ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ ಠಾಣೆ :-  ದಿನಾಂಕ 22-02-2022  ರಂದು ರಾತ್ರಿ ೮ ಗಂಟೆಗೆ ಫರ‍್ಯಾದಿ ಶ್ರೀಮತಿ ಸಪ್ನಾ ಗಂಡ ಶಿವಕುಮಾರ ತಳವಾರ ವಯಾ|| ೨೨ ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಮಂಗಳೂರು ಗ್ರಾಮ ತಾ|| ಸಿಂದಗಿ ಜಿ|| ವಿಜಯಪೂರ ಹಾ.ವ, ತಾಡತೆಗನೂರು ತಾ|| ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ,  ಶಿವಕುಮಾರ ತಂದೆ ಚಂದ್ರಕಾಂತ ತಳವಾರ ಸಾ|| ಮಂಗಳೂರು ಗ್ರಾಮ ತಾ|| ಸಿಂದಗಿ ಜಿ|| ವಿಜಯಪೂರ ಇವರೊಂದಿಗೆ ದಿನಾಂಕ ೨೧.೦೬.೨೦೧೯ ರಂದು ನಮ್ಮ ಸಂಪ್ರದಾಯದಂತೆ ನನ್ನ ತಂದೆತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆ ಕಾಲಕ್ಕೆ ನನ್ನ ಗಂಡ ಅತ್ತೆ ಮಾವ ಇವರ ಬೇಡಿಕೆಯಂತೆ ಒಂದು ತೊಲೆ ಬಂಗಾರ, ೧೧ ಸಾವಿರ ರೂಪಾಯಿ ಹುಂಡಾ, ಮತ್ತು ಹಾಂಡೆ ಬಾಂಡೆ ಇತ್ಯಾದಿ ಸಾಮಾನುಗಳು ಒಟ್ಟು ೧.೫ ಲಕ್ಷ ರೂಪಾಯಿ ಸಾಮಾನುಗಳನ್ನು ಕೊಟ್ಟಿರುತ್ತಾರೆ.  ಮದುವೆಯಾದ ಒಂದು ತಿಂಗಳ ವರೆಗೆ ನನ್ನ ಗಂಡನ ಮನೆಯಲ್ಲಿ ಸರಿಯಾಗಿ ಇಟ್ಟುಕೊಂಡು ನಂತರ ನನ್ನ ಗಂಡ ಶಿವಕುಮಾರ, ಅತ್ತೆ ಸೀತಾಬಾಯಿ, ಮಾವ ಚಂದ್ರಕಾಂತ ಇವರೆಲ್ಲಾ ಸೇರಿ ನೀನು ಸರಿಯಾಗಿ ಇಲ್ಲ, ನಿನಗೆ ರೋಗ ಇದೆ, ನಿನಗೆ ಅಡುಗೆ ಮಾಡಲು ಬರುವದಿಲ್ಲಾ, ನಮಗೆ ಸಾಲ ಆಗಿದೆ, ನೀನು ನಿನ್ನ ತವರು ಮನೆಯಿಂದ ೫ ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಹೇಳಿ ನನಗೆ ರಂಡಿ ಬೋಸಡಿ ಅಂತಾ ಬೈಯ್ಯುತ್ತಾ, ಕೈಯಿಂದ ಹೊಡೆಬಡೆ ಮಾಡುತ್ತಾ ಬಂದಿರುತ್ತಾರೆ. ಮದುವೆ ಆದ ೬ ತಿಂಗಳ ನಂತರ ದಿನಾಂಕ ೧೦.೧೨.೨೦೧೯ ರಂದು ಬೆಳಿಗ್ಗೆ ೧೦ ಗಂಟೆಗೆ ನನಗೆ ನನ್ನ ತವರು ಮನೆಗೆ ತಂದು ಬಿಟ್ಟಿರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ನಾನು ನನ್ನ ತವರು ಮನೆಯಲ್ಲಿಯೇ ಉಳಿದುಕೊಂಡಿರುತ್ತೇನೆ. ಈ ನಡುವೆ ನಮ್ಮ ಮನೆಯ ಹಿರಿಯರು ಹಲವಾರು ಬಾರಿ ನ್ಯಾಯಾ ಪಂಚಯಿತಿ ಮಾಡಿ, ತಿಳಿ ಹೇಳಲಾಗಿತ್ತು. ಹಾಗೂ ವರದಕ್ಷಿಣೆ ಹಣ ೫ ಲಕ್ಷ ರೂಪಾಯಿ ಹಣವನ್ನು ಸ್ವಲ್ಪ ದಿವಸಗಳ ನಂತರ ಕೊಡುವದಾಗಿ ನನ್ನ ತಂದೆತಾಯಿಯವರು ಒಪ್ಪಿಕೊಂಡಿರುತ್ತಾರೆ. ಆಗ ನನ್ನ ಗಂಡ ದಿನಾಂಕ ೨೨.೦೧.೨೦೨೨ ರಂದು ಮಧ್ಯಾಹ್ನ ೧ ಗಂಟೆಗೆ ನನ್ನ ಗಂಡ, ಅತ್ತೆ, ಮಾವ ಇವರೆಲ್ಲಾ ಸೇರಿ ನನ್ನ ತವರು ಮನೆಗೆ ಬಂದು ನಾವು ಹೇಳಿದಷ್ಟು ಹಣ ನಮಗೆ ಈಗಲೇ ಬೇಕು ಅಂತಾ ನನ್ನ ಜೊತೆಯಲ್ಲಿ ಜಗಳ ಮಾಡಿ, ಹೊಡೆಬಡೆ ಮಾಡುತ್ತಿರುವಾಗ ನನ್ನ ತಂದೆತಾಯಿಯವರು, ಹಾಗೂ ನಮ್ಮ ಪರಿಚಯದವರಾದ ಲೊಕೇಶ ಮತ್ತು ಅಮರನಾಥ ಇವರು ಜಗಳ ಬಿಡಿಸಿರುತ್ತಾರೆ. ಆಗ ಅವರು ನೀನು ಹಣ ತರದೇ ನಮ್ಮ ಮನೆಗೆ ಬಂದಲ್ಲಿ ನಾವು ನಿನಗೆ ಮನೆಗೆ ಕರೆದುಕೊಳ್ಳುವದಿಲ್ಲಾ, ನಿನಗೆ ನಿನಗೆ ಕುಡುಗೋಲಿನಿಂದ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿ ಹಾಕುತ್ತೇವೆ ಅಂತಾ ಜೀವ ಭಯ ಹಾಕಿ ಹೋಗಿರುತ್ತಾರೆ. ಕಾರಣ ನನಗೆ ವರದಕ್ಷಿಣೆ ಕಿರುಕುಳ ನೀಡಿದ ನನ್ನ ಗಂಡ ಅತ್ತೆ ಮಾವ ಇವರೆಲ್ಲೆ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 03-03-2022 11:43 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080