ಅಭಿಪ್ರಾಯ / ಸಲಹೆಗಳು

ಸಂಚಾರಿ-೦೨ ಪೊಲೀಸ ಠಾಣೆ :- ದಿನಾಂಕ 21-06-2022  ರಂದು ರಾತ್ರಿ  ೧೦:೧೫ ಗಂಟೆಗೆ ಶ್ರೀ. ಶಿವಲಿಂಗಯ್ಯ ತಂದೆ ಮುರಗಯ್ಯ ಮಠ ವಯಃ ೬೨ ವರ್ಷ ಜಾತಿಃ ಜಂಗಮ ಉಃ ಒಕ್ಕಲುತನ ಸಾಃ ಪಟ್ಟಣ ತಾ.ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೆನೆಂದರೆ, ನಾನು ಮೇಲಿನ ವಿಳಾಸದವನಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಉಪಜೀವನ ಮಾಡಿಕೊಂಡಿರುತ್ತೆನೆ. ನನಗೆ ಪಾರ್ವತಿ ಎಂಬ ಹೆಂಡತಿ ಇದ್ದು, ನಮಗೆ ಐದು ಜನ ಹೆಣ್ಣು ಮಕ್ಕಳು ಮತ್ತು ಮೂರು ಜನ ಗಂಡು ಮಕ್ಕಳಿರುತ್ತಾರೆ. ನನ್ನ ಮಗ ಶ್ರೀಶೈಲ ಈತನ ಹೆಸರಿನಿಂದ ಮಹಿಂದ್ರಾ ಪಿಕಪ ವಾಹನ ನಂ. ಕೆಎ ೩೨ ಎಎ ೧೭೬೨ ಇರುತ್ತದೆ. ಹೀಗಿದ್ದು, ಇಂದು ದಿನಾಂಕ ೨೧/೦೬/೨೦೨೨ ರಂದು ನನ್ನ ಮಗ ಮಲ್ಲಿಕಾರ್ಜುನ ಮತ್ತು ವೀರಯ್ಯ ಇಬ್ಬರೂ ಕೂಡಿಕೊಂಡು ಈ ವಾಹನವನ್ನು ತೆಗೆದುಕೊಂಡು ಕಲಬುರಗಿಗೆ ಹೋಗಿ ಕೂಲಡ್ರಿಂಗ್ಸಗೆ ಸಂಬಂಧಪಟ್ಟ ತಂಪು ಪಾನಿಯಗಳನ್ನು ತರುವ ಕುರಿತು ಹೋಗುವಾಗ ಮಗ ವೀರಯ್ಯ ಈತನೆ ನಡೆಯಿಸಿಕೊಂಡು ಹೋದನು. ರಾತ್ರಿ ೭:೩೦ ಗಂಟೆ ಸುಮಾರಿಗೆ ನಮ್ಮೂರಿನ ನಾಗೆಂದ್ರಪ್ಪಾ ಪರಸ್ತಿ, ರಾಚಣ್ಣ ತಾಳಿಕೊಟಿ ಇವರು ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಆಳಂದ ರೋಡಿನ ಕೆರೆಭೋಸಗಾ ಕ್ರಾಸಿನ ಸಮೀಪ ಅಭಿ ವ್ಯಾಲಿ ಸಮೀಪ ನಿಮ್ಮ ಮಹಿಂದ್ರಾ ಪಿಕಪ ವಾಹನ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತವಾಗಿ ರೋಡಿನ ಬದಿಗೆ ಬಿದ್ದಿರುತ್ತವೆ ಅಂತಾ ತಿಳಿಸಿದಕ್ಕೆ, ನಾನು ಗಾಬರಿಗೊಂಡು ನನ್ನ ಮಗ ಶ್ರೀಶೈಲ ಈತನೊಂದಿಗೆ ಸ್ಧಳಕ್ಕೆ ಬಂದು ನೋಡಲಾಗಿ ಮರ ವೀರಯ್ಯ ಈತನ ತಲೆಯಭಾಗಕ್ಕೆ ಮತ್ತು ಕಾಲಿನ ಭಾಗಕ್ಕೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಮಗ ಮಲ್ಲಿಕಾರ್ಜುನನ ತಲೆಯ ಬಲಭಾಗಕ್ಕೆ ಭಾರಿ ಪ್ರಮಾಣದ ಗಾಯವಾಗಿ ಒಳಗಿನ ಮೌಂಸಖಂಡ ಹೊರಬಂದು ಭಾರಿ ರಕ್ತಸ್ರಾವ ಆಗಿ ಸ್ಧಳದಲ್ಲಿ ಮೃತ ಪಟ್ಟಿದ್ದು, ಅಲ್ಲಿಯೇ ಇರುವ ನಾಗೆಂದ್ರಪ್ಪಾ ಮತ್ತು ರಾಚಣ್ಣನಿಗೆ ಹಾಗು ಮಗ ವೀರಯ್ಯನಿಗೆ ವಿಚಾರಿಸಲು ತಿಳಿಸಿದ್ದೆನೆಂದರೆ, ಈಗ ರಾತ್ರಿ ೭:೧೫ ಗಂಟೆ ಸುಮಾರಿಗೆ ತಾವು ಕಲಬುರಗಿಯಿಂದ ತಂಪು ಪಾನಿಯಗಳನ್ನು ಪಿಕಪವಾಹನದಲ್ಲಿ ಹಾಕಿಕೊಂಡು ಊರ ಕಡೆಗೆ ಬರುವಾಗ ತಾನೆ ವಾಹನವನ್ನು ನಡೆಯಿಸಿಕೊಂಡು ಬರುತ್ತಿದ್ದು, ಅದೆ ವೇಳೆಗೆ ಆಳಂದ ರೋಡಿನ ಕಡೆಯಿಂದ ಈ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ ೩೨ ಎಫ್ ೧೫೪೯ ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನ ಮಧ್ಯದ ಭಾಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ವಾಹನವು ರೋಡಿನ ಬದಿಗೆ ಬಿದ್ದಿದ್ದರಿಂದ ಈ ಘಟನೆ ಜರುಗಿರುತ್ತದೆ ಅಂತಾ ತಿಳಿಸಿದ್ದು ಅಲ್ಲಿಯೇ ಇರುವ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ಬಸವರಾಜ ತಂದೆ ಶರಣಪ್ಪಾ ಕಲಶೇಟ್ಟಿ ಆಳಂದ ಡಿಪೊ ಅಂತಾ ತಿಳಿಸಿದ್ದು, ಕಂಡಕ್ಟರ ಅಂಬಾರಾಯ ಮದಗುಣಕಿ ಅಂತಾ ಗೊತ್ತಾಯಿತು. ಮುಂದೆ ಮಗ ವೀರಯ್ಯನಿಗೆ ಒಂದು ಖಾಸಗಿ ಅಂಬುಲೇನ್ಸದಲ್ಲಿ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆ ಕಡೆಗೆ ಕಳುಹಿಸಿದ್ದು, ಹಾಗು ಇನ್ನೊಂದು ಯಾವುದೋ ಖಾಸಗಿ ಅಂಬುಲೇನ್ಸದಲ್ಲಿ ಮಗ ಮಲ್ಲಿಕಾರ್ಜುನನಿಗೆ ಕಲಬುರಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತೆವೆ. ಕಾರಣ ಈ ವಿಷಯದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಸಂಚಾರಿ ಪೊಲೀಸ್ ಠಾಣೆ-೨ :- ದಿನಾಂಕ 21-06-2022 ರಂದು ಸಾಯಂಕಾಲ ೬:೪೫ ಗಂಟೆಗೆ ಶ್ರೀ ಶಿವಶಂಕರ ತಂದೆ ಕರಬಸಪ್ಪಾ ಕುಂಬಾರ ವಯಃ ೩೪ ವರ್ಷ ಜಾತಿಃ ಕುಂಬಾರ ಉಃ ಟಂಟಂ ಚಾಲಕ ಸಾಃ ಸಿರನೂರ ತಾ.ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಹೇಳಿಕೆ ನೀಡಿದ್ದು ಸಾರಂಶವೆನೆಂದರೆ, ನಾನು ಮೇಲಿನ ವಿಳಾಸದವನಿದ್ದು, ಸ್ವಂತ ಟಂಟಂ ಅಟೋವನ್ನು ಇಟ್ಟಿಕೊಂಡು ಬಾಡಿಗೆಯಿಂದ ಹೊಡೆದುಕೊಂಡು ಉಪಜೀವನ ಮಾಡಿಕೊಂಡಿರುತ್ತೆನೆ. ನಮ್ಮ ಕಾಕನ ಹೆಂಡತಿಯಾದ ಅಂಬವ್ವ ಗಂಡ ಶಿವಲಿಂಗಪ್ಪಾ ಕುಂಬಾರ ವಯಃ ೫೯ ವರ್ಷ ಇವರಿದ್ದು ಇವರು ಅಂಬಾಭವಾನಿ ದೇವರ ಜೋಗ ಮಾಡಿಕೊಂಡಿದ್ದಳು, ನಮ್ಮ ಕಾಕ ಶಿವಲಿಂಗಪ್ಪಾ ತೀರಿಕೊಂಡಿದ್ದು, ಅವರಿಗೆ ಮಕ್ಕಳು ಆಗದೆ ಇರುವುದರಿಂದ ಅವಳು ನನ್ನ ಹತ್ತಿರವೆ ವಾಸವಾಗಿದ್ದಳು. ಹೀಗಿದ್ದು, ಇಂದು ದಿನಾಂಕ ೨೧/೦೬/೨೦೨೨ ರಂದು ಸಣ್ಣಮ್ಮ ಅಂಬವ್ವ ಇವಳು ಅಂಬಾಭವಾನಿ ಜೋಗಕ್ಕಾಗಿ ಕಲಬುರಗಿಗೆ ಹೋಗಿ ಬರುತ್ತೆನೆಂದು ಹೋಗಿದ್ದು, ಮುಂದೆ ೫:೧೦ ಗಂಟೆ ಸುಮಾರಿಗೆ ನಮ್ಮೂರಿನ ಮಹೇಶ ಪೊಲೀಸ್ ಪಾಟೀಲ, ಯಮನಯ್ಯ ಕಲಾನ ಇವರು ಕಲಬುರಗಿ ನಗರದ ರಾಮ ಮಂದಿರ ಸರ್ಕಲದ ಹತ್ತೀರದಿಂದ ಫೋನ್ ಮಾಡಿ, ಈಗ ತಾನೆ ೫:೦೦ ಗಂಟೆ ಸುಮಾರಿಗೆ ನಿಮ್ಮ ಚಿಕ್ಕಮ್ಮ ಅಂಬವ್ವಳಿಗೆ ಒಂದು ಲಾರಿ ಅವಳ ದೇಹದ ಮೇಲೆ ಹೋಗಿ ಭಾರಿಗಾಯಗೊಂಡು ಸ್ಧಳದಲ್ಲಿ ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿದಕ್ಕೆ, ನಾನು ಕಲಬುರಗಿಯಲ್ಲಿರುವುದರಿಂದ ಗಾಬರಿಗೊಂಡು ಕೆಲವೆ ನಿಮಿಷದಲ್ಲಿ ಸ್ಧಳಕ್ಕೆ ಹೋಗಿ ನೋಡಲಾಗಿ ನಮ್ಮ ಚಿಕ್ಕಮ್ಮ ಅಂಬವ್ವ ಇವಳ ಟೊಂಕದ ಕೆಳಭಾಗದಿಂದ ಪಾದದವರೆಗೆ ಭಾರಿ ಪ್ರಮಾಣದ ರಕ್ತಗಾಯವಾಗಿ, ಮೌಂಸಖಂಡ ಹೊರಬಂದು ಮುಖಕ್ಕು ಮತ್ತು ಕೈಗೆ ಕೂಡಾ ಭಾರಿಗಾಯವಾಗಿ ಮೃತ ಪಟ್ಟಿದಳು. ಅಲ್ಲಿಯೇ ಸ್ಧಳದಲ್ಲಿಯೇ ಅಪಘಾತ ಪಡಿಸಿದ ಲಾರಿ ನಂ. ಕೆಎ ೫೬-೩೦೪೪ ನೇದ್ದರ ಹಿಂದಿನ ಟೈರಿಗೆ ರಕ್ತವಾಗಿ ಅಲ್ಲಿಯೇ ನಿಂತಿದ್ದು, ಅಲ್ಲಿಯೇ ಇರುವ ಮಹೇಶ ಮತ್ತು ಯಮನಯ್ಯ ಇವರಿಗೆ ವಿಚಾರಿಸಲು ತಿಳಿಸಿದ್ದೆನೆಂದರೆ, ಈಗ ತಾನೆ ೫:೦೦ ಗಂಟೆ ಸುಮಾರಿಗೆ ಅಂಬವ್ವ ಇವಳು ರಾಮ ಮಂದಿರ ಸರ್ಕಲದ ಮರಗಮ್ಮನ ಗುಡಿಯ ಮೂಲಿಯ ರಿಂಗರೋಡಿನ ಮೇಲೆ ನಡೆದುಕೊಂಡು ಬರುವಾಗ ಅದೆ ವೇಳೆಗೆ ಈ ಲಾರಿ ನಂ. ಕೆಎ ೫೬-೩೦೪೪ ನೇದ್ದರ ಚಾಲಕ ನಾಗನಹಳ್ಳಿ ರಿಂಗರೋಡ ಕಡೆಯಿಂದ ರಾಮ ಮಂದಿರ ಸರ್ಕಲ ಮುಖಾಂತರವಾಗಿ ಜೇವರ್ಗಿ ರೋಡಿನ ಕಡೆಗೆ ಹೋಗಬೇಕೆಂದು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಲಾರಿ ಜೇರ‍್ಗಿ ರೋಡಿನ ಕಡೆಗೆ ತಿರುಗುಸಿದಾಗ ಸೈಡಿನಿಂದ ಹೋಗುತ್ತಿರುವ ಅಂಬವ್ವ ಇವಳು ಲಾರಿಯ ಹಿಂದಿನ ಟೈರಿಗೆ ಸಿಲುಕಿದ್ದರಿಂದ ಅವಳ ಟೊಂಕದ ಭಾಗದಿಂದ ಪಾದದ ವರೆಗೆ ಟೈರ ಎಳೆದುಕೊಂಡು ಮುಂದಕ್ಕೆ ಬಂದು ಮೇಲಿನಂದ ಹಾಯ್ದು ಬಂದಿದ್ದರಿಂದ ಈ ಘಟನೆ ಜರುಗಿರುತ್ತದೆ ಅಂತಾ ತಿಳಿಸಿದರು. ಅಲ್ಲಿಯೇ ನಿಂತಿರುವ ಲಾರಿಯ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ರಾಮಲಿಂಗ ತಂದೆ ಮಾಧುರಾಯ ಮುಕ್ಕಾಃ ಬೊರಂಪಳ್ಳಿ ತಾಃ ಹುಮ್ನಾಬಾದ ಅಂತಾ ತಿಳಿಸಿದನು. ಮುಂದೆ ಚಿಕ್ಕಮ್ಮಳಿಗೆ ಯಾವುದೋ ಖಾಸಗಿ ಅಂಬುಲೇನ್ಸದಲ್ಲಿ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ತಂದಿರುತ್ತೆವೆ. ಕಾರಣ ಲಾರಿ ನಂ. ಕೆಎ ೫೬-೩೦೪೪ ನೇದ್ದರ ಚಾಲಕ ರಾಮಲಿಂಗ ತಂದೆ ಮಾಧುರಾಯ ಈತನು ತನ್ನ ವಶದಲ್ಲಿದ್ದ ಲಾರಿಯನ್ನು ಭಾರಿ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಒಮ್ಮೇಲೆ ಜೇವರ್ಗಿ ರೋಡಿನ ಕಡೆಗೆ ತಿರುಗಿಸಿದ್ದಕ್ಕೆ ಈ ಘಟನೆ ಜರುಗಿದ್ದು, ಘಟನೆಗೆ ಕಾರಣಿಭೂತನಾಗಿರುವುದರಿಂದ ಆತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ವಿಶ್ವವಿದ್ಯಾಲಯ ಪೊಲೀಸ ಠಾಣೆ  :-  ದಿನಾಂಕ 21-06-2022  ರಂದು ೪.೦೭ ಪಿ.ಎಮ್ ಕ್ಕೆ ವಿವಿ ಪುರಂ ಪೊಲೀಸ ಠಾಣೆ ಬೆಂಗಳೂರು ರವರಿಂದ ಫಿರ್ಯಾದಿ ಶ್ರೀ ಭೀಮರಾವ್ ಬಿನ್ ಲೇಟ್ ಭೀಮಣ್ಣ ವಯಸ್ಸು ೫೭ ವರ್ಷ ಸಾ: ಆಲೂರು ಗ್ರಾಮ ಮತ್ತು ಅಂಚೆ ಯಡ್ರಾಮಿ (ತಾ). ಗುಲ್ಬರ್ಗ ಜಿಲ್ಲೆ. ಕೆಲಸ:- ಶಿಲ್ಪಿ ಕೆತ್ತನೆ ಜಾತಿ:- ಕಬ್ಬಲಿಗ. ಮೊಬೈಲ್ ನಂ-೯೯೪೫೦೫೬೯೬೨ ಇವರು ಲಿಖಿತ ದೂರು ಹಾಜರುಪಡಿಸಿದ್ದನ್ನು ಸ್ಕ್ಯಾನ ಮಾಡಿ ಈ ಮೇಲ ಮೂಲಕ ವಿಶ್ವವಿದ್ಯಾಲಯ ಪೊಲೀಸ ಠಾಣೆಗೆ ವಸೂಲಾಗಿದ್ದು ಅದನ್ನು ಠಾಣೆಯಲ್ಲಿ ಪ್ರಿಂಟ ತೆಗೆದು ನೋಡಿದ್ದು, ಅದನ್ನು ನಮ್ಮ ಹದ್ದಿಯಲ್ಲಿ ಬರುವುದರಿಂದ ಸದರಿ ಲಿಖಿತ ದೂರಿನ ಸಾರಾಂಶ ಏನಂದರೆ,  ನಾನು ಈ ಮೇಲ್ಕಂಡ ವಿಳಾಸದಲ್ಲಿ ಸಂಸಾರ ಸಮೇತ ವಾಸವಿದ್ದು. ಮೂರ್ತಿ ಕೆತ್ತನೆ ಕೆಲಸ ಮಾಡಿಕೊಂಡಿರುತ್ತೇನೆ. ನನ್ನ ಹೆಂಡತಿಯಾದ ಶ್ರೀಮತಿ ಮೀನಾಕ್ಷಿರವರು ಗೃಹಿಣಿಯಾಗಿರುತ್ತಾರೆ. ನಾನು ಸುಮಾರು ೨೫ ವರ್ಷಗಳ ಹಿಂದೆ ಉದ್ಯೋಗ ಹರಸಿ ತುಮಕೂರು ಜಿಲ್ಲೆಯ ಡಾಬಸ್‌ಪೇಟೆಗೆ ಬಂದಿದ್ದು ಅಲ್ಲಿಯೇ ಇರುತ್ತೇನೆ. ಆಗಾಗ ನನ್ನ ಸ್ವಂತ ಊರಿಗೆ ಹೋಗಿ ಬರುತ್ತಿರುತ್ತೇನೆ.

