ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 18-02-2023 ರಂದು ರಾತ್ರಿ 06:30 ಪಿ.ಎಂ.ದಿಂದ ದಿನಾಂಕ: 19-02-2023 ರಂದು ಬೆಳೆಗ್ಗೆ 7:00 ಎ.ಎಂ. ಮದ್ಯದಲ್ಲಿ ಗುಂಡುರಾವ ತಲವಾರ ರವರ ಖುಲ್ಲಾ ಜಾಗದಲ್ಲಿ ಮಾತಾ ಮಾಣಿಕೇಶ್ವರ ಕಾಲೋನಿ ರಾಜಾಪೂರ ಶಹಾಬಾದ ರೋಡ ಕಲಬುರಗಿ ಬಯಲು ಜಾಗೆಯಲ್ಲಿ ನಿಲ್ಲಿಸಿದ ನನ್ನ ಟಾಟಾ ಟಿಪ್ಪರ ನಂ. ಕೆ.ಎ.32. ಡಿ-1967 ನೆದ್ದು ಅಕಿ. 20,00,000/- ರೂಪಾಯಿ ಬೆಲೆಬಾಳುವ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ  ಪೊಲೀಸ್ ಠಾಣೆ :- ದಿನಾಂಕ: 20/02/2023  ರಂದು 5-30 ಪಿಎಮ್ ಕ್ಕೆ ಶ್ರೀ  ಶಮೀರ್ ಹೆಚ್.ಮುಲ್ಲಾ ಪಿಐ ಸಿಸಿಬಿ ಘಟಕ ಕಲಬುರಗಿ ರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಒಬ್ಬ ಆರೋಪಿ, ಮುದ್ದೇಮಾಲು ಮತ್ತು ವರದಿಯೊಂದಿಗೆ ಠಾಣೆಗೆ ತಂದು ಹಾಜರುಪಡಿಸಿದ್ದು, ವರದಿ ಸಾರಾಂಶವೆನೆಂದರೆ ಇಂದು ದಿನಾಂಕ: 20-02-2023 ರಂದು ಬೆಳಿಗ್ಗೆ 11-00 ಗಂಟೆಗೆ ನಾನು ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಬಾಪುನಗರ ಕಾಲೋನಿ ಹತ್ತಿರ ಹಾಳು ಬಿದ್ದ ಭರತನಗರ ಸರ್ಕಾರಿ ಹಾಸ್ಟೆಲ್ ಒಳಗಡೆ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದು ಸದರಿ ಬಾತ್ಮಿಯನ್ನು ಖಚಿತಪಡಿಸಿಕೊಳ್ಳಲು ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ, ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಮಾನ್ಯ ಉಪ ಪೊಲೀಸ್ ಆಯುಕ್ತರು, (ಕಾ&ಸು) ಕಲಬುರಗಿ ನಗರ ರವರಿಂದ ಸರ್ಚ ವಾರೆಂಟ ನೀಡುವಂತೆ ಕೋರಿ ಅನುಮತಿ ಪತ್ರ ಮುಖಾಂತರ ಕೋರಿ ಸರ್ಚ ವಾರೆಂಟ್ ಮಧ್ಯಾಹ್ನ 