Feedback / Suggestions

ಮಹಿಳಾ ಪೊಲೀಸ ಠಾಣೆ :-  ದಿನಾಂಕ 22-02-2022  ರಂದು ರಾತ್ರಿ ೮ ಗಂಟೆಗೆ ಫರ‍್ಯಾದಿ ಶ್ರೀಮತಿ ಸಪ್ನಾ ಗಂಡ ಶಿವಕುಮಾರ ತಳವಾರ ವಯಾ|| ೨೨ ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಮಂಗಳೂರು ಗ್ರಾಮ ತಾ|| ಸಿಂದಗಿ ಜಿ|| ವಿಜಯಪೂರ ಹಾ.ವ, ತಾಡತೆಗನೂರು ತಾ|| ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ,  ಶಿವಕುಮಾರ ತಂದೆ ಚಂದ್ರಕಾಂತ ತಳವಾರ ಸಾ|| ಮಂಗಳೂರು ಗ್ರಾಮ ತಾ|| ಸಿಂದಗಿ ಜಿ|| ವಿಜಯಪೂರ ಇವರೊಂದಿಗೆ ದಿನಾಂಕ ೨೧.೦೬.೨೦೧೯ ರಂದು ನಮ್ಮ ಸಂಪ್ರದಾಯದಂತೆ ನನ್ನ ತಂದೆತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆ ಕಾಲಕ್ಕೆ ನನ್ನ ಗಂಡ ಅತ್ತೆ ಮಾವ ಇವರ ಬೇಡಿಕೆಯಂತೆ ಒಂದು ತೊಲೆ ಬಂಗಾರ, ೧೧ ಸಾವಿರ ರೂಪಾಯಿ ಹುಂಡಾ, ಮತ್ತು ಹಾಂಡೆ ಬಾಂಡೆ ಇತ್ಯಾದಿ ಸಾಮಾನುಗಳು ಒಟ್ಟು ೧.೫ ಲಕ್ಷ ರೂಪಾಯಿ ಸಾಮಾನುಗಳನ್ನು ಕೊಟ್ಟಿರುತ್ತಾರೆ.  ಮದುವೆಯಾದ ಒಂದು ತಿಂಗಳ ವರೆಗೆ ನನ್ನ ಗಂಡನ ಮನೆಯಲ್ಲಿ ಸರಿಯಾಗಿ ಇಟ್ಟುಕೊಂಡು ನಂತರ ನನ್ನ ಗಂಡ ಶಿವಕುಮಾರ, ಅತ್ತೆ ಸೀತಾಬಾಯಿ, ಮಾವ ಚಂದ್ರಕಾಂತ ಇವರೆಲ್ಲಾ ಸೇರಿ ನೀನು ಸರಿಯಾಗಿ ಇಲ್ಲ, ನಿನಗೆ ರೋಗ ಇದೆ, ನಿನಗೆ ಅಡುಗೆ ಮಾಡಲು ಬರುವದಿಲ್ಲಾ, ನಮಗೆ ಸಾಲ ಆಗಿದೆ, ನೀನು ನಿನ್ನ ತವರು ಮನೆಯಿಂದ ೫ ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಹೇಳಿ ನನಗೆ ರಂಡಿ ಬೋಸಡಿ ಅಂತಾ ಬೈಯ್ಯುತ್ತಾ, ಕೈಯಿಂದ ಹೊಡೆಬಡೆ ಮಾಡುತ್ತಾ ಬಂದಿರುತ್ತಾರೆ. ಮದುವೆ ಆದ ೬ ತಿಂಗಳ ನಂತರ ದಿನಾಂಕ ೧೦.೧೨.೨೦೧೯ ರಂದು ಬೆಳಿಗ್ಗೆ ೧೦ ಗಂಟೆಗೆ ನನಗೆ ನನ್ನ ತವರು ಮನೆಗೆ ತಂದು ಬಿಟ್ಟಿರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ನಾನು ನನ್ನ ತವರು ಮನೆಯಲ್ಲಿಯೇ ಉಳಿದುಕೊಂಡಿರುತ್ತೇನೆ. ಈ ನಡುವೆ ನಮ್ಮ ಮನೆಯ ಹಿರಿಯರು ಹಲವಾರು ಬಾರಿ ನ್ಯಾಯಾ ಪಂಚಯಿತಿ ಮಾಡಿ, ತಿಳಿ ಹೇಳಲಾಗಿತ್ತು. ಹಾಗೂ ವರದಕ್ಷಿಣೆ ಹಣ ೫ ಲಕ್ಷ ರೂಪಾಯಿ ಹಣವನ್ನು ಸ್ವಲ್ಪ ದಿವಸಗಳ ನಂತರ ಕೊಡುವದಾಗಿ ನನ್ನ ತಂದೆತಾಯಿಯವರು ಒಪ್ಪಿಕೊಂಡಿರುತ್ತಾರೆ. ಆಗ ನನ್ನ ಗಂಡ ದಿನಾಂಕ ೨೨.೦೧.೨೦೨೨ ರಂದು ಮಧ್ಯಾಹ್ನ ೧ ಗಂಟೆಗೆ ನನ್ನ ಗಂಡ, ಅತ್ತೆ, ಮಾವ ಇವರೆಲ್ಲಾ ಸೇರಿ ನನ್ನ ತವರು ಮನೆಗೆ ಬಂದು ನಾವು ಹೇಳಿದಷ್ಟು ಹಣ ನಮಗೆ ಈಗಲೇ ಬೇಕು ಅಂತಾ ನನ್ನ ಜೊತೆಯಲ್ಲಿ ಜಗಳ ಮಾಡಿ, ಹೊಡೆಬಡೆ ಮಾಡುತ್ತಿರುವಾಗ ನನ್ನ ತಂದೆತಾಯಿಯವರು, ಹಾಗೂ ನಮ್ಮ ಪರಿಚಯದವರಾದ ಲೊಕೇಶ ಮತ್ತು ಅಮರನಾಥ ಇವರು ಜಗಳ ಬಿಡಿಸಿರುತ್ತಾರೆ. ಆಗ ಅವರು ನೀನು ಹಣ ತರದೇ ನಮ್ಮ ಮನೆಗೆ ಬಂದಲ್ಲಿ ನಾವು ನಿನಗೆ ಮನೆಗೆ ಕರೆದುಕೊಳ್ಳುವದಿಲ್ಲಾ, ನಿನಗೆ ನಿನಗೆ ಕುಡುಗೋಲಿನಿಂದ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿ ಹಾಕುತ್ತೇವೆ ಅಂತಾ ಜೀವ ಭಯ ಹಾಕಿ ಹೋಗಿರುತ್ತಾರೆ. ಕಾರಣ ನನಗೆ ವರದಕ್ಷಿಣೆ ಕಿರುಕುಳ ನೀಡಿದ ನನ್ನ ಗಂಡ ಅತ್ತೆ ಮಾವ ಇವರೆಲ್ಲೆ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 03-03-2022 11:43 AM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080