ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 21/10/2022 ರಂದು 06:30 ಪಿ.ಎಮ್ ಕ್ಕೆ ಶ್ರೀಮತಿ ಶಶಿಕಲಾ ಗಂಡ ಚಿದಾನಂದ ದೊಡ್ಡಮನಿ ವಯಃ 35 ವರ್ಷ ಜಾತಿಃ ಪ.ಜಾತಿ(ಹೊಲೆಯ) ಉಃ ಕೂಲಿ ಕೆಲಸ ಸಾಃ ಕೊಟನೂರ(ಡಿ) ತಾ.ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೆನೆಂದರೆ, ನಾನು ಮೇಲಿನ ವಿಳಾಸದವಳಿದ್ದು, ಕೂಲಿ ಕೆಲಸ ಮಾಡಿಕೊಂಡು ಗಂಡ, ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನನ್ನ ಗಂಡ ಚಿದಾನಂದ ಇವರು 43 ವರ್ಷದವರಿದ್ದು, ಇವರಿಗೆ ಕಳೆದ 2-3 ವರ್ಷಗಳ ಹಿಂದೆ ಬಲಗೈಗೆ ಸೆಪ್ಟಿಕ ಆಗಿರುವುದರಿಂದ ಬಲಗೈ ರಟ್ಟೆ ವರೆಗೆ ಆಸ್ಪತ್ರೆಯಲ್ಲಿ ಕಟ್ ಮಾಡಿದ್ದು, ಇರುತ್ತದೆ. ಅಂದಿನ ನಂತರ ಊರಲ್ಲಿಯೆ ಕಾಯಿಪಲ್ಲೆ ವ್ಯಾಪಾರ ಮಾಡಿಕೊಂಡಿದ್ದರು. ನಮಗೆ ರಾಮಲಖನ ಎಂಬ ಒಬ್ಬ ಗಂಡು ಮಗನಿರುತ್ತಾನೆ. ಹೀಗಿದ್ದು, ನಿನ್ನೆ ದಿನಾಂಕ 20/10/2022 ರಂದು ನಮ್ಮೂರಿನ ದಿನೇಶ ತಂದೆ ನಾಗೆಂದ್ರಪ್ಪಾ ದೊಡ್ಡಮನಿ ಇವರ ಹುಟ್ಟುಹಬ್ಬವು ಡಾ|| ಬಿ.ಆರ್ ಅಂಬೇಡ್ಕರವರ ಮೂರ್ತಿ ಆವರಣದಲ್ಲಿ ಸಾಯಂಕಾಲ ಇಟ್ಟಿಕೊಂಡಿದ್ದರಿಂದ  ಈ ಸಮಾರಂಭಕ್ಕೆ ನಾನು, ನನ್ನ ಗಂಡ ಚಿದಾನಂದ, ನಮ್ಮ ಓಣಿಯ ಸಿದ್ದಲಿಂಗ ತಂದೆ ಮಾರುತಿ, ಅರುಣಕುಮಾರ ಅಲಂಕಾರ ರವರೆಲ್ಲರೂ ಕೂಡಿಕೊಂಡು ನಮ್ಮ ಓಣಿಯಿಂದ ಮೂರ್ತಿಯ ಕಡೆಗೆ ಹೋಗಬೇಕೆಂದು ರಾತ್ರಿ 7:00 ಗಂಟೆ ಸುಮಾರಿಗೆ ಇನ್ನೆನು ರೋಡು ದಾಟಬೇಕು ಎನ್ನುವಾಗ ಅದೆ ವೇಳೆಗೆ ಜೇವರ್ಗಿ ರೋಡಿನ ಕಡೆಯಿಂದ ಒಂದು ಲಾರಿ ನಂ. ಆರ್.ಜೆ 02 ಜಿ.