12-00 ಗಂಟೆಗೆ ಪಡೆದುಕೊಂಡಿದ್ದು, ನಂತರ ಇಬ್ಬರೂ ಸರ್ಕಾರಿ ಪಂಚರನ್ನು ನಿಯೋಜಿಸಿ ಕಳುಹಿಸಿಕೊಡುವಂತೆ ಮಾನ್ಯ ಕಾರ್ಯಾನಿರ್ವಾಹಣಾ ಅಧಿಕಾರಿಗಳು, ತಾಲ್ಲೂಕಾ ದಂಡಾಧಿಕಾರಿಗಳು, ಕಲಬುರಗಿ ರವರಿಗೆ ಪತ್ರ ಮುಖಾಂತರ ಕೋರಿದ್ದು, ಅದರಂತೆ ಮಾನ್ಯ ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ ಕಲಬುರಗಿ ರವರಿಗೆ ಜಪ್ತಿಪಡಿಸಿಕೊಂಡ ಗಾಂಜಾವನ್ನು ಅಳತೆ ಮತ್ತು ತೂಕ ಮಾಡಲು ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ ಅಳತೆ ಮತ್ತು ತೂಕ ಮಾಡುವ ಯಂತ್ರದೊಂದಿಗೆ ಕಳುಹಿಸಿಕೊಡಲು ಪತ್ರದ ಮುಖಾಂತರ ಕೋರಿದ್ದು ಇರುತ್ತದೆ. ಅದರಂತೆ ಪಂಚರಾದ 1) ಶ್ರೀ ಮಾಳಪ್ಪ ತಂದೆ ಅಂಬಣ್ಣ ನಾಯಿಕೊಡಿ ವ:45 ವರ್ಷ, ಜಾತಿ:ಕುರುಬ ಉ:ಗ್ರೇಡ-2 ಕಾರ್ಯದರ್ಶಿ, ಅವರಾದ (ಬಿ) ಗ್ರಾಮ ಪಂಚಾಯತ ಈಗ ಸದ್ಯ ತಾಲೂಕಾ ಪಂಚಾಯತ ಕಾರ್ಯಾಲಯ, ಸಾ: ಯಳವಂತಗಿ(ಕೆ) ಗ್ರಾಮ, ತಾ:ಜಿ: ಕಲಬುರಗಿ, ಮೊ.ನಂ. 9972037573, 2) ಶ್ರೀ ರಮೇಶ ತಂದೆ ರಾಮಶೇಟ್ಟಿ ರಾಜಾಪೂರ, ವ:45 ವರ್ಷ, ಜಾತಿ:ಲಿಂಗಾಯತ, ಉ:ಪಿ.ಡಿ.ಓ. ನಂದೂರ(ಕೆ) ಈಗ ಸಧ್ಯ ತಾಲ್ಲೂಕಾ ಪಂಚಾಯತ ಕಾರ್ಯಾಲಯ, ಸಾ:ಕೊಡದೂರ, ತಾ:ಕಾಳಗಿ, ಜಿ:ಕಲಬುರಗಿ ಮೊ.ನಂ.9738101556 ರವರು ಮಧ್ಯಾಹ್ನ 1-00 ಗಂಟೆಗೆ ಬಂದು ಹಾಜರಾದರು.  ಅಲ್ಲದೇ ಶ್ರೀ ವಿಶ್ವನಾಥ ರೆಡ್ಡಿ, ನಿರೀಕ್ಷಕರು, ತೂಕ ಮತ್ತು ಅಳತೆ ಮಾಡುವ ಇಲಾಖೆ ರವರು ಮಧ್ಯಾಹ್ನ 1-00 ಗಂಟೆಗೆ ಬಂದು ಹಾಜರಾದರು. ಮತ್ತು ಶ್ರೀ ಸಂತೋಷ ಬನ್ನಟ್ಟಿ, ಎ.ಸಿ.ಪಿ. ಸಿ.ಸಿ.ಬಿ. ಘಟಕ ಕಲಬುರಗಿ ನಗರ ಇವರು ಪತ್ರಾಂಕಿತ ಅಧಿಕಾರಿಯಾಗಿ ಅವರು ಕೂಡಾ ಹಾಜರಿದ್ದು, ಹಾಗೂ ಸಿಬ್ಬಂದಿಯವರಾದ 1) ಸುನೀಲಕುಮಾರ ಸಿ.ಹೆಚ್.ಸಿ-167, 2) ಅಂಬಾಜಿ ಸಿಪಿಸಿ-131, 3) ವಿಶ್ವನಾಥ ಸಿಪಿಸಿ-686, 4) ಅರವಿಂದ ಸಿಪಿಸಿ-955, 5) ಶ್ರೀಶೈಲ ಸಿಪಿಸಿ-692, 6) ಯಲ್ಲಪ್ಪ ಸಿಪಿಸಿ-220, 7) ಶಿವಕುಮಾರ ಸಿಪಿಸಿ-16715, 8) ಅಶೋಕ ಕಟಕೆ ಸಿಪಿಸಿ-966,  9) ಅಶೋಕ ಸಿಪಿಸಿ-647, 10) ನಾಗರಾಜ ಸಿಪಿಸಿ-1257, ರವರು ಹಾಜರಿದ್ದು, ಅವರನ್ನು ನಮಗೆ ಪರಿಚಯಿಸಿ ನಂತರ ಪಂಚರಿಗೆ ತಿಳಿಸಿದ್ದೇನೆಂದರೆ, ಕಲಬುರಗಿ ನಗರದ ಬಾಪುನಗರ ಕಾಲೋನಿ ಹತ್ತಿರ ಹಾಳು ಬಿದ್ದ ಭರತನಗರ ಸರ್ಕಾರಿ ಹಾಸ್ಟೆಲ್ ಒಳಗಡೆ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದು, ಸದರಿ ಬಾತ್ಮಿಯನ್ನು ಖಚಿತಪಡಿಸಿಕೊಳ್ಳಲು ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ, ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಕ್ರಮ ಕೈಕೊಳ್ಳಬೇಕಾಗಿದ್ದು, ದಾಳಿ ಕಾಲಕ್ಕೆ ನಮ್ಮೊಂದಿಗೆ ಪಂಚರಾಗಿ ಹಾಜರಿದ್ದು ಪಂಚನಾಮೆ ತಯಾರಿಸಿಕೊಡುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ ಮತ್ತು ಒಪ್ಪಿಗೆ ಪತ್ರ ಕೂಡಾ ಕೊಟ್ಟಿರುತ್ತಾರೆ. ಅಲ್ಲದೇ ಶ್ರೀ ವಿಶ್ವನಾಥ ರೆಡ್ಡಿ, ನಿರೀಕ್ಷಕರು, ತೂಕ ಮತ್ತು ಅಳತೆ ಮಾಡುವವರಿಗೆ ದಾಳಿ ಕಾಲಕ್ಕೆ ದೊರೆತ ಗಾಂಜಾ ಅಳತೆ ಮಾಡಿಕೊಡುವಂತೆ ಕೇಳಿಕೊಂಡ ಮೇರೆಗೆ ಅವರು ಕೂಡಾ ಒಪ್ಪಿಕೊಂಡಿರುತ್ತಾರೆ. ಮತ್ತು ಒಪ್ಪಿಗೆ ಪತ್ರ ಕೊಟ್ಟಿರುತ್ತಾರೆ.ನಂತರ ನಾನು, ಪಂಚರು ಮತ್ತು ನಿರೀಕ್ಷಕರು, ತೂಕ ಮತ್ತು ಅಳತೆ ಮಾಡುವವರು ಮತ್ತು ಸಿಬ್ಬಂದಿ ಜನರು ಎಲ್ಲರೂ ಕೂಡಿ ಮಧ್ಯಾಹ್ನ 1-30 ಗಂಟೆಗೆ ಸರ್ಕಾರಿ ಜೀಪ ನಂ.