  ನಮಗೆ ಮೂರು ಜನ ಮಕ್ಕಳಿದ್ದು ಅದರಲ್ಲಿ ಮಗಳಾದ ಶಿವಲೀಲಾ ಮೊದಲನೆಯ ಮಗಳಾಗಿದ್ದು ಈಕೆಗೆ ಮದುವೆ ಮಾಡಿದ್ದು ಆಕೆಯ ಸಂಸಾರದೊಂದಿಗೆ ಬೇರೆಯಾಗಿ ವಾಸವಿರುತ್ತಾಳೆ. ೨ನೇ ಮಗನಾದ ನಾಗರಾಜ ಈತನು ಡಾಬಸ್‌ಪೇಟೆಯಲ್ಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ೩ನೇ ಮಗನಾದ ಮುತ್ತುರಾಜು ಈತನು ಪಿ.ಯು.ಸಿ ಓದಿದ್ದು ಅದರಲ್ಲಿ ಅನುತ್ತೀರ್ಣನಾದ ಕಾರಣ ಆತನು ಡಾಬಸ್‌ಪೇಟೆಯಲ್ಲಿರುವ ಎಲ್.ಎನ್.ಟಿಯಲ್ಲಿ ಫೈನಾನ್ಸ್ ವ್ಯವಹಾರ ಮಾಡಿಕೊಂಡಿರುತ್ತಾನೆ. ಆದರೆ ೨೦೨೦-೨೦೨೧ನೇ ಸಾಲಿನಲ್ಲಿ ಕೊರೊನಾ ಬಂದ ಕಾರಣ ನನ್ನ ಸಂಸಾರದೊಂದಿಗೆ ನನ್ನ ಸ್ವಂತ ಊರಿಗೆ ಹೋಗಿದ್ದು ಆಗಾಗ ಡಾಬಸ್‌ಪೇಟೆಗೆ ನಮ್ಮ ಊರಿನಿಂದ ಹೋಗಿ ಬಂದು ಮಾಡುತ್ತಿದ್ದು ನನ್ನ ಹೆಂಡತಿಯು ಈಗ್ಗೆ ೨ ತಿಂಗಳ ಹಿಂದೆ ನನ್ನ ಹಿರಿಯ ಮಗ ನಾಗರಾಜನೊಂದಿಗೆ ಡಾಬಸ್‌ಪೇಟೆಗೆ ಬಂದಿದ್ದು ಅಲ್ಲಿಯೇ ಇರುತ್ತಾರೆ. ಆದರೆ ನಾನು ಮತ್ತು ನನ್ನ ಮಗ ನಮ್ಮ ಊರಿನಲ್ಲಿಯೇ ಇರುತ್ತೇವೆ. ಅಲ್ಲಿ ನನ್ನ ಮಗ ಮುತ್ತುರಾಜು ಜೆವರ್ಗಿಯಲ್ಲಿರುವ ಬಜಾಜ್ ಫೈನಾನ್ಸ್ಗೆ ಈಗ್ಗೆ ೧ ತಿಂಗಳಿನಿಂದ ಕೆಲಸಕ್ಕೆ ಹೋಗುತ್ತಿದ್ದನು.ದಿನಾಂಕ-೦೫/೦೬/೨೦೨೨ ರಂದು ಮದ್ಯಾಹ್ನ ಸುಮಾರು ೦೨-೦೦ ಗಂಟೆಯ ಸಮಯದಲ್ಲಿ ನನ್ನ ಮಗ ಮುತ್ತುರಾಜು ನನಗೆ ಕರೆ ಮಾಡಿ ಈ ದಿನ ನನಗೆ ವಾಂತಿ ಆಗಿದ್ದು ದಾವಖಾನೆಗೆ ಅಡ್ಮಿಟ್ ಆಗಿದ್ದು ಅಲ್ಲಿ ನಾಲ್ಕು ಸಾವಿರ. ೪೦೦೦/ರೂ ಆಗಿದೆ ಹಣ ಕಳಿಸು ಎಂದು ಹೇಳಿದ ಆಗ ನಾನು ಹಣವನ್ನು ಆತನ ಮೊಬೈಲ್ ನಂ-     ಪೋನ್‌ಪೇ ಮಾಡಿದೆ. ನಂತರ ನಾನು ಆ ದಿನ ರಾತ್ರಿ ಸುಮಾರು ೦೮-೩೦ ಗಂಟೆಗೆ ಮನೆಗೆ ಬಂದಾಗ ಆತನು ಮಲಗಿದ್ದ ಆ ದಿನ ಬೆಳಿಗ್ಗೆ ವರೆಗೂ ಆತನು ವಾಂತಿ ಮಾಡುತ್ತಿದ್ದರಿಂದ ದಿನಾಂಕ ೦೬-೦೬/೨೦೨೨ ರಂದು ಯಡ್ರಾಮಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪುನಃ ಮನೆಗೆ ಕರೆದುಕೊಂಡು ಬಂದಿದ್ದು ಆಗ ನಾನು ಏಕೆ ನಿನಗೆ ವಾಂತಿ ಆಗುತ್ತಿದೆ ಎಂದು ಕೇಳಿದಾಗ ನನಗೆ ನಿಮ್ಮ ಅಕ್ಕನ ಮಗಳಾದ ಭಾಗ್ಯಶ್ರೀಯು ನನಗೆ ಬುದ್ದ ವಿಹಾರದಲ್ಲಿ  ಝೀರಾ ಕೊಟ್ಟಿದ್ದು ಅದನ್ನು ಕುಡಿದ ನಂತರ ನನಗೆ ಈ ರೀತಿ ವಾಂತಿ ಆಗುತ್ತಿದೆ ಎಂದು ಹೇಳಿದನು. ಆಗ ನಾನು ಅವನಿಗೆ ಏಳನೀರು ಕುಡಿಸಿರುತ್ತೇನೆ. ಆದರೆ ದಿನಾಂಕ-೦೭/೦೬/೨೦೨೨ ರಂದು ಆತನ ಬಾಯಿ ಊದಿಕೊಂಡಿದ್ದು ಪುನಃ ವಾಂತಿ ಮಾಡಿಕೊಂಡನು. ಆಗ ನಾನು ನನ್ನ ಮಗನನ್ನು ಪುನಃ ಯಡ್ರಾಮಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಅಲ್ಲಿ ಗುಣಮುಖನಾಗದ ಕಾರಣ ಆತನನ್ನ ಗುಲ್ಬರ್ಗಾದಲ್ಲಿರುವ ಆನಂದ ಪ್ರಶಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು ಅಂದಿನಿಂದ ನನ್ನ ಮಗನ ಮಾತು ಕತೆ ನಿಂತು ಹೋಗಿತ್ತು. ಈ ಬಗ್ಗೆ ಅಲ್ಲಿ ೨ ದಿನ ಚಿಕಿತ್ಸೆ ಕೊಡಿಸಿದ್ದು ಅಲ್ಲಿ ನನಗೆ ಆತನನ್ನು ಒಬ್ಬನೇ ನೋಡಿಕೊಳ್ಳಲು ಆಗದ ಕಾರಣ ದಿನಾಂಕ-೦೯/೦೬/೨೦೨೨ ರಂದು ರಾತ್ರಿ ಸುಮಾರು ೦೫-೦೦ ಗಂಟೆಗೆ  ಡಿಸ್ಚಾರ್ಜ್ ಮಾಡಿಸಿಕೊಂಡು ತುಮಕೂರಿನಲ್ಲಿರುವ ಕೆ.ನರಸಿಂಹಯ್ಯ ಆಸ್ಪತ್ರೆಗೆ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದ್ದೇನು. ಅಲ್ಲಿ ಮೂರು ದಿನ ಚಿಕಿತ್ಸೆ ಕೊಡಿಸಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಎಂದು ತಿಳಿಸಿರುತ್ತಾರೆ. ಅದರಂತೆ ನಾನು ದಿನಾಂಕ-೧೪/೦೬/೨೦೨೨ ರಂದು ನನ್ನ ಮಗನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಅಂದಿನಿಂದ ನನ್ನ ಮಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಆತನ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣುತ್ತಿರಲಿಲ್ಲ. ಆದ್ದರಿಂದ ಈ ಬಗ್ಗೆ ವೈದ್ಯರನ್ನು ಕೇಳಿದಾಗಲೆಲ್ಲ ಈಗಲೇ ಏನೂ ಹೇಳಲೂ ಸಾದ್ಯವಿಲ್ಲವೆಂದು ಗುಣಮುಖನಾಗಲು ಇನ್ನೂ ಕಾಲಾವಕಾಶಬೇಕೆಂದು ಹೇಳಿ ಚಿಕಿತ್ಸೆ ಕೊಡುತ್ತಿದ್ದರು. ಆದರೆ  ದಿನಾಂಕ-೨೦/೦೬/೨೦೨೨ ರಂದು ಸಂಜೆ ಸುಮಾರು ೦೫-೦೦ ಗಂಟೆಯ ಸಮದಲ್ಲಿ ನನ್ನ ಮಗನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಖಚಿತ ಪಡಿಸಿದರು.  