯಿಸುತ್ತೀರುವ ಕಾರಿನಲ್ಲಿ ಕುಳಿತು ಕಲಬುರಗಿಗೆ ಮನೆಯ ಸಾಮಾನುಗಳನ್ನು ತರುವ ಸಲುವಾಗಿ ಬಂದು ಸಾಮಾನುಗಳನ್ನು ಖರೀದಿ ಮಾಡಿಕೊಂಡು ವಾಪಸ್ಸ ಶಹಾಬಾದಕ್ಕೆ ಹೋಗುತ್ತೀದ್ದೆವೆ ಅಂತಾ ತಿಳಿಸಿದನು. ನಾವು 4 ಜನರು ಕೂಡಾ ಅವರ ಕಾರ ಹಿಂದಿನಿಂದ ಶಹಾಬಾದಕ್ಕೆ ಕಾರಿನಲ್ಲಿ ಹೋಗುತ್ತೀರುವಾಗ ದಾರಿ ಮದ್ಯ ಜೀವನ ದಾಬಾ ಎದುರಿನ ರೋಡ ಮೇಲೆ ಒಬ್ಬ ಸಿಮೆಂಟ ಬಂಕರ ಟ್ಯಾಂಕರ ಲಾರಿ ಚಾಲಕನು ಶಹಾಬಾದ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರ ಎದುರಿನಿಂದ ಹೋಗುತ್ತೀರುವ ನನ್ನ ಚಿಕ್ಕಪ್ಪನ ಮಗ ಓಂಕಾರ ಇವರ ಕಾರಿಗೆ ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಕಾರ ಹಿಂದಕ್ಕೆ ಸರಿದು ನಿಂತಿತು. ಅಪಘಾತ ಪಡಿಸಿದ ಸಿಮೆಂಟ ಬಂಕರ ಟ್ಯಾಂಕರ ಲಾರಿ ನಂಬರ ನೋಡಲು ಕೆಎ-32, ಸಿ-9689 ಇದ್ದಿತ್ತು ಅದರ ಚಾಲಕನು ತನ್ನ ವಾಹನವನ್ನು ಅಲ್ಲೇ ನಿಲ್ಲಿಸಿ ಓಡಿ ಹೋದನು. ನಾವು ಓಂಕಾರ ಇವರ ಕಾರ ಹತ್ತೀರ ಹೋಗಿ ನೋಡಲು ಓಂಕಾರ ಇತನ ಹಣೆಯ ಮೇಲೆ ಭಾರಿ ರಕ್ತಗಾಯ, ಗದ್ದಕ್ಕೆ ಭಾರಿ ರಕ್ತಗಾಯ,ಮುಗಿಗೆ ರಕ್ತಗಾಯವಾಗಿ ಎಡ ಕಿವಿಯಿಂದ ರಕ್ತ ಬಂದಿತ್ತು. ಎಡಗೈ ಮುಂಗೈ ಹತ್ತೀರ ಬಲಗೈ ಮುಂಗೈ ಹತ್ತೀರ ತರಚಿದಗಾಯಗಳಾಗಿದ್ದವು. ಬಲಗೈ ಹಸ್ತದ ಹಿಂದುಗಡೆ ರಕ್ತಗಾಯ, ಎಡ ಹೊಟ್ಟೆಯ ಹತ್ತೀರ ಭಾರಿ ಕಂದುಗಾಯ ಮತ್ತು ಬಲಗಾಲು ಹೆಬ್ಬರಳು ಹತ್ತೀರ ರಕ್ತಗಾಯವಾಗಿತ್ತು. ಅವರ ಹೆಂಡತಿ ಪ್ರೀಯಾ ಇವರ ಬಲಗಾಲು ತೊಡೆಗೆ ಭಾರಿ ಗುಪ್ತಪೆಟ್ಟು ಬಿದ್ದಿತ್ತು. ಅವರ ಮಗ ದೇವಾಂಶ ಇವರಿಗೆ ಯಾವುದೇ ಪೆಟ್ಟು ಬಿದ್ದಿರಲಿಲ್ಲ. ಸದರಿ ಘಟನೆ ಜರುಗಿದಾಗ ರಾತ್ರಿ ಅಂದಾಜು 9:00 ಗಂಟೆ ಸಮಯವಾಗಿತ್ತು. ಓಂಕಾರ ಇವರು ಚಲಾಯಿಸಿಕೊಂಡು ಬಂದಿರುವ ಕಾರ ನಂಬರ ಕೆಎ-32, ಎನ್-4132 ಇದ್ದಿತ್ತು. ಓಂಕಾರ ಮತ್ತು ಅವರ ಹೆಂಡತಿ ಪ್ರೀಯಾ ರವರಿಗೆ ಪೆಟ್ಟು ಬಿದ್ದು ತ್ರಾಸ ಆಗುತ್ತಿದ್ದರಿಂದ ಅಫಘಾತ ಸ್ಥಳಕ್ಕೆ ಅಂಬುಲೇನ್ಸ ವಾಹನ ಬಂದಾಗ ಪ್ರೀಯಾ ಇವರ ಉಪಚಾರ ಕುರಿತು ಒಂದು ಅಂಬುಲೇನ್ಸ ವಾಹನದಲ್ಲಿ ಕೂಡಿಸಿ ಖಾಸಗಿ ಮಣೂರ ಆಸ್ಪತ್ರೆಗೆ ಕಳುಹಸಿ ಓಂಕಾರ ಇವರ ಉಪಚಾರ ಇನ್ನೊಂದು ಅಂಬುಲೆನ್ಸ ವಾಹನದಲ್ಲಿ ಕೂಡಿಸಿಕೊಂಡು ಖಾಸಗಿ ಎ.ಎಸ.