ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ್‌ ಠಾಣೆ :- ದಿನಾಂಕಃ20.11.2022 ರಂದು 8.30 ಪಿ.ಎಮಕ್ಕೆ ಶ್ರೀಮಲ್ಲಿಕಾರ್ಜುನ ತಂದೆ ಶಾಂತಪ್ಪ ಜೋಳದ ವಯ-32ವರ್ಷ ಜಾ||ದೇವಾಂಗ ಉ|| ನ್ಯೂಸ ಪೇಪರದಲ್ಲಿ ಸೇಲ್ ಆಫೀಸ ರ್ಸಾ||ದೇವರದಾಸಿಮಯ್ಯಾ ನಗರ ಕಲಬುರಗಿರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ನೀಡಿದರ ಸಾರಾಂಶವೆನೆಂದರೆ ನಾನು ಖಾಸಗಿ ಕೆಲಸ ಮಾಡಿಕೊಂಡು ಹೆಂಡತಿಯೊಂದಿಗೆ ದೇವರದಾಸಿಮಯ್ಯಾ ನಗರದಲ್ಲಿರುವ ಸಂತೋಷ ಬಾದಾ ಇವರ ಮನೆಯಲ್ಲಿ ಬಾಡಿಗೆಗೆ ಇರುತ್ತೇನೆ.ಹೀಗೆ ಇರುವಾಗ ದಿನಾಂಕ:12.10.2022ರಂದು ಸಾಯಂಕಾಲ್ 5:00ಗಂಟೆ ಸುಮಾರಿಗೆ ನಮ್ಮ ಮನೆಗೆ ನಾನು ಸರಿಯಾಗಿ ಕೀಲಿ ಹಾಕಿಕೊಂಡು ನನ್ನ ಹೆಂಡತಿಯಾದ ಶ್ರೀಮತಿ ಗಾಯತ್ರಿ ಇವರ ಜೆ.ಎನ್.ಎಮ್ನ ಸಂಘದ ದಾಖಲಾತಿಗಳ ಪರಿಶೀಲ್ನೆ ಕುರಿತು ಬೆಂಗಳೂರಿಗೆ ಹೋಗಿಬೇಕಾಗಿದ್ದರಿಂದ ನಾನು ದಿನಾಂಕ:12.10.2022ರಂದು ಬೆಂಗಳೂರಿಗೆ ಹೋಗಿ ದಿನಾಂಕ:14.10.2022ರವರೆಗೂ ಬೆಂಗಳೂರಿನಲ್ಲೆ ಇದ್ದು ದಿನಾಂಕ:15.10.2022 ರಂದು ಬೆಳಿಗ್ಗೆ9-00ಗಂಟೆಗೆ ಕಲ್ಬುರಗಿಯಲ್ಲಿರುವ ನಮ್ಮ ಮನೆಗೆ ಬಂದು ನೋಡಿದಾಗ ನಮ್ಮ ಮನೆಯ ಬಾಗಿಲ ಕೀಲಿ ಮುರಿದಿದ್ದನ್ನು ನೋಡಿ ಗಾಬರಿಗೊಂಡು ಮನೆಯೋಳಗೆ ಹೋಗಿ ನೋಡಿದ್ದಾಗ ನಮ್ಮ ಮನೆಯಲ್ಲಿರುವ ಕಟ್ಟಿಗೆಯ ಬಾಕ್ಸನಲ್ಲಿ ಇಟ್ಟಿರುವ 1) 10ಗ್ರಾಂಬಂಗಾರದ ಒಂದು ಲಾಕೇಟ್ ಅಃ46000/- ರೂ 2) 10ಗ್ರಾಂ ಬಂಗಾರದ ಒಂದು ಉಂಗುರ ಅ||ಕಿ||35000/-,ರೂ 3) 5ಗ್ರಾಂ ಬಂಗಾರದ ಒಂದು ಉಂಗುರು ಅ||ಕಿ||15000/- 4)  5ಗ್ರಾಂ ಬಂಗಾರದ ಒಂದು ಉಂಗುರು ಅ||ಕಿ||14000/-ರೂ ಹಾಗೂ 25,000/-ರೂ ನಗದು ಹಣ ಇರಲಿಲ್ಲಾ.  ಹೀಗೆ ಒಟ್ಟು1,35,000/-ರೂ ಬೆಲೆ ಬಾಳುವ ಬಂಗಾರ ಆಭರಣಗಳು ಹಾಗೂ ನಗದು ಹಣವನ್ನು ಯಾರೋಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಮನೆಯಲ್ಲಿ ಎಲ್ಲಾ ಸಾಮಾನಗಳು ಹಾಗೂ ಸಲಕರಣೆಗಳು ಹುಡಕಾಡಿ ಮತ್ತು ಮನೆಯಲ್ಲಿ ಚರ್ಚೆ ಮಾಡಿಕೊಂಡು ಬಂದು ದೂರು ನೀಡುವದಕ್ಕೆ ತಡವಾಗಿರುತ್ತದೆ. ಕಾರಣ ದಿನಾಂಕಃ12.10.2022 ರಿಂದ ದಿನಾಂಕ:15.10.2022ರ ಮದ್ಯದ ಅವಧಿಯಲ್ಲಿ ನಮ್ಮ ಮನೆಗೆ ಹಾಕಿರುವ ಬೀಗ ಮುರಿದು ಮನೆಯಲ್ಲಿಟ್ಟಿರುವ 135000/ರೂ ಬೆಲೆ ಬಾಳವ ಬಂಗಾರ ಆಭರಣಗಳು ಮತ್ತು ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರಗಿಸಿ ಕಳೆದು ಹೋದ ನಮ್ಮ ಬಂಗಾರದ ಆಭರಣಗಳು ಹಾಗೂ ನಗದು ಹಣ ಪತ್ತೆ ಮಾಡಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ  ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-20-11-2022  ರಂದು ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ದಿನಾಂಕಃ-೧೯/೧೧/೨೦೨೨  ರಂದು ರಾತ್ರಿ ೧೦.