ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ: 19-12-2022 ರಂದು ಬೆಳಿಗ್ಗೆ 5-15 ಗಂಟೆಗೆ ಖಾಸಗಿ ಪಾಟೀಲ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಮನೋಹರ್ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಮನೋಹರ್ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 18-12-2022 ರಂದು ಸಾಯಂಕಾಲ ಅಂದಾಜು 6-45 ಗಂಟೆಗೆ ಕಲಬುರಗಿ ಜಗತ ಸರ್ಕಲ ಹತ್ತೀರ ಬರುವ ಬುಕ್ಕ ಸ್ಟಾಲನಲ್ಲಿ ಬುಕ್ಕೆಗಳನ್ನು ತಗೆದುಕೊಳ್ಳುವ ಸಲುವಾಗಿ ನಮ್ಮೂರಿನಿಂದ ನಾನು ಮೋಟಾರ ಸೈಕಲ ನಂಬರ ಕೆಎ-33/ಕೆ-6967 ನೇದ್ದನ್ನು ಚಲಾಯಿಸಿಕೊಂಡು ಕಲಬುರಗಿ ಕೇಂದ್ರ ಬಸ್ಸ ನಿಲ್ದಾಣ ಗೋವಾ ಹೊಟೆಲ ಮಾರ್ಗವಾಗಿ ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಜಗತ ಸರ್ಕಲ ಕಡೆಗೆ ಹೋಗುವಾಗ ದಾರಿ ಮದ್ಯ ಯಲ್ಲಮ್ಮಾ ಟೆಂಪಲ ಹತ್ತೀರ ರೋಡ ಮೇಲೆ ಹಿಂದಿನಿಂದ ಮೋಟಾರ ಸೈಕಲ ನಂಬರ ಕೆಎ-32/ಹೆಚ್-ಎ-2617 ನೇದ್ದರ ಸವಾರ ಮಂಜುನಾಥ ಇತನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ ಹಿಂದುಗಡೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ 19/12/2022 ರಂದು 05:00 ಪಿ.ಎಮ್ ಕ್ಕೆ ಗಂಟೆ ಸುಮಾರಿಗೆ ರೇವಣಸಿದ್ದಪ್ಪ ತಂದೆ ಮಲ್ಲೇಶಪ್ಪಾ ಅಗಸ್ತೀರ್ಥ ವಯ: 40ವರ್ಷ ಜಾ:ಲಿಂಗಾಯತ ಉ:ಖಾಸಗಿ ಕೆಲಸ ಸಾ: ಅಕ್ಕಮಹಾದೇವಿ ಗುಡಿ ಹತ್ತೀರ ಜಗತ ಕಲಬುರಗಿ ಇವರು ಸಹಿ ಮಾಡಿದ ಅರ್ಜಿಯನ್ನು ಸಿದ್ದಲಿಂಗಪ್ಪಾ ತಂದೆ ಮಲ್ಲೇಶಪ್ಪಾ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ,  ದಿನಾಂಕ 14/12/2022 ಮಧಹ್ಯಾಹ್ನ ನಾನು ನನ್ನ ವಯಕ್ತಿಕ ಕೆಲಸದ ಕುರಿತು ಮೋಟರ ಸೈಕಲ ನಂ.ಕೆಎ-56 ಇ-6332 ನೇದ್ದರ ಮೇಲೆ ಶಹಾಬಾದ ರಿಂಗ್ ರೋಡ ಕಡೆಯಿಂದ ಸರಕಾರಿ ಡಿಗ್ರಿ ಕಾಲೇಜ ಕಡೆಗೆ ನಿಧಾನವಾಗಿ ರಸ್ತೇಯ ಬದಿಯಿಂದ ಹೋಗುವಾಗ ಬಸವೇಶ್ವರ ಖಾನಾವಳಿ ಹತ್ತೀರ ರಸ್ತೇಯ ಮೇಲೆ  ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಒಂದು ಓಮಿನಿ ವ್ಯಾನ ಚಾಲಕನು ಸರಕಾರಿ ಡಿಗ್ರಿ ಕಾಲೇಜ ಕಡೆಯಿಂದ ಶಹಾಬಾದರಿಂಗ್ ರೋಡ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ನನ್ನ ಎದುರಿನಿಂದ ಬಂದು ಮುಖಾಮುಖಿಯಾಗಿ ಡಿಕ್ಕಿಪಡಿಸಿದನು. ಆಗ ನಾನು ಮೋಟರ ಸೈಕಲ ಸಮೇತ ರಸ್ತೇಯ ಮೇಲೆ ಬಿದ್ದೇನು. ಅದನ್ನು ನೋಡಿದ ಅಲ್ಲಿಯೇ ಇದ್ದ ಸಂಜುಕುಮಾರ ಬುಳ್ಳಾ ಹಾಗೂ ಸಂಗಮೇಶ ಎಂಬುವರು ಬಂದು ನನಗೆ ಎಬ್ಬಿಸಿ ರಸ್ತೇಯ ಬದಿಯಲ್ಲಿ ಕೂಡಿಸಿ ನೋಡಲು ಸದರ ಘಟನೆಯಿಂದ ನನಗೆ ಎಡಭುಜದ ಹತ್ತೀರ ಭಾರಿ ಒಳಪೆಟ್ಟು ಹಾಗೂ ಎರಡು ಕೈಗಳ ರಿಸ್ಟ್ ಹತ್ತೀರ ಒಳಪೆಟ್ಟು ಮತ್ತು ಅಲ್ಲಲ್ಲಿತರಚಿದ ಗಾಯಗಳು ಆಗಿದ್ದು. ನಾನು ಚಲಾಯಿಸುತಿದ್ದ  ಮೋಟರ ಸೈಕಲ್ಲಿಗೆ ಡಿಕ್ಕಿಪಡಿಸಿದ ಓಮಿನಿ ವ್ಯಾನ ನಂ.ನೋಡಲು ಕೆಎ-32ಎಮ್-3632 ನೇದ್ದು ಇದ್ದು. ಅದರ ಚಾಲಕನ ಹೆಸರು ಶಿವಲಿಂಗಪ್ಪಾ ಅಂತಾ ಗೊತ್ತಾಗಿರುತ್ತದೆ. ಸಂಜುಕುಮಾರ ಹಾಗೂ ಸಂಗಮೇಶ ಸೇರಿ ಅಲ್ಲಿಯೇ ಹೋಗುತಿದ್ದ ಒಂದು ಅಟೋರಿಕ್ಷಾ ನಿಲ್ಲಿಸಿ ಅದರಲ್ಲಿ ನನಗೆ ಕೂಡಿಸಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು. ನಾನು ಹೆಚ್ಚಿನ ಉಪಚಾರ ಕುರಿತು ದಿನಾಂಕ 15/12/2022 ರಂದು ಪಾಟೀಲ ಆಸ್ಪತ್ರೆ ಗಾಜಿಪೂರಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ನಿನ್ನೆ ದಿನಾಂಕ 18/12/2022 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿ ಮನೆಗೆ ಬಂದಿದ್ದು. ನಾನು ನನ್ನ ಚಿಕಿತ್ಸೆಯಲ್ಲಿದ್ದು ಇಂದು ನಮ್ಮ ಮನೇಯವರೊಂದಿಗೆ ವಿಚಾರಿಸಿ ದೂರು ನೀಡಲು ತಡವಾಗಿರುತ್ತದೆ. ಕಾರಣ ನನ್ನ ಮೋಟರ ಸೈಕಲ್ಲಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ನನಗೆ ಭಾರಿ ಗಾಯಗೊಳಿಸಿದ ಓಮಿನಿ ವ್ಯಾನ ನಂ.