ಅಭಿಪ್ರಾಯ / ಸಲಹೆಗಳು

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:20-10-2022 ರಂದು 5 ಪಿಎಮ್ ಕ್ಕೆ ಶ್ರೀ ಮೋಹನರಾವ ತಂದೆ ಕೀಶನರಾವ ಕಾಳೆ ವಯ:63 ವರ್ಷ ಉ:ಮನೆಯಲ್ಲಿ ಜಾ:ಮರಾಠ ಸಾ:ಗಂಜ ಬಸ್ ನಿಲ್ದಾಣದ ಹತ್ತಿರ ಕಲಬುರಗಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ನನಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ಒಬ್ಬನು ಗಂಡು ಮಗನಿದ್ದು ಎಲ್ಲರದ್ದು ಮದುವೆಯಾಗಿರುತ್ತದೆ. ನಾನು ಮತ್ತು ನನ್ನ ಹೆಂಡತಿ ಇಬ್ಬರೆ ಮನೆಯಲ್ಲಿ ವಾಸವಾಗಿರುತ್ತೇವೆ.  ದಿನಾಂಕ:20-10-2022 ರಂದು ಗುರುವಾರ ಬೆಳೆಗ್ಗೆ ಬೇಗನೆ ಗಾಣಗಾಪೂರದ ದತ್ತ ಮಹಾರಾಜ ದೇವಸ್ಥಾನದಲ್ಲಿ ದರ್ಶನ ಮಾಡಲು ಒಂದು ದಿವಸ ಮುಂಚಿತವಾಗಿ ಗಾಣಗಾಪೂರಕ್ಕೆ ಹೋಗಿ ಅಲ್ಲಿ ರಾತ್ರಿ ವಸತಿ ಮಾಡಿ ಬೆಳೆಗ್ಗೆ ದೇವರ ದರ್ಶನ ಮಾಡಬೇಕೆಂದು ನಿಶ್ಚಯಿಸಿ  ದಿನಾಂಕ:19-10-2022 ರಂದು ಮಧ್ಯಾಹ್ನ 1:30 ಪಿಎಮ್ ದ ಸುಮಾರಿಗೆ ನನ್ನ ಮೋಟಾರ ಸೈಕಲ್ ನಂ:ಕೆಎ-32/ಹೆಚ್ಎ-0286 (ಆಕ್ಟಿವ್-ಹೊಂಡಾ) ನೇದ್ದನ್ನು ತೆಗೆದುಕೊಂಡು ನನ್ನ ಮನೆಯಿಂದ ಗಾಣಗಾಪೂರದ ಕಡಗೆ ಮುಖ್ಯ ರಸ್ತೆಯ ಮೂಲಕ ಹೊರಟಿರುತ್ತೇನೆ. ಮಧ್ಯಾಹ್ನ 2:30 ಪಿಎಮ್ ದ ಸುಮಾರಿಗೆ ಹಾರೂತಿ ಹಡಗಿಲ ಕೊಳ್ಳೂರು ಮಧ್ಯ ರಸ್ತೆಯಲ್ಲಿರುವ ಬ್ರಿಡ್ಜ ಹತ್ತಿರ ನಾನ ನನ್ನ ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ಹಿಂದಿನಿಂದ  ಒಂದು ಬಿಳಿ ಬಣ್ಣದ ಕಾರು ಬಂದು ನನ್ನ ಮೋ.ಸೈ ಗೆ ಅಡ ತಂದು ನಿಲ್ಲಿಸಿದ್ದರಿಂದ ನಾನು ನನ್ನ ಗಾಡಿ ನಿಲ್ಲಿಸಿ, ಏಕೆ ಕಾರ ಅಡ್ಡ ನಿಲ್ಲಿಸಿದ್ದಿರಿ ಅಂತ ಕೇಳಿದೆ.  ಕಾರಿನಲ್ಲಿದ್ದ 4-ಜನರು ಮುಖಕ್ಕೆ ಬಟ್ಟೆ ಕಟ್ಟಿದ್ದರು. 3-ಜನರು ಕಾರಿನಿಂದ ಕೆಳಗೆ ಇಳಿದು  ಒಬ್ಬನು ನನ್ನ ಮೋ.ಸೈ ಕೀ ಮತ್ತು ಗಾಡಿಯನ್ನು ತೆಗೆದುಕೊಂಡನು. ಇಬ್ಬರು ನನ್ನ ಮುಖಕ್ಕೆ ಬಟ್ಟೆ ಕಟ್ಟಿ, ನನ್ನ ಎರಡು ಕೈಗಳನ್ನು ಹಿಡಿದು ನನ್ನ ಕಿಸೇಯಲ್ಲಿ ಕೈ ಹಾಕಿ ನನ್ನ ಹತ್ತಿರವಿದ್ದು 10,500/- ರೂ ಗಳನ್ನು ದೋಚಿ, ನನಗೆ  ರಸ್ತೆಯ ಪಕ್ಕದಲ್ಲಿರುವ ತಗ್ಗಿನಲ್ಲಿ ನೋಕಿ ನನ್ನ ಮೋಟಾರ ಸೈಕಲ್ ನಂ:ಕೆಎ-32/ಹೆಚ್ಎ-0286 (ಆಕ್ಟಿವ್-ಹೊಂಡಾ) ನೇದ್ದನ್ನು ತೆಗೆದುಕೊಂಡು ಹೋಗಿರುತ್ತಾರೆ. ನಾನು ಕಾರಿನ ನಂಬರ ನೋಡಿರುವುದಿಲ್ಲ. ನಂತರ ನಾನು ರೋಡಿನ ಮೇಲೆ ಹೋಗತ್ತಿರುವ ಬೇರೆ ವಾಹನಗಳಿಗೆ ಕೈ ಮಾಡಿ ನಿಲ್ಲಿಸಿ ಅವರ ಸಹಾಯದಿಂದ ಮರಳಿ ಮನೆಗೆ ಬಂದಿರುತ್ತೇನೆ. ಕಾರಣ ನನಗೆ ಯಾರೋ ಅಪರಿಚಿತ 4 ಜನರು ಕಾರಿನಲ್ಲಿ ಹಿಂದಿನಿಂದ ಬಂದು ತಡೆದು ನಿಲ್ಲಿಸಿ ನನ್ನ ಹತ್ತಿರವಿದ್ದ ನಗದು 10500/- ರೂ ಹಾಗೂ ಒಂದು ಮೋಟಾರ ಸೈಕಲ್ ನಂ:ಕೆಎ-32/ಹೆಚ್ಎ-0286 (ಆಕ್ಟಿವ್-ಹೊಂಡಾ) ಅ.ಕಿ 70,000/- ನೇದ್ದು  ಹೀಗೆ ಒಟ್ಟು 80,500/- ರೂ ಮೌಲ್ಯದವುಗಳನ್ನು ಸುಲಿಗೆ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರೂಗಿಸಲು ನಾನು ತುಂಬಾ ನೊಂದುಕೊಂಡಿದ್ದು ನಿನ್ನೆ ಮನೆಯಲ್ಲಿ ಸುಧಾರಿಸಿಕೊಂಡು,  ಮನೆಯಲ್ಲಿ ವಿಚಾರಿಸಿ ದೂರು ನೀಡಲು ವಿಳಂಭವಾಗಿರುತದೆ ಅಂತ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 20/10/2022 ರಂದು 10:45 ಪಿ.ಎಮ್ ಕ್ಕೆ ಶ್ರೀ. ಭೀಮಾಶಂಕರ ತಂದೆ ಶ್ರೀಮಂತರಾವ ಪಾಟೀಲ ವಯಃ 57 ವರ್ಷ ಜಾತಿಃ ಲಿಂಗಾಯತ ಉಃ ಗುತ್ತೆದಾರ ಕೆಲಸ ಸಾಃ ಭಾಗ್ಯವಂತಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಈ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಂಶವೆನೆಂದರೆ, ನನ್ನ ಹೆಂಡತಿಯ ಅಣ್ಣನಾದ ಸುಭಾಶ್ಚಂದ್ರ ತಂದೆ ವೀರಭದ್ರಪ್ಪಾ ಪಾಟೀಲ ಮುಕ್ಕಾಃ ಕೊಹಿನೂರ ಇವರು ಇಂದು ದಿನಾಂಕ 20/10/2022 ರಂದು ಅವರ ತಾಯಿಯಾದ ಗಂಗಮ್ಮ ಪಾಟೀಲ ಇವರಿಗೆ ಆರಾಮ ಇಲ್ಲದಕ್ಕೆ ಕಲಬುರಗಿಯಲ್ಲಿ ದವಾಖಾನೆಗೆ ತೊರಿಸುವ ಕುರಿತು ಹೊಂಡಾ ಶೈನ್ ಮೋಟರ ಸೈಕಲ ನಂ. ಕೆಎ 56 ಜೆ 2929 ಇದರ ಮೇಲೆ ಬಂದಿದ್ದು, ಮುಂದೆ ಅವರ ತಾಯಿಗೆ ನೋಡುವ ವೈದ್ಯರು ಸಿಗದೆ ಇರುವಾಗ ತಾಯಿಯನ್ನು ಚಿಕ್ಕಪ್ಪನ ಮನೆಯಲ್ಲಿ ಬಿಟ್ಟು, ತಮ್ಮ ಮೋಟರ ಸೈಕಲದ ಮೇಲೆ ಬಸವಕಲ್ಯಾಣಕ್ಕೆ ಹೋಗುತ್ತೆನೆಂದು ರಾತ್ರಿ 7:00 ಗಂಟೆ ನಂತರ ಹೋದರು. ಮುಂದೆ ರಾತ್ರಿ 8:30 ಗಂಟೆ ಸುಮಾರಿಗೆ ನಮ್ಮ ಪರಿಚಯದ ಗುರುಲಿಂಗಪ್ಪಾ ತಂದೆ ಕಲ್ಯಾಣರಾವ ಪಾಟೀಲ ಹಾಗು ಚನ್ನವೀರಪ್ಪಾ ತಂದೆ ವಿಠಲರಾವ ಪಾಟೀಲ ಇವರು ನನಗೆ ಮಾಹಿತಿ ತಿಳಿಸಿದ್ದೆನೆಂದರೆ, ತಾವಿಬ್ಬರು ಕೂಡಿಕೊಂಡು ಹುಮ್ನಾಬಾದದಿಂದ ಕಲಬುರಗಿಗೆ ಬರುವಾಗ ಈಗ 8:15 ಗಂಟೆ ಸುಮಾರಿಗೆ ಸುಭಾಶ್ಚಂದ್ರ ಪಾಟೀಲ ಇವರು ತಮ್ಮ ಹೊಂಡಾ ಶೈನ ಮೋಟರ ಸೈಕಲ ನಂ. ಕೆಎ 56 ಜೆ 2929 ಇದರ ಮೇಲೆ ತಾವರಗೇರಾ ಕ್ರಾಸಿನ ಹತ್ತೀರ ಇರುವ ಟಿಪ್ಪರ ಶೋರೂಮ್ದ ಸ್ವಲ್ಪ ಅಂತರದಲ್ಲಿ ಬರುತ್ತಿರುವಾಗ ಅದರ ಮುಂದುಗಡೆ ಒಂದು ಲಾರಿ ನಂ. ಎಮ್.ಪಿ 20 ಹೆಚ್.ಬಿ 5652 ಇದರ ಚಾಲಕನು ಹೋಗುತ್ತಿದ್ದಾಗ ಸುಭಾಶ್ಚಂದ್ರ ಇವರು ಲಾರಿಯ ಬಲಭಾಗಕ್ಕೆ ಸೈಡಿಗೆ ತೆಗೆದುಕೊಂಡಾಗ ಈ ಲಾರಿಯ ಚಾಲಕನು ಒಮ್ಮೇಲೆ ಯಾಕೋ ಅತಿವೇಗದಿಂದ ಮತ್ತು ಅಲಕ್ಷತನದಿಂದ ರೋಡಿನ ಬಲಭಾಗಕ್ಕೆ ಪೂತರ್ಿಯಾಗಿ ತೆಗೆದುಕೊಂಡು ಲಾರಿಯ ಸೈಡು ಸುಭಾಶ್ಚಂದ್ರನಿಗೆ ಮತ್ತು ಆತನ ಮೋಟರ ಸೈಕಲಗೆ ಡಿಕ್ಕಿಯಾಗಿದ್ದರಿಂದ ಆತನ ಮುಖದ ಭಾಗಕ್ಕೆ, ಎದೆಯ ಭಾಗಕ್ಕೆ ಹಾಗು ಎಡಗಾಲಿನ ಮೊಳಕಾಲಿನ ಕೆಳಗೆ ಪೂರ್ತಿಯಾಗಿ ಕಾಲು ಮುರದಿದ್ದು, ನಾವು ಆತನಿಗೆ ಸೈಡಿಗೆ ಹಾಕಲಾಗಿ ಭಾರಿ ಪ್ರಮಾಣದ ರಕ್ತಸ್ರಾವ ಆಗಿ ಸ್ಧಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಲಾರಿ ಚಾಲಕನು ಹಾಗೆ ಓಡಿಸಿಕೊಂಡು ಹೋಗುವಾಗ ಲಾರಿಯನ್ನು ನಿಲ್ಲಿಸಿ ಬಿಟ್ಟು ಓಡಿ ಹೋಗಿರುತ್ತಾನೆ. ಆತನಿಗೆ ನೋಡಿರುತ್ತೆವೆ ಅಂತಾ ತಿಳಿಸಿದ್ದಕ್ಕೆ, ಯಾವುದಾದರು ವಾಹನದಲ್ಲಿ ಸುಭಾಶ್ವಂದ್ರ ಇವರಿಗೆ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ತರುವಂತೆ ತಿಳಿಸಿದ್ದು, ನಾನು ಸರಕಾರಿ ಆಸ್ಪತ್ರೆಗೆ ಹೋಗಿ ನನ್ನ ಹೆಂಡತಿಯ ಅಣ್ಣ ಸುಭಾಶ್ಚಂದ್ರನಿಗೆ ನೋಡಲಾಗಿ ಈ ಮೇಲಿನಂತೆ ಗಾಯಗಳಾಗಿ ಮೃತ ಪಟ್ಟಿದರು. ಈ ವಿಷಯವನ್ನು ಸುಭಾಶ್ಚಂದ್ರ ಇವರ ಹೆಂಡತಿ ಚಂದ್ರಕಲಾ, ಹಾಗು ಅವರ ಮಗ ಮಾರುದ್ರ ಇವರಿಗೆ ತಿಳಿಸಿ ಅವರೆಲ್ಲರೂ ದುಖಃದಲ್ಲಿರುವುದರಿಂದ ನಾನೆ ಈ ಫಿರ್ಯಾದಿಯನ್ನು ಲಾರಿ ಚಾಲಕನ ವಿರುದ್ಧ ನಿಡಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ : 20-10-2022 ರಂದು ೪.೦೦ ಪಿ.ಎಮ್ ಅವಧಿ ಸುಮಾರಿಗೆ ಸದರಿ ಆರೋಪಿತರು ಫಿರ್ಯಾದಿಗೆ ತಡೆದು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಗೆ ಚಾಕು ಮತ್ತು ಬಡಿಗೆಯಿಂದ ಹೊಡೆದು ಜೀವ ಬೇದರಿಕೆ ಹಾಕಿ ಗಾಯ ಗೊಳಿಸಿ ಕೊಲೆ ಪ್ರಯತ್ನಿಸಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-20-10-2022  ರಂದು ಫಿರ್ಯಾದಿಯು ಠಾಣೆಗೆ ಹಾಜಾರಾಗಿ ನೀಡಿದ ಫಿರ್ಯಾದಿಯೇನೆಂದರೆ ದಿನಾಂಕ ೧೬/೧೦/೨೦೨೨ ರಂದು ೦೮:೦೦ ಎಎಮ್ ಗಂಟೆಗೆ   ನಮ್ಮ ಹಿರಿಯ ಅಧಿಕಾರಿಗಳಿಂದ ಇಂಡಸ್ ಕಂಪನಿಯ ಇಂಡಸ್ ನಂ ೧೨೪೨೪೬೦ ಸ್ಶೆಟ್ ಐಡಿ ನಂ KLHG001 ನೇದ್ದರಲ್ಲಿ ಕಳ್ಳತನವದ ಬಗ್ಗೆ ಫೊನ್ ಮುಖಾಂತರ ತಿಳಿಸಿದ್ದು ನಂತರ ನಾನು ಅ ಸೈಟಿಗೆ ಹೋಗಿ ನೋಡಲು ಟವರ್ ನಲ್ಲಿ ಅಳವಡಿಸಿದ ಬ್ಯಾಟರಿ ಸೆಲ್‌ಗಳನ್ನು ಕಳ್ಳತನ ಮಾಡಿರುವುದು ಕಂಡುಬಂದಿದ್ದು ಸದರಿ ದಿನಾಂಕ ೧೬/೧೦/೨೦೨೨ ರಂದು ೧೨:೩೦ ಎಎಮ್ ಗಂಟೆಯಿಂದ ನಸುಕಿನ ಜಾವ ೦೪:೩೦ ಎಎಮ್ ಗಂಟೆಯ ಮಧ್ಯದ ಅವಧಿಯಲ್ಲಿ ಕಲ್ಲಹಂಗರಗಾ ಗ್ರಾಮದ ಸೀಮಾಂತರದಲ್ಲಿನ ಇಂಡಸ್ ಟವರ್ ನ ೨೪ ಎಕ್ಸೈಡ್ ಕಂಪನಿಯ ಬ್ಯಾಟರಿಗಳು ಅ.ಕಿ:೭೦೦೦೦/-ರೂ ನೆದ್ದವುಗಳನ್ಮ್ನ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 10-11-2022 12:23 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080