ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ ಠಾಣೆ :-  ಇಂದು ದಿನಾಂಕ ೧೯/೧೨/೨೦೨೧ ರಂದು ೦೮.೩೦ ಎ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಪರ‍್ಯಾಧಿ ಶ್ರೀ ರಾಮಲಿಂಗ ತಂದೆ ಬಂಡೆಪ್ಪಾ ಶೆಟ್ಟಗಾರ ವ|| ೪೭ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬೆಳಮಗಿ, ತಾ|| ಆಳಂದ ಹಾ||ವ|| ಮ.ನಂ.೪-೬೦೧/೪೪ಈ, ಅಶ್ವಿನಿ ನಿಲಯ, ಬಸವೇಶ್ವರ ಕಾಲೋನಿ ಕೆ.ಈ.ಬಿ ಕಛೇರಿ ಹತ್ತೀರ ಎಂ.ಜಿ ರೋಡ ಕಲಬುರಗಿ ನಗರ, ಪೊ.ನಂ. ೯೯೦೧೩೦೧೦೧೬ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ  ದೂರು ರ‍್ಜಿ ಸಲ್ಲಿಸಿದ್ದು ಸದರಿ ದೂರಿನ ಸಂಕ್ಷಿಪ್ತ ಸಾರಾಂಶವೆನೆಂದರೆ,  ನಾನು ಮತ್ತು ಅಣ್ಣನ ಕುಟುಂಬ ಸ್ವಂತ ಮನೆ ಮಾಡಿಕೊಂಡು ಸದರಿ ವಿಳಾಸದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡು ವಾಸವಾಗಿರುತ್ತೆವೆ. ಹೀಗಿದ್ದು ದಿನಾಂಕ ೧೬/೧೨/೨೦೨೧ ರಂದು ನಮ್ಮ ಅಣ್ಣನಾದ ಕ್ಷೇಮಲಿಂಗ ಶೆಟ್ಟಗಾರ ಇವರು ಲಕ್ನೋದಲ್ಲಿ ಕಾನಪ್ರೆನ್ಸ ಇದ್ದ ಪ್ರಯುಕ್ತ ಹೋಗಿದ್ದು ಅದರ ಸಲುವಾಗಿ ಮನೆಯಲ್ಲಿ ನಮ್ಮ ಅತ್ತಿಗೆ ಒಬ್ಬಳೆ ಇದ್ದರಿಂದ ನಮ್ಮ ಅಣ್ಣನು ನನಗೆ ಪೋನ ಮಾಡಿ ನಾನು ಬರುವರೆಗೂ ಮನೆಯಲ್ಲಿ ಇರು ಅಂತಾ ಹೇಳಿದಾಗ ನಾನು ಅಂದಿನಿಂದ ನಮ್ಮ ಅಣ್ಣನ ಮನೆಯಲ್ಲಿ ಇದ್ದೇನು. ನಾನು ಆಗಾಗ ಸಮಯ ಮತ್ತು ಕೆಲಸವಿದ್ದಾಗ ಮನೆಗೆ ಬಂದು ಹೋಗುತ್ತಿರುತ್ತೇನೆ. ಹೀಗಿದ್ದು ದಿನಾಂಕ ೧೮/೧೨/೨೦೨೧  ರಂದು ರಾತ್ರಿ ೧೧.೩೦ ಗಂಟೆಗೆ ನಾನು ಮತ್ತು ನಮ್ಮ ಅಣ್ಣನ ಹೆಂಡತಿಯಾದ ಶ್ರೀಮತಿ ಮಹಾದೇವಿ ಗಂಡ ಕ್ಷೆಮಲಿಂಗ ಶೆಟ್ಟಗಾರ ಊಟ ಮಾಡಿ ಮಲಗಿಕೊಂಡಿದ್ದು ನಂತರ ನಮ್ಮ ಅತ್ತಿಗೆಯು ದಿನಾಂಕ ೧೯.೧೨.೨೦೨೧ ರಂದು ಬೆಳಗಿನ ಜಾವ ೦೧.೪೦ ಗಂಟೆಗೆ ಬಾತ ರೂಮಿಗೆ ಹೋಗಿ ಬಂದು ಮಲಗಿಕೊಂಡಿದ್ದು ಆ ಸಮಯದಲ್ಲಿ ಏನು ಆಗಿರುವದಿಲ್ಲಾ. ನಂತರ ಮತ್ತೆ ಬೇಳಗಿನ ಜಾವ ೦೩.