ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 20-09-2022   ರಂದು ೦೧-೦೦ ಪಿ.ಎಮ್ ಕ್ಕೆ ಬಹುಮನಿ ಆಸ್ಪತ್ರೆಯಿಂದ ಎಂ.ಎಲ್.ಸಿ ವಸೂಲಾಗಿದ್ದು, ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ ಅಬ್ದುಲ ಗಫಾರ ತಂದೆ ಮಹ್ಮದ ಜಬ್ಬಾರಮಿಯಾ ಖುರೇಷಿ ವಯಸ್ಸು ೩೭ ವರ್ಷ ಜಾತಿ; ಮುಸ್ಲಿಂ ಉ; ವ್ಯಾಪಾರ ಸಾ; ಮನೆ ನಂ; ೬-೨೫/ಟಿಎಪ್ ೩ನೇ ಮಹಡಿ ಜಿನತ್ ಟವರ್ ಮೋಮಿನಪೂರ ಕಲಬುರಗಿ ಇತನ ಹೇಳಿಕೆ ಪಡೆದುಕೊಂಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ ೨೦/೦೯/೨೦೨೨ ರಂದು ಬೆಳಗಿನ ಜಾವ ೫-೦೦ ಗಂಟೆಯ ಸುಮಾರಿಗೆ ಪಬ್ಲಿಕ್ ಗಾರ್ಡನಕ್ಕೆ ವಾಕಿಂಗ್ ಕುರಿತು ಹೋಗಿ ವಾಕಿಂಗ್ ಮಾಡಿ ಮರಳಿ ಮನೆಗೆ ಹೋಗಬೇಕೆಂದು ೫-೩೦ ಎ.ಎಂ ದ ಸುಮಾರಿಗೆ ಗಾರ್ಡನದ ಮುಖ್ಯ ಗೇಟ್ ಹತ್ತಿರ ಬರುತ್ತಿದ್ದಾಗ ಅದೇ ಸಮಯಕ್ಕೆ ೩ ಜನ ಅಪರಿಚಿತ ಸುಮಾರು ೨೦ ರಿಂದ ೨೫ ವರ್ಷ ವಯಸ್ಸಿನವರು ಒಂದು ಮೋಟಾರ್ ಸೈಕಲ್ ಮೇಲೆ ನನ್ನ ಹತ್ತಿರ ಬಂದು ನನಗೆ ಬೋಸಡಿ ಮಗನೇ ಇಲ್ಲಿ ಏಕೆ ನಿಂತಿರುವಿ ನಿನ್ನ ಹತ್ತಿರ ಏನು ಇರುತ್ತದೆ ಕೊಡು ಅಂತಾ ಒಬ್ಬನು ನನಗೆ ಚಾಕುವಿನಿಂದ ಎಡಗೈ ಹಸ್ತ ಹಾಗೂ ಉಂಗುರು ಬೆರಳಿಗೆ ಮತ್ತು ಬಲಗೈ ಮೊಣಕಟ್ಟು ಹತ್ತಿರ ಹೊಡೆದು ರಕ್ತಗಾಯ ಪಡಿಸಿ ನನ್ನ ಹತ್ತಿರವಿದ್ದ ೬೫೦೦/-ರೂಪಾಯಿ ನಗದು ಹಣ ಒಂದು ರೆಡಮಿ ೧೦ಪ್ರೋ ಮೊಬೈಲ ಅಂದಾಜು ಕಿಮ್ಮತ್ತು ೧೫೦೦೦/-ರೂ ಕಿಮ್ಮತ್ತಿನದು ಜಬರದಸ್ತಯಿಂದ ಕಸಿದುಕೊಂಡು ಮೋಟಾರ್ ಸೈಕಲ್ ಮೇಲೆ ಜಗತ್ತ್ ವೃತ್ತದ ಕಡೆಗೆ ಓಡಿ ಹೋದರು. ಅವರನ್ನು ನೋಡದಲ್ಲಿ ಗುರುತಿಸುತ್ತೇನೆ. ಈ ವಿಷಯವನ್ನು ನನ್ನ ಮಾವ ಅಬ್ದುಲ ಸಮದ್, ಸಂಬಂದಿ ಮಹ್ಮದ ಸಲೀಮ ಇವರಿಗೆ ವಿಷಯ ತಿಳಿಸಿದಾಗ ಅವರು ನನಗೆ ಒಂದು ಆಟೋದಲ್ಲಿ ಹಾಕಿಕೊಂಡು ಬಂದು ಉಪಚಾರ ಕುರಿತು ಬಹುಮನಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಅವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:20.09.2022 ರಂದು 12:30 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಕರುಣಾಕರ ತಂದೆ ನಾರಾಯಣ ಭಟ್ಟ್ ಪೂಜಾರಿ ವಯ: 48 ವರ್ಷ ಜಾ: ಬ್ರಾಹ್ಮಣ ಉ: ಪುರೋಹಿತ ಕೆಲಸ ಸಾ|| ಪ್ಲಾಟ ನಂ. 46/8 ಗೋವಿಂದ ನಗರ ರಾಘವೇಂದ್ರ ಮಠದ ಎದರುಗಡೆ ಬಿದ್ದಾಪೂರ ಕಾಲೋನಿ ಕಲಬುರಗಿ ಮೊ.ನಂ. 9449661484 ಈ ಮೂಲಕ ತಮ್ಮಲ್ಲಿ ವಿನಂತಿಸಿ ಕೊಳ್ಳುವುದೆನೆಂದರೆ, ನಾನು ಪುರೋಹಿತ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನಗೆ ಕೃತಿಕಾ ಅಂತ ಹೆಂಡತಿ ಇದ್ದು, ನಮಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗನಿರುತ್ತಾನೆ. ನಾನು ಮೇಲೆ ನಮೂದ ಮಾಡಿದ ವಿಳಾಸದಲ್ಲಿ ನಮ್ಮ ಸ್ವಂತ ಮನೆ ಇರುತ್ತದೆ. ನಾನು ಪುರೋಹಿತ ಕೆಲಸದ ನಿಮಿತ್ಯ ಗಂಡ ಹೆಂಡತಿ ಇಬ್ಬರು ಗಾಣಗಾಪೂರದಲ್ಲಿ ಇರುತ್ತೇವೆ. ಮಗ ಮತ್ತು ಮಗಳು ಕಲಬುರಗಿ ನಗರದ ಮನೆಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾರೆ.  