ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ‍ ಠಾಣೆ :- ದಿನಾಂಕ.೩೧-೮-೨೦೨೨ ರಂದು ರಾತ್ರಿ.೧೧-೦೦ ಗಂಟೆಯಿAದ ದಿನಾಂಕ.೧-೯-೨೦೨೨ ರಂದು ೧-೦೦ ಎ.ಎಂ. ಮದ್ಯದ ಅವಧಿಯಲ್ಲಿ ಮನೆಯ ಎದರುಗಡೆ ನಿಲ್ಲಿಸಿದ ನನ್ನ ಟಿ.ವಿ.ಎಸ್. ಜುಪಿಟರ್ ಮೋಟಾರ ಸೈಕಲ್‌ನಂ.ಕೆ.ಎ.೩೨.ಇ.ಝಡ್.೫೩೧೦,ಅಕಿ.೪೦,೦೦೦/-ರೂಪಾಯಿಗಳು ಬೆಲೆಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ :-  ದಿನಾಂಕಃ21.09.2022 ರಂದು 11-30 ಎ.ಎಂ ಕ್ಕೆ ಶ್ರೀ ಶೇಖ ಅಬು ಫಜಲ್ ತಂದೆ ಶೇಖ ಅಬುಬಕರ ಸಾ||ಇಕ್ಬಾಲ್ ಕಾಲೋನಿ ಕಲಬುರಗಿರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ ನಾನು ಲಿಮರಾ ವಾಟರ ಪ್ಲ್ಯಾಂಟ ಹಿಂದುಗಡೆ ಎಂ.ಎಸ್.ಕೆ.ಮಿಲ್ ನಿವಾಸಿತನಿದ್ದು ನಾನು ನ್ಯೂ ಲೈಪ ಆಸ್ಪತ್ರೆಗೆ ಭೇಟ್ಟಿ ನೀಡಲು ಹೋದಾಗ ನನ್ನ ಸ್ವಂತ ಮನೆಯಲ್ಲಿ ಯಾರೋ ಕಳ್ಳರು ದಿನಾಂಕ:21.09.2022 ರಂದು ರಾತ್ರಿ 12-20 ಕ್ಕೆ ಬಂದು ಮನೆ ಕಳ್ಳತನ ಮಾಡಿರುತ್ತಾರೆ.    ನಾನು ಮನೆಗೆ ಸುಮಾರು ರಾತ್ರಿ 2-15 ಗಂಟೆಗೆ ಮರಳಿ ಬಂದು ನೋಡಿದಾಗ ನನ್ನ ಮನೆಯ ಬಾಗಿಲು ಒಡೆದು ಒಳಗಡೆ ಹೋಗಿ 2 ಆಲ್ಮಾರಿಗಳ ಲಾಕ್ ಮುರಿದು ಅದರಲ್ಲಿರುವ 2 ತೊಲೆ ಬಂಗಾರದ ಮಂಗಳಸೂತ್ರ ಅ||ಕಿ||50000/-ರೂ, 8 ಗ್ರಾಂ ಬಂಗಾರದ ಐರಿಂಗ ಅ||ಕಿ||20000/- ರೂ , 3 ಗ್ರಾಂ ಬಂಗಾರದ ರಿಂಗ ಅ||ಕಿ||7500/- ರೂ , 2.5 ಗ್ರಾಂ ಬಂಗಾರದ ರಿಂಗ ಅ||ಕಿ||6250/-ರೂ , ಮತ್ತು ನನ್ನ ಮಗಳ 2 ಗ್ರಾಂ ಬಂಗಾರದ ಐರಿಂಗ ಅ||ಕಿ||5000/-ರೂ , ಒಂದು ಗಡಿಯಾರ ಮತ್ತು  ನಗದು ಹಣ 12000/-ರೂ ಹೀಗೆ ಒಟ್ಟು 4 ತೊಲೆ 6 ಗ್ರಾಂ ಬಂಗಾರದ ಆಭರಣಗಳು ಅ||ಕಿ||88750/- ಮತ್ತು ನಗದು ಹಣ 12000/-ರೂ ಹೀಗೆ ಒಟ್ಟು 100750/- ರೂ  ಬೆಲೆ ಬಾಳು ಬಂಗಾರ ಮತ್ತು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಮನೆಯ ಆಲ್ಮಾರಿಯಲ್ಲ್ಲಿಟ್ಟಿರುವ ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಪತ್ತೆ ಹಚ್ಚಿ ನಮ್ಮ ಮನೆ ಕಳ್ಳತನ ಮಾಡಿದವರ ವಿರುದ್ಧ ಕಾನೂನು ಕ್ರಮ ಜರಗಿಸಲು ವಿನಂತಿ ಅಂತಾ ಇತ್ಯಾಧಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:21.09.2022 ರಂದು 11:00 ಎ.ಎಂ.ಕ್ಕೆ ಫಿರ್ಯಾದಿ ಶ್ರೀ ಹಣಮಂತರಾವ ತಂದೆ ಬಾಬುರಾವ ಪಾಟೀಲ್ ವಯ: 50 ವರ್ಷ ಜಾ: ಲಿಂಗಾಯತ ಉ: ಗುತ್ತಿಗೇದಾರರು ಸಾ|| ಕೋಬಾಳ ತಾ|| ಜೇವರ್ಗಿ ಹಾ|| ವ|| ಎನ್.ಜಿ.ಓ. ಕಾಲೋನಿ ಜವಾಹರ ಸ್ಕೂಲ್ ಹತ್ತಿರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾವು ನಮ್ಮ ಬಡಾವಣೆಯಲ್ಲಿ ಎಲ್ಲಾ ಸಾರ್ವಜನಿಕರು ಸೇರಿಕೊಂಡು ಉಗ್ರ ಹನುಮಾನ ದೇವಸ್ಥಾನ ನಿರ್ಮಿಸಿದ್ದು ಇರುತ್ತದೆ. ಸದರಿ ಮಂದಿರಕ್ಕೆ 2017-18 ನೇ ಸಾಲಿನಲ್ಲಿ ಭಕ್ತಾಧಿಗಳ ದೇಣಿಗೆಯಿಂದ ಮಂದಿರದ ಗೋಪುರಕ್ಕೆ ಒಂದು ತಾಮ್ರದ ಕಳಸ ಅಂದಾಜು 30 ರಿಂದ 35 ಕೆ.ಜಿ. ತೂಕವುಳ್ಳದ್ದಿದ್ದು ಅ.ಕಿ. 30,000/- ನೇದ್ದನ್ನು ಅಳವಡಿಸಿರುತ್ತೇವೆ. ಸದರಿ ಮಂದಿರಕ್ಕೆ ದಿನ ನಿತ್ಯದ ಪೂಜಾ ಕಾರ್ಯಕ್ಕಾಗಿ ಒಬ್ಬ ಪುರೋಹಿತರಿಗೆ ನೇಮಿಸಿರುತ್ತೇವೆ. ಸದರಿ ಮಂದಿರಕ್ಕೆ ಉಗ್ರ ಹನುಮಾನ ಸೇವಾ ಸಮೀತಿ ಅಂತ ಟ್ರಸ್ಟ ರಚಿಸಿದ್ದು, ನಾನು ಸದರಿ ಟ್ರಸ್ಟನ ಉಪಾಧ್ಯಕ್ಷನಿರುತ್ತೇನೆ.   ಹೀಗಿದ್ದು ನಿನ್ನೆ ದಿನಾಂಕ:20.09.2022 ರಂದು 02:00 ಎ.ಎಂ. ದಿಂದ 06:00 ಎ.ಎಂ. ಸಮಯದಲ್ಲಿ   ಯಾರೋ ಕಳ್ಳರು ನಮ್ಮ ಬಡಾವಣೆಯ ಉಗ್ರ ಹನುಮಾನ ದೇವಸ್ಥಾನದ ಗೋಪುರಕ್ಕೆ ಅಳವಸಿದ್ದ ಕಳಸವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ದಿನಾಂಕ:20.09.2022 ರ 02:00 ಎ.ಎಂ. ದಿಂದ 06:00 ಎ.ಎಂ. ಅವಧಿಯಲ್ಲಿ ಉಗ್ರ ಹನುಮಾನ ಮಂದಿರದ ಕಳಸವನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ, ನಮ್ಮ ಮಂದಿರದ ಕಳಸವನ್ನು ನಮಗೆ ದೊರಕಿಸಿ ಕೊಡಬೇಕು ಅಂತ ವಿನಂತಿ ಅಂತ ಇತ್ಯಾದಿಯಾಗಿದ್ದ ಫಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-೧೦-೦೯-೨೦೨೨ ರಂದು ಫಿರ್ಯಾದಿದಾರನು ಮನೆಗೆ ಕೀಲಿ ಹಾಕಿಕೊಂಡು ತಮ್ಮ ಸಂಬದಿಕರ ಮನೆಗೆ ಹೋಗಿದ್ದು,  ಮರಳಿ ಮನೆಗೆ ಬಂದು ನೋಡಿದಾಗ ಕೀಲಿ ಮುರಿದಿದ್ದು, ಮನೆಯಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು , ಆಲವ್ಮರಿ  ನೋಡಲಾಗಿ, ಆಲವ್ಮರಿಯಲ್ಲಿಟ್ಟ ಒಟ್ಟು ೯೨೫೦೦/- ರೂ ಕಿವ್ಮ್ಮತ್ತಿನ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಮನೆ ಕೀಲಿ ಮುರಿದು ಕಳ್ಳತನ ಮಾಡಿರುತ್ತಾರೆ, ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.   

ಇತ್ತೀಚಿನ ನವೀಕರಣ​ : 07-10-2022 05:53 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080