ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ:21/11/2022 ರಂದು ಮದ್ಯಾಹ್ನ 1:00 ಗಂಟೆಗೆ ಫಿರ್ಯಾದಿ ಶ್ರೀ ಮೊಹಮ್ಮದ ಅಸ್ಲಮ್ ತಂದೆ ಮೊಹಮ್ಮದ ಇಬ್ರಾಹಿಮ್ ವಯ:46 ವರ್ಷ ಉ:ಪ್ಲಾಟಗಳ ವ್ಯವಹಾರ ಸಾ:ಮದಿನಾ ಕಾಲೋನಿ ಎಮ್.ಎಸ್ಕೆ ಮಿಲ್ ಕಲಬುರಗಿ ಇವರು ಪೊಲೀಸ್ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನಂದರೆ, ನಾನು ಮತ್ತು ನನ್ನ ಗೆಳೆಯ ಮೊಹಮ್ಮದ ಸಮಿ ಇಬ್ಬರು ಕೂಡಿಕೊಂಡು ಸುಮಾರು ದಿನಗಳಿಂದ ಪಾಲುದಾರಿಕೆಯಲ್ಲಿ ಪ್ಲಾಟಗಳನ್ನು ಖರಿದಿ ಮಾಡಿ ಅವುಗಳನ್ನು ನಂತರ ಮಾರಾಟ ಮಾಡಿ ಬಂದ ಲಾಭದಲ್ಲಿ ಸಮಪಾಲು ಹಂಚಿಕೆ ಮಾಡಿಕೊಳ್ಳುತ್ತಿದ್ದೆವು, ಅದರಂತೆ 2021 ನೇ ಸಾಲಿನಲ್ಲಿ ನಮಗೆ ಪರಿಚಯದವನಾದ ಇಫರ್ಾನ ಇತನು ಬಂದು ಮಾರಸನಹಳ್ಳಿ ಹಿರಾಪೂರ ರೇಲ್ವೆ ಗೇಟ್ ಹತ್ತಿರ ಪ್ಲಾಟ ಮಾರಾಟ ಮಾಡುವದಿದೆ ಅಂತ ತಿಳಿಸಿದಾಗ ನಾವು ಅಲ್ಲಿಗೆ ಹೋಗಿ ಪ್ಲಾಟನ್ನು ನೋಡಿ ಅದರ ಮಾಲಿಕತ್ವದ ಬಗ್ಗೆ ವಿಚಾರಿಸಲು ಮೊಹಮ್ಮದ ಖಾಸಿಮ್ ಅಲೀ ತಂದೆ ಮೊಹಮ್ಮದ ಮಕ್ದುಮ್ ಅಲೀ ಸಾ:ಖಮರ ಕಾಲೋನಿ ಪಿರ್ ಬಂಗಾಲಿ ದರ್ಗಾ ಇವರಿಗೆ ಸಂಬಂದಿಸಿದ್ದು ಇರುತ್ತದೆ ಅಂತ ತಿಳಿದುಕೊಂಡಿದ್ದು ಇರುತ್ತದೆ. ನಂತರ ನಾವು ಮೊಹಮ್ಮದ ಖಾಸಿಮ್ ಅಲೀ ಇವರನ್ನು ಬೇಟಿಯಾಗಿ ಸರ್ವೆ ನಂ.16/4 ನೇದ್ದರಲ್ಲಿನ ಪ್ಲಾಟ ನಂ. 136 ನ್ನು 3 ಲಕ್ಷ ರೂಪಾಯಿಗಳಿಗೆ ವ್ಯವಹಾರ ಮಾಡಿ ಖರಿದಿ ಮಾಡಿರುತ್ತೆವೆ. ಸದರಿ ಪ್ಲಾಟ ನಂ. 136 ನೇದ್ದನ್ನು ಮೊಹಮ್ಮದ ಖಾಸಿಮ್ ಅಲೀ ಇತನು ತನ್ನ ಹತ್ತಿರ ಇರುವ ಲಿಂಕ್ ದಾಖಲಾತಿಗಳು ನೀಡಿದ್ದು, ಅವುಗಳನ್ನು ನೋಡಿ ನಾವು ದಿನಾಂಕ:10/07/2021 ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಅಗ್ರಿಮೆಂಟ್ ಫಾರ್ ಸೇಲ್ ಮಾಡಿಸಿ ಖರಿದಿ ಮಾಡಿರುತ್ತೆವೆ. ನಂತರ ನಾವು ಪ್ಲಾಟ್ ನಂ.136 ನ್ನು ಅಬ್ದುಲ್ ಮನ್ನಾನ ಸಾ:ಎಮ್.