ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ ಠಾಣೆ:-  ದಿನಾಂಕಃ 20-07-2022  ರಂದು ೧೧.೦೦ ಎ.ಎಮ್ ಕ್ಕೆ ಭೀಮರೆಡ್ಡಿ ತಂದೆ ಚಂದ್ರಶೇಖರರೆಡ್ಡಿ ರೇಶ್ಮಿ ವಯ-೪೯ ವರ್ಷ ಜಾ||ಲಿಂಗಾಯತ ರೆಡ್ಡಿ ಉ||ವ್ಯಾಪಾರ ಸಾ||ಕೈಲಾಸ ನಗರ  ಕಲಬುರಗಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆAದರೆ ನಾನು ಭೀಮರೆಡ್ಡಿ ತಂದೆ ಚಂದ್ರಶೇಖರರೆಡ್ಡಿ ರೇಶ್ಮಿ ವಯ-೪೯ ವರ್ಷ ಜಾ||ಲಿಂಗಾಯತ ರೆಡ್ಡಿ ಉ||ವ್ಯಾಪಾರ ಸಾ||ಕೈಲಾಸ ನಗರ  ಕಲಬುರಗಿ ನಿವಾಸಿತನಿದ್ದು, ನಾನು ೨೦೧೫ ನೇ ಸಾಲಿನಲ್ಲಿ  ಒಂದು ಹೋಂಡಾ ಡಿಯೋ ಮೋಟಾರ ಸೈಕಲ್ ಖರೀದಿ ಮಾಡಿದ್ದು, ಮೋಟಾರ ಸೈಕಲ್ ನಂ: ಕೆಎ-೩೨ ಇಎಂ-೦೯೨೮ ನೇದ್ದು  ಇರುತ್ತದೆ. ಸದರಿ ಮೋಟಾರ ಸೈಕಲನ್ನು ನಾನು ೨೦೧೫ ನೇ ಸಾಲಿನಿಂದ ನಾನೆ ನಡೆಸಿಕೊಂಡು ಬಂದಿರುತ್ತೇನೆ. ಹೀಗಿರುವಾಗ ದಿನಾಂಕ:೧೬.೦೨.೨೦೨೨ ರಂದು ರಾತ್ರಿ ೮-೦೦ ಗಂಟೆ ಸುಮಾರಿಗೆ ಕೈಲಾಸ ನಗರದಲ್ಲಿರುವ ನಮ್ಮ ಮನೆಯ ಮುಂದೆ ನನ್ನ ಮೋಟಾರ ಸೈಕಲನ್ನು ನಿಲ್ಲಿಸಿ ಮರುದಿವಸ ಬೆಳಿಗ್ಗೆ ೬-೦೦ ಗಂಟೆ ಸುಮಾರಿಗೆ ಎದ್ದು ನೋಡಲಾಗಿ ನಮ್ಮ ಮನೆ ಮುಂದೆ ನಿಲ್ಲಿಸಿರುವ ನನ್ನ ಮೋÃಟಾರ ಸೈಕಲ್ ನಂ:ಕೆಎ-೩೨ ಇಎಂ-೦೯೨೮ ಅ||ಕಿ|| ೩೦೦೦೦/-ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾದ ನನ್ನ ಮೋಟಾರ ಸೈಕಲನ್ನು ನಾನು ನನ್ನ ಸ್ನೇಹಿತರು ಮತ್ತು ಸಂಬAಧಿಕರಲ್ಲಿ ವಿಚಾರಿಸಿದ್ದು ಎಲ್ಲೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ಕೊಡುವದಕ್ಕೆ ತಡವಾಗಿರುತ್ತದೆ.

ನನ್ನ ಮೋಟಾರ ಸೈಕಲ್‌ನ ಸಂಪೂರ್ಣ ಮಾಹಿತಿ.

ಮೋಟಾರ ಸೈಕಲ ನಂಬರ        : :KA-32  EM-0928

ಮೋಟಾರ ಸೈಕಲ ಚೆಸ್ಸಿ ನಂಬರ    : ME4JF397KF7007287

ಮೋಟಾರ ಸೈಕಲ ಇಂಜನ ನಂಬರ : JF39E71102963

ಮೋಟಾರ ಸೈಕಲ ಮಾಡಲ ನಂಬರ : 2015

ಮೋಟಾರ ಸೈಕಲ  ಬಣ್ಣ         BLACK

ಅಂದಾಜು ಕಿಮ್ಮತ್ತು             :3೦೦೦೦/-

       ಈ ಮೇಲ್ಕಾಣಿಸಿದ ವಿವರ ನನ್ನ ಮೋಟಾರ ಸೈಕಲ್‌ನ ಸಂಪೂರ್ಣವಾದ ಮಾಹಿತಿ ಇರುತ್ತದೆ. ಕಾರಣ ಮಾನ್ಯರವರು ಕಳೆದು ಹೋದ ನನ್ನ ಮೋಟಾರ ಸೈಕಲ್‌ನ್ನು ಹುಡುಕಾಡಿ ಕೊಡಲು ವಿನಂತಿ ಇರುತ್ತದೆ. ಅಂತಾ ಇತ್ಯಾಧಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ ;- ದಿನಾಂಕ ೧೮.೦೭.೨೦೨೨ ರಂದು ೫.೩೦ ಪಿಎಮ್ ದಿಂದ ೫.೩೬ ರ ಮಧ್ಯ ಸದರಿ ಆರೋಪಿತರು ಫಿರ್ಯಾದಿಗೆ ಹೊಡೆಬಡೆ ಮಾಡಿ ಗಾಯ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ ಅಪರಾಧ.

