Feedback / Suggestions

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ 21-08-2022 ರಂದು 4:00 ಪಿ.ಎಮ್ ಕ್ಕೆ ಫಿರ್ಯಾದಿ ನಜೀರ ತಂದೆ ನಸೀರ ಶೇಖ ವ|| 30 ವರ್ಷ ಉ|| ಮನ್ನೂರ ಆಸ್ಪತ್ರೆಯ ಆಡಳಿತ ಅಧಿಕಾರಿ. ಜಾ|| ಮುಸ್ಲಿಂ ಸಾ|| ಮುಜಾಹೀರ ನಗರ ಹಾಗರಗಾ ರೋಡ ಕಲಬುರಗಿ ಮೊ.ನಂ 9986923630 ಇವರು ಠಾಣೆಗೆ ಹಾಜರಾಗಿ  ಕನ್ನಡದಲ್ಲಿ ಟೈಪ ಮಾಡಿದ ಒಂದು ಅರ್ಜಿ ಹಾಜರ ಪಡಿಸಿದ್ದು ಸದರಿ ಅರ್ಜಿ ದೂರು ಸಾರಾಂಶವೇನೆಂದರೆ ನಾನು ಮನ್ನೂರ ಆಸ್ಪತ್ರೆಯಲ್ಲಿ ಆಡಳಿತ ಅಧಿಕಾರಿ ಅಂತ ಕೆಲಸ ಮಾಡಿಕೊಂಡು ಇರುತ್ತೆನೆ. ನಿನ್ನೆ ದಿನಾಂಕ 20-08-2022 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಎ.ಎಸ್.ಎಮ್ ಆಸ್ಪತ್ರೆಯ 1) ಫಾಯಜ ಎ.ಎಸ್.ಮ ಆಸ್ಪತ್ರೆಯ ಮಾಲೀಕರು. 2) ಅಪ್ರೋಜ ಎ.ಎಸ್.ಮ ಆಸ್ಪತ್ರೆಯ ಮಾಲೀಕರು, 3) ಶೇಖ ಎ.ಎಸ್.ಮ ಆಸ್ಪತ್ರೆಯಲ್ಲಿ ಸ್ಟಾಪ ಈ 3 ಜನರು ಕೂಡಿ ನಮ್ಮ ಆಸ್ಪತ್ರೆಗೆ ಬರುವ ಪೆಸೆಂಟಗೆ ತಮ್ಮ ಆಸ್ಪತ್ರೆಗೆ ಜಬರದಸ್ತಿಯಿಂದ ಕರೆದುಕೊಂಡು ಹೋಗಿ ಸರಿಯಾದ ಚಿಕಿತ್ಸೆ ಮಾಡದೆ ಇರುವದರಿಂದ ಸದರಿ ಪೆಸೆಂಟ ಜನರಾದ 1) ಜಮಾಣಾ ಬಾಯಿ 2) ತಾರಾಬಾಯಿ 3) ಗಂಗಾಬಾಯಿ 4) ಅಕ್ಷತಾ 5) ಲಕ್ಷ್ಮೀಬಾಯಿ ಸಂಗಡ ಇನ್ನು ಕೆಲವು ಜನರು ಇದ್ದು ಅವರು ನಮಗೆ ಮನ್ನೂರ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಅಂತ ಅಂದರು ಸದರಿ ಅಂಬುಲೇನ್ಸ ಸಿಬ್ಬಂದಿ ಎ.ಎಸ್.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಅಂತ ನಮಗೆ ಹೇಳಿದರಿಂದ ಸದರಿ ಪೆಸೆಂಟ ಜನರಿಗೆ ನಾವು ನಮ್ಮ ಆಸ್ಪತ್ರೆಯಲ್ಲಿ ತಂದು ಉಪಚಾರ ಕುರಿತು ಸೇರಿಕೆ ಮಾಡಿದಾಗ ಎ.ಎಸ್.ಎಮ್ ಆಸ್ಪತ್ರೆಯ 1) ಫಾಯಜ ಎ.ಎಸ್.ಮ ಆಸ್ಪತ್ರೆಯ ಮಾಲೀಕರು. 2) ಅಪ್ರೋಜ ಎ.ಎಸ್.ಮ ಆಸ್ಪತ್ರೆಯ ಮಾಲೀಕರು, 3)ಶೇಖ ಎ.ಎಸ್.ಮ ಆಸ್ಪತ್ರೆಯಲ್ಲಿ ಸ್ಟಾಪ ಈ 3 ಜನರು ಕೂಡಿ ಬಂದವರಗೆ ನಮ್ಮ ಆಸ್ಪತ್ರೆಯಲ್ಲಿ ಆಕ್ರಮವಾಗಿ ಪ್ರವೇಶ ಮಾಡಿ ಒಳಗೆ ನುಗ್ಗಿ ಕ್ಯಾಸುಲಿಟಿಲ್ಲಿ ಮತ್ತು ಓ.