ಎಸ್.ಕೆ ಮಿಲ್ ಕಲಬುರಗಿ ಇವರಿಗೆ ಮಾರಾಟ ಮಾಡಿರುತ್ತೆವೆ. ಸದ್ಯ ನಮಗೆ ಗೊತ್ತಾಗಿದ್ದೆನಂದರೆ, ನಾವು ಖರಿದಿ ಮಾಡಿದ ಸರ್ವೆ ನಂ. 16/4 ನೇದ್ದರಲ್ಲಿನ ಪ್ಲಾಟ ನಂ. 136 ನೇದ್ದು ಇರುವದಿಲ್ಲ ಇನ್ನು ಜಮೀನು ಇದ್ದು, ಸದರಿ ಜಮೀನು ಎಮ್.ಕೆ ರಹಿಮುದ್ದಿನ್ ಇವರಿಗೆ ಸಂಬಂದಿಸಿದ್ದು ಇದ್ದು, ಲೇಔಟ ಮಾಡಿ ಪ್ಲಾಟಗಳನ್ನು ಹಾಕಿರುವದಿಲ್ಲ ಎಂದು ತಿಳಿದು ಬಂದಿರುತ್ತದೆ. ನಾವು ದಾಖಲಾತಿಗಳನ್ನು ಪರೀಶಿಲನೆ ಮಾಡಿ ನೋಡಲು ಮೊಹಮ್ಮದ ಖಾಸೀಮ್ ಅಲೀ ಇತನ ಹೆಸರಿಗೆ ಇರುವದು ಕಂಡು ಬಂದಿರುವದಿಲ್ಲ. ಮೊಹಮ್ಮದ ಖಾಸಿಮ್ ಅಲೀ ಇತನು ಸರ್ವೆ ನಂ. 16/4 ನೇದ್ದಕ್ಕೆ ಸಂಬಂದಿಸಿದಂತೆ ನಕಲಿ ದಾಖಲಾತಿಗಳನ್ನು ತಯಾರಿಸಿ ನಮಗೆ ಪ್ಲಾಟನ್ನು ಮಾರಾಟ ಮಾಡಿ ನಮ್ಮಿಂದ 3 ಲಕ್ಷ ಹಣ ಪಡೆದುಕೊಂಡು ಮೊಸ ಮಾಡಿರುತ್ತಾನೆ. ಕಾರಣ ಮೊಹಮ್ಮದ ಖಾಸೀಮ್ ಅಲೀ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 21/11/2022 ರಂದು 12:00 ಪಿ.ಎಮ್ ಕ್ಕೆ ಯಶೋಧಾ ಗಂಡ ಲಾಲುಕೊಂಚಿ ಕೊರವಿ  ಸಾ: ಎಸ್.ಬಿ. ಕಾಲೇಜ ಹತ್ತೀರ ರಾಮನಗರ ಕಲಬುರಗಿ ಇವರು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿ ಸಾರಂಶವೆನೆಂದರೆ, ದಿನಾಂಕ 18/11/2022 ರಂದು ಮಧ್ಯಾಹ್ನ ನಮ್ಮ ಮನೇಯಿಂದ ನಾನು ಮತ್ತು ನನ್ನ ಗಂಡನಾದ ಲಾಲು, ಮಗನಾದ ಸದೀಪ, ತಂಗಿಯಾದ ಸುಭದ್ರಾ ಹಾಗೂ ತಂಗಿ ಮಗಳಾದ ಮೀರಾ ಎಲ್ಲರು ಸೇರಿ ಗೋಳಾ ಲಕ್ಕಮ್ಮದೇವಿ ದರ್ಶನದ ಕುರಿತು  ಗೋಳಾ ಗ್ರಾಮಕ್ಕೆ ಹೋಗುವ ಕುರಿತು ನಮ್ಮ ಮನೇಯಿಂದ ಅಟೋರಿಕ್ಷಾ ನಂ.