ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ: 20.08.2022 ರಂದು ಮದ್ಯಾಹ್ನ 12.30 ಗಂಟೆಗೆ ಫಿರ್ಯಾದಿ ಶ್ರೀಮತಿ ಧನಲಕ್ಷ್ಮೀ ಗಂಡ ವಿಜಯಕುಮಾರ ಸಿಂದಗಿ ವಯ|| 30 ವರ್ಷ ಜಾ|| ಹೊಲೆಯ ಉ|| ಮನೆಕೆಲಸ ಸಾ|| ಪ್ಲಾಟ ನಂ. 9 ಬ್ಯಾಂಕ್ ಕಾಲೋನಿ ಕಲಬುರಗಿ ಇವರ ಮೂಲಕ ಕಳುಹಿಸಿದ ದೂರು ಅರ್ಜಿಯ ಸಾರಾಂಶವೆನೆಂದರೆ, ನನಗೆ ಒಂದು ವರ್ಷದ ಹಿಂದೆ ವಿಜಯಕುಮಾರ ಇವರೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ನಮ್ಮ ಬ್ಯಾಂಕ್ ಕಾಲೋನಿಯ ಮನೆಯಲ್ಲಿ ನಾನು ನನ್ನ ಗಂಡ ಹಾಗೂ ಅತ್ತೆ ಕಸ್ತೂರಿಬಾಯಿ ವಾಸವಾಗಿರುತ್ತೆವೆ. ಅಲ್ಲಿ ನಮ್ಮ ಮನೆಗೆ ಮಾರ್ಚ ತಿಂಗಳಲ್ಲಿ ನಮ್ಮ ನಾದಿನಿ ಅಂಬುಜಾ ಮತ್ತು ಅತ್ತೆ ಕಸ್ತೂರಿಬಾಯಿ ನನಗೆ ಮತ್ತು ನನ್ನ ಗಂಡನಿಗೆ ಹೊಡೆ-ಬಡೆ ಮಾಡಿದ್ದರಿಂದ ನಾವು ಮನೆ ಬಿಟ್ಟು ನನ್ನ ತವರು ಮನೆ ಬಸವಕಲ್ಯಾಣಕ್ಕೆ ಹೋಗಿರುತ್ತೆವೆ. ಈ ಜಗಳಕ್ಕೆ ಸಂಬಂಧಿಸಿದಂತೆ ನಾನು ದೂರು ನೀಡಿರುತ್ತೆನೆ ನಾನು ಗರ್ಭವತಿ ಆಗಿದ್ದರಿಂದ ಆದಿತಿಯಲ್ಲಿ ಉಪಚಾರ ಪಡೆಯುತ್ತಿದ್ದು ಇದರ ರಿಪೊರ್ಟಗಳೆಲ್ಲಾ ಕಲಬುರಗಿ ಮನೆಯಲ್ಲಿ ಇಟ್ಟಿರುತ್ತೆವೆ. ನನಗೆ ಡೆಲವರಿ ದಿನಾಂಕ ಅಗಸ್ಟ ತಿಂಗಳಲ್ಲಿ ನೀಡಿದ್ದು ಇರುತ್ತದೆ. ಹೀಗಿದ್ದು ದಿನಾಂಕ: 11.08.2022 ರಂದು ಬೆಳಿಗ್ಗೆ 10.30 ಗಂಟೆಗೆ ನಾನು ಮತ್ತು ನನ್ನ ಗಂಡ ನಮ್ಮ ಮನೆಗೆ ಹೋಗಿ ನನ್ನ ಆಸ್ಪತ್ರೆಯ ರಿಪೊರ್ಟಗಳನ್ನು ತೆಗೆದುಕೊಳ್ಳಬೆಕೆನ್ನುವಷ್ಟರಲ್ಲಿ ಅಲ್ಲಿಯೇ ಇದ್ದು ಸಂದ್ಯಾರಾಣಿ ತಂದೆ ಹುಸನಪ್ಪಾ, ಶ್ರೀಧರ ತಂದೆ ಬಸವಂತರಾಯ ಸಿಂದಗಿ, ನನ್ನ ನಾದಿನಿ ಅಂಬುಜಾ, ಶ್ರೀದೇವಿ, ಮೈದುನ ಸಚಿನ್ ತಂದೆ ಬಸವಂತಪ್ಪಾ ಹಾಗೂ ರಾಹುಲ ತಂದೆ ಬಾಳಪ್ಪಾ, ಹುಸನಪ್ಪಾ ಅತ್ತೆ ಕಸ್ತೂರಿಬಾಯಿ ಕೂಡಿ ನನಗೆ ಮತ್ತು ನನ್ನ ಗಂಡನಿಗೆ ರಂಡಿ ಮತ್ತೆ ಈ ಮನೆಗೆ ಯಾಕೆ ಬಂದಿದ್ದಿ ಅಂತಾ ತಡೆದಾಗ ನಾವು ಆಸ್ಪತ್ರೆಯ ರಿಪೊರ್ಟಗಳು ತೆಗೆದುಕೊಂಡು ಹೋಗುತ್ತೆವೆ ಅಂತಾ ಹೇಳಿದರು ಒಳಗೆ ಬಿಡದಿದ್ದಾಗ ನಾನು ರಿಪೊರ್ಟ ತೆಗೆದುಕೊಂಡು ಹೊಗುತ್ತೆನೆ ಅಂತಾ ನಮ್ಮ ನಾದಿನಿ ಅಂಬುಜಾ ಇವಳು ನನಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕುತ್ತಿಗೆ ಹಿಡಿದು