ಕೆಎ-32-ಜಿ-0874 ನೇದ್ದರಲ್ಲಿ ಹೊರಟಿದ್ದು, ಸದರಿ ಜೀಪನ್ನು ಝಾಕೀರ ಹುಸೇನ ಎಪಿಸಿ-24 ಸಿಎಆರ್ ಕಲಬುರಗಿ ರವರು ಚಲಾಯಿಸುತ್ತಿದ್ದು, ಅದರಂತೆ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಸಂತೋಷ ಬನ್ನಟ್ಟಿ ರವರು ಸರ್ಕಾರಿ ಜೀಪ ನಂ.ಕೆಎ-32-ಜಿ-1249 ನೇದ್ದರಲ್ಲಿ ಹೊರಟಿದ್ದು, ಸದರಿ ಜೀಪನ್ನು ಗುರುನಾಥ ಎ.ಹೆಚ್.ಸಿ-56 ಸಿಎಆರ್ ಕಲಬುರಗಿ ರವರು ಚಲಾಯಿಸುತ್ತಿದ್ದು, ಕೆಲವು ಸಿಬ್ಬಂದಿಯವರು ಜೀಪಿನಲ್ಲಿ ಹಾಗೂ ಉಳಿದ ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರ ಸೈಕಲಗಳ ಮೇಲೆ ಹೊರಟು ಬಾತ್ಮಿ ಬಂದ ಸ್ಥಳವಾದ ಬಾಪುನಗರ ಕಾಲೋನಿ ಹತ್ತಿರ ಹಾಳು ಬಿದ್ದ ಭರತನಗರ ಸರ್ಕಾರಿ ಹಾಸ್ಟೆಲ್ ಹತ್ತಿರ ನಾವು ಮಧ್ಯಾಹ್ನ 1-50 ಗಂಟೆ ಸುಮಾರಿಗೆ ತಲುಪಿ ಎಲ್ಲರೂ ಜೀಪಿನಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಸದರಿ ಹಾಳು ಬಿದ್ದ ಭರತನಗರ ಸರ್ಕಾರಿ ಹಾಸ್ಟೆಲ್ ಒಳಗಡೆ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ನಮ್ಮ ಸಮಕ್ಷಮ ಮಧ್ಯಾಹ್ನ 2-00 ಗಂಟೆಗೆ ನಾನು ಅವರ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೇ ದಾಳಿ ಮಾಡಿ ಒಬ್ಬ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು ಪವನ ತಂದೆ ಬಾಬುರಾವ ಉಪಾಧ್ಯೆ, ವ:20 ವರ್ಷ, ಜಾತಿ:ಎಸ್.ಸಿ., ಉ:ವೇಟರ ಕೆಲಸ, ಸಾ:ಬಾಪುನಗರ ಕಲಬುರಗಿ, ಅಂತಾ ತಿಳಿಸಿದನು. ನಂತರ ನಮ್ಮ ಸಮಕ್ಷಮ ಆರೋಪಿತನ ಹತ್ತಿರ ಸ್ಥಳದಲ್ಲಿ ದೊರತ ವಸ್ತುಗಳ ವಿವರ ಈ ಕೆಳಗಿನಂತಿದೆ.

1) ಒಂದು ಬಿಳಿ ಪ್ಲಾಸ್ಟಿಕ ಗೊಬ್ಬರ ಚೀಲದಲ್ಲಿ ಗಾಂಜಾ ದೊರತಿದ್ದು, ಪರಿಶೀಲಿಸಲಾಗಿ ಸದರಿ ಗಾಂಜಾ ಖುಲ್ಲಾ ಇದ್ದು, ಅದು ಎಲೆ ಬೀಜ ಮಿಶ್ರಿತ ಇದ್ದು ಒಣಗಿದ ಗಾಂಜಾ ಇರುತ್ತದೆ.  ಸದರಿ ಪ್ಲಾಸ್ಟಿಕ ಗೊಬ್ಬರ ಚೀಲ ಸಮೇತ ವಿಶ್ವನಾಥ ರೆಡ್ಡಿ, ನಿರೀಕ್ಷಕರು, ತೂಕ ಮತ್ತು ಅಳತೆ ಇಲಾಖೆ ರವರಿಂದ ತೂಕ ಮಾಡಿಸಿ ನೋಡಲಾಗಿ ಒಟ್ಟು 2 ಕೆ.ಜಿ. ಇರುತ್ತದೆ.