ಕೆಎ-32 ಡಿ-3027 ನೇದ್ದರಲ್ಲಿ ಕುಳಿತುಕೊಂಡು ಹೋಗುವಾಗ ಅಟೊರೀಕ್ಷಾ ಚಾಲಕನು ತನ್ನ ಅಟೊರೀಕ್ಷಾವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತಿದ್ದನು ಆಗ ನಾವು ಆತನಿಗೆ ಅಟೊರೀಕ್ಷಾವನ್ನು ನಿಧಾನವಾಗಿ ಚಲಾಯಸಿಸಲು ಹೇಳದೇವು ಆದರು ಸಹ ಆತನು ನಮ್ಮ ಮಾತನ್ನು ಕೇಳದೆ ಅದೇವೇಗದಲ್ಲಿ ಚಲಾಯಿಸಿ ಮಧಾಹ್ನ 3-30 ಗಂಟೆ ಸುಮಾರಿಗೆ ಪಟ್ಟಣ ಕ್ರಾಸ ಹತ್ತೀರ ತನ್ನ ವಾಹವನ್ನು ನಿಯಂತ್ರಿಸಲು ಆಗದೆ ಒಮ್ಮೆಲೆ ರಸ್ತೇಯ ಬಲಗಡೆ ತೆಗ್ಗಿನಲ್ಲಿಹಾಕಿ ಪಲ್ಟಿಮಾಡಿದನು. ಆಗ ನಾವು ಅಟೋರಿಕ್ಷಾದಲ್ಲಿ ಸಿಕ್ಕಿಬಿದ್ದಾಗ ಅಲ್ಲಿ ಹೋಗುತಿದ್ದ ಜನರು ಬಂದು ನಮಗೆ ಹೊರಗೆ ತೆಗೆದುನೋಡಲು ನನಗೆ ಬಲಗಡೆ ಹಣೆಗೆ ಹಾಗೂ ಅಲ್ಲಲ್ಲಿ ಗುಪ್ತಗಾಯಗಳು ಆಗಿದ್ದು. ನನ್ನ ಗಂಡಲಾಲು ಅವರಿಗೆ ನೋಡಲು ಎಡಗಡೆ ಸೊಂಟದ ಜೋಯಿಂಟ್ ಹತ್ತೀರ ಹಾಗು ಎಡಗಾಲಿನ ಮೊಳಕಾಲಿನ ಕೆಳಗೆ ರಕ್ತಗಾಯ ಹಾಗೂ ಗುಪ್ತಾಂಗದ ಹತ್ತೀರ ರಕ್ತಗಾಯ ವಾಗಿದ್ದು. ಹಾಗು ನನ್ನ ತಂಗಿಯಾದ ಸುಭದ್ರಾ ಇವಳಿಗೆ ನೋಡಲು ಎಡಗಡೆ ತಲೆಯ ಮೇಲ್ಭಾದಲ್ಲಿ ಗುಪ್ತಾಗಾಯ ವಾಗಿದ್ದು. ಅವರ ಮಗಳಾದ ಮೀರಾ ಇವಳಿಗೆ, ನನ್ನ ಮಗನಾದ ಸುದೀಪ ಮತ್ತು ಅಟೊರೀಕ್ಷಾ ಚಾಲಕ ದಿಗಂಬರಗೆ ಯಾವೂದೇ ಗಾಯಗಳು ಕಂಡುಬಂದಿರುವದಿಲ್ಲ ಸದರಿ ವಿಷಯ ಗೊತ್ತಾಗಿ ಸ್ಥಳಕ್ಕೆ ಅಂಬುಲೆನ್ಸ್ ವಾಹನ ಬಂದಿದ್ದು ಅದರಲ್ಲಿ ನಮಗೆ ಎಲ್ಲರಿಗೆ ಕೂಡಿಸಿಕೊಂಡು ಉಪಚಾರ ಕುರಿತು ಕಲಬುರಗಿ ನಗರದ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ನನ್ನ ಗಂಡ ಲಾಲು ಇವರು ಸೇರಿಕೆಯಾಗಿದ್ದು. ನಾನು ಮತ್ತು ನನ್ನ ತಂಗಿ ಸುಭದ್ರ ತೋರಿಸಿಕೊಂಡಿದ್ದು ನನ್ನ ಮಗಸುದೀಪ ಹಾಗೂ ತಂಗಿ ಮಗಳಾದ ಮೀರಾ ಇವರಿಗೆ ತೋರಿಸಿರುವದಿಲ್ಲ. ನಾನು ನನ್ನ ಗಂಡನ ಚಿಕಿತ್ಸೆಯಲ್ಲಿದ್ದು ನಮ್ಮ ಮನೇಯವರೊಂದಿಗೆ ವಿಚಾರಿಸಿ ಇಂದು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.