ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ ಠಾಣೆ :- ದಿನಾಂಕ-21-01-2023 ರಂದು  ಫಿರ್ಯಾಧಿದಾರರು ನಿಡಿದ ಫಿರ್ಯಾಧಿ ಸಾರಾಂಶವೆನೆಂದರೆ ಸದರಿ ಆರೋಪಿತನು ಠಾಣೆ ಗುನ್ನೆ ನಂ 24/2013,  ಕಲಂ 324,326,353,384,504 ಸಂ 34 ಐಪಿಸಿ ಸಿಸಿ ನಂ 1276/19ನೇದ್ದರಲ್ಲಿ ಆರೋಪಿತನಾಗಿ ಜಾಮೀನಿನ ಮೇಲೆ ಹೊರ ಬಂದು ಸದರಿಯವನ ಮೇಲೆ ಇಲ್ಲಿಯವರೆಗೆ ಸುಮಾರು 29 ವಾರೆಂಟುಗಳು ಜಾರಿ ಆದರೂ ಮಾನ್ಯ ನ್ಯಾಯಾಲಯಕ್ಕೆ ಹಾಜರು ಆಗದೆ ಮತ್ತು ಠಾಣೆಯ ವಾರೆಂಟ್ ಸಿಬ್ಬಂದಿಯವರ ಕೈಗೆ ಸಿಗದೆ ನ್ಯಾಯಾಲಯದ ಜಾಮೀನು ನಿಯಾಮವಳಿಗಳನ್ನು ಉಲ್ಲಂಘನೆ ಮಾಡಿದವನ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೆಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 21/01/2023 ರಂದು ಸಾಯಂಕಾಲ 6:30 ಗಂಟೆಗೆ ಶ್ರೀ. ಅಮಜಾದ ತಂದೆ ಮಕದುಮ ಇವರು ನೀಡಿರುತ್ತಾರೆಂಬುವ ಕಂಪ್ಯೂಟರದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ದಿನಾಂಕ 17/01/2023 ರಂದು ರಾತ್ರಿ 10:30 ಗಂಟೆಗೆ ಅಮಜಾದ ತಂದೆ ಮಕದುಮ ಪಟೇಲ ಈತನು ಮೋಟರ ಸೈಕಲ ನಂ. ಕೆಎ 32 ಇ.ಜಿ 5038 ನೇದ್ದನ್ನು ಚಲಾಯಿಸಿಕೊಂಡು ಕಾಳನೂರಿನ ದಾಭಾದ ಮುಂದೆ ಬ್ರಿಡ್ಜಿನ ಹತ್ತೀರ ಹೋಗುತ್ತಿರುವಾಗ ಒಂದು ಮೋಟರ ಸೈಕಲ ನಂ. ಕೆಎ 32 ಇ.ಕ್ಯೂ 2887 ನೇದ್ದರ ಸವಾರನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತ ಪಡಿಸಿದ್ದರಿಂದ ಅಮಜಾದ ಈತನಿಗೆ ಕಾಲಿಗೆ ಮತ್ತು ಕೈಗೆ ಭಾರಿಗಾಯಗಳಾಗಿದ್ದು, ಘಟನೆಯನ್ನು ರೋಡಿನಿಂದ ಹೋಗುವ ವಸಂತ ರಾಠೋಡ, ಜೀತಾಲಾಲ, ಬಸವರಾಜ ಕೊಟನೂರ ಎಂಬುವರು ನೋಡಿ ಸಹಾಯ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಆಸ್ಪತ್ರೆಯಲ್ಲಿ ಉಪಚಾರ ಪಡೆದ ನಂತರ ಫಿರ್ಯಾದಿಯನ್ನು ಕೇಸು ಮಾಡುವ ಕುರಿತು ತನ್ನ ಹೆಂಡತಿ ಗಿರೀಜಾ ಗಂಡ ಅಮಜಾದ ಇವರಿಂದ ಕಳುಹಿಸಿಕೊಟ್ಟಿದ್ದು, ಮೋಟರ ಸೈಕಲ ಸವಾರನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 06-01-2023  ರಂದು ಮುಂಜಾನೆ ೦೯-೦೦ ಗಂಟೆಯಿಂದ ಸಾಯಾಂಕಾಲ ೫-೦೦ ಗಂಟೆಯ ಅವದಿಯಲ್ಲಿ ಪರ‍್ಯಾದಿಯು ಕಲಬುರಗಿ ನಗರದ ಮರಗಮ್ಮ ಗುಡಿ ಎದುರುಗಡೆ ಜೇವರ್ಗಿ ರೋಡ ರಾಮ ಮಂದಿರ ಸರ್ಕಲ್ ಹತ್ತಿರ ನಿಲ್ಲಿಸಿದ ಮೊಟಾರ ಸೈಕಲ ನಂ. ಕೆಎ೩೨/ಇಕ್ಯೂ-೩೦೩೪ ಅ.