ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 22/01/2023 ರಂದು ಬೆಳಿಗ್ಗೆ 08:15 ಗಂಟೆಗೆ ಶ್ರೀ. ಬಸವರಾಜ ತಂದೆ ರೇವಪ್ಪಾ ಕಟ್ಟಿಕೇರಿ ವಯಃ 63 ವರ್ಷ ಜಾತಿಃ ಲಿಂಗಾಯತ ಉಃ ನಿವೃತ ಹೈಸ್ಕೂಲ್ ಶೀಕ್ಷಕರು ಮುಕ್ಕಾಃ ರುದ್ರವಾಡಿ ತಾಃ ಆಳಂದ ಈಗ ಸಧ್ಯಃ ಸ್ವಾಮಿ ವಿವೆಕಾನಂದ ಕಾಲೋನಿ ಕಲಬುರಗಿ ಫಿರ್ಯಾಧಿ ಸಲ್ಲಿಸುವುದೆನೆಂದರೆ, ನನಗೆ ಶಾರದಾಬಾಯಿ ಎಂಬ ಹೆಂಡತಿ ಇದ್ದು, ಇವಳು ಕೂಡಾ ಸಹ ಶೀಕ್ಷಕರಾಗಿ ನಿವೃತ್ತಿಯಾಗಿರುತ್ತಾರೆ. ನಮಗೆ ನಾಲ್ಕು ಜನ ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳಿದ್ದು, ಇವರಲ್ಲಿ ಕೊನೆಯ ಮಗನಾದ ಹರೀಶ ವಯಃ 24 ವರ್ಷದವನಿದ್ದು, ಈತನು ಬೆಂಗಳೂರದಲ್ಲಿ ಖಾಸಗಿ ಕೆಲಸ ಮಾಡಿಕೊಂಡಿದ್ದನು. ಈಗ ಒಂದು ತಿಂಗಳ ಹಿಂದೆ ನನ್ನ ಮಗ ಹರೀಶನ ಬಲಗಾಲಿಗೆ ಮೋಟರ ಸೈಕಲದ ಸೈಲೆನ್ಸರ ಹತ್ತಿ ಗಾಯವಾಗಿದ್ದಕ್ಕೆ, ಕಲಬುರಗಿಗೆ ಬಂದು ಉಳಿದುಕೊಂಡಿರುತ್ತಾನೆ. ಹೀಗಿದ್ದು, ನಿನ್ನೆ ದಿನಾಂಕ 21/01/2023 ರಂದು ನನ್ನ ಮಗ ಹರೀಶ ಈತನು ನಮ್ಮ ಹೊಂಡಾ ಶೈನ್ ಮೋಟರ ಸೈಕಲ ನಂ. ಕೆಎ 04 ಕೆ.ಡಿ 5110 ಇದನ್ನು ತೆಗೆದುಕೊಂಡು ತನ್ನ ಗೆಳೆಯ ಅಂಬರೀಶ ತಂದೆ ಪ್ರಕಾಶ ಮಡಿವಾಳ ಈತನೊಂದಿಗೆ ಗಾಣಗಾಪೂರ ದೇವಸ್ಧಾನಕ್ಕೆ ಹೋಗಿ ಸಾಯಂಕಾಲ ಮರಳಿ ಕಲಬುರಗಿಗೆ ಬಂದು ರಾತ್ರಿ ಆತನು ಈ ಮೋಟರ ಸೈಕಲದ ಮೇಲೆ ಹೊರಗಡೆ ಹೋಗಿದ್ದು, ರಾತ್ರಿ ಫೋನ್ ಮಾಡಿದಾಗ ನೀವು ಊಟ ಮಾಡಿ ಮಲಗಿರಿ ನಾನು ತಡಮಾಡಿ ಬರುತ್ತೆನೆ ಅಂತಾ ತಿಳಿಸಿದ್ದು, ರಾತ್ರಿಯಾದರು ಮನೆಗೆ ಬರಲಿಲ್ಲಾ. ಇಂದು ದಿನಾಂಕ 22/01/2023 ರಂದು ಬೆಳಿಗ್ಗೆ 6:30 ಗಂಟೆ ಸುಮಾರಿಗೆ ಪೊಲೀಸರು ಫೋನ್ ಮಾಡಿ ನಿಮ್ಮ ಫೋನ್ ನಂಬರ ಇರುವ ಹುಡುಗನು ರಿಂಗರೋಡಿನ ಮಿರ್ಚಿ ಗೋದಾಮದ ಸಮೀಪದಲ್ಲಿ ರೋಡ ಡಿವೈಡರಿಗೆ ಮೋಟರ ಸೈಕಲ ಹಾಯಿಸಿಕೊಂಡು ಭಾರಿಗಾಯಗೊಂಡು ಮೃತ ಪಟ್ಟಿದ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ನಾನು ಗಾಬರಿಗೊಂಡು ನನ್ನ ಮಗ ಲೊಕೇಶ ಈತನೊಂದಿಗೆ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ಅಲ್ಲಿರುವ ಮಗನಿಗೆ ನೋಡಲಾಗಿ ಆತನ ತಲೆಯ ಭಾಗಕ್ಕೆ ಹಾಗು ಇತರೆ ಕಡೆಗಳಲ್ಲಿ ಭಾರಿಗಾಯಗೊಂಡು ಮೃತ ಪಟ್ಟಿದ್ದು, ವಿಚಾರಣೆಯಲ್ಲಿ ವಿಷಯಗೊತ್ತಾಗಿದ್ದೆನೆಂದರೆ, ನನ್ನ ಮಗ ಹರೀಶ ಈತನು ಮೋಟರ ಸೈಕಲ ನಂ. ಕೆಎ 04 ಕೆ.ಡಿ 5110 ಇದರ ಮೇಲೆ ಮಧ್ಯರಾತ್ರಿ ಇಂದು ದಿನಾಂಕ 22/01/2023 ರಂದು 00:45 ಗಂಟೆ ಸುಮಾರಿಗೆ ಹೀರಾಪೂರ ಕ್ರಾಸ್ ರಿಂಗರೋಡ ಕಡೆಯಿಂದ ಮಿರ್ಚಿ ಗೋದಾಮದ ಸಮೀಪ ಬರುವಾಗ ರೋಡ ಡಿವೈಡರಗೆ ಮತ್ತು ಗ್ರೀಲ್ ಗೆ ಅಪಘಾತ ಪಡಿಸಿಕೊಂಡು ಬಿದ್ದಿದ್ದರಿಂದ ತಲೆಯ ಭಾಗಕ್ಕೆ ಮತ್ತು ಇತರೆ ಕಡೆಗಳಲ್ಲಿ ಭಾರಿಗಾಯಗೊಂಡು ಸ್ಧಳದಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ತಾವು ತನಿಖೆ ಕೈಗೊಂಡು ಮುಂದಿನ ಕ್ರಮ ಕೈಗೊಳ್ಳಬೇಕು ಅಂತಾ ವಿನಂತಿ  ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 22/01/2023 ರಂದು ರಾತ್ರಿ 7:45 ಗಂಟೆಗೆ ಶ್ರೀ. ಫಕ್ರೋದ್ದಿನ ತಂದೆ ಶೇಖ ಗುಡುಸಾಬ ಮದರೆವಾಲೆ ವಯಃ 39 ವರ್ಷ ಜಾತಿಃ ಮುಸ್ಲಿಂ ಉಃ ಕಿರಾಣಿ ಅಂಗಡಿ ಸಾಃ ಶರಣ ನಗರ ಶಹಾಬಾದ ತಾಃ ಶಹಾಬಾದ ಜಿಲ್ಲಾಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಹೇಳಿಕೆ ನೀಡಿದ್ದು ಸಾರಂಶವೆನೆಂದರೆ, ನಾನು ಮೇಲಿನ ವಿಳಾಸದವನಿದ್ದು, ಕಿರಾಣಿ ಅಂಗಡಿಯನ್ನು ಇಟ್ಟಿಕೊಂಡು ಉಪಜೀವನ ಮಾಡಿಕೊಂಡಿರುತ್ತೆನೆ. ನಮ್ಮ ತಂದೆತಾಯಿಯವರಿಗೆ ನಾವು 6 ಜನ ಗಂಡು ಮಕ್ಕಳು, 3 ಜನ ಗಂಡು ಮಕ್ಕಳಿದ್ದು, ಇವರಲ್ಲಿ ನಾಲ್ಕನೇಯವನಾದ ಬಾಬುಮಿಯಾ ವಯಃ 43 ವರ್ಷದವನಿದ್ದು, ಈತನು ಹೊಟೇಲದಲ್ಲಿ ಸಪ್ಲೈ ಕೆಲಸ ಮಾಡಿಕೊಂಡಿದ್ದನು. ಈತನಿಗೆ ಗೌಸಿಯಾಬೇಗಂ ಎಂಬ ಹೆಂಡತಿ ಹಾಗು ಮಹಮ್ಮದ ಅರ್ಮಾನ ಮತ್ತು ಮಹಮ್ಮದ ಜುನೇದ ಎಂಬ ಎರಡು ಜನ ಮಕ್ಕಳಿರುತ್ತಾರೆ. ಹೀಗಿದ್ದು, ನಿನ್ನೆ ದಿನಾಂಕ 21/01/2023 ರಂದು ನಮ್ಮ ಅಣ್ಣ ಬಾಬುಮಿಯಾ ಈತನು ಕಲಬುರಗಿ ನಗರದ ಹೊಟೇಲ ಕೆಲಸ ಮುಗಿಸಿಕೊಂಡು ಮರಳಿ ರಿಂಗರೋಡ ಮುಖಾಂತರವಾಗಿ ತನ್ನ ಮನೆಗೆ ಹೋಗುವ ಕುರಿತು ರಾತ್ರಿ 10:00 ಗಂಟೆ ಸುಮಾರಿಗೆ ಪೀರ ಬಂಗಾಲಿ ದರ್ಗಾದ ರಿಂಗರೋಡಿನ ಮೇಲೆ ಮಜರ ಹುಸೇನ ವಕೀಲ ಇವರ ಮನೆಯ ಹತ್ತೀರ ರಿಂಗರೋಡಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಅದೆ ವೇಳೆಗೆ ಒಂದು ಎಕ್ಟಿವಾ ಮೋಟರ ಸೈಕಲ ನಂ. ಕೆಎ 32 ಕ್ಯೂ 3145 ನೇದ್ದರ ಸವಾರನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಣ್ಣ ಬಾಬುಮಿಯಾನಿಗೆ ಡಿಕ್ಕಿ ಹೊಡೆದ ಪರಿಣಾಮ ಆತನು ರೋಡಿಗೆ ಹಾರಿ ಬಿದ್ದಿದ್ದರಿಂದ ಆತನ ಎಡ ಮತ್ತು ಬಲ ಭಾಗದ ಮೆಲಕಿನ ಹತ್ತೀರ ಭಾರಿ ಗುಪ್ತಗಾಯವಾಗಿ ಎರಡು ಕಿವಿಯಿಂದ ರಕ್ತ ಬಂದಿದ್ದು ಮತ್ತು ಎರಡು ಕೈ ಮೊಳಕೈ ಹತ್ತೀರ ಗಾಯವಾಗಿದ್ದು, ಘಟನೆಯನ್ನು ರೋಡಿನಿಂದ ಹೋಗುತ್ತಿರುವ ಸೈಯದ ಶಹಾ ಮಾರುಫ ತಂದೆ ಸೈಯದ ಶಹಾ ಹಾಶಮ ಖಾದ್ರಿ ಮತ್ತು ಶೆಹೆಬಾಜ ತಂದೆ ಮೆಹೆಮೂದ ಅಲಿ ಸಿದ್ದಕಿ ಇವರು ನೊಡಿದ್ದು, ಅಲ್ಲದೆ ಈತನಿಗೆ ಉಪಚಾರ ಕುರಿತು ಮಣ್ಣೂರ ಆಸ್ಪತ್ರೆಗೆ ಸೇರಿಕೆ ಮಾಡಿರುವ ಬಗ್ಗೆ ಹಾಗು ಅಪಘಾತ ಪಡಿಸಿದ ಮೋಟರ ಸೈಕಲ ಸವಾರನಿಗೆ ನೋಡಿದ್ದು, ಆತನು ಮೋಟರ ಸೈಕಲ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದ್ದು, ನಾನು ಮಣ್ಣೂರ ಆಸ್ಪತ್ರೆಗೆ ಬಂದು ಅಣ್ಣ ಬಾಬುಮಿಯಾನ ಪರಸ್ಧಿತಿಯನ್ನು ನೋಡಿದ್ದು, ಆತನಿಗೆ ಮೇಲಿನಂತೆ ಗಾಯಗಳಾಗಿ ಬೆಹೋಶ ಸ್ಧಿತಿಯಲ್ಲಿ ಉಪಚಾರ ಪಡೆಯುತ್ತಿರುತ್ತಾನೆ. ಮುಂದೆ ಮಣ್ಣೂರ ಆಸ್ಪತ್ರೆಯಲ್ಲಿ ಅಣ್ಣನು ಉಪಚಾರ ಪಡೆಯುತ್ತಿರುವಾಗ ಈಗ ಸಾಯಂಕಾಲ 6:10 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ. ಕಾರಣ ಈ ವಿಷಯದಲ್ಲಿ ಎಕ್ಟಿವಾ ಮೋಟರ ಸೈಕಲ ನಂ. ಕೆಎ 32 ಕ್ಯೂ 3145 ನೇದ್ದರ ಸವಾರನನ್ನು ಪತ್ತೆ ಮಾಡಿ ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ 22-01-2023 ರಂದು ಬೆಳಿಗ್ಗೆ 5-15 ಗಂಟೆಗೆ ಇ.ಎಸ.