Feedback / Suggestions

ಸಬ್‌-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ 21/12/2022 ರಂದು ಫಿರ್ಯಾಧಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾಧಿಯೇನೆಂದರೆ ಫಿರ್ಯಾಧಿಯು ಎ.ಪಿ.ಎಮ್.ಸಿ ಯಾರ್ಡ ಸುಲ್ತನಪುರ ಹತ್ತಿರ ಮನೆಯನ್ನು ಹೊಂದಿದ್ದು ದಿನಾಂಕಃ-೨೦/೧೨/೨೦೨೨ ಬೆಳಗ್ಗೆ ೧೧.೦೦ ಗಂಟೆಗೆ ಮನೆಯಿಂದ ಹೊರಗಡೆ ಹೋಗಿದ್ದು ಮರಳಿ ಮನೆಗೆ ೧೨.೩೦ ಗಂಟೆಗೆ ಬಂದು ನೋಡಲು ಮನೆಯ ಬಾಗಿಲು ಮುರಿದಿದ್ದು ಮನೆಯಲ್ಲಿನ ಬಂಗಾರದ ಮತ್ತು ನಗದು ಹಣ ಸೇರಿ ಒಟ್ಟು ಸುಮಾರು  339000/- ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ಫಿರ್ಯಾಧಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆ :- ದಿನಾಂಕ: 21/12/2022 ರಂದು ಸಾಯಂಕಾಲ 7 ಗಂಟೆಗೆ ಶ್ರೀ ಗುರುಬಸಪ್ಪಾ ತಂದೆ ಶರಣಪ್ಪಾ ರೋಳೆ ವಯ|| 80 ವರ್ಷ ಜಾ|| ಲಿಂಗಾಯತ ಉ|| ನಿವೃತ್ತ ನೌಕರರು ಸಾ|| ಬೊಧನವಾಡಿ ತಾ|| ಆಳಂದ ಜಿ|| ಕಲಬುರಗಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಐಸಿಐಸಿಐ ಖುಬಾ ಲೇಔಟ ಶಾಖೆಯಲ್ಲಿ ನನ್ನ ಹೊಲದ ಮೇಲೆ 2017 ರಲ್ಲಿ 5,00,000/- ರೂಪಾಯಿ ಹಣ ಸಾಲವನ್ನು ಪಡೆದಿದ್ದೆ. ಈ ಹಣವನ್ನು ದಿನಾಂಕ:26/10/2021 ರವರೆಗೂ ಸಾಲದಲ್ಲಿ ಕೇವಲ 22,228/- ರೂ. ಮಾತ್ರ ಬಾಕಿ ಉಳಿದಿತ್ತು. ಸದರಿ ಬಾಕಿ ಮೊತ್ತವನ್ನು ಪಾವತಿ ಮಾಡಲು ಬಂದಾಗ ನನ್ನ ಪಾಸಬುಕ್ ಎಂಟ್ರಿ ಮಾಡಲು ಕೊಟ್ಟಾಗ ದಿನಾಂಕ: 06/11/2021 ರಂದು ಚೆಕ್ ನಂ.1777 ದಿಂದ 4,00,000/- ರೂಪಾಯಿಗಳು ನನ್ನ ಬ್ಯಾಂಕ್ ಖಾತೆಯಿಂದ ತೆಗೆದುಕೊಂಡಿದ್ದಾರೆ ಎಂದು ಶಾಖಾಧಿಕಾರಿ ಹೇಳಿದ್ದಲ್ಲದೇ ಪಾಸಬುಕ್ ಎಂಟ್ರಿ ಮಾಡಿಕೊಟ್ಟರು. ನಾನು ಬ್ಯಾಂಕಿನಿಂದ ಮೇಲಿನ ನಂಬರಿನ ಚೆಕ್‌ ಬುಕ್ಕನ್ನು ಪಡೆದಿರುವುದಿಲ್ಲಾ ನಾನು ಹಣವನ್ನು ತೆಗೆದುಕೊಂಡಿರುವುದಿಲ್ಲಾ ಚೆಕ್ನ ಮೇಲೆ ಸುಳ್ಳು ಸಹಿ ಮಾಡಿ ಹಣ ತೆಗೆದುಕೊಂಡಿದ್ದಾರೆ. ನಾನು ಬ್ಯಾಂಕಿಗೆ ಬಂದೆ ಇಲ್ಲಾ, ಹಣವು ಪಡೆದಿಲ್ಲಾ ಶಾಖಾಧಿಕಾರಿಯು ಹಣ (ಸಾಲ) ಕಟ್ಟಬೇಕೆಂದು ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಮೋಸದಿಂದ ಹಣ ಯಾರು ಡ್ರಾ ಮಾಡಿಕೊಂಡಿದ್ದಾರೆ ಎಂದು  ಫಿರ್ಯಾಧೀ ನೀಡಿದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ: 21/12/2022 ರಂದು ಮದ್ಯಾಹ್ನ 2-15 ಗಂಟೆಗೆ ಶ್ರೀ ಅಮರೇಶ ತಂದೆ ಬಸವರಾಜ ಬಡಗೇರ ಸಾ: ಆಲಮೇಲ ಇವರು ಠಾಣೆಗೆ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ 20/12/2022 ರಂದು ರಾತ್ರಿ ಸಮಯದಲ್ಲಿ ನಾನು ಮತ್ತು ಆಲಮೇಲ ಪಟ್ಟಣದ ದೇವರಾಜ ತಂದೆ ರಜಾಕ ಕಲಕುಟಗೇರ  ಇಬ್ಬರೂ ಕೂಡಿಕೊಂಡು ಆಡತ ವ್ಯಾಪಾರಿಯಾದ ಗುರುರಾಜ ತಂದೆ ಗೌರಿಶಂಕರ ನಾಸಿ ಇವರಿಗೆ ಕಲಬುರಗಿ ರೈಲ್ವೆ ಸ್ಟೇಷನಕ್ಕೆ ಬಿಡುವ ಸಂಬಂದ ನಾನು ಚಲಾಯಿಸುತ್ತೀರುವ ಕಾರ ನಂಬರ್‌ ಕೆಎ-07/ಎ-6781 ನೇದ್ದರಲ್ಲಿ ಕೂಡಿಸಿಕೊಂಡು ಆಲಮೇಲ ಪಟ್ಟಣ್ಣದಿಂದ ಅಫಜಲಪೂರ ಮುಖಾಂತರವಾಗಿ ಕಲಬುರಗಿ ಕಡೆಗೆ ಬರುತ್ತೀರುವಾಗ ರಾಷ್ಟ್ರೀಯ ಹೆದ್ದಾರಿ-150 (ಇ) ರ ಮೇಲೆ ಬರುವ ಹಡಗಿಲ ಹಾರುತಿ ಗ್ರಾಮದ ಸಿಮಾಂತರದ ರೋಡ ಮೇಲೆ ಹಿಂದಿನಿಂದ ಒಬ್ಬ ಮೋಟಾರ ಸೈಕಲ ಸವಾರ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರಿನ ಹಿಂದಿಗಡೆ ಜೋರಾಗಿ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲದೊಂದಿಗೆ ಕೆಳಗಡೆ ಬಿದ್ದನ್ನು ನಾನು ನನ್ನ ಕಾರ ರೋಡ ಪಕ್ಕಕ್ಕೆ ನಿಲ್ಲಿಸಿ ನಾವು ಮೂರು ಜನರು ಕಾರಿನಿಂದ ಇಳಿದು ಅಪಘಾತ ಪಡಿಸಿದ ಮೋಟಾರ ಸೈಕಲ ನಂಬರ ನೋಡಲು ಕೆಎ-32/ಇಡಿ-4895 ಇದ್ದಿತ್ತು. ಅದರ ಸವಾರನ ಹೆಸರು ನಾಗರಾಜ @ ನಾಗಪ್ಪಾ ತಂದೆ ಪ್ರಭು ಅಂತಾ ಗೋತ್ತಾಯಿತು. ಸದರಿಯವನು ಮದ್ಯ ಸೇವನೆ ಮಾಡಿದ ಅಮಲಿನಲ್ಲಿ ಇದ್ದನ್ನು. ಸದರಿಯವನ ಬಾಯಿಯಿಂದ ಸರಾಯಿ ವಾಸನೆ ಬರುತ್ತಿತ್ತು. ಮೋಟಾರ ಸೈಕಲ ಸವಾರ ನಾಗರಾಜ @ ನಾಗಪ್ಪಾ ಇತನ ಎಡಗಣ್ಣಿನ ಮೇಲೆ ಗುಪ್ತಪೆಟ್ಟು ಎಡಗಾಲಿನ ಹೆಬ್ಬರಿಳಿಗೆ ರಕ್ತಗಾಯ, ಬಲಗಾಲು ಹೆಬ್ಬರಳಿಗೆ ರಕ್ತಗಾಯ, ಎರಡು ಮೊಳಕಾಲಿಗೆ ಗುಪ್ತಪೆಟ್ಟು ಆಗಿತ್ತು. ನನ್ನ ಕಾರ ನೋಡಲು ಹಿಂದಿನ ಬಲ ಸೈಡಿನ ಬಂಪರ ಡ್ಯಾಮೇಜ್ ಹಿಂದಿನ ಬಲ ಸೈಡಿನ ಇಂಡಿಕೇಟರ್ ಸೆಟ್ ಡ್ಯಾಮೇಜ್ ಆಗಿತ್ತು. ಹಿಂದಿನ ಗ್ಲಾಸ ಡ್ಯಾಮೇಜ ಆಗಿತ್ತು. ಸದರಿ ಘಟನೆ ಜರುಗಿದಾಗ ರಾತ್ರಿ ಅಂದಾಜು 10-30 ಗಂಟೆ ಸಮಯವಾಗಿತ್ತು. ಅಂಬುಲೇನ್ಸ ವಾಹನ ಬಂದಾಗ ನಮ್ಮ ಕಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ಸವಾರ ನಾಗಪ್ಪಾ @ ನಾಗರಾಜ ಇವರು ಉಪಚಾರ ಕುರಿತು ಕಲಬುರಗಿ ಖಾಸಗಿ ಧನ್ವಂತರಿ ಆಸ್ಪತ್ರೆಗೆ ಹೋಗುತ್ತೇನೆ ಅಂತಾ ಹೋಗಿದ್ದು ನಾನು ರಾತ್ರಿಯಾಗಿದ್ದರಿಂದ ಮನೆಗೆ ಹೋಗಿ ಮನೆಯಲ್ಲಿ ವಿಚಾರ ಮಾಡಿಕೊಂಡು ಠಾಣೆಗೆ ಬರಲು ತಡವಾಗಿರುತ್ತದೆ. ನನ್ನ ಕಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 21/12/2022 ರಂದು ಸರಕಾರಿ ತರಫೆ ಫಿರ್ಯಾಧಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾಧಿಯೇನಂದರೆ ಸದರಿ ಏರಿಯಾದಲ್ಲಿ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ ಸದರಿ ಸದರಿಯವರಿಗೆ ಖಚಿತ ಮಾಹಿತಿ ಬಂದಿದ್ದೇನೆಂದರೆ ಆಳಂದ ಚೆಕ್ ಪೋಸ್ಟರ್ ಹತ್ತಿರ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಮಾಡಲಾಗಿ ಸದರಿ ಮುಂದೆ ಮಾಲನ್ನು ವಶಪಡಿಸಿಕೊಂಡು  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 21/12/2022 ರಂದು ಫಿರ್ಯಾಧಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾಧಿಯೇನಂದರೆ ಸದರಿ ಫಿರ್ಯಾಧಿದಾರರು ಜಫರಾಬಾದ್ ನಲ್ಲಿ ಪ್ಲಾಟ್ ಹೊಂದಿದ್ದು ಸದರಿ ಆರೋಪಿತರು ಫಿರ್ಯಾಧಿಯ ಪ್ಲಾಟ್ ಬಳಿಗೆ ಬಂದು ಜೆಸಿಬಿಯಿಂದ ಅಕ್ರಮವಾಗಿ ತೆರವು ಮಾಡುತ್ತಿದ್ದಾರೆ ಎಂದು ಫಿರ್ಯಾದಿ ಕೊಟ್ಟ  ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 21/12/2022ರಂದು 9:15 ಪಿ,ಎಂಕ್ಕೆ ಸರಕಾರಿ ತರ್ಪೇ ಫಿರ್ಯಾದಿದಾರರಾಗಿ  ಶ್ರೀ ಬಸವರಾಜ ಪಿ.