ಹೀಗಿದ್ದು ನಿನ್ನೆ ದಿನಾಂಕ:19.09.2022 ರಂದು  ನನ್ನ ಮಗಳಾದ ಕಾವ್ಯ ಇವಳು ನಮ್ಮ ಭೇಟಿಗಾಗಿ ಗಾಣಗಾಪೂರಕ್ಕೆ ಬಂದಿದ್ದು ಮನೆಯಲ್ಲಿ ಮಗ ಕುನಾಲ ಇದ್ದನು. ಮಗನು ರಾತ್ರಿ 10:00 ಗಂಟೆ ಸುಮಾರಿಗೆ ಮನೆಗೆ ಬೀಗ ಹಾಕಿಕೊಂಡು ವಿದ್ಯಾಭ್ಯಾಸದ ನಿಮಿತ್ಯ ತನ್ನ ಸ್ನೇಹಿತನ ಮನೆಗೆ ಹೋಗಿರುತ್ತಾನೆ. ಇಂದು ದಿನಾಂಕ:20.09.2022 ರಂದು ಬೆಳಿಗ್ಗೆ 06:00 ಗಂಟೆಗೆ ನಮ್ಮಮಗ ಕುನಾಲ ಇತನು ಮನೆಗೆ ಬಂದು ನೋಡಲಾಗಿ ಮನೆಯ ಬೀಗ ಮುರಿದು ಕೆಳಗೆ ಬಿದ್ದಿದ್ದು ಅವನು ಗಾಬರಿಯಾಗಿ ಒಳಗೆ ಹೋಗಿ ನೋಡಲು ಬೆಡರೂಮನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅವನು ತನ್ನ ಪ್ಯಾಂಟಿನ ಜೇಬಿನಲ್ಲಿ ಇಟ್ಟಿದ್ದ ನಗದು ಹಣ ರೂ, 6,000/- ಗಳು ಇದ್ದಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ಈ ವಿಷಯದ ಬಗ್ಗೆ ನನಗೆ ತಿಳಿಸಿದಾಗ ನಾನು ಕಲಬುರಗಿಯ ನಮ್ಮ ಮನೆಗೆ ಬಂದು ನೋಡಲಾಗಿ ಕಳ್ಳತನ ಆಗಿದ್ದು ನಿಜವಿರುತ್ತದೆ. ಕಾರಣ ದಿನಾಂಕ:19.09.2022 ರ ರಾತ್ರಿ 10:00 ಗಂಟೆಯಿಂದ ದಿನಾಂಕ:20.09.2022 ರ ಬೆಳಿಗ್ಗೆ 06:00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬೀಗ ಮುರಿದು ಅಕ್ರಮವಾಗಿ ಒಳಗೆ ಪ್ರವೇಶಮಾಡಿ ಮನೆಯಲ್ಲಿದ್ದ ನಗದು ಹಣ ರೂ, 6000/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ಹಣ ನಮಗೆ ದೊರಕಿಸಿ ಕೊಡಲು ವಿನಂತಿ ಅಂತ ಇತ್ಯಾದಿಯಾಗಿದ್ದ ಫಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-20-09-2022 ರಂದು ಫಿರ್ಯಾದಿ  ಆಸ್ಪತ್ರಯಲ್ಲಿ ನೀಡೆದ ಫಿರ್ಯಾದಿಯೇನೆಂದರೆ  ಸದರಿ ಆರೋಪಿತರಲ್ಲಿ ಒಬ್ಬನಾದ ದರ್ಷನ ಈತನು ನಮ್ಮ ತಂಗಿಗೆ ಈ ಹಿಂದೆ ಚುಚಾಯಿಸಿದ್ದರಿಂದ ಅವನಿಗೆ ತಿಳಿಹೇಳಿದ್ದು ಸದರಿಯವರು ನಮ್ಮ ಹತ್ತಿರ ಮಾತನಾಡುವುದಿದೆ ಎಂದು ಕರೆಯಿಸಿ ನನಗೆ ಮತ್ತು ನಮ್ಮ ಗೆಳೆಯರಿಗೆ ರಾಡಿನಿಂದ ಹೊಡೆದು ಭಾರಿ ಗಾಯಗಿಳಿಸಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ಆರೋಪಿತರು ದಿನಾಂಕ ೨೦-೦೯-೨೦೨೨ ರಂದು ೪.೦೦ ಪಿ.ಎಮ್ ಗೆ ಸದರಿ ಫಿರ್ಯಾದಿಗೆ ಸರಳ ಬಡ್ಡಿಯಂತೆ ಹಣ ನೀಡಿ ಆನಂತರ ಬಡ್ಡಿ ಚಕ್ರ ಬಡ್ಡಿ ಆದ ಹಣ ಕೊಡು ಅಂತಾ ತೆಡದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿ ಅತೀಕ್ರಮ ಪ್ರವೇಶ ಮಾಡಿ ಮನೆಗೆ ಕೀಲಿ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-10-2022 02:39 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080