ಅಭಿಪ್ರಾಯ / ಸಲಹೆಗಳು

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ ೨೦/೧೨/೨೦೨೧ ರಂದು  ೬-೩೦ ಎ.ಎಮ್ ಕ್ಕೆ ಶ್ರೀ. ವೀರಭದ್ರಪ್ಪಾ ತಂದೆ ಬಸವಣಪ್ಪಾ ಸಂಕರೂರ ವ; ೬೩ ವರ್ಷ  ; ನಿವೃತ್ತ ಮುಖ್ಯೆ ಪೇದೆ ಸಾ; ಅನ್ನಪೂರ್ಣಶ್ವರಿ ನಗರ ಕಲಬುರಗಿ ಇವರು ಕನ್ನಡದಲ್ಲಿ ಬರೆದ  ಲಿಖಿತ ಫಿರ್ಯಾದಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ತಮಗೆ ಅಪ್ಪಾರಾವ ಎಂಬ ೩೫ ವರ್ಷದ ಮಗನಿದ್ದು ಆತನು ಎಲ್.ಎನ್.ಟಿ ಫೈನಾನ್ಸ್ ದಲ್ಲಿ ಎ.ಸಿ.ಎಮ್ ಅಂತಾ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ- KA-01 MW-4520 ರಂದು ರಾತ್ರಿ ೮-೦೦ ಗಂಟೆ ಸುಮಾರಿಗೆ ತನ್ನ ಮಗ , ಮಗನ ಗೆಳೆಯರಾದ ಸಂತೋಷಕುಮಾರ ಮಡ್ಡನಾಳ, ಬಸವರಾಜ ಕಲ್ಲಶಟ್ಟಿ ಮತ್ತು ಶಿವಲಿಂಗಪ್ಪಾ ಸಾವಳಗಿ, ೪ ಜನರು ಕೂಡಿಕೊಂಡು ಕಾರ ನಂ KA-01 MW-4520 ನೇದ್ದರಲ್ಲಿ ಕುಳಿತುಕೊಂಡು ನಂದೂರ ಕಡೆಗೆ ದಾಬಾಕ್ಕೆ ಊಟಕ್ಕಾಗಿ ಹೋಗಿ ಮರಳಿ ನಂದೂರ,  ನಂದೂರ ತಾಂಡಾ, ಕುಸನೂರ ರೋಡ ಮುಖಾಂತರವಾಗಿ ಬರುತ್ತಿರುವಾಗ ಕಾರನ್ನು ಶಿವಲಿಂಗಪ್ಪಾ ಸಾವಳಗಿ ಈತನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಂದೂರ ತಾಂಡಾದಿಂದ ಕುಸನೂರ ರೋಡಿನ ಕರವಿಂಗ್ ಹತ್ತಿರ ಅತೀವೇಗದಲ್ಲಿರುವ ಕಾರಿಗೆ ನಿಯಂತ್ರಣ ಮಾಡಿಕೊಳ್ಳದೆ ರೋಡಿನ ಎಡಭಾಗಕ್ಕೆ ರಾತ್ರಿ ೧೧-೧೫ ಗಂಟೆ ಸುಮಾರಿಗೆ ಪಲ್ಟಿ ಮಾಡಿಕೊಂಡು ಹಾರಿ ಬಿದಿದ್ದರಿಂದ ಎಲ್ಲರಿಗೂ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಅಪ್ಪಾರಾವನಿಗೆ ಭಾರಿಗಾಯವಾಗಿ ಕಾರ ಮೈಮೇಲೆ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ, ಕಾರ ಚಾಲಕನು ಘಟನೆ ನಂತರ ಅಲ್ಲಿಂದ ಹೋಗಿದ್ದು ಮತ್ತು ಸಂತೋಷಕುಮಾರ ಮತ್ತು ಬಸವರಾಜ ಇವರು ಅಕ್ಸಾನ್ ಆಸ್ಪತ್ರೆಗೆ ಸೇರಿಕೆ ಆಗಿರುತ್ತಾರೆ, ಈ ವಿಷಯದಲ್ಲಿ ಕಾರ ಚಾಲಕ ಶಿವಲಿಂಗಪ್ಪಾ ಸಾವಳಗಿ ಇತನ ಮೇಲೆ ಕ್ರಮ ಕೈಕೊಳ್ಳಬೇಕೆಂದು ಅಂತಾ ಇತ್ಯಾದಿ ಕೊಟ್ಟ ಲಿಖಿತ ಫರಧಿಯ ಸಾರಾಂಶದ ಮೇಲಿಂದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ .

ಇತ್ತೀಚಿನ ನವೀಕರಣ​ : 20-12-2021 01:41 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080