ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ ಠಾಣೆ  :- ಇಂದು ದಿನಾಂಕ ೨೦/೦೧/೨೦೨೨ ರಂದು ೦೬.೦೦ ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿ ದಿನಚೆರಿ ಕರ್ತವ್ಯದಲ್ಲಿದ್ದಾಗ ಫಿರ್ಯಾದಿ ಶ್ರೀ ಹರಿ ತಂದೆ ರಮಣಯ್ಯ ಚೈನೂರ ವ|| ೪೪ ಜಾ|| ಅಗ್ನಿಕುಲ ಕ್ಷತ್ರಿಯ ಉ|| ನಂದೂರನಲ್ಲಿರುವ ಯುನೈಟೇಡ ಸ್ಪ್ರಿಟ್ಸ ಕಂಪನಿಯಲ್ಲಿ ಪ್ರೊಡಕ್ಷನ ಮ್ಯಾನೆಂಜರ ಕೆಲಸ ಸಾ|| ಪತ್ತೆಗಾನ ಪೇಟ ತಾ||ಜಿ|| ನೆಲ್ಲೂರ ರಾ|| ಆಂದ್ರಪ್ರದೇಶ ಹಾ||ವ|| ಪ್ಲಾಟ ನಂ ೭೫, ಮಲ್ಲಿಕಾರ್ಜುನ ಮಂದಿರ ಹತ್ತೀರ ಬಡೆಪೂರ ಸ್ಭೆಡಂ ರೋಡ ಕಲಬುರಗಿ ನಗರ ಪೊ.ನಂ. ೯೦೦೮೬೬೦೨೧೬ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ  ದೂರು ಅರ್ಜಿ ಸಲ್ಲಿಸಿದ್ದು ಸದರಿ ದೂರಿನ ಸಂಕ್ಷಿಪ್ತ ಸಾರಾಂಶವೆನೆಂದರೆ,  ನಾನು ಮತ್ತು ನನ್ನ ಕುಟುಂಬ ಬಾಡಿಗೆ ಮನೆ ಮಾಡಿಕೊಂಡು ಸದರಿ ವಿಳಾಸದಲ್ಲಿ ನಂದೂರನಲ್ಲಿರುವ ಯುನೈಟೇಡ ಸ್ಪ್ರಿಟ್ಸ ಕಂಪನಿಯಲ್ಲಿ ಪ್ರೊಡಕ್ಷನ ಮ್ಯಾನೆಂಜರ ಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡು ವಾಸವಾಗಿರುತ್ತೆವೆ. ಹೀಗಿದ್ದು ಸುಮಾರು ೪ ತಿಂಗಳ ಹಿಂದೆ ನನ್ನ ಹೆಂಡತಿಯಾದ ಶ್ರೀಮತಿ ಲಾವಣ್ಯ ಇವರು ಪ್ರೆಗ್ನೆನ್ಸಿ ಇದ್ದ ಪ್ರಯುಕ್ತ ಅವರು ಡೆಲೆವರಿ ಸಲುವಾಗಿ ಅವರ ತಂದೆ-ತಾಯಿ ಮನೆ ಇರುವ ನೆಲ್ಲೂರಿಗೆ ಹೋಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ ೧೧.೦೧.೨೦೨೨ ರಂದು ರಾತ್ರಿ ೦೯.೩೦ ಗಂಟೆಗೆ ನಾನು ನಮ್ಮ ಊರಾದ ನೇಲ್ಲೂರಿಗೆ ಹೋಗಿದ್ದು ಇರುತ್ತದೆ.    ಹೀಗಿದ್ದು ದಿನಾಂಕ ೧೯.೦೧.೨೦೨೨ ರಂದು ಬೆಳೇಗ್ಗೆ ೦೭.