ಕೆಎ-32 ಎಮ್-3632  ನೇದ್ದರ ಚಾಲಕ ಶಿವಲಿಂಗಪ್ಪಾ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಎಂದು ಫಿರ್ಯಾಧಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ 19/12/2022 ರಂದು ಸಾಯಂಕಾಲ 6.10 ಗಂಟೆಗೆ ಅಬ್ದುಲ ರಜಾಕ ತಂದೆ ಅಬ್ದುಲ ಹಮೀದ ಮುಲ್ಲಾ ವಯಃ 29 ವರ್ಷ ಜಾತಿಃ ಮುಸ್ಲಿಂ ಉಃ ಅಟೋ ಡ್ರೈವರ ಸಾಃ ನಾಗನಹಳ್ಳಿ ತಾ.ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ 18/12/2022 ರಂದು ನಮ್ಮೂರಿನ ಜಮಶೇಟ್ಟಿ ನಗರದಲ್ಲಿ ಬರುವ ಹಜರದ ಹೈದರ ಪೀರ ದರ್ಗಾದ ಗಂಧಾ ಇರುವುದರಿಂದ ನಾನು, ನನ್ನ ಗೆಳೆಯ ಜುಬೇರ ತಂದೆ ಜಾಕೀರ ಪಟೇಲ, ನನ್ನ ತಮ್ಮ ಅಬ್ದುಲ ಅಜರೋದ್ದಿನ ಹಾಗು ನನ್ನ ತಂಗಿ ಫರಿದಾಬೇಗಂ ಗಂಡ ಮಹಮ್ಮದ ಅತ್ತರ ಹಾಗು ನನ್ನ ಮಗ ಅಬ್ದುಲ ಫಯಾಜ ವಯಃ 10 ವರ್ಷ ಹಾಗು ತಂಗಿಯ ಮಗ ಅಬ್ದುಲ ಅಫಾನ ವಯಃ 6 ವರ್ಷ ಎಲ್ಲರೂ ಕೂಡಿಕೊಂಡು ನಾನು ಮತ್ತು ಜುಬೇರ ಒಂದು ಮೋಟರ ಸೈಕಲ ಮೇಲೆ, ಇನ್ನೊಂದು ಮೋಟರ ಸೈಕಲ ನಂ. ಕೆಎ 32 ಇ.ಬಿ 3850 ಇದರ ಮೇಲೆ ತಮ್ಮ, ತಂಗಿ, ಮಗ ಹಾಗು ತಂಗಿಯ ಮಗ ಹೋಗಿ ದರ್ಗಾದಲ್ಲಿ ರಾತ್ರಿ ವರೆಗೆ ಉಳಿದುಕೊಂಡು ದರ್ಶನ ಮಾಡಿಕೊಂಡು ಮರಳಿ ಊರಿಗೆ ಬರುವಾಗ ನಮ್ಮೂರಿನ ನಾಲಾದ ನಂತರ ಕರ್ವಿಂಗದಲ್ಲಿ ಮೇಲಿನಂತೆ ಬರುತ್ತಿರುವಾಗ ರಾತ್ರಿ 7:30 ಗಂಟೆ ಆಗಿರಬಹುದು ನಾಗನಹಳ್ಳಿ ರೋಡಿನ ಕಡೆಯಿಂದ ಒಂದು ಪಲ್ಸರ ಮೋಟರ ಸೈಕಲ ನಂ. ಕೆಎ 32 ಹೆಚ್.