2) ಇನ್ನೊಂದು ಬಿಳಿ ಬಣ್ಣದ ಪ್ಲಾಸ್ಟಿಕ ಚೀಲದಲ್ಲಿ ಚಿಕ್ಕ ಚಿಕ್ಕ ಪ್ಲಾಸ್ಟಿಕ ಪಾಕೇಟಗಳಲ್ಲಿ ಮಾರಾಟಗೋಸ್ಕರ ಹಾಕಿದ ಗಾಂಜಾ ದೊರೆತಿದ್ದು, ಅದು ಎಲೆ ಬೀಜ ಮಿಶ್ರಿತ ಇದ್ದು ಒಣಗಿದ ಗಾಂಜಾ ಇರುತ್ತದೆ.  ಸದರಿ ಪ್ಲಾಸ್ಟಿಕ ಚೀಲ ಸಮೇತ ವಿಶ್ವನಾಥ ರೆಡ್ಡಿ, ನಿರೀಕ್ಷಕರು, ತೂಕ ಮತ್ತು ಅಳತೆ ಇಲಾಖೆ ರವರಿಂದ ತೂಕ ಮಾಡಿಸಿ ನೋಡಲಾಗಿ ಒಟ್ಟು 2 ಕೆ.ಜಿ. ಇರುತ್ತದೆ.  ಹೀಗೆ ಒಟ್ಟು 4 ಕೆ.ಜಿ. ಗಾಂಜಾ ದೊರೆತಿದ್ದು, ಪ್ರತಿ ಕೆ.ಜಿ.ಗೆ ರೂ.8,000/- ರಂತೆ ಒಟ್ಟು 4 ಕೆ.ಜಿ. ಗಾಂಜಾಕ್ಕೆ ಅ.ಕಿ. ರೂ.32,000/- ಇರುತ್ತದೆ. 

3) ಒಂದು ಕೆಂಪು ಬಣ್ಣದ ಪ್ಲಾಸ್ಟಿಕ ಕವರ ದೊರೆತಿದ್ದು, ಅದರಲ್ಲಿ ಚಿಕ್ಕ ಚಿಕ್ಕ ಖಾಲಿ ಪ್ಲಾಸ್ಟೀಕ ಪಾಕೇಟಗಳು ಇದ್ದು, ಅ.ಕಿ. ರೂ.00/- ಇರುತ್ತದೆ.  ಸದರಿ ಎರಡು ಪ್ಲಾಸ್ಟಿಕ ಗೊಬ್ಬರ ಚೀಲಗಳಿಂದ ಪ್ರತ್ಯೇಕವಾಗಿ ರಾಸಾಯನಿಕ ಪರೀಕ್ಷೆಗೆ ಕಳುಹಿಸಿಕೊಡಲು ಮಾದರಿಗಾಗಿ ಅಂದಾಜು 50 ಗ್ರಾಂ ತೂಕದಷ್ಟು ಗಾಂಜಾವನ್ನು ಪ್ರತ್ಯೇಕವಾಗಿ ತೆಗೆದು ಎರಡು ಬಿಳಿಯ ಬಟ್ಟೆಯಲ್ಲಿ ಹಾಕಿ ಬಾಯಿ ಹೊಲೆದು ಅವುಗಳ ಮೇಲೆ “M” ಎಂಬ ಇಂಗ್ಲೀಷ ಅಕ್ಷರದ ಅರಗಿನಿಂದ ಸೀಲ್ ಮಾಡಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಕೇಸಿನ ಮುಂದಿನ ಪುರಾವೆಗಾಗಿ ನಾನು ತಾಬೆಗೆ ತೆಗೆದುಕೊಂಡೆನು.  ನಂತರ ಆರೋಪಿತರ ದೇಹವನ್ನು ಅಂಗಶೋಧನೆ ಮಾಡಲು ಶ್ರೀ ಸಂತೋಷ ಬನ್ನಟ್ಟಿ ಎ.ಸಿ.ಪಿ., ಸಿ.ಸಿ.