೩೦ ಗಂಟೆಗೆ ನನಗೆ ನಾನು ಬಾಡಿಗೆ ಇರುವ ಮನೆಯ ಮಾಲಿಕರು ನನಗೆ ಪೋನ ಮುಕಾಂತರ ನಿಮ್ಮ ಮನೆ ಕಳ್ಳತನ ವಾಗಿರುತ್ತದೆ ಅಂತಾ ತಿಳಿಸಿದ್ದು ಅದರಂತೆ ಇಂದು ದಿನಾಂಕ ೨೦.೦೧.೨೦೨೨ ರಂದು ಬೆಳೆಗ್ಗೆ ೦೭.೦೦ ಗಂಟೆಗೆ ಕಲಬುರಗಿಗೆ ಬಂದು ನಾನು ಬಾಡಿಗೆ ಇರುವ ಮನೆಗೆ ಬಂದು ನಾನು ಬಾಡಿಗೆ ಇರುವ ಮನೆಯ ಬೆಡರೂಮಿನಲ್ಲಿರುವ ಬೆಡ ಮೇಲೆ ಸಾಮಾನುಗಳು ಚೆಲ್ಲಾಪಿಲ್ಲೆಯಾಗಿ ಬಿದ್ದಿದ್ದು ಅಲಮಾರಿ ತೆರೆದಿದ್ದು ಕಂಡು ನಂತರ ಅಲಮಾರಿಯಲ್ಲಿರುವ ಸಾಮಾನುಗಳು ಚೆಕೆಮಾಡಿ ನೋಡಲಾಗಿ ಅದರಲ್ಲಿರುವ ೧] ೩೦ ಗ್ರಾಮದ ೬ ಜೊತೆ ಬಂಗಾರದ ಕಿವಿಯೊಲೆ ಅಂ.ಕಿ.೧,೨೦,೦೦೦/- ೨] ೨೦ ಗ್ರಾಮದ ೨ ಬಂಗಾರದ ಚೈನಗಳು ಅಂ.ಕಿ.೮೦,೦೦೦/-, ೩] ೫ ಗ್ರಾಮದ ೨ ಬಂಗಾರದ ಡಾಲರಗಳು ಅಂ.ಕಿ. ೨೦,೦೦೦/- ೪] ೪ ಗ್ರಾಮದ ಎರಡು ಮಕ್ಕಳ ಬಂಗಾರದ ಚಿಕ್ಕ-ಚಿಕ್ಕ ಉಂಗರುಗಳು ಅಂ.ಕಿ.೧೬,೦೦೦/- ೫] ೧೦೦೦ ಗ್ರಾಮದ ಎರಡು ಬೆಳ್ಳಿಯ ದಿಪದ ಸ್ಥಂಬಗಳು ಅಂ.ಕಿ.೫೦,೦೦೦/-, ೬] ೨೦೦ ಗ್ರಾಮದ ಒಂದು ಬೆಳ್ಳಿಯ ಮಹಾಲಕ್ಷ್ಮಿ ಮರ‍್ತಿ  ದೀಪ ಸ್ಥಂಬ ಅಂ.ಕಿ.೧೦,೦೦೦/- ೮] ೨೦೦ ಗ್ರಾಮದ ಎರಡು ಬೆಳ್ಳಿಯ ಚಿಕ್ಕ ಆರತಿ ದಿಪಗಳು ಅಂ.ಕಿ.೧೦,೦೦೦/- ೯] ೨೦೦ ಗ್ರಾಮದ  ಎರಡು ಬೆಳ್ಳಿಯ ಬಟ್ಟಲಗಳು ಅಂ.ಕಿ.೧೦,೦೦೦/- ೧೦] ೧೦೦ ಗ್ರಾಮದ ಬೇಳ್ಳಿಯ ಒಂದು  ಗಂಟೆ ಅಂ.ಕಿ.೫,೦೦೦/- ೧೧] ೨೫೦ ಗ್ರಾಮದ ಬೆಳ್ಳಿಯ ಒಂದು ದೂಪದ ಬಟ್ಟಲು ಅಂ.ಕಿ.೧೨,೫೦೦/- ಹೀಗೆ ಒಟ್ಟು ೫೯ ಗ್ರಾಮ ಬಂಗಾರದ ಆಭರಣಗಳು ಅಂ.ಕಿ ೨,೩೬,೦೦೦/- ಮತ್ತು ೧೯೫೦ ಗ್ರಾಮ ಬೇಳ್ಳಿಯ ದೇವರ ಸಾಮಾನುಗಳು ಅಂ.ಕಿ. ೯೭,೫೦೦/- ಎಲ್ಲಾ ಸೇರಿ ೩,೩೩,೫೦೦/-ಕಿಮ್ಮತ್ತಿನ ಬೇಲೆಬಾಳುವ ಆಭರಣ ಮತ್ತು ಸಾಮಾನುಗಳು ಕಳ್ಳತನ ವಾಗಿದ್ದು ಇರುತ್ತದೆ. ನಮ್ಮ ಬಂಗಾರದ ಆಭರಣಗಳು , ಬೆಳ್ಳಿಯ ಸಾಮಾನುಗಳು ಹಳೆಯದಾಗಿದ್ದು ಹಾಗೂ ಕಾಣಿಕೆಯಾಗಿ ನಮಗೆ ಬಂದಿದ್ದು ಯಾವುದೇ ರಸಿದಿ ಇರುವದಿಲ್ಲಾ. ಕಾರಣ ದಿನಾಂಕ ೧೮.