ಕಾರಣ ನಮಗೆ ಕೂಡಿಸಿಕೊಂಡು  ಅಪಘಾತ ಮಾಡಿದ ಅಟೊರೀಕ್ಷಾ ನಂ.ಕೆಎ-32 ಡಿ-3027 ನೇದ್ದರ ಚಾಲಕನ ದಿಗಂಬರ  ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ.      

 

 

ಫರಹತಾಬಾದ ಪೊಲೀಸ ಠಾಣೆ:-  ದಿನಾಂಕ:21-11-2022 ರಂದು 6:30 ಪಿಎಮ್ ಕ್ಕೆ ಶ್ರೀ ಗಡ್ಡೆಪ್ಪ ಹೆಚ್.ಸಿ:165 ಫರಹತಾಬಾದ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ: 21-11-2022 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಾನು ಪೊಲೀಸ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಫರಹತಾಬಾದ ಪೊಲೀಸ ಠಾಣೆಯ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕುಳಿತು ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಸಾರ್ವಜಿನಿಕರಿಗೆ ಹೇಳಿ ಸಾರ್ವಜನಿಕರಿಂದ ಹಣ ಪಡೆದು ದೈವ ಲೀಲೇಯ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಭಾತ್ಮಿ ಬಂದ ಮೇರೆಗೆ ಪಿ.ಐ ಸಾಹೇಬರಿಗೆ ವಿಷಯ ತಿಳಿಸಿ ಅವರ ಮೌಖಿಕ ಆದೇಶದ ಮೇರಗೆ ನಾನು ಠಾಣೆಗೆ ಇಬ್ಬರೂ ಪಂಚರಾದ 1) ರವಿಕುಮಾರ ತಂದೆ ಗುರುಬಸಪ್ಪ ಮಡಿವಾಳ ವಯ||29 ವರ್ಷ ಉ||ಕೂಲಿ ಕೆಲಸ ಜಾ|| ಮಡಿವಾಳ 2) ದೀಪಕ ತಂದೆ ಶ್ರೀಮಂತ ಹರಸೂರ ವಯ|| 35 ವರ್ಷ ಜಾ||ಹರಿಜನ ಉ||ಕೂಲಿ ಕೆಲಸ ಸಾ:ಇಬ್ಬರು ಫರಹತಾಬಾದ ತಾಜಿ:ಕಲಬುರಗಿ ಇವರನ್ನು ಬರ ಮಾಡಿಕೊಂಡು ನಮ್ಮ ಠಾಣೆಯ ಸಿಬ್ಬಂದಿಯಾದ  ಶ್ರೀ ರಾಜಕುಮಾರ  ಸಿಪಿಸಿ:447 ರವರಿಗೆ ಕರೆದುಕೊಂಡು ಠಾಣೆಯಿಂದ ಸಾಯಂಕಾಲ 5:20 ಗಂಟೆಗೆ ಹೊರಟು ರಾಜಕುಮಾರ ಪಿಸಿ ಮತ್ತು