ಕಿ ೩೦೦೦೦/- ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:21.01.2023 ರಂದು 01:30 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಜಗದೀಶ್ ತಂದೆ ಪೀರಪ್ಪ ಪೂಜಾರಿ ವಯ: 23 ವರ್ಷ ಜಾ: ಕುರುಬ ಉ: ಗೌಂಡಿ ಕೆಲಸ ಸಾ|| ಅಪ್ಪಾ ಲೇಔಟ್, ಬಿದ್ದಾಪೂರ ಕಾಲೋನಿ, ಕಲಬುರಗಿ ಇವರು ಹಲ್ಲೆಗೊಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಫಿರ್ಯಾದಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶವೆನೆಂದರೆ, ನಾನು ಮೇಲೆ ನಮೂದು ಮಾಡಿದ ವಿಳಾಸದವಿದ್ದು ಗೌಂಡಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿದ್ದು ಇರುತ್ತದೆ. ನಮ್ಮದೊಂದು ಮನೆ ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯ ಅಪ್ಪಾ ಲೇಔಟದಲ್ಲಿ ಮನೆ ಇರುತ್ತದೆ. ನಮ್ಮ ಮನೆ ಎದುರುಗಡೆ ಅಂಬಾರಾಯ ಕಣ್ಣಿ ಎಂಬುವವರ ಮನೆ ಇರುತ್ತದೆ. ಕಳೆದ ಒಂದು ವರ್ಷದ ಹಿಂದೆ ನಮಗೂ ಮತ್ತು ಅಂಬಾರಾಯ ಕಣ್ಣಿ ಇವರಿಗೆ ಕಸ ಚೆಲ್ಲುವ ವಿಷಯದಲ್ಲಿ ತಂಟೆ-ತಕರಾರು ಆಗಿದ್ದು ಅಂದಿನಿಂದ ಅವರು ನಮ್ಮ ಮೇಲೆ ವೈಮನಸ್ಸು ಬೆಳೆಸಿಕೊಂಡಿದ್ದು ಇರುತ್ತದೆ.   ಹೀಗಿದ್ದು ಇಂದು ದಿನಾಂಕ: 21.01.2023 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ನಮ್ಮ ಮನೆಯ ಮುಂದೆ ಇರುವ ರೋಡಿನ ಮೇಲೆ ನನ್ನ ದ್ವಿ ಚಕ್ರ ವಾಹನ ತೊಳೆಯುತ್ತಿದ್ದಾಗ ವಾಹನ ತೊಳೆದ ಸ್ವಲ್ಪ ನೀರು ಅಂಬಾರಾಯ ಕಣ್ಣಿ ಇವರ ಮನೆಯ ಮುಂದೆ ಹೋಗಿದ್ದಕ್ಕೆ ಅಂಬಾರಾಯ ಮತ್ತು ಅವನ ಹೆಂಡತಿಯಾದ ಜ್ಯೋತಿ ಇಬ್ಬರೂ ಕೂಡಿ ನನ್ನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅಂಬಾರಾಯ ಇತನು “ ಭೋಸುಡಿ ಮಗನೇ ನೀನು ತೊಳೆದ ಗಾಡಿಯ ನೀರು ನಮ್ಮ ಮನೆಯ ಮುಂದೆ ಬರುತ್ತಿವೆ” ಅಂತ ಅನ್ನುತ್ತಾ ಅಲ್ಲೇ ಬಿದ್ದಿದ್ದ ಹಿಡಿ ಗಾತ್ರದ ಕಲ್ಲಿನಿಂದ ಮುಖದ ಮೇಲೆ ಹೊಡೆದಿದ್ದರಿಂದ ಮೂಗಿನಿಂದ ರಕ್ತ ಬಂದಿದ್ದು ಇರುತ್ತದೆ. ಅಲ್ಲದೇ ಕಟ್ಟಿಗೆಯಿಂದ ಎಡಗಾಲಿಗೆ ಹಾಗೂ ಎದೆಯ ಮೇಲೆ ಹೊಡೆದಿದ್ದು ಅಂಬಾರಾಯ ಇತನ ಹೆಂಡತಿ ಜ್ಯೋತಿ ಇವರು ಇನ್ನೂ ಚೆನ್ನಾಗಿ ಹೊಡೆ ಅಂತ ತನ್ನ ಗಂಡನಿಗೆ ಪ್ರಚೋದನೆ ಮಾಡಿದ್ದು ಆಗ ನನ್ನ ಹೆಂಡತಿ ಮತ್ತು ನಮ್ಮ ಪಕ್ಕದ ಮನೆಯವರಾದ ಸೋಹೆಲ್ ಮತ್ತು ಆನಂದ ಇವರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ನಂತರ ನನಗೆ ಆನಂದ ಇತನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ನನಗೆ ಹೊಡೆ-ಬಡೆ ಮಾಡಿದ ಅಂಬಾರಾಯ ಕಣ್ಣಿ ಹಾಗೂ ಅವನ ಹೆಂಡತಿ ಜ್ಯೋತಿ ಇವರುಗಳ ವಿರುದ್ದ ಕಾನೂನಿನ ಕ್ರಮ ಜರುಗಿಸಬೇಕು ಅಂತ ಇದ್ದ  ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಫರಹತಾಬಾದ ಪೊಲೀಸ ಠಾಣೆ :- ದಿನಾಂಕ:21-01-2023 ರಂದು 1:45 ಪಿಎಮ್ ಕ್ಕೆ ಶ್ರೀ ನವೀನ ಎಂ, ಆಹಾರ ನಿರೀಕ್ಷಕರು ಕಲಬುರಗಿ ರವರು ಠಾಣೆಗೆ ಹಾಜರಾಗಿ ಮುದ್ದೆ ಮಾಲು & ಜಪ್ತಿ ಪಂಚನಾಮೆ, ರಶೀದಿಯೊಂದಿಗೆ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:20/01/2023 ರಂದು ರಾತ್ರಿ ಸಮಯ 7.15 ರ ಸುಮಾರಿಗೆ ಫರಹತಾಬಾದ ಗ್ರಾಮದ ಹೆದ್ದಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವ ವಾಹನವನ್ನು ತಡೆದು ನಿಲ್ಲಿಸಿರುವುದಾಗಿ ಬಾತ್ಮಿ ಬಂದ ಮೇರೆಗೆ ನಾನು ನನ್ನ ಮೇಲಾಧಿಕಾರಿಗಳಿಗೆ ತಿಳಿಸಿ ಬಾತ್ಮಿ ಬಂದ ಸ್ಥಳಕ್ಕೆ ಇಬ್ಬರು ಪಂಚರೊಂದಿಗೆ ಫರಹತಾಬಾದ ಗ್ರಾಮಕ್ಕೆ ಹೋಗುವ ಹೆದ್ದಾರಿಯಲ್ಲಿ ನಿಂತು ಬಾತ್ಮಿದಾರರಿಗೆ ಫೋನ್ ಕರೆ ಮಾಡಿ ವಿಚಾರಿಸಲಾಗಿ ಸ್ಥಳದ ಕುರಿತು ಮಾಹಿತಿಯನ್ನು ಕೇಳಲಾಗಿ ಹೊನ್ನ ಕಿರಣಗಿ ಕ್ರಾಸ್ನ ಹತ್ತಿರ ಬರಲು ತಿಳಿಸಿದರು. ಅದರಂತೆ ನಾನು ಹಾಗೂ ಇಬ್ಬರು ಪಂಚರೊಂದಿಗೆ ರಾತ್ರಿ ಸಮಯ 8.30 ರ ಸುಮಾರಿಗೆ ಹೊನ್ನ ಕಿರಣಗಿ ಕ್ರಾಸ್ ಬಳಿ ಹೋಗಿ ನೋಡಲಾಗಿ ಅಶೋಕ ಲೇಲ್ಯಾಂಡ್ ಕಂಪನಿಯ ಬಡಾ ದೋಸ್ತ್ ವಾಹನ ಸಂಖ್ಯೆ ಕೆಎ 33 ಬಿ 3536 ನ್ನು ಸಾರ್ವಜನಿಕರು ತಡೆದು ನಿಲ್ಲಿಸಿರುವುದು ಗಮನಕ್ಕೆ ಬಂದಿರುತ್ತದೆ. ಅಲ್ಲಿನ ಸಾರ್ವಜನಿಕರಿಗೆ ವಿಚಾರಿಸಲಾಗಿ ಸದರಿ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದು ಗಮನಕ್ಕೆ ಬಂದಿರುವುದರ ಮೇರೆಗೆ ಸದರಿ ವಾಹನವನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದಾಗ ಸದರಿ ವಾಹನದ ಚಾಲಕನು ನಮ್ಮನ್ನು ನೋಡಿ ಗಾಬರಿಯಿಂದ ವಾಹನವನ್ನು ಬಿಟ್ಟು ಓಡಿ ಹೋದನು ಎಂದು ತಿಳಿಸಿರುತ್ತಾರೆ. ವಾಹನ ಸಂಖ್ಯೆ ಕೆಎ 33 ಬಿ 3536 ನ್ನು ಪರಿಶೀಲಿಸಲಾಗಿ ವಾಹನದಲ್ಲಿ ಅಂದಾಜು 40 ರಿಂದ 45 ಕೆ.ಜಿ ತೂಕವುಳ್ಳ ಅಂದಾಜು 90 ಬಾಯಿಕಟ್ಟಿದ ಪ್ಲಾಸ್ಟಿಕ್ ಚೀಲಗಳಲ್ಲಿ ಅಂದಾಜು ಕಿಮ್ಮತ್ತು ರೂ. 1,00,000/- ಇದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಹಾಗೂ ಸಕರ್ಾರದ ಇತರೆ ಯೋಜನೆಗಳಿಗೆ ಬಿಡುಗಡೆಯಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ತಿಳಿದುಬಂದಿದ್ದರಿಂದ ಸಾರ್ವಜನಿಕರಿಗೆ ತಿಳಿಸಿ ನಮ್ಮ ವಶಕ್ಕೆ ಪಡೆದುಕೊಂಡಿರುತ್ತೇವೆ. ಪ್ರಯುಕ್ತ ಸಮಯ ರಾತ್ರಿಯಾಗಿದ್ದರಿಂದ ಜಫ್ತಿ ಪಡಿಸಿಕೊಂಡ ವಾಹನದಲ್ಲಿದ್ದ ಪಡಿತರ ಅಕ್ಕಿಯನ್ನು ಕಲಬುರಗಿ ಗ್ರಾಮಾಂತರದ ಕನರ್ಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಸಗಟು ಮಳಿಗೆಯಲ್ಲಿ ಅನ್ಲೋಡ್ ಮಾಡಲು ಅನಾನುಕೂಲವಾಗಿದ್ದರಿಂದ ಸದರಿ ವಾಹನವನ್ನು ಮತ್ತು ವಾಹನದಲ್ಲಿದ್ದ ಮುದ್ದೆಮಾಲನ್ನು ಸುರಕ್ಷತೆಯ ದೃಷ್ಟಿಯಿಂದ ಫರಹತಾಬಾದ ಪೊಲೀಸ್ ಠಾಣೆಯ ತಾಬೆಗೆ ನೀಡಲಾಗಿರುತ್ತದೆ. ನಂತರ ದಿನಾಂಕ:21/01/2023 ರಂದು ಬೆಳಿಗ್ಗೆ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ವಾಹನ ಸಂಖ್ಯೆ ಕೆಎ 33 ಬಿ 3536 ವಾಹನದಲ್ಲಿದ್ದ ಪಡಿತರ ಅಕ್ಕಿಯ ಆಹಾರ ಸುರಕ್ಷತೆಯ ದೃಷ್ಟಿಯಿಂದ ಸದರಿ ವಶಪಡಿಸಿಕೊಳ್ಳಲಾದ ವಾಹನದ ಮೂಲಕವೇ ಚೇಂಗಟಾ ವೇ-ಬ್ರಡ್ಜನಲ್ಲಿ ತೂಕ ಮಾಡಿಸಲಾಗಿ ಬಿಲ್ಲ ಸಂಖ್ಯೆ: 1093 ಇದ್ದು, ಮುದ್ದೆಮಾಲಿನ ಒಟ್ಟು ತೂಕ 5015 ಕೆ.ಜಿ ಇರುತ್ತದೆ. ರಶೀದಿಯನ್ನು ಲಗತ್ತಿಸಲಾಗಿದೆ. ನಂತರ ಅಕ್ಕಿಯನ್ನು ಕಲಬುರಗಿ ಗ್ರಾಮಾಂತರದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಸಗಟು ಗೋದಾಮಿನಲ್ಲಿ ಅಭಿರಕ್ಷೆಯಲ್ಲಿಡಲಾಯಿತು. ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಹಾಗೂ ಸರಕಾರದ ಇತರೆ ಯೋಜನೆಗಳಿಗೆ ಬಿಡುಗಡೆಯಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಜಫ್ತಿ ಪಡಿಸಿಕೊಂಡ ಸದರಿ ವಾಹನ ಸಂಖ್ಯೆ ಕೆಎ 33 ಬಿ 3536 ನ್ನು ಫರಹತಾಬಾದ ಪೊಲೀಸ್ ಠಾಣೆಯ ತಾಬೆಗೆ ಒಪ್ಪಿಸಿ, ಸದರಿ ವಾಹನದ ಮಾಲೀಕನ ವಿರುದ್ಧ ಸದರಿ ವಾಹನದಲ್ಲಿದ್ದ ಅಕ್ಕಿಯ ಮಾಲೀಕರ ವಿರುದ್ಧ  ಅಗತ್ಯ ವಸ್ತುಗಳ ಕಾಯ್ದೆ 1995 ರ ಕಲಂ 3 ಮತ್ತು 7 ರಡಿ ಪ್ರಕರಣ ದಾಖಲಿಸಲು ತಮ್ಮಲ್ಲಿ ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 21-01-2023 ರಂದು ರಾತ್ರಿ 9-15 ಗಂಟೆಗೆ ಖಾಸಗಿ ಯುನೈಟೆಡ ಆಸ್ಪತ್ರೆಯ ಸಿಬ್ಬಂದಿಯವರು ರವರು ಠಾಣೆಗೆ ಪೋನ ಮಾಡಿ ಗೋವಿಂದ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಗೋವಿಂದ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 21-01-2023 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು ಚಲಾಯಿಸುತ್ತೀರುವ ಸಿಮೆಂಟ ಲಾರಿ ಟ್ಯಾಂಕರ ನಂಬರ ಕೆಎ-32/ಡಿ-3438 ನೇದ್ದರಲ್ಲಿ ಬೂದಿ ಲೋಡ ಮಾಡಿಕೊಂಡು ಮಳಖೆಡ್ ಸಿಮೆಂಟ ಕಂಪನಿಗೆ ಖಾಲಿ ಮಾಡಿ ಸಿಮೆಂಟ ತಗೆದುಕೊಂಡು ಹೋಗುವ ಸಲುವಾಗಿ ನಾನು ವಿಜಯಪೂರದಿಂದ ಬೆಳಿಗ್ಗೆ ಬಿಟ್ಟು ಸಿಂದಗಿ ಜೇವರ್ಗಿ ಮುಖಾಂತರವಾಗಿ ನಾನು ನನ್ನ ಟ್ಯಾಂಕರ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತೀರುವಾಗ ರಾಷ್ಟ್ರೀಯ ಹೆದ್ದಾರಿ-50 ರ ಮೇಲೆ ಬರುವ ಶಹಾಬಾದ ಕ್ರಾಸ ಸಮೀಪ ಬರುವ ಹತ್ತಿ ಪ್ರಾಕ್ಟರಿ ಹತ್ತೀರ ರೋಡ ಮೇಲೆ ನಾನು ನನ್ನ ಟ್ಯಾಂಕರ ವಾಹನವನ್ನು ಎಡ ರೋಡಿನಿಂದ ಚಲಾಯಿಸಿಕೊಂಡು ಹೋಗುತ್ತೀರುವಾಗ ಎದರುನಿಂದ ಲಾರಿ ನಂಬರ ಕೆಎ-25/ಬಿ-5542 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಟ್ಯಾಂಕರ ವಾಹನಕ್ಕೆ ಡಿಕ್ಕಿಪಡಿಸಿ ಅಪಘತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಲಾರಿ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

ಇತ್ತೀಚಿನ ನವೀಕರಣ​ : 23-01-2023 03:40 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080