ನಿನಗೆ ಖಲ್ಲಾಸ ಮಾಡುತ್ತೆವೆ ಅಂತಾ ಮತ್ತೆ ಮನೆಗೆ ಬಂದಿದ್ದಿ ಅಂತಾ ಕುತ್ತಿಗೆ ಹಿಸುಕಿ ಕೊಲೆಗೆ ಪ್ರಯತ್ನಿಸಿರುತ್ತಾರೆ ನನ್ನ ಗಂಡನಿಗೆ ನಮ್ಮ ಮೈದುನ ಸಚೀನ್ ಭಾವ ಶ್ರೀಧರ ಹಾಗೂ ನಾದಿನಿಯ ಗಂಡ ರಾಹುಲ್ ಇವರು ಕೈಯಿಂದ ದೇಹದ ಭಾಗದ ಮೇಲೆ ಹೊಡೆದಿರುತ್ತಾರೆ ಅಂಬುಜಾ ಇವಳ ಗಂಡ ಹುಸೇನಪ್ಪಾ ಹೊಡೆಯಿರಿ ಮಕ್ಕಳಿಗೆ ಕೇಸ್ ಮಾಡಿ ಮತ್ತೆ ಮನಿಗಿ ಬಂದಾರ ಖಲ್ಲಾಸ ಮಾಡಿ ಅಂತಾ ಬೆದರಿಕೆ ಹಾಕಿರುತ್ತಾರೆ. ನಮ್ಮ ಅತ್ತೆ ಕಸ್ತೂರಿಬಾಯಿ ಮತ್ತು ಸಂದ್ಯಾರಾಣಿ ಇವರುಗಳು ನನಗೆ ಬಾಯಿಗೆ ಬಂದಂತೆ ಬೈದು ಹೊಯ್ಯಾಳಿಸಿರುತ್ತಾರೆ. ಆಗ ನಾವು ಚಿರಾಡುತ್ತಾ ನೆಲಕ್ಕೆ ಬಿದ್ದು ಕುಳಿತಾಗ ನಮ್ಮನ್ನು ಹೊಡೆಯುವುದನ್ನು ಬಿಟ್ಟಿರುತ್ತಾರೆ. ಕಾರಣ ನಾನು ಬಸುರಿಯಾಗಿರುವುದರಿಂದ ಆಸ್ಪತ್ರೆಗೆ ತೊರಿಸಿರುವುದಿಲ್ಲಾ ನಾನು ಘಟನೆಯ ಬಗ್ಗೆ ಮನೆಯಲ್ಲಿ ಅಪ್ಪ-ಅಮ್ಮನೊಂದಿಗೆ ವಿಚಾರಿಸಿದೆನು. ಕಾರಣ ನನಗೆ ಮತ್ತು ನನ್ನ ಗಂಡನಿಗೆ ಅವಾಚ್ಯವಾಗಿ ಬೈದು ನನಗೆ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ ಅಂತಾ ನೀಡಿದ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:20.08.2022 ರಂದು 6.30 ಪಿಎಮ್ ಗಂಟೆಗೆ ನಮ್ಮ ಠಾಣೆಯ ಧರ್ಮಣ್ಣಾ ಸಿಹೆಚ್ಸಿ 219 ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆ, 4 ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಹಾಜರಪಡಿಸಿದರ ಸಾರಾಂಶವೇನೆಂದರೆ, ಇಂದು ದಿನಾಂಕ:20.08.2022 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಕೇಂದ್ರ ಕಾರಾಗೃಹದ ಹಿಂದೆಗಡೆ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಮ್ಮ ಠಾಣಾ ಸಿಬ್ಬಂದಿ ಜನರಾದ ಆನಂದ ಸಿಪಿಸಿ 296, ತಿರುಪತಿ ಸಿಪಿಸಿ 291 , ಮಹಿಬೂಬ ಸಿಪಿಸಿ 276 ಹಾಗೂ ಮೌನೇಶ ಸಿಪಿಸಿ 271 ರವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ನಂತರ ನಮ್ಮ ಪಿಐ ಸಾಹೇಬರಿಗೆ ಹಾಗೂ ಮಾನ್ಯ ಎಸಿಪಿ ಸಾಹೇಬರು ಸಬ್ ಅರ್ಬನ್ ಉಪವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಜನರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಸಾಯಂಕಾಲ 4.15 ಗಂಟೆಗೆ ಹೊರಟ್ಟು, ಭಾತ್ಮಿ ಸ್ಥಳಕ್ಕೆ ಹೊರಡುವಾಗ ಮಾರ್ಗಮಧ್ಯೆ ದಾರಿ ಹೊಕ್ಕ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಅವರಿಗೂ ಭಾತ್ಮಿ ಬಂದ ವಿಷಯ ತಿಳಿಸಿ ಅವರು ನಮ್ಮೊಂದಿಗೆ ದಾಳಿ ಕಾಲಕ್ಕೆ ಹಾಜರಿರಲು ಒಪ್ಪಿದ ಮೇರೆಗೆ ಅವರನ್ನು ನಮ್ಮೊಂದಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೊರಟು ಭಾತ್ಮೀ ಸ್ಥಳದ ಹತ್ತಿರ ಸಾಯಂಕಾಲ 4.30 ಗಂಟೆಗೆ ಗಿಡಗಳ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಕೆಲವು ಜನರು ದುಂಡಾಗಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 4.35 ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ ಕೆಲವು ಜನರು ಓಡಿ ಹೋಗಿದ್ದು ಇನ್ನು ಕೆಲವು ಜನರಿಗೆ ಸಿಕ್ಕಿದ್ದು ಸಿಕ್ಕಿದ ಜನರಿಗೆ ಹಿಡಿದು ಅವರಿಗೆ ಅಂಗಶೋಧ ಮಾಡಿ ಹೆಸರು ವಿಳಾಸ ಕೇಳಲು 1) ರಾಜಾಸಾಬ್ ತಂದೆ ಇಸಾಕಸಾಬ್ ವಯ:52 ವರ್ಷ ಉ: ಪಂಚರ ಅಂಗಡಿ ಕೆಲಸ ಜಾತಿ: ಜೇಲ್ ಕಾಲೋನಿ ಕಲಬುರಗಿ 2) ವಜೀರ ತಂದೆ ಖತಲಸಾಬ್ ಪೈಲ್ವಾನ ವಯ:35 ವರ್ಷ ಉ: ಗೌಂಡಿ ಕೆಲಸ ಜಾತಿ: ಮುಸ್ಲಿಂ ಸಾ: ಇಟಗಾ (ಕೆ) 3) ಸುನೀಲ ತಂದೆ ಶಿವಲಿಂಗಪ್ಪಾ ಕಿರಣಗಿ ವಯ:23 ವರ್ಷ ಉ: ಕೂಲಿಕೆಲಸ ಜಾತಿ: ಕಬ್ಬಲಿಗಾ ಸಾ: ಇಟಗಾ (ಕೆ)  ಹಾಗೂ 4) ರವಿಚಂದ್ರ ತಂದೆ ಬಸವರಾಜ ಸಿರನೂರ ವಯ:25 ವರ್ಷ ಉ: ಚಾಲಕ ಜಾತಿ: ಲಿಂಗಾಯಿತ ಸಾ: ಇಟಗಾ(ಕೆ) ಅಂತಾ ತಿಳಿಸಿದ್ದು, ಸದರಿ ಸ್ಥಳದಲ್ಲಿ 52 ಇಸ್ಪೇಟ ಎಲೆಗಳು ಹಾಗೂ ನಗದು ಹಣ 2650/- ರೂ. ಸಿಕ್ಕಿದ್ದು ಇವುಗಳನ್ನು ಪಂಚರ ಸಮಕ್ಷಮದಲ್ಲಿ 4.40 ಪಿಎಮ್ ಗಂಟೆಯಿಂದ 5.40 ಪಿಎಮ್ ಗಂಟೆಯವರೆಗೆ ಗುನ್ನೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆಯನ್ನು ಬರೆದು ಮುಗಿಸಲಾಯಿತು. ನಂತರ ಮುದ್ದೇಮಾಲು ಮತ್ತು ಆರೋಪಿತರೊಂದಿಗೆ 6.30 ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊರಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 02-09-2022 04:40 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080