ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 21-02-2023 ರಂದು ಬೆಳಿಗ್ಗೆ 11:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಶೋಕ ತಂದೆ ದಾಮುಲು ಚವ್ಹಾಣ ವಯ: 46 ವರ್ಷ ಉ: ಸರ್ಕಾರಿ ನೌಕರ ಜಾ: ಲಂಬಾಣಿ ಸಾ: ಉದನೂರ ತಾಂಡಾ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದರ ಸಾರಾಂಶವೆನೆಂದರೆ, ನನ್ನದೊಂದು ಸ್ವಂತ ಹಿರೋ ಪ್ಯಾಶನ್ ಪ್ರೋ ಮೋಟಾರ್ ಸೈಕಲ್ ನಂ ಕೆಎ-32, ಇಎಸ್-0951 ನೇದ್ದು ಇದ್ದು, ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲನ್ನು ದಿನಾಂಕ: 16-02-2023 ರಂದು ಸಾಯಾಂಕಾಲ 7:30 ಗಂಟೆಗೆ ನನ್ನ ಅಣ್ಣನ ಮಗನಾದ ವಿನೋದ ತಂದೆ ಗುಂಡು ಚವ್ಹಾಣ ಇವರು ಜಯದೇವ ಆಸ್ಪತ್ರೆಗೆ ಕೆಲಸಕ್ಕೆ ಹೋಗುತ್ತೇನೆ ಅಂತ ಹೇಳಿ ಮೊಟರ ಸೈಕಲನ್ನು ತೆಗೆದುಕೊಂಡು ಹೋದರು. ದಿನಾಂಕ: 17-02-2023 ರಂದು ಬೆಳಿಗ್ಗೆ 6:00 ಗಂಟೆ ಸುಮಾರಿಗೆ ನನ್ನ ಅಣ್ಣನ ಮಗ ವಿನೋದ ಇತನು ಫೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ, ಸದರಿ ಮೊಟರ ಸೈಕಲನ್ನು ದಿನಾಂಕ: 16/02/2023 ರಂದು ರಾತ್ರಿ 8:30 ಗಂಟೆ ಸುಮಾರಿಗೆ ಮೊಟರ ಸೈಕಲನ್ನು ಜಯದೇವ ಆಸ್ಪತ್ರೆಯ ಮುಂದೆ ನಿಲ್ಲಿಸಿ ಒಳಗೆ ಹೋಗಿ ಕೆಲಸ ಮಾಡಿಕೊಂಡು ಮರಳಿ ಬೆಳಗಿನ ಜಾವ 5:00 ಗಂಟೆ ಸುಮಾರಿಗೆ ಮೊಟರ ಸೈಕಲ ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ಮೊಟರ ಸೈಕಲ ಇರುವುದಿಲ್ಲ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 21-02-2023 ರಂದು ರಾತ್ರಿ 6:45 ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಮಹ್ಮದ ರಫಿ ತಂದೆ ಅಬ್ದುಲ ರಹೀಂ ಡಿಗ್ಗಿ ವಯ: 55 ವರ್ಷ ಜಾ: ಮುಸ್ಲಿಂ ಉ: ವೆಲ್ಡಿಂಗ್ ಕೆಲಸ ಸಾ|| ಅಬುಬಕರ ಕಾಲೋನಿ ಹಾಗರಗಾ ರೋಡ್ ಕಲಬುರಗಿ ನಗರ ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ಅರ್ಜಿ ಏನೆಂದರೆ, ನಾನು ನನ್ನ ಹೆಂಡತಿಯಾದ ನಸರೀನ್ ಬೇಗಂ ಇಬ್ಬರು ಕೂಡಿಕೊಂಡು ನನ್ನ ಹೆಂಡತಿಗೆ ಬಂಗಾರದ ಚೈನ ಖರೀದಿಸುವ ಸಂಬಂಧ 60,000/- ರೂಪಾಯಿ ನಗದು ಹಣವನ್ನು ತೆಗೆದುಕೊಂಡು ದಿನಾಂಕ: 16/02/2023 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ಕಲಬುರಗಿ ನಗರದ ಸರಾಫ ಬಜಾರದಲ್ಲಿ ಇರುವ ಜಿ. ಎಮ್. ಕಮರಡಗಿ ಇವರ ಅಂಗಡಿಗೆ ಬಂದಿದ್ದು ಆಗ ಈ ಅಂಗಡಿಯಲ್ಲಿ ಬಹಳಷ್ಟು ಜನರಿದ್ದು ಆಗ ನಾನು ಬಂಗಾರದ ಆಭರಣ ನೋಡುತ್ತಾ ನಿಂತಾಗ ಅಂದಾಜು ಮದ್ಯಾಹ್ನ 1:30 ಗಂಟೆ ಸುಮಾರಿಗೆ ನಾನು ಬಂಗಾರ ಅಂಗಡಿಯವರಿಗೆ ಹಣ ಕೊಡಬೇಕು ಅಂತಾ ನೋಡಲಾಗಿ ನಾನು ನನ್ನ ಎಡಗಡೆ ಜೇಬಿನಲ್ಲಿಟ್ಟ ಸುಮಾರು 60,000/- ರೂಪಾಯಿ ಇದ್ದಿರಲಿಲ್ಲ, ನಾನು ಎಲ್ಲಾ ಕಡೆ ಹುಡುಕಾಡಿದರು ಸಿಗಲಿಲ್ಲ. ಕಾರಣ ದಿನಾಂಕ: 16/02/2023 ರಂದು ಮದ್ಯಾಹ್ನ 1:00 ಗಂಟೆಯಿಂದ 1:30 ಗಂಟೆ ಮದ್ಯದ ಅವಧಿಯಲ್ಲಿ ನನ್ನ ಎಡಗಡೆ ಜೇಬಿನಲ್ಲಿಟ್ಟ ಸುಮಾರು 60,000/- ರೂಪಾಯಿ ನಗದು ಹಣವನ್ನು ಯಾರೋ ಅಪರಿಚಿತ ಕಳ್ಳರು ನನ್ನ ಗಮನಕ್ಕೆ ಬಾರದಂತೆ ನನ್ನ ಜೇಬಿನಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಳ್ಳತನವಾದ ನನ್ನ ಹಣವನ್ನು ನನಗೆ ಕೊಡಿಸಬೇಕೆಂದು ಫಿರ್ಯಾದಿ ಕೊಟ್ಟ  ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರ ಪೊಲೀಸ್‌ ಠಾಣೆ-2 :- ದಿನಾಂಕ: 21-02-2023 ರಂದು ಬೆಳಿಗ್ಗೆ 11:30 ಗಂಟೆಗೆ ಖಾಸಗಿ ಎ.ಎಸ.ಮ್ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಶಬ್ಬೀರ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಶಬ್ಬೀರ ಇವರನ್ನು ವಿಚಾರಿಸಿ ಬೆಳಿಗ್ಗೆ 11:45 ಗಂಟೆಯಿಂದ 12:45 ಗಂಟೆಯವರೆಗೆ ಹೇಳೀಕೆಯನ್ನು ಪಡೆದುಕೊಂಡು ಮರಳಿ ಮದ್ಯಾಹ್ನ 1:00 ಗಂಟೆಗೆ ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ಸಾರಂಶವೆನೆಂದರೆ ದಿನಾಂಕ 20-02-2023 ರಂದು ಮದ್ಯಾಹ್ನ ಸಮಯದಲ್ಲಿ ಆಳಂದ ಮಟಕಿ ರೋಡಿನಲ್ಲಿ ನಿಶ್ಚಾತಾರ್ಥ ಕಾರ್ಯಾಕ್ರಮಕ್ಕೆ ಹೋಗುವ ಕುರಿತು ಕಲಬುರಗಿ ಕೇಂದ್ರ ಬಸ್ಸ ನಿಲ್ದಾಣದಿಂದ ನಾನು ಚಲಾಯಿಸುತ್ತೀರುವ ಕೃಜರ ಜೀಪ ನಂ. ಕೆಎ-29, ಎಮ್-4116 