ಸಿ 0923 ಇದರ ಸವಾರನು ಹಿಂದೆ ಒಬ್ಬನನ್ನು ಕೂಡಿಸಿಕೊಂಡು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ತಮ್ಮ, ತಂಗಿ ಹಾಗು ಮಕ್ಕಳು ಹೋಗುವ ಮೋಟರ ಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ಎಲ್ಲರೂ ಮೋಟರ ಸೈಕಲ ಸಮೇತ ಹಾರಿ ಬಿದ್ದಿದ್ದು, ನಾನು ಮತ್ತು ಜುಬೇರ ಎಲ್ಲರನ್ನು ಎತ್ತಿ ನೋಡಲಾಗಿ ಎಲ್ಲರಿಗು ತಲೆಗೆ, ಮುಖಕ್ಕೆ ಭಾರಿ ಪ್ರಮಾಣದ ರಕ್ತಗಾಯವಾಗಿ ನಾಲ್ಕು ಮಂದಿ ಬೆಹೋಶ ಸ್ಧಿತಿಯಲ್ಲಿದ್ದು, ಅಪಘಾತ ಪಡಿಸಿದವರು ಕೂಡಾ ಇಬ್ಬರಿಗು ಮುಖಕ್ಕೆ, ತಲೆಗೆ ಹಾಗು ಇತರೆ ಕಡೆಗಳಲ್ಲಿ ಗಾಯಗಳಾಗಿದ್ದು, ಅವರ ಹೆಸರು ವಿಚಾರಿಸಲಾಗಿ ಮೋಟರ ಸೈಕಲ ನಡೆಸಿದವನ ಹೆಸರು ಗೌತಮ ತಂದೆ ರಾಮಲು ಗಾಯಕ್ವಾಡ ಸಾಃ ತಾರಫೈಲ ಮತ್ತು ಹಿಂದೆ ಕುಳಿತವನ ಹೆಸರು ಅಶೋಕ ತಂದೆ ಭೀಮರಾಯ ಸಾಃ ತಾರಫೈಲ ಅಂತಾ ತಿಳಿಸಿದ್ದು ಮೋಟರ ಸೈಕಲ ನಡೆಸುವನ ಸರಾಯಿ ಕುಡಿದ ನಶೇಯಲ್ಲಿ ಇದ್ದನು. ಮುಂದೆ ತಮ್ಮ, ತಂಗಿ ಹಾಗು ಮಕ್ಕಳನ್ನು ಸನ ರೈಸ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಮತ್ತು ಅಪಘಾತ ಪಡಿಸಿದ ಗೌತಮ ಮತ್ತು ಹಿಂದೆ ಕುಳಿತ ಅಶೋಕ ಯುನೈಟೆಡ ಆಸ್ಪತ್ರೆಗೆ ಹೋಗಿರುವ ಬಗ್ಗೆ ಗೊತ್ತಾಗಿರುತ್ತದೆ. ನಾನು ಆಸ್ಪತ್ರೆಯಲ್ಲಿ ಉಳಿದುಕೊಂಡು ಈಗ ವಿಚಾರಣೆ ಮಾಡಿಕೊಂಡು ಕೇಸ ಮಾಡುವ ಕುರಿತು ಈ ಫಿರ್ಯಾದಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿರುತ್ತೆನೆ. ಗೌತಮ ಗಾಯಕ್ವಾಡ ಈತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 19/12/2022 ರಂದು ರಾತ್ರಿ 9:00 ಗಂಟೆಗೆ ಶ್ರೀ. ಶ್ರವಣಕುಮಾರ ತಂದೆ ಯೋಗಪ್ಪಾ ಅರ್ಜುಣಗಿ ವಯಃ 38 ವರ್ಷ ಜಾತಿಃ ಲಿಂಗಾಯತ ಉಃ ಉಪನ್ಯಾಸಕರು ಮುಕ್ಕಾಃ ಶಹಾಬಜಾರ ಆದಾಧನಾ ಸ್ಕೂಲ ಹತ್ತೀರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಂಶವೆನೆಂದರೆ, ನಮ್ಮ ತಂದೆ ಯೋಗಪ್ಪಾ ತಂದೆ ಚಿತ್ರಶೇಖರ ಅರ್ಜುಣಗಿ ವಯಃ 62 ವರ್ಷದವರಿದ್ದು, ನಿವೃತ ನೌಕರರಾಗಿದ್ದು, ಸಧ್ಯ ನ್ಯಾಯವಾದಿ ಅಂತಾ ಕೆಲಸ ಮಾಡಿಕೊಂಡಿರುತ್ತಾರೆ. ಹೀಗಿದ್ದು, ನಿನ್ನೆ ದಿನಾಂಕ 18/12/2022 ರಂದು ನನ್ನ ತಂದೆ ಯೋಗಪ್ಪಾ ಹಾಗು ಅವರ ಗೆಳಯರಾದ ರಾಜಕುಮಾರ ತಂದೆ ಶಾಮರಾವ ಪಾಟೀಲ ಮುಕ್ಕಾಂ: ಐವನಶಾಹಿ ಇವರಿಬ್ಬರು ಕೂಡಿಕೊಂಡು ರಿಡ್ಜ ಕಾರ ನಂ. ಕೆಎ 01 ಎ.ಜಿ 1858 ಇದರಲ್ಲಿ ಕಲಬುರಗಿಯಿಂದ ತಮ್ಮ ಕೆಲಸಕ್ಕಾಗಿ ಬೀದರ ಮತ್ತು ಹೈದ್ರಾಬಾದಿಗೆ ಹೋಗಿ ಮರಳಿ ಕಲಬುರಗಿಗೆ ಬರುವಾಗ ರಾಜಕುಮಾರ ಪಾಟೀಲ ಇವರೆ ಕಾರನ್ನು ನಡೆಯಿಸಿಕೊಂಡು ಬರುತ್ತಿದ್ದು, ರಾತ್ರಿ 11:00 ಗಂಟೆ ಸುಮಾರಿಗೆ ಹುಮ್ನಾಬಾದ ರಿಂಗರೋಡ ಮೇಲೆ ಬರುತ್ತಿರುವಾಗ ಅದೆ ವೇಳೆಗೆ ಆಳಂದ ರಿಂಗರೋಡ ಕಡೆಯಿಂದ ಹುಮ್ನಾಬಾದ ರಿಂಗರೋಡಿನ ಮೇಲೆ ಒಂದು ಲಾರಿ ನಂ. ಎಮ್.ಹೆಚ್ 25 ಎ.ಜೆ 0141 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಾರಿನ ಡ್ರೈವರದ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಮ್ಮ ತಂದೆಯವರಿಗೆ ತಲೆಗೆ ಭಾರಿ ಪ್ರಮಾಣದ ಗಾಯವಾಗಿದ್ದು, ಹೆಡಕಿಗೆ ಗಾಯವಾಗಿರುತ್ತದೆ, ಮುಖಕ್ಕೆ ಮತ್ತು ಅಲ್ಲಲ್ಲಿ ತರಚಿದಗಾಯವಾಗಿದ್ದು, ರಾಜಶೇಖರ ಪಾಟೀಲ ಇವರಿಗು ಕೂಡಾ ತಲೆಯ ಭಾಗಕ್ಕೆ ರಕ್ತಗಾಯ ಮತ್ತು ಎದೆಯ ಭಾಗಕ್ಕೆ ಗುಪ್ತಗಾಯವಾಗಿದ್ದು, ಲಾರಿ ಚಾಲಕನು ಲಾರಿ ಬಿಟ್ಟು ಓಡಿ ಹೋಗಿದ್ದು, ಈ ವಿಷಯವನ್ನು ನನಗೆ ರಾಜಕುಮಾರ ಪಾಟೀಲ ಇವರಿಂದ ಮಾಹಿತಿ ಗೊತ್ತಾದ ನಂತರ ನಾನು ಮಣ್ಣೂರ ಆಸ್ಪತ್ರೆಗೆ ಹೋಗಿ ವಿಚಾರಣೆ ಮಾಡಿಕೊಂಡು ನಂತರ ಆಸ್ಪತ್ರೆಯಲ್ಲಿ ಉಳಿದುಕೊಂಡು ಈಗ ತಡಮಾಡಿ ಬಂದಿದ್ದು, ಲಾರಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಫೀರ್ಯಾಧಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 20-12-2022 01:34 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080