ಐ ಆಸ್ಪತ್ರೆಯ ಸಿಬ್ಬಂದಿಯವರು ರವರು ಠಾಣೆಗೆ ಪೋನ ಮಾಡಿ ಅರ್ಥಾರ ಪ್ರಮೋದಕುಮಾರ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಅರ್ಥಾರ ಪ್ರಮೋದಕುಮಾರ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 20-01-2023 ರಂದು ಸಾಯಂಕಾಲದ ಸಮಯದಲ್ಲಿ ಸೆಂಟ ಜೊಸೇಫ ಕಾಲೇಜನಲ್ಲಿ ಅಬ್ಯಾಸ ಮಾಡುವ ನನ್ನ ಮಗಳಾದ ಬ್ಲೇಸ ನಿರ್ಮಲಾ ಫ್ಲಾರೆಸ್ಟ ಇವಳಿಗೆ ಕರೆದುಕೊಂಡು ಬರುವ ಸಲುವಾಗಿ ನಾನು ಮನೆಯಿಂದ ಮೋಟಾರ ಸೈಕಲ ನಂಬರ ಕೆಎ-32/ಇಎಫ್-0726 ನೇದ್ದನ್ನು ಚಲಾಯಿಸಿಕೊಂಡು ಮನೆಯಿಂದ ಟೌನಹಾಲ, ಲಾಹೋಟಿ ಪೆಟ್ರೊಲ ಪಂಪ ಕ್ರಾಸ, ಘಂಟೋಜಿ ಸುಪರ ಬಜಾರ ಮುಖಾಂತರವಾಗಿ ಹೋಗಿ ದಾರಿ ಮದ್ಯ ಕೊರ್ಟ ರೋಡಿಗೆ ಬರುವ ಐಟಿಬಿ ಬ್ಯಾಂಕ ಹತ್ತೀರ ಹೋಗಿ ಎಡ ರೋಡಿನಿಂದ ಬಲ ರೋಡಿಗೆ ಹೋಗಬೇಕು ಅಂತಾ ರೋಡ ಪಕ್ಕದಲ್ಲಿ ನಿಂತುಕೊಂಡು ರೋಡ ಮೇಲೆ ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ಸೆಂಟ ಜೊಸೇಫ ಕಾಲೇಜ ಕಡೆಗೆ ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತೀರುವಾಗ ಮೋಟಾರ ಸೈಕಲ ನಂಬರ ಕೆಎ-32/ಇಜೆಡ್-5095 ನೇದ್ದರ ಸವಾರನು ಕೊರ್ಟ ಕ್ರಾಸ ಕಡೆಯಿಂದ ಆನಂದ ಹೊಟೇಲ ಕ್ರಾಸ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 22/01/2023 ರಂದು ಬೆಳಿಗ್ಗೆ 11:30 ಗಂಟೆಗೆ ಶ್ರೀ. ರೋಹನ ತಂದೆ ಬಾಬುರಾವ ಚವ್ಹಾಣ ಸಾಃ ಓಂ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಅರುಣಕುಮಾರ ತಂದೆ ರವಿಚವ್ಹಾಣ ಇವರು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ, ಫಿರ್ಯಾದಿ ಅರುಣಕುಮಾರ ಇವರು ದಿನಾಂಕ 19/01/2023 ರಂದು ರಾತ್ರಿ 10:30 ಕ್ಕೆ ಕಲಬುರಗಿ ಶಹಾಬಾದ ರಸ್ತೆಯಲ್ಲಿ ಬರುವ ಹೆವೆನ ದಿ ಕೆಫೆ & ರೆಸ್ಟೊ ಹೋಟಲ ಹತ್ತೀರ ಶೌಚಾಲಕಯಕ್ಕೆ ಹೋಗುವ ಕುರಿತು ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುವಾಗ ಮೋಟರ ಸೈಕಲ ನಂ. ಕೆಎ 32 ಇ.ಬಿ 9048 ನೇದ್ದರ ಚಾಲಕ ಸುರ್ಯಕಾಂತ ಉಳ್ಳಾಗಡ್ಡಿ ಈತನು ಫಿರ್ಯಾದಿ ಹಿಂದಿನಿಂದ ಹೋಗಿ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಈ ಘಟನೆಯಿಂದ ಫಿರ್ಯಾದಿಗೆ ಬಾಯಿಗೆ ಪೆಟ್ಟಾಗಿ ನಾಲ್ಕು ಹಲ್ಲುಗಳು ಮುರದಿದ್ದು ಮತ್ತು ಫಿರ್ಯಾದಿ ಚಿಕಿತ್ಸೆಯಲ್ಲಿದ್ದು ದೂರು ನೀಡಲು ತಡವಾಗಿದ್ದು ಕಾರಣ ಸದರಿ ಮೋಟರ ಸೈಕಲ ನಂ. ಕೆಎ 32 ಇ.ಬಿ 9048 ನೇದ್ದರ ಚಾಲಕ ಸುರ್ಯಕಾಂತ ಉಳ್ಳಾಗಡ್ಡಿ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 22/01/2023 ರಂದು ಸಾಯಂಕಾಲ 6:00 ಪಿ.ಎಮ್ ಕ್ಕೆ ಶ್ರೀ. ಕಾಶಿನಾಥ ತಂದೆ ಶಾಂತಪ್ಪಾ ದುಕಾಂದಾರ ವಯ: 55 ವರ್ಷ ಜಾತಿ: ಲಿಂಗಾಯತ ಉ: ಎಲ್.ಐ.ಸಿ ಎಜೆಂಟ ಮುಕ್ಕಾಂ: ಕಲಮೂಡ ತಾ: ಕಮಲಾಪೂರ ಹಾ.ವ: ದೇವಾ ನಗರ 1ನೇ ಕ್ರಾಸ್ ರಾಮ ಮಂದಿರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ್ ಮಾಡಿದ ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನಾನು ಎಲ್.ಐ.ಸಿ ಎಜೆಂಟ ಕೆಲಸ ಮಾಡಿಕೊಂಡಿರುತ್ತೆನೆ. ನನ್ನ ಹೆಸರಿನಿಂದ ಹಿರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. ಕೆಎ 32 ಯು 9889 ನೇದ್ದು ಇದ್ದು, ಇದರ ಮೇಲೆ ಹೋಗಿ ಬರುತ್ತಿರುತ್ತೆನೆ. ದಿನಾಂಕ 12/10/2022 ರಂದು ನನ್ನ ಎಲ್.