ನೇದ್ದರಲ್ಲಿ ಹೋಗಿ ಕಾರ್ಯಾಕ್ರಮ ಮುಗಿಸಿಕೊಂಡು ವಾಪಸ್ಸ ರಾತ್ರಿ ಸಮಯದಲ್ಲಿ ಆಳಂದದಿಂದ ಕಲಬುರಗಿ ಕಡೆಗೆ ನಾನು ರೋಡ ಎಡಗಡೆಯಿಂದ ಕೃಜರ ಜೀಪ ಚಲಾಯಿಸಿಕೊಂಡು ಹೋಗುತ್ತೀರುವಾಗ ಭೋಸಗಾ ಕ್ರಾಸ ಹತ್ತೀರ ರೋಡ ಮೇಲೆ ರಾತ್ರಿ ಅಂದಾಜು 11:40 ಗಂಟೆ ಸುಮಾರಿಗೆ ಕಾರ ನಂಬರ ಕೆಎ-28, ಎನ್-8171 ನೇದ್ದರ ಚಾಲಕ ವಿಜಯಕುಮಾರ ಇತನು ಕಲಬುರಗಿ ಕಡೆಯಿಂದ ಆಳಂದ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಆಲಕ್ಷತನದಿಂದ   ಚಲಾಯಿಸಿಕೊಂಡು ಎದುರಿನಿಂದ ನನ್ನ ಕೃಜರ ಜೀಪಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯ ಮತ್ತು ಕಾರನಲ್ಲಿ ಕುಳಿತ ರಾಹೂಲ ಇತನಿಗೆ ಗಾಯಗೊಳಿಸಿ ತಾನು ಗಾಯ ಹೊಂದಿದ್ದು ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ರಾಘವೇಂದ್ರ ನಗರ ಪೊಲೀಸ್ ಠಾಣೆ :- ದಿನಾಂಕ: 21-02-2023 ರಂದು ಫಿರ್ಯಾದಿದಾರರು ಪೆಟ್ರೋಲಿಂಗ ಕರ್ತವ್ಯದ ಮೇಲೆ ಇದ್ದಾಗ ಡಬರಾಬಾದ ಕ್ರಾಸ್ ಹತ್ತಿರ ಯಾರೋ 3 ಜನರು ಆಕಳುಗಳನ್ನು ಕಸಾಯಿ ಖಾನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೆರೆಗೆ ಸಿಬ್ಬಂದಿ ಹಾಗೂ ಪಂಚರನ್ನ ಕರೆದುಕೊಂಡಿ ಹೋಗಿ ದಾಳಿ ಮಾಡಿ 3 ಆಕಳುಗಳನ್ನು ಸಂರಕ್ಷಿಸಿ ಜಪ್ತಿ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:07-02-2023 ರಂದು ಬೆಳಿಗ್ಗೆ ೧೧-೩೦ ಗಂಟೆಯಲ್ಲಿ ನನ್ನ HONDA SHINE REG NO KA-32, EL-4668 - ದ್ವಿ ಚಕ್ರ ವಾಹನವನ್ನು ತೆಗೆದುಕೊಂಡು ಬಂದು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ನಿಲ್ಲಿಸಿ. ನಾನು ಜಿಲ್ಲಾಧಿಕಾರಿಗಳ ಕಛೇರಿಯ ಒಳಗಡೆ ಅಪರ ಜಿಲ್ಲಾಧಿಕಾರಿಗಳ ಹತ್ತಿರ ನನ್ನ ವೇತನ ಕಡತದ ಬಗ್ಗೆ ವಿಚಾರಿಸಿಕೊಂಡು ಮದ್ಯಾಹ್ನ 02:30 ಗಂಟೆಗೆ ಬಂದು ನೋಡಿದಾಗ ಸದರಿ ಸ್ಥಳದಲ್ಲಿ ನಿಲ್ಲಿಸಿದ್ದ ನನ್ನ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಆದ್ದರಿಂದ ಕಳೆದು ಹೋದ ನನ್ನ ದ್ವಿ-ಚಕ್ರ ವಾಹನವನ್ನು ಪತ್ತೆ ಹಚ್ಚಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 20-02-2023 ರಂದು ಫಿರ್ಯಾದಿಯ ಮನೆಗೆ ಸದರಿ ನರಸು ಮತ್ತು ಇತರರು 3  ಜನರು ಬಂದು ಏ ಆನಂದ ಮನೆಯಿಂದ ಹೊರಗೆ ಬಾ ಎಂದು ಬೈದಿದ್ದು ನನಗೆ ರಾಡದಿಂದ ಹೊಡೆದು ಮತ್ತು ನನ್ನ ಮಗನಿಗೆ ಕಟ್ಟಿಗೆಯಿಂದ ಹೊಡೆದು ಜೀವ ಬೆದರಿಕೆ ಹಾಕಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ: 21-02-2023 ರಂದು ಸಾಯಂಕಾಲ 1810 ಗಂಟೆಗೆ ಸೈಯಾದ ಪಟೇಲ ಪಿಎಸ್ಐ-1 ಫರಹತಾಬಾದ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಆರೋಪಿತರೊಂದಿಗೆ, ಮುದ್ದೇಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಬಂದು ವರದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ:21-02-2023 ರಂದು ಸಾಯಂಕಾಲ 1545 ಗಂಟೆಯ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಸಿರನೂರ ಗ್ರಾಮದ ಬನಾದೆ ಯಲ್ಲಮ್ಮಾ ಗುಡಿಯ ಹತ್ತಿರದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಗೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಅವರಿಗೆ ತಿಳಿಸಿ ಅವರು ಒಪ್ಪಿದ ಮೇರೆಗೆ ನಮ್ಮ ಠಾಣಾ ಸಿಬ್ಬಂದಿ ಜನರಾದ ಪಿಎಸ್ಐ-2 ಸುರೇಶರೆಡ್ಡಿ, ಹೆಚ್ಸಿ-134 ತಿವಾರಿ, ಪಿಸಿ-262 ಕಾಶಪ್ಪಾ, ಪಿಸಿ-282, ಆನಂದ ಪಿಸಿ-284, ಸಾಜೀದ ಎಲ್ಲರೂ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಸಾಯಂಕಾಲ 15:10 ಗಂಟೆಗೆ ಹೊರಟು, ಕೆಲವು ಸಿಬ್ಬಂದಿ ಜನರು ತಮ್ಮ ತಮ್ಮ ಮೋಟಾರ ಸೈಕಲಗಳ ಮೇಲೆ ಹೊರಟು ಭಾತ್ಮೀ ಸ್ಥಳದ ಹತ್ತಿರ ಸಾಯಂಕಾಲ 16:30 ಗಂಟೆಗೆ ಗಿಡಗಳ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಕೆಲವು ಜನರು ದುಂಡಾಗಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 16:40 ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ ಕೆಲವು ಜನರು ಓಡಿ ಹೋಗಿದ್ದು ಇನ್ನು ಕೆಲವು ಜನರಿಗೆ ಸಿಕ್ಕಿದ್ದು ಆಗ ಸಮಯ 16:50 ಆಗಿದ್ದು, ಸಿಕ್ಕಿದ ಜನರಿಗೆ ಹಿಡಿದು ಅವರಿಗೆ ಅಂಗಶೋಧ ಮಾಡಿ ಹೆಸರು ವಿಳಾಸ ಕೇಳಲು 1) ಸುರೇಶ ತಂದೆ ಮಲ್ಲಿಕಾರ್ಜುನ ದೊಡ್ಡಮನಿ ವಯ:35 ವರ್ಷ ಉ: ಚಾಲಕ ಜಾತಿ:ಎಸ್.