ಎಸ್.ಐ., ಸಿ.ಸಿ.ಬಿ. ಘಟಕ, ಕಲಬುರಗಿ ನಗರ ರವರು ವರದಿ ಮತ್ತು ಜಪ್ತಿ ಪಂಚನಾಮೆ ಆರೋಪಿ ಹಾಗೂ ಮುದ್ದೇ ಮಾಲಿನೊಂದಿಗೆ ಠಾಣೆಗೆ ಬಂದು ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ,ಇಂದು ದಿನಾಂಕ:21/12/2022 ರಂದು ಸಾಯಂಕಾಲ 6-00 ಗಂಟೆಗೆ ನಾನು ಸಿ.ಸಿ.ಬಿ. ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಸೂಪರ ಮಾರ್ಕೆಟನಲ್ಲಿರುವ ಸಿ.ಟಿ. ಬಸಸ್ಟ್ಯಾಂಡ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ತಮ್ಮ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1) ಶ್ರೀ ಮಹಾಂತೇಶ ತಂದೆ ಶಿವನಾಗಯ್ಯ ಕಡಬೂರ, ವ:27 ವರ್ಷ, ಜಾತಿ:ಸ್ವಾಮಿ, ಉ:ಅಟೋ ಚಾಲಕ, ಸಾ:ಸೈಯದ ಚಿಂಚೋಳಿ ಕ್ರಾಸ್ ಹತ್ತಿರ ಕಲಬುರಗಿ ಮೊ. ನಂ. 7760591043, 2) ಶ್ರೀ ಮುಖೀಮ ತಂದೆ ರುಕ್ಮೋದ್ದಿನ ಶೇಖ, ವ:20 ವರ್ಷ, ಜಾತಿ:ಮುಸ್ಲಿಂ, ಉ:ಅಟೋ ಚಾಲಕ, ಸಾ:ಸೈಯದ ಚಿಂಚೋಳಿ ಕ್ರಾಸ್ ಹತ್ತಿರ ಕಲಬುರಗಿ ಮೊ. ನಂ. 7019872742 ಇವರನ್ನು ಸಿ.ಸಿ.ಬಿ. ಘಟಕಕ್ಕೆ ಸಾಯಂಕಾಲ 6-20 ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ರವೀಂದ್ರಕುಮಾರ ಹೆಚ್.ಸಿ-48, 2) ಸುನೀಲಕುಮಾರ ಹೆಚ್ಸಿ-167, 3) ಅಂಬಾಜಿ ಸಿಪಿಸಿ-131, 4) ಅರವಿಂದ ಸಿಪಿಸಿ-955, 5) ವಿಶ್ವನಾಥ ಸಿಪಿಸಿ-686, 6) ನಾಗರಾಜ ಸಿಪಿಸಿ-1257 ಎಲ್ಲರೂ ಕೂಡಿ ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಸಾಯಂಕಾಲ 6-30 ಗಂಟೆಗೆ ಸಿ.ಸಿ.ಬಿ. ಕಛೇರಿಯಿಂದ ಹೊರಟು ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ಸೂಪರ ಮಾರ್ಕೆಟನಲ್ಲಿರುವ ಸಿ.ಟಿ. ಬಸಸ್ಟ್ಯಾಂಡ ಹತ್ತಿರ ಸಾಯಂಕಾಲ 6-45 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 1 ರೂ.