ಪಿ.ಡಿ. ರೂಮದಲ್ಲಿ ಬಂದು ಇವರಲ್ಲಿ ಫಾಯಜ ಎ.ಎಸ್.ಮ ಆಸ್ಪತ್ರೆಯ ಮಾಲೀಕರು.ಎ ರಾಂಡಕೆ ಬಚ್ಚೆ ತುಮ ಹಮಾರೆ ಪೆಸೇಂಟಕೊ ತುಮ್ಮ ಕೈ ಕು ಲಾಕೆ ಟ್ರೆಟ ಮೇಂಟ ದೆರೆಯೆ ಹೈ ಅಂತ ಅವಾಚ್ಯ ಶಬ್ದಗಳಿಂದ ಬೈದು ನಮಗೆ ತಡೆದು ನಿಲ್ಲಿಸಿ ನನ್ನ ಕಾಲರ ಹಿಡಿಸು ಎಳೆದಾಡಿ ಕೈಯಿಂದ ಹೊಡೆದಿರುತ್ತಾನೆ. ಅಲ್ಲದೆ 2) ಅಪ್ರೋಜ ಎ.ಎಸ್.ಮ ಆಸ್ಪತ್ರೆಯ ಮಾಲೀಕರು, 3)ಶೇಖ ಎ.ಎಸ್.ಮ ಆಸ್ಪತ್ರೆಯಲ್ಲಿ ಸ್ಟಾಪ ಇವರು ಸಹ ನನಗೆ ಮತ್ತು ಖುತ್ದೋದ್ದಿನ್ ತಂದೆ ರಿಯಾಜೋದ್ದಿನ್ ಇವರಿಗು ಮತ್ತು ಮುಬಿನ ಅಹೇಮದ ತಂದೆ ಎಮ್.ಎ. ಬಸೀರ ಇವರಿಗು ಸಹ ಕೆಟ್ಟ ಭಾಷೆಯಲ್ಲಿ ಬೈದು ಎಳೆದಾಡಿರುತ್ತಾರೆ. ನಂತರ ಅಲ್ಲಿಂದ ಹೋಗುವಾಗ ನೀವು ನಮ್ಮ ಆಸ್ಪತ್ರೆಯ ಪೆಸೆಂಟಗಳಿಗೆ ನಿಮ್ಮ ಆಸ್ಪತ್ರೆಗೆ ತಂದು ಸೇರಿಕೆ ಮಾಡಿಕೊಂಡರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಗೆ ಹಾಕಿ ಹೋಗಿರುತ್ತಾರೆ. ಕಾರಣ ಈ ಮೇಲಿನ 3 ಜನರು ಕೂಡಿ ನಮ್ಮ ಆಸ್ಪತ್ರೆಯಲ್ಲಿ ಆಕ್ರಮವಾಗಿ ಪ್ರವೇಶ ಮಾಡಿ ಒಳಗೆ ನಗ್ಗಿ ನಮಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಜೀವದ ಬೆದರಿಗೆ ಹಾಕಿ ವೈದ್ಯಕಿಯ ನೇಮಾವಳಿ ಪಾಲನೆ ಮಾಡದೆ ಈ ರೀತಿ  ಮಾಡಿ ಹೋದ 3 ಜನರ ವಿರುದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು  ಮಾನ್ಯವರಲ್ಲಿ ವಿನಂತಿ ಅಂತ ಇತ್ಯಾದಿ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿ: ೨೦.೦೮.೨೦೨೨ ರಂದು ೧೩೦೦ ಗಂಟೆಗೆ ಆರೋಫಿತರು ಬಂದು ಜೆ.ಸಿ.ಪಿ ಯಿಂದ ಫೀರ್ಯಾದಿ ಮನೆಯ ಎದುರುಗಡೆ ಕಾರ ಪಾರ್ಕಿಂಗ ಸಲುವಾಗಿ ನಿಲ್ಲಿಸಿದ ಶೇಡ್ ತೆಗೆದುಹಾಕಿ ಅವಾಚ್ಯ ಶಬ್ದಗಳಿಂದ ಬೈದು  ನನಗೆ ತಡೆದು  ನಿಲ್ಲಿಸಿ ಕೈ ಹಿಡಿದು ಎಳೆದಾಡಿ ಜೀವ ಭಯ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 21-08-2022  ರಂದು ೦೬:೧೫ ಪಿಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಶಶಿಭೂಷಣ ತಂದೆ ನಿರಂಜಯ್ಯ ಸ್ವಾಮಿ ವಯ:೩೧ವರ್ಷ ಜಾ:ಜಂಗಮ ಉ:ಎಸ್.