ಐ.ಸಿಯ ಕೆಲಸದ ನಿಮಿತ್ಯ ಕಲಬುರಗಿಯಿಂದ ನಮ್ಮೂರಾದ ಕಲಮೂಡಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಇದೆ ಮೋಟರ ಸೈಕಲದ ಮೇಲೆ ರಾತ್ರಿ 7:30 ಗಂಟೆ ಸುಮಾರಿಗೆ ಕಲಬುರಗಿ ಕಡೆಗೆ ಬರುವಾಗ ಸ್ವಾಮಿಸಮರ್ಥ ಆಶ್ರಮದ ಮುಂದೆ ಸಣ್ಣ ಬ್ರಿಡ್ಜ ದಾಟಿ ಬರುತ್ತಿರುವಾಗ ಕಲಬುರಗಿ ರೋಡಿನ ಕಡೆಯಿಂದ ಒಂದು ಮೋಟರ ಸೈಕಲ ನಂ. ಕೆಎ 05 ಜೆ.ವಾಯಿ 6664 ನೇದ್ದರ ಸವಾರನು ವೇಗವಾಗಿ ಮತ್ತು ನಿರ್ಲಕ್ಷತನದಿಂದ ನನ್ನ ರೋಡಿನ ಕಡೆಯಿಂದ ಬಂದು ನನಗೆ ಅಪಘಾತ ಪಡಿಸಿದ್ದರಿಂದ ನನ್ನ ಎಡಗಡೆ ಮೆಲಕಿನ ಭಾಗಕ್ಕೆ ಹಾಗು ಕಣ್ಣಿನ ಭಾಗಕ್ಕೆ ಮತ್ತು ಹಲ್ಲಿನ ಭಾಗಕ್ಕೆ ಮತ್ತು ಭುಜದ ಭಾಗಕ್ಕೆ ಭಾರಿ ಪ್ರಮಾಣದ ಗಾಯವಾಗಿ ಬಿದ್ದಾಗ ರೋಡಿನಿಂದ ಹೋಗುತ್ತಿರುವ ನಮ್ಮ ಪರಿಚಯದ ಮಾಣೀಕ ತಂದೆ ಕಲ್ಯಾಣರಾವ ಪಾಟೀಲ, ಉಮೇಶ ರೆಡ್ಡಿ ತಂದೆ ಮಾಣೀಕರೆಡ್ಡಿ ಇವರು ನೋಡಿ ನನಗೆ ಸಹಾಯ ಮಾಡಿದ್ದು, ಅಪಘಾತ ಪಡಿಸಿದ ಸವಾರನು ಮೋಟರ ಸೈಕಲದೊಂದಿಗೆ ಓಡಿ ಹೋಗಿರುತ್ತಾನೆ. ಮುಂದೆ ನಾನು ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ಮುಂದೆ ನನಗೆ ಒಂದು ವಾರದ ವರೆಗೆ ಪ್ರಜ್ಞೆ ಇರಲಿಲ್ಲಾ. ದಿನಾಂಕ 25/10/2022 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ಖಾಸಗಿ ಉಪಚಾರ ಪಡೆದುಕೊಂಡಿದ್ದು, ಈಗ ಕೇಸು ಮಾಡುವ ಬಗ್ಗೆ ಮನೆಯಲ್ಲಿ ನನ್ನ ಹೆಂಡತಿ ಶ್ರೀದೇವಿ, ಮಗ ಪವನಕುಮಾರ ಇವರಿಗೆ ವಿಚಾರ ಮಾಡಿ ತಡಮಾಡಿ ಈ ಫಿರ್ಯಾದಿಯನ್ನು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 22/01/2023 ರಂದು ರಾತ್ರಿ 8.15 ಗಂಟೆಗೆ ಶ್ರೀ. ದೇವೇಂದ್ರ ತಂದೆ ಅಣ್ಣಪ್ಪಾ ಸಿಂಧೆ ಸಾ: ಉಪಳಾಂವ ಹಾ:ವ: ತಿಲಕನಗರ ಕುಸನೂರ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಅರುಣಕುಮಾರ ತಂದೆ ರವಿಚವ್ಹಾಣ ಇವರು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ, ದಿನಾಂಕ 31/12/2022 ರಂದು ಸಾಯಂಕಾಲ ನಮ್ಮ ಮನೆಯಿಂದ ಉಪಳಾಂವ ಕ್ರಾಸ ಹತ್ತೀರ ಇರುವ ಕಡಬೂರ ಕನ್ನಡಗಿ ಪುನರ್ವಸತಿ ಕೆಂದ್ರ ದಲ್ಲಿ ಇರುವ ನಮ್ಮ ಮನೆಗೆ ರಸ್ತೆಬದಿಯಿಂದ ನಡೆದುಕೊಂಡು ಹೋಗುವಾಗ ಉಪಳಾಂವ ಕ್ರಾಸ ದಾಟಿ ಸ್ವಲ್ಪ ಮುಂದೆ ಸಂಜೆ 7-00 ಗಂಟೆ ಸುಮಾರಿಗೆ ಒಂದು ಮೋಟರ ಸೈಕಲ್  ಸವಾರನು ತಾವರಗೇರಾ ಕ್ರಾಸ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ  ಮೋಟರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನಗೆ ಎದುರುಗಡೆಯಿಂದ ಡಿಕ್ಕಿಪಡಿಸಿದನು. ಆಗ ನಾನು ಪುಟಿದು ರಸ್ತೆಯಮೇಲೆ ಬಿದ್ದೇನು. ಅದನ್ನು ನೋಡಿದ ಗುಂಡುರಾವ ಮೂಲಗೆ ಹಾಗೂ ರಾಮಣ್ಣಾ ಬಿರಾದಾರ ಮತ್ತು ಭರತ ಮಾಳಗೆ ಎಂಬುವರು ಬಂದು ನನಗೆ ಎಬ್ಬಿಸಿ ರಸ್ತೇಯ ಬದಿಯಲ್ಲಿ ಕೂಡಿಸಿ ನೋಡಲು ಸದರ ಘಟನೆಯಿಂದ ನನ್ನ ಎಡಗಾಲಿನ ಕಪಗಂಡ ಹತ್ತೀರ ಭಾರಿ ರಕ್ತಗಾಯ ವಾಗಿ ಶಸ್ತ್ರಚಿಕಿತ್ಸೆ ಆಗಿದ್ದು. ಮತ್ತು ಅಲ್ಲಲ್ಲಿಗುಪ್ತಗಾಯ ವಾಗಿದ್ದು. ನನಗೆ ಡಿಕ್ಕಿಪಡಿಸಿದ ಮೋಟರ ಸೈಕಲ ನಂಬರ ನೋಡಲು ಕೆಎ-32 ಎಲ್-7320 ನೇದ್ದು ಅದರ ಸವಾರನಿಗೆ ನೋಡಲು ಆತನ ಹೆಸರು ಮಹಮ್ಮದ ಮೋಹಿಯೋದ್ದಿನ್ ಶಹೇಬಾಜ ಅಂತಾ ಗೊತ್ತಾಗಿದ್ದು. ಗುಂಡುರಾವ ಮೂಲಗೆ ಹಾಗೂ ರಾಮಣ್ಣಾ ಬಿರಾದಾರ ಸೇರಿ ಒಂದು ಅಂಬುಲೆನ್ಸ್ ನಲ್ಲಿ ಹಾಕಿ ನನಗೆ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಕಳುಹಿಸಿದ್ದು. ನಾನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ  ಶಸ್ತ್ರಚಿಕಿತ್ಸೆ ಆಗಿದ್ದು. ನಾನು ನನ್ನ ಚಿಕಿತ್ಸೆ ಹಾಗೂ ಬೆಡರೆಸ್ಟ್ ನಲ್ಲಿ ಇದ್ದ ಕಾರಣ ಇಂದು ನನಗೆ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.ಕಾರಣ ಸದರಿ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟರ ಸೈಕಲ್ ನಂ. ಕೆಎ-32 ಎಲ್-7320 ನೇದ್ದರ ಸವಾರ ಮಹಮ್ಮದ ಮೋಹಿಯೋದ್ದಿನ್ ಶಹೇಬಾಜ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ ಠಾಣೆ :- ದಿನಾಂಕ:22-01-2023 ರಂದು ಸಾಯಂಕಾಲ ೬:೧೫ಕ್ಕೆ ಫಿರ್ಯಾದಿದಾರರಾದ ಶ್ರೀ ಶಿವಕುಮಾರ್ ತಂದೆ ಬಾಬುರಾವ್ ಕೋರಳ್ಳಿ ವಯ:೪೮ವರ್ಷ ಜಾ:ಹೊಲೇಯ ಉ:ಸಮಾಜ ಸೇವೆ ಸಾ//ಮನೆ ನಂ೨/೯೩ ಬಸವೇಶ್ವರ ದೇವಸ್ಥಾನದ ಹಿಂಬಾಗ ಅಂಬೇಡ್ಕರನಗರ ಉದನೂರ ಗ್ರಾಮ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟರ್ ಸೈಕಲ್ ನಂ: KA-32-EL-7370 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:27-10-2022 ರಂದು ಮದ್ಯಾಹ್ನ ೧೨:೦೦ ಗಂಟೆಗೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ ತುರ್ತು ಘಟಕದ ಮುಂದುಗಡೆ ನಿಲ್ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಬಂಧಿಕರನ್ನು ಮಾತನಾಡಿಸಿಕೊಂಡು ಮರಳಿ ಅದೆ ಮದ್ಯಾಹ್ನ ೧:೩೦ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿ ಸಿಗದ ಕಾರಣ ಮತ್ತು ನಮ್ಮ ಮನೆಯಲ್ಲಿ ಕೆಲಸವಿದ್ದ ಕಾರಣ ಠಾಣೆಗೆ ಬಂದು ಫಿರ್ಯಾದಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ.ನಗರ ಪೊಲೀಸ ಠಾಣೆ :-  ದಿನಾಂಕ:- 22-01-2023 ರಂದು ೦೬.೦೦ ಪಿ.ಎಮ್ ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ಸಿದ್ದಣ್ಣ ಸಿಪಿಸಿ ೨೮೦ ಎಂ.ಬಿ ನಗರ ಪೊಲೀಸ ಠಾಣೆ ಕಲಬುರಗಿ ನಗರ ಇವರು ಮಾನ್ಯ ನ್ಯಾಯಾಲಯದ ಖಾಸಗಿ ದೂರು ಅರ್ಜಿ ನಂ. ೪೪೧೧/೨೦೨೨ ನೆದ್ದು ಮುಂದಿನ ಕ್ರಮಕ್ಕಾಗಿ ತಂದು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ, ಶ್ರೀ ಸಲೀಂ ಪಾಶಾ ತಮಬೋಲಿ ತಂದೆ ಮಹೆಬೂಬ ಸಾಬ ಸಾ: ನೀಲೂರ ತಾ: ಅಫಜಲ್ ಪೂರ ಜಿ: ಕಲಬುರಗಿ ಇವರ ಮೂರು ಚಕ್ರ ವಾಹನ ಕೆ.ಎ ೩೨ ಎ ೭೯೦೫ ಇದರ ನೋಂದಣಿ ಮಾಡಿಸಲು ಆರ್‌ಟಿಓ ಕಾರ್ಯಾಲಯದಲ್ಲಿ ನಮೂದು ಮಾಡಿದ ಆರೋಪಿತರು ವಂಚನೆ ಮಾಡಿರುವ ಬಗ್ಗೆ ಇತ್ಯಾದಿ ಪಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-21-01-2023  ರಂದು ಸದರಿ ಫಿರ್ಯಾದಿದಾರರಿಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಹಾಲಿನ ಪುಡಿ ಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾರೆಂದು ಬಾತ್ಮಿ ಬಂದ ಮೇರೆಗೆ ಉಪ್ಳಾವ್ ಕ್ರಾಸ್ ಬಳಿಯಲ್ಲಿ ನಿಂತು ಗಮನಿಸಿ ಖಚಿತ ಪಡಿಸಿಕೊಂಡು ದಾಳಿ ಮಾಡಲಾಗಿ ಸದರಿ ಆರೋಪಿತ, ಮತ್ತು ಮುದ್ದೆ ಅ.