ಗೆ 80 ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದುಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ಸಾಯಂಕಾಲ 7-00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗೆ ಹಿಡಿದಿದ್ದು, ನಂತರ ಸದರಿಯವನ ಆತನ ಹೆಸರು ವಿಳಾಸ ವಿಚಾರಿಸಲು ರಾಜು ತಂದೆ ಶಾಂತಪ್ಪ ಮೂಲಗೆ, ವ:38 ವರ್ಷ, ಜಾತಿ:ಲಿಂಗಾಯತ, ಉ:ಕಿರಾಣಿ ಅಂಗಡಿ, ಸಾ:ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿದನು. ನಂತರ ಸದರಿ ಆರೋಪಿಯ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.10,310/- ನಗದು ಹಣ, ಮತ್ತು ಮಟಕಾ ಚೀಟಿ ಅ.ಕಿ.ರೂ.00/-, ಒಂದು ಬಾಲ ಪೆನ್ ಅ.ಕಿ.ರೂ.00/-, ಮತ್ತು ಒಂದು ಸ್ಯಾಮಸಂಗ ಕೀಪ್ಯಾಡ ಮೊಬೈಲ್ ಅ.ಕಿ. ರೂ.1500/- ದೊರೆತಿದ್ದು, ಅದರ ನಂಬರ ವಿಚಾರಿಸಲು 9740451988 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲು (358991226859682) ಅಂತಾ ಇರುತ್ತದೆ. ನಂತರ ಸದರಿಯವನಿಗೆ ಮಟಕಾ ಚೀಟಿಗಳನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಿದಾಗ ಶರಣು ಕಶೆಟ್ಟಿ, ವ:40 ವರ್ಷ, ಸಾ:ಕೈಲಾಸನಗರ ಕಲಬುರಗಿ (ಮೊ.ನಂ.9880672249) ಈತನಿಗೆ ಕೊಡುತ್ತೇನೆ ಅಂತಾ ತಿಳಿಸಿದನು.  ಸದರಿ ಜಪ್ತುಪಡಿಸಿಕೊಂಡ ಮುದ್ದೇಮಾಲುಗಳಿಗೆ ಪಂಚರು ಸಹಿ ಮಾಡಿದ ಚೀಟಿಯನ್ನುಅಂಟಿಸಿ ಒಂದು ಕವರನಲ್ಲಿ ಹಾಕಲಾಯಿತು. ಸದರಿ ಜಪ್ತಿ ಪಂಚನಾಮೆಯನ್ನು ಸಾಯಂಕಾಲ 7-00 ಗಂಟೆಯಿಂದ 8-00 ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಲ್ಯಾಪಟ್ಯಾಪನಲ್ಲಿ ಟೈಪ ಮಾಡಿ ಮುಗಿಸಲಾಯಿತು. ನಂತರ ಬ್ರಹ್ಮಪೂರ ಪೊಲೀಸ ಠಾಣೆಗೆ ಬಂದು ನನ್ನ ವರದಿಯನ್ನು ತಯಾರಿಸಿ, ಜಪ್ತಿಪಂಚನಾಮೆ, ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ಸದರಿಯವನ ವಿರುದ್ದ ಕಾನೂನು ಕ್ರಮ  ಕೈಕೊಳ್ಳಬೇಕು ಎಂದು ಫಿರ್ಯಾಧಿ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 22-12-2022 01:44 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080