ಎಮ್ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಲು ರಾತ್ರಿ 9:40 ಗಂಟೆ ಸುಮಾರಿಗೆ ಎ.ಎಸ.ಎಮ್ ಆಸ್ಪತ್ರೆಯ ವೈದ್ಯರು ಓಂಕಾರ ಇವರಿಗೆ ನೋಡಿ ಆಸ್ಪತ್ರಗೆ ಬರುವದಕ್ಕಿಂತ ಮುಂಚಿತವಾಗಿ ದಾರಿ ಮದ್ಯದಲ್ಲಿ ಮೃತಪಟ್ಟಿರುತ್ತಾರೆ ತಿಳಿಸಿದ್ದು ಇರುತ್ತದೆ. ಓಂಕಾರ ಇವರ ಕಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಸಿಮೆಂಟ ಬಂಕರ ಟ್ಯಾಂಕರ ಲಾರಿ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ಸಿಮೆಂಟ ಬಂಕರ ಟ್ಯಾಂಕರ ಲಾರಿ ನಂಬರ ಕೆಎ-32, ಸಿ-9689 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಓಂಕಾರ ಇವರು ರೋಡ ಎಡಗಡೆಯಿಂದ ಚಲಾಯಿಸಿಕೊಂಡು ಬರುತ್ತೀರುವ ಕಾರ ನಂಬರ ಕೆಎ-32, ಎನ್-4132 ನೇದ್ದಕ್ಕೆ ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಓಂಕಾರ ಮತ್ತು ಅವರ ಹೆಂಡತಿ ಪ್ರೀಯಾ ಇವರಿಗೆ ಭಾರಿಗಾಯಗೊಳಿಸಿ ತನ್ನ ವಾಹನ ಅಲ್ಲೇ ಬಿಟ್ಟು ಓಡಿ ಹೋಗಿದ್ದು ಓಂಕಾರ ಇವರಿಗೆ ಉಪಚಾರ ಕುರಿತು ಕಾಸಗಿ ಎ.ಎಸ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ ಮೃತಪಟ್ಟಿದ್ದು ಕಾರಣ ಸಿಮೆಂಟ ಬಂಕರ ಟ್ಯಾಂಕರ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ :- ದಿನಾಂಕ: 21-02-2023 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ: 22-02-2023 ರಂದು ಬೆಳಗಿನ 5:00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯೋಳಗೆ ಅತಿಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲ ಕೊಂಡಿ ಮುರಿದು ಮನೆಯ ಆಲಮಾರಿಯಲ್ಲಿಟ್ಟಿರುವ 1) 15 ಗ್ರಾಂ ಬಂಗಾರದ ಮಂಗಳಸೂತ್ರ ಅ||ಕಿ|| 45,000/- ರೂ 2) 5 ಗ್ರಾಂ ಬಂಗಾರದ ಕಿವಿಯೋಲೆ ಅ||ಕಿ|| 15,000/- ರೂ 3) 3 ಗ್ರಾಂ ಬಂಗಾರದ ಮಕ್ಕಳ ಕಿವಿಯೋಲೆ ಅ||ಕಿ|| 12,000/-ರೂ 4) 20 ಗ್ರಾಂ ಬೆಳ್ಳಿಯ ಚೈನ್ ಅ||ಕಿ|| 1000/-ರೂ ಒಟ್ಟು 73,000/-ರೂ ಬೆಲೆ ಬಾಳುವದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಆದ್ದರಿಂದ ಕಳುವಾದ ನನ್ನ ಬಂಗಾರವನ್ನು ನನಗೆ ಮರಳಿ ಕೊಡಿಸಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ ನಗರ ಪೊಲೀಸ್ ಠಾಣೆ :- ದಿನಾಂಕ: 22-02-2023 ರಂದು ಎಂ.