ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್ ಠಾಣೆ :- ದಿನಾಂಕ:21.02.2022 ರಂದು ೦5:೦೦ ಪಿ.ಎಂ.ಕ್ಕೆ  ಫಿರ್ಯಾದಿ  ಶ್ರೀ ಕಿಶೋರ ತಂದೆ ಪೋಮು ಜಾಧವ ಸಾ|| ಧನ್ನೂರ ತಾಂಡಾ ತಾ|| ಆಳಂದ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ  ಅರ್ಜಿ ಸಲ್ಲಿಸಿದ್ದರ ಸಾರಾಂಸವೆನೆಂದರೆ, ನಾನು ದಿನಾಂಕ:೦೩.೦೨.೨೦೨೨ ರಂದು ಯಾದಗೀರ ಜಿಲ್ಲೆಯಿಂದ  ಕಲಬುರಗಿ ಮುಖಾಂತರವಾಗಿ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದಾಗ ಕಲಬುರಗಿ ನಗರದ  ರಿಂಗ್ ರೋಡ  ರಸ್ತೆ ಹೈಕೊರ್ಟ ಮಾರ್ಗವಾಗಿ ಹೋಗುತ್ತಿರುವಾಗ  ಅಂದಾಜು ರಾತ್ರಿ ೦೨:೦೦ ರಿಂದ  ೦೨:೩೦ ರ ಸಮಯಕ್ಕೆ ಏಕಾಎಕಿ  ಒಂದು ಬಿಳಿ ಕಾರ ವಾಹನ ಸಂಖ್ಯೆ ಕೆ.ಎ-54  4084 ಬಂದಿದ್ದು ಅದರಿಂದ  ೫ ಜನ ಕಾರಿನಿಂದ  ಕೆಳಗಿಳಿದು ನನ್ನನ್ನು ತಡೆದು  ಲಾರಿ ನಿಲ್ಲಿಸಿ ನನ್ನ  ಲಾರಿ  ನಂ. ಎಂ.ಹೆಚ್-43 ಯೂ-8847  ಲಾರಿಯಿಂದ ನನ್ನ  ಕಾಲರ ಪಟ್ಟಿ ಹಿಡಿದು ಅದರಲ್ಲಿ  ಒಬ್ಬನು ತನ್ನಲ್ಲಿದ್ದ  ಚೂಪಾದ ಚಾಕು ನನ್ನ ಎಡಕುತ್ತಿಗೆಗೆ ಹಚ್ಚಿ  ಏ ಹಡಸಿಮಗನೆ ನಿನ್ನ ಲಾರಿಯಲ್ಲಿ ಏನು ಸಾಗಾಣಿಕೆ ಮಾಡುತ್ತಿದ್ದು ಎಂದು  ಕೇಳಿದಾಗ ನಾನು ನನ್ನ ಭಾಷೆಯಲ್ಲಿ  ತೂ ಕೋನ  ಅಂತ ಕೇಳಿದಾಗ ಏ ಲಂಬಾಣಿ ಸೂಳಿಮಗನೆ ಎಂದು ನನ್ನನ್ನು ಜಾತಿ ನಿಂದನೆ ಮಾಡಿದ  ಚೆನ್ನು (ಚಾಂದಪಾಷಾ) ಹಾಗೂ ಇನ್ನುಳಿದ  ನಾಲ್ಕು ಜನರು  ಹೊಡೆಯಲು  ಆರಂಭಿಸಿದರು ಆಗ ನಾನು ಚಿರಾಡುತ್ತಿರುವಾಗ ನನ್ನ  ಗಾಡಯಲ್ಲಿದ್ದ  ರೂ. 25,೦೦೦/-   ನಗದು ಹಣ ತೆಗೆದುಕೊಂಡು ಏ ಲಂಬಾಣಿ  ಸೂಳಿಮಗನೇ ಈ ವಿಷಯವನ್ನು  ಪೊಲೀಸರಿಗಾಗಲಿ ಅಥವಾ ಯಾರಿಗಾದರೂ  ಹೇಳಿದರೆ ನಿನ್ನನ್ನು ಜೀವ  ಸಮೇತ ಬಿಡುವುದಿಲ್ಲ  ಎನ್ನುತ್ತಿದ್ದಾಗ  ಯಾವುದೋ  ಒಂದು  ವಾಹನ  ಬರುತ್ತಿದ್ದುದ್ದನ್ನು  ನೋಡಿ ತಮ್ಮ  ಕಾರ  ಸ್ಟ್ರೇಟ್‌ ಮಾಡಿಕೊಂಡು ಹೋದರು. ಈ  ಕಾರಿನಲ್ಲಿದ್ದ  ಒಟ್ಟು ೫ ಜನ  ೧) ಚೆನ್ನು (ಚಾಂದಪಾಷಾ)  ೨) ರಾಜು ಲೇಂಗಟಿ  ೩) ಗುರು ಮಾಳಗೆ  ಮತ್ತು  ಇಬ್ಬರು  ಇತರರು ಇದ್ದರು.   ಆದಕಾರಣ  ಇವರ  ವಿರುದ್ದ  ದರೋಡೆ  ಮಾಡಿರುವುದು  ಮತ್ತು  ಜಾತಿ  ನಿಂದನೆ  ಮಾಡಿರುವ  ಕೇಸನ್ನು  ದಾಖಲಿಸಿ ಇವರೆಲ್ಲರ  ಮೇಲೆ  ಕಠಿಣವಾದ  ಕಾನೂನಿನ  ಕ್ರಮಕೈಗೊಳ್ಳಬೇಕಾಗಿ  ತಮ್ಮಲ್ಲಿ ಈ  ಮೂಲಕ ವಿನಂತಿಸಿಕೊಳ್ಳುತ್ತೇನೆ ಈ ಬಗ್ಗೆ ಮನೆಯಲ್ಲಿ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ ಅಂತ  ವಗೈರೆಯಾಗಿದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 22-02-2022 02:24 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080