ನನ್ನ ಮಗ ಮುತ್ತುರಾಜನಿಗೆ ನಮ್ಮ ಸಂಬಂದಿಕರ ಮಗಳಾದ ಭಾಗ್ಯಶ್ರೀಯು ನೀಡಿದ್ದ ಝೀರಾ ಜೂಸ್ ಅನ್ನು ಕುಡಿದು ಅಶ್ವಸ್ಥನಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ನನ್ನ ಮಗ ಮೃತಪಟ್ಟ ನಂತರ ಆತನ ಮೃತದೇಹವನ್ನು ಮತ್ತು ಬಟ್ಟೆಯನ್ನು ಪರಿಶೀಲಿಸಿದಾಗ ಆತನ ಶರ್ಟ್ನ ಜೇಬ್‌ನಲ್ಲಿ ಒಂದು ಚೀಟಿ ದೊರೆತ್ತಿದ್ದು ಅದರಲ್ಲಿ ನನ್ನ ಸಾವಿಗೆ ಭಾಗ್ಯಶ್ರೀ. ಮೊಬೈಲ್ ನಂ-೬೩೬೦೬೩೩೮೩೪, ೭೪೧೧೪೮೨೧೧೭, ತಿಪ್ಪಣ್ಣ ಗಿರಣಿ-೯೧೪೮೩೬೩೭೬೯, ಲಕ್ಷ್ಮಿಬಾಯಿ ಗಿರಣಿ-೯೦೧೯೦೭೨೪೫೭, ಅಂಬರೀಶ್ ಗಿರಣಿ-೯೧೬೪೩೧೧೧೫೨. ೭೬೭೬೬೩೧೬೦೫, ಶರಣು ಜಮಾಧಾರ್-೮೮೬೧೧೩೩೯೫೭, ರಮೇಶ್-೯೩೫೩೩೪೬೧೧೭. ವೆಂಕಟೇಶ್ ಕುಸನೂರು-೭೯೭೫೬೦೬೦೨೯, ೭೮೯೯೮೧೧೮೦೦, ಹನುಮಂತಪ್ಪ ಕುಸನೂರು. ಈ ಮೇಲೆ ಬರೆದಿರುವ ವ್ಯಕ್ತಿಗಳು ನನ್ನ ಸಾವಿಗೆ ಕಾರಣವಾಗಿರುತ್ತಾರೆ. ನನ್ನ ಸಾವಿಗೆ ಏನು ಕಾರಣ ಎಂದು ತಿಳಿಯಬೇಕಾದರೆ ಇನ್ನೂ ಹೆಚ್ಚಿನ ವರದಿಗಾಗಿ ನನ್ನ ಮೊಬೈಲ್ ಫೋನ್‌ನಲ್ಲಿ ಎಲ್ಲಾ ಡಾಕ್ಯೂಮೆಂಟ್ಸ್ ಇದೆ ವಾಟ್ಸಫ್ ಮೆಸೇಜ್, ವಾಯ್ಸ್ರೆಕಾರ್ಡ್ ಪರಿಶೀಲಿಸಿ ನನ್ನ ಆತ್ಮಕ್ಕೆ ಶಾಂತಿ ದೊರಕಿಸಿಕೊಡಿ ಎಂದು ಬರೆದಿರುವುದು ಕಂಡುಬಂದಿರುತ್ತದೆ.  ನನ್ನ ಮಗ ಭಾಗ್ಯಶ್ರೀಯು ನೀಡಿದ ಝೀರಾ ಜ್ಯೂಸನ್ನು ಕುಡಿದು ಮೃತಪಟ್ಟಿರಬಹುದು ಹಾಗೂ ಈ ಮೇಲ್ಕಂಡ ವ್ಯಕ್ತಿಗಳು ಆತನಿಗೆ ಯಾವುದೋ ವಿಚಾರಕ್ಕೆ ಕಿರುಕುಳ ನೀಡಿರುವುದರಿಂದ ಆತನು ವಿಷಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರಬಹುದು. ಆದ್ದರಿಂದ ನನ್ನ ಮಗನ ಸಾವಿಗೆ ಈ ಮೇಲ್ಕಂಡ ಎಲ್ಲಾರೂ ಕಾರಣವಾಗಿರುವುದರಿಂದ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಕೋರುತ್ತೇನೆ ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

 

 

 

ಇತ್ತೀಚಿನ ನವೀಕರಣ​ : 22-06-2022 04:08 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080