೪೫ ಗಂಟೆಗೆ ಮತ್ತೆ ಎದ್ದು ಬಾತರೂಮಿಗೆ ಹೊಗುವಾಗ ಬಾಗಿಲಿಗೆ ಸಿರೆಯಿಂದ ಬಾಗಿಲಿಗೆ ಕಟ್ಟಿದ್ದು ನಂತರ ಅದನ್ನು ಬಿಡಿಸಿಕೊಂಡು ಹೊರಗಡೆ ಬಂದು ನಾನು ಮಲಗಿಕೊಂಡಿರುವ ಬಾಗಿಲಿಗೆ ಕಟ್ಟಿದ್ದ ಸಿರೇಯನ್ನು ಬಿಡಿಸಿ ನನಗೆ ಎಬ್ಬಸಿದ್ದು ನಾನು ರೂಮಿನಿಂದ ಹೊರಗಡೆ ಬಂದು ಅತ್ತಿಗೆಗೆ ಕೆಳಲಾಗಿ ಅವರು ಸದರಿ ವಿಷಯ ತಿಳಿಸಿದಾಗ ನಾನು ಮತ್ತು ನನ್ನ ಅತ್ತಿಗೆ ಇಬ್ಬರೂ ಗಾಬರಿಯಿಂದ ಇನ್ನೊಂದು ಬೆಡರೂಮಿಗೆ ಬಂದು ನೋಡಲಾಗಿ ಬೆಡರೂಮಿನಲ್ಲಿದ್ದ ಅಲಮಾರಿಯು ತೆರೆದಿದ್ದು ಕಂಡು ಬಂದಿದ್ದು ನಂತರ ಅಲಮಾರಿಯಲ್ಲಿ ಚೆಕ್ ಮಾಡಲಾಗಿ ಅದರಲ್ಲಿದ್ದ ೧] ೫೦ ಗ್ರಾಮ ಬಂಗಾರದ ತಾಳಿ ಚೈನ ಅಂ.ಕಿ ೧,೭೫,೦೦೦/-  ೨] ೨೦ ಗ್ರಾಮ ಬಂಗಾರದ ಲಾಕಿಟ ಅಂ.ಕಿ ೭೦,೦೦೦/- ೩] ೧೦ ಗ್ರಾಮ ತೂಕದ ಬಂಗಾರದ ಎರಡು ಉಂಗರ ಅಂ.ಕಿ ೭೦,೦೦೦/- ೪] ೧೦ ಗ್ರಾಮ ಬಂಗಾರದ ಮಕ್ಕಳ ಸಣ್ಣ-ಸಣ್ಣ ಉಂಗರಗಳು ಅಂ.ಕಿ, ೩೫,೦೦೦/- ೫] ೧೫೦೦ ಗ್ರಾಮ ತೂಕದ ೩ ಬೆಳ್ಳಿಯ ಚರಿಗೆಗಳು ಅಂ. ಕಿ ೪೮,೭೫೦/- ೬] ೨೫೦ ಗ್ರಾಮ ಬೇಳ್ಳಿಯ ಒಂದು ಲಕ್ಷ್ಮಿ ಮೂತರ್ಿ ಅಂ.ಕಿ ೮,೧೨೫/-೭] ೨೦೦ ಗ್ರಾಮ ಬೇಳ್ಳಿಯ ಒಂದು ಶರಣಬಸವೇಶ್ವರ ಮೂತರ್ಿ ಅಂ.ಕಿ. ೬,೫೦೦/- ೮] ೫೦೦ ಗ್ರಾಮ ಬೆಳ್ಳಿಯ ಒಂದು ತಾಟ ಅಂ.ಕಿ.೧೬,೨೫೦/- ೯] ೨೫೦ ಗ್ರಾಮ ಬೆಳ್ಳಿಯ ಒಂದು ಆರತಿ ಸೆಟ ಅಂ.ಕಿ.೮,೧೨೫/-೧೦] ೧೦೦೦ ಗ್ರಾಮ ಬೆಳ್ಳಿಯ ಎರಡು ಸಮೆ ಅಂ.ಕಿ.೩೨,೫೦೦/-   ಹೀಗೆ ಒಟ್ಟು ೧೦೦ (೧೦ ತೊಲೆ) ಗ್ರಾಮ ಬಂಗಾರದ ಆಭರಣಗಳು ಅಂ.ಕಿ ೩,೫೦,೦೦೦ ಮತ್ತು ೩೭೦೦ (೩.೭೦ ಕೆಜಿ) ಗ್ರಾಮ ಬೆಳ್ಳಿಯ ಸಾಮಾನುಗಳು ಅಂ.ಕಿ ೧,೨೦,೨೫೦/- ಹೀಗೆ ಎರಡು ಬಂಗಾರ ಮತ್ತು ಬೇಳ್ಳಿಯ ಸಾಮಾನುಗಳು ಸೇರಿ ಒಟ್ಟು ೪,೭೦,೨೫೦/- ರೂ ಕಿಮ್ಮತ್ತಿನ ಬೇಲೆಬಾಳುವ ಆಭರಣ ಮತ್ತು ಸಾಮಾನುಗಳು ಕಳ್ಳತನ ವಾಗಿದ್ದು ಇರುತ್ತದೆ. ನಮ್ಮ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಸಾಮಾನುಗಳು ಹಳೆಯದಾಗಿದ್ದು ಹಾಗೂ ಕಾಣಿಕೆಯಾಗಿ ನಮ್ಮ ಅಣ್ಣನಿಗೆ ಬಂದಿದ್ದು ಯಾವುದೇ ರಸಿದಿ ಇರುವದಿಲ್ಲಾ.  