ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ:20-01-2023  ರಂದು ಬೆಳಿಗ್ಗೆ ೧೦-೩೦ ಗಂಟೆಯಲ್ಲಿ ಕಲಬುರಗಿ ಸ್ಕ್ಯಾನಿಂಗ್ ಕೇಂದ್ರಕ್ಕೆ ಹೋಗಿ ನನ್ನ ತಂಗಿಯ ಮಗಳಾದ ಗಾಯಿತ್ರಿ ರವರಿಗೆ ಮಾತನಾಡಿಸಿಕೊಂಡು ವಾಪಸ್ಸು ಮದ್ಯಾಹ್ನ ೧೨-೦೦ ಗಂಟೆಯಲ್ಲಿ ಕಲ್ಯಾಣ ನಗರದ ರಸ್ತೆಯ ಮೇಲೆ ನಡೆದುಕೊಂಡು ಕುವೆಂಪು ನಗರಕ್ಕೆ ಹೋಗುವಾಗ ಓಕಳಿ ಮನೆಯ ಹತ್ತಿರ ರಸ್ತೆಯ ಟರ್ನ್ನಲ್ಲಿ ಯಾರೋ ಇಬ್ಬರು ಬ್ಯಾಂಕ್ ಕಾಲೋನಿ ಕಡೆಯಿಂದ ದ್ವಿ ಚಕ್ರ ವಾಹನದಲ್ಲಿ ಬಂದು ನನ್ನ ಕತ್ತಿನಲ್ಲಿರುವ ೧) ೩೦ ಗ್ರಾಂ ಬಂಗಾರದ ಮಂಗಳ ಸೂತ್ರ ಅ,ಕಿ ೧೨೦೦೦೦/-ರೂ ೨) ೨೦ ಗ್ರಾಂ ಬಂಗಾರದ ನಾನ್ ಚೈನ್ ಅ,ಕಿ ೮೦೦೦೦/-ರೂ ಒಟ್ಟು ೨೦೦೦೦೦/-ರೂ ಬೆಲೆ ಬಾಳೂವುದನ್ನು ಕಿತ್ತುಕೊಂಡು ದ್ವಿ ಚಕ್ರ ವಾಹನದಲ್ಲಿ ಕುವೆಂಪು ನಗರದ ಕ್ರಾಸ್ ಕಡೆಗೆ ಹೋಗಿರುತ್ತಾರೆ. ಅವರು ಅಂದಾಜು ವಯಸ್ಸು ೨೫ ವಯಸ್ಸಿನವರು ಇರಬಹುದು ದ್ವಿಚಕ್ರ ವಾಹನ ಇದ್ದು ಅವರನ್ನು ನೋಡಿದರೆ ಗುರ್ತಿಸುತ್ತೇನೆ. ಆದ್ದರಿಂದ ನನ್ನ ನನ್ನ ಕತ್ತಿನಲ್ಲಿರುವ ಬಂಗಾರದ ಮಂಗಳ ಸೂತ್ರ ಮತ್ತು ಬಂಗಾರದ ನಾನ್ ಚೈನ್ ಕಿತ್ತುಕೊಂಡು ಹೋದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಬಂಗಾರದ ಮಂಗಳ ಸೂತ್ರ ಮತ್ತು ಬಂಗಾರದ ನಾನ್ ಚೈನ್ ವಾಪಸ್ಸ ಕೊಡಿಸಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ: 15-01-2023 ರಂದು ಸಂಜೆ ೦೬-೦೦ ಗಂಟೆಯಲ್ಲಿ ನನ್ನ ಅಣ್ಣ ಸಚಿನ್ ಹೆಸರಿನಲ್ಲಿರುವ HONDA DIO REG NO KA-32 EQ-2644,CHASIS NO-ME4JF39EGH7012275,ENG NO-JF39E72056936,COLOUR – GRAY,MODEL—2017,VALUVE-23469/- /-ದ್ವಿ ಚಕ್ರ ವಾಹನವನ್ನು ತೆಗೆದುಕೊಂಡು ನಾನು ನನ್ನ ತಾಯಿ ಸುಶೀಲಮ್ಮ  ಇಬ್ಬರು ಕೂಡಿಕೊಂಡು ಹೋಗಿ ಕೆಬಿಎನ್ ಆಸ್ಪತ್ರೆ ಹತ್ತಿರ  ಇರುವ ಎಸ್.ಬಿ.ಐ ಬ್ಯಾಂಕ್ ಮುಂದೆ ನಿಲ್ಲಿಸಿ. ನಾವುಗಳು ಆರ್ಚಡ್ ಮಾಲ ಮನೆಯ ರೇಷನ್ ಖರೀಧಿ ಮಾಡಲು ಹೋಗಿರುತ್ತೇವೆ.  ನಂತರ ಆರ್ಚಡ್ ಮಾಲ್‌ನಿಂದ ರೇಷನ್ ಖರೀಧಿ ಮಾಡಿಕೊಂಡು ಸಂಜೆ ೦೭-೩೦ ಗಂಟೆಗೆ ಬಂದು ನೋಡಿದಾಗ ಸದರಿ ಎಸ್.ಬಿ. ಐ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ನನ್ನ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳೆದು ಹೋದ ನನ್ನ ವಾಹನವನ್ನು ಹುಡುಕಿಕೊಡಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ.ನಗರ ಪೊಲೀಸ ಠಾಣೆ :- ದಿನಾಂಕ-20-01-2023  ರಂದು ಫಿರ್ಯಾಧಿದಾರರು ಆಸ್ಪತ್ರೆಯಲ್ಲಿ ನಿಡಿದ ಫಿರ್ಯಾಧಿ ಸಾರಾಂಶವೆನೆಂದರೆ ಸದರಿ ಆರೋಪಿತರು ಫಿರ್ಯಾಧಿದಾರರು ದಿನಾಂಕ-19-01-2023 ರಂದು ಅವರ ಸ್ನೇಹಿತ ಜೊತೆ ಚಹಾ ಕಡಿಯಲು ದರ್ಶನ ಟವರ್ ಮುಂದೆ ಹೊದಾಗ ಇವರನ್ನು ನೊಡಿದ ರಿಯಾಜ್ ಅಹ್ಮದ್ ಬಂದು ನಮ್ಮ ತಂದೆಯವರ ಫೋಟೊ ಫೇಸ್‌ಬುಕ್ ಲೈವ್‌ನಲ್ಲಿ ಸುಟ್ಟು ಹಾಕುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕುತ್ತಿಗೆಗ ಮತ್ತು ಕೀವಿಗೆ ಹೊಡೆದು ನಿನಗೆ ಜೀವಾ ಹೊಡೆಯಲು ಶಿವಾ ಸಾ|| ಬಾಪುನಗರ ಇವನಿಗೆ ಸುಪಾರಿ ಕೊಟ್ಟಿದ್ದಿವಿ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 23-01-2023 03:23 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080