ಬಿ. ಘಟಕ, ಕಲಬುರಗಿ ನಗರ ರವರು ಆರೋಪಿ ಪವನ ತಂದೆ ಬಾಬುರಾವ ಉಪಾಧ್ಯೆ ಈತನಿಗೆ ಬರಹ ರೂಪದಲ್ಲಿ ಒಪ್ಪಿಗೆ ಪತ್ರ ಕೇಳಿದಾಗ ಸದರಿಯವನು ಯಾವುದೇ ಅಭ್ಯಂತರ ಇರುವುದಿಲ್ಲ ಅಂತಾ ತಿಳಿಸಿ ಒಪ್ಪಿಗೆ ಕೊಟ್ಟ ಮೇರೆಗೆ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಸಂತೋಷ ಬನ್ನಟ್ಟಿ ಎ.ಸಿ.ಪಿ., ಸಿ.ಸಿ.ಬಿ. ಘಟಕ, ಕಲಬುರಗಿ ನಗರ ರವರು ಆರೋಪಿ ಪವನ ತಂದೆ ಬಾಬುರಾವ ಉಪಾಧ್ಯೆ ಈತನ ದೇಹ ಅಂಗ ಶೋಧನೆ ಮಾಡಲು ಆತನ ಜೇಬಿನಲ್ಲಿ ರೂ.400/- ದೊರೆತಿದ್ದು, ಸದರಿ ಆರೋಪಿತನಿಗೆ ವಿಚಾರಿಸಿದಾಗ ಗಾಂಜಾ ಮಾರಾಟದಿಂದ ಬಂದ ಹಣ ಇರುತ್ತದೆ ಅಂತಾ ತಿಳಿಸಿರುತ್ತಾನೆ. ಉಳಿದಂತೆ ಯಾವುದೇ ವಸ್ತುಗಳು ದೊರೆತಿರುವುದಿಲ್ಲ. ನಂತರ ನಾನು ಅನಧೀಕೃತ ಮತ್ತು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತನಿಗೆ ಮತ್ತು ಅವನ ಹತ್ತಿರ ಜಪ್ತು ಮಾಡಿದ ಮುದ್ದೇಮಾಲು ನಮ್ಮ ವಶಕ್ಕೆ ತೆಗೆದುಕೊಂಡು ಆರೋಪಿತರಿಂದ ಜಪ್ತಾದ ಮುದ್ದೇಮಾಲಿನ ಬಗ್ಗೆ ಜಪ್ತಿ ಪಂಚನಾಮೆಯನ್ನು ಮಧ್ಯಾಹ್ನ 2-00 ಗಂಟೆಯಿಂದ 3-30  ಗಂಟೆಯವರೆಗೆ  ಸ್ಥಳದಲ್ಲಿ  ಕುಳಿತು  ಲ್ಯಾಪಟ್ಯಾಪನಲ್ಲಿ ಟೈಪ ಮಾಡಿ ಮುಗಿಸಿ ವಶಕ್ಕೆ ಪಡೆದ ಆರೋಪಿತನನ್ನು ಮತ್ತು ಜಪ್ತು ಮಾಡಿದ ಮುದ್ದೇಮಾಲಿನೊಂದಿಗೆ ಬ್ರಹ್ಮಪೂರ ಪೊಲೀಸ್ ಠಾಣೆಗೆ ಬಂದು ವರದಿಯನ್ನು ತಯಾರಿಸಿ ಜಪ್ತಿ ಮಾಡಿದ ಮುದ್ದೇಮಾಲು ಮತ್ತು ಒಬ್ಬ ಆರೋಪಿಯನ್ನು ಜಪ್ತಿ ಪಂಚನಾಮೆಯೊಂದಿಗೆ ನನ್ನ ವರದಿಯನ್ನು ಹಾಜರಪಡಿಸುತ್ತಿದ್ದು, ಸದರಿ ಆರೋಪಿತನ ವಿರುದ್ದ ಕಾನೂನು  ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 18-02-2023 ರಂದು ರಾತ್ರಿ 11:00 ಗಂಟೆಗೆ ಸದರಿ ಆರೋಪಿತರು ಫಿರ್ಯಾದಿಯ ಕಿರಾಣಿ ಅಂಗಡಿಗೆ ಬಂದು ಗುಟ್ಕಾ ಕೇಳಿದಾಗ ಫಿರ್ಯಾದಿಯು ಬಾಗಿಲು ಮುಚ್ಚಿದೆ ಬಾಗಿಲು