ಕಿ.೨೬,೧೦೦೦ ಮಾಲನ್ನು ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ ಠಾಣೆ :- ನಾನು ಎ.ವಾಜೀದ ಪಟೇಲ, ಪಿ.ಐ., ಸಿ.ಸಿ.ಬಿ. ಘಟಕ, ಕಲಬುರಗಿ ನಗರ ಸರ್ಕಾರಿ ತರ್ಫೆ ದೂರು ಸಲ್ಲಿಸುವುದೇನೆಂದರೆ, ಇಂದು ದಿನಾಂಕ:22-01-2023 ರಂದು ನಾನು ಮತ್ತು ಬಸವರಾಜ ಪಿ.ಎಸ್.ಐ. ರವರು ಸರ್ಕಾರಿ ಜೀಪ ನಂ.ಕೆಎ-32-ಜಿ-1249 ನೇದ್ದರಲ್ಲಿ ಹಾಗೂ ಸಿಬ್ಬಂದಿಯವರಾದ 1) ಕೇಸುರಾಯ ಹೆಚ್.ಸಿ-223, 2) ಸುನೀಲಕುಮಾರ ಹೆಚ್.ಸಿ-167, 3) ಅಂಬಾಜಿ ಸಿಪಿಸಿ-131, 4) ಅರವಿಂದ ಸಿಪಿಸಿ-955, 5) ವಿಶ್ವನಾಥ ಸಿಪಿಸಿ-686, 6) ನಾಗರಾಜ ಸಿಪಿಸಿ-1257 ಎಲ್ಲರೂ ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ವಿಶೇಷ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಅಂದಾಜು 8-00 ಗಂಟೆ ಸುಮಾರಿಗೆ ಹುಮನಾಬಾದ ಗಂಜ ಬಸಸ್ಟ್ಯಾಂಡ ರೋಡಿನಲ್ಲಿರುವ ದರ್ಬಾರ ಹೊಟೇಲ ಹತ್ತಿರ ಪೆಟ್ರೋಲಿಂಗನಲ್ಲಿದ್ದಾಗ ಎರಡು ಮೋಟಾರಸೈಕಲಗಳ ಮೇಲೆ 3 ಜನರು ನಿಂತು ಮಾತನಾಡು ತ್ತಿದ್ದವರು ದೂರದಿಂದಲೇ ನಮ್ಮ ಪೊಲೀಸ್ ವಾಹನ ಬರುವುದನ್ನು ನೋಡಿ ಆ ಮೂವರು ಜನರು ತಮ್ಮ ಎರಡು ಮೋಟಾರಸೈಕಲಗಳ ಮೇಲೆ ವೇಗವಾಗಿ ಹೋಗುತ್ತಿರುವುದನ್ನು ಕಂಡು ನಾವು ಸಂಶಯ ಬಂದು ಸದರಿ ವಾಹನಗಳನ್ನು ಬೆನ್ನು ಹತ್ತಿ ಸರ್ಕಾರಿ ಹಾಲಿನ ಡೈರಿನ ವಿರುದ್ದದ ರೋಡಿನಲ್ಲಿ ಹೋಗಿ ಸಲಸಾರ ಕಲ್ಯಾಣ ಮಂಟಪದ ಹತ್ತಿರ ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಅವರನ್ನು ಹಿಡಿದು ವಿಚಾರಿಸಲಾಗಿ ತಮ್ಮ ಹೆಸರು ವಿಳಾಸ ಸರಿಯಾಗಿ ಹೇಳದೇ ತಡವಡಿಸುತ್ತಿರುವುದನ್ನು ಕಂಡು ನಾವು ಕೂಲಂಕುಷವಾಗಿ ವಿಚಾರಿಸಲು ವಾಹನಗಳಿಗೆ ಸಂಬಂಧಿಸಿದ ದಾಖಲಾತಿಗಳು ಕೊಡುವಂತೆ ಕೇಳಿದಾಗ  ಅವರುಗಳು ತಮ್ಮ ಹತ್ತಿರ ಯಾವುದೇ ದಾಖಲೆಗಳು ಇರುವುದಿಲ್ಲಾ ಅಂತಾ ತಿಳಿಸಿದರು. ಅವರುಗಳಿಗೆ  ವಾಹನಗಳು ಎಲ್ಲಿಂದ ತಂದಿರುವಿರಿ ಯಾರದು ಅಂತಾ ವಿಚಾರಿಸಲೂ ಅವರುಗಳು ಯಾವುದೇ ಸಮಪರ್ಕವಾದ  ಉತ್ತರ ಕೊಡಲಿಲ್ಲಾ. ಅವರುಗಳಿಗೆ ಮೇಲಿಂದ ಮೇಲೆ ಪ್ರಶ್ನೆ ಮಾಡಿದಾಗ ಸದರಿಯವರು ಯಾವುದೇ ಸಮಪರ್ಕವಾದ ಮತ್ತು ಸರಿಯಾದ ಮಾಹಿತಿ ಕೊಡದೇ ಇರುವುದರಿಂದ ಸದರಿಯವರು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದಿರುತ್ತಾರೆಂದು ಬಲವಾದ ಸಂಶಯ ಬಂದು , ಅವರುಗಳ ಹೆಸರು ವಿಳಾಸ ವಿಚಾರಿಸಲೂ ಅವರಲ್ಲಿ ಒಬ್ಬನು ತನ್ನ ಹೆಸರು 1) ಶೇಖಟಿಪ್ಪು ತಂದೆ ಮೌಲಾಶೇಖ, ವ:20 ವರ್ಷ, ಜಾತಿ:ಮುಸ್ಲಿಂ, ಉ:ಫರ್ನಿಚರ್ ಕೆಲಸ, ಸಾ:ಹಾಗರಗಾ ಕ್ರಾಸ್, ಅಲ್-ಅತೀಖ ಪಂಕ್ಷನ ಹಾಲ ಹಿಂದುಗಡೆ ಕಲಬುರಗಿ, ಎರಡನೆಯವನು 2) ಅಜಗರಖಾನ ತಂದೆ ಅನ್ವರಖಾನ, ವ:20 ವರ್ಷ, ಜಾತಿ:ಮುಸ್ಲಿಂ, ಉ:ಖಾಸಗಿ ಕೆಲಸ, ಸಾ:ಖಮರ ಕಾಲೋನಿ, ಎ.ಎಸ್.