ಕಾರಣ ದಿನಾಂಕ ೧೯/೧೨/೨೦೨೧ ರಂದು ಬೆಳಗಿನ ಜಾವ ೦೧.೪೦ ಗಂಟೆಯಿಂದ ಬೆಳಗಿನ ಜಾವ ೦೩.೪೫ ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಾವು ಮನೆಯಲ್ಲಿ ಮಲಗಿಕೊಂಡರೂ ರಾತ್ರಿ ಸಮಯದಲ್ಲಿ ನಾವು ವಾಸವಿರುವ ನಮ್ಮ ಮನೆಯ ಮೇಲಿನ ಅಂತಸ್ತಿನಲ್ಲಿರುವ ಮನೆಯ ಹಾಲಿಗೆ ಜೋಡಿಸಿದ ಕಿಡಕಿ ಸ್ಕ್ರೂ ಬಿಚ್ಚಿ ಮನೆಯ ಒಳಗಡೆ ಪ್ರವೇಶ ಮಾಡಿ ನಾನು ಮತ್ತು ನನ್ನ ಅತ್ತಿಗೆಯು ಮಲಗಿಕೊಂಡಿರುವ ಬೆಡರೂಮಿನ ಬಾಗಿಲಿಗೆ ಸಿರೆಯಿಂದ ಕಟ್ಟಿ ಮತ್ತೊಂದು ಬೆಡರೂಮಿನಲ್ಲಿರುವ ಅಲಮಾರಿಯ ಕಿಲಿ ತೆರೆದು ಅದರೋಳಗಿದ್ದ ಹೀಗೆ ಒಟ್ಟು ೧೦೦ ಗ್ರಾಮ ಬಂಗಾರ ಅಂ.ಕಿ ೩,೫೦,೦೦೦ ಮತ್ತು ೩೭೦೦ ಗ್ರಾಮ ಬೆಳ್ಳಿಯ ಸಾಮಾನುಗಳು ಅಂ.ಕಿ ೧,೨೦,೨೫೦/- ಹೀಗೆ ಎರಡು ಬಂಗಾರ ಮತ್ತು ಬೇಳ್ಳಿಯ ಸಾಮಾನುಗಳು ಸೇರಿ ಒಟ್ಟು ೪,೭೦,೨೫೦/- ರೂ ಕಿಮ್ಮತ್ತಿನ ಬೇಲೆಬಾಳುವ ಆಭರಣ ಮತ್ತು ಸಾಮಾನುಗಳು ನೆದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮಾನ್ಯರವರು ನಮ್ಮ ಅಣ್ಣನ ಮನೆಯಲ್ಲಿ ಕಳ್ಳತನವಾದ ಬಂಗಾರದ ಆಭರಣಗಳು ಮತ್ತು ಬೇಳ್ಳಿಯ ಸಾಮಾನುಗಳು ಎರಡೂ ಸೇರಿ ಒಟ್ಟು ಅಂ.ಕಿ ೪,೭೦,೨೫೦/- ರೂ ಕಿಮ್ಮತ್ತಿನ ಬಂಗಾರದ ಆಭರಣ ಮತ್ತು ಬೆಳ್ಳಿಯ ಸಾಮಾನುಗಳು ಪತ್ತೆ ಮಾಡಿ ಕಳ್ಳತನ ಮಾಡಿದ ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಲು ವಿನಂತಿ ಅದೆ. ನಾನು ಇದರ ಬಗ್ಗೆ ಮನೆಯಲ್ಲಿ ಅಣ್ಣನೊಂದಿಗೆ ವಿಚಾರಮಾಡಿ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಅಂತಾ ನೀಡಿದ ದೂರು ರ‍್ಜಿಯ ಸಾರಾಂಶದ ಮೇಲಿಂದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ .

ಇತ್ತೀಚಿನ ನವೀಕರಣ​ : 20-12-2021 01:39 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080