ತೆಗೆಯುವುದಿಲ್ಲಾ ಎಂದಿದ್ದು ಸದರಿ ಆರೋಪಿತರು ಫಿರ್ಯಾದಿಯನ್ನು ಬೈದಿದ್ದು ಜನರು ಬಂದಾಗ ಓಡಿ ಹೋಗಿರುತ್ತಾರೆ. ದಿನಾಂಕ: 20-02-2023 ರಂದು ಬೆಳಗ್ಗೆ 8:00 ಗಂಟೆಗೆ ಫಿರ್ಯಾದಿಯ ಕಿರಾಣಿ ಅಂಗಡಿಗೆ ಬಂದು ಆಕೆಯನ್ನು ಕೈಯಿಂದ ಎಳೆದಾಡಿ ಜೀವ ಬೆದರಿಕೆ ಹಾಕಿ ಹೊಡೆ ಬಡೆ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 23-12-2022 ರಂದು ಮಧ್ಯಾಹ್ನ 1:30 ಪಿ.ಎಮ್ ನಮಾಜ ಸಲುವಾಗಿ ಹೊರಟು ನನ್ನ ಮೊಟಾರ ಸೈಕಲ ನಂ. ಕೆಎ-32 ಇಎಸ್-5624 ಚಸ್ಸಿ ನಂ MD626EG40J1D69056 ಇಂಜಿನ ನಂ. EG4DJ1497969 ಅ.ಕಿ. 40,800/-ರೂ ನೇದ್ದನ್ನು ನಮ್ಮ ಮನೆಯ ಹತ್ತಿರ ನಿಲ್ಲಿಸಿ ಹೋಗಿರುತ್ತೇನೆ. ನಮಾಜ ಮುಗಿಸಿಕೊಂಡು ಮದ್ಯಾಹ್ನ 2:15 ಗಂಟೆಗೆ ಬಂದು ನೋಡಲು ನನ್ನ ಮೊಟಾರ ಸೈಕಲ ಕಾಣಲಿಲ್ಲಾ, ಯಾರೋ ಕಳ್ಳರು ನನ್ನ ಮೊಟರ್‌ ಸೈಕಲ್‌ನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ್ ಠಾಣೆ :- ದಿನಾಂಕ: 20-02-2023 ರಂದು ಫಿರ್ಯಾದಿದಾರರು ಪೆಟ್ರೋಲಿಂಗ ಕರ್ತವ್ಯದ ಮೇಲೆ ಇದ್ದಾಗ ಶಹಾಬಜಾರ ನಾಕಾ ಹತಿರ ಒಬ್ಬ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಆರೋಪಿತರನ್ನು ಹಿಡಿದು ಅವನಿಂದ ನಗದು ಹಣ 2980/-ರೂ ಸಿಕ್ಕಿದ್ದು ಮತ್ತು ಒಂದು ಬಾಲ ಪೆನ ಅಃಕಿB ೦೦, ಒಂದು ಮಟಕಾ ಚೀಟಿ ಅಕಿ. ೦೦/-ದೊರೆತಿದ್ದು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ  ಪೊಲೀಸ್ ಠಾಣೆ :- ಮಾನ್ಯ ನ್ಯಾಯಾಲಯದಿಂದ ಖಾಸಗಿ ದೂರು ಸಂಖ್ಯೆ 661/2023  ನೇದ್ದನ್ನು ಕೋರ್ಟ ಪಿ.ಸಿ ಶ್ರೀ ಸಿದ್ದಾರೂಡ  ಪಿ.ಸಿ.