ಪಂಚರಿಗೆ ಮಟಕಾ ಜೂಜಾಟದ ಮಾಹಿತಿ ತಿಳಿಸಿ, ಭಾತ್ಮೀ ಸ್ಥಳದ ಹತ್ತಿರ ಸಾಯಂಕಾಲ 5:30 ಗಂಟೆಗೆ ಫರಹತಾಬಾದ ಬಸ್ ನಿಲ್ದಾಣದ ಹತ್ತಿರ ಹೋಗಿ ಅಂಗಡಿಗಳ ಹತ್ತಿರ ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಸಾರ್ವಜನಿಕರನ್ನು ಕೂಗಿ ಕರೆದು 1 ರೂಪಾಯಿ ಗೆ 80 ರೂಪಾಯಿ ಗೆಲ್ಲಿರಿ ಅಂತಾ ಮಟಕಾ ದೈವ ಲೀಲೆಯ ನಂಬರ ಬರೆದುಕೊಳ್ಳುತ್ತಿದ್ದು ಅವನ ಜೊತೆಗೆ ಇತರರು ಇರುವುದನ್ನು ಖಚಿತ ಪಟ್ಟಾಗ 5:35 ಪಿಎಮ್ ಕ್ಕೆ ಏಕಕಾಲಕ್ಕೆ ದಾಳಿ ಮಾಡಲು ಮಟಕಾ ಬರೆಯಿಸುತ್ತಿದ್ದು ಜನರು ನಮ್ಮನ್ನು ನೋಡಿ ಓಡಿ ಹೋದರು ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿ ಬಿದಿದ್ದು ಆತನ ಹೆಸರು ವಿಳಾಸ ವಿಚಾರಿಸಲು ಭೀಮಾ ತಂದೆ ಶಿವಗ್ಗಿ ಪೂಜಾರಿ ವಯ||40 ವರ್ಷ ಉ||ಡ್ರೈವರ ಕೆಲಸ ಜಾ||ಕುರುಬ ಸಾ||ಫರಹತಾಬಾದ ಅಂತ ತಿಳಿಸಿದ್ದು ಆತನಿಗೆ ಅಂಗ ಶೋಧನೆ ಮಾಡಲಾಗಿ 1) ಒಂದು ಮಟಕಾ ನಂಬರ ಚೀಟಿ ಅ.ಕಿ 00=00 2) ಒಂದು ಬಾಲ ಪೆನ್ನ ಅ.ಕಿ 00=00 3) ನಗದು ಹಣ 3070/- ರೂ ಸಿಕ್ಕಿದ್ದು ಹೀಗೆ ಒಟ್ಟು ನಗದು ಹಣ 3070/- ರೂ ಸಿಕ್ಕಿರುತ್ತದೆ. ಸದರಿಯವನ ಹತ್ತಿರ ಸಿಕ್ಕಿದ್ದ  ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಪಂಚರ ಸಮಕ್ಷಮದಲ್ಲಿ 5:40 ಪಿಎಮ್ ದಿಂದ 6:10 ಪಿಎಮ್ ದವರೆಗೆ ಕೈಕೊಂಡಿರುತ್ತೇನೆ. ನಂತರ ಜಪ್ತಿ ಪಂಚನಾಮೆ, ಮುದ್ದೆ ಮಾಲು ಮತ್ತು ಒಬ್ಬ ಆರೋಪಿತನೊಂದಿಗೆ 6:30 ಪಿಎಮ್ ಕ್ಕೆ  ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ.      

 

     

 

ಇತ್ತೀಚಿನ ನವೀಕರಣ​ : 23-11-2022 06:05 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080