ಸಿ ಸಾ: ಸಿರನೂರ ಅಂತಾ ತಿಳಿಸಿದ್ದು ಅವನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 750=00 ರೂ. 2) ನಾಗರಾಜ ತಂದೆ ಶಿವಾಜಿ ಪಟ್ಟೇದಾರ ವಯ:28 ವರ್ಷ ಉ: ಕೂಲಿಕೆಲಸ ಜಾತಿ: ಎಸ್.ಸಿ ಸಾ: ಸಿರನೂರ ಅಂತಾ ತಿಳಿಸಿದ್ದು ಅವನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 700=00 ರೂ. 3) ಗೋವಿಂದ ತಂದೆ ತಿಮ್ಮಯ್ಯಾ ಕಿರಣಗಿ ವಯ:32 ವರ್ಷ ಜಾತಿ:ವಡ್ಡರ ಉ:ಕೂಲಿಕೆಲಸ ಸಾ: ಸಿರನೂರ ಅಂತಾ ತಿಳಿಸಿದ್ದು ಅವನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 720=00 ರೂ. 4) ಸುಭಾಶ ತಂದೆ ರಾಮಯ್ಯ ವಯ:22 ವರ್ಷ ಜಾತಿ:ವಡ್ಡರ ಸಾ:ಸಿರನೂರ ಅಂತಾ ತಿಳಿಸಿದ್ದು ಅವನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 800=00 ರೂ. 5) ರಮೇಶ ತಂದೆ ಲಕ್ಷ್ಮಣ ವಡ್ಡರ ವಯ:25 ವರ್ಷ ಉ:ಕೂಲಿಕೆಲಸ ಸಾ:ಸಿರನೂರ ಅಂತಾ ತಿಳಿಸಿದ್ದು ಅವನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 660=00 ರೂ. ದೊರೆತ್ತಿದ್ದು, ಹೀಗೆ ಎಲ್ಲರ ಬಳಿಯಿಂದ ಒಟ್ಟು ಗೂಡಿಸಿದಾಗ ಒಟ್ಟು 3630=00 ರೂ ಸಿಕ್ಕಿದ್ದು ಮತ್ತು ಸದರಿ ಸ್ಥಳದಲ್ಲಿ 52 ಇಸ್ಪೇಟ ಎಲೆಗಳು ಸಿಕ್ಕಿದ್ದು, ಓಡಿ ಹೋದವರ ಹೆಸರು ವಿಚಾರಿಸಲಾಗಿ ಪ್ರಕಾಶ ತಂದೆ ಚಂದ್ರಮಪ್ಪಾ ಪಾಟೀಲ ವಯ:35 ವರ್ಷ ಜಾತಿ:ಲಿಂಗಾಯಿತ ಉ:ಒಕ್ಕಲುತನ ಸಾ: ಸಿರನೂರ ಅಂತಾ ಗೊತ್ತಾಗಿದ್ದು, ಇವುಗಳನ್ನು ಪಂಚರ ಸಮಕ್ಷಮದಲ್ಲಿ 16:50 ಗಂಟೆಯಿಂದ 17:50  ಗಂಟೆಯವರೆಗೆ ಗುನ್ನೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆಯನ್ನು ಬರೆದು ಮುಗಿಸಲಾಯಿತು. ನಂತರ ಮುದ್ದೇಮಾಲು ಮತ್ತು ಆರೋಪಿತರೊಂದಿಗೆ 18:10 ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 23-02-2023 01:45 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080