ಎಂ. ಹಾಸ್ಪಿಟಲ್ ಹತ್ತಿರ ಕಲಬುರಗಿ, ಮೂರನೆಯವನು  3) ಶೇಖ ಅಮನ ತಂದೆ ಶೇಖ ಇನಾಯತ, ವ:19 ವರ್ಷ, ಜಾತಿ:ಮುಸ್ಲಿಂ, ಉ:ಗ್ಯಾರೇಜ ಕೆಲಸ, ಸಾ:ಬುಲಂದ ಪರವೇಜ ಕಾಲೋನಿ ಇಂಡಿಯನ್ ಸ್ಕೂಲ್ ಹತ್ತಿರ ಕಲಬುರಗಿ ಅಂತಾ ತಿಳಿಸಿದರು.  ನಂತರ ಸಿಬ್ಬಂದಿಯವರ ಸಹಾಯದೊಂದಿಗೆ ಪಂಚ ಜನರಾದ  1) ಶ್ರೀ ಮಹಾಂತೇಶ ತಂದೆ ಶಿವನಾಗಯ್ಯ ಕಡಬೂರ, ವ:26 ವರ್ಷ, ಜಾತಿ:ಜಂಗಮ, ಉ:ಅಟೋ ಚಾಲಕ, ಸಾ:ಸೈಯದ ಚಿಂಚೋಳಿ ಕ್ರಾಸ್ ಕಲಬುರಗಿ ಮೊ.ನಂ.776059104,  2) ಶ್ರೀ ಉಮಾಕಾಂತ ತಂದೆ ದತ್ತು ಜಮಾದಾರ, ವ:27 ವರ್ಷ, ಜಾತಿ:ಕಬ್ಬಲಿಗ, ಉ:ಕಿರಾಣಿ ಅಂಗಡಿ ವ್ಯಾಪಾರ, ಸಾ:ಶೇಖ ರೋಜಾ ಆಶ್ರಯ ಕಾಲೋನಿ, ಕಲಬುರಗಿ ಮೊ.ನಂ.9980203439 ರವರನ್ನು ಸ್ಥಳಕ್ಕೆ 9-00 ಬೆಳಿಗ್ಗೆ ಗಂಟೆಗೆ ಬರಮಾಡಿಸಿಕೊಂಡು ನಮ್ಮ ಹತ್ತಿರ ಇದ್ದ ವ್ಯಕ್ತಿಗಳನ್ನು ವಿಚಾರಿಸಿ ಇವರು ಹೇಳುವುದನ್ನು ಕೇಳಿ ಮತ್ತು ತೋರಿಸಿ ಹಾಜರಪಡಿಸಿರುವುದನ್ನು ನೋಡಿ ಜಪ್ತಿ ಪಂಚನಾಮೆ ಬರೆಯಿಸಿಕೊಡುವಂತೆ ಕೋರಿಕೊಂಡಾಗ ಪಂಚರು ಒಪ್ಪಿಕೊಂಡು ನಮ್ಮ ವಶದಲ್ಲಿದ್ದ ಆರೋಪಿತರನ್ನು ಒಬ್ಬೊಬ್ಬರನ್ನಾಗಿ ವಿಚಾರಿಸಲು ಮೊದಲು  

1) ಶೇಖಟಿಪ್ಪು ತಂದೆ ಮೌಲಾಶೇಖ, ವ:20 ವರ್ಷ, ಜಾತಿ:ಮುಸ್ಲಿಂ, ಉ:ಫರ್ನಿಚರ್ ಕೆಲಸ, ಸಾ:ಹಾಗರಗಾ ಕ್ರಾಸ್, ಅಲ್-ಅತೀಖ ಪಂಕ್ಷನ ಹಾಲ ಹಿಂದುಗಡೆ ಕಲಬುರಗಿ ಇತನ ವಶದಲ್ಲಿದ್ದ  ಹಿರೋಹೊಂಡಾ ಸ್ಪ್ಲೈಂಡರ್ ಪ್ಲಸ್ ಸೀಲ್ವರ ಕಲರದ್ದು ಇದ್ದು ಸದರಿ ಮೋಟಾರಸೈಕಲ್ ನಂ.ಕೆಎ-32-ಡಿಡಬ್ಲು-0096 ಅಂತಾ ಇದ್ದು, ಅದರ ಚೆಸ್ಸಿ ನಂಬರ MBLHA10CGGHC40416, ಇಂಜಿನ್ ನಂ.HA10ERGHC42123 ಅಂತಾ ಇದ್ದು, ಅದರ ಅ.ಕಿ. ರೂ.25,000/- ಇರುತ್ತದೆ.  ಸದರ ವಾಹನದಲ್ಲಿ ಒಂದು ಚಾಕು ಮುಚ್ಚಿಟ್ಟಿದ್ದು,  ಸದರಿ ಚಾಕು ನೋಡಲಾಗಿ ಅದು ಕೆಂಪು ಬಣ್ಣದ ಹಿಡಿಕೆಯುಳ್ಳದು ಸ್ಟೀಲ್ ನಮೂನೆಯದ್ದು ಇದ್ದು, ಸುಮಾರು 6 ಇಂಚ್ ಉದ್ದ ಇದ್ದಿದ್ದು ಅ.ಕಿ. ರೂ.00/- ಇರುತ್ತದೆ. ತದನಂತರ  ಅವನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಮೂರು ಮೋಬಾಯಿಲ ಪೋನಗಳು ದೊರೆತಿದ್ದು, ಅವುಗಳು ಪರಿಶೀಲಿಸಿ ನೋಡಲಾಗಿ 1) ಒಂದು ಎಂ.ಐ. ಕಂಪನಿಯ ಗ್ರೇ ಬಣ್ಣದ ಮೊಬೈಲ್ ಇದ್ದು,ಅದರ ಐ.ಎಂ.ಇ.ಐ. ನಂಬರ ಪರಿಶೀಲಿಸಿ ನೋಡಲಾಗಿ 862384053132192/00, 862384053132200/00 ಅಂತಾ ಇದ್ದು, ಅದರ ಅ.ಕಿ. ರೂ.10,000/- ಇದ್ದು, 2) ಒಂದು ವಿಮೋ ಕಂಪನಿಯ ಕಂದು ನೀಲಿ ಬಣ್ಣದ ಮೊಬೈಲ್ ಇದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಲಿಸಿ ನೋಡಲಾಗಿ 867547052272798, 867547052272780 ಅಂತಾ ಇದ್ದು, ಅದರ ಅ.ಕಿ. ರೂ.5,000/- ಇದ್ದು, ಮತ್ತು 3) ಒಂದು ರೆಡಮಿ ಕಂಪನಿಯ ಸ್ಕೈಬ್ಲೂ ಬಣ್ಣದ ಮೊಬೈಲ್ ಇದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಲಿಸಿ ನೋಡಲಾಗಿ 869770049488610, 869770049488628 ಅಂತಾ ಇದ್ದು, ಅದರ ಅ.ಕಿ. ರೂ.3,000/- ಇರುತ್ತದೆ. ಮತ್ತು ಶೇಖಟಿಪ್ಪು ತಂದೆ ಮೌಲಾಶೇಖ ಇತನಿಗೆ ಮೋಬಾಯಿಲಗಳು ಬಗ್ಗೆ ವಿಚಾರಿಸಿದಾಗ ಅವನು ಯಾವುದೇ ಸಮಪರ್ಕವಾದ  ಉತ್ತರ ಕೊಡಲಿಲ್ಲಾ. ತದನಂತರ 2) ಅಜಗರಖಾನ ತಂದೆ ಅನ್ವರಖಾನ, ವ:20 ವರ್ಷ, ಜಾತಿ:ಮುಸ್ಲಿಂ, ಉ:ಖಾಸಗಿ ಕೆಲಸ, ಸಾ:ಖಮರ ಕಾಲೋನಿ, ಎ.