ಡಿ.ಎ ಜೆ.ಎಮ್.ಎಫ್.ಸಿ ಕೋರ್ಟ ಸಾ//ಚಿತಲಿ ತಾ:ಆಳಂದ ಹಾ.ವ ಮೈಸೂರು ಕೆ.ಜಿ ಕೊಪ್ಪಲ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಪಿರ್ಯಾದಿ ಅರ್ಜಿ ನೀಡಿದರ ಸಾರಾಂಶವೇನೆಂದರೆ ಹೀರೋ ಸ್ಲೆಂಡರ ಪ್ಲಸ್ ಮೋಟರ್ ಸೈಕಲ್ ನಂ MH-14-EZ-4033 ನನ್ನ ಮಾವನಾದ ಶಿವಾನಂದ ಶಾಂತಯ್ಯ ಮಠಪತಿ ಇವರ ಹೆಸರಿನಲ್ಲಿದ್ದು ಅದನ್ನು ನಾನೇ ನಡೆಸುತ್ತೇನೆ ದಿನಾಂಕ: ೨೦/೦೮/೨೦೨೨ ರಂದು ಮಧ್ಯಾಹ್ನ ೩:೦೦ ಗಂಟೆ ಸುಮಾರಿಗೆ ಸದರಿ ಮೋಟಾರ್ ಸೈಕಲನ್ನು ತೆಗೆದುಕೊಂಡು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ವಾಹನ ನಿಲ್ಲಿಸುವ ಸ್ಥಳದಲ್ಲಿ ನನ್ನ ಮೋಟಾರ ಸೈಕಲ ನಿಲ್ಲಿಸಿ ನನ್ನ ಕೆಲಸದ ನಿಮಿತ್ಯ ಒಳಗಡೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಮದ್ಯಾಹ್ನ ೪:೦೦ ಗಂಟೆ ಸುಮಾರಿಗೆ ಮರಳಿ ಮೊಟಾರ ಸೈಕಲ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ ಇರಲಿಲ್ಲಾ, ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ ಸೈಕಲ ಸಿಕ್ಕಿರುವುದಿಲ್ಲ ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:21.08.2022 ರಂದು 5.30 ಪಿಎಮ್ ಗಂಟೆಗೆ ನಮ್ಮ ಠಾಣೆಯ ಧರ್ಮಣ್ಣಾ ಸಿಹೆಚ್ಸಿ 219 ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆ, 4 ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಹಾಜರಪಡಿಸಿದರ ಸಾರಾಂಶವೇನೆಂದರೆ, ಇಂದು ದಿನಾಂಕ:21.08.2022 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಇಟಗಾ (ಕೆ) ಸೀಮಾಂತರದ ಹೊಲಗಳಿಗೆ ಹೋಗುವ ರಸ್ತೆ ಪಕ್ಕಕ್ಕೆ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಮ್ಮ ಠಾಣಾ ಸಿಬ್ಬಂದಿ ಜನರಾದ ತಿರುಪತಿ ಸಿಪಿಸಿ 291 , ಸಾಜೀದ ಸಿಪಿಸಿ , ಆನಂದ ಸಿಪಿಸಿ  ರವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ನಂತರ ನಮ್ಮ ಪಿಐ ಸಾಹೇಬರಿಗೆ ಹಾಗೂ ಮಾನ್ಯ ಎಸಿಪಿ ಸಾಹೇಬರು ಸಬ್ ಅರ್ಬನ್ ಉಪವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಜನರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಮದ್ಯಾಹ್ನ 3.15 ಗಂಟೆಗೆ ಹೊರಟ್ಟು, ಭಾತ್ಮಿ ಸ್ಥಳಕ್ಕೆ ಹೊರಡುವಾಗ ಮಾರ್ಗಮಧ್ಯೆ ದಾರಿ ಹೊಕ್ಕ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಅವರಿಗೂ ಭಾತ್ಮಿ ಬಂದ ವಿಷಯ ತಿಳಿಸಿ ಅವರು ನಮ್ಮೊಂದಿಗೆ ದಾಳಿ ಕಾಲಕ್ಕೆ ಹಾಜರಿರಲು ಒಪ್ಪಿದ ಮೇರೆಗೆ ಅವರನ್ನು ನಮ್ಮೊಂದಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೊರಟು ಭಾತ್ಮೀ ಸ್ಥಳದ ಹತ್ತಿರ ಮದ್ಯಾಹ್ನ 3.30 ಗಂಟೆಗೆ ಗಿಡಗಳ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಕೆಲವು ಜನರು ದುಂಡಾಗಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಮದ್ಯಾಹ್ನ 3.35 ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ ಕೆಲವು ಜನರು ಓಡಿ ಹೋಗಿದ್ದು ಇನ್ನು ಕೆಲವು ಜನರಿಗೆ ಸಿಕ್ಕಿದ್ದು ಸಿಕ್ಕಿದ ಜನರಿಗೆ ಹಿಡಿದು ಅವರಿಗೆ ಅಂಗಶೋಧ ಮಾಡಿ ಹೆಸರು ವಿಳಾಸ ಕೇಳಲು 1) ನಾಗರಾಜ ತಂದೆ ಶಿವಾಜಿ ಪಟ್ಟೇದಾರ ವಯ:26 ವರ್ಷ ಉ: ಗೌಂಡಿಕೆಲಸ ಜಾತಿ: ಎಸ್ ಸಿ ಸಾ: ಅಂಬೇಡ್ಕರ ನಗರ ಸಿರನೂರ 2) ಶರಣು ತಂದೆ ಲಕ್ಷ್ಮಣ ಕೆರಮಗಿ ವಯ:28 ವರ್ಷ ಉ:ಚಾಲಕ ಕೆಲಸ ಜಾತಿ: ಭೋವಿ ಸಾ: ಸಿರನೂರ 3) ಶಿವಾನಂದ ತಂದೆ ಶಿವಪ್ಪಾ ನಾಟೀಕಾರ ವಯ:47 ವರ್ಷ ಜಾತಿ: ಕಬ್ಬಲಿಗಾ ಉ: ಖಾಸಗಿ ಕೆಲಸ ಸಾ: ಕೋಟನೂರ (ಡಿ) 4) ವೀರಣ್ಣಾ ತಂದೆ ಗುರುಪಾದಪ್ಪಾ ಹೆಬ್ಬಾಳ ವಯ:40 ವರ್ಷ ಉ: ಕೂಲಿಕೆಲಸ ಜಾತಿ: ಲಿಂಗಾಯಿತ ಸಾ: ಇಟಗಾ (ಕೆ) ಅಂತಾ ತಿಳಿಸಿದ್ದು, ಸದರಿ ಸ್ಥಳದಲ್ಲಿ 52 ಇಸ್ಪೇಟ ಎಲೆಗಳು ಹಾಗೂ ನಗದು ಹಣ 2450/- ರೂ. ಸಿಕ್ಕಿದ್ದು ಇವುಗಳನ್ನು ಪಂಚರ ಸಮಕ್ಷಮದಲ್ಲಿ 3.40 