-406  ರವರು ಠಾಣೆಗೆ ತಂದು ಹಾಜರಪಡಿಸಿದ್ದು, ಸದರಿ ಖಾಸಗಿ ದೂರಿನ ಸಾರಾಂಶವೆನೆಂದರೆ, ಫಿರ್ಯಾದಿದಾರರಾದ ಶ್ರೀ ಮುಜೀಬ್ ಆದಿಲ್ ತಂದೆ ಗುಲಾಮ ಮಹ್ಮದ ವಯಸ್ಸು 32 ವರ್ಷ ಉ; ವ್ಯಾಪಾರ ಸಾ; ಬಾಂಬೆ ಹೋಟಲ ಹತ್ತಿರ ಬಿಲಾಲಾಬಾದ ಕಲಬುರಗಿ ಇವರು ಖಾಸಗಿ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಗಂಗಾದೇವಿ @ ಅಂಬವ್ವ ಗಂಡ ಮಹಾದೇವಪ್ಪ ಮಣ್ಣೂರ ಸಾ; ಮನೆ ನಂ 11-336/9 ಗಂಗಾನಗರ ಹನುಮಾನ ದೇವಾಸ್ಥಾನ ಎದುರುಗಡೆ ಕಲಬುರಗಿ ಇವರು ಕಲಬುರಗಿಯ ಗೌರಾವಾನ್ವಿತ 1ನೇ ಅಪರ ಸಿವಿಲ್ ನ್ಯಾಯಾಧೀಶ ಜೂನಿಯರ್ ವಿಭಾಗ ನ್ಯಾಯಾಲಯದಲ್ಲಿ ಓ.ಎಸ್. ನಂ 475/2022 ರಲ್ಲಿ ಪ್ಲಾಟ್ ನಂ 83-84 ಸಂಬಂದಿಸಿದಂತೆ ತಡೆಯಾಜ್ಞೆಗಾಗಿ ಸಿವಿಲ್ ಮೊಕದಮೆಯನ್ನು ಹೂಡಿದ್ದಾರೆ. ಸರ್ವೇ ನಂ 127/1 ರಲ್ಲಿ ಬ್ರಹ್ಮಪೂರ ಹೊಸ ರಾಘವೇಂದ್ರ ಕಾಲನಿ ಕಲಬುರಗಿ ನೇದ್ದಕ್ಕೆ ಸಂಬಂದಪಟ್ಟ ಕಾರ್ಫೋರೆಷನ್ ಖಾತಾ ಪಿ.ಐ.ಡಿ ನಂ 21228 ಮತ್ತು 016897 ನೇದ್ದನ್ನು ನಮೂದಿಸಿ ಮೊಕದಮೆಯನ್ನು ಸ್ವೀಕರಿಸಿದ ನಂತರ ದೂರುದಾರರು ಮೇಲ್ಕಂಡ ಮೊಕದಮೆಯ ಮಾಲಿಕರಾಗಿರುತ್ತಾರೆ. ಈ ವ್ಯಕ್ತಿಯು ದಾಖಲೆಗಳನ್ನು ಸಲ್ಲಿಸಿರುತ್ತಾರೆ. ದಿನಾಂಕ: 28-12-2022 ರಂದು ಮಹಾನಗರ ಪಾಲಿಕೆ ಕಲಬುರಗಿ ರವರಿಂದ ದಾಖಲೆಗಳು ಅಸ್ತಿತ್ವದಲ್ಲಿ ಇಲ್ಲವೆಂದು ದಿನಾಂಕ: 10-01-2022 ರಂದು ದೂರುದಾರರಿಗೆ ಅನುಮೋದನೇ ನೀಡಿದ್ದಾರೆ. ಆರೋಪಿಗಳು ಆಸ್ತಿ ದೋಚಲು ಸುಳ್ಳೂ ದಾಖಲೆಗಳನ್ನು ಸೃಷ್ಟಿಸಿರುವುದು ಸ್ಪಷ್ಟವಾಗಿದೆ. ಮೇಲೆ ತಿಳಿಸಿದ ಅಪರಾಧಗಳನ್ನು ಮಾಡಿದ್ದು, ದಯವಿಟ್ಟು ಆರೋಪಿಯ ಮೇಲೆ ಕ್ರಮ ಕೈಕೊಳ್ಳಬೇಕೆಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 21-02-2023 02:59 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080