ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 19/12/2022 ರಂದು ನಮ್ಮ ಅಣ್ಣ ಮಹ್ಮದ ಸಲಿಂ ಈತನು ಎಂದಿನಂತ್ತೆ ತಾನು ಹೊಡೆಯುವ ಆಟೋ ನಂ. ಕೆಎ-32 ಬಿ-9301 ನೇದ್ದನ್ನು ತೆಗೆದುಕೊಂಡು ಕೆಲಸಕ್ಕೆ ಹೋದರು. ಮುಂದೆ ಸಾಯಂಕಾಲ 05:30 ಗಂಟೆ ಸುಮಾರಿಗೆ ನಮ್ಮ ಪರಿಚಯದ ಯುನುಸ್  ಮತ್ತು ಖಾಸಿಂ ಶೇಖ ಹೂಗಾರ ಇವರು ನನಗೆ ಪೋನ್ ಮಾಡಿ ಮಾಹಿತಿ ತಿಳಿಸಿದೆನೆಂದರೆ, ಈಗ ತಾನೆ 05:15 ಗಂಟೆ ಸುಮಾರಿಗೆ ನಿಮ್ಮ ಅಣ್ಣ ಮಹ್ಮದ ಸಲಿಂ ಈತನು ತನ್ನ ಆಟೋ ನಂ ಕೆಎ-32 ಬಿ-9301 ಇದರಲ್ಲಿ ಡಬರಾಬಾದ ಕ್ರಾಸ್ ಕಡೆಯಿಂದ ಎಮ್.ಎಸ್.ಕೆ ಮಿಲ್ ರೋಡ ಕಡೆಗೆ ಬರುತ್ತಿರುವಾಗ ಕ್ಯೂ.ಪಿ ಆಸ್ಪತ್ರೆಯ ಸಮೀಪ ಕಟ್ಟಗಿ ಅಡ್ಡಾದ ಹತ್ತಿರ ಬರುತ್ತಿರುವಾಗ ಹಿಂದಿನ ರೋಡಿನಿಂದ ಒಂದು ಟಿಪ್ಪರ ನಂ. ಕೆಎ-32 ಸಿ-3592 ನೇದ್ದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಆಟೋದ ಹಿಂಭಾಗಕ್ಕೆ ಜೋರಿನಿಂದ ಡಿಕ್ಕಿ ಹೊಡೆದಿದಕ್ಕೆ ಆಟೋ ಮತ್ತು ಮಹ್ಮದ ಸಲಿಂ ಇವರು ರೋಡ ಡಿವೈಡರಕ್ಕೆ ಡಿಕ್ಕಿ ಹೊಡೆದುಕೊಂಡು ಹಾರಿ ಬಿದಿದ್ದರಿಂದ ಅವರ ತೆಲೆಯ ಹಿಂಭಾಗಕ್ಕೆ ಭಾರಿ ಪ್ರಮಾಣ ರಕ್ತಗಾಯವಾಗಿದ್ದು, ಎದೆಗೆ ಗುಪ್ತಗಾಯವಾಗಿದ್ದು ಮತ್ತು ಅಲಲ್ಲಿ ರಕ್ತಗಾಯ ಗುಪ್ತಗಾಯವಾಗಿದ್ದು ಬೆಹೋಷ ಸ್ಥಿತಿಯಲ್ಲಿ ಬಿದಿದ್ದು ಟಿಪ್ಪರದ ಚಾಲಕನು ಟಿಪ್ಪರ ಬಿಟ್ಟು ಓಡಿ ಹೋಗಿರುತ್ತಾನೆ, ಆತನಿಗೆ ನಾವು ನೋಡಿರುತ್ತೇವೆ. ಮಹ್ಮದ ಸಲಿಂ ಈತನಿಗೆ ಕ್ಯೂ.ಪಿ ಆಸ್ಪತೆಯ ಕಡೆಗೆ ಉಪಚಾರಾಕ್ಕಾಗಿ ತರುತ್ತಿರುತ್ತೇವೆ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ನನ್ನ ಅತ್ತಿಗೆ ಸುಲ್ತಾನಾ ಬೇಗಂ ಇವಳೊಂದಿಗೆ ಕ್ಯೂ.ಪಿ ಆಸ್ಪತ್ರೆಗೆ ಬಂದು ಅಣ್ಣನಿಗೆ ನೋಡಲಾಗಿ ಅಣ್ಣನ ಸ್ಥಿತಿಯು ಚಿಂತಾಜನಕವಾಗಿದ್ದು ಅಲ್ಲೆ ಉಪಚಾರ ಮುಂದುವರೆಸಿದ್ದು ಅಣ್ಣನು ಉಪಚಾರ ಪಡೆಯುತ್ತಲೆ ರಸ್ತೆ ಅಪಘಾತದಲ್ಲಿ ಆದ ಗಾಯದ ಬಾದೆಯಿಂದ ರಾತ್ರಿ 08:30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ, ಮುಂದೆ ಅಣ್ಣನ ಶವವು ಸರಕಾರಿ ಆಸ್ಪತ್ರೆಗೆ ರಾತ್ರಿ ತಂದು ಇಂದು ದಿನಾಂಕ-20/12/2022 ರಂದು ಬೆಳಿಗ್ಗೆ ಬಂದಿರುತ್ತೇನೆ, ಕಾರಣ ಟಿಪ್ಪರ ನಂ. ಕೆಎ-32 ಸಿ-3592 ನೇದ್ದರ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮಕೈಕೊಳ್ಳಬೇಕು  ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 20/12/2022 ರಂದು 06:30 ಪಿ.ಎಮ್ ಕ್ಕೆ ಶ್ರೀ ಅಶೋಕ ತಂದೆ ಅರ್ಜುನ್ ಗ್ಯಾಂಗಮನ್  ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಅವರ ಮಗನಾದ ಮುತ್ತಪ್ಪ ಗ್ಯಾಂಗಮನ್ ಇವರ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ,  ದಿನಾಂಕ-16/12/2022 ರಂದು ರಾತ್ರಿ 10-15 ಗಂಟೆ ಸುಮಾರಿಗೆ ಫಿರ್ಯಾಧಿ ಹಾಗೂ ಅವರ ಗೆಳೆಯರಾದ ಮಾರ್ಥಂಡ್ ತಂದೆ ಅಂಬಣ್ಣಾ ಹಾಗೂ ಅಶೋಕ ತಂದೆ ಖಾಜಪ್ಪಾ ಮೂರು ಜನರು ಸೇರಿ ಮೋಟಾರ ಸೈಕಲ ನಂ KA-01 HC-4028 ನೇದ್ದರ ಮೇಲೆ ಕಲಬುರಗಿ ಸಬಾ ಪ್ಲಾಂಟ್ ಕಡೆಯಿಂದ ಮುಗುಟಾ ಗ್ರಾಮದ ಕಡೆಗೆ ಹೋಗುವಾಗ ಮಾರ್ಥಂಡ್ ಈತನು ಚಲಾಯಿಸುತ್ತಿದ್ದು ಶ್ರೀನಿವಾಸ ಸರಡಗಿ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಮೋಟಾರ ಸೈಕಲ ನಂ KA-32 EW-1569 ನೇದ್ದರ ಸವಾರ ಪ್ರಶಾಂತ ತಂದೆ ಹಣಮಂತಪ್ಪಾ ಈತನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು   ಬಂದು ಫಿರ್ಯಾಧಿ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾಧಿಗೆ ಭಾರಿಗಾಯವಾಗಿ ಮತ್ತು ಮಾರ್ಥಂಡ್, ಅಶೋಕ ಹಾಗೂ ಪ್ರಶಾಂತ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಫಿರ್ಯಾಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇಂದು ಮನೆಯವರೊಂದಿಗೆ ವಿಚಾರಿಸಿ  ದೂರು ನೀಡಲು ತಡವಾಗಿರುತ್ತದೆ. ಕಾರಣ  ಮೋಟಾರ ಸೈಕಲ ನಂ KA-32 EW-1569 ನೇದ್ದರ ಸವಾರ ಪ್ರಶಾಂತ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಎಂದು ಫಿರ್ಯಾಧಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 20/12/2022 ರಂದು ರಾತ್ರಿ ೭:೧೫ ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅನ್ವರ ಶಾ ತಂದೆ ಖಹೀರೋದ್ದೀನ್ ಶಾ ವಯ: ೨೭ ವರ್ಷ ಉ: ಗ್ಯಾರೇಜ ಕೆಲಸ ಸಾ: ನಬಿ ಕಾಲೋನಿ ಕಲಬುರಗಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನದೊಂದು ಸ್ವಂತ ಹೊಂಡಾ ಡಿಯೋ ಸ್ಕೂಟರ್ ನಂ. ಕೆಎ-೩೨ ಇಟಿ-೬೪೯೮ ನೇದ್ದು ಇದ್ದು ಸದರಿ ಸ್ಕೂಟರ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಸ್ಕೂಟರನ್ನು ದಿನಾಂಕ: ೧೧/೧೨/೨೦೨೨ ರಂದು ಸಾಯಾಂಕಾಲ ೫:೦೦ ಗಂಟೆ ಸುಮಾರಿಗೆ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದ ಹತ್ತಿರ ನಿಲ್ಲಿಸಿ ಮರಳಿ ಸಾಯಾಂಕಾಲ ೬:೦೦ ಗಂಟೆಗೆ ಬಂದು ನೋಡಲಾಗಿ ನಾನು ನಿಲ್ಲಿಸಿದ ಸ್ಕೂಟರ್ ಇರಲಿಲ್ಲಾ ಗಾಬರಿಯಾಗಿ ನಾನು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ.  ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಸ್ಕೂಟರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾಧಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌-ಅರ್ಬನ್‌ ಪೊಲೀಸ್‌ ಠಾಣೆ :- ಫಿ‍ರ್ಯಾಧಿಯು ಉದನೂರು ರೋಡದಲ್ಲಿ ಮನೆ ಕಟ್ಟಿಸುತ್ತಿದ್ದು ದಿನಾಲು ಅಲ್ಲಿಯೇ ಮಲಗುತ್ತಿದ್ದು ದಿನಾಂಕಃ-೨೦/೧೨/೨೦೨೨ ರಂದು ಸ್ನಾನ ಮಾಡಲು ಉದನೂರಿನಲ್ಲಿರುವ ಮನೆಗೆ ೬.೦೦ ಎಎಮ್ ಕ್ಕೆ ಹೋಗಿದ್ದು  ಹೋಗಿದ್ದು ಪುನಃ ೯.೦೦ ಎಎಮ್ ಕ್ಕೆ ಬಂದು ನೊಡಲು ಅಲ್ಲಿದ್ದ ಹಮ್ಮರ್ ಮಷಿನ್ ,ಗ್ಲಾಡರ್ ಮಷಿನ್,ಒಂದು ಡ್ರಿಲ್ ಮಷಿನ್ ಮುಂತಾದ ಸುಮಾರು 82,300/- ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿದೆ ಎಂದು ಫಿರ್ಯಾಧಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌-ಅರ್ಬನ್‌ ಪೊಲೀಸ್‌ ಠಾಣೆ :- ಫಿರ್ಯಾಧಿ ಮತ್ತು ಆತನ ಸ್ನೇಹಿತರು ಹುಮನಾಬಾದ್ ರಿಂಗ್ ರೋಡಿಗೆ ಇರುವ ತೆಂಗಳಿ ಪೆಟ್ರೋಲ್ ಬಂಕ್ ಹತ್ತಿರ ಪೆಟ್ರೊಲ್ ಹಾಕಿಸಲು ಹೋದಾಗ ಸದರಿ ಆರೋಪಿತರು ಪೆಟ್ರೊಲ್ ಹಾಕುವುದನ್ನು ಬಂದ್ ಮಾಡಿರುತ್ತೇವೆ ಎಂದಾಗ ಫಿರ್ಯಾಧಿಯ ಸ್ನೇಹಿತನು ನಾವು ಬೈಕ್ ಅನ್ನು ಇಲ್ಲಿಯೇ ಪಾರ್ಕ್ ಮಾಡುತ್ತೇವೆ ಎಂದಾಗ ಫಿರ್ಯಾಧಿಯ ಗೆಳೆಯನಿಗೆ ಮತ್ತು ಫಿರ್ಯಾಧಿಗೆ ಹೊಡೆ ಬಡೆ ಮಾಡಿರುತ್ತಾರೆ ಎಂದು ಫಿರ್ಯಾಧಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 21-12-2022 12:18 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080