ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ ಠಾಣೆ  :- ಇಂದು ದಿನಾಂಕ ೨೧.೦೯.೨೦೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಫಿರ್ಯಾದಿ ಶ್ರೀಮತಿ ರೇಣುಕಾ ಗಂಡ ಶ್ರೀಶೈಲ್ ಅವರಳ್ಳಿ ವಯಾ|| ೨೨ ಜಾ|| ಲಿಂಗಾಯತ ಉ|| ಗೃಹಿಣಿ ಸಾ|| ಗರೂರ (ಬಿ) ತಾ|| ಜಿ|| ಕಲಬುರಗಿ, ಹಾ.ವ ಜಂಬಗಾ(ಬಿ) ಕ್ರಾಸ್ ತಾ|| ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ಶ್ರೀಶೈಲ್ ತಂದೆ ಈರಣ್ಣಾ ಅವರಳ್ಳಿ ಇವರೊಂದಿಗೆ ದಿನಾಂಕ: ೨೦-೦೬-೨೦೧೮ ರಂದು ನಮ್ಮ ತಂದೆ ತಾಯಿ & ಸಂಬAಧಿಕರು ಎಲ್ಲಾ ಕೂಡಿಕೊಂಡು ಸಂಪ್ರದಾಯAದAತೆ ನನ್ನ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆ ಕಾಲಕ್ಕೆ ನನ್ನ ಗಂಡ ಮತ್ತು ಅತ್ತೆ ಮಾವ ಇವರು ಬೇಡಿಕೆಯಂತೆ ಮದುವೆಯಲ್ಲಿ ೫ ತೊಲಿ ಬಂಗಾರ, ೧ ಲಕ್ಷ ಬೆಲೆ ಬಾಳುವ ಮನೆ ಬಳಕೆ ಸಾಮಗ್ರಿಗಳು ಮತ್ತು ೧ ಲಕ್ಷ ನಗದು ಹಣ ಕೊಟ್ಟು ಸುಮಾರು ೫ ಲಕ್ಷ ರೂಪಾಯಿ ಹಣ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ಮೇಲೆ ನನ್ನ ಗಂಡನ ಮನೆಯಲ್ಲಿ ನನ್ನ ಗಂಡ, ಅತ್ತೆ, ಮಾವ, ಭಾವ ನೆಗೇಣಿಯರು ನನ್ನ ಜೊತೆ ಸರಿಯಾಗಿ ಇದ್ದು, ನಂತರ ನಮ್ಮ ಅತ್ತೆ ಮಾವ ನನ್ನ ಗಂಡ, ನೆಗೇಣಿ ಸಿದ್ದಮ್ಮಾ, ಭಾವ ಮಡಿವಾಳ, ಸಿದ್ದಣ್ಣ,  ಜಗದೇವಿ & ನನ್ನ ಚಿಕ್ಕಮಾವ ಶಿವರಾಯ  ಎಲ್ಲರೂ ಸೇರಿಕೊಂಡು ನನಗೆ ತುಂಬಾ ಹೊಡೆದು ಅವಮಾನ ಮಾಡುತ್ತಿದ್ದರು ಎಲ್ಲರು ದಿನಾಲು ನನಗೆ ತುಂಬಾ ಹಿಂಸೆ ಮಾಡುತ್ತಿದ್ದರು ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದರು. ನನ್ನ ಗಂಡ ಮತ್ತು ಅವನ ಮನೆಯವರು ನನಗೆ ಎಲ್ಲರೂ ಸೇರಿ ಹೊಡೆಬಡೆ ಮಾಡುತ್ತಿದ್ದರಿಂದ ನನಗೆ ದಿನಾಂಕ ೧೦.೦೭.೨೦೨೧ ರಂದು ಗರ್ಭ ಪಾತವಾಗಿರುತ್ತದೆ. ಆಗ ನಾನು ೧.೫ ತಿಂಗಳ ಗರ್ಭಿಣಿ ಆಗಿದ್ದೆನು. ನನ್ನ ಹತ್ತಿರ ವೈದ್ಯಕೀಯ ಪ್ರಮಾಣ ಪತ್ರಗಳು ಇರುತ್ತವೆ. ದಿನಾಂಕ: ೨೦-೦೭-೨೦೧೯ ರಂದು ಬೆಳಿಗ್ಗೆ ೧೦ ಗಂಟೆಗೆ ಅವರ ಮನೆಯಿಂದ ಹೊರಗೆ ಹಾಕಿರುತ್ತಾರೆ.  ನಾವು ಏನಾದರು ಅವನಿಗೆ ನೀನು ಹೀಗೆಕೆ ಮಾಡುತ್ತಿದ್ದೀಯಾ ಅಂತ ಕೇಳಿದರೆ, ನನಗೆ ನಿನ್ನ ತವರು ಮನೆಯಿಂದ ೨ ಲಕ್ಷ ರೂಪಾಯಿ ಹಣ ತಂದುಕೊಡು, ನಮಗೆ ಸಾಲ ಆಗಿದೆ, ನೀವು ಹಣ ತಂದುಕೊಡುವವರೆಗೆ ನಾನು ನಿನಗೆ ಹೀಗೆಯೆ ಕಿರುಕುಳ ಕೊಡುತ್ತೇನೆ. ಇಲ್ಲವಾದರೆ ನೀನು ನನಗೆ ಡೈವರ್ಸ ಕೊಡು ಅಂತ ಹೇಳುತ್ತಿದ್ದನು. ನನ್ನ ಗಂಡ ಉಮಾಶ್ರೀ ಎಂಬಾಕೆಯೊAದಿಗೆ ೨ನೇ ಮದುವೆ ಮಾಡಿಕೊಂಡಿದ್ದಾರೆ. ಮೊದಲನೆ ಹೆಂಡತಿ ಬದುಕಿರುವಾಗಲೇ ೨ನೇ ಮದುವೆ ಮಾಡಿಸಿರುವ ನನ್ನ ಗಂಡನ ಕುಟುಂಬದ ಸದಸ್ಯರು ಹುಡುಗಿ ಮನೆಯವರು