ಪಿಎಮ್ ಗಂಟೆಯಿಂದ 4.40 ಪಿಎಮ್ ಗಂಟೆಯವರೆಗೆ ಗುನ್ನೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆಯನ್ನು ಬರೆದು ಮುಗಿಸಲಾಯಿತು. ನಂತರ ಮುದ್ದೇಮಾಲು ಮತ್ತು ಆರೋಪಿತರೊಂದಿಗೆ 5.30 ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊರಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :-  ದಿನಾಂಕ ೨೦.೦೮.೨೦೨೨ ರಂದು ರಾತ್ರಿ ೮:೦೦ ಗಂಟೆಯಿಂ ದ ದಿನಾಂಕ ೨೧.೦೮.೨೦೨೨ ರಂದು ಬೆಳಿಗ್ಗೆ ೮:೩೦ ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಫೀರ್ಯಾದಿಯ ಮನೆಯ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಇದ್ದ ೧) ೧೫ ಗ್ರಾಂ ಬಂಗಾರದ ಸುತ್ತುಂಗುರ ಅ.ಕಿ-೭೫,೦೦೦/-ರೂ, ೨) ೧೫ ಗ್ರಾಂ ಬಂಗಾರದ ಸುತ್ತುಂಗುರ ಅ.ಕಿ-೭೫,೦೦೦/-ರೂ, ೩) ೧೦ ಗ್ರಾಂ ಬಂಗಾರದ ಸುತ್ತುಂಗುರ ಅ.ಕಿ-೦,೦೦೦/-ರೂ, ೪) ೫ ಗ್ರಾಂ ಬಂಗಾರದ ಸುತ್ತುಂಗುರ ಅ.ಕಿ-೫,೦೦೦/-ರೂ, ೫) ೨.೫ ಗ್ರಾಂ ಬಂಗಾರದ ಸುತ್ತುಂಗುರ ಅ.ಕಿ-೧೨,೨೫೦/-ರೂ, ೬) ೨ ಗ್ರಾಂ ಬಂಗಾರದ ಸುತ್ತುಂಗುರ ಅ.ಕಿ-೧೦,೦೦೦/-ರೂ, ೭) ೧ ಗ್ರಾಂ ಬಂಗಾರದ ಸುತ್ತುಂಗುರ ಅ.ಕಿ-೫,೦೦೦/-ರೂ, ೮) ೭.೫ ಗ್ರಾಂ ಬಂಗಾರದ ಹಸಿರು ಹರಳಿನ ಉಂಗುರ ಅ.ಕಿ-೩೭,೫೦೦/-ರೂ, ೯) ೫ ಗ್ರಾಂ ಬಂಗಾರದ ಜುಮಕಿ ಅ.ಕಿ-೨೫,೦೦೦/-ರೂ, ೧೦) ೧೫ ಗ್ರಾಂ ಬಂಗಾರದ ಸಣ್ಣ ಗುಂಡುಗಳು ಇರುವ ತಾಳಿ ಸರ ಅ.ಕಿ-೭೫,೦೦೦/-ರೂ, ೧೧) ೨೦ ಗ್ರಾಂ ಬಂಗಾರದ ಬ್ರಾಸಲೇಟ್ ಅ.ಕಿ-೧,೦೦,೦೦೦/-ರೂ, ೧೨) ೮೦ ಗ್ರಾಂ ಬೆಳ್ಳಿ ಉಡದಾರ ಅ.ಕಿ-೪,೦೦೦/-ರೂ ಹೀಗೆ ಒಟ್ಟು ೯೮ ಗ್ರಾಂ ಬಂಗಾರದ ಸಾಮಾನುಗಳು ಮತ್ತು ೮೦ ಗ್ರಾಂ ಬೆಳ್ಳಿ ಉಡದಾರ ಎಲ್ಲಾ ಸೇರಿ ಅಂದಾಜು ಕಿಮ್ಮತ್ತು ೪,೯೩,೭೫೦/-ರೂ. ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ

Last Updated: 02-09-2022 04:58 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080