ಎಸ್.ಎಂ. ಹಾಸ್ಪಿಟಲ್ ಹತ್ತಿರ ಕಲಬುರಗಿ ಅವನ ವಶದಲ್ಲಿದ್ದ  ಹಿರೋಹೊಂಡಾ ಸ್ಪ್ಲೈಂಡರ್ ಪ್ಲಸ್ ಬ್ಲ್ಯಾಕ್ ಕಲರದ್ದು ಇದ್ದು ಸದರಿ ಮೋಟಾರಸೈಕಲ್ ನಂ.ಕೆಎ-32-ಡಬ್ಲು-0096 ಅಂತಾ ಇದ್ದು, ಚೆಸ್ಸಿ ನಂಬರ ಸ್ವಲ್ಪ ತರಚಿದ್ದು ಮೇಲ್ನೋಟಕ್ಕೆ ಕಂಡು ಬಂದಂತೆ 98A19F07788 ಇದ್ದು, ಇಂಜಿನ್ ನಂಬರ ಸ್ವಲ್ಪ ತರಚಿದ್ದು ಮೇಲ್ನೋಟಕ್ಕೆ ಕಂಡು ಬಂದಂತೆ 98A17E08023 ಅಂತಾ ಇದ್ದು, ಅದರ ಅ.ಕಿ. ರೂ.20,000/- ಇರುತ್ತದೆ.  ತದನಂತರ  ಅವನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮೋಬಾಯಿಲ್ ದೊರೆತಿದಿದ್ದು ಪರಿಶೀಲಿಸಿ ನೋಡಲಾಗಿ ರಿಯಲಮೀ ಕಂಪನಿಯ ಸ್ಕೈಬ್ಲೂ ಬಣ್ಣದ ಮೊಬೈಲ್ ಇದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಲಿಸಿ ನೋಡಲಾಗಿ 863342057846935/13, 863342057846927/13 ಅಂತಾ ಇದ್ದು, ಅದರ ಅ.ಕಿ. ರೂ.3,000/- ಇರುತ್ತದೆ.  ಮತ್ತು ಅಜಗರಖಾನ ತಂದೆ ಅನ್ವರಖಾನ, ಇತನಿಗೆ ಮೋಬಾಯಿಲ್  ಬಗ್ಗೆ ವಿಚಾರಿಸಿದಾಗ ಅವನು ಯಾವುದೇ ಸಮಪರ್ಕವಾದ  ಉತ್ತರ ಕೊಡಲಿಲ್ಲಾ. ತದನಂತರ 3) ಶೇಖ ಅಮನ ತಂದೆ ಶೇಖ ಇನಾಯತ, ವ:19 ವರ್ಷ, ಜಾತಿ:ಮುಸ್ಲಿಂ, ಉ:ಗ್ಯಾರೇಜ ಕೆಲಸ, ಸಾ:ಬುಲಂದ ಪರವೇಜ ಕಾಲೋನಿ ಇಂಡಿಯನ್ ಸ್ಕೂಲ್ ಹತ್ತಿರ ಕಲಬುರಗಿ ಅಂತಾ ಹೇಳಿ ತಾನು  ಶೇಖಟಿಪ್ಪು ತಂದೆ ಮೌಲಾಶೇಖ ಈತನು ನಡೆಸುತ್ತಿದ್ದ ಮೋಟಾರಸೈಕಲ್ ಹಿಂದುಗಡೆ ಕುಳಿತು ಬಂದಿದ್ದಾಗಿ ಹೇಳಿದನು ಅವನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಒಪ್ಪೋ ಕಂಪನಿಯ ಮೊಬೈಲ ಹಾಜರಪಡಿಸಿದ್ದು,  ಪರಿಶೀಲಿಸಲಾಗಿ ಒಪ್ಪೋ ಕಂಪನಿಯ ಹಸಿರು ಕಪ್ಪು ಮಿಶ್ರಿತ ಬಣ್ಣದ ಮೊಬೈಲ್ ಇದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಲಿಸಿ ನೋಡಲಾಗಿ 861458043455797, 861458043455789 ಅಂತಾ ಇದ್ದು, ಅದರ ಅ.ಕಿ. ರೂ.5,000/- ಇರುತ್ತದೆ. ನಂತರ ಶೇಖಟಿಪ್ಪು ತಂದೆ ಮೌಲಾಶೇಖ, ಅಜಗರಖಾನ ತಂದೆ ಅನ್ವರಖಾನ, ಶೇಖ ಅಮನ ತಂದೆ ಶೇಖ ಇನಾಯತ ಮೂರು ಜನರು ಕೂಡಿಕೊಂಡು ಇನ್ನೂ 03 ಮೋಬಾಯಿಲಗಳು ಕಳ್ಳತನ ಮಾಡಿದವುಗಳನ್ನು ನಮ್ಮ  ಗೆಳೆಯನಾದ ಉಮರ ಸಾ:ಮಿಜಗಿರಿ ಮೋ.ನಂ. 9980127403 ಇತನಿಗೆ ಮಾರಾಟ ಮಾಡಿರುವುದಾಗಿ ಕೂಡಾ ತಿಳಿಸಿದರು. ನಂತರ ಚೌಕ ಪೊಲೀಸ ಠಾಣೆಗೆ ಬಂದು ನನ್ನ ವರದಿಯನ್ನು ತಯಾರಿಸಿ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಕೈಕೊಂಡಿದ್ದು, ಪಂಚನಾಮೆ ಜಪ್ತು ಮಾಡಿಕೊಂಡ ಮೇಲ್ಕಂಡ ಮುದ್ದೇಮಾಲುಗಳನ್ನು ಮತ್ತು ಮೇಲ್ಕಾಣಿಸಿದ 3 ಜನ ಆರೋಪಿತರನ್ನು ಹಾಜರಪಡಿಸಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರತ್ತೇನೆಂದು ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

ಇತ್ತೀಚಿನ ನವೀಕರಣ​ : 23-01-2023 04:06 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080