ಸಿ 3035 ನೇದ್ದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ರೋಡಿನ ಬದಿಗೆ ಇರುವ ನನ್ನ ಗಂಡ ಚಿದಾನಂದ ದೊಡ್ಡಮನಿ ಇವರಿಗೆ ಡಿಕ್ಕಿ ಹೊಡೆದಿದ್ದರಿಂದ ಅವರು ಹಾರಿ ಬಿದ್ದಾಗ ಅವರ ತಲೆಯ ಹಿಂದುಗಡೆ ರಕ್ತಗಾಯ, ಮುಖಕ್ಕೆ ತರಚಿದಗಾಯ, ಎಡಕಿವಿಯಿಂದ ರಕ್ತಬರುತ್ತಿತ್ತು & ಎಡಹುಬ್ಬಿಗೆ ಗಾಯವಾಗಿ ಬೆಹೋಶನಲ್ಲಿ ಬಿದ್ದಿದ್ದು, ನಾವೆಲ್ಲರೂ ಎತ್ತಿ ಸೈಡಿಗೆ ಕೂಡಿಸುವಾಗ ಬೆಹೋಶ ಸ್ಧಿತಿಯಲ್ಲಿರುವುದರಿಂದ ಅವರಿಗೆ ಕೂಡಲೆ ನಮ್ಮೂರಿನ ಯುಸುಬಅಲಿ ಈತನ ಅಟೋದಲ್ಲಿ ಅವರಿಗೆ ಹಾಕಿಕೊಂಡು ಉಪಚಾರಕ್ಕೆ ಒಯ್ಯಬೇಕೆನ್ನುವಾಗ ಆ ಲಾರಿಯ ಚಾಲಕನು ಇದನ್ನೆಲ್ಲಾ ನೋಡಿ ತನ್ನ ಲಾರಿಯೊಂದಿಗೆ ಕಲಬುರಗಿ ನಗರದ ಕಡೆಗೆ ಓಡಿ ಹೋದನು. ಆತನಿಗೆ ನೋಡಿದಲ್ಲಿ ನಾವು ಗುರ್ತಿಸುತ್ತೆವೆ. ಮುಂದೆ ಗಂಡನವರು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಉಪಚಾರ ಪಡೆಯುತ್ತಿರುವಾಗ ಅವರ ಪರಸ್ಧಿತಿಯು ಚಿಂತಾಜನಕವಾಗಿದ್ದು, ಇಂದು ದಿನಾಂಕ 21/10/2022 ರಂದು ಅದೆ ಪರಸ್ಧಿತಿಯಲ್ಲಿ ಉಪಚಾರ ಪಡೆಯುತ್ತಿರುವಾಗ ಈಗ ಸಾಯಂಕಾಲ 5:30 ಗಂಟೆ ಸುಮಾರಿಗೆ ಗುಣಮುಖವಾಗದೆ ಮೃತ ಪಟ್ಟಿರುತ್ತಾನೆ. ನಾನು ಗಂಡನವರ ಉಪಚಾರದಲ್ಲಿ ಇರುವುದರಿಂದ ಈಗ ಪೊಲೀಸ್ ಠಾಣೆಗೆ ಬಂದು ಈ ಫಿರ್ಯಾದಿ ಹೇಳಿಕೆಯನ್ನು ನೀಡುತ್ತಿದ್ದು, ಆರ್.ಜೆ 02 ಇ.ಜಿ 3035 ನೇದ್ದರ ಲಾರಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾಧಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 17-10-2022 ರಂದು ೨:೦೦ ಪಿ.ಎಮ ದಿಂದ ದಿನಾಂಕ: ೧೯.೧೦.೨೦೨೨ ರಂದು ೭:೩೦ ಪಿ.ಎಮ ಮದ್ಯದ ದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ  ಅಲಮಾರಿಯಲ್ಲಿದ್ದ ೧) ೧೫ ಗ್ರಾಂ ಬಂಗಾರದ ಮಂಗಳಸೂತ್ರ ಅ:ಕಿ: ೩೭,೫೦೦/- ೨) ೭ ಗ್ರಾಂ ಬಂಗಾರದ ಒಂದು ಜೊತೆ ಕಿವಿಯೋಲೆ ಅ:ಕಿ: ೧೭೫೦೦/-, ೩) ೩ ಗ್ರಾಂ ನ ಎರಡು ಬಂಗಾರದ ಉಂಗುರುಗಳು ಒಟ್ಟು ೬ ಗ್ರಾಂ ಅ:ಕಿ: ೧೫,೦೦೦/- ೪) ೨೨೦ ಗ್ರಾಂ ಬೆಳ್ಳಿಯ ಎರಡು ಜೊತೆ ಕಾಲಚೈನ ಅ:ಕಿ: ೪೪೦೦/- ೫) ೫೦ ಗ್ರಾಂ ಬೆಳ್ಳಿಯ ಕಾಲಿನ ಎರಡು ಖಡ್ಗಗಳು ಅ:ಕಿ: ೧೫೦೦/- ೬) ೩೦ ಗ್ರಾಂ ಬೆಳ್ಳಿಯ ಉಂಗುರುಗಳು ಅ:ಕಿ: ೯೦೦/-, ೭) ನಗದು ಹಣ ೨೫,೦೦೦/- ೮) ೬ ಸೌಧಿಯ ವಾಚ್‌ಗಳು ಅ:ಕಿ: ೬೦೦೦/- ಹೀಗೆ ಒಟ್ಟು ಅ:ಕಿ: 1,07,800/- ಬೆಲೆಬಾಳುವ ಬಂಗಾರ, ಬೆಳ್ಳಿ, ನಗದು ಹಣ, ವಾಚ್‌ಗಳು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ್‌ ಠಾಣೆ :- ಫಿರ್ಯಾದಿ ನೀಡಿದ ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ:21.10.2022 ರಂದು ನಮ್ಮೂರಿನ ಮರಗೆಮ್ಮಾದೇವಿ ಹಾಗೂ ದೇವಮ್ಮಾದೇವಿಯ ಹೊಸ ಮೂರ್ತಿ ಪ್ರತಿಷ್ಠಾಪನೆ ಇದ್ದಿದ್ದರಿಂದ , ನಮ್ಮೂರಿನ ಸುತ್ತಾರ ಮನೆಯಿಂದ ಮರಗೆಮ್ಮಾ ದೇವಿಯ ಮೆರವಣಿಗೆಯು ಬೆಳಗ್ಗೆ 10 ಗಂಟೆಯ ಸುಮಾರಿಗೆ ಪ್ರಾರಂಭವಾಗಿದ್ದು ನಾನು ಮೆರವಣಿಗೆ ಮುಂದೆ ನಡೆದುಕೊಂಡು ಬರುತ್ತಿದ್ದೆ, ಮದ್ಯಾಹ್ನ 12 ಗಂಟೆಯ ಸುಮಾರಿಗೆ ಸದರಿ ಮೆರವಣಿಗೆಯು ನಮ್ಮೂರಿನ ಬಸವಣ ಕಟ್ಟೆಯ ಹತ್ತಿರ ಬಂದಾಗ, ಆಗಾಗ ನಮ್ಮೂರಿಗೆ ಬಂದು ಹೋಗುವ ದೇವಣಗಾಂವ ಗ್ರಾಮದ ಲಕ್ಷ್ಮಣ ಕಟಬರ ಇವನು ಈ ದಿನ ದೇವಿ ಕಾರ್ಯಕ್ರಮಕ್ಕೆ ಬಂದಿದ್ದು ,  ತನ್ನೊಂದಿಗೆ ಮದ್ದು ಹೊಡೆಯುವ ತೋಪು ಹಾಗೂ ಒಂದು ಚೀಲದಲ್ಲಿ ಮದ್ದು ತಂದಿದ್ದು ದೇವಿಯ ಮೂರ್ತಿ ತೆಗೆದುಕೊಂಡು ಊರಿನ ಜನರು ಹೋಗುತ್ತಿರುವಾಗ ಅವನು ತಾನು ತಂದಿದ್ದ ಮದ್ದಿನ ಚೀಲವನ್ನು ಬಸವಣ್ಣನ ಕಟ್ಟೆಯ ಮೇಲೆ ಇಟ್ಟು ಅದರಿಂದ ಮದ್ದು ಕೈಯಿಂದ ತೆಗೆದುಕೊಂಡು ತೋಪಿಗೆ ತುಂಬಿ ಮುಂದೆ ಹೋಗಿ ತೋಪಿನ ಕೆಳ ಬದಿಗೆ ಬೆಂಕಿ ಹಚ್ಚಿದ್ದ ಬಿಳಿ ಬತ್ತಿಯ ಸಹಾಯದಿಂದ ಮದ್ದು ಸಿಡಿಸಿದನು. ನಂತರ ಪುನಃ ಮದ್ದನ್ನು ತುಂಬಲು ಬಸವಣ್ಣನ ಕಟ್ಟೆಯ ಮೇಲಿಟ್ಟ ಚೀಲದಿಂದ ಕೈಯಿಂದ ಮದ್ದು ತೆಗೆಯುವುವಾಗ ಅವನು ಮುಂಜಾಗ್ರತೆ ವಹಿಸದೇ ಬೇಜವಬ್ದಾರಿತನದಿಂದ ಇನ್ನೊಂದು ಕೈಯಲ್ಲಿದ್ದ ಬೆಂಕಿಯಿದ್ದ ಬತ್ತಿಯು ಮದ್ದಿನ ಚೀಲದ ಹತ್ತಿರ ತೆಗೆದುಕೊಂಡು ಹೋದಾಗ , ಬತ್ತಿಯು ಆ ಮದ್ದಿನ ಚೀಲದೊಳಗೆ ಬಿದ್ದಿದ್ದರಿಂದ ಏಕಾಏಕಿ ಸ್ಫೋಟಗೊಂಡು ಅವನ ಮೈಗೆ ಸ್ಪೋಟಕ ಸಿಡಿದು ಬೆಂಕಿ ತಗಲಿ ಅವನು ಗಂಬೀರವಾಗಿ ಗಾಯಗೊಂಡಿರುತ್ತಾನೆ, ನನಗೆ ಬಲಗೈಗೆ ಹಾಗೂ ತೊಡೆ ಹಿಂದೆ ಸಾದಾರಣಾ ಸುಟ್ಟ ಗಾಯಗಳಾಗಿರುತ್ತವೆ, ಹಾಗೂ ಅಲ್ಲಿ ಸುತ್ತಮುತ್ತ ಇದ್ದ ಸುಮಾರು 15-20 ಜನರಿಗೆ ಸ್ಪೋಟದಿಂದ ಕೆಲವೊಬ್ಬರಿಗೆ ಗಂಭೀರ ಗಾಯ ಹಾಗೂ ಕೆಲವರಿಗೆ ಸಾದಾಗಾಯ ಆಗಿದ್ದು, ಅವರಲ್ಲಿ ನಮ್ಮೂರಿನ ಖಾಜಾಸಾಬ್ ಅಡೇದವರ , ಮಹೆಬೂಬ ಪಟೇಲ , ಶರಣಪ್ಪಾ ನರಬೋಳ, ನಿಂಗಣ್ಣಾ ಯಡ್ರಾಮಿ , ಸಾಯಬಣ್ಣಾ ಜುಲ್ಪಿ , ಕಾಶಿನಾಥ ಕಲ್ಯಾಣಕರ, ವಾಸುದೇವ ಧನಕೇರಿ , ಬಸವರಾಜ ಹೊನಗುಂಟಿ , ಮಹಾಂತೇಶ ಸೀತನೂರ ಹಾಗೂ ಇನ್ನಿತರರಿಗೆ ಗಾಯಗಳಾಗಿರುತ್ತವೆ. ಅಲ್ಲಿದ್ದ ಜನರು ಆ ಸ್ಪೋಟದ ಶಬ್ದ ಕೇಳಿ ಗಾಬರಿಗೊಂಡು ಅಲ್ಲಿಂದ ಚೆಲ್ಲಾಪಿಲ್ಲಿಯಾಗಿ ನಂತರ ಸ್ಥಳಕ್ಕೆ ಪೊಲೀಸರು ಬಂದು ಅವರು ಹಾಗೂ ಸ್ಥಳಿಯರು ಕೂಡಿಕೊಂಡು ಅಂಬ್ಯುಲೆನ್ಸಗೆ ಕರೆಯಿಸಿ ಮೊದಲು ಗಂಬೀರಗಾಯವಾದವರಿಗೆ ಕಲಬುರಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನನಗೆ ಸಾದಾಗಾಯವಾಗಿದ್ದರಿಂದ ನಂತರ ಆಸ್ಪತ್ರೆಗೆ ವಾಹನ ಬಂದಾಗ ಹೋಗುತ್ತೆನೆ.   ಸದರಿ ಘಟನೆಯು ದೇವಣಗಾಂವ ಗ್ರಾಮದ ಲಕ್ಷ್ಮಣ ಕಟಬರ ಈತನ ಬೇಜವಬ್ದಾರಿತನದಿಂದ ಸಂಭವಿಸಿದ್ದು ಕಾರಣ ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಬೇಕು ಅಂತಾ ಇತ್ಯಾದಿಯಾಗಿ ನೀಡಿದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 10-11-2022 12:36 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080