ಎಲ್.ಸಿ ವಸೂಲಾದ ಪ್ರಯುಕ್ತ ಎ.ಎಸ್.ಎಮ್ ಆಸ್ಪತ್ರೆಗೆ ಹೋಗಿ ವಿಚಾರಿಸಲಾಗಿ ಸದರಿ ಮಲ್ಲಿನಾಥ ರವರು ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲಾ ಅಂತಾ ಅಲ್ಲಿನ ವೈಧ್ಯಾಧಿಕಾರಿಗಳು ತಿಳಿಸಿದ್ದು ಅಲ್ಲೆ ಇದ್ದ ಅವರ ಹೆಂಡತಿ ಶಶಿಕಲಾ ಇವರಿಗೆ ವಿಚಾರಿಸಿದಾಗ ನನ್ನ ಗಂಡ ಮಲ್ಲಿನಾಥ 06 ತಿಂಗಳು ಹಿಂದೆ ಸ.ಹಿ.ಪ್ರಾ ಶಾಲೆ ದೇವಜಿ ನಾಯಕ ತಾಂಡಾದಲ್ಲಿ ಫ್ರಭಾರಿ ಮುಖ್ಯ ಗುರುಗಳಾಗಿದ್ದಾಗ ಮೇಲಾಧಿಕಾರಿಗಳು ಅಮಾನತ್ತು ಮಾಡಿ ಸಂಬಳವು ಕೊಡದೆ ಮಾನಸಿಕ ಕಿರುಕುಳ ನಿಡಿದ್ದರಿಂದ ನನ್ನ ಗಂಡ ಮನಸಿನ ಮೇಲೆ ಪರಿಣಾಮ ಬೀರಿಕೊಂಡು ವಿಷ ಸೇವನೆ ಮಾಡಿರುತ್ತಾರೆ ಅಂತಾ ಸರಕಾರಿ ತರ್ಪೇ ನೀಡಿದ ವರದಿಯ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ ನಗರ ಪೊಲೀಸ್ ಠಾಣೆ :- ದಿನಾಂಕ: 22-02-2023 ರಂದು ಫಿರ್ಯಾಧಿದಾರರು ನಿಡಿದ ಫಿರ್ಯಾಧಿ ಸಾರಾಂಶವೆನೆಂದರೆ ಫಿರ್ಯಾಧಿದಾರರ ಗಂಡ ಮಲ್ಲಿನಾಥ 06 ತಿಂಗಳು ಹಿಂದೆ ಸ.ಹಿ.ಪ್ರಾ ಶಾಲೆ ದೇವಜಿ ನಾಯಕ ತಾಂಡಾದಲ್ಲಿ ಫ್ರಭಾರಿ ಮುಖ್ಯಗುರುಗಳಾಗಿದ್ದಾಗ ಸಿದ್ದವೀರಯ್ಯ ಬಿ.ಇ.ಓ ಮತ್ತು ಸಕ್ರೇಪ್ಪಗೌಡ ಡಿ.ಡಿ.ಪಿ.ಓ ಸೇರಿಕೊಂಡು ಮಲ್ಲಿನಾಥ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾನೆಂದು ಕರ್ತವ್ಯದಿಂದ ಅಮಾನತ್ತು ಮಾಡಿದ್ದರು, ಅಮಾನತ್ತು ಸಮಯದಲ್ಲಿ 50% ವೇತನ ಕೂಡಾ ಸ್ಥಗಿತ ಮಾಡಿದ್ದರು ಮತ್ತು ಸದ್ಯ ಅಮಾನತ್ತು ಮಾಡಿ 06 ತಿಂಗಳಾದರೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅನುವು ಮಾಡಿಕೊಡದೆ ವಿನಾಕಾರಣ ತೊಂದರೆ ಕೊಡುತ್ತಾ ಅವಾಚ್ಯಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಕ್ಕೆ ಫಿರ್ಯಾಧಿದಾರರ ಗಂಡ ಮನನೊಂದು ದಿನಾಂಕ: 21-02-2023 ರಂದು ವಿಷ ಸೇವಿಸಿ ಸಾವು ಬದುಕಿನ ಮದ್ಯೆ ಹೊರಾಡುತ್ತಿದ್ದಾರೆ ಆದ್ದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 23-02-2023 01:54 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080