೦೦ ಪಿಎಮ್ ಸುಮಾರಿಗೆ ನಾನು ಗುಲಾಮೆ ಮುಸ್ತಪಾ ಮಜಿದಾ ಹತ್ತಿರ ಇದ್ದು ನಂತರ ಗೇಟಿಗೆ ಕೊಂಡಿ ಹಾಕಿ ಮನೆಗೆ ಬಂದು ಮಲಗಿದ್ದು ಅದರಲ್ಲಿದ್ದ ಒಂದು ಎಮಪ್ಲಿ ಪ್ಲೇಯರ್ ೨೨೦೦೦, ಒಂದು ಇನ್ವರ್ಟರ್ ೨೫೦೦೦, ಒಂದು ಮೈಕ್ ಸೆಟ್ ಅಂದಾಜು ಕಿಮ್ಮತ್ತು ೨೦೦೦ ಒಟ್ಟು ೪೯೦೦೦ ರೂ ಕಳುವು ಮಾಡಿದ್ದು ಅದನ್ನು ಪತ್ತೆ ಹಚ್ಚಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ  ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-20-11-2022  ರಂದು ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ದಿನಾಂಕಃ-೧೭/೧೧/೨೦೨೨  ರಂದು ರಾತ್ರಿ ಊಟ ಮಾಡಿ  ಶರಣ ಸಿರಸಗಿ ಮಡ್ಡಿ ಬಳಿಯಲ್ಲಿ ಕಟ್ಟಡ ಕೆಲಸ  ನಡೆಯುತ್ತಿದ್ದು ನಾನು ನನ್ನ ಮೋಟಾರು ಸೈ ನಂ ಕೆಎ ೩೨ ಹೆಚ್‌ಸಿ ೩೯೬೬ ಅನ್ನು ನಿಲ್ಲಿಸಿ ಆಫಿಸಿನಲ್ಲಿ ಮಲಗಿದ್ದು ಬೆಳಗ್ಗೆ ಎದ್ದು ನೋಡಲು ಯಾರೋ ಕಳ್ಳರು ನನ್ನ ಮೋಟಾರು ಸೈಕಲ್ ನ್ನು ಕಳುವು ಮಾಡಿದ್ದು ಅದನ್ನು ಪತ್ತೆ ಹಚ್ಚಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ  ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 20-11-2022  ರಂದು ರಾತ್ರಿ ೨:೦೦ ಗಂಟೆ ಸುಮಾರಿಗೆ ಮನೆಯಲ್ಲಿಟ್ಟಿದ್ದ ೨೮೦ ಗ್ರಾಂ ಬೆಳ್ಳಿ ಆರತಿ ಪ್ಲೇಟ್ ಅ.ಕಿ-೧೪,೦೦೦/-ರೂ, ೫ ಗ್ರಾಂ ಬಂಗಾರದ ಬೊರಮಳ ಅ.ಕಿ-೨೪,೦೦೦/-ರೂ ಹೀಗೆ ಒಟ್ಟು ಅಂದಾಜು ೩೮೦೦೦/-ರೂ ಕಿಮ್ಮತ್ತಿನ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಮಾಡಿಕೊಂಡು ಹೋಗಿರುತ್ತಾರೆ ಅದನ್ನು ಪತ್ತೆ ಹಚ್ಚಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ  ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :-  ದಿನಾಂಕ: 18-11-2022  ರಂದು ರಾತ್ರಿ ೭:೪೫ ಗಂಟೆ ಸುಮಾರಿಗೆ ಸದರಿ  ಆರೋಪಿತರು  ಫಿರ್ಯಾದಿದಾರರು ಓಜಾ ಲೇಟದ ಬೈಪಾಸ ರಿಂಗ ರೋಡಿನಲ್ಲಿ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದಾಗ ವಿನಾ ಕಾರಣ ಜಗಳ ತೆಗೆದು ಕೈ ಮುಷ್ಠಿ ಮಾಡಿ ಬಾಯಿ ಮೇಲೆ ಹೊಡೆದನು ಪರಿಣಾಮ ಎರಡು ಹಲ್ಲುಗಳು ಬಿದ್ದವು ನಂತರ ರಾಡಿನಿಂದ ಕಾಲಿಗೆ ಬೆನ್ನಿಗೆ ಜೋರಾಗಿ ಹೊಡೆದು ಕೊಲೆ ಮಾಡುವ ಉದ್ದೇಶದಿಂದ ಭಾರಿ ಗುಪ್ತಗಾಯ ಮಾಡಿದ್ದಾರೆ ಎಂದು ಫಿರ್ಯಾದಿ ಕೊಟ್ಟ  ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

   

ಇತ್ತೀಚಿನ ನವೀಕರಣ​ : 23-11-2022 05:57 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080