ಉಮಾಶ್ರೀ, ಪೀರಪ್ಪಾ, ಅಜ್ಜಿ ಗೋದುಬಾಯಿ, ಅಜ್ಜ ಮಹಾದೇವ ಕೋಗನೂರ, ನಾಗಮ್ಮ ಇವರೆಲ್ಲರಿಗೂ ಮದುವೆ ಆದ ವಿಷಯ ಗೊತ್ತಿದ್ದರು, ನನ್ನ ಗಂಡನಿಗೆ ಉಮಾಶ್ರೀ ಇವಳೊಂದಿಗೆ ಮದುವೆ ಮಾಡಿಸಿರುತ್ತಾರೆ ಇವರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಸಂಚಾರಿ ಪೊಲೀಸ್ ಠಾಣೆ-೨ :- ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ ೨೧/೦೯/೨೦೨೧ ರಂದು ೧೨:೩೦ ಪಿ.ಎಮ್ ಕ್ಕೆ ಫಿರ್ಯಾದಿ ಶರಣಮ್ಮ ತಂದೆ ದಾಸಮಯ್ಯ ದೇಗಲಮಡ್ಡಿ ವಯಃ ೨೭ ವರ್ಷ ಜಾತಿಃ ನೇಕಾರ ಉಃ ಮನೆ ಕೆಲಸ ಸಾಃ ಹೆಬ್ಬಾಳ ಹಾ.ವಃ ಓಂ ನಗರ ಕಲಬುರಗಿ ಇವರು ಠಾಣೆಗೆ ಹಾಜರಗಾಗಿ ಹೇಳಿಕೆ ಕೊಟ್ಟಿದ್ದೇನೆಂದರೆ, ದಿನಾಂಕ ೦೯/೦೯/೨೦೨೧ ರಂದು ಮಧ್ಯಾಹ್ನ ೧:೦೦ ಗಂಟೆ ಸುಮಾರಿಗೆ ನನ್ನ ಅಣ್ಣ ಶರಣಬಸಪ್ಪಾ ತಂದೆ ದಾಸಮಯ್ಯ ಈತನು ಮೋಟರ ಸೈಕಲ ನಂ. ಕೆಎ ೩೨ ಇ.ಎ ೫೦೧೫ ನೇದ್ದರ ಮೇಲೆ ಸೇಡಂ ರೋಡಿನ ಹಳೆ ಆರ್.ಟಿ.ಓ ಆಫಿಸ್‌ದ ಎದುರುಗಡೆ ಹೋಗುತ್ತಿರುವಾಗ ಹಿಂದಿನಿAದ ಡಿಯೊ ಮೋಟರ ಸೈಕಲ ನಂ. ಕೆಎ ೩೨ ಇ.ಎಲ್ ೧೯೧೨ ನೇದ್ದರ ಸವಾರ ಮಹಮ್ಮದ ಮೊಬೀನ ತಂದೆ ಶೇಖ ಶಾಬೋದ್ದಿನ ಸಾಃ ಗಾಜೀಪೂರ ಅತ್ತರ ಕಂಪೌAಡ & ಎಮ್.ಎಸ್.ಕೆ ಮಿಲ್ ಕಲಬುರಗಿ ಈತನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಣ್ಣನ ಮೋಟರ ಸೈಕಲಗೆ ಅಪಘಾತ ಪಡಿಸಿದ್ದರಿಂದ ಅಣ್ಣನ ತಲೆಯ ಭಾಗಕ್ಕೆ ಭಾರಿರಕ್ತಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವ ಆಗಿ ಬೊಹೋಶ ಸ್ಧಿತಿಯಲ್ಲಿ ಉಪಚಾರ ಪಡೆಯುತ್ತಿರುವ ವಿಷಯದಲ್ಲಿ ದಿನಾಂಕ ೧೦/೦೯/೨೦೨೧ ರಂದು ತಮ್ಮ ಠಾಣೆಯ ತಾರಾಸಿಂಗ ಎ.ಎಸ್.ಐ ಕಡೆಗೆ ಒಂದು ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಮೇಲಿಂದ ತಮ್ಮ ಠಾಣೆಯಲ್ಲಿ ಗುನ್ನೆ ನಂ. ೧೯೧/೨೦೨೧ ಕಲಂ ೨೭೯, ೩೩೮ ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.  ಈಗ ಮುಂದುವರೆದು ಹೇಳುವುದೆನೆಂದರೆ, ಅಣ್ಣ ಶರಣಬಸಪ್ಪನು ಇದೆ ಗಾಯದ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಇರುವಾಗ ರಸ್ತೆ ಅಪಘಾತದಲ್ಲಿ ಆದ ಗಾಯದ ಬಾಧೆಯು ಗುಣಮುಖವಾಗದೆ ಇಂದು ದಿನಾಂಕ ೨೧/೦೯/೨೦೨೧ ರಂದು ಬೆಳಿಗ್ಗೆ ೧೦:೪೧ ಗಂಟೆ ಸುಮಾರಿಗೆ ಅಣ್ಣನು ಮೃತಪಟ್ಟಿರುತ್ತಾನೆ. ಈ ವಿಷಯದಲ್ಲಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಂಡು ಅಣ್ಣನ ಶವವನ್ನು ಅಂತ್ಯ ಸಂಸ್ಕಾರಕ್ಕಾಗಿ ಕೊಡಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 29-09-2021 11:50 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080