೦೧.೨೦೨೨ ರಂದು ರಾತ್ರಿ ೧೧.೦೦ ಗಂಟೆಯಿಂದ ದಿನಾಂಕ ೧೯.೦೧.೨೦೨೨ ರಂದು ಬೆಳೇಗ್ಗೆ ೦೭.೩೦ ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಾನು ಮನೆಯಲ್ಲಿ ಇರದ ಸಮಯದಲ್ಲಿ ನಾನು ಬಾಡಿಗೆ ಇರುವ ಮನೆಯ ಬಾಗಿಲು ಕೊಂಡಿ ಮುರಿದು ಮನೆಯ ಒಳಗಡೆ ಪ್ರವೇಶ ಮಾಡಿ ನಮ್ಮ ಮನೆಯ ಬೆಡರೂಮಿನನಲ್ಲಿರುವ ಅಲಮಾರಿಗಳಲ್ಲಿರುವ ೫೯ ಗ್ರಾಮ ಬಂಗಾರ ಆಭರಣಗಳು ಅಂ.ಕಿ. ೨.೩೬,೦೦೦/- ಮತ್ತು  ೧೯೫೦ ಗ್ರಾಮ ಬೇಳ್ಳಿಯ ದೇವರ ಸಾಮಾನುಗಳು ಅಂ.ಕಿ. ೯೭,೫೦೦/- ಈ ಎಲ್ಲಾ ಸೇರಿ ೩,೩೩,೫೦೦/-ಕಿಮ್ಮತ್ತಿನ ಬೇಲೆಬಾಳುವ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ದೇವರ ಸಾಮಾನುಗಳು ನೆದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮಾನ್ಯರವರು ನಮ್ಮ ಮನೆಯಲ್ಲಿ ಕಳ್ಳತನವಾದ ಬಂಗಾರದ ಆಭರಣಗಳು ಮತ್ತು ಬೇಳ್ಳಿಯ ದೇವರ ಸಾಮಾನುಗಳು ಎಲ್ಲಾ ಸೇರಿ ಒಟ್ಟು ಅಂ.ಕಿ ೩,೩೩,೫೦೦/- ರೂ ಬಂಗಾರದ ಆಭರಣಗಳು , ಬೆಳ್ಳಿಯ ಸಾಮಾನುಗಳು ಪತ್ತೆ ಮಾಡಿ ಕಳ್ಳತನ ಮಾಡಿದ ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಲು ವಿನಂತಿ ಅದೆ. ನಾನು ಇದರ ಬಗ್ಗೆ ಮನೆಯಲ್ಲಿ ನಮ್ಮ ಕುಟುಂಬದವರೊಂದಿಗೆ ವಿಚಾರಮಾಡಿ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.   ಅಂತಾ ನೀಡಿದ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 21-01-2022 05:28 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080