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 20-07-2022  ರಂದು ೦೭:೩೦  ಪಿಎಮ್ ಕ್ಕೆ ಫಿರ್ಯಾದಿದಾರರಾದ ಗಜಾನನ ತಂದೆ ಹಣಮಂತ ಅಂಬಿ ವಯ:೨೬ ವರ್ಷ ಜಾ:ಕಬ್ಬಲಿಗ ಉ:ಹೆ.ಡಿ.ಎಫ್.ಸಿ ಬ್ಯಾಂಕ್ ನೌಕರ ಸಾ//ತಿಗಡಿ ಗ್ರಾಮ ಮೂಡಲಿಗಿ ತಾಲ್ಲೂಕು ಬೆಳಗಾವಿ ಜಿಲ್ಲೆ ಹಾಲಿವಾಸ:ಮಲ್ಲಿಕಾರ್ಜುನ ರವರ ಮನೆಯಲ್ಲಿ ಬಾಡಿಗೆ ಅಂಬಾಭವಾನಿ ಗುಡಿಯ ಹತ್ತಿರ ಭಾಗ್ಯನಗರ ಕಲಬುರಗಿ ನಗರ ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನನ್ನದೊಂದು ಸ್ವಂತ ಹೀರೊ ಹೆಚ್.ಎಫ್ ಡಿಲಕ್ಸ್ ಮೋಟಾರ ಸೈಕಲ್ ನಂ: KA-68-H-8158 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ: ೧೬/೦೬/೨೦೨೨ ರಂದು ಬೆಳಿಗ್ಗೆ ೧೦:೦೦ ಎಎಮ್ ಗಂಟೆಗೆ ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಹೆ.ಡಿ.ಎಫ್.ಸಿ ಬ್ಯಾಂಕ್ ಹಿಂದುಗಡೆ ನಿಲ್ಲಿಸಿ ಬ್ಯಾಂಕ್ ಒಳಗಡೆ ಹೋಗಿ ಕರ್ತವ್ಯ ಮುಗಿಸಿಕೊಂಡು ಮರಳಿ ಅದೆ ದಿನ ಮದ್ಯಾನ ೦೩:೩೦ ಪಿಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ ;- ದಿನಾಂಕ ೧೯-೦೭-೨೦೨೨ ರಂದು ಫಿರ್ಯಾದಿದಾರರು  ಜಪರಬಾದನಲ್ಲಿರುವ ಸಮಾಧಾನ್ ಹೋಟೆಲ್ ನ ಬಳಿಯಲ್ಲಿ ತಮ್ಮ ಸ್ನೇಹಿತನಿಗೆ ಸೇರಿದ ಕೆಎ ೩೨ ಇಎಲ್ ೭೪೬೮ ನೇದ್ದನ್ನು ಮದ್ಯಾಹ್ನ ೩ ಗಂಟೆ ಸುಮಾರಿಗೆ ಹಚ್ಚಿ ಚಾ  ಕುಡಿಯಲು ಹೋಟೆಲ್ ಒಳಗೆ ಹೋಗಿದ್ದ ಸಂದರ್ಭದಲ್ಲಿ ಯಾರೋ ಕಳ್ಳರು ನನ್ನ ಸ್ನೇಹಿತನಿಗೆ ಸೇರಿದ  ಮತ್ತು ತೆಗೆದುಕೊಂಡು ಹೋದ ಬೈಕ್ ಅನ್ನು ಅಪಹರಿಸಿದ್ದು ಅದನ್ನು ಹುಡುಕಿಕೊಡಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ  :- ದಿನಾಂಕಃ-20-07-2022  ರಂದು ಸರಕಾರಿ ತರಪೆ ಪರ‍್ಯಾದಿದಾರರು ಏರಿಯಾದಲ್ಲಿ ಪೆಟ್ರೋಲಿಂಗ್ ನಲಿದ್ದಾಗ ಸುಮಾರು  ಸಂಜೆ ೫ ಗಂಟೆ ಸುಮಾರಿಗೆ ಪಿಯಾಜಿಯೋ ಅಪೆ ವಾಹನದಲ್ಲಿ ಅನದಿಕೃತವಾಗಿ ಗುಟ್ಕಾಕ್ಕೆ ಸಂಭಂದಿಸಿದ ಖಚ್ಚಾ ಪದಾರ್ಥಗಳನ್ನು ಇಂಡಸ್ಟ್ರಿಯಲ್ ಏರಿಯಾ ಸೆಕೆಂಡ್ ಪೇಸ್ನಲ್ಲಿ ಸಂಗ್ರಹಿಸಿದ್ದು ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಮಾಡಿದಾಗ ಅಲ್ಲಿ ದಾಖಲೆಗಳನ್ನು ಕೇಳಲಾಗಿ ಯಾವುದೇ ದಾಖಲೆಗಳಿರುವುದಿಲ್ಲ ಸದರಿ ಮುದ್ದೆ ಮಾಲು ಮತ್ತು ವಾಹನವನ್ನು ವಶಕ್ಕೆ ಪಡೆದು ಸದರಿ ಆರೋಪಿತರ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 28-07-2022 01:12 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080